ನಿಧನ

ಶೇಖರ್ ರಾವ್ ನಿಧನ

ಪುತ್ತೂರು: ಬಪ್ಪಳಿಗೆ ರಾಗಿಕುಮೇರಿ ನಿವಾಸಿ ಶೇಖರ್ ರಾವ್ (74) ಹೃದಯಘಾತದಿಂದ ಮಂಗಳವಾರ ನಿಧನರಾದರು. ಪುತ್ತೂರಿನ ಭಾರತ್ ಶೋ ರೂಮ್ ನಲ್ಲಿ ಸೆಕ್ಯೂರಿಟಿ ಆಗಿ ಹಲವು ವರ್ಷದಿಂದ ಕೆಲಸ ಮಾಡುತಿದ್ದರು. ಮಂಗಳವಾರ ಮಧ್ಯಾಹ್ನ ಹೃದಯಘಾತದಿಂದ ನಿಧನ ಹೊಂದಿದರು. ಮೃತರಿಗೆ ಪತ್ನಿ,ಪುತ್ರ, ಇಬ್ಬರು ಪುತ್ರಿಯರಿದ್ದಾರೆ.

ಶೇಖರ್ ರಾವ್ ನಿಧನ Read More »

ರಿಕ್ಷಾ ಚಾಲಕ ವಿಶ್ವನಾಥ ಗೌಡ ನಿಧನ

ಪುತ್ತೂರು: ಮಾಡ್ನೂರು ಗ್ರಾಮದ ಕಾವು – ಕಮಲಡ್ಕ ನಿವಾಸಿ, ಹಿರಿಯ ರಿಕ್ಷಾ ಚಾಲಕ ವಿಶ್ವನಾಥ ಗೌಡ (55) ಅಸ್ವಸ್ಥಗೊಂಡು ನಿಧನರಾದರು. ಕೆಲವು ತಿಂಗಳ ಹಿಂದೆಯಷ್ಟೇ ನೂತನ ಗೃಹ ಪ್ರವೇಶ ಮಾಡಿಕೊ೦ಡಿದ್ದ ಸರಳ ವ್ಯಕ್ತಿತ್ವದಿಂದ ಕೂಡಿದ ವಿಶ್ವನಾಥ ಅವರಿಗೆ ಅನಾರೋಗ್ಯದಲ್ಲಿ ಹಠಾತ್ತನೇ ಏರಿಳಿತ ಉಂಟಾಗಿ ನಿಧನ ಹೊಂದಿದರು. ಅವರು ಪತ್ನಿ, ಪುತ್ರ, ಪುತ್ರಿ, ಸಹೋದರರು ಮತ್ತು ಸಹೋದರಿ .ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ರಿಕ್ಷಾ ಚಾಲಕ ವಿಶ್ವನಾಥ ಗೌಡ ನಿಧನ Read More »

ಮನೆ ಮೇಲೆ ಶೀಟ್ ಅಳವಡಿಸುತ್ತಿದ್ದ ವೇಳೆ ಯುವಕ ಮೃತ್ಯು !

ಪುತ್ತೂರು : ಆರ್ ಸಿಸಿ ಮನೆಯೊಂದರ ಮೇಲೆ ಶೀಟ್ ಅಳವಡಿಸುವ ಸಂದರ್ಭ ಯುವಕನೋರ್ವ ಮೃತಪಟ್ಟ ಘಟನೆ ಬೆದ್ರಾಳದಲ್ಲಿ ನಡೆದಿದೆ. ವೆಲ್ಡಿಂಗ್ ಕೆಲಸದ ಸಹಾಯಕನಾಗಿದ್ದ, ಕಾಸರಗೋಡು ಮೂಲದ ವೆಳ್ಳರಿಕುಂಡು ಕಲ್ಲಹಳ್ಳಿ ನಿವಾಸಿ ಸೋಮಯ್ಯ ಎಂಬವರ ಪುತ್ರ ದೀಕ್ಷಿತ್ ಎಸ್.ಎಂ.(26) ಮೃತಪಟ್ಟ ಯುವಕ. ದೀಕ್ಷಿತ್, ಸೋಮಯ್ಯ ಗೌಡ ಅವರ ಹೆಂಡತಿಯ ಅಣ್ಣನ ಮಗ ಪ್ರಜ್ವಲ್‌ರೊಂದಿಗೆ ವೆಲ್ಡಿಂಗ್ ಕೆಲಸಕ್ಕೆ ಸಹಾಯಕನಾಗಿ ಹೋಗುತ್ತಿದ್ದು, ಜು.11ರಂದು ಕೆಮ್ಮಿಂಜೆ ಗ್ರಾಮದ ಬೆದ್ರಾಳದ ಆರ್‌ಸಿಸಿ ಮನೆಯೊಂದರಲ್ಲಿ ಶೀಟ್ ಹಾಕುವ ಕೆಲಸ ಮಾಡುತ್ತಿದ್ದ ಸಂದರ್ಭ ದೀಕ್ಷಿತ್ ಬೊಬ್ಬೆ ಹೊಡೆದು

