ರಾಜ್ಯ

ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ವಿಮಾ ಪರಿಹಾರ ಪಾವತಿ ವಿಳಂಬ: ಶೀಘ್ರ ಪರಿಹಾರಕ್ಕೆ ಕ್ಯಾ. ಚೌಟ ಸೂಚನೆ

ಮಂಗಳೂರು: ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ವಿಮಾ ಪರಿಹಾರ ಪಾವತಿ ವಿಳಂಬವಾಗಿದ್ದು ಇದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಂಬಂಧಿಸಿದ ಅಧಿಕಾರಿಗಳ ಜೊತೆ ಸಭೆ ನಡೆಸಿ ಶೀಘ್ರ ವಿಮಾ ಮೊತ್ತ ಪಾವತಿಗೆ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದಾರೆ. ಕಳೆದ ವಾರ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು, ಕೃಷಿ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದು, ವಿಳಂಬಕ್ಕೆ ‌ಕಾರಣ ಏನು ಎಂಬುದರ ಬಗ್ಗೆ ಪರಾಮರ್ಶಿಸಿದ್ದರು. ಹಾಗೆಯೇ ತುರ್ತಾಗಿ ವಿಮಾ […]

ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ವಿಮಾ ಪರಿಹಾರ ಪಾವತಿ ವಿಳಂಬ: ಶೀಘ್ರ ಪರಿಹಾರಕ್ಕೆ ಕ್ಯಾ. ಚೌಟ ಸೂಚನೆ Read More »

ಕೇಂದ್ರ ಸರ್ಕಾರದ ವಿರುದ್ಧ ಸಿಎಂ ‌ಸಿದ್ದರಾಮಯ್ಯ ಗರಂ: ಯಾಕೆ ಗೊತ್ತಾ?

ಬೆಂಗಳೂರು: ಮಹಿಳೆಯರು ಮತ್ತು ಬಡವರ ಪರ ಕಾಳಜಿ ವಹಿಸಿ ಹಲವಾರು ಯೋಜನೆಗಳನ್ನು ಜಾರಿಗೆ ತಂದದ್ದು ‌ನಮ್ಮ ಕಾಂಗ್ರೆಸ್ ಸರ್ಕಾರ. ಆದರೂ ಜನರು ಮೋದಿ ಮೋದಿ ಎಂದೇ ಕೂಗುತ್ತಾರೆ ಎಂದು ಸಿಎಂ ‌ಸಿದ್ದರಾಮಯ್ಯ ಅವರು ಅಸಮಾಧಾನ ಹೊರಹಾಕಿದ್ದಾರೆ. ಗಾಂಧಿ ಗ್ರಾಮ ಪುರಸ್ಕಾರಕ್ಕೆ ‌ಚಾಲನೆ ನೀಡಿ ಮಾತನಾಡಿದ ಅವರು, ಜಲ ಜೀವನ್ ಮಿಷನ್ ಯೋಜನೆಗೆ ಕೇಂದ್ರ ಸರ್ಕಾರ ಏನನ್ನೂ ನೀಡಿಲ್ಲ. ನಾವೇ ಹೆಚ್ಚು ಅನುದಾನ ನೀಡಿದವರು. ಸಾರ್ವಜನಿಕರು ಅವರ ಮೇಲೆ ಒತ್ತಡ ಹಾಕುವುದೇ ಇಲ್ಲ. ಕಬ್ಬಿಗೆ ಎಫ್‌ಆರ್‌ಪಿ, ಸಕ್ಕರೆಗೆ ಎಂಎಸ್‌ಪಿ,

ಕೇಂದ್ರ ಸರ್ಕಾರದ ವಿರುದ್ಧ ಸಿಎಂ ‌ಸಿದ್ದರಾಮಯ್ಯ ಗರಂ: ಯಾಕೆ ಗೊತ್ತಾ? Read More »

