ನಿಧನ

ಹೃದಯಾಪಘಾತದಿಂದ ಶಂಭುಗ ಸೀತಾರಾಮ ಶೆಟ್ಟಿ ನಿಧನ

ಮಾಣಿ: ಉಳ್ಳಾಲ್ತಿ ದೈವಸ್ಥಾನದಲ್ಲಿ ಗುಡ್ಡೆ ಚಾಮುಂಡಿ ದೈವದ ಪಾತ್ರಿಯಾಗಿದ್ದ ಶಂಭುಗ ಸೀತಾರಾಮ ಶೆಟ್ಟಿ(61) ಅವರು ಹೃದಯಾಘಾತದಿಂದ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಮೃತರು ಪತ್ನಿ, ನಾಲ್ಕು ಜನ ಪುತ್ರರು, ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಶಂಭುಗದಲ್ಲಿರುವ ಅವರ ಸ್ವಗೃಹದಲ್ಲಿ ಶುಕ್ರವಾರ ರಾತ್ರಿ 7 ಗಂಟೆಗೆ ನಡೆಸಲಾಗುವುದು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಹೃದಯಾಪಘಾತದಿಂದ ಶಂಭುಗ ಸೀತಾರಾಮ ಶೆಟ್ಟಿ ನಿಧನ Read More »

ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸಾವು

ಪುತ್ತೂರು: ಕಳೆದ ಎರಡು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕರ್ಮ ನಿವಾಸಿ, ಪಂಚಾಕ್ಷರಿ ಲೈಟಿಂಗ್ಸ್‌ನ ಮಾಲೀಕ ಗಣೇಶ್ ಗೌಡ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆ. ಲೈಟಿಂಗ್ಸ್ ‌ಸಂಬಂಧಿಸಿದ ಕೆಲಸಕ್ಕೆ ಡಿ. 6 ರಂದು ಬದಿಯಡ್ಕಕ್ಕೆ ತೆರಳಿದ್ದ ಅವರು ಸ್ಕೂಟರ್ ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದರು. ಅವರಿಗೆ ಕಾಸರಗೋಡು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೃತರು ಪತ್ನಿ, ಇಬ್ಬರು

ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸಾವು Read More »

ಯುವಕ ನೇಣು ಬಿಗಿದು ಆತ್ಮಹತ್ಯೆ

ಉಡುಪಿ: ಪ್ರೀತಿಸಿದವಳ ಜೊತೆ ಮೊಬೈಲಿನಲ್ಲಿ ಮಾತನಾಡುತ್ತಾ ರೂಮಿಗೆ ಹೋದ ಯುವಕ ನೇಣಿಗೆ ಶರಣಾದ ಘಟನೆ ಕುಂಜಿಬೆಟ್ಟುವಿನಲ್ಲಿ ನಡೆದಿದೆ. ಮೃತನನ್ನು ರಂಜಿತ್ (28) ಎಂದು ಗುರುತಿಸಲಾಗಿದೆ. ಪೈಂಟಿಂಗ್ ಕೆಲಸ ಮಾಡುತ್ತಿದ್ದ ರಂಜಿತ್ ಎಂದಿನಂತೆ ಜ. 29 ರಂದು ಸಹ ಕೆಲಸ ಮುಗಿಸಿ ಮನೆಗೆ ಬಂದಿದ್ದಾರೆ. ಕೆಲ ಸಮಯ ಮನೆಯವರ ಜೊತೆಗೆ ಸಮಯ ಕಳೆದಿದ್ದಾರೆ. ಅದಾದ ಬಳಿಕ ಫೋನಿನಲ್ಲಿ ತಮ್ಮ ಪ್ರೇಮಿಯ ಜೊತೆ ಮಾತನಾಡುತ್ತಾ ಕೋಣೆಗೆ ಹೋಗಿದ್ದಾರೆ. ರಾತ್ರಿ ಸಮಯದಲ್ಲಿ ಮನೆಯ ಟ್ಯಾಂಕಿನಲ್ಲಿ ನೀರು ತುಂಬಿದಾಗ, ಅದನ್ನು ಆಫ್ ಮಾಡಲು

ಯುವಕ ನೇಣು ಬಿಗಿದು ಆತ್ಮಹತ್ಯೆ Read More »