ಮನೆ ಮೇಲೆ ಶೀಟ್ ಅಳವಡಿಸುತ್ತಿದ್ದ ವೇಳೆ ಯುವಕ ಮೃತ್ಯು ! Read More »

ಖ್ಯಾತ ನಟಿ, ನಿರೂಪಕಿ ಅಪರ್ಣಾ  ಇನ್ನಿಲ್ಲ.

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟಿ ಮತ್ತು ನಿರೂಪಕಿ ಅಪರ್ಣಾ ಕಿರಿಯ ವಯಸ್ಸಿನಲ್ಲೇ ಇಹಲೋಕ್ಯ ತ್ಯಜಿಸಿದ್ದಾರೆ. ಅಪರ್ಣಾ ಅವರು ಕಳೆದ ಹಲವು ತಿಂಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅಪರ್ಣಾ  ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದ್ದಾರೆ. ಬನಶಂಕರಿ 2ನೇ ಹಂತದ ದೇವಗಿರಿ ದೇವಸ್ಥಾನದ ಸಮೀಪದ ನಿವಾಸದಲ್ಲಿ ಅಪರ್ಣಾ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಅವರ್ಣಾ 1989 ರಲ್ಲಿ ನಿರೂಪಕಿಯಾಗಿ ಟೆಲಿವಿಷನ್ ಸೇರಿದ್ರು. 1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ಅವರ ಮಸಣದ ಹೂವು ಚಿತ್ರದಿಂದ ಬೆಳಕಿಗೆ

ಖ್ಯಾತ ನಟಿ, ನಿರೂಪಕಿ ಅಪರ್ಣಾ  ಇನ್ನಿಲ್ಲ. Read More »

ಗಾಯಕ, ವೈದ್ಯ ಡಾ.ಸತೀಶ್ ಪೂಜಾರಿ ನಿಧನ

ಉಡುಪಿ : ಕೋಟದ ಶ್ರೀ ಮಾತಾ ಆಸ್ಪತ್ರೆಯ ಮಾಲಕ ಡಾ.ಸತೀಶ್ ಪೂಜಾರಿ (54) ಹೃದಯಾಘಾತದಿಂದ ಕೋಟತಟ್ಟು ಮಣೂರಿನ ಸ್ವಗೃಹದಲ್ಲಿ ಗುರುವಾರ ಬೆಳಗ್ಗೆ ನಿಧನರಾದರು. ಕುಂದಾಪುರದ ಶ್ರೀ ಮಾತಾ ಆಸ್ಪತ್ರೆ ಮಾಲೀಕರಾಗಿದ್ದ ಇವರು ಕಲಾವಿದರೂ ಆಗಿದ್ದರು ಹಾಗೂ ಮನಸ್ಮಿತಾ ಫೌಂಡೇಷನ್ ಹಾಗೂ ಇನ್ನಿತರ ಸಂಸ್ಥೆಗಳಲ್ಲೂ ಇದ್ದರು. ಇಎನ್‌ಟಿ ತಜ್ಞರಾಗಿದ್ದ ಡಾ. ಸತೀಶ್ ಅತ್ಯುತ್ತಮ ಗಾಯಕರಾಗಿದ್ದು, ಅನೇಕ ಸಂಗೀತ ವೀಡಿಯೊಗಳನ್ನು, ಆಲ್ಬಂಗಳನ್ನು ಹೊರತಂದಿದ್ದರು. ಸಂಗೀತ ರಸಮಂಜರಿಗಳಲ್ಲಿ ಹಾಡುತ್ತಿದ್ದರು. ಗಾಯಕಿ ಎಸ್‌. ಜಾನಕಿಯವರ ಅಭಿಮಾನಿಯಾಗಿದ್ದ ಡಾ.ಸತೀಶ್ ಪೂಜಾರಿ ವರ್ಷಂಪ್ರತಿ ಕೋಟೇಶ್ವರದಲ್ಲಿ ಡಾ.ಎಸ್‌.ಜಾನಕಿ

