ರಾಜ್ಯ

ಹೋಟೆಲ್‌ನಲ್ಲಿ ತಾಸುಗಟ್ಟಲೆ ಕುಳಿತರೆ ಬರುತ್ತದೆ ಹೆಚ್ಚುವರಿ ಬಿಲ್‌!

ಸಣ್ಣ ಪುಟ್ಟ ಮೀಟಿಂಗ್‌ಗಳನ್ನು ಹೋಟೆಲ್‌ನಲ್ಲೇ ಮುಗಿಸುವವರಿಂದ ಟೇಬಲ್‌ ಚಾರ್ಜ್‌ ವಸೂಲು ಮಾಡಲು ಚಿಂತನೆ ಬೆಂಗಳೂರು : ಬೆಂಗಳೂರಿನಂಥ ದೊಡ್ಡ ನಗರಗಳಲ್ಲಿ ಹೋಟೆಲ್‌ಗಳು ಹೊಟ್ಟೆ ಹಸಿವು ತಣಿಸುವ ಕಾಫಿ- ತಿಂಡಿ ಸವಿಯುವ ಜಾಗಗಳಾಗಿ ಉಳಿಯದೆ ಮೀಟಿಂಗ್ ಸ್ಪಾಟ್‌ಗಳಾಗುತ್ತಿವೆ. ಕೆಲವರು ಅರ್ಧರ್ಧ ಕಾಫಿ ಹಿಡಿದುಕೊಂಡು ಮಾತಾಡುತ್ತಾ ಗಂಟೆಗಟ್ಟಲೆ ಕುಳಿತುಕೊಳ್ಳುತ್ತಾರೆ. ಇದರಿಂದಾಗಿ ಗ್ರಾಹಕರು ಹಾಗೂ ಹೋಟೆಲ್ ಮಾಲೀಕರಿಗೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಹೊಸ ʼಟೇಬಲ್‌ ಚಾರ್ಜ್ʼ ವಸೂಲು ಮಾಡುವ ಬಗ್ಗೆ ಚರ್ಚೆ ನಡೆದಿದೆ. ಇತ್ತೀಚೆಗೆ ಬೆಂಗಳೂರಿನ ಹೋಟೆಲ್‌ವೊಂದರ ಗೋಡೆಯ ಮೇಲೆ ಇಲ್ಲಿ […]

ಹೋಟೆಲ್‌ನಲ್ಲಿ ತಾಸುಗಟ್ಟಲೆ ಕುಳಿತರೆ ಬರುತ್ತದೆ ಹೆಚ್ಚುವರಿ ಬಿಲ್‌! Read More »

ಗೃಹಲಕ್ಷ್ಮಿ ಸಿಗಬೇಕಾದರೆ ಜೀವಿತ ಪ್ರಮಾಣಪತ್ರ ಸಲ್ಲಿಸಬೇಕು

ಮರಣ ಹೊಂದಿದವರ ಖಾತೆಗೆ ಹಣ ಜಮೆಯಾಗುವುದನ್ನು ತಡೆಯಲು ಹೊಸ ನಿಯಮ ಬೆಂಗಳೂರು : ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ಹಣ ದುರುಪಯೋಗವಾಗುವುದನ್ನು ತಡೆಯುವ ಉದ್ದೇಶದಿಂದ ಹೊಸ ನಿಯಮ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಮರಣ ಹೊಂದಿರುವ ಫಲಾನುಭವಿಗಳ ಖಾತೆಗಳಿಗೂ ಹಣ ಜಮಾ ಆಗುತ್ತಿರುವುದನ್ನು ತಪ್ಪಿಸಲು ‘ಜೀವಿತ ಪ್ರಮಾಣಪತ್ರ’ ಸಲ್ಲಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ. ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಎಂಎಲ್‌ಸಿ ದಿನೇಶ್ ಗೂಳಿಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ

