ಸುದ್ದಿ

ಹೈಸ್ಪೀಡ್‌ ರೈಲುಗಳ ನಡುವೆ ಡಿಕ್ಕಿ : 21 ಪ್ರಯಾಣಿಕರು ಸಾವು

ಹಳಿತಪ್ಪಿ ಇನ್ನೊಂದು ಹಳಿಗೆ ಜಿಗಿದಾಗ ಎರಡು ರೈಲುಗಳು ಮುಖಾಮುಖಿ ಡಿಕ್ಕಿ ಮ್ಯಾಡ್ರಿಡ್‌ : ಸ್ಪೇನ್ ದೇಶದ ಆಂಡಲೂಸಿಯಾದ ದಕ್ಷಿಣ ಪ್ರದೇಶದಲ್ಲಿ ಎರಡು ಹೈಸ್ಪೀಡ್ ರೈಲುಗಳ ನಡುವೆ ಡಿಕ್ಕಿ ಸಂಭವಿಸಿ 21 ಜನರು ಸಾವನ್ನಪ್ಪಿದ್ದು, 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಭಾನುವಾರ ಸಂಜೆ ಮಲಗಾದಿಂದ ಮ್ಯಾಡ್ರಿಡ್‌ಗೆ ತೆರಳುತ್ತಿದ್ದ ಪ್ರಯಾಣಿಕ ರೈಲೊಂದು ಆಡಮುಜ್ ಬಳಿ ಹಳಿತಪ್ಪಿ, ಇನ್ನೊಂದು ಟ್ರ್ಯಾಕ್‌ಗೆ ಜಿಗಿದು ಎದುರುನಿಂದ ಬರುತ್ತಿದ್ದ ರೈಲಿಗೆ ಅಪ್ಪಳಿಸಿದೆ ಎಂದು ಸ್ಪೇನ್‌ನ ಅದಿಪ್ ರೈಲು ನೆಟ್ ವಾರ್ಕ್ ಆಪರೇಟರ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ […]

ಹೈಸ್ಪೀಡ್‌ ರೈಲುಗಳ ನಡುವೆ ಡಿಕ್ಕಿ : 21 ಪ್ರಯಾಣಿಕರು ಸಾವು Read More »

ಉಗ್ರರ ಜೊತೆ ಭದ್ರತಾ ಪಡೆಯ ಭೀಕರ ಕಾಳಗ : 8 ಯೋಧರಿಗೆ ಗಾಯ

ಅಡಗಿ ಕುಳಿತ ಉಗ್ರರನ್ನು ಹೊರಗೆಳೆಯಲು ಕಾರ್ಯಾಚರಣೆ ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಸಿಂಗ್‌ಪೋರಾ ಪ್ರದೇಶದಲ್ಲಿ ಭಾರತೀಯ ಸೇನಾಪಡೆ ಎನ್ಕೌಂಟರ್ ಆರಂಭಿಸಿದ್ದು, ಸ್ಥಳದಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಭಾರಿ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಸ್ಥಳದಲ್ಲಿ ಪಾಕಿಸ್ತಾನದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮೂವರು ಭಯೋತ್ಪಾದಕರು ಅಡಗಿ ಕುಳಿತಿದ್ದು, ಉಗ್ರರನ್ನು ಭದ್ರತಾ ಪಡೆಗಳು ಸುತ್ತುವರಿದು ಕಾರ್ಯಾಚರಣೆ ನಡೆಸುತ್ತಿವೆ. ಈ ನಡುವೆ ಯೋಧರ ಮೇಲೆ ಉಗ್ರರು ಗ್ರೆನೇಡ್‌ಗಳನ್ನು ಎಸೆದಿದ್ದು, ಪರಿಣಾಮ 8 ಮಂದಿ ಸೈನಿಕರು

ಉಗ್ರರ ಜೊತೆ ಭದ್ರತಾ ಪಡೆಯ ಭೀಕರ ಕಾಳಗ : 8 ಯೋಧರಿಗೆ ಗಾಯ Read More »

