ನಿಧನ

ಬೈಕ್ ಡಿಕ್ಕಿ ; ಮಹಿಳೆ ಮೃತ್ಯು

ಬಿ.ಸಿ.ರೋಡ್ : ರಸ್ತೆ ದಾಟಲು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಂತುಕೊಂಡಿದ್ದ ವಯಸ್ಸಾದ  ಮಹಿಳೆಯೋರ್ವರಿಗೆ ದ್ವಿಚಕ್ರ ವಾಹನ‌ ಡಿಕ್ಕಿಯಾಗಿ ಮೃತಪಟ್ಟ ಘಟನೆ ಬಿಸಿರೋಡಿನ ಕೈಕಂಬದ ಮಿತ್ತಬೈಲು ಎಂಬಲ್ಲಿ ಜ.30 ರಂದು ಗುರುವಾರ ಸಂಜೆ ವೇಳೆ ನಡೆದಿದೆ. ಪುದು ಸಮೀಪದ ‌ಸುಜೀರು ನಿವಾಸಿ ಬೀಪಾತುಮ್ಮ ( 68) ಮೃತಪಟ್ಟ ಮಹಿಳೆ.  ಮಿತ್ತಬೈಲು ಮೊಹಿದ್ದೀನ್ ಜುಮಾಮಸೀದಿ ಹಾಲ್ ನಲ್ಲಿ ಸಂಬಂಧಿಕರೊಬ್ಬರ ಮದುವೆ ಕಾರ್ಯಕ್ರಮ ಮುಗಿಸಿ ,ವಾಪಸು ಮನೆ ಕಡೆಗೆ ಹೋಗುವುದಕ್ಕೆ ಹೆದ್ದಾರಿಯನ್ನು ದಾಟಲು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಂತುಕೊಂಡಿದ್ದ ವೇಳೆ ಅತೀವೇಗ […]

ಬೈಕ್ ಡಿಕ್ಕಿ ; ಮಹಿಳೆ ಮೃತ್ಯು Read More »

ಮುಕ್ರಂಪಾಡಿ ಬೊಮ್ಮಣ್ಣ ಗೌಡ ನಿಧನ

ಪುತ್ತೂರು : ಪುತ್ತೂರಿನ ದರ್ಬೆಯ ಮುಕ್ರಂಪಾಡಿ ನಿವಾಸಿ ಬೊಮ್ಮಣ್ಣ ಗೌಡ ನಿಧನರಾಗಿದ್ದಾರೆ. ಮೃತರು ಪತ್ನಿ ಪ್ರೇಮಾ, ಶೋಭಾ .ಕೆ, ಸತೀಶ್ ಗೌಡ, ವಿದ್ಯಾ .ಕೆ, ಹರೀಶ್.ಕೆ, ಶಿವಪ್ರಸಾದ್, ಪವಿತ್ರ, ಕುಟುಂಬಸ್ಥರನ್ನು ಅಗಲಿದ್ದಾರೆ.

ಮುಕ್ರಂಪಾಡಿ ಬೊಮ್ಮಣ್ಣ ಗೌಡ ನಿಧನ Read More »