ಗಾಯಕ, ವೈದ್ಯ ಡಾ.ಸತೀಶ್ ಪೂಜಾರಿ ನಿಧನ Read More »

ಅನಾರೋಗ್ಯಕ್ಕೀಡಾಗಿ ರಾದೀಪ್ ಪೂಜಾರಿ ಮೃತ್ಯು

ವಿಟ್ಲ: ಅನಾರೋಗ್ಯಕ್ಕೀಡಾಗಿ ಮೂಡಂಬೈಲು ಬೊಳಂತಿಮೊಗೇರು ನಿವಾಸಿ, ರಾದೀಪ್‌ ಪೂಜಾರಿ (38) ಇಂದು ನಿಧನರಾದರು. ಕೃಷಿ ಮತ್ತು ಕೋಳಿ ಫಾರ್ಮ್ ನಡೆಸುತ್ತಿದ್ದ ರಾದೀಪ್‌ ಪೂಜಾರಿ ಅವರು ಕ್ರೀಡೆಯಲ್ಲಿಯೂ ಗುರುತಿಸಿಕೊಂಡಿದ್ದರು. ಕೆಲ ದಿನಗಳಿಂದ ಅನಾರೋಗ್ಯದಿಂದಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರು. ಮೃತರು ಪತ್ನಿ, ಮಗು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಅನಾರೋಗ್ಯಕ್ಕೀಡಾಗಿ ರಾದೀಪ್ ಪೂಜಾರಿ ಮೃತ್ಯು Read More »

ಕಾಂಗ್ರೆಸ್ ಕಾರ್ಯಕರ್ತ ಚಂದ್ರಶೇಖರ ಬಪ್ಪಳಿಗೆ ನಿಧನ

ಪುತ್ತೂರು: ಕಾಂಗ್ರೆಸ್ ಕಾರ್ಯಕರ್ತ ಚಂದ್ರಶೇಖರ್ ಬಪ್ಪಳಿಗೆ ಅನಾರೋಗ್ಯಕ್ಕೊಳಗಾಗಿ ನಿಧನ ಹೊಂದಿದ್ದಾರೆ. ಕ್ರಿಕೆಟ್ ಪಟುವಾಗಿ ಗುರಿತಿಸಿಕೊಂಡಿದ್ದ ಅವರು, ನಿನ್ನೆ ಅಸೌಖ್ಯಕ್ಕೊಳಗಾಗಿದ್ದರು. ಬಳಿಕ ಪುತ್ತೂರಿನ ಸರ್ಕಾರಿ ಆಸ್ಪತ್ರೆ ದಾಖಲು ಮಾಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಗೆ ದಾಖಲು ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ. ಮೃತರು ಪತ್ನಿ, ತಂದೆ ಹಾಗೂ ಇಬ್ಬರು ಸಹೋದರರನ್ನ ಅಗಲಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತ ಚಂದ್ರಶೇಖರ ಬಪ್ಪಳಿಗೆ ನಿಧನ Read More »