ಇನ್ನು ನೋಂದಣಿ, ಕರಾರುಗಳಿಗೆ ಡಿಜಿಟಲ್‌ ಇ-ಸ್ಟ್ಯಾಂಪ್‌ ವ್ಯವಸ್ಥೆ

ಛಾಪಾ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಮಾಡಿದ ಸರ್ಕಾರ ಬೆಂಗಳೂರು : ಆಸ್ತಿ ನೋಂದಣಿ, ಒಪ್ಪಂದದಂಥ ಪ್ರಮುಖ ಕಾರ್ಯಗಳಿಗೆ ಬಳಕೆಯಾಗುವ ಛಾಪಾ ಕಾಗದ ವ್ಯವಸ್ಥೆಗೆ ಸರ್ಕಾರ ಆಮೂಲಾಗ್ರ ಬದಲಾವಣೆ ಮಾಡಿದೆ. ಈಗ ಇ-ಸ್ಟ್ಯಾಂಪಿಂಗ್‌ ವ್ಯವಸ್ಥೆ ಬದಲಾಗಿ ಡಿಜಿಟಲ್‌ ಇ-ಸ್ಟ್ಯಾಂಪ್‌ ವ್ಯವಸ್ಥೆ ತಂದಿದೆ. ಕಳೆದ ಅಕ್ಟೋಬರ್‌ನಿಂದಲೇ ಕರ್ನಾಟಕದಲ್ಲಿ ಅಧಿಕೃತವಾಗಿ ಡಿಜಿಟಲ್ ಮಾದರಿಯ ಇ-ಸ್ಟಾಂಪ್ ಜಾರಿಗೆ ಬಂದಿದೆ. ಇ-ಸ್ಟ್ಯಾಂಪ್ ಬದಲು ಇನ್ಮುಂದೆ ಡಿಜಿಟಲ್ ಇ-ಸ್ಟ್ಯಾಂಪ್ ಬಳಕೆಗೆ ಸೂಚಿಸಲಾಗಿದೆ. ಆದರೆ ಜನರಲ್ಲಿ ಅರಿವು ಮೂಡುವವರೆಗೆ ಹಳೆಯ ಇ-ಸ್ಟ್ಯಾಂಪ್ ಬಳಕೆಯಲ್ಲಿರುತ್ತೆ. ಈ ಬಗ್ಗೆ ಸ್ವತಃ

ಇನ್ನು ನೋಂದಣಿ, ಕರಾರುಗಳಿಗೆ ಡಿಜಿಟಲ್‌ ಇ-ಸ್ಟ್ಯಾಂಪ್‌ ವ್ಯವಸ್ಥೆ Read More »

ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿಗೆ ಆಗಮನ

ನಾರಾಯಣ ಗುರು-ಮಹಾತ್ಮ ಗಾಂಧಿ ಸಂವಾದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟನೆ ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 3ರಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಮಂಗಳೂರಿಗೆ ಆಗಮಿಸಲಿದ್ದಾರೆ. ಡಿ.3ರಂದು ಬೆಳಗ್ಗೆ 11 ಗಂಟೆಗೆ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ 11.40ಕ್ಕೆ ಕೊಣಾಜೆ ಮಂಗಳಗಂಗೋತ್ರಿಯಲ್ಲಿ ಶಿವಗಿರಿ ಮಠ ವರ್ಕಲ ಶ್ರೀ ನಾರಾಯಣ ಗುರು ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಆಯೋಜಿಸಿರುವ ಶತಮಾನದ ಪ್ರಸ್ತಾನ ಶ್ರೀ ನಾರಾಯಣ ಗುರು-ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವ,

ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿಗೆ ಆಗಮನ Read More »

