ಅಪಘಾತ

ಭೀಕರ ಅಪಘಾತ : ಐವರು ಎಂಬಿಬಿಎಸ್‌ ವಿದ್ಯಾರ್ಥಿಗಳು ಸಾವು

ತಿರುವನಂತಪುರಂ: ಕೇರಳದ ಅಲಪುಳ ಜಿಲ್ಲೆಯ ಚಂಗನಶ್ಶೇರಿ ಸಮೀಪ ನಿನ್ನೆ ರಾತ್ರಿ ಭಾರಿ ಮಳೆಯಿಂದಾಗಿ ರಸ್ತೆ ಸರಿಯಾಗಿ ಗೋಚರಿಸದೆ ಸರ್ಕಾರಿ ಬಸ್‌ಗೆ ಕಾರೊಂದು ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಂದನಂ ಮೆಡಿಕಲ್‌ ಕಾಲೇಜಿನ ಪ್ರಥಮ ವರ್ಷ ಎಂಬಿಬಿಎಸ್‌ ವಿದ್ಯಾರ್ಥಿಗಳಾದ ಸಂದೀಪ್ ವಲ್ಸನ್, ಆಯೂಷ್ ಶಾಜಿ, ಮಹಮ್ಮದ್ ಇಬ್ರಾಹಿಂ ಪಿಪಿ, ದೇವನಂದನ್, ಮಹಮ್ಮದ್ ಅಬ್ದುಲ್ ಜಬ್ಬರ್ ಮೃತಪಟ್ಟವರು. ಕರ್ಲಕೋಡ್ ಎಂಬಲ್ಲಿ ಸೋಮವಾರ ತಡರಾತ್ರಿ ಅಪಘಾತ ಸಂಭವಿಸಿದೆ. ಭೀಕರ ಅಪಘಾತದ […]

ಭೀಕರ ಅಪಘಾತ : ಐವರು ಎಂಬಿಬಿಎಸ್‌ ವಿದ್ಯಾರ್ಥಿಗಳು ಸಾವು Read More »

ಸಿಡಿಲು ಬಡಿದು ಕೆಯ್ಯೂರಿನ ನಾರಾಯಣ ಮೃತ್ಯು

ಪುತ್ತೂರು: ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕೆಯ್ಯೂರಿನಲ್ಲಿ ನಡೆದಿದೆ. ಕೆಯೂರು ನಿವಾಸಿ ನಾರಾಯಣ (45) ಮೃತ ವ್ಯಕ್ತಿ. ಮನೆಯ ಮುಂಭಾಗದ ಶೀಟ್ ನಲ್ಲಿ ಬಲ್ಬು ಹೊತ್ತುತ್ತಿಲ್ಲ ಎಂದು ಸರಿ ಪಡಿಸುತ್ತಿದ್ದ ಸಂದರ್ಭ ಸಿಡಿಲು ಬಡಿದು ನೆಲಕ್ಕೆ ಕುಸಿದು ಬಿದ್ದ ನಾರಾಯಣ ಅವರನ್ನು ಕೂಡಲೇ ಆಸ್ಪತ್ರೆಗೆ ಕಕರೆತರಲಾಯಿತಾದರೂ ಅವರು ದಾರಿ ಮಧ್ಯೆ ಮೃತಪಟ್ಟಿದ್ದರು. ಮೃತರು ಕುಟುಂಬಸ್ಥರನ್ನು ಅಗಲಿದ್ದಾರೆ.

ಸಿಡಿಲು ಬಡಿದು ಕೆಯ್ಯೂರಿನ ನಾರಾಯಣ ಮೃತ್ಯು Read More »

ನದಿಗೆ ಈಜಲು ತೆರಳಿದ ಇಬ್ಬರು ನೀರಿನಲ್ಲಿ ಮುಳುಗಿ ಮೃತ್ಯು

ನದಿಗೆ ಈಜಲು ಹೋದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳ್ವೆ ಸಮೀಪ ಇಂದು ಮಧ್ಯಾಹ್ನ ನಡೆದಿದೆ. ಗುಮೊಲ ನಿವಾಸಿ ಜಯಂತ ನಾಯ್ಕ್‍ ಹಾಗೂ ಬೆಳ್ವೆ ಶ್ರೀಶ ಆಚಾರ್ ಮೃತಪಟ್ಟವರು ಬೆಳ್ವೆ ಸಮೀಪದ ಗೊಮ್ಮೋಲ್‍ ಚರ್ಚ್‍ ಹಿಂಭಾಗ ಒಳ್ಳೆ ಹೊಂಡಕಜ್ಕೆ ಸಂಪರ್ಕ ರಸ್ತೆಯ ಬಳಿ ಇರುವ ಕಿಂಡಿ ಅಣೆಕಟ್ಟಿನ ಮೇಲ್ಭಾಗದಲ್ಲಿ ಈಜಲು ತೆರಳಿದ್ದ ಸಂದರ್ಭ ಈ ಘಟನೆ ನಡೆದಿದೆ ಎನ್ನಲಾಗಿದೆ.

