ರಾಜ್ಯ

ಖುಷಿಯಿಂದ ಪ್ರವಾಸಕ್ಕೆ ಹೋದವರು ಹೆಂಡತಿ, ಮಗನ ಎದುರೇ ಉಗ್ರರ ಗುಂಡಿಗೆ ಬಲಿಯಾದರು

ಬೆಂಗಳೂರಿನ ಭರತ್‌ಭೂಷಣ್‌, ಶಿವಮೊಗ್ಗದ ಮಂಜುನಾಥ್‌ ಹತ್ಯೆ ಅತಿ ದಾರುಣ ಬೆಂಗಳೂರು: ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣ ಪಹಲ್ಗಾಂವ್‌ನ ಬೈಸನ್‌ ಎಂಬ ಕಣಿವೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಉಗ್ರರ ಭೀಕರ ದಾಳಿಯಲ್ಲಿ ಕರ್ನಾಟಕದ ಇಬ್ಬರು ವ್ಯಕ್ತಿಗಳು ತಮ್ಮ ಹೆಂಡತಿ ಮತ್ತು ಮಕ್ಕಳ ಎದುರೇ ಗುಂಡೇಟು ತಿಂದು ಮರಣವನ್ನಪ್ಪಿದ್ದಾರೆ. ಉಗ್ರರು ಪ್ರವಾಸಿಗರ ಪೈಕಿ ಪುರುಷರನ್ನು ಪ್ರತ್ಯೇಕಿಸಿ ಅವರ ಧರ್ಮ ಕೇಳಿ, ಕುರಾನ್‌ನ ವಾಕ್ಯಗಳನ್ನು ಪಠಿಸಲು ಹೇಳಿ ಅವರು ಹಿಂದುಗಳು ಎಂದು ದೃಢಪಡಿಸಿಕೊಂಡು ಕುಟುಂಬದವರ ಎದುರೇ ಗುಂಡಿಕ್ಕಿದ್ದಾರೆ. ಬೆಂಗಳೂರು ಮೂಲದ ಟೆಕ್ಕಿ […]

ಖುಷಿಯಿಂದ ಪ್ರವಾಸಕ್ಕೆ ಹೋದವರು ಹೆಂಡತಿ, ಮಗನ ಎದುರೇ ಉಗ್ರರ ಗುಂಡಿಗೆ ಬಲಿಯಾದರು Read More »

ಪೋಪ್‌ ನಿಧನಕ್ಕೆ ಸ್ಪೀಕರ್‌ ಖಾದರ್‌ ಸಂತಾಪ

ಮಂಗಳೂರು: ಪೋಪ್ ಫ್ರಾನ್ಸಿಸ್ ನಿಧನಕ್ಕೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಆಧ್ಯಾತ್ಮಿಕ ಗುರುಗಳಾಗಿದ್ದ ಪೋಪ್‌ ಸಹಾನುಭೂತಿ, ಸರಳತೆ, ನ್ಯಾಯ ಮತ್ತು ಶಾಂತಿ ಬಯಸುವವರ ನೈತಿಕ ಧ್ವನಿಯಾಗಿದ್ದರು. ಪೋಪ್ ಆಗಿ ಅವರ ಸರಳ ಜೀವನ ಮತ್ತು ಬಡವರ ಬಗ್ಗೆ ಪ್ರೀತಿ, ವಿಶೇಷ ಕಾಳಜಿ, ಪ್ರತಿಯೊಬ್ಬ ಮನುಷ್ಯನ ಘನತೆಯ ಬಗ್ಗೆ ಆಳವಾದ ಕಾಳಜಿಯನ್ನು ಹೊಂದಿದ್ದರು ಎಂದು ಹೇಳಿದ್ದಾರೆ. ಪೋಪ್ ಫ್ರಾನ್ಸಿಸ್ ಅವರನ್ನು 2024ರ ಡಿಸೆಂಬರ್‌ನಲ್ಲಿ ಭೇಟಿಯಾಗಿ ಅವರ ಆಶೀರ್ವಾದ ಪಡೆದ ಕ್ಷಣಗಳನ್ನು ನೆನಪಿಸಿಕೊಂಡಿರುವ ಖಾದರ್ ಪೋಪ್

