ಫೆ. 8ರಂದು ಪುತ್ತೂರು ಕ್ಲಬ್’ನಲ್ಲಿ ಸೌಲಭ್ಯಗಳ ಉದ್ಘಾಟನೆ | ಸಾವಿರ ಆಸನ ಸಾಮರ್ಥ್ಯದ ವಿಶಾಲ ಸಭಾಂಗಣ, 200 ಆಸನ ಸಾಮರ್ಥ್ಯದ ಎಸಿ ಹಾಲ್ | ಯುಎಸ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಕೋರ್ಟ್ ಮಾದರಿಯ ಸಿಂಥೆಟಿಕ್ ಟೆನಿಸ್ ಕೋರ್ಟ್
ಪುತ್ತೂರು : ಪುತ್ತೂರು ಕ್ಲಬ್’ನಲ್ಲಿ ನಿರ್ಮಾಣಗೊಂಡಿರುವ ಸೌಲಭ್ಯಗಳ ಉದ್ಘಾಟನಾ ಸಮಾರಂಭ ಫೆ. 8ರಂದು ಸಂಜೆ 4 ಗಂಟೆಗೆ ಕ್ಲಬ್ ಆವರಣದಲ್ಲಿ ನಡೆಯಲಿದೆ ಎಂದು ಕ್ಲಬ್ ಅಧ್ಯಕ್ಷ ಡಾ. ದೀಪಕ್ ರೈ ಹೇಳಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಸೌಲಭ್ಯಗಳನ್ನು ಉದ್ಘಾಟಿಸಲಿದ್ದಾರೆ. ಕುಟುಂಬ ಹಾಗೂ ಆರೋಗ್ಯ ಸಚಿವ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುಖ್ಯಅತಿಥಿಯಾಗಿರುವರು. ಸಂಸದ ಕ್ಯಾ. ಬ್ರಿಜೇಶ್ ಚೌಟಾ ಅವರು ಸಿಂಥೆಟಿಕ್ ಟೆನಿಸ್ ಕೋರ್ಟನ್ನು ಉದ್ಘಾಟಿಸಲಿದ್ದಾರೆ. […]