ನಿರ್ಮಾಣ ಹಂತದ ತಡೆಗೋಡೆ ಕುಸಿತ: ಓರ್ವ ಮೃತ್ಯು

ಬೆಳ್ತಂಗಡಿ: ಉಜಿರೆ – ಸುರ್ಯ ರಸ್ತೆಯಲ್ಲಿನ ನಿರ್ಮಾಣ ಹಂತದಲ್ಲಿರುವ ತಡೆಗೋಡೆಯೊಂದು ‌ಏಕಾಏಕಿ ಕುಸಿದು ಬಿದ್ದ ಪರಿಣಾಮ ಕಾರ್ಮಿಕನೊಬ್ಬ ಮೃತಪಟ್ಚ ಘಟನೆ ನಡೆದಿದೆ. ಮೃತ ದುರ್ದೈವಿಯನ್ನು ಬಿಹಾರ ಮೂಲದ ರಾಕೇಶ್ ಕುಮಾರ್ (25) ಎಂದು ಗುರುತಿಸಲಾಗಿದೆ. ಕಾಮಗಾರಿ ನಡೆಯುತ್ತಿದ್ದ ತಡೆಗೋಡೆ ಕುಸಿದು ರಾಕೇಶ್ ಅವರು ಮಣ್ಣಿನಡಿ ‌ಸಿಲುಕಿಕೊಂಡಿದ್ದರು. ಸ್ಥಳೀಯರು ತಕ್ಷಣವೇ ಅವರನ್ನು ಅಲ್ಲಿಂದ ಹೊರತೆಗೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಅವರು ಮೃತಪಟ್ಚಿದ್ದಾರೆ. ಈ ದುರಂತದಲ್ಲಿ ಇನ್ನಿಬ್ಬರು ಕಾರ್ಮಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು

ನಿರ್ಮಾಣ ಹಂತದ ತಡೆಗೋಡೆ ಕುಸಿತ: ಓರ್ವ ಮೃತ್ಯು Read More »

ಬಾವಿಗೆ ಆಕಸ್ಮಿಕವಾಗಿ ಬಿದ್ದು ವ್ಯಕ್ತಿ ಸಾವು

ವಿಟ್ಲ: ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ತೋಟದ ನಡುವಿನ ಆವರಣವಿಲ್ಲದ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕೊಳ್ನಾಡಿನ ಸಾಲೆತ್ತೂರು ಎಂಬಲ್ಲಿ ನಡೆದಿದೆ. ಸಾಲೆತ್ತೂರಿನ ಕೋಡಿ ನಿವಾಸಿ, ಕೃಷಿಕ ಕೃಷ್ಣಪ್ಪ ಪೂಜಾರಿ (70) ಎಂಬವರೇ ಮೃತ ದುರ್ದೈವಿ. ಸಂಜೆ ವೇಳೆ ಸಾಲೆತ್ತೂರಿಗೆ ಹೋಗಿ ರಾತ್ರಿ ವಾಪಸ್ಸಾಗುತ್ತಿದ್ದಾಗ‌ ಈ ಘಟನೆ ನಡೆದಿದೆ.

ಬಾವಿಗೆ ಆಕಸ್ಮಿಕವಾಗಿ ಬಿದ್ದು ವ್ಯಕ್ತಿ ಸಾವು Read More »

ಮಂಗಳೂರಿನ ಜನಪ್ರಿಯ ರೀಲ್ಸ್ ರಾಣಿ ಆಶಾ ಪಂಡಿತ್ ನಿಧನ

ಮಂಗಳೂರು: ತಮ್ಮ ಬೈಗುಳಗಳ‌ ಮೂಲಕವೇ ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯ ಚಟಾಕಿ ಹಾರಿಸಿ ಜನರಿಗೆ ಮನರಂಜನೆ ನೀಡುತ್ತಿದ್ದ ಮಂಗಳೂರಿನ ಪ್ರಸಿದ್ಧ ರೀಲ್ಸ್ ರಾಣಿ ಆಶಾ ಪಂಡಿತ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಳಪೆ ಸಮೀಪ ಸಣ್ಣ ಕ್ಯಾಂಟಿನ್ ನಡೆಸಿಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದ ಅವರು ಜನರ ಮನದಲ್ಲಿ ಆಶಾಕ್ಕ ಎಂದೇ ಫೇಮಸ್ ಆಗಿದ್ದರು. ತಮ್ಮ ಕಾಮಿಡಿ ರೀಲ್ಸ್‌ಗಳ ಮೂಲಕವೇ ಸಾವಿರಾರು ಅಭಿಮಾನಿಗಳನ್ನು ಸಂಪಾದಿಸಿದ್ದರು. ನಿನ್ನೆ ರಾತ್ರಿ ವೇಳೆ ಅವರಿಗೆ ವಾಂತಿಯಾಗಿತ್ತು. ಇಂದು ಬೆಳಗ್ಗೆ ಹೃದಯಾಘಾತಕ್ಕೆ ತುತ್ತಾಗಿ ಮನೆಯ ಅಂಗಳದಲ್ಲಿ ಬಿದ್ದಿದ್ದರು.

