ರಾಜ್ಯ

ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಮನೆಯಲ್ಲಿ ಇ.ಡಿ.ಶೋಧ

ಚಿನ್ನ ವಂಚನೆ ಪ್ರಕರಣದಲ್ಲಿ ಶಾಮೀಲಾಗಿರುವ ಅನುಮಾನ ಬೆಂಗಳೂರು: ಮಾಜಿ ಸಚಿವ, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿ ರಾತ್ರಿಯಿಡೀ ಪರಿಶೀಲನೆ ನಡೆಸಿದೆ. ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿರುವ ವಿನಯ್ ಕುಲಕರ್ಣಿ ನಿವಾಸದ ಮೇಲೆ ದಾಳಿ ಮಾಡಿದ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಚಿನ್ನ ಹಾಗೂ ಕೆಲ ವ್ಯವಹಾರದಲ್ಲಿ ಐಶ್ವರ್ಯಾ ಗೌಡ ಹಾಗೂ ಶಿಲ್ಪಾ ಗೌಡ ಎಂಬುವವರು ವಂಚನೆ ಮಾಡಿದ್ದರು ಎಂಬ ಆರೋಪ ಕೆಲವು ದಿನಗಳ ಹಿಂದೆ ಕೇಳಿ ಬಂದಿತ್ತು. ತನಿಖೆ ವೇಳೆ […]

ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಮನೆಯಲ್ಲಿ ಇ.ಡಿ.ಶೋಧ Read More »

ಬಸ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ನಿರ್ವಾಹಕ ನೌಕರಿಯಿಂದ ವಜಾ

ಮುಡಿಪುವಿನಿಂದ ಮಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದ ಘಟನೆ ಮಂಗಳೂರು : ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ನಿರ್ವಾಹಕನನ್ನು ನೌಕರಿಯಿಂದಲೇ ವಜಾ ಮಾಡಲಾಗಿದೆ. ಗುತ್ತಿಗೆ ಆಧಾರದಲ್ಲಿ ಕಂಡಕ್ಟರ್‌ ನೇಮಕಾತಿ ಪಡೆದಿದ್ದ ಆರೋಪಿ ಬಾಗಲಕೋಟೆಯ ಮೂಲದ ಪ್ರದೀಪ್ ಕಾಶಪ್ಪ ನಾಯ್ಕರ್ (35)ನನ್ನು ವಜಾಗೊಳಿಸಲು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚಿಸಿದ್ದಾರೆ. ಸರಕಾರಿ ಬಸ್‌ಗಳಲ್ಲಿ ಪ್ರತಿಯೊಬ್ಬ ಮಹಿಳೆಯೂ ಸುರಕ್ಷಿತವಾಗಿ ಪ್ರಯಾಣಿಸಬೇಕು. ಬಸ್‌ನ ಸಿಬ್ಬಂದಿಯೇ ದುರ್ವರ್ತನೆ ತೋರಿಸಿದರೆ ಅದು ಜನರಿಗೆ ತೀರಾ ಕೆಟ್ಟ ಸಂದೇಶ ನೀಡಿದಂತಾಗುತ್ತದೆ. ಇಂಥ ಕೃತ್ಯವನ್ನು ಸರಕಾರ

ಬಸ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ನಿರ್ವಾಹಕ ನೌಕರಿಯಿಂದ ವಜಾ Read More »

