ರಾಜ್ಯ

ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್ ಅಭಿಷೇಕ್‌ನನ್ನು ವಿಚಾರಣೆ ಮಾಡಿದ SIT

ಬೆಳ್ತಂಗಡಿ: ಧರ್ಮಸ್ಥಳದ ಬುರುಡೆ ಪ್ರಕರಣ ಮತ್ತು ಅನನ್ಯಾ ಭಟ್ ಸುಳ್ಳು ಕೇಸ್ ದಾಖಲಿಸಿದ ಸುಜಾತ ಭಟ್ ಅವರ ವಿಡಿಯೋ ಪ್ರಸಾರ ಮಾಡಿದ ಯೂಟ್ಯೂಬರ್ ಅಭಿಷೇಕ್‌ನನ್ನು SIT ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಸೆ. 3 ರಂದು ದಾಖಲೆಗಳ ಸಮೇತ ಸಂಜೆ SIT ಕಚೇರಿಗೆ ಆಗಮಿಸಿದ ಅಭಿಷೇಕ್‌ನನ್ನು ಸೆ. 4 ರ ಬೆಳಗ್ಗಿನ ವರೆಗೆ SIT ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇಂದು ಕೂಡಾ ಅಭಿಷೇಕ್ ವಿಚಾರಣೆ ಮುಂದುವರೆದಿದೆ. ಅಭಿಷೇಕ್ ಬುರುಡೆಗಾಗಿ ಬಂಗ್ಲೆಗುಡ್ಡದಲ್ಲಿ ಜಯಂತ್ ಜೊತೆಗೆ ರಾತ್ರಿಯಿಡೀ ಹುಡುಕಾಟ ನಡೆಸಿದ್ದು, ಇದನ್ನು […]

ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್ ಅಭಿಷೇಕ್‌ನನ್ನು ವಿಚಾರಣೆ ಮಾಡಿದ SIT Read More »

ಮಹಿಳಾ ಎಸ್ಪಿಯನ್ನು ನಾಯಿಗೆ ಹೋಲಿಸಿದ ಶಾಸಕನ ವಿರುದ್ಧ ಕೇಸ್‌

ಬೆಂಗಳೂರು : ದಾವಣಗೆರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಶಾಮನೂರು ಮನೆತನದ ನಾಯಿಗೆ ಹೋಲಿಸಿ ಅವಮಾನ ಮಾಡಿದ ಆರೋಪದ ಮೇರೆಗೆ ಹರಿಹರದ ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ವಿರುದ್ಧ ದಾವಣಗೆರೆಯ ಕೆಟಿಜೆ ನಗರ ಪೊಲೀಸ್‌ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ. ಶಾಸಕ ಬಿ.ಪಿ. ಹರೀಶ್‌ ತಮ್ಮ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಸ್ವತಃ ಎಸ್ಪಿ ಉಮಾ ಪ್ರಶಾಂತ್‌ ಠಾಣೆಗೆ ದೂರು ನೀಡಿದ್ದರು. ಇದನ್ನು ಆಧರಿಸಿ ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್‌) ಕಾಲಂ 79 (ಮಹಿಳೆಯ ಮಾನಕ್ಕೆ ಕುಂದುಂಟು ಮಾಡುವುದು) ಹಾಗೂ

ಮಹಿಳಾ ಎಸ್ಪಿಯನ್ನು ನಾಯಿಗೆ ಹೋಲಿಸಿದ ಶಾಸಕನ ವಿರುದ್ಧ ಕೇಸ್‌ Read More »

ಚೆನ್ನಯ್ಯ SIT ಕಸ್ಟಡಿ ಅಂತ್ಯ: ಬೆಳ್ತಂಗಡಿ ಕೋರ್ಟ್‌ಗೆ ಹಾಜರು

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದ ದೂರುದಾರ ಆರೋಪಿ ಚೆನ್ನಯ್ಯನ SIT ಕಸ್ಟಡಿ ಅಂತ್ಯವಾಗಿದ್ದು, ಆತನನ್ನು ಇಂದು ಬೆಳ್ತಂಗಡಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ಆತನನ್ನು ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರ ಸಮ್ಮುಖದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಹೆಚ್ಚುವರಿ ಮಾಹಿತಿ ಪಡೆಯಲು ಮತ್ತೆ SIT ಅಧಿಕಾರಿಗಳು ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಚೆನ್ನಯ್ಯ SIT ಕಸ್ಟಡಿ ಅಂತ್ಯ: ಬೆಳ್ತಂಗಡಿ ಕೋರ್ಟ್‌ಗೆ ಹಾಜರು Read More »