ನದಿಗೆ ಈಜಲು ತೆರಳಿದ ಇಬ್ಬರು ನೀರಿನಲ್ಲಿ ಮುಳುಗಿ ಮೃತ್ಯು Read More »

 ಗುರುಪ್ರಕಾಶ್‍ ಅನಾರೋಗ್ಯದಿಂದ ನಿಧನ

ಪುತ್ತೂರು : ಅನಾರೋಗ್ಯದಿಂದ ಬಳಲುತ್ತಿದ್ದ ಗುರುಪ್ರಕಾಶ್‍ ನಿಧನರಾಗಿದ್ದಾರೆ. ಪುತ್ತೂರು ಎಪಿಎಂಸಿ ರಸ್ತೆ ನಿವಾಸಿ ಕೆಲ ಸಮಯದಿಂದ ಅನಾರೋಗ್ಯವಾಗಿದ್ದರು. ಮೃತರು ತಾಯಿ , ಪತ್ನಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

 ಗುರುಪ್ರಕಾಶ್‍ ಅನಾರೋಗ್ಯದಿಂದ ನಿಧನ Read More »

ಯುವಕ ಆತ್ಮ ಹತ್ಯೆಗೆ ಶರಣು

ಬೆಳ್ತಂಗಡಿ : ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮ ಹತ್ಯೆಗೆ ಶರಣಾಗಿರುವ ಘಟನೆ ಪುಂಜಾಲಕಟ್ಟೆಯಲ್ಲಿ ನಡೆದಿದೆ. ಪುಂಜಾಲಕಟ್ಟೆ ರಾಯಿ ಗ್ರಾಮದ ಮಾಬೆಟ್ಟ ನಿವಾಸಿ ಸುದರ್ಶನ್ ಶೆಟ್ಟಿ (26) ಆತ್ಮ ಹತ್ಯೆ ಮಾಡಿಕೊಂಡವರು. ಪಿತ್ತಜನಕಾಂಗದಿಂದ  ಬಳಲುತ್ತಿದ್ದ ಸುದರ್ಶನ್ ಶೆಟ್ಟಿ ಮಂಗಳೂರಿನ ವೆನ್ಲಾಕ್‍ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಪಿತ್ತಜನಕಾಂಗ ಖಾಯಿಲೆ ಕಡಿಮೆಯಾಗದೆ ಇದ್ದರಿಂದ ಮನನೊಂದು ಸುದರ್ಶನ್ ಶೆಟ್ಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಯುವಕ ಆತ್ಮ ಹತ್ಯೆಗೆ ಶರಣು Read More »

ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

ಬಂಟ್ವಾಳ : ಗಿರಿಯಪ್ಪ ಎಂಬುವವರು ತೆಂಗಿನಕಾಯಿ ಕೀಳಲು ಹೋಗಿ ಆಯಾ ತಪ್ಪಿ ಕೆಳಗೆ ಬಿದ್ದ ಘಟನೆ ಬಂಟ್ವಾಳ ತಾಲೂಕಿನಲ್ಲಿ  ನಡೆದಿದೆ. ಅವರ ತೋಟದ ತೆಂಗಿನ ಮರದಿಂದ ಕಾಯಿ ಕೀಳಲು ಮರಕ್ಕೆ ಹತ್ತಿದ್ದರು. ಈ ವೇಳೆ ಜಾರಿ ಕೆಳಗೆ ಬಿದ್ದು ಗಂಭೀರ ಗಾಯವಾಗಿದೆ. ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ದಿನದ 24 ಗಂಟೆಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದ ಗಿರಿಯಪ್ಪ ಇಂದು ಬೆಳಿಗ್ಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಗಿರಿಯಪ್ಪ ಅವರನ್ನು ಬದುಕಿಸಲು

ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು Read More »

ವೇಣೂರು ಬರ್ಕಜೆಯಲ್ಲಿ ನದಿಗೆ ಇಳಿದ ಮೂವರು ನೀರು ಪಾಲು !

ವೇಣೂರು ಬರ್ಕಜೆ ಎಂಬಲ್ಲಿ ಮೂವರು ಯುವಕರು ನೀರುಪಾಲಾದ ಘಟನೆ ಇಂದು ನಡೆದಿದೆ. ಮೂಡುಕೋಡಿ ಗ್ರಾಮದ ವಾಲ್ಟರ್ ಎಂಬವರ ಮನೆಗೆ ಕಾರ್ಯಕ್ರಮದ ನಿಮ್ಮಿತ ಬಂದು ಮೂಡಬಿದ್ರೆ ತಾಲೂಕಿನ ಎಡಪದವು ನಿವಾಸಿ ಲಾರೆನ್ಸ್(20) , ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಸೂರಜ್(19) , ಬಂಟ್ವಾಳ ಗ್ರಾಮದ ವಗ್ಗದ ಜೈಸನ್(19) ನೀರು ಪಾಲಾದವರು ಸ್ಥಳೀಯ ಕುಟುಂಬದ ಮನೆಗೆ ನೆಂಟರಾಗಿ ಬಂದಿದ್ದ ಮೂವರು ನದಿಗೆ ಸ್ನಾನ ಮಾಡಲು ತೆರಳಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮೂವರು ಮೃತದೇಹ ನೀರಿನಿಂದ ಹೊರತೆಗೆಯಲಾಗಿದ್ದು.