ಅನಾರೋಗ್ಯಕ್ಕೀಡಾಗಿ ಬಾಲಕಿ ಮೃತ್ಯು

ಬೆಳ್ತಂಗಡಿ : ಅನಾರೋಗ್ಯದಿಂದಾಗಿ ಬಾಲಕಿ ಸಾವನ್ನಪ್ಪಿದ ಘಟನೆ ಶಿಶಿಲ ಗ್ರಾಮದ ಪೆರಿಕೆ ಎಂಬಲ್ಲಿ ನಡೆದಿದೆ. ಕೃಷ್ಣಪ್ಪ ಮಲೆಕುಡಿಯ ಮತ್ತು ಸುನಂದಾ ದಂಪತಿಯ ಪುತ್ರಿ ಸುಪ್ರೀತಾ (16) ಮೃತ ಬಾಲಕಿ. ಸುಪ್ರೀತಾ ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಳು.  ಜು. 9 ರಂದು ಆಕೆಯ ಆರೋಗ್ಯ ತೀವ್ರ ಹದಗೆಟ್ಟಿದ್ದು, ತಕ್ಷಣವೇ ಆಕೆಯನ್ನು ಚಿಕಿತ್ಸೆಗಾಗಿ ಉಪ್ಪಿನಂಗಡಿ ಆಸ್ಪತ್ರೆಗೆ ಕರೆದೊಯ್ದಿದ್ದರು, ಆದರೆ ಮನೆಗೆ ಹಿಂದಿರುಗುವ ಮಾರ್ಗ ಮಧ್ಯೆ ಆಕೆ ಪ್ರಜ್ಞಾಹೀನಳಾಗಿದ್ದಳು. ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೃತರು

ಅನಾರೋಗ್ಯಕ್ಕೀಡಾಗಿ ಬಾಲಕಿ ಮೃತ್ಯು Read More »

ಯಕ್ಷಗಾನ ಕಲಾವಿದ ಶ್ರೀಧರ ರಾವ್ ನಿಧನ

ಪುತ್ತೂರು : ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ ರಾವ್ ಹೃದಯಾಘಾತಕ್ಕೀಡಾಗಿ ಜುಲೈ 5ರಂದು ನಿಧನರಾಗಿದ್ದಾರೆ. 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಸಮೀಪದ ಬೇರಿಕೆ ನಿವಾಸಿ ಶ್ರೀಧರ ರಾವ್ ಅವರಿಗೆ ಬೆಳಿಗ್ಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಕುಂಬ್ಳೆ ಶ್ರೀಧರ ರಾವ್ ಪರಿಚಯ: 1948ರಲ್ಲಿ ಕಾಸರಗೋಡು ಜಿಲ್ಲೆಯ ಕುಂಬ್ಳೆಯಲ್ಲಿ ಮಹಾಲಿಂಗ ಮತ್ತು ಕಾವೇರಿ ದಂಪತಿಯ ಪುತ್ರರಾಗಿ ಜನಿಸಿದ ಶ್ರೀಧರ ರಾವ್ ರವರು 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರ

ಯಕ್ಷಗಾನ ಕಲಾವಿದ ಶ್ರೀಧರ ರಾವ್ ನಿಧನ Read More »

ನಿವೃತ್ತ ಭಾರತೀಯ ನೌಕಾಪಡೆ ಉದ್ಯೋಗಿ ಬಾಲಕೃಷ್ಣ ನಾಯ್ಕ ನಿಧನ

ಪುತ್ತೂರು: ನಿವೃತ್ತ ಭಾರತೀಯ ನೌಕಾಪಡೆಯ ಉದ್ಯೋಗಿ, ಕಲ್ಲಾರೆ ನಿವಾಸಿ ಬಾಲಕೃಷ್ಣ ನಾಯ್ಕ  (68) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಭಾರತೀಯ ನೌಕಾಪಡೆಯು ಸಬ್‍ ಮೆಷಿನರಿಯಲ್ಲಿ ಉದ್ಯೋಗಿಯಾಗಿದ್ದ ಅವರು ನಿವೃತ್ತರಾಗಿ 16 ವರ್ಷಗಳು ಕಳೆದಿದ್ದವು. ಇಂದು ಮಧ್ಯಾಹ್ನ ಮನೆಯಲ್ಲಿ ಹಠಾತ್ತನೇ ಕುಸಿದು ಬಿದ್ದು ನಿಧನರಾದರು. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.

ನಿವೃತ್ತ ಭಾರತೀಯ ನೌಕಾಪಡೆ ಉದ್ಯೋಗಿ ಬಾಲಕೃಷ್ಣ ನಾಯ್ಕ ನಿಧನ Read More »

error: Content is protected !!
Scroll to Top