ಕುಮಾರಧಾರಾ ನದಿಯಲ್ಲಿ ಮುಳುಗಿ ಇಬ್ಬರು ಸಾವು

ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಬಂದಿದ್ದಾಗ ಸಂಭವಿಸಿದ ದುರಂತ ಸುಬ್ರಹ್ಮಣ್ಯ : ಕುಮಾರಧಾರಾ ನದಿಗೆ ತೆರಳಿದ್ದ ಇಬ್ಬರು ಯುವಕರು ಮುಳುಗಿ ಸಾವನ್ನಪ್ಪಿದ ಘಟನೆ ಭಾನುವಾರ ಸಂಭವಿಸಿದೆ. ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಸುಳ್ಯ ಕೊಲ್ಲಮೊಗ್ರು ಗ್ರಾಮದ ಜಯರಾಮ ಎಂಬವರು ದೂರು ದಾಖಲಿಸಿರುತ್ತಾರೆ. ಜ.18 ರಂದು ಸಂಜೆ ಜಯರಾಮ ಅವರ ಸಹೋದರನ ಮಗ ಸುಜಿತ್ (28) ಮತ್ತು ಗೋಪಾಲ್ ನಾಯರ್ ಎಂಬವರ ಮಗ ಹರಿಪ್ರಸಾದ್ (39) ಎಂಬವರು ಸುಬ್ರಹ್ಮಣ್ಯದ ಕುಲ್ಕುಂದ ಎಂಬಲ್ಲಿ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ.

ಕುಮಾರಧಾರಾ ನದಿಯಲ್ಲಿ ಮುಳುಗಿ ಇಬ್ಬರು ಸಾವು Read More »

ಭಾರತದಲ್ಲಿ ಮೊದಲ ಬಾರಿ ಏಕದಿನ ಸರಣಿ ಗೆದ್ದ ನ್ಯೂಜಿಲೆಂಡ್‌

ಕೊಹ್ಲಿಯ ಶತಕ ವ್ಯರ್ಥ; 41 ರನ್‌ಗಳಿಂದ ಸೋತ ಟೀಂ ಇಂಡಿಯಾ ಇಂದೋರ್‌: ಇಂದೋರ್‌ನ ಹೋಳ್ಕರ್‌ ಸ್ಟೇಡಿಯಂನಲ್ಲಿ ನಡೆದ 3ನೇ ತಥಾ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್‌ ವಿರುದ್ಧ 41 ರನ್‌ಗಳ ಸೋಲು ಕಂಡು ಸರಣಿಯನ್ನು ಕಿವೀಸ್‌ಗೆ ಒಪ್ಪಿಸಿದೆ. ಭಾರತದ ನೆಲದಲ್ಲಿ ಮತ್ತೊಮ್ಮೆ ಇತಿಹಾಸ ನಿರ್ಮಿಸಿರುವ ನ್ಯೂಜಿಲೆಂಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಇದೀಗ ಮೊದಲ ಬಾರಿಗೆ ಭಾರತೀಯ ನೆಲದಲ್ಲಿ ಏಕದಿನ ಸರಣಿಯನ್ನು ಗೆದ್ದಿದೆ. ಡ್ಯಾರಿಲ್ ಮಿಶೆಲ್ ಅವರ ಸತತ ಎರಡನೇ ಶತಕ ಮತ್ತು

ಭಾರತದಲ್ಲಿ ಮೊದಲ ಬಾರಿ ಏಕದಿನ ಸರಣಿ ಗೆದ್ದ ನ್ಯೂಜಿಲೆಂಡ್‌ Read More »

