ರಾಜ್ಯ

ಸ್ಪೀಕರ್‌ ಯು.ಟಿ.ಖಾದರ್‌ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ಬಿಜೆಪಿ

ನವೀಕರಣ, ಪುಸ್ತಕ ಮೇಳದಲ್ಲಿ ಅವ್ಯವಹಾರ, ನಿಯಮ ಮೀರಿ ವಿದೇಶ ಪ್ರವಾಸ ಮಾಡುತ್ತಿದ್ದಾರೆ ಎಂದು ಆರೋಪ ಮಂಗಳೂರು: ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ವಿರುದ್ಧ ಬಿಜೆಪಿ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದೆ. ಮಂಗಳೂರಿನಲ್ಲಿ ನಿನ್ನೆ ಬಿಜೆಪಿ ಶಾಸಕ ಡಾಸ. ಭರತ್‌ ಶೆಟ್ಟಿ ಸುದ್ದಿಗೋಷ್ಠಿ ಕರೆದು ಸ್ಪೀಕರ್‌ ಕಚೇರಿ ನವೀಕರಣ ಮತ್ತಿತರ ವ್ಯವಹಾರಗಳಲ್ಲಿ ಭ್ರಷ್ಟಾಚಾರ ನಡೆದಿರುವುದಾಗಿ ಆರೋಪಿಸಿದ್ದರು. ಅದೇ ರೀತಿ ಬೆಂಗಳೂರು ಮತ್ತಿತರೆಡೆಗಳಲ್ಲಿ ಬಿಜೆಪಿ ನಾಯಕರು ಸುದ್ದಿಗೋಷ್ಠಿಗಳಲ್ಲಿ ಖಾದರ್‌ ವಿರುದ್ಧ ಅವ್ಯವಹಾರದ ಆರೋಪ ಹೊರಿಸಿ ಖಾದರ್‌ […]

ಸ್ಪೀಕರ್‌ ಯು.ಟಿ.ಖಾದರ್‌ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ಬಿಜೆಪಿ Read More »

ಆರ್‌ಎಸ್‌ಎಸ್‌ ಚಟುವಟಿಕೆ ನಿರ್ಬಂಧ : ಹೈಕೋರ್ಟ್‌ ತಡೆಯಾಜ್ಞೆ ವಿರುದ್ಧ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ

ಪಥಸಂಚಲನಕ್ಕೆ ಲಗಾಮು ಹಾಕಲು ಮುಂದಾಗಿದ್ದ ಸರ್ಕಾರಕ್ಕೆ ಕೋರ್ಟ್‌ ತೀರ್ಪಿನಿಂದ ಹಿನ್ನಡೆ ಬೆಂಗಳೂರು: ಆರ್‌ಎಸ್‌ಎಸ್‌ನ್ನು ಗುರಿಮಾಡಿಕೊಂಡು ಸರ್ಕಾರ ಜಾರಿಗೆ ತಂದಿದ್ದ ಸರ್ಕಾರಿ, ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಚಟುವಟಿಕೆಗಳಿಗೆ ಅನುಮತಿ ಕಡ್ಡಾಯಗೊಳಿಸುವ ನಿಯಮಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿರುವುದರಿಂದ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದ್ದು, ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ. ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಧಾರವಾಡ ಹೈಕೋರ್ಟ್‌ ಪೀಠ ನೀಡರುವ ತಡೆಯಾಜ್ಞೆ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ, ತಡೆಯಾಜ್ಞೆ ತೆರವಿಗೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸರ್ಕಾರ

ಆರ್‌ಎಸ್‌ಎಸ್‌ ಚಟುವಟಿಕೆ ನಿರ್ಬಂಧ : ಹೈಕೋರ್ಟ್‌ ತಡೆಯಾಜ್ಞೆ ವಿರುದ್ಧ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ Read More »