ವೇಣೂರು ಬರ್ಕಜೆಯಲ್ಲಿ ನದಿಗೆ ಇಳಿದ ಮೂವರು ನೀರು ಪಾಲು ! Read More »

ಸಾಲ ಬಾಧೆಯಿಂದ ನೇಣಿಗೆ ಶರಣು

ಬೆಳ್ತಂಗಡಿ : ಸಾಲಗಾರರ ಬಾಧೆ ತಡೆಯಲಾಗದೆ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕೆಂಗುಡೇಲು ನಿವಾಸಿ, ಪೂವಾಣಿ  ಗೌಡ ಮೃತ ಪಟ್ಟ ವ್ಯಕ್ತಿ. ಪೂವಣಿ ಗೌಡರವರು ಅವರದ್ದೆ ತೋಟದಲ್ಲಿ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ.  ಪೂವಣಿ ಗೌಡ ಅವರು ಸಾಲ ಬಾಧೆಯಿಂದ ನೊಂದಿದ್ದರು. ಈ ಕಾರಣಕ್ಕಾಗಿ ಆತ್ಮ ಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಸಾಲ ಬಾಧೆಯಿಂದ ನೇಣಿಗೆ ಶರಣು Read More »

ಶಿಕ್ಷಣ ತಜ್ಞ ಸೇರಾ ಕೋಟ್ಯಪ್ಪ ನಿಧನ

ಪುತ್ತೂರು : ಶಿಕ್ಷಕ, ಶಿಕ್ಷಣ ತಜ್ಞ ಸೇರಾ ಕೋಟ್ಯಪ್ಪ ಪೂಜಾರಿ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ಮಾಣಿಯವರಾಗಿದ್ದು, ಬೊಳುವಾರಿನಲ್ಲಿ ವಾಸವಾಗಿದ್ದರು. ಕೆಲ ವರ್ಷಗಳಿದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಗುಣ ಮುಖರಾಗಿದ್ದು, ಆರೋಗ್ಯವಾಗಿದ್ದರು. ಸುಳ್ಯ ಗಾಂಧಿನಗರ ಶಾಲೆಯಲ್ಲಿ ಮುಖ್ಯಗುರುಗಳಾಗಿದ್ದು, ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ. ನ.25ರಂದು ಬೆಳಗ್ಗೆ ಬೊಳುವಾರಿನ ವಾಸವಿದ್ದ ರೂಂನಲ್ಲಿ ಮೃತ ಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ ಎಂದು ತಿಳಿದು ಬಂದಿದೆ.

ಶಿಕ್ಷಣ ತಜ್ಞ ಸೇರಾ ಕೋಟ್ಯಪ್ಪ ನಿಧನ Read More »

ಗುಂಡ್ಯ ಹೆದ್ದಾರಿಯಲ್ಲಿ ಸರಣಿ ಅಪಘಾತ | 20 ಕ್ಕೂ ಅಧಿಕ ಮಂದಿಗೆ ಗಾಯ

ಪುತ್ತೂರು: ಸರಕಾರಿ ಬಸ್, ಖಾಸಗಿ ಬಸ್ ಹಾಗೂ ಕಾರಿನ ನಡುವೆ ನಡೆದ ಸರಣಿ ಅಪಘಾತದಲ್ಲಿ 20 ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪ ಇಂದು ಬೆಳ್ಳಂಬೆಳಗ್ಗೆ ನಡೆದಿದೆ. ಬೆಂಗಳೂರು ಮೂಲದ ಕಾಲೇಜು ವಿದ್ಯಾರ್ಥಿಗಳು ಕುಂದಾಪುರಕ್ಕೆ ಪ್ರವಾಸಕ್ಕೆಂದು ತೆರಳಿ ಹಿಂತಿರುಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಪಲ್ಟಿಯಾಗಿ ಕೆಎಸ್ಸಾರ್ಟಿಸಿ ಬಸ್ ಗೆ ಢಿಕ್ಕಿ ಹೊಡೆದಿದೆ. ಈ ಸಂದರ್ಭ ಹಿಂದಿನಿಂದ ಬರುತ್ತಿದ್ದ ಕಾರೊಂದು ಕೆಎಸ್ಸಾರ್ಟಿಸಿ ಬಸ್ ಗೆ ಢಿಕ್ಕಿ ಹೊಡೆದು

ಗುಂಡ್ಯ ಹೆದ್ದಾರಿಯಲ್ಲಿ ಸರಣಿ ಅಪಘಾತ | 20 ಕ್ಕೂ ಅಧಿಕ ಮಂದಿಗೆ ಗಾಯ Read More »

error: Content is protected !!
Scroll to Top