ಉಡುಪಿ

ಜಾನುವಾರು ಕಳವು ಪ್ರಕರಣ ಆರೋಪಿಗಳ ವಿರುದ್ಧ ಕೋಕಾ ಅನ್ವಯ

ಕಳೆದ ವರ್ಷ ಕಾರ್ಕಳದಲ್ಲಿ ನಡೆದಿದ್ದ ಗೋ ಕಳ್ಳತನ ಕಾರ್ಕಳ : ತಾಲೂಕಿನ ಶಿರ್ಲಾಲು ಗ್ರಾಮದ ಹಾಡಿಯಂಗಡಿ ಎಂಬಲ್ಲಿ ಕಳೆದ ವರ್ಷ ನಡೆದ ಜಾನುವಾರು ಕಳವು ಪ್ರಕರಣದ ಆರೋಪಿಗಳ ವಿರುದ್ದ ಕೋಕಾ ಕಾಯ್ದೆ ಅನ್ವಯಿಸಿ ಮರಳಿ ಬಂಧಿಸಲಾಗಿದೆ. ಜಯಶ್ರೀ ಪೂಜಾರಿ ಎಂಬವರ ಮನೆಯ ಹಟ್ಟಿಗೆ ನುಗ್ಗಿದ ಆರೋಪಿಗಳು ಜಾನುವಾರುಗಳನ್ನು ಕಳವು ಮಾಡಲು ಯತ್ನಿಸಿದಾಗ ತಡೆಯಲು ಬಂದ ಮನೆಯವರನ್ನು ತಲವಾರು ತೋರಿಸಿ ಬೆದರಿಸಿದ್ದರು. ಹಟ್ಟಿಯಲ್ಲಿದ್ದ ಮೂರು ಜಾನುವಾರುಗಳ ಹಗ್ಗಗಳನ್ನು ಕತ್ತರಿಸಿ ವಾಹನದಲ್ಲಿ ತುಂಬಿಕೊಂಡು ಹೋಗಿ ವಧೆ ಮಾಡಿರುವುದು ಬೆಳಕಿಗೆ ಬಂದಿದೆ. […]

ಜಾನುವಾರು ಕಳವು ಪ್ರಕರಣ ಆರೋಪಿಗಳ ವಿರುದ್ಧ ಕೋಕಾ ಅನ್ವಯ Read More »

ಕಾರ್ಕಳದ ಪತ್ನಿ ಮನೆಯಲ್ಲಿ ನೆಲ್ಯಾಡಿಯ ನವವಿವಾಹಿತ ಆತ್ಮಹತ್ಯೆ : ದೂರು ದಾಖಲು

ಪ್ರೀತಿಸಿ ಮದುವೆಯಾಗಿದ್ದ ಯುವ ಉದ್ಯಮಿಯ ಬದುಕು ಒಂದೇ ತಿಂಗಳಲ್ಲಿ ದುರಂತ ಅಂತ್ಯ ಕಾರ್ಕಳ : ಒಂದು ತಿಂಗಳ ಹಿಂದೆಯಷ್ಟೇ ಪ್ರೀತಿಸಿ ಮದುವೆಯಾಗಿದ್ದ ಯುವ ಉದ್ಯಮಿ ಕಾರ್ಕಳದಲ್ಲಿರುವ ಪತ್ನಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ನಾನಾ ಅನುಮಾನಗಳಿಗೆ ಕಾರಣವಾಗಿದೆ. ಮಾ.17ರಂದು ತಿಂಡಿಯ ಜೊತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೊರಟದಲ್ಲಿದ್ದವರು ಚಿಕಿತ್ಸೆ ಫಲಿಸದೆ ಮಾ.29ರಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ. ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕರ್ನೋಡಿಯಲ್ಲಿ ಅಜ್ಜನ ಮನೆಯಲ್ಲಿ ವಾಸವಾಗಿದ್ದ ಮೂಲತಃ ಪುತ್ತೂರು ತಾಲೂಕಿನ ನೆಲ್ಯಾಡಿ

