ರಾಜ್ಯ

ಕಪ್ಪೆಚಿಪ್ಪು ಹೆಕ್ಕುವಾಗ ನೀರುಪಾಲು : ಮೃತರ ಸಂಖ್ಯೆ 11ಕ್ಕೇರಿಕೆ

ಭಟ್ಕಳದ ತಟ್ಟೆಹಕ್ಲು ನದಿಗೆ ಕಪ್ಪೆಚಿಪ್ಪು ಹೆಕ್ಕಲು ಇಳಿದವರು ಜಲಸಮಾಧಿ ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಳಿಯ ಅಳ್ವೆಕೋಡಿ ಕಡಲತೀರ ಪ್ರದೇಶದಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. 11 ಜನರ ಪೈಕಿ ನಿನ್ನೆ 10 ಜನರ ಮೃತದೇಹಗಳು ಪತ್ತೆಯಾಗಿದ್ದವು. ನಾಪತ್ತೆಯಾಗಿದ್ದ ಮಾದೇವ್ ನಾಯ್ಕ್ ಮೃತದೇಹ ಕೂಡ ಇಂದು ಪತ್ತೆಯಾಗಿದೆ. ಎನ್‌ಡಿಆರ್‌ಎಫ್‌, ಈಶ್ವರ ಮಲ್ಪೆ ತಂಡ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಮೃತದೇಹವನ್ನು ಪತ್ತೆ ಮಾಡಿ ಹೊರತೆಗೆಯಲಾಗಿದೆ. ಆ ಮೂಲಕ ನೀರಿನ ಅಬ್ಬರಕ್ಕೆ 11 […]

ಕಪ್ಪೆಚಿಪ್ಪು ಹೆಕ್ಕುವಾಗ ನೀರುಪಾಲು : ಮೃತರ ಸಂಖ್ಯೆ 11ಕ್ಕೇರಿಕೆ Read More »

ಗೃಹಲಕ್ಷ್ಮಿ, ಗೃಹಜ್ಯೋತಿ ಗ್ಯಾರಂಟಿಗಳ ಪರಿಷ್ಕರಣೆಗೆ ನಿರ್ಧಾರ

ಯೋಜನೆಯಲ್ಲಿ ಅನರ್ಹ ಫಲಾನುಭವಿಗಳಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ತೀರ್ಮಾನ ಬೆಂಗಳೂರು: ಪಂಚ ಗ್ಯಾರಂಟಿಗಳ ಮೇಲೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಕೆಲವು ಗ್ಯಾರಂಟಿಗಳು ದುರುಪಯೋಗವಾಗುತ್ತಿದೆ ಎಂಬ ಕಾರಣವೊಡ್ಡಿ ಪರಿಷ್ಕರಣೆಗೆ ಮುಂದಾಗಿದೆ. 2 ಮಹತ್ವದ ಗ್ಯಾರಂಟಿಗಳಾದ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳ ಪರಿಷ್ಕರಣೆಗೆ ನಿರ್ಧರಿಸಿದೆ. ಶಾಸಕರು ಹಾಗೂ ಹಿರಿಯ ನಾಯಕರ ಸಭೆಯಲ್ಲಿ ಈ ಪ್ರಮುಖ ತೀರ್ಮಾನ ಕೈಗೊಳ್ಳಲಾಗಿದೆ. ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿತಿಂಗಳು 1 ಕೋಟಿ 64 ಲಕ್ಷ ಮಹಿಳೆಯರು 2,000 ರೂ. ಹಣ ಪಡೆಯುತ್ತಿದ್ದಾರೆ. ಗೃಹಜ್ಯೋತಿ ಯೋಜನೆಯಲ್ಲೂ

ಗೃಹಲಕ್ಷ್ಮಿ, ಗೃಹಜ್ಯೋತಿ ಗ್ಯಾರಂಟಿಗಳ ಪರಿಷ್ಕರಣೆಗೆ ನಿರ್ಧಾರ Read More »

