ರಾಜ್ಯ

ಕವಿ ಕುವೆಂಪು ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗುವುದು: ಕುಟುಂಬವರ್ಗ

ಮೈಸೂರು: ನಗರದ ವಿವಿಪುರಂ ನಲ್ಲಿರುವ ರಾಷ್ಟ್ರಪತಿ ಕುವೆಂಪು ಅವರ ಮನೆ ಉದಯರವಿಯನ್ನು ಮಾರುವ ಅಥವಾ ಸರ್ಕಾರದ ವಶಕ್ಕೆ ನೀಡುವ ಯಾವುದೇ ಉದ್ದೇಶ ನಮ್ಮ ಮುಂದೆ ಇಲ್ಲ. ಅದನ್ನು ನಾವೇ ಮ್ಯೂಸಿಯಂ ಆಗಿ ಪರಿವರ್ತನೆ ಮಾಡುತ್ತೇವೆ ಎಂದು ಕುವೆಂಪು ಅವರ ಕುಟುಂಬ ವರ್ಗ ಮಾಹಿತಿ ನೀಡಿದೆ. ಈ ಬಗ್ಗೆ ಕುವೆಂಪು ಅವರ ಅಳಿಯ, ವಿಶ್ರಾಂತ ಕುಲಪತಿ ಪ್ರೊ. ಕೆ. ಚಿದಾನಂದ ಗೌಡ ಮಾತನಾಡಿದ್ದು, ಉದಯರವಿ ಎಂಬುದು ಕುವೆಂಪು ಅವರು 60 ವರ್ಷಗಳ ಕಾಲ ಬಾಳಿ ಬದುಕಿದ ಮತ್ತು ಅವರ […]

ಕವಿ ಕುವೆಂಪು ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಲಾಗುವುದು: ಕುಟುಂಬವರ್ಗ Read More »

ಅಭಿವೃದ್ಧಿ ಮಾಡಿದ್ದರೆ ಕಾಂಗ್ರೆಸ್ ಅಧಿಕಾರಕ್ಕಾಗಿ ಗ್ಯಾರಂಟಿ ಯೋಜನೆಗಳ ಮೊರೆ ಹೋಗುತ್ತಿರಲಿಲ್ಲ: ಬಿ. ವೈ. ವಿಜಯೇಂದ್ರ

ಬೆಳಗಾವಿ: ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಭಿವೃದ್ಧಿಯ ಕೆಲಸಗಳನ್ನು ಮಾಡಿದ್ದರೆ ಅಧಿಕಾರ ಪಡೆಯಲು ಗ್ಯಾರಂಟಿ ಯೋಜನೆಗಳ ಭರವಸೆ ನೀಡುವ ಅಗತ್ಯತೆ ಇರಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ರಾಘವೇಂದ್ರ ಹೇಳಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಆದ್ದರಿಂದಲೇ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಗ್ಯಾರಂಟಿ ಯೋಜನೆಗಳ ಮೊರೆ ಹೋಗಬೇಕಾಯಿತು ಎಂದು ವ್ಯಂಗ್ಯ ಮಾಡಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಮಾಡದವರು ಇಂದು ಕೇಂದ್ರ ಸರ್ಕಾರದ

ಅಭಿವೃದ್ಧಿ ಮಾಡಿದ್ದರೆ ಕಾಂಗ್ರೆಸ್ ಅಧಿಕಾರಕ್ಕಾಗಿ ಗ್ಯಾರಂಟಿ ಯೋಜನೆಗಳ ಮೊರೆ ಹೋಗುತ್ತಿರಲಿಲ್ಲ: ಬಿ. ವೈ. ವಿಜಯೇಂದ್ರ Read More »