ಕುಂಕುಮ ಹಚ್ಚುವ ಪದ್ದತಿ ಮುಸ್ಲಿಮರಲ್ಲಿಲ್ಲ: ಸಿ ಎಂ ಸಿದ್ದರಾಮಯ್ಯ

ಮೈಸೂರು: ಬಾನು ಮುಷ್ತಾಕ್ ಮುಸ್ಲಿಮ್ ಮಹಿಳೆ ಯಾಗಿದ್ದು, ಅವರ ಧರ್ಮದಲ್ಲಿ ಕುಂಕುಮ ಹಚ್ಚುವ ಪದ್ಧತಿ ಇಲ್ಲ. ನಾವು ದಸರಾವನ್ನು ನಾಡಹಬ್ಬ ಎಂದು ಆಚರಿಸುತ್ತೇವೆ. ಅದಕ್ಕೆ ಬೇರೆ ಧರ್ಮದವರು ಉದ್ಘಾಟಕರಾದರೆ ಕುಂಕುಮ ಹಚ್ಚಿ ಬನ್ನಿ, ಹಿಂದೂಗಳಾಗಿ ಬನ್ನಿ ಎನ್ನುವುದು ಸರಿಯಲ್ಲ ಎಂದು ಸಿ ಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ಬಿಜೆಪಿಯ ವಿರೋಧಕ್ಕೆ ‌ಪ್ರತಿಕ್ರಿಯೆ ನೀಡಿದ ಅವರು, ಬಾನು ಮುಷ್ತಾಕ್ ಅವರ ಕುಂಕುಮದ ಬಗ್ಗೆ ಮಾತನಾಡಿದ್ದಾರೆ ಎನ್ನುವ ಬಗ್ಗೆ ನನಗೆ ತಿಳಿದಿಲ್ಲ. ಅವರು ಕನ್ನಡದ ಬರಹಗಾರ್ತಿ.

ಕುಂಕುಮ ಹಚ್ಚುವ ಪದ್ದತಿ ಮುಸ್ಲಿಮರಲ್ಲಿಲ್ಲ: ಸಿ ಎಂ ಸಿದ್ದರಾಮಯ್ಯ Read More »

ಧರ್ಮಸ್ಥಳ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್: ಕಾಡಿನ ಕೆಲ ಪ್ರದೇಶಗಳಲ್ಲಿ ಗಿಡ ನೆಟ್ಟು ಸ್ಥಳ ಗುರುತಿಸಿದ್ದ ಬುರುಡೆ ಗ್ಯಾಂಗ್

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದ ಬುರುಡೆ ವಿಷಯಕ್ಕೆ ಸಂಬಂಧಿಸಿದ ಹಾಗೆ ಕಳೆದ ಒಂದು ವರ್ಷದಿಂದಲೇ ತಯಾರಿ ನಡೆದಿತ್ತು. ಚೆನ್ನಯ್ಯನ ಮೂಲಕ ಕಾಡಿನಲ್ಲಿ ಕೆಲವು ಸ್ಥಳಗಳನ್ನು ಗುರುತು ಮಾಡಿ ಅಲ್ಲಿ ಗಿಡಗಳನ್ನು ನೆಡಲಾಗಿತ್ತು ಎಂಬ ಅಂಶ SIT ಗೆ ಗೊತ್ತಾಗಿದೆ. ದೂರುದಾರ ಆರೋಪಿ ಚೆನ್ನಯ್ಯ‌ನನ್ನು ಕಳೆದ ಕೆಲ ದಿನಗಳಿಂದಲೂ SIT ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಚೆನ್ನಯ್ಯನ ಪಾತ್ರ ಸೃಷ್ಟಿಯಾದಾಗಿಂದ ಈ ವರೆಗಿನ ಎಲ್ಲಾ ವಿಚಾರಗಳನ್ನು ಕ್ರಮಬದ್ಧವಾಗಿ ಜೋಡಿಸುವ ಕಾರ್ಯ ನಡೆಯುತ್ತಿದೆ. ಗಿರೀಶ್ ಮಟ್ಟಣ್ಣನವರ್ ತಂಡ ಕಳೆದ ಒಂದು ವರ್ಷದ

ಧರ್ಮಸ್ಥಳ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್: ಕಾಡಿನ ಕೆಲ ಪ್ರದೇಶಗಳಲ್ಲಿ ಗಿಡ ನೆಟ್ಟು ಸ್ಥಳ ಗುರುತಿಸಿದ್ದ ಬುರುಡೆ ಗ್ಯಾಂಗ್ Read More »