ಕಾರ್ಕಳದ ಪತ್ನಿ ಮನೆಯಲ್ಲಿ ನೆಲ್ಯಾಡಿಯ ನವವಿವಾಹಿತ ಆತ್ಮಹತ್ಯೆ : ದೂರು ದಾಖಲು Read More »

ಭೀಕರ ಅಪಘಾತ : ತಾಯಿ-ಮಗಳು ದುರ್ಮರಣ

ದೇವಸ್ಥಾನಗಳಿಗೆ ಭೇಟಿ ನೀಡಿ ಮರಳುತ್ತಿರುವಾಗ ಸಂಭವಿಸಿದ ಅಪಘಾತ ಉಡುಪಿ: ಟ್ರಕ್ ಹಾಗೂ ಕಾರು ನಡುವೆ ನಡೆದ ಭೀಕರ ಅಪಘಾತದಲ್ಲಿ ತಾಯಿ-ಮಗಳು ಸಾವನ್ನಪ್ಪಿ ನಾಲ್ವರು ಗಂಭೀರ ಗಾಯಗೊಂಡ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾವುಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಬೆಂಗಳೂರಿನ ನೆಲಮಂಗಲ ನಿವಾಸಿ ರಾಘು ಎಂಬವರ ಪತ್ನಿ ಮಮತಾ (36), ಪುತ್ರಿ ಧೃತಿಕ (14) ಮೃತ ದುರ್ದೈವಿಗಳು. ಇನ್ನೊರ್ವ ಮಗಳು ಜಾಹ್ನವಿ (12) ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಘು ಕುಂದಾಪುರ

ಭೀಕರ ಅಪಘಾತ : ತಾಯಿ-ಮಗಳು ದುರ್ಮರಣ Read More »

ಕೋಳಿ ಅಂಕ ವಿಚಾರದಲ್ಲಿ ಮಾರಾಮಾರಿ : ನಾಲ್ವರ ಬಂಧನ

ಕಾರ್ಕಳ : ಕೋಳಿ ಅಂಕದ ವ್ಯವಹಾರದ ಹಣಕ್ಕೆ ಸಂಬಂಧಿಸಿದ ವಿವಾದವೊಂದು ಮಾರಾಮಾರಿಗೆ ತಿರುಗಿ ಪರಸ್ಪರ ಹಲ್ಲೆ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಸಂಭವಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜೆಕಾರು ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಬೈರಂಪಳ್ಳಿ ಹರಿಕಂಡಿಗೆಯ ಪ್ರತಾಪ್ ಪೂಜಾರಿ (32), ಕಡ್ತಲ ಗ್ರಾಮದ ಸಿರಿಬೈಲು ನಿವಾಸಿ ದಿಲೀಪ್ ಶೆಟ್ಟಿ (28), ಮುತ್ತುಪಾಡಿಯ ಸುದರ್ಶನ್ ಶೆಟ್ಟಿ (36) ಮತ್ತು ವರಂಗ ಗ್ರಾಮದ ಮೂಡುಕುದೂರು ನಿವಾಸಿ ಆಕಾಶ್ (21) ಎಂದು ಗುರುತಿಸಲಾಗಿದೆ. ಮಾರ್ಚ್ 26ರಂದು ರಾತ್ರಿ

ಕೋಳಿ ಅಂಕ ವಿಚಾರದಲ್ಲಿ ಮಾರಾಮಾರಿ : ನಾಲ್ವರ ಬಂಧನ Read More »