ಪುತ್ರನಿಂದಲೇ ತಂದೆ-ತಾಯಿಯ ಬರ್ಬರ ಕೊಲೆ

ಕ್ಷುಲ್ಲಕ ಕಾರಣಕ್ಕೆ ಅಪ್ಪ-ಅಮ್ಮನನ್ನು ಚಾಕುವಿನಿಂದ ಇರಿದು ಕೊಂದ ಟೆಕ್ಕಿ ಪುತ್ರ ಬೆಂಗಳೂರು : ಟೆಕ್ಕಿ ಪುತ್ರನೇ ತನ್ನ ಹೆತ್ತ ತಂದೆ ಹಾಗೂ ತಾಯಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ನವೀನ್ ಚಂದ್ರ ಭಟ್(60) ಮತ್ತು ಡಾ.ಶ್ಯಾಮಲಾ ಭಟ್(55) ಕೊಲೆಯಾದವರು. ಕೊಲೆಯಾದ ನವೀನ್ ಚಂದ್ರ ಭಟ್ ನೌಕಾಪಡೆಯ ನಿವೃತ್ತ ಕ್ಯಾಪ್ಟನ್‌ ಆಗಿದ್ದರೆ, ಡಾ.ಶ್ಯಾಮಲಾ ಭಟ್ ದಂತ ವೈದ್ಯೆಯಾಗಿದ್ದರು. ಕೌಟುಂಬಿಕ ವಿಚಾರಕ್ಕೆ ಪುತ್ರ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿರುವ

ಪುತ್ರನಿಂದಲೇ ತಂದೆ-ತಾಯಿಯ ಬರ್ಬರ ಕೊಲೆ Read More »

ಐಟಿಐ ವಿದ್ಯಾರ್ಥಿಗಳ ಜಗಳ: ಚೂರಿ ಇರಿತದಲ್ಲಿ ಅಂತ್ಯ

ವಿಟ್ಲ: ಐಟಿಐ ವಿದ್ಯಾರ್ಥಿಗಳಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಮನಸ್ತಾಪ ಉಂಟಾಗಿ, ಚೂರಿ ಇರಿತದಲ್ಲಿ ಕೊನೆಗೊಂಡ ಘಟನೆ ವಿಟ್ಲದಲ್ಲಿ ನಡೆದಿದೆ. ಇರಿತಕ್ಕೊಳಗಾದ ಬನ್ವೂರಿನ ಮಹಮ್ಮದ್ ರಿಯಾನ್ ಮತ್ತು ಮಂಜೇಶ್ವರದ ದೈಗೋಳಿ ನಿವಾಸಿ ಯಜೇಶ್ ವಿಶ್ವದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳಾದ ರಿಯಾನ್ ಮತ್ತು ಹೇಮಂತ್ ನಡುವೆ ಜಗಳವಾಗಿದ್ದು, ಜಗಳ ಬಿಡಿಸಲು ಬಂದ ಯಜೇಶ್‌ಗೂ ಗಾಯಗಳಾಗಿವೆ. ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಐಟಿಐ ವಿದ್ಯಾರ್ಥಿಗಳ ಜಗಳ: ಚೂರಿ ಇರಿತದಲ್ಲಿ ಅಂತ್ಯ Read More »

ಅಕ್ರಮ ಕೋಳಿ ಅಂಕಕ್ಕೆ ‌ಪೊಲೀಸ್ ದಾಳಿ

ಮಡಿಕೇರಿ: ಅಕ್ರಮ ಕೋಳಿ ಅಂಕ ಚೆಂಬು ಗ್ರಾಮದಲ್ಲಿ ನಡೆಯುತ್ತಿದ್ದ ಕುರಿತು ಮಾಹಿತಿ ಪಡೆದ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ. ಸ್ಥಳದಲ್ಲಿ ಕೋಳಿ ಅಂಕ ನಡೆಸಲು ಕಬ್ಬಿಣದ ಬೇಲಿಯನ್ನು ಅಳವಡಿಸಲಾಗಿತ್ತು. ಹಲವಾರು ಕೋಳಿಗಳು ‌ಸಹ ಉದ್ದೇಶಿತ ಸ್ಥಳದಲ್ಲಿ ಇದ್ದವು. ದಾಳಿ ನಡೆಸಿದ ಪೊಲೀಸರು ಅಳವಡಿಸಲಾಗಿದ್ದ ಕಬ್ಬಿಣದ ಬೇಲಿಯನ್ನು ‌ವಶಕ್ಕೆ ಪಡೆದಿದ್ದಾರೆ. ಪೊಲೀಸರ ರೈಡ್ ವೇಳೆ ಅಲ್ಲಿ ಸೇರಿದ್ದ ಜನರು ಓಡಿ ಹೋದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಅಕ್ರಮ ಕೋಳಿ ಅಂಕಕ್ಕೆ ‌ಪೊಲೀಸ್ ದಾಳಿ Read More »

