ಉಡುಪಿ

ಮೂವರು ಮಕ್ಕಳ ಸಹಿತ ತಾಯಿ ನಾಪತ್ತೆ

ಉಡುಪಿ: ಮಹಿಳೆಯೋರ್ವಳು ತನ್ನ ಮೂವರು ಮಕ್ಕಳೊಂದಿಗೆ ನಾಪತ್ತೆಯಾದ ಘಟನೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ದೊಡ್ಡನಗುಡ್ಡೆಯಲ್ಲಿರುವ ಪೋಸ್ಟಲ್ ಕ್ವಾಟ್ರಸ್ ನಲ್ಲಿ ನಡೆದಿದೆ. ಡಿಸೆಂಬರ್‍ 4 ರಂದು  ಮನೆಯಿಂದ ಹೊರಗೆ ಹೋದವರು ವಾಪಾಸು ಬರಲಿಲ್ಲ ಎಂದು ತಿಳೀದು ಬಂದಿದೆ ನಾಪತ್ತೆಯಾದವರನ್ನು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ದೊಡ್ಡನಗುಡ್ಡೆಯಲ್ಲಿರುವ ಪೋಸ್ಟಲ್ ಕ್ವಾಟ್ರಸ್ ನಲ್ಲಿ ವಾಸವಾಗಿದ್ದ ಲಕ್ಷಮವ್ವ ಕುಮಾರ ಮಾಳವತ್ತರ (30) ಎಂಬ ಮಹಿಳೆಯು ತನ್ನ ಮೂವರು ಮಕ್ಕಳಾದ ಅಪೂರ್ವ (7), ಶ್ರೇಯಾ (5) ಹಾಗೂ ಮನೋಜ್ (2) ನಾಪತ್ತೆಯಾದವರು ಎಂದು […]

ಮೂವರು ಮಕ್ಕಳ ಸಹಿತ ತಾಯಿ ನಾಪತ್ತೆ Read More »

ಸಮುದ್ರದಲ್ಲಿ ಮುಳುಗಿ ಇಬ್ಬರು ಸಹೋದರರ ದಾರುಣ ಸಾವು : ಓರ್ವನ ರಕ್ಷಣೆ

ಕುಂದಾಪುರ ಕೋಡಿ ಬೀಚ್‌ನಲ್ಲಿ ಸಂಭವಿಸಿದ ದುರಂತ ಉಡುಪಿ: ಕುಂದಾಪುರದ ಕೋಡಿ ಬೀಚಿನಲ್ಲಿ ಈಜಾಡಲು ಸಮುದ್ರಕ್ಕಿಳಿದ ಮೂವರು ಸಹೋದರರ ಪೈಕಿ ಇಬ್ಬರು ಮುಳುಗಿ ಸಾವಿಗೀಡಾದ ದಾರುಣ ಘಟನೆ ನಿನ್ನೆ ಸಂಜೆ ಸಂಭವಿಸಿದೆ. ಓರ್ವನನ್ನು ರಕ್ಷಿಸಲಾಗಿದೆ.ಅಂಪಾರು ಐದು ಸೆಂಟ್ಸ್ ನಿವಾಸಿ ದಾಮೋದರ್ ಪ್ರಭು ಎಂಬವರ ಪುತ್ರರಾದ ಧನರಾಜ್ (23) ಮತ್ತು ದರ್ಶನ್ (18) ಸಾವನ್ನಪ್ಪಿದ್ದರೆ, ಇನ್ನೊಬ್ಬ ಮಗ ಧನುಷ್ (20) ಗಂಭೀರ ಸ್ಥಿತಿಯಲ್ಲಿ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರು ಯುವಕರು ಸಹೋದರರಾಗಿದ್ದು ಗಂಭೀರ ಸ್ಥಿತಿಯಲ್ಲಿರುವ ಧನುಷ್ ಸುರತ್ಕಲ್

ಸಮುದ್ರದಲ್ಲಿ ಮುಳುಗಿ ಇಬ್ಬರು ಸಹೋದರರ ದಾರುಣ ಸಾವು : ಓರ್ವನ ರಕ್ಷಣೆ Read More »