ನಾಳೆ ಡಿಕೆಶಿ ಮನೆಯಲ್ಲಿ ಸಿದ್ದರಾಮಯ್ಯನವರಿಗೆ ಬ್ರೇಕ್‌ಫಾಸ್ಟ್‌

ರಾಜ್ಯ ರಾಜಕೀಯದಲ್ಲೀಗ ಬ್ರೇಕ್‌ಫಾಸ್ಟ್‌ ಕುತೂಹಲದ ಕೇಂದ್ರ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಯಲ್ಲಿ ಬ್ರೇಕ್‌ಫಾಸ್ಟ್‌ ಮಾಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇದೀಗ ಮಂಗಳವಾರ ತನ್ನ ಮನೆಗೆ ಸಿದ್ದರಾಮಯ್ಯ ಅವರನ್ನು ಬ್ರೇಕ್‌ಫಾಸ್ಟ್‌ಗೆ ಆಹ್ವಾನಿಸಿದ್ದಾರೆ. ಬ್ರೇಕ್‌ಫಾಸ್ಟ್‌ದ ಮೀಡಿಂಗ್‌ನಲ್ಲಿ ಇಬ್ಬರ ನಡುವಿನ ಕುರ್ಚಿ ಕಿತ್ತಾಟ ಸದ್ಯಕ್ಕೆ ಶಮನಗೊಂಡಿರುವಂತೆ ಕಾಣಿಸುತ್ತಿದ್ದರೂ ನಾಳಿನ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಮತ್ತೊಂದು ಸುತ್ತಿನ ಕುತೂಹಲಕ್ಕೆ ಕಾರಣವಾಗಿದೆ. ಅಧಿಕಾರ ಹಂಚಿಕೆ ಬಿಕ್ಕಟ್ಟಿಗೆ ತುಸುಮಟ್ಟಿನ ಶಮನ ದೊರೆತಿದ್ದರೂ ದೆಹಲಿ ಮಟ್ಟದಲ್ಲಿ ಮಾತುಕತೆ ಮುಂದುವರಿದಿದೆ. ಶನಿವಾರ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ‘ಬ್ರೇಕ್​ಫಾಸ್ಟ್ ಮೀಟಿಂಗ್’ ನಡೆದಿತ್ತು.

ನಾಳೆ ಡಿಕೆಶಿ ಮನೆಯಲ್ಲಿ ಸಿದ್ದರಾಮಯ್ಯನವರಿಗೆ ಬ್ರೇಕ್‌ಫಾಸ್ಟ್‌ Read More »

ಜಮೀರ್‌ ಸೋಷಿಯಲ್‌ ಮೀಡಿಯಾ ಖಾತೆ ಸೌದಿಯಿಂದ ನಿರ್ವಹಣೆ : ಕುಟುಕಿದ ಬಿಜೆಪಿ

ಸಚಿವಾಲಯವನ್ನು ನಿಯಂತ್ರಿಸುವುದು ಟರ್ಕಿಯೋ, ಪ್ಯಾಲೇಸ್ತೀನೋ? ಎಂದು ಪ್ರಶ್ನೆ ಬೆಂಗಳೂರು: ಕಾಂಗ್ರೆಸ್‌ನ ಹಲವು ಪ್ರಮುಖ ನಾಯಕರ ಸೋಷಿಯಲ್‌ ಮೀಡಿಯಾ ಖಾತೆಗಳ ಮೂಲ ವಿದೇಶಗಳಲ್ಲಿರುವುದು ಬಹಿರಂಗವಾದ ಬೆನ್ನಿಗೆ ಇದೀಗ ರಾಜ್ಯದ ಪ್ರಭಾವಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಕೂಡ ಇದೇ ಆರೋಪಕ್ಕೆ ಸಿಲುಕಿದ್ದಾರೆ. ಜಮೀರ್‌ ಅಹ್ಮದ್‌ ಖಾನ್‌ ಅವರ ಸೋಷಿಯಲ್‌ ಮೀಡಿಯಾ ಖಾತೆಗಳು ಸೌದಿಯಿಂದ ನಿರ್ವಹಣೆಯಾಗುತ್ತಿರುವುದು ಈಗ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಜಮೀರ್‌ ಅವರನ್ನು ಕುಟುಕಿರುವ ಬಿಜೆಪಿ ಸೋಷಿಯಲ್‌ ಮೀಡಿಯಾ ಖಾತೆ ವಿದೇಶದಿಂದ ನಿರ್ವಹಣೆಯಾಗುತ್ತಿರುವದು ಲೋಕಸತ್ಯ, ಜಮೀರ್‌ ನಿರ್ವಹಿಸುವ ಸಚಿವಾಲಯವನ್ನು