ಉಗ್ರರಿಂದ ಹತ್ಯೆಯಾದವರ ಪಾರ್ಥಿವ ದೇಹಗಳು ಹುಟ್ಟೂರಿಗೆ

ಅಂತಿಮ ದರ್ಶನ ಪಡೆದು ಕಣ್ಣೀರಾದ ಸಿದ್ದರಾಮಯ್ಯ, ಸೋಮಣ್ಣ, ತೇಜಸ್ವಿ ಸೂರ್ಯ ಬೆಂಗಳೂರು: ಪಹಲ್ಗಾಮ್‌ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ಇಬ್ಬರು ಕನ್ನಡಿಗರ ಮೃತದೇಹ ರಾಜ್ಯಕ್ಕೆ ಆಗಮಿಸಿದೆ. ದೆಹಲಿಯಿಂದ ಇಂಡಿಗೋ ವಿಮಾನದಲ್ಲಿ ಮುಂಜಾನೆ 3.30ಕ್ಕೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಶಿವಮೊಗ್ಗದ ಮಂಜುನಾಥ್, ಬೆಂಗಳೂರಿನ ಭರತ್ ಭೂಷಣ್ ಪಾರ್ಥಿವ ಶರೀರ ಆಗಮಿಸಿದಾಗ ಸಂಬಂಧಿಕರ ದುಃಖದ ಕಟ್ಟೆಯೊಡೆಯಿತು. ಈ ವಿಮಾನಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು‌ ಮೃತರ ಕುಟುಂಬಸ್ಥರು ಆಗಮಿಸಿದ್ದರು. ಕೇಂದ್ರ ಸಚಿವ ಸೋಮಣ್ಣ ಮೃತದೇಹವನ್ನು

ಉಗ್ರರಿಂದ ಹತ್ಯೆಯಾದವರ ಪಾರ್ಥಿವ ದೇಹಗಳು ಹುಟ್ಟೂರಿಗೆ Read More »

ಬಾಲಕನಿಗೆ ಆಟೋರಿಕ್ಷಾ ಚಲಾಯಿಸಲು ಕೊಟ್ಟಿದ್ದ ಮಾಲೀಕನಿಗೆ 1.41 ಕೋ. ರೂ. ದಂಡ!

ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವಿಗೀಡಾಗಿದ್ದ ಪ್ರಕರಣ ಬೆಂಗಳೂರು: ಬಾಲಕನಿಗೆ ಆಟೋರಿಕ್ಷಾ ನೀಡಿ ಅಪಘಾತದಲ್ಲಿ ಒಬ್ಬರ ಸಾವಿಗೆ ಕಾರಣನಾದ ಆಟೋರಿಕ್ಷಾದ ಮಾಲೀಕನಿಗೆ ನ್ಯಾಯಾಲಯ ಬರೋಬ್ಬರಿ 1.41 ಕೋಟಿ ದಂಡ ವಿಧಿಸಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮಂಗಳವಾರ ವಿಚಾರಣೆ ನಡೆಸಿದ ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ ಎಸ್‌.ಗಾಣಿಗೇರ ಈ ದಂಡದ ಮೊತ್ತವನ್ನು ಮೃತನ ಕುಟುಂಬಕ್ಕೆ ನೀಡುವಂತೆ ಆದೇಶಿಸಿದ್ದಾರೆ. 2021ರ ಮಾರ್ಚ್ 10ರಂದು ಯಲಬುರ್ಗಾದಲ್ಲಿ ಅಪಘಾತ ನಡೆದಿತ್ತು. ಈ ಅಪಘಾತದಲ್ಲಿ ಯಲಬುರ್ಗಾದ ಪ್ರಥಮ ದರ್ಜೆ ಕಾಲೇಜಿನ ಸಹಾಯಕ

ಬಾಲಕನಿಗೆ ಆಟೋರಿಕ್ಷಾ ಚಲಾಯಿಸಲು ಕೊಟ್ಟಿದ್ದ ಮಾಲೀಕನಿಗೆ 1.41 ಕೋ. ರೂ. ದಂಡ! Read More »