ಪರಿಶೀಲಿಸದೆ ಹೇಳಿಕೆ ನೀಡಿದ ಸಿದ್ದರಾಮಯ್ಯ : ಪೇಜಾವರ ಶ್ರೀ ಸ್ಪಷ್ಟನೆ

ಸಂವಿಧಾನ ಬದಲಿಸುವ ಹೇಳಿಕೆ ನೀಡಿಲ್ಲ; ಹಿಂದೂ ಸಮಾಜವನ್ನು ಹಣಿಯುವ ಪ್ರಯತ್ನ ಎಂದ ಶ್ರೀಗಳು ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾನು ಹೇಳದೆ ಇದ್ದ ಮಾತುಗಳಿಗೆ ಪ್ರತಿಕ್ರಿಯೆ ನೀಡಿ ವಿನಾಕಾರಣ ನನ್ನನ್ನು ವಿವಾದದಲ್ಲಿ ಸಿಲುಕಿಸಿದ್ದಾರೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.ಪೇಜಾವರ ಶ್ರೀಗಳು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ ಎಂಬ ಊಹೋಪೋಹಗಳಿಗೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ಪೇಜಾವರ ಶ್ರೀ ಮನುಸ್ಮೃತಿಯ ಪ್ರತಿಪಾದಕರು. ಜಾತಿ ವ್ಯವಸ್ಥೆಯನ್ನು ಪೋಷಿಸುತ್ತಿದ್ದಾರೆ, ಮೇಲು-ಕೀಳು ಭಾವನೆ ಮಾಡುತ್ತಾರೆ ಎಂದೆಲ್ಲ ಟೀಕಿಸಿದ್ದರು. ಈ ಬಗ್ಗೆ

ಪರಿಶೀಲಿಸದೆ ಹೇಳಿಕೆ ನೀಡಿದ ಸಿದ್ದರಾಮಯ್ಯ : ಪೇಜಾವರ ಶ್ರೀ ಸ್ಪಷ್ಟನೆ Read More »

ಪೋಲಿಸರ ಹೆಸರಿನಲ್ಲಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ

ಉಡುಪಿ: ಡಿಜಿಟಲ್  ಅರೆಸ್ಟ್ ಮುಖಾಂತರ ಪೊಲೀಸರ ಹೆಸರಿನಲ್ಲಿ ಮಹಿಳೆಯೊಬ್ಬರನ್ನು ಹೆದರಿಸಿ ಲಕ್ಷಾಂತರ ರೂ. ವಂಚಿಸಿದ್ದಾರೆ. ಈ  ಘಟನೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿದ್ಯಾ(53) ಎನ್ನುವವರಿಗೆ ಅ.4ರಂದು ಪೊಲೀಸ್ ಅಧಿಕಾರಿ ಎಂದು ಹೇಳಿ ಕರೆ ಮಾಡಿ,  ಆಧಾರ್ ಕಾರ್ಡ್ ಮೂಲಕ ಮುಂಬೈ ಬ್ಯಾಂಕ್‌ನಲ್ಲಿ ಖಾತೆ ತೆರೆದು, ಆ ಖಾತೆಗೆ ಹ್ಯುಮನ್ ಟ್ರಾಫಿಂಗ್ ಹಾಗೂ ಮನಿ ಲಾಂಡರಿಂಗ್ ಮೂಲಕ ಹಣವನ್ನು ವರ್ಗಾವಣೆ ಮಾಡಲಾಗಿದೆ. ಆದ್ದರಿಂದ ಎಲ್ಲಾ ಅಕೌಂಟ್ ಪರಿಶೀಲನೆ ಮಾಡಬೇಕು ಎಂದು  ತಿಳಿಸಿದ್ದರು. ಅ.5ರಂದು

ಪೋಲಿಸರ ಹೆಸರಿನಲ್ಲಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ Read More »

ಕಾಪು ಬಡಗಬೆಟ್ಟು ಪಂಚಾಯಿತಿ ಸಾಮಾನ್ಯ ಸಭೆ

ಕಾಪು: ವಿಧಾನಸಭಾ ಕ್ಷೇತ್ರದ ಬಡಗಬೆಟ್ಟು ಪಂಚಾಯತಿನ ಸಾಮಾನ್ಯ ಸಭೆ ಇಂದು ನಡೆಯಿತು. ಗ್ರಾಮ ಪಂಚಾಯತಿನ ಕಾಮಗಾರಿಗಳ ಪ್ರಗತಿ ಪರಿಶೀಲನೆ ಹಾಗೂ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. 8 ಬಾರಿ ಆದರ್ಶ ಪಂಚಾಯತ್ ಪ್ರಶಸ್ತಿ ಪಡೆದಿರುವ ಕುರಿತು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅಭಿನಂದನೆ ಸಲ್ಲಿಸಿದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಪು ಬಡಗಬೆಟ್ಟು ಪಂಚಾಯಿತಿ ಸಾಮಾನ್ಯ ಸಭೆ Read More »