ತಾಯಿಯ ಕುಡಿತದ ಚಟಕ್ಕೆ ಬಲಿಯಾಯ್ತು ಮುಗ್ಧ ಮಗಳ ಜೀವ

ಯಾದಗಿರಿ: ಮದ್ಯ ಸೇವನೆ ನಿಲ್ಲಿಸುವಂತೆ ಬೇಡಿಕೊಂಡ ಪುತ್ತಿಯನ್ನೇ ನಿರ್ದಯವಾಗಿ ಹೆತ್ತಮ್ಮನೇ ಕೊಂದು ಹಾಕಿದ ಘಟನೆ ರಾಜೀವ್ ನಗರದಲ್ಲಿ ನಡೆದಿದೆ. ಪ್ರತಿಭಾ (11) ಮೃತ ದುರ್ದೈವಿ‌. ಆರೋಪಿ ಕ್ರೂರಿ‌ ತಾಯಿಯನ್ನು ನಿರ್ಮಲಾ ಎಂದು ಗುರುತಿಸಲಾಗಿದೆ. ನಿರ್ಮಲಾಳಿಗೆ ಕುಡಿತದ ಚಟ ಇದ್ದು, ಅದನ್ನು ಬಿಟ್ಟುಬಿಡುವಂತೆ ಪುಟ್ಟ ಮಗು ಅಮ್ಮನಿಗೆ ಹೇಳಿದ್ದಳು. ಇದರಿಂದ ಕೋಪಗೊಂಡ ನಿರ್ಮಲಾ ಅವಳ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಬಳಿಕ ಆಕೆ ಜ್ಯೂಸ್ ಕುಡಿಯಲು ಹಣ ಕೇಳಿದಾಗ ನೀಡದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಕಥೆ ಕಟ್ಟಿದ್ದಾಳೆ.

ತಾಯಿಯ ಕುಡಿತದ ಚಟಕ್ಕೆ ಬಲಿಯಾಯ್ತು ಮುಗ್ಧ ಮಗಳ ಜೀವ Read More »

ಕಸದ ತೊಟ್ಟಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ

ಬೆಂಗಳೂರು: ನವಜಾತ ಶಿಶುವಿನ ಶವ ಕಸದ ತೊಟ್ಟಿಯಲ್ಲಿ ಪತ್ತೆಯಾಗಿದ್ದು, ಶೇಷಾದ್ರಿಪುರಂ ರೈಲ್ವೆ ಪಾರ್ಲರ್‌ನಲ್ಲಿ ಈ ಘಟನೆ ನಡೆದಿದೆ. ಮಗು ಹುಟ್ಟಿದ ಒಂದೇ ದಿನದಲ್ಲಿ ಯಾರೋ‌ ತಂದು ಕಸದ ತೊಟ್ಟಿಗೆ ‌ಎಸೆದಿದ್ದು, ಆ ರಭಸಕ್ಕೆ ಮಗು ಮೃತಪಟ್ಟಿರುವಂತಿದೆ. ಮೃತದೇಹವನ್ನು ‌ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಶೇಷಾದ್ರಿಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಸಿಸಿಟಿವಿ ವಿಡಿಯೋಗಳನ್ನು ಪರಿಶೀಲನೆ ಮಾಡಲಾಗುತ್ತಿದ್ದು, ಕ್ರೂರಿಗಳನ್ನು ಹಿಡಿಯಲು ಮಾಹಿತಿ ಸಂಗ್ರಹ ಕಾರ್ಯ ನಡೆಯುತ್ತಿದೆ.

ಕಸದ ತೊಟ್ಟಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ Read More »

ಬಸ್ ಗುದ್ದಿ ಬೈಕ್ ಸವಾರ ಸಾವು, ಸಹಸವಾರನಿಗೆ ಗಾಯ

ತುಮಕೂರು: ದ್ವಿಚಕ್ರ ವಾಹನ ಮತ್ತು ಖಾಸಗಿ ಬಸ್ ಒಂದರ ನಡುವೆ ಅಪಘಾತ‌ ಸಂಭವಿಸಿದ್ದು, ದ್ವಿಚಕ್ರ ಸವಾರ ಮೃತಪಟ್ಟ‌ ಘಟನೆ ಸಾತಟ್ಟದಲ್ಲಿ ‌ನಡೆದಿದೆ. ಮಿಟ್ರಳ್ಳಿಯ ಗಂಗಯ್ಯ (60) ಎಂಬವರೇ ಮೃತ ದುರ್ದೈವಿ. ಸಹಸವಾರ ಲಿಂಗಣ್ಣ ಎಂಬವರಿಗೆ ‌ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ‌ದಾಖಲು ಮಾಡಲಾಗಿದೆ. ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ ಗುದ್ದಿ ಬೈಕ್ ಸವಾರ ಸಾವು, ಸಹಸವಾರನಿಗೆ ಗಾಯ Read More »

ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯಲ್ಲಿ ಕಾಣಿಸಿಕೊಂಡ ಬೆಂಕಿ: ಸುಟ್ಟು ಕರಕಲಾದ ವಸ್ತುಗಳು

ವೀರಕಂಭ: ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಬೆಂಕಿ ಕಾಣಿಸಿಕೊಂಡು ಮನೆಯಲ್ಲಿರುವ ವಸ್ತುಗಳೆಲ್ಲಾ ಆಹುತಿಯಾದ ಘಟನೆ ಗಣೇಶ್ ಕೋಡಿಯಲ್ಲಿ ನಡೆದಿದೆ. ರಾಜೇಶ್ವರಿ ಎಂಬವರ ‌ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿರುವುದಾಗಿದೆ. ಇದರಿಂದಾಗಿ ಮನೆಯಲ್ಲಿದ್ದ ಬಟ್ಟೆ ಬರೆ ಸೇರಿದಂತೆ ಇತರ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಈ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದೇ ಇದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಅಕ್ಕಪಕ್ಕದ ಮನೆಯವರು ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯಲ್ಲಿ ಕಾಣಿಸಿಕೊಂಡ ಬೆಂಕಿ: ಸುಟ್ಟು ಕರಕಲಾದ ವಸ್ತುಗಳು Read More »

ಮಗಳ ವಿದ್ಯಾಭ್ಯಾಸಕ್ಕೆ ತೊಂದರೆ ಕೊಟ್ಟ ಕುಡುಕ ತಂದೆಗೆ ಪೊಲೀಸರಿಂದ ಕ್ಲಾಸ್

ದಾವಣಗೆರೆ: ಮಗಳು ಶಾಲೆಗೆ ಹೋಗದಂತೆ ತಡೆಯಲು ಕುಡುಕ ತಂದೆಯೊಬ್ಬ ಅವಳ ಪುಸ್ತಕಗಳನ್ನೆಲ್ಲಾ ‌ಸುಟ್ಟು ಹಾಕಿದ್ದು,‌ ಸಂತ್ರಸ್ತ ಬಾಲಕಿ ಪೊಲೀಸರಿಗೆ ದೂರು ನೀಡಿದ ಘಟನೆ ನ್ಯಾಮತಿ ತಾಲೂಕಿನ ಆರುಂಡಿಯಲ್ಲಿ ‌ನಡೆದಿದೆ. ಹುಡುಗಿ 10 ನೇ ತರಗತಿಯಲ್ಲಿ ಕಲಿಯುತ್ತಿದ್ದು ಶಾಲೆಗೆ ಹೋಗದಂತೆ ಆಕೆಗೆ ತಂದೆಯೇ ಗದರಿದ್ದಾನೆ. ಜೊತೆಗೆ ಆಕೆಯ ಶಾಲೆಯ ಬ್ಯಾಗ್‌ನಲ್ಲಿದ್ದ ಪುಸ್ತಕಗಳನ್ನು ಸುಟ್ಟು ಹಾಕಿದ್ದಾನೆ. ಈ ವೇಳೆ ಶಾಲೆಗೆ ಹೋಗಲೇ ಬೇಕು ಎಂದು ಹಠ ಹಿಡಿದ ಮಗಳು ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾಳೆ. ತಕ್ಷಣವೇ ಸ್ಥಳಕ್ಕೆ ಬಂದ

ಮಗಳ ವಿದ್ಯಾಭ್ಯಾಸಕ್ಕೆ ತೊಂದರೆ ಕೊಟ್ಟ ಕುಡುಕ ತಂದೆಗೆ ಪೊಲೀಸರಿಂದ ಕ್ಲಾಸ್ Read More »

error: Content is protected !!
Scroll to Top