ಮಂಗಳೂರಿನ ಜನಪ್ರಿಯ ರೀಲ್ಸ್ ರಾಣಿ ಆಶಾ ಪಂಡಿತ್ ನಿಧನ Read More »

ರಿಕ್ಷಾ ಚಾಲಕ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ರಿಕ್ಷಾ ಚಾಲಕರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆರ್ಯಾಪು ಗ್ರಾಮದ ಪಿಲಿಗುಂಡದಲ್ಲಿ ನಡೆದಿದೆ. ಮೃತರನ್ನು ಗೋಪಾಲ ನಾಯ್ಕ (55) ಎಂದು ಗುರುತಿಸಲಾಗಿದೆ. ರಾತ್ರಿ ವೇಳೆ ಮಲಗಿದ್ದ ಇವರು ಬೆಳಗ್ಗೆ ಮನೆ ಮಂದಿ ನೋಡುವ ಸಮಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಇವರು ಪುತ್ತೂರು ಬಸ್ಸು ನಿಲ್ದಾಣದ ಸಮೀಪ ರಿಕ್ಷಾ ಬಾಡಿಗೆ ಮಾಡುತ್ತಿದ್ದರು. ಪುತ್ತೂರು ಸಹಕಾರಿ ಸಂಘದಲ್ಲಿ ರಿಕ್ಷಾದ ಸಾಲದ ಕಂತು, ರಿಕ್ಷಾದ ವಿಮೆ ಪಾವತಿ ಸಹ ಬಾಕಿ ಇತ್ತು. ಈ ಹಿನ್ನೆಲೆ

ರಿಕ್ಷಾ ಚಾಲಕ ನೇಣು ಬಿಗಿದು ಆತ್ಮಹತ್ಯೆ Read More »

ಧನುಪೂಜೆಗೆಂದು ಹೋಗಿದ್ದ ಬಾಲಕ ಸಾವು ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದ್ದೇನು ಗೊತ್ತಾ?

ಬೆಳ್ತಂಗಡಿ: ದೇವಸ್ಥಾನಕ್ಕೆ ಧನು ಪೂಜೆಗೆಂದು ಹೊರಟು ತೋಟದ ಕೆರೆಯಲ್ಲಿ ಶವ ಪತ್ತೆಯಾದ ಸಂಭೋಳ್ಯದ ಸುಮಂತ್ (16) ಎಂಬ ಬಾಲಕನ ಮರಣೋತ್ತರ ಪರೀಕ್ಷೆ ನಡೆದಿದ್ದು, ಈ ವೇಳೆ ಬಾಲಕನ ತಲೆಗೆ ಮೂರು ಬಲವಾದ ಪೆಟ್ಟು ಬಿದ್ದಿರುವ ಅಂಶ ಬಯಲಾಗಿದೆ. ಬಾಲಕನ ತಲೆಗೆ ಕತ್ತಿ ಅಥವಾ ಇನ್ಯಾವುದೋ ರೀತಿಯ ಆಯುಧದಿಂದ ಬಲವಾದ ಪೆಟ್ಟು ಬಿದ್ದಿದೆ. ಆತ ಅರೆಪ್ರಜ್ಞಾವಸ್ಥೆಯಲ್ಲಿ ಕೆರೆಗೆ ಬಿದ್ದಿರುವ ಸಾಧ್ಯತೆ ಇದ್ದು, ಆತನ ಶ್ವಾಸಕೋಶದಲ್ಲಿ ನೀರು ತುಂಬಿದ್ದ ಅಂಶ ಸಹ ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಬಾಲಕನನ್ನು ಯಾರೋ