ಕಾಂತಾರ-1 ಚಿತ್ರತಂಡದ ಬಸ್‌ ಪಲ್ಟಿ : 6 ಮಂದಿಗೆ ಗಾಯ

ಉಡುಪಿ: ರಿಷಬ್‌ ಶೆಟ್ಟಿಯವರ ಕಾಂತಾರ-1 ಚಿತ್ರತಂಡ ಪ್ರಯಾಣಿಸುತ್ತಿದ್ದ ಮಿನಿಬಸ್‌ ಕೊಲ್ಲೂರು ಸಮೀಪ ನಿನ್ನೆ ರಾತ್ರಿ ಪಲ್ಟಿಯಾಗಿ ಆರು ಮಂದಿ ಜೂನಿಯರ್‌ ಕಲಾವಿದರು ಗಾಯಗೊಂಡಿದ್ದಾರೆ.ಮುದೂರಿನಲ್ಲಿ ಚಿತ್ರೀಕರಣ ಮುಗಿಸಿ ಕೊಲ್ಲೂರಿಗೆ ಹೋಗುತ್ತಿದ್ದ ವೇಳೆ ಹಾಲ್ಕಲ್‌ನ ಆನೆಝರಿ ಎಂಬಲ್ಲಿ ಬಸ್‌ ಅಪಘಾತಕ್ಕೀಡಾಗಿದೆ. ಸ್ಕೂಟಿ ಅಡ್ಡಬಂದಾಗ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಯತ್ನಿಸಿದಾಗ ಬಸ್‌ ಮಗುಚಿ ಬಿದ್ದಿದೆ. ಬಸ್‌ನಲ್ಲಿ ಸುಮಾರು 20 ಜ್ಯೂನಿಯರ್ ಕಲಾವಿದರು ಇದ್ದರು. ಈ ಪೈಕಿ 6 ಮಂದಿಗೆ ಗಾಯವಾಗಿದ್ದು, ಅವರನ್ನು ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. 2025ರ ಅಕ್ಟೋಬರ್​ 2ರಂದು ಈ

ಕಾಂತಾರ-1 ಚಿತ್ರತಂಡದ ಬಸ್‌ ಪಲ್ಟಿ : 6 ಮಂದಿಗೆ ಗಾಯ Read More »

ಇನೋವಾಕ್ಕೆ ಡಿಕ್ಕಿ ಹೊಡೆದ ಇನ್ಸುಲೇಟರ್ | ಇನೋವಾ ಪ್ರಯಾಣಿಕರಿಗೆ ಗಾಯ

ಉಡುಪಿ: ಇನೋವಾಕ್ಕೆ ಇನ್ಸುಲೇಟರ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಇನೋವಾ ಪ್ರಯಾಣಿಕರು ಗಂಭೀರ  ಗಾಯಗೊಂಡ ಘಟನೆ ಕುಂಭಾಸಿಯಲ್ಲಿ ಇಂದು ನಡೆದಿದೆ. ಇನೋವಾದಲ್ಲಿದ್ದ ಪ್ರಯಾಣಿಕರು ಗಾಯಗೊಂಡು ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಕೊಲ್ಲೂರಿನಿಂದ  ಉಡುಪಿಗೆ ಹೋಗುವ ಸಂದರ್ಭ ಘಟನೆ ನಡೆದಿದ್ದು,  ಇನ್ಸುಲೇಟರ್ ಪಲ್ಟಿಯಾಗಿದ್ದು, ಇನೋವಾ ಸಂಪೂರ್ಣ ಜಖಂಗೊಂಡಿದೆ ಎನ್ನಲಾಗಿದೆ. ಗಾಯಾಳುಗಳ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಇನೋವಾಕ್ಕೆ ಡಿಕ್ಕಿ ಹೊಡೆದ ಇನ್ಸುಲೇಟರ್ | ಇನೋವಾ ಪ್ರಯಾಣಿಕರಿಗೆ ಗಾಯ Read More »

ಮನೆಯಿಂದ ಹೊರಹೋದ ಯುವತಿ ನಾಪತ್ತೆ

ಉಡುಪಿ: ಮನೆಯಿಂದ ಹೊರಗೆ ಹೋದ ಯುವತಿಯೊಬ್ಬರು ಮನೆಗೆ ವಾಪಾಸು ಬಾರದೇ ನಾಪತ್ತೆಯಾದ ಘಟನೆ ಉಡುಪಿಯಲ್ಲಿ ನಡೆದಿದೆ. ನಗರದ ಗುಂಡಿಬೈಲಿನ ಫ್ಲಾಟ್ ಒಂದರಲ್ಲಿ ವಾಸವಿದ್ದ ಮೋನಿಕಾ ಬಿ.ಎಸ್. (24) ನಾಪತ್ತೆಯಾದ ಯುವತಿ ನ.14ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ. 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಹಾಗೂ ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಅವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸಂಪರ್ಕಿಸ ಬಹುದು ಎಂದು ಪೊಲೀಸ್ ಠಾಣಾ