ಗೃಹಲಕ್ಷ್ಮಿ ಸಿಗಬೇಕಾದರೆ ಜೀವಿತ ಪ್ರಮಾಣಪತ್ರ ಸಲ್ಲಿಸಬೇಕು Read More »

ಮದ್ಯದ ನಶೆಯಲ್ಲಿ ನಡುರಸ್ತೆಯಲ್ಲಿ ರಂಪಾಟ ಮಾಡಿದ ಯುವತಿಯರು

ಯದ್ವಾತದ್ವಾ ಸ್ಕೂಟಿ ಚಲಾಯಿಸಿ ಹಲವು ವಾಹನಗಳಿಗೆ ಡಿಕ್ಕಿ ಬೆಂಗಳೂರು: ಇಬ್ಬರು ಯುವತಿಯರು ಕಂಠಪೂರ್ತಿ ಮದ್ಯ ಸೇವಿಸಿ ಹಾದಿಬೀದಿಯಲ್ಲಿ ರಂಪಾಟ ನಡೆಸಿದ ಘಟನೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಹುಳಿಮಾವು ಬಳಿ ಶನಿವಾರ ತಡರಾತ್ರಿ ನಡೆದಿದೆ. ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಯುವತಿಯರು ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಕ್ಯಾಬ್‌ಗೆ ಡಿಕ್ಕಿ ಹೊಡೆದು ಚಾಲಕ ಜೊತೆ ಡಿಕ್ಕಿ ಹೊಡೆದು ಜಗಳ ಮಾಡಿದ್ದಾರೆ. ಕ್ಯಾಬ್‌ ಚಾಲಕ ನಿಮ್ಮದೇ ತಪ್ಪು ಎಂದಿದ್ದಕ್ಕೆ ಮದ್ಯದ ಬೆರಳು ತೋರಿಸಿ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಲು

ಮದ್ಯದ ನಶೆಯಲ್ಲಿ ನಡುರಸ್ತೆಯಲ್ಲಿ ರಂಪಾಟ ಮಾಡಿದ ಯುವತಿಯರು Read More »

ಶಾಸಕರ ಪತ್ನಿಯ ಅವಹೇಳನ: ಆರೋಪಿಯ ಬಂಧನ

ಮಂಗಳೂರು: ಶಾಸಕ ವೇದವ್ಯಾಸ ಕಾಮತ್ ಮತ್ತು ಅವರ ಹೆಂಡತಿಯ ಬಗ್ಗೆ ಶಾಸಕ ಕೆ. ಎಂ. ಶಿವಲಿಂಗೇಗೌಡ ಆಡಿದ್ದಾರೆ ಎನ್ನಲಾದ ಮಾತುಗಳನ್ನು ಉಲ್ಲೇಖ ಮಾಡಿ ಫೇಸ್‌ಬುಕ್‌ನಲ್ಲಿ ಶಾಸಕರ ಪತ್ನಿಯನ್ನು ವ್ಯಕ್ತಿಯೊಬ್ಬ ಅವಮಾನಿಸಿದ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಆರೋಪಿ ಬಂಟ್ವಾಳದ ಅಮ್ಟಾಡಿಯ ಶರತ್ ರೈ ಎಂಬಾತನನ್ನು ಬಂಧಿಸಲಾಗಿದೆ. ಈತ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೇದವ್ಯಾಸ್ ಕಾಮತ್ ಅವರ ಪತ್ನಿಯನ್ನು ಅವಮಾನಿಸುವಂತೆ ಪೋಸ್ಟ್ ಹಾಕಿದ್ದ. ಈ ಸಂಬಂಧ ಮಹಿಳೆಯೊಬ್ಬರು ದೂರು ದಾಖಲು

ಶಾಸಕರ ಪತ್ನಿಯ ಅವಹೇಳನ: ಆರೋಪಿಯ ಬಂಧನ Read More »