ಪೋಪ್‌ ನಿಧನಕ್ಕೆ ಸ್ಪೀಕರ್‌ ಖಾದರ್‌ ಸಂತಾಪ Read More »

ಪಠ್ಯಪುಸ್ತಕಗಳ ಬೆಲೆ ಶೇ.10 ಏರಿಕೆ

ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಿದವರಿಗೆ ಶುಲ್ಕ ಹೆಚ್ಚಳದ ಜೊತೆ ಇನ್ನೊಂದು ಬರೆ ಬೆಂಗಳೂರು : ಶಾಲಾ ಶುಲ್ಕದ ಬೆನ್ನಿಗೆ ಪೋಷಕರಿಗೆ ಪಠ್ಯಪುಸ್ತಕದ ಬೆಲೆಯೇರಿಕೆಯ ಬರೆ ಬಿದ್ದಿದೆ. ಪಠ್ಯಪುಸ್ತಕಗಳ ಬೆಲೆ ಸರಾಸರಿಯಾಗಿ ಶೇ. 10ರಷ್ಟು ಏರಿಕೆಯಾಗಿದೆ. ಈ ಏರಿಕೆಗೆ ಖಾಸಗಿ ಶಾಲೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ಕರ್ನಾಟಕ ಪಠ್ಯಪುಸ್ತಕ ಸಂಘ 2025-2026ನೇ ಸಾಲಿನ ಪಠ್ಯಪುಸ್ತಕ ಬೆಲೆಯನ್ನು ಶೇ.10ರಷ್ಟು ಏರಿಕೆ ಮಾಡಿದೆ. ಈಗಾಗಲೇ ಕೆಲವು ಪಠ್ಯಪುಸ್ತಕಗಳ ಬೆಲೆ ಶೇ.100ರಷ್ಟು ಹೆಚ್ಚಾಗಿದ್ದು, ಈ ವರ್ಷವೂ ಕರ್ನಾಟಕ ಪಠ್ಯ ಪುಸ್ತಕ ಸಂಘ ಪಠ್ಯಪುಸ್ತಕಗಳ

ಪಠ್ಯಪುಸ್ತಕಗಳ ಬೆಲೆ ಶೇ.10 ಏರಿಕೆ Read More »

ರಿಕ್ಕಿ ರೈ ಮೇಲೆ ನಡೆದ ಫೈರಿಂಗ್‌ ನಕಲಿ?

ಮಾಜಿ ಗನ್‌ಮ್ಯಾನ್‌ ಮೂಲಕ ಫೈರಿಂಗ್‌ ಮಾಡಿಸಿಕೊಂಡ ಸಂಶಯ ಬೆಂಗಳೂರು: ಮಾಜಿ ಡಾನ್‌ ಮುತ್ತಪ್ಪ ರೈಯವರ ಪುತ್ರ ರಿಕ್ಕಿ ರೈ ಮೇಲೆ ನಡೆದಿದ್ದ ಫೈರಿಂಗ್‌ ಸುತ್ತ ಅನುಮಾನ ಮೂಡಿದೆ. ಇದು ನಕಲಿ ಶೂಟೌಟ್‌ ಆಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನಿಸಿದ್ದಾರೆ. ರಿಕ್ಕಿ ರೈಗೆ ಒಂದು ಕಾಲದಲ್ಲಿ ಗನ್‌ಮ್ಯಾನ್ ಆಗಿದ್ದ ವಿಠ್ಠಲ ಎಂಬಾತ ಕಾರಿನ ಮೇಲೆ ಫೈರಿಂಗ್ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಮಾಜಿ ಗನ್‌ಮ್ಯಾನ್ ವಿಠ್ಠಲನನ್ನು ಬಿಡದಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಠ್ಠಲ