ಭಟ್ಕಳದಲ್ಲಿ ಮುರಿನ ಕಟ್ಟೆ ವಿವಾದ : ಮುಸ್ಲಿಮರಿಂದ ಪೊಲೀಸರ ಮೇಲೆ ಹಲ್ಲೆ ಆರೋಪ

ಹೆದ್ದಾರಿ ವಿಸ್ತರಣೆಗಾಗಿ ತೆರವುಗೊಂಡಿದ್ದ ಧಾರ್ಮಿಕ ಮಹತ್ವದ ಮುರಿನ ಕಟ್ಟೆ ನಿರ್ಮಾಣ ವಿವಾದ ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಧಾರ್ಮಿಕ ಮಹತ್ವ ಇರುವ ಮುರಿನ ಕಟ್ಟೆ ಮರು ನಿರ್ಮಾಣಕ್ಕೆ ಸಂಬಂಧಿಸಿದಂತೆ ಭಾರಿವಿವಾದ ಸೃಷ್ಟಿಯಾಗಿ ಕೋಮುಸೂಕ್ಷ್ಮ ಪರಿಸ್ಥಿತಿ ನೆಲೆಸಿದೆ. ಮುಸ್ಲಿಂ ಸಂಘಟನೆಯೊಂದರ ಪ್ರಮುಖರು ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಉದ್ವಿಗ್ನ ಘಟನೆ ಭಾನುವಾರ ರಾತ್ರಿ ನಡೆದಿದೆ. ಭಟ್ಕಳದ ಜಾಗಟೆ ಕಟ್ಟೆ ಎಂಬಲ್ಲಿದ್ದ ಐತಿಹಾಸಿಕ ಮುರಿನ ಕಟ್ಟೆಯನ್ನು ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಸಂದರ್ಭದಲ್ಲಿ ತೆರವುಗೊಳಿಸಲಾಗಿತ್ತು. ಇತ್ತೀಚೆಗೆ ಹಿಂದೂ

ಭಟ್ಕಳದಲ್ಲಿ ಮುರಿನ ಕಟ್ಟೆ ವಿವಾದ : ಮುಸ್ಲಿಮರಿಂದ ಪೊಲೀಸರ ಮೇಲೆ ಹಲ್ಲೆ ಆರೋಪ Read More »

ವೃದ್ಧೆಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ ಬರೋಬ್ಬರಿ 24 ಕೋ. ರೂ. ಲೂಟಿ

ಆಸ್ತಿ ಮಾರಿದ ಹಣ ಇರುವುದು ತಿಳಿದು ವೃದ್ಧೆಯನ್ನು ಬೆದರಿಸಿದ ಸೈಬರ್‌ ವಂಚಕರು ಬೆಂಗಳೂರು: ಮನಿ ಲಾಂಡರಿಂಗ್ ಬೆದರಿಕೆಯೊಡ್ಡಿ ವೃದ್ಧೆಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಮಾಡಿದ ಸೈಬರ್ ವಂಚಕರು ಬರೋಬ್ಬರಿ 24 ಕೋಟಿ ರೂ. ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಿವಾಜಿನಗರ ನಿವಾಸಿ ಲಕ್ಷ್ಮೀ ರಾಮಮೂರ್ತಿ ಎಂಬವರನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದೆ. ಆಸ್ತಿ ಮಾರಿದ್ದರಿಂದ ವೃದ್ಧೆಗೆ ಕೋಟ್ಯಂತರ ರೂ. ಹಣ ಬಂದಿತ್ತು. ಇವರ ಬ್ಯಾಂಕ್ ಟ್ರಾನ್ಸಾಕ್ಷನ್ ಬಗ್ಗೆ ಮಾಹಿತಿ ತಿಳಿದ ಸೈಬರ್ ವಂಚಕರು ಕಳೆದ ಜನವರಿಯಿಂದ ಮೇ ತಿಂಗಳವರೆಗೆ ಮನಿ

ವೃದ್ಧೆಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ ಬರೋಬ್ಬರಿ 24 ಕೋ. ರೂ. ಲೂಟಿ Read More »

ಕಾರ್ಮಿಕರ ವೇತನ ಶೇ.60 ಹೆಚ್ಚಳ!

ಅಸಂಘಟಿತ ವಲಯದ ಕಾರ್ಮಿಕರ ವೇತನ ಪರಿಷ್ಕರಿಸಿದ ಸರ್ಕಾರ ಬೆಂಗಳೂರು : ರಾಜ್ಯದ ಲಕ್ಷಾಂತರ ಕಾರ್ಮಿಕರ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಿರುವ ಕರ್ನಾಟಕ ಸರ್ಕಾರ ವಿವಿಧ 81 ವಲಯಗಳ ಕಾರ್ಮಿಕರ ಕನಿಷ್ಠ ವೇತನವನ್ನು ಶೇ.60ರಷ್ಟು ಭಾರಿ ಪ್ರಮಾಣದಲ್ಲಿ ಪರಿಷ್ಕರಿಸಿ ಹೆಚ್ಚಳ ಮಾಡಿದೆ. ಕಾರ್ಮಿಕ ಇಲಾಖೆ ಶುಕ್ರವಾರ ಈ ಪರಿಷ್ಕೃತ ಅಧಿಕೃತ ಆದೇಶ ಹೊರಡಿಸಿದ್ದು, ಅಸಂಘಟಿತ ಮತ್ತು ನಿರ್ದಿಷ್ಟ ವಲಯಗಳ ಕಾರ್ಮಿಕರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿಗೆ, ಈ