ಮೆಟ್ರೋ ದರ ಏರಿಕೆ: ಡಿ ಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು: ಮೆಟ್ರೋ ಪ್ರಯಾಣ ದರ ಏರಿಕೆ ಬಗ್ಗೆ ಸಾರ್ವಜನಿಕ ವಲಯದಲ್ಲೂ ಸಾಕಷ್ಟು ಅಸಮಾಧಾನ ಎದ್ದಿದೆ. ಈ ಬಗ್ಗೆ ಮಾತನಾಡಿರುವ ಡಿ.ಸಿ.ಎಂ. ಡಿ. ಕೆ. ಶಿವಕುಮಾರ್ ಅವರು ಮೆಟ್ರೋ ದರ ಪರಿಷ್ಕರಣೆಗೆ ಸಂಬಂಧಿಸಿದ ಹಾಗೆ ಮಾತನಾಡುತ್ತೇವೆ. ಯಾವ ಕಾರಣಕ್ಕೂ ಜನರಿಗೆ ಸಮಸ್ಯೆಯಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಮಾಧ್ಯಮಗಳ‌ ಮೂಲಕ ಮೆಟ್ರೋ ದರ ಏರಿಕೆಯಾಗಿದೆ ಎನ್ನುವುದನ್ನು ನೋಡಿದ್ದೇನೆ. ಈ ಬಗ್ಗೆ ನಮ್ಮನ್ನು ಯಾರೂ ಸಂಪರ್ಕಿಸಿಲ್ಲ. ಕೇಂದ್ರ ಸರ್ಕಾರದ ಚೇರ್ಮನ್ ಮೆಟ್ರೋ ಚೇರ್ಮನ್ ಆಗಿದ್ದಾರೆ. ಇಂದು ಅಥವಾ ನಾಳೆ ಅವರೊಂದಿಗೆ ಮಾತುಕತೆ

ಮೆಟ್ರೋ ದರ ಏರಿಕೆ: ಡಿ ಕೆ ಶಿವಕುಮಾರ್ ಹೇಳಿದ್ದೇನು? Read More »

ಜೈಲಿನಲ್ಲಿದ್ದ ಉಗ್ರ ಅನಾರೋಗ್ಯದಿಂದ ಸಾವು

ಆರು ವರ್ಷಗಳಿಂದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಬಂಧಿಯಾಗಿದ್ದ ಉಗ್ರ ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿತನಾಗಿದ್ದ ಶಂಕಿತ ಭಯೋತ್ಪಾದಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಸುದ್ದಗುಂಟೆಪಾಳ್ಯ ಸ್ಫೋಟಕ ವಸ್ತು ಸಂಗ್ರಹ ಪ್ರಕರಣದಲ್ಲಿ ಬಂಧಿತನಾಗಿದ್ದ ಸಾಧಿಕ್ ಪಾಷಾ (47) ಅನಾರೋಗ್ಯದಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ. ನಿನ್ನೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ. ಸಾದಿಕ್ ಪಾಷಾ ಕಳೆದ ಆರು ತಿಂಗಳಿಂದ ಲೋ ಬಿಪಿ ಹಾಗೂ ಹೈ ಶುಗರ್ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ

ಜೈಲಿನಲ್ಲಿದ್ದ ಉಗ್ರ ಅನಾರೋಗ್ಯದಿಂದ ಸಾವು Read More »