ಧರ್ಮಸ್ಥಳ ನಿಂದನೆ : ವಿಠಲ ಗೌಡಗೆ 30 ದಿನಗಳ ಸಿವಿಲ್ ಬಂಧನ

ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಅವಹೇಳನ ಬೆಂಗಳೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಮತ್ತು ಹೆಗ್ಗಡೆಯವರ ಕುಟುಂಬದ ವಿರುದ್ಧ ನಿಂದನೆ ಮಾಡಬಾರದು ಎಂಬ ನ್ಯಾಯಾಲಯದ ಆದೇಶವನ್ನು ಪದೇ ಪದೇ ಉಲ್ಲಂಘಿಸಿದ ಆರೋಪದಡಿಯಲ್ಲಿ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ ಸೌಜನ್ಯ ಮಾವ ವಿಠಲ ಗೌಡ ಅವರಿಗೆ 30 ದಿನಗಳ ಸಿವಿಲ್ ಬಂಧನ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪ್ರಕರಣದ ಆರೋಪಿಯಾಗಿರುವ ಸೌಜನ್ಯಳ ಮಾವ ವಿಠ್ಠಲ ಗೌಡಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಡಾ.ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ ನಿಂದನೆ : ವಿಠಲ ಗೌಡಗೆ 30 ದಿನಗಳ ಸಿವಿಲ್ ಬಂಧನ Read More »

ನಿಮ್ಮಂತಹ ಪೂರ್ವಾಗ್ರಹ ಪೀಡಿತ, ದ್ವೇಷಪೂರಿತ ವ್ಯಕ್ತಿಯನ್ನು ನೋಡಿಲ್ಲ : ಎ.ಆರ್‌.ರೆಹಮಾನ್‌ಗೆ ಕಂಗನಾ ತಿರುಗೇಟು

ಬಾಲಿವುಡ್‌ನಲ್ಲಿ ಕೋಮುವಾದ ಇದೆ ಎಂದಿದ್ದ ಎ.ಆರ್‌.ರೆಹಮಾನ್‌ ಮುಂಬೈ: ಬಾಲಿವುಡ್‌ ಕೋಮುವಾದದತ್ತ ವಾಲಿರುವುದರಿಂದ ನನಗೆ ಎಂಟು ವರ್ಷಗಳಿಂದ ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡಲು ಅವಕಾಶ ಸಿಗುತ್ತಿಲ್ಲ ಎಂದಿದ್ದ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಅವರನ್ನು ನಟಿ ಹಾಗೂ ಸಂಸದೆ ಕಂಗನಾ ರಣಾವತ್‌ ಟೀಕಿಸಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಇತ್ತೀಚಿನ ಸಂದರ್ಶನವೊಂದರಲ್ಲಿ ಸಂಗೀತ ಉದ್ಯಮದ ಬದಲಾಗುತ್ತಿರುವ ಮುಖ ಮತ್ತು ಅದರೊಳಗಿನ ಧಾರ್ಮಿಕ ಪ್ರಭಾವಗಳ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಚಿತ್ರೋದ್ಯಮದಲ್ಲಿ ಕೋಮುವಾದ ಹೆಚ್ಚಾಗಿದೆ ಎಂದು ರೆಹಮಾನ್

ನಿಮ್ಮಂತಹ ಪೂರ್ವಾಗ್ರಹ ಪೀಡಿತ, ದ್ವೇಷಪೂರಿತ ವ್ಯಕ್ತಿಯನ್ನು ನೋಡಿಲ್ಲ : ಎ.ಆರ್‌.ರೆಹಮಾನ್‌ಗೆ ಕಂಗನಾ ತಿರುಗೇಟು Read More »