ಕಾಡಿನಲ್ಲಿರುವ ಐರೋಳ್ ಹಣ್ಣು ತಿಂದು  ಮೃತಪಟ್ಟ ವ್ಯಕ್ತಿ

ಸುಳ್ಯ : ಕಾಡಿನಲ್ಲಿರುವ ಐರೋಳ್ ಹಣ್ಣನ್ನು ತಿಂದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಸುಳ್ಯದಲ್ಲಿ ನಡೆದಿದೆ. ಅಮರ ಪಟ್ಟೂರು ಗ್ರಾಮದ ಕುಳ್ಳಾಜೆಯಲ್ಲಿ 2023ರ ಅಕ್ಟೋಬರ್‌ನಲ್ಲಿ ಲೋಕಯ್ಯ ಹಾಗೂ ಅವರ ಮಗಳು ಲೀಲಾವತಿಯವರು ಐರೋಳ್ ಹಣ್ಣನ್ನು ತಿಂದಿದ್ದು, ಪರಿಣಾಮ ಇಬ್ಬರೂ ಅಸ್ವಸ್ಥಗೊಂಡಿದ್ದರು. ಬಳಿಕ ಔಷಧ ಪಡೆದುಕೊಂಡಿದ್ದ ಲೋಕಯ್ಯ ಅವರು ಗುಣಮುಖರಾಗಿದ್ದರು. ಲೀಲಾವತಿ ಕೆಲವು ದಿನಗಳ ಬಳಿಕ ಮೃತರಾಗಿದ್ದರು ಆದರೀಗ ಲೋಕಯ್ಯ ಗುಣಮುಖರಾಗಿದ್ದರೂ, ಕೆಲವು ದಿನಗಳಿಂದ ಅಸೌಖ್ಯಗೊಂಡಿದ್ದು, ಬುಧವಾರ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕಾಡಿನಲ್ಲಿರುವ ಐರೋಳ್ ಹಣ್ಣು ತಿಂದು  ಮೃತಪಟ್ಟ ವ್ಯಕ್ತಿ Read More »

ಪ್ರಖ್ಯಾತ ಹೃದ್ರೋಗ ತಜ್ಞ ಡಾ. ಕೆ. ಎಂ. ಚೆರಿಯನ್ ನಿಧನ

ಬೆಂಗಳೂರು : ಖ್ಯಾತ ಹೃದ್ರೋಗ ತಜ್ಞ, ಹೆಸರುವಾಸಿಯಾದ ಪ್ರಖ್ಯಾತ ಶಸ್ತ್ರ ಚಿಕಿತ್ಸಕ ಡಾ. ಕೆ. ಎಂ. ಚೆರಿಯನ್ ಬೆಂಗಳೂರಿನಲ್ಲಿ ಭಾನುವಾರ ನಿಧನರಾಗಿದ್ದಾರೆ. ಡಾ. ಚೆರಿಯನ್ ಫ್ರಾಂಟಿಯರ್ ಲೈಫ್ಲೈನ್ ಮತ್ತು ಡಾ.ಚೆರಿಯನ್ ಹಾರ್ಟ್ ಫೌಂಡೇಶನ್ ನ್ನು ಸ್ಥಾಪಿಸಿದರು. ಅವರು 1991 ರಲ್ಲಿ ಪದ್ಮಶ್ರೀ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಪಡೆದಿದ್ದಾರೆ. 1975 ರಲ್ಲಿ ಚೆನ್ನೈನ ಪೆರಂಬೂರಿನ ದಕ್ಷಿಣ ರೈಲ್ವೆ ಪ್ರಧಾನ ಕಚೇರಿ ಆಸ್ಪತ್ರೆಯಲ್ಲಿ ಭಾರತದ ಮೊದಲ ಯಶಸ್ವಿ ಪರಿಧಮನಿ ಅಪಧಮನಿ ಬೈಪಾಸ್ ಶಸ್ತ್ರಚಿಕಿತ್ಸೆ ನಡೆಸಿದ್ದರು. ಮೊದಲ ಹೃದಯ-ಶ್ವಾಸಕೋಶ ಕಸಿ, ಮೊದಲ

ಪ್ರಖ್ಯಾತ ಹೃದ್ರೋಗ ತಜ್ಞ ಡಾ. ಕೆ. ಎಂ. ಚೆರಿಯನ್ ನಿಧನ Read More »

ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ನಿಧನ

ಮಂಗಳೂರು : ಹಿರಿಯ ಪತ್ರಕರ್ತ, ಹೊಸದಿಗಂತ ಪತ್ರಿಕೆಯ ವಿಶೇಷ ವರದಿಗಾರ ಗುರುವಪ್ಪ ಬಾಳೆಪುಣಿ (62) ಅಲ್ಪಕಾಲದ ಅಸೌಖ್ಯದಿಂದ ಇಂದು ಬಾಳೆಪುಣಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಬಾಳೆಪುಣಿ ಅವರು 26 ವರ್ಷ ಹೊಸದಿಗಂತ ಪತ್ರಿಕೆಯ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು. ಮಂಗಳೂರು ಮಿತ್ರ , ಕರಾವಳಿ ಅಲೆ ಪತ್ರಿಕೆಗಳಲ್ಲಿಯೂ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು. ಹರೇಕಳ ಹಾಜಬ್ಬ ಅವರನ್ನು

ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ನಿಧನ Read More »

ಹಿರಿಯ ಪತ್ರಕರ್ತ , ಹೊಸದಿಗಂತ ಪತ್ರಿಕೆಯ ವಿಶೇಷ  ವರದಿಗಾರ ಗುರುವಪ್ಪ ಬಾಳೆಪುಣಿ  ನಿಧನ

ಹಿರಿಯ ಪತ್ರಕರ್ತ , ಹೊಸದಿಗಂತ ಪತ್ರಿಕೆಯ ವಿಶೇಷ  ವರದಿಗಾರ ಗುರುವಪ್ಪ ಬಾಳೆಪುಣಿ  (62)  ಅಲ್ಪಕಾಲದ ಅಸೌಖ್ಯದಿಂದ ಇಂದು ಬಾಳೆಪುಣಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಬಾಳೆಪುಣಿ ಅವರು 26 ವರ್ಷ ಹೊಸದಿಗಂತ ಪತ್ರಿಕೆಯ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು. ಮಂಗಳೂರು ಮಿತ್ರ , ಕರಾವಳಿ ಅಲೆ ಪತ್ರಿಕೆಗಳಲ್ಲಿಯೂ ವರದಿಗಾರನಾಗಿ   ಕಾರ್ಯ ನಿರ್ವಹಿಸಿದ್ದರು. ಹರೇಕಳ ಹಾಜಬ್ಬ ಅವರನ್ನು ಮೊದಲ

ಹಿರಿಯ ಪತ್ರಕರ್ತ , ಹೊಸದಿಗಂತ ಪತ್ರಿಕೆಯ ವಿಶೇಷ  ವರದಿಗಾರ ಗುರುವಪ್ಪ ಬಾಳೆಪುಣಿ  ನಿಧನ Read More »

ಬಾವಿಗೆ ಹಾರಿ ಯುವಕ  ಆತ್ಮಹತ್ಯೆ

ಕಾರ್ಕಳ : ಕಾರ್ಕಳದ ಕಸಬಾ ಗ್ರಾಮದಲ್ಲಿ ಬಾವಿಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಕಸಬಾ ಗ್ರಾಮದ ಮೀನಗುಂಡಿ ಕಂಪೌಂಡ್‌ನ ಕೆ. ವೆಂಕಟೇಶ ಹೆಗ್ಡೆ (22) ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಮೃತ ಕೆ. ವೆಂಕಟೇಶ ಹೆಗ್ಡೆ ಮಂಗಳೂರು ಸೈಂಟ್ ಜೋಸೆಫ್ ವಿದ್ಯಾಲಯದಲ್ಲಿ ಪ್ರಥಮ ವರ್ಷದ ಎಂಬಿಎ ವ್ಯಾಸಂಗ ಮಾಡುತ್ತಿದ್ದು, ವಿದ್ಯಾಭ್ಯಾಸ ಮುಂದುವರೆಸಲು ಕಷ್ಟವಾಗುತ್ತಿದೆ ಎಂದು ತಂದೆಯ ಬಳಿ ಹೇಳಿಕೊಂಡಿದ್ದನು ಎನ್ನಲಾಗಿದೆ. ಸುಮಾರು 10 ದಿನಗಳಿಂದ ಮೌನವಾಗಿದ್ದ ಈತ ಇದೇ ಕಾರಣದಿಂದ ಮನನೊಂದು ಮನೆಯ ಹಿಂಬದಿಯ

ಬಾವಿಗೆ ಹಾರಿ ಯುವಕ  ಆತ್ಮಹತ್ಯೆ Read More »

ಬೈಕ್‍ ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿ ಹೊಡೆದ ಬಾಲಕ | ಸ್ಥಳದಲ್ಲೆ ಮೃತ್ಯು