ಬೆಂಕಿ ಅವಘಡ : ಟಯರ್‌ ಪಂಕ್ಚರ್‌ ಅಂಗಡಿ ನಾಶ

ಟ್ರಾನ್ಸ್‌ಫಾರ್ಮರ್‌ನಿಂದ ಕಿಡಿ ಸಿಡಿದು ಅನಾಹುತ ಉಡುಪಿ : ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಟೋಲ್ ಪ್ಲಾಜಾ ಸಮೀಪವಿರುವ ಟೈರ್ ಪಂಕ್ಚರ್ ಅಂಗಡಿಯೊಂದು ಭಾನುವಾರ ಮಧ್ಯಾಹ್ನ ಸಂಭವಿಸಿದ ಭೀಕರ ಬೆಂಕಿಗೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಹತ್ತಿರದ ಇಲೆಕ್ಟ್ರಿಕ್ ಟ್ರಾನ್ಸ್‌ಫಾರ್ಮರ್‌ನಿಂದ ಹೊರಬಂದ ಕಿಡಿಗಳು ಒಣ ಹುಲ್ಲಿಗೆ ತಗುಲಿ ಬೆಂಕಿ ಹತ್ತಿಕೊಂಡಿದೆ ಎಂದು ಹೇಳಲಾಗಿದೆ. ಈ ಬೆಂಕಿ ಕ್ಷಣಾರ್ಧದಲ್ಲಿ ಹರಡಿ, ಬಿಹಾರ ಮೂಲದ ಸೈಫುಲ್ಲಾ ಎಂಬುವವರಿಗೆ ಸೇರಿದ ಅಂಗಡಿಗೆ ತಗುಲಿದೆ. ಅಂಗಡಿಯಲ್ಲಿದ್ದ ಕಂಪ್ರೆಸರ್, ಜನರೇಟರ್, ಟೂಲ್ ಕಿಟ್‌ಗಳು ಮತ್ತು ದಾಸ್ತಾನು ಮಾಡಲಾಗಿದ್ದ

ಬೆಂಕಿ ಅವಘಡ : ಟಯರ್‌ ಪಂಕ್ಚರ್‌ ಅಂಗಡಿ ನಾಶ Read More »

ಬದುಕಿನ ಕಷ್ಟಕ್ಕೆ ಮಗುವನ್ನೇ ತ್ಯಜಿಸಲು ಮುಂದಾದ ತಾಯಿ: ಅಕ್ಕಪಡೆಯಿಂದ ಮತ್ತೆ ಅಮ್ಮನ ಮಡಿಲಿಗೆ ಕೂಸು

ಉಡುಪಿ: ಜೀವನದಲ್ಲಿ ಸೋತು ಹೋದ ತಾಯಿಯೊಬ್ಬಳು ತನ್ನ ಐದು ವರ್ಷದ ಹೆಣ್ಣು ಮಗುವನ್ನು ಉಡುಪಿ ಬಸ್ಸು ನಿಲ್ದಾಣದಲ್ಲಿ ತ್ಯಜಿಸಿದ್ದು, ಬಳಿಕ ಅಕ್ಕ ಪಡೆ ಆ ನೊಂದ ತಾಯಿ ಮತ್ತು ಏನೂ ಅರಿಯದ ಮಗುವನ್ನು ಒಂದುಗೂಡಿಸಿರುವ ಘಟನೆ ನಡೆದಿದೆ. ಮೂಲತಃ ಗದಗ ಜಿಲ್ಲೆಯವರಾದ ತಾಯಿ ಮಗುವಿನ ಕಣ್ಣೀರ ಕಥೆ ಇದು. ಮನೆಗೆ ಆಧಾರವಾಗಿದ್ದ ಯಜಮಾನನನ್ನು ಕಳೆದುಕೊಂಡು ಅನಾಥವಾದ ಮಹಿಳೆ ತನ್ನ ಐದು ವರ್ಷದ ಮಗುವಿನ ಜೊತೆಗೆ ಬದುಕು ಕಟ್ಟಿಕೊಳ್ಳುವ ಸಲುವಾಗಿ ಉಡುಪಿಗೆ ಬಂದಿದ್ದಳು. ಆದರೆ ಇಲ್ಲಿ ಆಕೆಗೆ ಕೆಲಸವೇನೋ

ಬದುಕಿನ ಕಷ್ಟಕ್ಕೆ ಮಗುವನ್ನೇ ತ್ಯಜಿಸಲು ಮುಂದಾದ ತಾಯಿ: ಅಕ್ಕಪಡೆಯಿಂದ ಮತ್ತೆ ಅಮ್ಮನ ಮಡಿಲಿಗೆ ಕೂಸು Read More »