ಪಹಲ್ಗಾಮ್‌ ಉಗ್ರ ದಾಳಿ : ಕರ್ನಾಟಕದ ಇನ್ನೋರ್ವ ವ್ಯಕ್ತಿ ಬಲಿ

ಬೆಂಗಳೂರು: ಕಾಶ್ಮೀರದ ಪಹಲ್ಗಾಮ್ ಕಣಿವೆಯಲ್ಲಿ ಉಗ್ರರು ನಡೆಸಿದ ನಡೆದ ಹಿಂದೂಗಳ ನರಮೇಧದಲ್ಲಿ ಬೆಂಗಳೂರಿನ ಮಧುಸೂದನ್‌ ಎಂಬವರು ಬಲಿಯಾಗಿದ್ದು, ಇದರೊಂದಿಗೆ ಕರ್ನಾಟಕದ ಮೂವರು ಸಾವನ್ನಪ್ಪಿರುವುದು ದೃಢವಾಗಿದೆ. ಮೂಲತಃ ಆಂಧ್ರದ ನೆಲ್ಲೂರಿನವರಾದ ಮಧುಸೂದನ್‌ ರಾಮಮೂರ್ತಿ ನಗರದಲ್ಲಿ ವಾಸವಾಗಿದ್ದರು. ಎರಡು ದಿನದ ಹಿಂದೆ ಕಾಶ್ಮೀರಕ್ಕೆ ಕುಟುಂಬ ತೆರಳಿದ್ದರು. ಮಧುಸೂದನ್‌ ಅವರ ಸಾವಿನೊಂದಿಗೆ ಕರ್ನಾಟಕ ಮೂವರು ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಈಗಾಗಲೇ ಶಿವಮೊಗ್ಗದ ಮಂಜುನಾಥ್‌ ರಾವ್‌, ಬೆಂಗಳೂರಿನ ಭರತ್‌ ಭೂಷಣ್‌ ಎಂಬವರು ಮೃತಪಟ್ಟಿದ್ದಾರೆ. ವಿಮಾನ ನಿಲ್ದಾಣದಲ್ಲೇ ಮೋದಿ ಸಭೆ ಸೌದಿ ಅರೇಬಿಯಾ ಪ್ರವಾಸವನ್ನು

ಪಹಲ್ಗಾಮ್‌ ಉಗ್ರ ದಾಳಿ : ಕರ್ನಾಟಕದ ಇನ್ನೋರ್ವ ವ್ಯಕ್ತಿ ಬಲಿ Read More »

ಖುಷಿಯಿಂದ ಪ್ರವಾಸಕ್ಕೆ ಹೋದವರು ಹೆಂಡತಿ, ಮಗನ ಎದುರೇ ಉಗ್ರರ ಗುಂಡಿಗೆ ಬಲಿಯಾದರು

ಬೆಂಗಳೂರಿನ ಭರತ್‌ಭೂಷಣ್‌, ಶಿವಮೊಗ್ಗದ ಮಂಜುನಾಥ್‌ ಹತ್ಯೆ ಅತಿ ದಾರುಣ ಬೆಂಗಳೂರು: ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣ ಪಹಲ್ಗಾಂವ್‌ನ ಬೈಸನ್‌ ಎಂಬ ಕಣಿವೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಉಗ್ರರ ಭೀಕರ ದಾಳಿಯಲ್ಲಿ ಕರ್ನಾಟಕದ ಇಬ್ಬರು ವ್ಯಕ್ತಿಗಳು ತಮ್ಮ ಹೆಂಡತಿ ಮತ್ತು ಮಕ್ಕಳ ಎದುರೇ ಗುಂಡೇಟು ತಿಂದು ಮರಣವನ್ನಪ್ಪಿದ್ದಾರೆ. ಉಗ್ರರು ಪ್ರವಾಸಿಗರ ಪೈಕಿ ಪುರುಷರನ್ನು ಪ್ರತ್ಯೇಕಿಸಿ ಅವರ ಧರ್ಮ ಕೇಳಿ, ಕುರಾನ್‌ನ ವಾಕ್ಯಗಳನ್ನು ಪಠಿಸಲು ಹೇಳಿ ಅವರು ಹಿಂದುಗಳು ಎಂದು ದೃಢಪಡಿಸಿಕೊಂಡು ಕುಟುಂಬದವರ ಎದುರೇ ಗುಂಡಿಕ್ಕಿದ್ದಾರೆ. ಬೆಂಗಳೂರು ಮೂಲದ ಟೆಕ್ಕಿ