ತುಮಕೂರಿನ ನಾಲ್ವರು ಬಿಹಾರದಲ್ಲಿ ನಿಗೂಢವಾಗಿ ಸಾವು

ಧರ್ಮಶಾಲೆಯಲ್ಲಿ ಮೂರು ದಿನದಿಂದ ಕೊಳೆಯುತ್ತಿದ್ದವು ಶವಗಳು ನಳಂದ : ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಒಂದೇ ಕುಟುಂಬದ ನಾಲ್ವರು ಶುಕ್ರವಾರ ಬಿಹಾರದ ನಳಂದ ಜಿಲ್ಲೆಯ ರಾಜಗೀರ್‌ನ ಧರ್ಮಶಾಲೆಯೊಂದರಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಶವಗಳಾಗಿ ಪತ್ತೆಯಾಗಿದ್ದಾರೆ. ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಪ್ರಕರಣದ ತನಿಖೆಗಾಗಿ ಕರ್ನಾಟಕ ಪೊಲೀಸರ ತಂಡ ಬಿಹಾರಕ್ಕೆ ತೆರಳಿದೆ. ಮೃತರನ್ನು ತಾಯಿ ಜಿ.ಆರ್.ಸುಮಂಗಲಾ (78), ಮಗ ಜಿ.ಆರ್.ನಾಗಪ್ರಸಾದ್ (50) ಹಾಗೂ ಆಕೆಯ ಇಬ್ಬರು ಪುತ್ರಿಯರಾದ ಜಿ.ಆರ್.ಶಿಲ್ಪಾ (48) ಹಾಗೂ ಜಿ.ಆರ್‌.ಶ್ರುತಾ (43) ಎಂದು ಗುರುತಿಸಲಾಗಿದೆ. ಸುಮಂಗಲಾ,

ತುಮಕೂರಿನ ನಾಲ್ವರು ಬಿಹಾರದಲ್ಲಿ ನಿಗೂಢವಾಗಿ ಸಾವು Read More »

ಧರ್ಮಸ್ಥಳ ಕ್ಷೇತ್ರಕ್ಕೆ ಸಂಬಂಧಿಸಿದವರನ್ನು ‘ಸಂತ್ರಸ್ತರು’ ಎಂದು ಪರಿಗಣಿಸಲು ಕೋರ್ಟ್‌ಗೆ ವಕೀಲ ಸಿ.ವಿ. ನಾಗೇಶ್ ವಾದ

ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ‌ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಇಂದು ಸಹ ವಿಚಾರಣೆ ನಡೆದಿದ್ದು, ಧರ್ಮಸ್ಥಳ ಕ್ಷೇತ್ರದ ಪರವಾಗಿ ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು ಬೆಳ್ತಂಗಡಿಯ ನ್ಯಾಯಾಲಯದಲ್ಲಿ ಇಂದು ವಾದ ಮಂಡನೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಧರ್ಮಸ್ಥಳ ಕ್ಷೇತ್ರಕ್ಕೆ ಸಂಬಂಧಪಟ್ಟವರಿಗೆ ಹಾನಿಯಾಗಿದೆ‌. ಅವರನ್ನು ಸಂತ್ರಸ್ತರು ಎಂದು ಪರಿಗಣಿಸಬೇಕು. ಕಾನೂನಿನಡಿ ಸಂತ್ರಸ್ತ ಪದದ ವ್ಯಾಖ್ಯಾನದ ಬಗೆಗೂ ತಿಳಿಸಿದ ಅವರು, ಈ ಪ್ರಕರಣದಲ್ಲಿ ಕ್ಷೇತ್ರದವರನ್ನು ಸಂತ್ರಸ್ತರನ್ನಾಗಿ ಮಾಡಬೇಕಾದ ಅನಿವಾರ್ಯತೆಯ ಬಗ್ಗೆ ಅವರು ಮನವರಿಕೆ ಮಾಡಿಕೊಟ್ಟರು. ಇದೇ ಸಂದರ್ಭದಲ್ಲಿ SIT

ಧರ್ಮಸ್ಥಳ ಕ್ಷೇತ್ರಕ್ಕೆ ಸಂಬಂಧಿಸಿದವರನ್ನು ‘ಸಂತ್ರಸ್ತರು’ ಎಂದು ಪರಿಗಣಿಸಲು ಕೋರ್ಟ್‌ಗೆ ವಕೀಲ ಸಿ.ವಿ. ನಾಗೇಶ್ ವಾದ Read More »