ಈಗ ಕಾಂಗ್ರೆಸ್‌ನಿಂದಲೂ ಅಪಪ್ರಚಾರ ಖಂಡಿಸಿ ಧರ್ಮಸ್ಥಳ ಚಲೋ

ಕಾಂಗ್ರೆಸ್‌ ಶಾಸಕರ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ ಹೊರಟಿದ್ದಾರೆ ನೂರಾರು ಮಂದಿ ಬೆಂಗಳೂರು: ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಹಲವು ಯಾತ್ರೆ, ಹೋರಾಟಗಳನ್ನು ನಡೆಸಿದ್ದಾಯಿತು. ಈಗ ಕಾಂಗ್ರೆಸ್‌ ಸರದಿ. ಕಾಂಗ್ರೆಸ್‌ ಶಾಸಕರೊಬ್ಬರು ಧರ್ಮಸ್ಥಳ ಚಲೋ ಯಾತ್ರೆ ಕೈಗೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಹರೀಶ್‌ ಗೌಡ ನೇತೃತ್ವದಲ್ಲಿ ಯಾತ್ರೆ ಕೈಗೊಳ್ಳಲಾಗಿದೆ. ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗಿಂದ ಯಾತ್ರೆ ಆರಂಭಿಸಲಾಗಿದೆ. ಬುಧವಾರ ಬೆಳಗ್ಗೆ ಆಂಜನೇಯ ದೇವರಿಗೆ

ಈಗ ಕಾಂಗ್ರೆಸ್‌ನಿಂದಲೂ ಅಪಪ್ರಚಾರ ಖಂಡಿಸಿ ಧರ್ಮಸ್ಥಳ ಚಲೋ Read More »

ಕೊಲೆ ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ

ಸಿಂಗಲ್‌ ಮದರ್‌ ಆಗಿರುವುದರಿಂದ ಜಾಮೀನು ಕೊಡಬೇಕೆಂದು ಕೋರಿದ್ದ ಪವಿತ್ರಾ ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ಕೊಲೆ ಪ್ರಕರಣದಲ್ಲಿ ಮತ್ತೆ ಜೈಲುಪಾಲಾಗಿರುವ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿಯನ್ನು 57ನೇ ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ. ಈ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ ಏಳು ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ವಜಾ ಮಾಡಿದ ಕಾರಣ ಅವರೀಗ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ

ಕೊಲೆ ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ Read More »

ಇಂದು ಬಿಜೆಪಿಯಿಂದ ಬೃಹತ್‌ ಧರ್ಮಸ್ಥಳ ಚಲೋ ಅಭಿಯಾನ

ಮಧ್ಯಾಹ್ನ ಧರ್ಮಸ್ಥಳದಲ್ಲಿ ಧರ್ಮ ಜಾಗೃತಿ ಸಮಾವೇಶ ಬೆಂಗಳೂರು: ಧರ್ಮಸ್ಥಳ ವಿರುದ್ಧ ನಡೆದಿರುವ ಷಡ್ಯಂತ್ರ ಪ್ರಕರಣವನ್ನು ಎನ್ಐಎ ತನಿಖೆಗೆ ಕೊಡುವಂತೆ ಒತ್ತಾಯಿಸಿ ಸೋಮವಾರ ಬೃಹತ್ ಧರ್ಮಸ್ಥಳ ಚಲೋ ಅಭಿಯಾನ ಹಾಗೂ ಧರ್ಮ ಜಾಗೃತಿ ಸಮಾವೇಶ ಬಿಜೆಪಿ ನಡೆಸಲಿದೆ. ಧರ್ಮಸ್ಥಳ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಹಾಗೂ ವ್ಯವಸ್ಥಿತ ಷಡ್ಯಂತ್ರ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸೆ.1ರಂದು ಬಿಜೆಪಿ ಧರ್ಮಸ್ಥಳ ಚಲೋ ಅಭಿಯಾನ ನಡೆಸಲಿದೆ. ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕೆನ್ನುವುದು ಬಿಜೆಪಿಯ ಪ್ರಮುಖ ಬೇಡಿಕೆಯಾಗಿದೆ. ಧರ್ಮಸ್ಥಳ

ಇಂದು ಬಿಜೆಪಿಯಿಂದ ಬೃಹತ್‌ ಧರ್ಮಸ್ಥಳ ಚಲೋ ಅಭಿಯಾನ Read More »