ರಿಕ್ಕಿ ರೈ ಮೇಲೆ ನಡೆದ ಫೈರಿಂಗ್‌ ನಕಲಿ? Read More »

ನಿವೃತ್ತ ಡಿಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣ : ಪತ್ನಿ ಪಲ್ಲವಿ ಅರೆಸ್ಟ್‌

ಆತ್ಮರಕ್ಷಣೆಗಾಗಿ ಕೊಲೆ ಮಾಡಬೇಕಾಯಿತು ಎಂದು ಹೇಳಿಕೆ ಬೆಂಗಳೂರು : ನಿವೃತ್ತ ಪೊಲೀಸ್​ ಮಹಾನಿರ್ದೇಶಕ ಓಂ ಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅವರ ಪತ್ನಿ ಪಲ್ಲವಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ಈ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆಯಿಂದೀಚೆಗೆ ಪತ್ನಿ ಪಲ್ಲವಿ ಮತ್ತು ಪುತ್ರಿ ಕೃತಿಯನ್ನು ಎಚ್​ಎಸ್​ಆರ್​​ ಲೇಔಟ್​​ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದರು. ಇಂದು ಪಲ್ಲವಿಯನ್ನು ಬಂಧನಕ್ಕೊಳಪಡಿಸುವ ಔಪಚಾರಿಕತೆ ಮಾಡಲಾಯಿತು. ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ತಮ್ಮ ನಿವಾಸದಲ್ಲೆ ಓಂ ಪ್ರಕಾಶ್ ನಿನ್ನೆ ಸಂಜೆ ಭೀಕರವಾಗಿ ಹತ್ಯೆಯಾಗಿದ್ದಾರೆ. ಪತ್ನಿ ಮತ್ತು

ನಿವೃತ್ತ ಡಿಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣ : ಪತ್ನಿ ಪಲ್ಲವಿ ಅರೆಸ್ಟ್‌ Read More »

ಕಾಳುಮೆಣಸು ಬೆಳೆದವರಿಗೆ ಬಂಪರ್‌ ಲಾಭ

ಪೂರೈಕೆ ಕೊರತೆ ಬೇಡಿಕೆ ಹೆಚ್ಚಳದಿಂದ ಕೆಜಿಗೆ 1,000 ರೂ. ಆಗುವ ಸಾಧ್ಯತೆ ಮಂಗಳೂರು : ಕಾಳುಮೆಣಸು ಬೆಳೆದಿರುವ ರೈತರಿಗೆ ಬಂಪರ್‌ ಲಾಭ ಸಿಗಲಿದೆ. ಈಗಾಗಲೇ ಕೆಜಿಗೆ 750 ರೂ. ದಾಟಿ ಮುನ್ನುಗ್ಗುತ್ತಿರುವ ಕಾಳುಮೆಣಸು ಬೆಲೆ ಶೀಘ್ರ 1,000 ರೂ. ತಲುಪುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ಸಂಸ್ಥೆಯೊಂದು ಭವಿಷ್ಯ ನುಡಿದಿದೆ. ಕಳೆದ ಎರಡು ವರ್ಷಗಳಿಂದ ಶೇ.40ರಷ್ಟು ದರ ಏರಿಕೆ ಕಂಡಿರುವ ಕಾಳುಮೆಣಸು ಪೂರೈಕೆ ಕೊರತೆ ಮತ್ತು ಬೇಡಿಕೆ ಹೆಚ್ಚಳದ ಪರಿಣಾಮ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಕಾಳುಮೆಣಸು ದರ

ಕಾಳುಮೆಣಸು ಬೆಳೆದವರಿಗೆ ಬಂಪರ್‌ ಲಾಭ Read More »