ಕುಂಜಿಬೆಟ್ಟು ಟಿ.ಎ. ಪೈ ಆಂಗ್ಲ‌ ಮಾಧ್ಯಮದ ಇಬ್ಬರು ವಿದ್ಯಾರ್ಥಿಗಳು NSPIRE–MANAK ಪ್ರಶಸ್ತಿ ಯೋಜನೆಗೆ ಆಯ್ಕೆ

ಉಡುಪಿ: ಕುಂಜಿಬೆಟ್ಟುವಿನ ಟಿ. ಎ. ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ (ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲದ ಘಟಕ)ದ ಇಬ್ಬರು ವಿದ್ಯಾರ್ಥಿಗಳು 2025–26ನೇ ಸಾಲಿನ ಪ್ರತಿಷ್ಠಿತ INSPIRE–MANAK ಪ್ರಶಸ್ತಿ ಯೋಜನೆಗೆ ಆಯ್ಕೆಯಾಗಿದ್ದಾರೆ. ಈ ಯೋಜನೆ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಪ್ರಮುಖ ಯೋಜನೆಯಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಅದರ ಸ್ವಾಯತ್ತ ಸಂಸ್ಥೆಯಾದ ನ್ಯಾಷನಲ್ ಇನೋವೇಶನ್ ಫೌಂಡೇಶನ್–ಇಂಡಿಯಾ (NIF) ಸಹಯೋಗದಲ್ಲಿ ಜಾರಿಗೆ ತರಲಾಗುತ್ತಿದೆ. ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ 9ನೇ ತರಗತಿಯ ಅವನೀಶ್ ಕೆ.

ಕುಂಜಿಬೆಟ್ಟು ಟಿ.ಎ. ಪೈ ಆಂಗ್ಲ‌ ಮಾಧ್ಯಮದ ಇಬ್ಬರು ವಿದ್ಯಾರ್ಥಿಗಳು NSPIRE–MANAK ಪ್ರಶಸ್ತಿ ಯೋಜನೆಗೆ ಆಯ್ಕೆ Read More »

ಉಡುಪಿ: ಕಡಬದ ಯುವತಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ

ಉಡುಪಿಯಲ್ಲಿ ನರ್ಸಿಂಗ್‌ ಕಲಿಯುತ್ತಿದ್ದ ವಿದ್ಯಾರ್ಥಿನಿ ಉಡುಪಿ : ವೈಯಕ್ತಿಕ ಕಾರಣದಿಂದ ಮನನೊಂದ ನರ್ಸಿಂಗ್ ವಿದ್ಯಾರ್ಥಿನಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯಲ್ಲಿ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಕಡಬ ರೆಂಜಿಲಾಡಿಯ ಲಾರೆನ್ಸ್ ಎಂಬವರ ಮಗಳು ಸ್ವೀಟಿ (18) ಎಂದು ಗುರುತಿಸಲಾಗಿದೆ. ಇವರು ಉಡುಪಿಯ ನರ್ಸಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಆಸ್ಪತ್ರೆಯ ವಸತಿ ನಿಲಯದಲ್ಲಿ ಉಳಿದುಕೊಳ್ಳುತ್ತಿದ್ದರು. ಫೆ.25ರಂದು ರಾತ್ರಿ ವಸತಿ ನಿಲಯದಲ್ಲಿರುವಾಗ ಇಲಿ ಪಾಷಣ ಸೇವಿಸಿದ್ದು, ಕೂಡಲೇ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಯಿತು.