ಚೆನ್ನೈಯಲ್ಲಿ ಪಕ್ಷಿಜ್ವರ ಹಾವಳಿ : ನೂರಾರು ಕಾಗೆಗಳು ಬಲಿ

ನಗರದಲ್ಲಿ ಸತ್ತು ಬೀಳುತ್ತಿರುವ ಕಾಗೆಗಳು, ಕೋಳಿ ಫಾರಂಗಳಿಗೆ ಕಟ್ಟೆಚ್ಚರ ಘೋಷಣೆ ಚೆನ್ನೈ: ಚೆನ್ನೈಯಲ್ಲಿ ಪಕ್ಷಿಜ್ವರ ಅಥವಾ ಎಚ್‌5ಎನ್‌1 ವೈರಾಣು ಹಾವಳಿ ಪ್ರಾರಂಭವಾಗಿದ್ದು, ನೂರಾರು ಕಾಗೆಗಳು ಈ ವೈರಸ್‌ ತಗಲಿ ಮೃತಪಟ್ಟಿರುವುದು ದೃಢಪಟ್ಟಿದೆ. ನಗರದೆಲ್ಲೆಡೆ ಕಾಗೆಗಳು ಸತ್ತು ಬಿದ್ದಿರುವ ದೃಶ್ಯ ಕಂಡುಬಂದಿದ್ದು, ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಹೈಅಲರ್ಟ್‌ ಘೋಷಿಸಿದೆ. ಸಾರ್ವಜನಿಕರಿಗೆ ಮಾರ್ಗಸೂಚಿ ಬಿಡುಗಡೆಗೊಳಿಸಿ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಎಚ್‌5ಎನ್‌1 ವೈರಾಣು ಹರಡುವುದನ್ನು ತಡೆಯಲು ಸತ್ತಿರುವ ಕಾಗೆಗಳನ್ನು ಹಾಗೂ ಕೋಳಿಗಳನ್ನು ಆರೋಗ್ಯ ಅಧಿಕಾರಿಗಳ ಸೂಚನೆ ಪ್ರಕಾರ ನಾಶ ಮಾಡಬೇಕು

ಚೆನ್ನೈಯಲ್ಲಿ ಪಕ್ಷಿಜ್ವರ ಹಾವಳಿ : ನೂರಾರು ಕಾಗೆಗಳು ಬಲಿ Read More »

ದೇವಾಲಯದ ಆವರಣದಲ್ಲಿ ಮಾಂಸದ ಕವರ್ ಪತ್ತೆ

ಬಳ್ಳಾರಿ: ನಾಗಲಕೆರೆಯಲ್ಲಿರುವ ದೇವಾಲಯವೊಂದರಲ್ಲಿ ಮಾಂಸದ ಚೀಲವೊಂದು ಪತ್ತೆಯಾದ ಘಟನೆ ನಡೆದಿದೆ. ಆಂಜನೇಯ ದೇವಾಲಯದ ಹಿಂದಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಮುಂದಿರುವ ಗರುಡ ಸ್ಥಂಬದ ಮುಂದೆ ಮಾಂಸದ ಕವರ್ ಪತ್ತೆಯಾಗಿರುವುದಾಗಿದೆ. ಬೆಳಗ್ಗಿನ ವೇಳೆ ದೇಗುಲದ ಅರ್ಚಕರ ಗಮನಕ್ಕೆ ಈ ಮಾಂಸದ ಚೀಲ ಬಂದಿದ್ದು, ತಕ್ಷಣವೇ ಸ್ಥಳೀಯರು ಮತ್ತು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿರುವ ಪೊಲೀಸರು ಮಾಂಸದ ಕವರ್ ಅನ್ನು ತೆರವು ಮಾಡಿದ್ದು, ಇದು ಕಿಡಿಗೇಡಿಗಳ ಕೃತ್ಯವೋ ಅಥವಾ ನಾಯಿಗಳು ತಂದು ಹಾಕಿರುವುದೋ ಎನ್ನುವುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಈ

ದೇವಾಲಯದ ಆವರಣದಲ್ಲಿ ಮಾಂಸದ ಕವರ್ ಪತ್ತೆ Read More »

error: Content is protected !!
Scroll to Top