ಖುಷಿಯಿಂದ ಪ್ರವಾಸಕ್ಕೆ ಹೋದವರು ಹೆಂಡತಿ, ಮಗನ ಎದುರೇ ಉಗ್ರರ ಗುಂಡಿಗೆ ಬಲಿಯಾದರು Read More »

ಪೋಪ್‌ ನಿಧನಕ್ಕೆ ಸ್ಪೀಕರ್‌ ಖಾದರ್‌ ಸಂತಾಪ

ಮಂಗಳೂರು: ಪೋಪ್ ಫ್ರಾನ್ಸಿಸ್ ನಿಧನಕ್ಕೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಆಧ್ಯಾತ್ಮಿಕ ಗುರುಗಳಾಗಿದ್ದ ಪೋಪ್‌ ಸಹಾನುಭೂತಿ, ಸರಳತೆ, ನ್ಯಾಯ ಮತ್ತು ಶಾಂತಿ ಬಯಸುವವರ ನೈತಿಕ ಧ್ವನಿಯಾಗಿದ್ದರು. ಪೋಪ್ ಆಗಿ ಅವರ ಸರಳ ಜೀವನ ಮತ್ತು ಬಡವರ ಬಗ್ಗೆ ಪ್ರೀತಿ, ವಿಶೇಷ ಕಾಳಜಿ, ಪ್ರತಿಯೊಬ್ಬ ಮನುಷ್ಯನ ಘನತೆಯ ಬಗ್ಗೆ ಆಳವಾದ ಕಾಳಜಿಯನ್ನು ಹೊಂದಿದ್ದರು ಎಂದು ಹೇಳಿದ್ದಾರೆ. ಪೋಪ್ ಫ್ರಾನ್ಸಿಸ್ ಅವರನ್ನು 2024ರ ಡಿಸೆಂಬರ್‌ನಲ್ಲಿ ಭೇಟಿಯಾಗಿ ಅವರ ಆಶೀರ್ವಾದ ಪಡೆದ ಕ್ಷಣಗಳನ್ನು ನೆನಪಿಸಿಕೊಂಡಿರುವ ಖಾದರ್ ಪೋಪ್

ಪೋಪ್‌ ನಿಧನಕ್ಕೆ ಸ್ಪೀಕರ್‌ ಖಾದರ್‌ ಸಂತಾಪ Read More »

ಪಠ್ಯಪುಸ್ತಕಗಳ ಬೆಲೆ ಶೇ.10 ಏರಿಕೆ

ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಿದವರಿಗೆ ಶುಲ್ಕ ಹೆಚ್ಚಳದ ಜೊತೆ ಇನ್ನೊಂದು ಬರೆ ಬೆಂಗಳೂರು : ಶಾಲಾ ಶುಲ್ಕದ ಬೆನ್ನಿಗೆ ಪೋಷಕರಿಗೆ ಪಠ್ಯಪುಸ್ತಕದ ಬೆಲೆಯೇರಿಕೆಯ ಬರೆ ಬಿದ್ದಿದೆ. ಪಠ್ಯಪುಸ್ತಕಗಳ ಬೆಲೆ ಸರಾಸರಿಯಾಗಿ ಶೇ. 10ರಷ್ಟು ಏರಿಕೆಯಾಗಿದೆ. ಈ ಏರಿಕೆಗೆ ಖಾಸಗಿ ಶಾಲೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ಕರ್ನಾಟಕ ಪಠ್ಯಪುಸ್ತಕ ಸಂಘ 2025-2026ನೇ ಸಾಲಿನ ಪಠ್ಯಪುಸ್ತಕ ಬೆಲೆಯನ್ನು ಶೇ.10ರಷ್ಟು ಏರಿಕೆ ಮಾಡಿದೆ. ಈಗಾಗಲೇ ಕೆಲವು ಪಠ್ಯಪುಸ್ತಕಗಳ ಬೆಲೆ ಶೇ.100ರಷ್ಟು ಹೆಚ್ಚಾಗಿದ್ದು, ಈ ವರ್ಷವೂ ಕರ್ನಾಟಕ ಪಠ್ಯ ಪುಸ್ತಕ ಸಂಘ ಪಠ್ಯಪುಸ್ತಕಗಳ