ಒಂದನೇ ತರಗತಿ ಸೇರ್ಪಡೆ ವಯೋಮಿತಿ ಸಡಿಲಿಕೆಯಿಂದ ಖಾಸಗಿ ಶಾಲೆಗಳಿಗೆ ಸಮಸ್ಯೆ

ಎಲ್‌ಕೆಜಿ ತರಗತಿಗೆ ಹಿಂದಿನ ನಿಯಮದಂತೆ ಸೇರಿರುವ ಮಕ್ಕಳಿಗೆ ಮುಂದಿನ ವರ್ಷ ಶಾಲೆಗೆ ಸೇರಲಾಗುವುದಿಲ್ಲ ಬೆಂಗಳೂರು : ಒಂದನೇ ತರಗತಿ ಸೇರ್ಪಡೆಗೆ 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಈ ವರ್ಷದ ಮಟ್ಟಿಗೆ ಸಡಿಲಿಸಿ ಐದೂವರೆ ವರ್ಷ ಪ್ರಾಯದ ಮಕ್ಕಳನ್ನು ಶಾಲೆಗೆ ಸೇರಿಸಲು ಸರಕಾರ ಅವಕಾಶ ಮಾಡಿಕೊಟ್ಟಿದೆ. ಈ ಆದೇಶ ಮಕ್ಕಳ ಪೋಷಕರಿಗೆ ಖುಷಿ ಕೊಟ್ಟಿದ್ದರೂ ಕೆಲ ಖಾಸಗಿ ಶಾಲೆಗಳ ಒಕ್ಕೂಟ ಈ ಸಡಿಲಿಕೆಗೆ ವಿರೋಧ ವ್ಯಕ್ತಪಡಿಸಿದ್ದು, ಕೋರ್ಟ್ ಮೆಟ್ಟಿಲೇರಲು ಮುಂದಾಗಿವೆ. ಈ ವರ್ಷ 1ನೇ ತರಗತಿ ಸೇರ್ಪಡೆಗೆ

ಒಂದನೇ ತರಗತಿ ಸೇರ್ಪಡೆ ವಯೋಮಿತಿ ಸಡಿಲಿಕೆಯಿಂದ ಖಾಸಗಿ ಶಾಲೆಗಳಿಗೆ ಸಮಸ್ಯೆ Read More »

ಸರಕಾರ ಮಂಡಿಸಿದ್ದು ಜಾತಿ ಸಮೀಕ್ಷೆಯ ನಕಲಿ ವರದಿ : ಆರ್‌. ಅಶೋಕ್‌

ರಕ್ತ ಕಣ್ಣೀರು ಸಿನಿಮಾದಂತಿದೆ ಸರಕಾರದ ವರದಿ ಎಂದು ಲೇವಡಿ ಬೆಂಗಳೂರು: ಜಾತಿ ಗಣತಿ ವರದಿಯ ಮೂಲಪ್ರತಿ ಇಲ್ಲ ಎಂದು ಆಯೋಗದ ಅಧ್ಯಕ್ಷರೇ ಹೇಳಿದ್ದಾರೆ. ಹೀಗಾಗಿ ಸರ್ಕಾರ ಬಹಿರಂಗಗೊಳಿಸಿರುವ ಜಾತಿ ಗಣತಿ ವರದಿ ನಕಲಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಸಭೆಯಲ್ಲಿ ಈಗ ಮಂಡನೆಯಾದ ದತ್ತಾಂಶಗಳ ವರದಿ ನಕಲಿ ಎಂಬುದಕ್ಕೆ ಪುರಾವೆಯಿದೆ. ಹಿಂದುಳಿದ ವರ್ಗಗಳ ಆಯೋಗದ ಅಂದಿನ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆಯವರು 2021, ಅಕ್ಟೋಬರ್‌ 5ರಂದು ಸರ್ಕಾರಕ್ಕೆ

ಸರಕಾರ ಮಂಡಿಸಿದ್ದು ಜಾತಿ ಸಮೀಕ್ಷೆಯ ನಕಲಿ ವರದಿ : ಆರ್‌. ಅಶೋಕ್‌ Read More »