ಸರ್ಕಾರಿ ಶಾಲೆ ಶಿಕ್ಷಕಿ ಮೇಲೆ ಮಾರಣಾಂತಿಕ ಹಲ್ಲೆ : ಆರೋಪಿ ಸೆರೆ

ಕಟ್ಟಿಹಾಕಿ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಭಗ್ನಪ್ರೇಮಿ ಯುವಕ ಬೆಂಗಳೂರು: ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ವಿವಸ್ತ್ರಗೊಳಿಸಿ ಮರಕ್ಕೆ ಕಟ್ಟಿಹಾಕಿದ ಆಘಾತಕಾರಿ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಮಂಗಳವಾರ ಸಂಭವಿಸಿದೆ. ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಡೆದ ಈ ಘಟನೆಯಲ್ಲಿ, ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕಿ ಶಾಲೆ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದಾಗ ಅವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ನಗ್ನಗೊಳಿಸಿರುವ ಆರೋಪ ಕೇಳಿಬಂದಿದೆ. ಶಿಕ್ಷಕಿಯ

ಸರ್ಕಾರಿ ಶಾಲೆ ಶಿಕ್ಷಕಿ ಮೇಲೆ ಮಾರಣಾಂತಿಕ ಹಲ್ಲೆ : ಆರೋಪಿ ಸೆರೆ Read More »

ಸಮಾಜ ಕಲ್ಯಾಣ ಇಲಾಖೆಯಲ್ಲಿ 125 ಕೋ. ರೂ. ಅವ್ಯವಹಾರ ಆರೋಪ

ಸಚಿವರ ವಿರುದ್ಧ ಲೋಕಾಯುಕ್ತಕ್ಕೆ ದೂರು ಬೆಂಗಳೂರು: ಸರ್ಕಾರದ ಮತ್ತೊಂದು ಇಲಾಖೆಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಸಮಾಜ ಕಲ್ಯಾಣ ಇಲಾಖೆಯ ಟೆಂಡರ್‌ನಲ್ಲಿ ಭಾರಿ ಪ್ರಮಾಣದ ಗೋಲ್‌ಮಾಲ್ ನಡೆಯುತ್ತಿದೆ ಎಂದು ಇಲಾಖೆಯ ಸಚಿವ ಎಚ್‌.ಸಿ.ಮಹಾದೇವಪ್ಪ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಟೆಂಡರ್‌ನಲ್ಲಿ 125 ಕೋ.ರೂ. ಮೊತ್ತದ ಗೋಲ್ಮಾಲ್ ಆಗಿದೆ ಎನ್ನಲಾಗಿದೆ. ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗ ಸ್ಫರ್ಧಾತ್ಮಕ ಪರೀಕ್ಷೆಯ ತರಬೇತಿ ಕೇಂದ್ರ ಬಿಡ್‌ನಲ್ಲಿ ಭ್ರಷ್ಟಾಚಾರ ನಡೆದಿದೆ. ಅನರ್ಹ

ಸಮಾಜ ಕಲ್ಯಾಣ ಇಲಾಖೆಯಲ್ಲಿ 125 ಕೋ. ರೂ. ಅವ್ಯವಹಾರ ಆರೋಪ Read More »

ಸಿಎಂ ಪಟ್ಟದ ಪಟ್ಟು ಸಡಿಲಿಸಿದರೇ ಸಿದ್ದರಾಮಯ್ಯ?