ಪಠ್ಯಪುಸ್ತಕಗಳ ಬೆಲೆ ಶೇ.10 ಏರಿಕೆ Read More »

ರಿಕ್ಕಿ ರೈ ಮೇಲೆ ನಡೆದ ಫೈರಿಂಗ್‌ ನಕಲಿ?

ಮಾಜಿ ಗನ್‌ಮ್ಯಾನ್‌ ಮೂಲಕ ಫೈರಿಂಗ್‌ ಮಾಡಿಸಿಕೊಂಡ ಸಂಶಯ ಬೆಂಗಳೂರು: ಮಾಜಿ ಡಾನ್‌ ಮುತ್ತಪ್ಪ ರೈಯವರ ಪುತ್ರ ರಿಕ್ಕಿ ರೈ ಮೇಲೆ ನಡೆದಿದ್ದ ಫೈರಿಂಗ್‌ ಸುತ್ತ ಅನುಮಾನ ಮೂಡಿದೆ. ಇದು ನಕಲಿ ಶೂಟೌಟ್‌ ಆಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನಿಸಿದ್ದಾರೆ. ರಿಕ್ಕಿ ರೈಗೆ ಒಂದು ಕಾಲದಲ್ಲಿ ಗನ್‌ಮ್ಯಾನ್ ಆಗಿದ್ದ ವಿಠ್ಠಲ ಎಂಬಾತ ಕಾರಿನ ಮೇಲೆ ಫೈರಿಂಗ್ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಮಾಜಿ ಗನ್‌ಮ್ಯಾನ್ ವಿಠ್ಠಲನನ್ನು ಬಿಡದಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಠ್ಠಲ

ರಿಕ್ಕಿ ರೈ ಮೇಲೆ ನಡೆದ ಫೈರಿಂಗ್‌ ನಕಲಿ? Read More »

ನಿವೃತ್ತ ಡಿಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣ : ಪತ್ನಿ ಪಲ್ಲವಿ ಅರೆಸ್ಟ್‌

ಆತ್ಮರಕ್ಷಣೆಗಾಗಿ ಕೊಲೆ ಮಾಡಬೇಕಾಯಿತು ಎಂದು ಹೇಳಿಕೆ ಬೆಂಗಳೂರು : ನಿವೃತ್ತ ಪೊಲೀಸ್​ ಮಹಾನಿರ್ದೇಶಕ ಓಂ ಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅವರ ಪತ್ನಿ ಪಲ್ಲವಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ಈ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆಯಿಂದೀಚೆಗೆ ಪತ್ನಿ ಪಲ್ಲವಿ ಮತ್ತು ಪುತ್ರಿ ಕೃತಿಯನ್ನು ಎಚ್​ಎಸ್​ಆರ್​​ ಲೇಔಟ್​​ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದರು. ಇಂದು ಪಲ್ಲವಿಯನ್ನು ಬಂಧನಕ್ಕೊಳಪಡಿಸುವ ಔಪಚಾರಿಕತೆ ಮಾಡಲಾಯಿತು. ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ತಮ್ಮ ನಿವಾಸದಲ್ಲೆ ಓಂ ಪ್ರಕಾಶ್ ನಿನ್ನೆ ಸಂಜೆ ಭೀಕರವಾಗಿ ಹತ್ಯೆಯಾಗಿದ್ದಾರೆ. ಪತ್ನಿ ಮತ್ತು

ನಿವೃತ್ತ ಡಿಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣ : ಪತ್ನಿ ಪಲ್ಲವಿ ಅರೆಸ್ಟ್‌ Read More »

error: Content is protected !!
Scroll to Top