ಜಮೀರ್‌ ಸೋಷಿಯಲ್‌ ಮೀಡಿಯಾ ಖಾತೆ ಸೌದಿಯಿಂದ ನಿರ್ವಹಣೆ : ಕುಟುಕಿದ ಬಿಜೆಪಿ Read More »

ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಬಳಿಕ ಒಗ್ಗಟ್ಟಿನ ರಾಗ : ಭಿನ್ನಮತ ಇಲ್ಲ ಎಂದು ಸಾರಿದ ಸಿದ್ದರಾಮಯ್ಯ-ಡಿಕೆಶಿ

ಎರಡೂವರೆ ವರ್ಷದ ಅಧಿಕಾರ ಕಚ್ಚಾಟಕ್ಕೆ ಸದ್ಯ ತೆರೆ ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷದಿಂದ ನಡೆಯುತ್ತಿದ್ದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನಡುವಿನ ಅಧಿಕಾರ ಕಚ್ಚಾಟಕ್ಕೆ ಸದ್ಯ ತೆರೆ ಬಿದ್ದಂತೆ ಕಾಣುತ್ತದೆ. ಇಂದು ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಬಳಿಕ ಇಬ್ಬರೂ ಒಗ್ಗಟ್ಟಿನ ರಾಗ ಹಾಡಿದ್ದಾರೆ. ನಾವಿಬ್ಬರು ಒಂದಾಗಿದ್ದೇವೆ, ಹೈಕಮಾಂಡ್‌ ಹೇಳಿದಂತೆ ಕೇಳುತ್ತೇವೆ. ಪಕ್ಷವನ್ನ ಇನ್ನಷ್ಟು ಶಕ್ತಿಶಾಲಿಗೊಳಿಸಿ 2028ಕ್ಕೆ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ

ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಬಳಿಕ ಒಗ್ಗಟ್ಟಿನ ರಾಗ : ಭಿನ್ನಮತ ಇಲ್ಲ ಎಂದು ಸಾರಿದ ಸಿದ್ದರಾಮಯ್ಯ-ಡಿಕೆಶಿ Read More »

ಕಾರುಗಳ ಡಿಕ್ಕಿ : ಒಂದೇ ಕುಟುಂಬದ ಐದು ಮಂದಿ ಸಾವು

ಮಂತ್ರಾಲಯಕ್ಕೆ ಹೊರಟಿದ್ದವರ ಕಾರು ಭೀಕರ ಅಪಘಾತ ಬೆಂಗಳೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಕರ್ನೂಲ್‌ ಜಿಲ್ಲೆಯ ಕೊಟೆಕಲ್‌ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 164ರಲ್ಲಿ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ಕೋಲಾರ ಮೂಲದ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಇದರಲ್ಲಿ ಇಬ್ಬರು ಪುಟ್ಟ ಮಕ್ಕಳೂ ಇದ್ದಾರೆ. ಮತ್ತೊಂದು ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬಸ್ಥರು ಒಂದೇ ಕಾರಿನಲ್ಲಿ

ಕಾರುಗಳ ಡಿಕ್ಕಿ : ಒಂದೇ ಕುಟುಂಬದ ಐದು ಮಂದಿ ಸಾವು Read More »