ಮಂಗಳೂರಿನಲ್ಲಿ ನೀಡಿದ ಹೇಳಿಕೆಯಿಂದ ಹೊಸ ಚರ್ಚೆ ಶುರು ಮಂಗಳೂರು: ಐದು ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂದು ಪದೆಪದೇ ಹೇಳುತ್ತಿದ್ದ ಸಿದ್ದರಾಮಯ್ಯ ಸೋಮವಾರ ದಿಢೀರ್‌ ಎಂದು ವರಸೆ ಬದಲಿಸಿರುವುದು ರಾಜಕೀಯ ವಲಯದಲ್ಲಿ ನಾನಾ ರೀತಿಯ ಊಹಾಪೂಹಗಳಿಗೆ ಕಾರಣವಾಗಿದೆ. ಕೊನೆಗೂ ಸಿಎಂ ಪಟ್ಟದ ಪಟ್ಟನ್ನು ಸಿದ್ದರಾಮಯ್ಯ ಸಡಿಲಿಸಿದರೇ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಶುರುವಾಗಿದೆ. ಸೋಮವಾರ ಮಂಗಳೂರಿಗೆ ಆಗಮಿಸಿದ್ದ ಸಿದ್ದರಾಮಯ್ಯ ಮಾಧ್ಯಮದವರು 5 ವರ್ಷ ನೀವೇ ಸಿಎಂ ಆಗಿರುತ್ತೀರಾ ಎಂದು ಪ್ರಶ್ನಿಸಿದಾಗ, ‘ಹೈಕಮಾಂಡ್ ತೀರ್ಮಾನ ಮಾಡಿದರೆ 5 ವರ್ಷ

ಸಿಎಂ ಪಟ್ಟದ ಪಟ್ಟು ಸಡಿಲಿಸಿದರೇ ಸಿದ್ದರಾಮಯ್ಯ? Read More »

ಪ್ರಿಯಾಂಕ್‌ ಖರ್ಗೆಯನ್ನು ಫಸ್ಟ್​ ಕ್ಲಾಸ್​ ಈಡಿಯಟ್ ಎಂದ ಅಸ್ಸಾಂ ಸಿಎಂ

ಅವಮಾನಕಾರಿ ಹೇಳಿಕೆಗೆ ಹಿಮಂತ ಬಿಸ್ವಾ ಶರ್ಮಾ ತಿರುಗೇಟು ಬೆಂಗಳೂರು : ಸೆಮಿಕಂಡಕ್ಟರ್ ಕೈಗಾರಿಕೆಗಳು ಅಸ್ಸಾಂ ಮತ್ತು ಗುಜರಾತ್ ರಾಜ್ಯಗಳನ್ನು ಆಯ್ಕೆ ಮಾಡಿಕೊಂಡಿರುವ ವಿಚಾರವಾಗಿ ಕರ್ನಾಟಕದ ಐಟಿ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದ ಹೇಳಿಕೆಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿರುಗೇಟು ನೀಡಿದ್ದಾರೆ. ಎಐಸಿಸಿ ಅಧ್ಯಕ್ಷರ ಪುತ್ರ ಪ್ರಿಯಾಂಕ್​ ಖರ್ಗೆ ಅವರನ್ನ ‘ಫಸ್ಟ್​ ಕ್ಲಾಸ್​ ಈಡಿಯಟ್’​ ಎಂದು ಕರೆದಿರುವ ಹಿಮಂತ್​, ಪ್ರಿಯಾಂಕ್​ ಹೇಳಿಕೆ ಅಸ್ಸಾಂ ರಾಜ್ಯದ ವಿದ್ಯಾವಂತ ಯುವಜನರಿಗೆ ಮಾಡಿದ ಅವಮಾನ ಎಂದು ಆರೋಪಿಸಿದ್ದಾರೆ. ಪ್ರಿಯಾಂಕ್​ ಖರ್ಗೆ

ಪ್ರಿಯಾಂಕ್‌ ಖರ್ಗೆಯನ್ನು ಫಸ್ಟ್​ ಕ್ಲಾಸ್​ ಈಡಿಯಟ್ ಎಂದ ಅಸ್ಸಾಂ ಸಿಎಂ Read More »

