ದಂಪತಿ ಮಧ್ಯೆ ಜಗಳ : ಸಾವಿನಲ್ಲಿ ಅಂತ್ಯ | ಅನಾಥರಾದ ಬಾಲಕ, ಬಾಲಕಿ
ಕಾರ್ಕಳ: ಯಾವುದೋ ಕಾರಣಕ್ಕೆ ದಂಪತಿ ನಡುವೆ ಜಗಳವಾಗಿ ಕೊನೆಗೆ ಘಟನೆ ಸಾವಿನೊಂದಿಗೆ ಅಂತ್ಯ ಕಂಡ ಘಟನೆ ಕಾರ್ಕಳ ತಾಲೂಕಿನ ನಲ್ಲೂರಿನಲ್ಲಿ ನಡೆದಿದೆ. ಯಲ್ಲಾಪುರದ ಇಮ್ಯಾನುಲ್ ಸಿದ್ದಿ (40), ಯಶೋಧಾ (32) ಸಾವಿಗೀಡಾದ ದಂಪತಿ. ಭಾನುವಾರ ಬೆಳಿಗ್ಗೆ ಯಾವುದೋ ವಿಚಾರಕ್ಕೆ ದಂಪತಿ ನಡುವೆ ಜಗಳವಾಗಿದೆ. ತಕ್ಷಣ ಯಶೋಧಾ ತೋಟದಲ್ಲಿದ್ದ ಬಾವಿಗೆ ಹಾರಿದ್ದಾರೆ. ಅವರನ್ನು ರಕ್ಷಿಸಲು ಪತಿ ಇಮ್ಯಾನುಲ್ ನೀರಿಗೆ ಹಾರಿದ್ದಾರೆ. ಇಬ್ಬರೂ ಮೃತಪಟ್ಟಿದ್ದು, ದಂಪತಿ ಸಾವಿನಿಂದ 10 ವರ್ಷದ ಬಾಲಕ ಹಾಗೂ 9 ವರ್ಷದ ಬಾಲಕಿ ಅನಾಥರಾಗಿದ್ದಾರೆ. ಡಿವೈಎಸ್ಪಿ […]
ದಂಪತಿ ಮಧ್ಯೆ ಜಗಳ : ಸಾವಿನಲ್ಲಿ ಅಂತ್ಯ | ಅನಾಥರಾದ ಬಾಲಕ, ಬಾಲಕಿ Read More »