ಅಮ್ಮನನ್ನು ಉಳಿಸಲು ರಿಕ್ಷಾವನ್ನೇ ಎತ್ತಿದ ಬಾಲಕಿಗೆ ಸಿಎಂ ಪ್ರಶಂಸೆ | ಬಾಲಕಿಯ ಕಾರ್ಯ ಇಡೀ ಸಮಾಜಕ್ಕೊಂದು ಸಂದೇಶ ಎಂದ ಮುಖ್ಯಮಂತ್ರಿ
ಬೆಂಗಳೂರು : ಮುಲ್ಕಿ ಸಮೀಪ ಕಿನ್ನಿಗೋಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ರಿಕ್ಷಾ ಡಿಕ್ಕಿ ಹೊಡೆದಾಗ ತಾಯಿಯನ್ನು ಉಳಿಸಲು ಮಗಳು ಆಟೋರಿಕ್ಷಾವನ್ನೇ ಎತ್ತಿದ ವಿಡಿಯೋ ಬಹಳ ವೈರಲ್ ಆಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೂ ಬಂದಿದೆ. ಬಾಲಕಿಯ ಸಮಯಪ್ರಜ್ಞೆ ಮತ್ತು ಧೈರ್ಯವನ್ನು ಸಿದ್ದರಾಮಯ್ಯ ಹೊಗಳಿದ್ದಾರೆ.ತಾಯಿ ಮತ್ತು ಮಗಳು ರಸ್ತೆ ದಾಟುತ್ತಿದ್ದಾಗ ತಾಯಿ ಎದುರಿನಿಂದ ಬರುತ್ತಿದ್ದ ರಿಕ್ಷಾ ಗಮನಿಸದೆ ಮುಂದೆ ಹೋಗಿದ್ದಾರೆ. ಮಗಳು ಕೆಲವು ಹೆಜ್ಜೆ ಹಿಂದೆ ಉಳಿದಿದ್ದಳು. ವೇಗವಾಗಿ ಬಂದ ರಿಕ್ಷಾವೊಂದು ಮಹಿಳೆಗೆ ಡಿಕ್ಕಿಹೊಡೆದು ಪಲ್ಟಿಯಾಗಿದ್ದು, ಮಹಿಳೆ ಅದರಡಿ ಸಿಕ್ಕಿಬಿದ್ದಿದ್ದರು. […]