ಪ್ರಯಾಣಿಕರ ಸುರಕ್ಷೆಗೆ ಸರ್ಕಾರಿ ಬಸ್‌ಗಳಲ್ಲಿ ಇನ್ನು ಈ ವಸ್ತು ಇರುವುದು ಕಡ್ಡಾಯ

ಕೆಎಸ್‌ಆರ್‌ಟಿಸಿ ನಿಗಮಗಳಿಗೆ ಸರ್ಕಾರ ಮಹತ್ವದ ಸೂಚನೆ ಬೆಂಗಳೂರು: ಆಂಧ್ರ ಪ್ರದೇಶದ ಕರ್ನೂಲ್ ಬಳಿ ಖಾಸಗಿ ಬಸ್ ಬೆಂಕಿ ಹೊತ್ತಿಕೊಂಡು, 20 ಮಂದಿ ಸಜೀವ ದಹನವಾಗಿರುವ ಘಟನೆಯ ಬಳಿಕ ಎಚ್ಚೆತ್ತುಕೊಂಡಿರುವ ಸರ್ಕಾರ ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣಿಕರ ಸುರಕ್ಷತೆಗಾಗಿ ಮಹತ್ವದ ಕ್ರಮ ಕೈಗೊಂಡಿದೆ. ಇನ್ನು ಮುಂದೆ ಸಾರಿಗೆ ಬಸ್ಸುಗಳಲ್ಲಿ ಸ್ಪೋಟಗೊಳ್ಳುವಂಥ ವಸ್ತುಗಳನ್ನು ಪ್ರಯಾಣಿಕರು ಕೊಂಡೊಯ್ಯುವುದಕ್ಕೆ ನಿಷೇಧ ಹೇರಲಾಗಿದೆ. ಜೊತೆಗೆ ಸುರಕ್ಷತೆಯ ದೃಷ್ಟಿಯಿಂದ ಪ್ರಯಾಣಿಕರ ಪ್ರತಿ ಬ್ಯಾಗ್ ಚೆಕ್ ಮಾಡುವಂತೆಯೂ ರಾಜ್ಯ ಸರ್ಕಾರ ಸೂಚಿಸಿದೆ. ಈ ಕುರಿತಂತೆ ಎಲ್ಲ ನಿಗಮಗಳ ವ್ಯವಸ್ಥಾಪಕ

ಪ್ರಯಾಣಿಕರ ಸುರಕ್ಷೆಗೆ ಸರ್ಕಾರಿ ಬಸ್‌ಗಳಲ್ಲಿ ಇನ್ನು ಈ ವಸ್ತು ಇರುವುದು ಕಡ್ಡಾಯ Read More »

ಅಂತಿಮ ಹಂತಕ್ಕೆ ತಲುಪಿದ ಬುರುಡೆ ಷಡ್ಯಂತ್ರದ ತನಿಖೆ; ಸೋಮವಾರ ನಿರ್ಣಾಯಕ ವಿಚಾರಣೆ

ತಿಮರೋಡಿ ಸಹಿತ ನಾಲ್ವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್‌ ಮಂಗಳೂರು: ಧರ್ಮಸ್ಥಳ ಬುರುಡೆ ಬುರುಡೆ ಷಡ್ಯಂತ್ರ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ವಿಚಾರಣೆಗಾಗಿ ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಜಯಂತ್‌ ಟಿ. ಮತ್ತು ವಿಠಲ ಗೌಡ ಅವರಿಗೆ ಸೇರಿದಂತೆ ನಾಲ್ವರಿಗೆ ನೋಟಿಸ್ ನೀಡಿದ್ದು, ಈ ನೋಟಿಸ್‌ ಸುತ್ತ ನಾನಾ ರೀತಿಯ ಊಹಾಪೋಹಗಳು ಹುಟ್ಟಿಕೊಂಡಿವೆ. ಸೋಮವಾರ ಬೆಳಿಗ್ಗೆ 10.30ಕ್ಕೆ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಹಾಜರಾಗಲು ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ. ಹಾಗೂ ವಿಠಲ ಗೌಡರಿಗೆ ನೋಟಿಸ್ ನೀಡಲಾಗಿದೆ.