ನಾಡ ಹಬ್ಬವನ್ನು ನಿಗದಿತ ಧರ್ಮದವರೇ ಉದ್ಘಾಟಿಸಬೇಕು ಎಂದೇನಿಲ್ಲ: ಸಿಎಂ ಸಿದ್ದರಾಮಯ್ಯ

ಮೈಸೂರು: ದಸರಾ ನಾಡಹಬ್ಬವಾಗಿದ್ದು, ಇದನ್ನು ಎಲ್ಲರೂ ಆಚರಿಸುತ್ತಾರೆ. ಈ ಕಾರ್ಯಕ್ರಮವನ್ನು ಬಾನು ಮುಷ್ತಾಕ್ ಉದ್ಘಾಟಿಸುವುದು ಸೂಕ್ತವಾಗಿದೆ ಎಂದು ಸಿ.ಎಂ. ಸಿದ್ದರಾಮಯ್ಯ ಹೇಳಿದ್ದಾರೆ. ದಸರಾ ಉದ್ಘಾಟನೆಗೆ ಸಂಬಂದಿಸಿದ ಹಾಗೆ ಉನ್ನತ ಮಟ್ಟದ ಸಮಿತಿಯಲ್ಲಿ ಆಯ್ಕೆಯ ಅಧಿಕಾರ ನನಗೆ ನೀಡಲಾಗಿತ್ತು. ಅಲ್ಲಿ ಬಾನು ಮುಷ್ತಾಕ್ ಅವರನ್ನು ಆಹ್ವಾನ ಮಾಡುವುದೆಂದು ತೀರ್ಮಾನ ಮಾಡಲಾಯಿತು. ಆ ಹಿಂದೆ ಕವಿ ನಿಸಾರ್ ಅಹಮದ್ ಅವರು ದಸರಾ ಉದ್ಧಾಟಿಸಿದ್ದರು. ನಾಡಹಬ್ಬವನ್ನು ಇಂತದ್ದೇ ಧರ್ಮದವರು ಉದ್ಘಾಟನೆ ಮಾಡಬೇಕು ಎಂದೇನಿಲ್ಲ ಎಂದು ಅವರು ತಿಳಿಸಿದ್ದಾರೆ. ನಾಡಹಬ್ಬ ‌ದಸರಾ ಸಾಂಸ್ಕೃತಿಕ

ನಾಡ ಹಬ್ಬವನ್ನು ನಿಗದಿತ ಧರ್ಮದವರೇ ಉದ್ಘಾಟಿಸಬೇಕು ಎಂದೇನಿಲ್ಲ: ಸಿಎಂ ಸಿದ್ದರಾಮಯ್ಯ Read More »

ಬೆಂಗಳೂರಿನ ಲಾಡ್ಜ್‌ನಲ್ಲಿ ಎಸ್‌ಐಟಿ ಶೋಧ

ಬುರುಡೆ ಗ್ಯಾಂಗ್‌ನ ಮೀಟಿಂಗ್‌ ನಡೆಯುತ್ತಿದ್ದ ಲಾಡ್ಜ್‌ ಬೆಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿದ್ಯಾರಣ್ಯಪುರದ ತಿಂಡ್ಲು ಸರ್ಕಲ್ ಬಳಿಯ ಲಾಡ್ಜ್ ಒಂದರಲ್ಲಿ ವಿಶೇಷ ತನಿಖಾ ತಂಡ ಮಹಜರು ಪ್ರಕ್ರಿಯೆ ನಡೆಸುತ್ತಿದೆ. ಆರೋಪಿ ಚಿನ್ನಯ್ಯನನ್ನು ಕರೆದುಕೊಂಡು ಬಂದ ಪೊಲೀಸರು ತಡರಾತ್ರಿಯಿಂದ ಲಾಡ್ಜ್‌ನಲ್ಲಿ ಮಹಜರು ಮಾಡುತ್ತಿದ್ದಾರೆ. ಈ ಲಾಡ್ಜ್‌ನಲ್ಲಿ ಬುರುಡೆ ಗ್ಯಾಂಗ್‌ ಸದಸ್ಯರು ಸೇರಿ ಷಡ್ಯಂತ್ರ ರೂಪಿಸಿದ್ದಾರೆ ಎನ್ನಲಾಗುತ್ತಿದೆ. ಬುರುಡೆ ತೆಗೆದುಕೊಂಡು ಬರುವ ಮೊದಲು ಇದೇ ಲಾಡ್ಜ್‌ನಲ್ಲಿ ಹಲವರನ್ನು ಭೇಟಿಯಾಗಿದ್ದ ಬಗ್ಗೆ ಎಸ್‌ಐಟಿ ಚಿನ್ನಯ್ಯ ಬಾಯಿಬಿಟ್ಟಿದ್ದಾನೆ. ಹೀಗಾಗಿ ಎಸ್‌ಪಿ

ಬೆಂಗಳೂರಿನ ಲಾಡ್ಜ್‌ನಲ್ಲಿ ಎಸ್‌ಐಟಿ ಶೋಧ Read More »

error: Content is protected !!
Scroll to Top