ಕಡಬ : ಬೈಕ್ ಸವಾರನ ನಿಯಂತ್ರಣ ತಪ್ಪಿ ಮೋರಿಗೆ ಢಿಕ್ಕಿ ಹೊಡೆದು ಶಾಲಾ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಶುಕ್ರವಾರ ಬೆಳಿಗ್ಗೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪೇರಡ್ಕ ಸಮೀಪ ನಡೆದಿದೆ. ಮೃತ ಬಾಲಕನನ್ನು ಪೇರಡ್ಕದ ಖಾಸಗಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ, ನೂಜಿಬಾಳ್ತಿಲ ಗ್ರಾಮದ ಹೊಸಮನೆ ಕಾನ ನಿವಾಸಿ ವಿಶ್ವನಾಥ್ ಎಂಬವರ ಪುತ್ರ ಆಶಿಶ್(16) ಎನ್ನಲಾಗಿದೆ. ಮನೆಯಿಂದ ಶಾಲೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಬಾಲಕನನ್ನು ಕಡಬದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ  ಗಂಭೀರ

ಬೈಕ್‍ ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿ ಹೊಡೆದ ಬಾಲಕ | ಸ್ಥಳದಲ್ಲೆ ಮೃತ್ಯು Read More »

ಮೆಸ್ಕಾಂ ಉದ್ಯೋಗಿ ಅಶ್ರಫ್‍ ನಿಧನ

ಪುತ್ತೂರು: ಮೆಸ್ಕಾಂ ಉದ್ಯೋಗಿ, ಮಿಷನ್ ಗುಡ್ಡ ನಿವಾಸಿ ಆಶ್ರಫ್ ಇಂದು ಬೆಳಿಗ್ಗೆ ಪುತ್ತೂರು ಆಸ್ಪತ್ರೆಯಲ್ಲಿ ನಿಧನರಾದರು. ಕೆಲ ಸಮಯದಿಂದ ಕಿಡ್ನಿ ವೈಫಲ್ಯದಿಂದ ಅವರು ಬಳಲುತ್ತಿದ್ದರು ಎಂದು ಹೇಳಲಾಗಿದೆ. ದಿ.ಅದ್ರಾಮ ರವರ ಪುತ್ರರಾಗಿದ್ದ ಅವರು ಚಿಂಙಾಣಿ ನಿವಾಸಿಯಾಗಿದ್ದು, ಬಳಿಕ ಪೋಳ್ಯ ಮಸೀದಿ ಬಳಿ ವಾಸವಿದ್ದು ಇದೀಗ ಉರ್ಲಾಂಡಿ ಯಲ್ಲಿರುವ ಪ್ಲಾಟ್ ಒಂದರಲ್ಲಿ ವಾಸವಾಗಿದ್ದರು. ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.

ಮೆಸ್ಕಾಂ ಉದ್ಯೋಗಿ ಅಶ್ರಫ್‍ ನಿಧನ Read More »

ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದ ಯುವಕ| ಯುವಕ ಮೃತ್ಯು

ಮಂಗಳೂರು : ಸ್ನೇಹಿತರೊಂದಿಗೆ  ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಕುಸಿದು ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ಫಳೀರ್‌ನಲ್ಲಿ ಜನವರಿ 15 ರಂದು ನಡೆದಿದೆ. ಮೃತಪಟ್ಟ ಯುವಕ ಅಟ್ಟಾವರ್ ಐವರಿ ಟವರ್ ನಿವಾಸಿಯಾಗಿದ್ದ ಮತ್ತು ಅದ್ದೂರು ಮೂಲದ ಶರೀಫ್ ಅವರ ಪುತ್ರ ಶಹೀಮ್ (20) ಎಂದು ತಿಳಿದು ಬಂದಿದೆ. ಸ್ನೇಹಿತರೊಂದಿಗೆ ಆಡುತ್ತಿದ್ದ ವೇಳೆ  ಬ್ಯಾಡ್ಮಿಂಟನ್  ಆಟಗಾರ ಶಹೀಮ್  ಏಕಾಏಕಿ ಕೋರ್ಟ್ ಮೇಲೆ ಕುಸಿದು ಬಿದ್ದಿದ್ದು ಅವರನ್ನು  ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಅದೇ ಸಮಯದಲ್ಲಿ ಶಹೀಮ್ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಶಹೀಮ್

ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದ ಯುವಕ| ಯುವಕ ಮೃತ್ಯು Read More »

error: Content is protected !!
Scroll to Top