ಧನುಪೂಜೆಗೆಂದು ಹೋಗಿದ್ದ ಬಾಲಕ ಸಾವು ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದ್ದೇನು ಗೊತ್ತಾ? Read More »

ಧನುಪೂಜೆಗೆ ಹೋಗಿದ್ದ ಬಾಲಕ ನಾಪತ್ತೆ ಪ್ರಕರಣ: ಮೃತ ದೇಹ ಕೆರೆಯಲ್ಲಿ ಪತ್ತೆ

ಮಡಂತ್ಯಾರ್: ಬೆಳಗ್ಗೆ ಧನುಪೂಜೆಗೆಂದು ಮನೆಯಿಂದ ದೇವಸ್ಥಾನಕ್ಕೆ ಹೋದ ಬಾಲಕ ನಾಪತ್ತೆ ಪ್ರಕರಣ ದುಃಖಾಂತ್ಯವಾಗಿದ್ದು, ಬಾಲಕನ ಮೃತ ದೇಹ ಮನೆಯ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ. ಎಂದಿನಂತೆ ಗೆಳೆಯರ ಜೊತೆಗೆ ಧನುಪೂಜೆಗೆ ಹೋಗುವುದಾಗಿ ಹೇಳಿ ಹೋಗಿದ್ದ ಸಂಬೋಳ್ಯದ ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ 9 ನೇ ತರಗತಿ ವಿದ್ಯಾರ್ಥಿ ಸುಮಂತ್ (16) ಮೃತ ದುರ್ದೈವಿ. ಎಂದಿನಂತೆ ಆತನ ಗೆಳೆಯರು ಧನುಪೂಜೆಗೆ ಹೋಗಲು ಆತನಿಗಾಗಿ ಕಾದಿದ್ದು, ಆತ ಬರದೇ ಇದ್ದಾಗ ಅವರು ಪೂಜೆಗೆ ತೆರಳಿದ್ದಾರೆ. ಪೂಜೆ ಯಿಂದ. ಮರಳಿ ಸುಮಂತ್ ಮನೆಗೆ

ಧನುಪೂಜೆಗೆ ಹೋಗಿದ್ದ ಬಾಲಕ ನಾಪತ್ತೆ ಪ್ರಕರಣ: ಮೃತ ದೇಹ ಕೆರೆಯಲ್ಲಿ ಪತ್ತೆ Read More »

ಮಹಿಳೆಗೆ ಲೈಂಗಿಕ ಕಿರುಕುಳ, ಲಕ್ಷಾಂತರ ರೂ. ಪಂಗನಾಮ: ಆರೋಪಿ ಹನೀಫ್ ಬಂಧನ

ಬೆಂಗಳೂರು: ಪತಿಯಿಂದ ಮೋಸಕ್ಕೊಳಗಾದ ಮಹಿಳೆಗೆ ನ್ಯಾಯ ಕೊಡಿಸುವುದಾಗಿ ಹೇಳಿ ಆಕೆ ಯಿಂದ 16 ಲಕ್ಷ ರೂ. ದೋಚಿದ, ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ, ಜಾತಿ ನಿಂದನೆ ಮಾಡಿದ ಕರುನಾಡು ಎಂಬ ಖಾಸಗಿ ಚಾನಲ್‌ನ ಎಂಡಿಯನ್ನು ಡಿಸಿಆರ್‌ಇ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಹನೀಫ್ ಎಂದು ಗುರುತಿಸಲಾಗಿದೆ. ಬಿಟಿಎಂ ಲೇಔಟ್ ನಿವಾಸಿ ಮಹಿಳೆಯಿಂದ 16 ಲಕ್ಷ ರೂ. ಪಡೆದು ವಂಚಿಸಿದಲ್ಲದೆ, ಆಕೆಯ ಜಾತಿ ಬಗ್ಗೆ ಅಸಭ್ಯವಾಗಿ ನಿಂದಿಸಿದ್ದ. ಈ ಸಂಬಂಧ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್ಸಿ ಎಸ್ಟಿ

ಮಹಿಳೆಗೆ ಲೈಂಗಿಕ ಕಿರುಕುಳ, ಲಕ್ಷಾಂತರ ರೂ. ಪಂಗನಾಮ: ಆರೋಪಿ ಹನೀಫ್ ಬಂಧನ Read More »

error: Content is protected !!
Scroll to Top