ಪತ್ನಿ, ಮಗಳಿಂದಲೇ ರಾಜ್ಯದ ಮಾಜಿ ಪೊಲೀಸ್‌ ಮಹಾನಿರ್ದೇಶಕ ಭೀಕರ ಹತ್ಯೆ

ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ನಿವೃತ್ತ ಪೊಲೀಸ್‌ ಉನ್ನತಾಧಿಕಾರಿಯ ಕೊಲೆ ಬೆಂಗಳೂರು : ರಾಜ್ಯದ ನಿವೃತ್ತ ಪೊಲೀಸ್​ ಮಹಾನಿರ್ದೇಶಕ ಓಂ ಪ್ರಕಾಶ್ (68) ಹತ್ಯೆ ಪ್ರಕರಣ ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸಿದೆ. ಹತ್ಯೆ ಸಂಬಂಧ ಅವರ ಪತ್ನಿ ಹಾಗೂ ಮಗಳನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಸಂಬಂಧ ತನಿಖಾಧಿಕಾರಿಗಳ ಎದುರು ಓಂ ಪ್ರಕಾಶ್ ಪತ್ನಿ ಪಲ್ಲವಿ ಅವರು ಅನೇಕ ಸ್ಫೋಟಕ ಅಂಶಗಳನ್ನು ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪತ್ನಿ ಪಲ್ಲವಿ ಹಾಗೂ ಮಗಳು ಕೃತಿ ಸದ್ಯ ಪೊಲೀಸರ

ಪತ್ನಿ, ಮಗಳಿಂದಲೇ ರಾಜ್ಯದ ಮಾಜಿ ಪೊಲೀಸ್‌ ಮಹಾನಿರ್ದೇಶಕ ಭೀಕರ ಹತ್ಯೆ Read More »

ವಿಮಾನಕ್ಕೆ ಟೆಂಪೊ ಟ್ರಾವೆಲರ್‌ ಡಿಕ್ಕಿ!

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೆಟ್ಟು ನಿಂತಿದ್ದ ಇಂಡಿಗೋ ವಿಮಾನಕ್ಕೆ ಟೆಂಪೊ ಟ್ರಾವೆಲ್ಲರ್ ಡಿಕ್ಕಿ ಹೊಡೆದ ಘಟನೆ ಶನಿವಾರ ಸಂಜೆ ನಡೆದಿದೆ. ಇಂಜಿನ್ ಸಮಸ್ಯೆಯಿಂದ ಏರ್‌ಪೋರ್ಟ್‌ ಒಳಭಾಗದ ಅಲ್ಪಾ ಪಾರ್ಕಿಂಗ್ ಬೇ-71ರಲ್ಲಿ ಕೆಲವು ದಿನಗಳಿಂದ ವಿಮಾನವನ್ನು ನಿಲ್ಲಿಸಲಾಗಿತ್ತು. ಇದೇ ವಿಮಾನಕ್ಕೆ ಮುಂಭಾಗದ ಮೂತಿ ಬಳಿ ಟೆಂಪೊ ಟ್ರಾವೆಲ್ಲರ್ ಡಿಕ್ಕಿಯಾಗಿದೆ. ಟೆಂಪೊ ಟ್ರಾವೆಲ್ಲರ್ ವಿಮಾನದ ಮೂತಿ ಭಾಗದ ಕೆಳಗೆ ಸಿಲುಕಿಕೊಂಡು ಟಾಪ್ ಜಖಂ ಆಗಿದೆ. ಘಟನೆಯಲ್ಲಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ರನ್‌ವೇಗೆ ಸಿಬ್ಬಂದಿಯನ್ನು ಬಿಟ್ಟು ಬರುತ್ತಿದ್ದ

ವಿಮಾನಕ್ಕೆ ಟೆಂಪೊ ಟ್ರಾವೆಲರ್‌ ಡಿಕ್ಕಿ! Read More »

error: Content is protected !!
Scroll to Top