ಕಾರ್ಮಿಕರ ವೇತನ ಶೇ.60 ಹೆಚ್ಚಳ! Read More »

ಇಂದು ಬಿಜೆಪಿ ನಾಯಕರ ಮಹತ್ವದ ಸಭೆ

ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬಿನ್‌ ಆಗಮನ ಬೆಂಗಳೂರು: ಅಧ್ಯಕ್ಷರೂ ಆಯ್ಕೆಯೂ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಚರ್ಚಿಸುವ ಸಲುವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬಿನ್‌ ಬೆಂಗಳೂರಿಗೆ ಆಗಮಿಸಿದ್ದಾರೆ. ನಿತಿನ್ ನಬಿನ್ ಶನಿವಾರ ತಡರಾತ್ರಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಬೆಂಗಳೂರಿಗೆ ಚೊಚ್ಚಲ ಭೇಟಿ ನೀಡಿದ್ದು, ವಿಮಾನ ನಿಲ್ದಾಣದಲ್ಲಿ ಅವರನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ವಾಗತಿಸಿದರು. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಿತಿನ್ ನಬಿನ್ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಹಿರಿಯ ನಾಯಕ

ಇಂದು ಬಿಜೆಪಿ ನಾಯಕರ ಮಹತ್ವದ ಸಭೆ Read More »

ಶಾಲೆಗೆ ಕೇಸರಿ ಶಾಲು ಹಾಕಿಕೊಂಡು ಬಂದರೆ ಕಠಿಣ ಕ್ರಮ : ಮಧು ಬಂಗಾರಪ್ಪ ಎಚ್ಚರಿಕೆ

ನಾವು ಅನುಮತಿ ಕೊಟ್ಟಿರುವುದು ಹಿಜಾಬ್‌ಗೆ ಮಾತ್ರ ಎಂದ ಶಿಕ್ಷಣ ಸಚಿವ ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಲು ಅವಕಾಶ ಇಲ್ಲ. ಯಾರಾದರೂ ಹಾಕಿಕೊಂಡು ಬಂದರೆ ಕಾನೂನಿನ ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಚ್ಚರಿಕೆ ನೀಡಿದ್ದಾರೆ. ಜೂನ್ 1ರಿಂದ ರಾಜ್ಯಾದ್ಯಂತ ಶಾಲೆಗಳು ಆರಂಭವಾಗಲಿದ್ದು, ಮತ್ತೆ ಹಿಜಾಬ್ ಹಾಗೂ ಕೇಸರಿ ಶಾಲು ಸದ್ದು ಮಾಡುತ್ತಿದೆ. ಈ ವಿಚಾರವಾಗಿ ಮಾತನಾಡಿದ ಶಿಕ್ಷಣ ಸಚಿವರು, ಹಿಜಾಬ್ ವಿಚಾರದಲ್ಲಿ ನಮಗೆ ಸ್ಪಷ್ಟತೆ ಇದೆ. ಹಿಜಾಬ್

ಶಾಲೆಗೆ ಕೇಸರಿ ಶಾಲು ಹಾಕಿಕೊಂಡು ಬಂದರೆ ಕಠಿಣ ಕ್ರಮ : ಮಧು ಬಂಗಾರಪ್ಪ ಎಚ್ಚರಿಕೆ Read More »