ಮನೆಯಿಂದ ಹೊರಹೋದ ಯುವತಿ ನಾಪತ್ತೆ Read More »

ಡಿವೈಡರ್ ಗೆ ಕಾರು ಡಿಕ್ಕಿ : ಪ್ರಯಾಣಿಕರು ಪಾರು

ಉಡುಪಿ: ಕಾರೊಂದು ರಸ್ತೆ ವಿಭಾಜಕದ ಗಾರ್ಡ್ ಗೆ ಡಿಕ್ಕಿಯಾಗಿ ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ ರಾಷ್ಟ್ರೀಯ ಹೆದ್ದಾರಿ 66 ಉದ್ಯಾವರದಲ್ಲಿ  ಶನಿವಾರ ರಾತ್ರಿ ನಡೆದಿದೆ. ಉಡುಪಿಯಿಂದ ಪಡುಬಿದ್ರೆಗೆ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಪಾಸ್ ನ  ರಸ್ತೆ ವಿಭಾಜದ ಬಳಿ ಡಿವೈಡರ್ ಮೇಲೇರಿದ್ದು ಡಿವೈಡರ್ ಮೇಲಿನ ಗಾರ್ಡ್ ಗೆ ಡಿಕ್ಕಿಯಾಗಿ ನಿಂತಿದೆ. ಕಾರಿನಲ್ಲಿ ಮಹಿಳೆ ಸಹಿತ ಐದು ಮಂದಿ ಪ್ರಯಾಣಿರಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಅಪಘಾತ ನಡೆದ ವೇಳೆ ಆ ದಾರಿಯಾಗಿ ಹೋಗುತ್ತಿದ್ದ

ಡಿವೈಡರ್ ಗೆ ಕಾರು ಡಿಕ್ಕಿ : ಪ್ರಯಾಣಿಕರು ಪಾರು Read More »

ಕಲುಷಿತ ನೀರು ಕುಡಿದು 200ಕ್ಕೂ ಹೆಚ್ಚು ಮಂದಿ ಅಸ್ವಸ್ಥ : ಕಾಲರಾ ಭೀತಿ

ಪಂಚಾಯತ್‌ ಪೂರೈಸಿರುವ ನೀರಿನಿಂದ ರೋಗ ಹರಡಿದ ಅನುಮಾನ ಉಡುಪಿ: ಬೈಂದೂರು ಸಮೀಪ ಉಪ್ಪುಂದ ಬಳಿ ಕಲುಷಿತ ನೀರು ಸೇವಿಸಿ 200ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದು, ಕೆಲವರಿಗೆ ಕಾಲರಾ ಬಾಧಿಸಿದ ಅನುಮಾನವಿದೆ. ಉಪ್ಪುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ 6ನೇ ಮತ್ತು 7ನೇ ವಾರ್ಡಿನ ಮಡಿಕಲ್‌ ಮತ್ತು ಕರ್ಕಿಕಳಿ ಎಂಬ ಊರುಗಳಿಗೆ ಪಂಚಾಯಿತಿ ಪೂರೈಸಿದ ನೀರು ಕುಡಿದು ಜನರು ಅಸ್ವಸ್ಥರಾಗಿದ್ದಾರೆ. ಕೆಲವರು ಕಾಲರಾದಿಂದ ಬಳಲುತ್ತಿದ್ದು, ಹಲವು ಮಂದಿ ಆಸ್ಪತ್ರಗೆ ದಾಖಲಾಗಿದ್ದಾರೆ.ಪಂಚಾಯಿತಿ ಪೂರೈಸಿದ ನೀರನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಮಂಗಳೂರಿಗೆ ಕಳುಹಿಸಲಾಗಿದೆ. ಇಲ್ಲಿಂದ

ಕಲುಷಿತ ನೀರು ಕುಡಿದು 200ಕ್ಕೂ ಹೆಚ್ಚು ಮಂದಿ ಅಸ್ವಸ್ಥ : ಕಾಲರಾ ಭೀತಿ Read More »

error: Content is protected !!
Scroll to Top