ಉಡುಪಿ: ಶೀರೂರು ಮಠದ ಶ್ರೀ ವೇದವರ್ಧನ ತೀರ್ಥರು ಸರ್ವಜ್ಞ ಪೀಠಾರೋಹಣ

ರಾತ್ರಿಯಿಡೀ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಭವ್ಯ ಪರ್ಯಾಯ ಮೆರವಣಿಗೆ ಉಡುಪಿ: ಉಡುಪಿ ಕೃಷ್ಣಮಠದಲ್ಲಿ ಶೀರೂರು ಪರ್ಯಾಯ ಮಹೋತ್ಸವ ಸಡಗರದಿಂದ ನೆರವೇರಿದೆ. ಶೀರೂರು ಮಠದ ಶ್ರೀ ವೇದವರ್ಧನ ತೀರ್ಥರು ಸರ್ವಜ್ಞ ಪೀಠಾರೋಹಣ ಮಾಡಿದ್ದು, ಅತ್ಯಂತ ಎಳೆಯ ಪ್ರಾಯದಲ್ಲೇ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಮುಂದಿನ ಎರಡು ವರ್ಷಗಳ ಕಾಲ ಶ್ರೀಕೃಷ್ಣನ ಪೂಜಾಧಿಕಾರವನ್ನು ಅವರು ನಿರ್ವಹಿಸಲಿದ್ದಾರೆ. ಇದು ಕೃಷ್ಣ ಮಠದ 253ನೇ ಪರ್ಯಾಯ ಮಹೋತ್ಸವವಾಗಿದ್ದು, ಭಕ್ತರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಉಡುಪಿಯಲ್ಲಿ ಶೀರೂರು ಪರ್ಯಾಯ ಮಹೋತ್ಸವ ಸಂಭ್ರಮ ಮುಗಿಲು ಮುಟ್ಟಿದೆ.

ಉಡುಪಿ: ಶೀರೂರು ಮಠದ ಶ್ರೀ ವೇದವರ್ಧನ ತೀರ್ಥರು ಸರ್ವಜ್ಞ ಪೀಠಾರೋಹಣ Read More »

ಫಾರಂ ಮಾಲೀಕರ ಮುಷ್ಕರದಿಂದಾಗಿ ಕೋಳಿ ಮಾಂಸ ಬೆಲೆ ತೀವ್ರ ಏರಿಕೆ

ಎರಡು ವಾರದಲ್ಲಿ ಕೆಜಿಗೆ 100 ರೂ. ಏರಿಕೆ ಕಂಡ ಕೋಳಿ ಬೆಲೆ ಬೆಂಗಳೂರು : ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಕೋಳಿ ಮಾಂಸ ಬೆಲೆ ತೀವ್ರವಾಗಿ ಏರಿಕೆಯಾಗಲು ತಮಿಳುನಾಡಿನಲ್ಲಿ ಕೋಳಿ ಫಾರಂ ಮಾಲೀಕರು ಮುಷ್ಕರ ಹೂಡಿರುವುದೇ ಕಾರಣ. ತಮಿಳುನಾಡಿನ ಕೋಳಿ ಸಾಕಾಣಿಕೆದಾರರು ಖಾಸಗಿ ಕಂಪನಿಗಳು ನೀಡುತ್ತಿರುವ ಕಡಿಮೆ ಸಾಕಾಣಿಕೆ ದರದ ವಿರುದ್ಧ ಸಿಡಿದೆದ್ದಿದ್ದು ಜನವರಿ 1ರಿಂದ ಉತ್ಪಾದನೆಯನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದಾರೆ. ಬ್ರಾಯ್ಲರ್ ಕೋಳಿಗಳಿಗೆ ಪ್ರಸ್ತುತ ನೀಡುತ್ತಿರುವ 6.5 ರೂ. ದರವನ್ನು 20 ರೂ.ಗೆ ಹೆಚ್ಚಿಸಬೇಕು ಎಂಬುದು

ಫಾರಂ ಮಾಲೀಕರ ಮುಷ್ಕರದಿಂದಾಗಿ ಕೋಳಿ ಮಾಂಸ ಬೆಲೆ ತೀವ್ರ ಏರಿಕೆ Read More »