ದುಬಾರೆ ಪ್ರಕರಣ: ಇಬ್ಬರು ಅರಣ್ಯಾಧಿಕಾರಿಗಳ ವಿರುದ್ಧ ಕೇಸ್

ಮಡಿಕೇರಿ: ದುಬಾರೆಯ ಆನೆ ಕ್ಯಾಂಪಿನಲ್ಲಿ ಮಹಿಳೆ ಮತ್ತು ಸಾಕಾನೆಯೊಂದು ಮೃತಪಟ್ಟ ಪ್ರಕರಣದಲ್ಲಿ ಇಬ್ಬರು ಅರಣ್ಯಾಧಿಕಾರಿಗಳ ವಿರುದ್ಧ ಉಪಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದಾರೆ. ಸೋಮವಾರಪೇಟೆಯ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಎ., ಕುಶಾಲನಗರ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ರಕ್ಷಿತ್ ಅವರ ವಿರುದ್ಧ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ. ಎನ್. ಫಣೀಂದ್ರ ಪ್ರಕರಣ ದಾಖಲು ಮಾಡಿರುವುದಾಗಿದೆ. ಕೆಲ ದಿನಗಳ ಹಿಂದೆ ದುಬಾರೆಯಲ್ಲಿ ಎರಡು ಆನೆಗಳ ನಡುವೆ ಭೀಕರ ಕಾದಾಟ ನಡೆದಿದ್ದು, ಇದರಲ್ಲಿ ತಮಿಳುನಾಡಿನ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿದ್ದರು.

ದುಬಾರೆ ಪ್ರಕರಣ: ಇಬ್ಬರು ಅರಣ್ಯಾಧಿಕಾರಿಗಳ ವಿರುದ್ಧ ಕೇಸ್ Read More »

ಕಾಂಗ್ರೆಸ್ ಸರ್ಕಾರದ ಮುಸ್ಲಿಂ ತುಷ್ಟೀಕರಣ ರಾಜಕೀಯದ ವಿರುದ್ಧ ಬಿಜೆಪಿ ಆಕ್ರೋಶ

ಬೆಂಗಳೂರು: ಕಲ್ಬುರ್ಗಿಯ ಆಳಂದದ ಲಾಡ್ಲೆ ಮಶಾಕ್ ದರ್ಗಾದಲ್ಲಿ ನಡೆದ ಕೋಮು ಗಲಭೆಗೆ ಸಂಬಂಧಿಸಿದ 13 ಪ್ರಕರಣಗಳನ್ನು ಸಂಪುಟ ಸಭೆಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂಪಡೆದಿದ್ದು ಇದನ್ನು ಬಿಜೆಪಿ ಖಂಡಿಸಿದೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯದ ಬಹುಸಂಖ್ಯಾತರ ಧಾರ್ಮಿಕ ಭಾವನೆ ಮತ್ತು ನಾಡಿನ ಸುರಕ್ಷತೆಯನ್ನು ಮುಸ್ಲಿಂ ಓಟ್‌ಬ್ಯಾಂಕ್‌ಗೆ ಅಡವಿಟ್ಟಿರುವ ಕಾಂಗ್ರೊಸಿನ ಜನವಿರೋಧಿ ಧೋರಣೆಯನ್ನು ಕರುನಾಡ ಜನತೆ ಎಂದಿಗೂ ಕಾಷಮಿಸುವುದಿಲ್ಲ ಎಂದು ಹೇಳಿದ್ದಾರೆ. ನಾಚಿಕೆಗೆಟ್ಟ ಕಾಂಗ್ರೆಸ್ ಸರ್ಕಾರದ

ಕಾಂಗ್ರೆಸ್ ಸರ್ಕಾರದ ಮುಸ್ಲಿಂ ತುಷ್ಟೀಕರಣ ರಾಜಕೀಯದ ವಿರುದ್ಧ ಬಿಜೆಪಿ ಆಕ್ರೋಶ Read More »

ಕ್ರೂಸರ್‌- ಲಾರಿ ಡಿಕ್ಕಿ : ಒಂದೇ ಕುಟುಂಬದ ಐವರು ಸಾವು

ಕಲಬುರಗಿ: ಕ್ರೂಸರ್ ಮತ್ತು ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಕ್ರಾಸ್ ಬಳಿ ಇಂದು ಮುಂಜಾನೆ ನಡೆದಿದೆ. ತೋಲುಸಾಬ್ ಕ್ಯಾಶ್ವಾರ್ (27), ಹುಸೇನ್ ಶಾ (48), ಮೈಬೂಬ್ ಅಲಿ (45), ರಸೂಲ್ ಬೀ (42), ಫಾತೀಮಾ ಅಲೀ (38) ಮೃತರು. ಮೃತರೆಲ್ಲರೂ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದವರು. ಲಾಡ್ಲಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಅಪಘಾತ ಸಂಭವಿಸಿದ್ದು, ಲಾರಿ ಡಿಕ್ಕಿ

ಕ್ರೂಸರ್‌- ಲಾರಿ ಡಿಕ್ಕಿ : ಒಂದೇ ಕುಟುಂಬದ ಐವರು ಸಾವು Read More »

error: Content is protected !!
Scroll to Top