ಅಂತಿಮ ಹಂತಕ್ಕೆ ತಲುಪಿದ ಬುರುಡೆ ಷಡ್ಯಂತ್ರದ ತನಿಖೆ; ಸೋಮವಾರ ನಿರ್ಣಾಯಕ ವಿಚಾರಣೆ Read More »

ಕರ್ನಾಟಕ ಪೊಲೀಸರ ಮುಡಿಗೇರಲಿದೆ ಹೊಸ ವಿನ್ಯಾಸದ ಟೋಪಿ

ಅ.28ರಂದು ಹೊಸ ಮಾದರಿಯ ಟೋಪಿ ವಿತರಣೆ ಬೆಂಗಳೂರು: ಕರ್ನಾಟಕ ಪೊಲೀಸ್​ ಇಲಾಖೆಯ ಕಾನ್‌ಸ್ಟೆಬಲ್‌ಗಳು ಮತ್ತು ಹಡ್‌ಕಾನ್‌ಸ್ಟೆಬಲ್‌ಗಳು ಧರಿಸುವ ಬ್ರಿಟಿಷ್​ ಕಾಲದ ಟೋಪಿಸದ್ಯದಲ್ಲೇ ಬದಲಾಗಲಿದೆ. ಒಂದು ಬದಿ ಚಪ್ಪಟೆಯಾಗಿರುವ ಸ್ಲೋಚ್​​​ ಹ್ಯಾಟ್​ಗೆ ಕೊಕ್​​ ನೀಡಲಾಗುತ್ತಿದ್ದು, ಅದರ ಬದಲಿಗೆ ಪೀಕ್ ಕ್ಯಾಪ್ ವಿತರಿಸಲು ಗೃಹ ಇಲಾಖೆ ಮುಂದಾಗಿದೆ. ಹೊಸ ಟೋಪಿಗಳು ಅಕ್ಟೋಬರ್ 28ರಿಂದಲೇ ಪೊಲೀಸರ ಕೈಸೇರಲಿವೆ. ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಅ.28ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ. ಪರಮೇಶ್ವರ ಅವರು ಹೊಸ ಕ್ಯಾಪ್‌ಗಳ ವಿತರಣೆ

ಕರ್ನಾಟಕ ಪೊಲೀಸರ ಮುಡಿಗೇರಲಿದೆ ಹೊಸ ವಿನ್ಯಾಸದ ಟೋಪಿ Read More »

ಗ್ಯಾಸ್‌ ಗೀಸರ್‌ ಲೀಕ್‌ ಆಗಿ ಅಕ್ಕ-ತಂಗಿ ಸಾವು

ಸ್ನಾನ ಮಾಡುತ್ತಿದ್ದಾಗ ಸಂಭವಿಸಿದ ದಾರುಣ ಘಟನೆ ಮೈಸೂರು : ಸ್ನಾನಕ್ಕೆ ತೆರಳಿದಾಗ ಗ್ಯಾಸ್ ಗೀಸರ್ ಲೀಕ್ ಆಗಿ ಅಕ್ಕ ಮತ್ತು ತಂಗಿ ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಬೆಟ್ಟದಪುರ ಎಂಬಲ್ಲಿ ಸಂಭವಿಸಿದೆ. ಮೃತರನ್ನು ಗುಲ್ಫಾರ್ಮ್ (23) ಮತ್ತು ಸಿಮ್ರಾನ್ ತಾಜ್ (20) ಎಂದು ಗುರುತಿಸಲಾಗಿದೆ. ಅಕ್ಕ-ತಂಗಿಯರಾದ ಗುಲ್ಫಾರ್ಮ್, ಸಿಮ್ರಾನ್ ತಾಜ್ ಇಬ್ಬರೂ ಒಟ್ಟಿಗೆ ಸ್ನಾನ ಮಾಡಲು ಹೋಗಿದ್ದಾರೆ. ಆದರೆ ಸ್ನಾನಕ್ಕೆ ಹೋದವರು ಬಹಳ ಸಮಯವಾದರೂ ಹೊರಗೆ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ತಂದೆ ಅಲ್ತಾಫ್‌

ಗ್ಯಾಸ್‌ ಗೀಸರ್‌ ಲೀಕ್‌ ಆಗಿ ಅಕ್ಕ-ತಂಗಿ ಸಾವು Read More »

error: Content is protected !!
Scroll to Top