ರಾಮ-ಲಕ್ಷ್ಮಣರನ್ನು ಕ್ರೂರಿಗಳು ಎಂದ ಲಲಿತಾ ನಾಯ್ಕ್‌ ವಿರುದ್ಧ ಕೇಸ್‌

ಸಂವಾದ ಕಾರ್ಯಕ್ರಮದಲ್ಲಿ ಹಿಂದುಗಳ ದೇವತೆಗಳನ್ನು ಅವಮಾನಿಸಿದ್ದ ಮಾಜಿ ಸಚಿವೆ ಬೆಂಗಳೂರು: ರಾಮ-ಲಕ್ಷ್ಮಣರನ್ನು ಕ್ರೂರಿಗಳು ಎಂದು ಕರೆದು ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ ಆರೋಪದ ಮೇಲೆ ಬಂಡಾಯ ಸಾಹಿತಿ ಹಾಗೂ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯ್ಕ್‌ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನ.23ರಂದು ದಾವಣಗೆರೆ ನಗರದ ಎವಿಕೆ ಕಾಲೇಜಿನಲ್ಲಿ‌ ನಡೆದ ಸಂವಾದದಲ್ಲಿ ಲಲಿತಾ ನಾಯ್ಕ್‌ “ರಾಮಾಯಣದಲ್ಲಿರುವ ಶ್ರೀರಾಮ, ಲಕ್ಷ್ಮಣ, ರಾವಣರು ಆದರ್ಶರಲ್ಲ ಅವರು ಕ್ರೂರಿಗಳು” ಎಂಬ ಹೇಳಿದ್ದರು. ಭಕ್ತಿಯ ಜೊತೆಗೆ ಬೆರೆತ ಮೌಢ್ಯ ಜನರ ವಿಚಾರ ಶಕ್ತಿಯನ್ನು

ರಾಮ-ಲಕ್ಷ್ಮಣರನ್ನು ಕ್ರೂರಿಗಳು ಎಂದ ಲಲಿತಾ ನಾಯ್ಕ್‌ ವಿರುದ್ಧ ಕೇಸ್‌ Read More »

ಕುರ್ಚಿ ಕಚ್ಚಾಟ : ಇಂದು ಸಿದ್ದರಾಮಯ್ಯ-ಡಿಕೆಶಿ ನೇರ ಮಾತುಕತೆ

ಮುಖ್ಯಮಂತ್ರಿ ನಿವಾಸದಲ್ಲಿ ಸಿಎಂ-ಡಿಸಿಎಂ ನಡುವೆ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಬೆಂಗಳೂರು: ಅಧಿಕಾರ ಹಂಚಿಕೆ ಗುದ್ದಾಟದ ನಡುವಯೇ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ನೇರ ಮಾತುಕತೆ ನಡೆಯಲಿರುವುದು ಕುತೂಹಲ ಕೆರಳಿಸಿದೆ. ಕುರ್ಚಿ ಕಚ್ಚಾಟ ಶುರುವಾದ ಬಳಿಕ ಬಹಳ ಸಮಯದ ಬಳಿಕ ಹೀಗೆ ಸಿಎಂ ಮತ್ತು ಡಿಸಿಎಂ ಮುಖಾಮುಖಿಯಾಗುತ್ತಿದ್ದಾರೆ. ಸಿಎಂ ನಿವಾಸ ಕಾವೇರಿಯಲ್ಲಿ ಬೆಳಗ್ಗೆ 9.30ಕ್ಕೆ ಸಿಎಂ ಮತ್ತು ಡಿಸಿಎಂ ನಡುವಿನ ಬ್ರೇಕ್‌ಫಾಸ್ಟ್‌ ಮೀಟಿಂಗ್ ನಡೆಯಲಿದೆ ಎನ್ನಲಾಗಿದೆ. ಮೊದಲು ನೀವಿಬ್ಬರು ಮಾತನಾಡಿಕೊಂಡು ಸ್ಪಷ್ಟತೆಗೆ ಬನ್ನಿ, ಯಾವುದೇ ಗೊಂದಲ

ಕುರ್ಚಿ ಕಚ್ಚಾಟ : ಇಂದು ಸಿದ್ದರಾಮಯ್ಯ-ಡಿಕೆಶಿ ನೇರ ಮಾತುಕತೆ Read More »

error: Content is protected !!
Scroll to Top