ಜ.20ರಂದು ಶಬರಿಮಲೆ ಯಾತ್ರೆ ಸಂಪನ್ನ

ಈ ಸಾಲಿನಲ್ಲಿ ದಾಖಲೆ ಮೊತ್ತದ ಕಾಣಿಕೆ ಸಂಗ್ರಹ ಶಬರಿಮಲೆ: ಈ ಸಾಲಿನ ಶಬರಿಮಲೆ ಮಂಡಲ ಮತ್ತು ಮಕರ ವಿಳಕ್ಕು ವಾರ್ಷಿಕ ಯಾತ್ರಾ ಋತುವಿಗೆ ಜ.20ರಂದು ತೆರೆಬೀಳಲಿದೆ. ಭಕ್ತರಿಗೆ ಜ.19ರಂದು ರಾತ್ರಿ ತನಕ ಅಯ್ಯಪ್ಪನ ದರ್ಶನಕ್ಕೆ ಅವಕಾಶವಿದ್ದು, ಜ.20ರಂದು ಬೆಳಗ್ಗೆ ರಾಜ ಪ್ರತಿನಿಧಿಯ ದರ್ಶನದ ಬಳಿಕ ದೇಗುಲದ ಗರ್ಭಗುಡಿಯ ಮುಚ್ಚಲಾಗುತ್ತದೆ. ಬಳಿಕ ರಾಜ ಪ್ರತಿನಿಧಿ ತಿರುವಾಭರಣದೊಂದಿಗೆ ಮರಳುವುದರೊಂದಿಗೆ ಎರಡೂವರೆ ತಿಂಗಳ ಮಹೋತ್ಸವ ಸಂಪನ್ನಗೊಳ್ಳಲಿದೆ. ಈ ಬಾರಿ ಮಂಡಲ-ಮಕರಜ್ಯೋತಿ ಋುತುವಿನಲ್ಲಿ 52 ಲಕ್ಷಕ್ಕೂ ಹೆಚ್ಚು ಭಕ್ತರು ಶಬರಿಮಲೆಗೆ ಭೇಟಿ ನೀಡಿದ್ದಾರೆ.

ಜ.20ರಂದು ಶಬರಿಮಲೆ ಯಾತ್ರೆ ಸಂಪನ್ನ Read More »

ವಿಮಾನ ಸಂಚಾರ ವ್ಯತ್ಯಯ : ಇಂಡಿಗೋ ಸಂಸ್ಥೆಗೆ 22 ಕೋ. ರೂ. ದಂಡ

ದೇಶಾದ್ಯಂತ ಹಲವು ದಿನ ವಿಮಾನ ಸಂಚಾರ ವ್ಯತ್ಯಯವಾಗಿ ಪರದಾಡಿದ್ದ ಪ್ರಯಾಣಿಕರು ನವದೆಹಲಿ: ಕಳೆದ ವರ್ಷ ಡಿಸೆಂಬರ್‌ನಲ್ಲಿ ಇಂಡಿಗೋ ವಿಮಾನಗಳ ಸಂಚಾರ ಸೇವೆಯಲ್ಲಿ ಉಂಟಾದ ಭಾರಿ ವ್ಯತ್ಯಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಇಂಡಿಗೋ ಸಂಸ್ಥೆಗೆ ಬರೋಬ್ಬರಿ 22.20 ಕೋಟಿ ರೂ. ದಂಡ ವಿಧಿಸಿದೆ. ಇದರ ಜೊತೆಗೆ ಇಂಡಿಗೋ ವಿಮಾನಯಾನ ಸಂಸ್ಥೆಗೆ 50 ಕೋಟಿ ರೂ. ಬ್ಯಾಂಕ್ ಗ್ಯಾರಂಟಿ ನೀಡುವಂತೆ ಆದೇಶಿಸಿದೆ. ಕಳೆದ ವರ್ಷದ ಡಿಸೆಂಬ‌ರ್ 3ರಿಂದ 5ರ ವರೆಗೆ ಇಂಡಿಗೋ ವಿಮಾನಗಳ ಕಾರ್ಯಾಚರಣೆಯಲ್ಲಿ ಭಾರಿ ವ್ಯತ್ಯಯ

ವಿಮಾನ ಸಂಚಾರ ವ್ಯತ್ಯಯ : ಇಂಡಿಗೋ ಸಂಸ್ಥೆಗೆ 22 ಕೋ. ರೂ. ದಂಡ Read More »

error: Content is protected !!
Scroll to Top