ಉಡುಪಿ: ಕಡಬದ ಯುವತಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ Read More »

ಉಡುಪಿ: ಪ್ರೇಮ ಪ್ರಕರಣದ ರಾಜಿ ಪಂಚಾಯಿತಿ ನಡೆಸುತ್ತಿದ್ದ ಮುಖಂಡನ ಮೇಲೆ ಚಾಕುವಿನಿಂದ ಹಲ್ಲೆ

ಉಡುಪಿ: ಪ್ರೇಮ ಪ್ರಕರಣದ ರಾಜಿ ಪಂಚಾಯಿತಿ ನಡೆಸುತ್ತಿದ್ದ ಸ್ಥಳೀಯ ಮೀನುಗಾರರ ಮುಖಂಡನಿಗೆ ಚಾಕುವಿನಿಂದ ಇರಿದ ಘಟನೆ ಉಡುಪಿ ಸಮೀಪ ಮಲ್ಪೆಯಲ್ಲಿ ನಡೆದಿದೆ. ಮಂಜು ಕೊಳ ಯಾನೆ ಮಂಜುನಾಥ ಸಾಲಿಯಾನ್ ಚಾಕು ಇರಿತಕ್ಕೊಳಗಾದ ಮೀನುಗಾರರ ಮುಖಂಡ. ಮಲ್ಪೆಯ ಯುವಕನ ಜೊತೆ ಪಡುಬಿದ್ರಿ ಪಲಿಮಾರು ಪರಿಸರದ ಯುವತಿಯ ಪ್ರೇಮ ಪ್ರಕರಣದ ಕುರಿತು ಮಾತುಕತೆಗೆ ಬಂದಿದ್ದ ಯುವತಿಯ ಕಡೆಯವರು ಮೀನುಗಾರ ಮುಖಂಡನಿಗೆ ಚಾಕುವಿನಿಂದ ಇರಿದಿದ್ದಾರೆ. ಗಾಯಾಳು ಮಂಜು ಕೊಳ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಗಂಭೀರ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಇರಿದ ಆರೋಪಿಗಳನ್ನು

ಉಡುಪಿ: ಪ್ರೇಮ ಪ್ರಕರಣದ ರಾಜಿ ಪಂಚಾಯಿತಿ ನಡೆಸುತ್ತಿದ್ದ ಮುಖಂಡನ ಮೇಲೆ ಚಾಕುವಿನಿಂದ ಹಲ್ಲೆ Read More »

ಉಡುಪಿ: ಮ್ಯಾರಥಾನ್‌ ಓಡುತ್ತಿರುವಾಗಲೇ ಕುಸಿದು ಬಿದ್ದು ಎಸ್‌ಐ ಸಾವು

ಉಡುಪಿ: ಕುಂದಾಪುರ ಗ್ರಾಮಾಂತರ ಎಸ್ಐ ನಾಸೀರ್ ಹುಸೇನ್ (58) ಮ್ಯಾರಥಾನ್‌ ಓಡುವಾಗಲೇ ಕುಸಿದು ಬಿದ್ದ ಮೃತಪಟ್ಟ ಘಟನೆ ಭಾನುವಾರ ಬೆಳಗ್ಗೆ ಸಂಭವಿಸಿದೆ. ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಉಡುಪಿಯಲ್ಲಿ ಭಾನುವಾರ ಬೆಳಗ್ಗೆ ಹಮ್ಮಿಕೊಳ್ಳಲಾದ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದ ನಾಸಿರ್‌ ಹುಸೈನ್‌ ಓಡುತ್ತಿರುವಾಗಲೇ ಕುಸಿದು ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ. ನಮ್ಮ ಪೊಲೀಸ್ ನಮ್ಮ ಹೆಮ್ಮೆ ಎಲ್ಲರಿಗೂ ಫಿಟ್ನೆಸ್ ಡಬ್ ಫ್ರೀ ಕರ್ನಾಟಕ ಸೈಬರ್ ಜಾಗೃತಿಗಾಗಿ 5 ಕಿ.ಮೀ ಮ್ಯಾರಥಾನ್ ಓಟವನ್ನು ಉಡುಪಿ ಅಜ್ಜರಕಾಡು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ

ಉಡುಪಿ: ಮ್ಯಾರಥಾನ್‌ ಓಡುತ್ತಿರುವಾಗಲೇ ಕುಸಿದು ಬಿದ್ದು ಎಸ್‌ಐ ಸಾವು Read More »

error: Content is protected !!
Scroll to Top