ರಾಜ್ಯ

ಇನ್ನು ಮುಂದೆ ರಾತ್ರಿ 9 ಗಂಟೆ ವರೆಗೂ ಪ್ರವಾಸಿಗರಿಗೆ ಮೈಸೂರು ಅರಮನೆ ಭೇಟಿಗೆ ಅವಕಾಶ | ಜಿಲ್ಲಾಡಳಿತದಿಂದ ಚಿಂತನೆ

ಮೈಸೂರು: ದಸರಾ ಸಂಭ್ರಮವನ್ನು ಮೀರಿ ಪ್ರವಾಸೋದ್ಯಮವನ್ನು ಹೆಚ್ಚಿಸಲು ಮತ್ತು ಬ್ರಾಂಡ್ ಮೈಸೂರನ್ನು ಪ್ರಚಾರ ಮಾಡಲು ಉತ್ಸುಕವಾಗಿರುವ ರಾಜ್ಯ ಸರ್ಕಾರವು ಸಂಜೆ ಪ್ರವಾಸಿಗರಿಗೆ ಮೈಸೂರು ಅರಮನೆಯನ್ನು ತೆರೆಯಲು ಚಿಂತಿಸಿದ್ದು, ಇನ್ನು ಮುಂದೆ ಜಿಲ್ಲಾಡಳಿತ ಮತ್ತು ಅರಮನೆ ಮಂಡಳಿಯು ರಾತ್ರಿ 9 ರವರೆಗೆ ಮೈಸೂರು ಅರಮನೆ ಪ್ರವಾಸಿಗರಿಗಾಗಿ ತೆರೆಯುವ ಬಗ್ಗೆ ಚಿಂತನೆ ನಡೆಸಿದೆ. ಅರಮನೆ ನಗರಿ ಮೈಸೂರಿನಲ್ಲಿ ಕ್ರಿಸ್ಮಸ್, ಹೊಸ ವರ್ಷಾಚರಣೆಗೆ ಸಿದ್ಧತೆಗಳು ನಡೆಯುತ್ತಿದ್ದು, ಮೈಸೂರು ಅರಮನೆಯಲ್ಲಿ ಮಾಗಿ ಉತ್ಸವಕ್ಕೆ ವೇದಿಕೆ ಸಿದ್ಧವಾಗಿದೆ. ಇದರ ನಡುವೆ ಮೈಸೂರು ಅರಮನೆಯು ಪ್ರಪಂಚದಾದ್ಯಂತ […]

ಇನ್ನು ಮುಂದೆ ರಾತ್ರಿ 9 ಗಂಟೆ ವರೆಗೂ ಪ್ರವಾಸಿಗರಿಗೆ ಮೈಸೂರು ಅರಮನೆ ಭೇಟಿಗೆ ಅವಕಾಶ | ಜಿಲ್ಲಾಡಳಿತದಿಂದ ಚಿಂತನೆ Read More »

ಹೆಸರಾಂತ ನಟಿ ಹೇಮಾ ಚೌಧುರಿ ಅಸ್ವಸ್ಥ | ಆಸ್ಪತ್ರೆಗೆ ದಾಖಲು

ಕನ್ನಡದ ಹೆಸರಾಂತ ಹಿರಿಯ ನಟಿ ಹೇಮಾ ಚೌಧುರಿ ಅನಾರೋಗ್ಯಕ್ಕೊಳಗಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ದಿನಗಳ ಹಿಂದೆ ಹೇಮಾ ಚೌಧರಿಗೆ ಬ್ರೈನ್ ಹ್ಯಾಮರೇಜ್ ಆಗಿತ್ತು. ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೇಮಾ ಅವರ ಮಗ ಐರ್ಲೆಂಡ್‌ನಲ್ಲಿ ಇದ್ದಾರೆ. ಅವರ ಆಗಮನಕ್ಕಾಗಿ ಕಾಯಲಾಗುತ್ತಿದೆ. ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ತಿಳಿದು ಬಂದಿದೆ. ಹಿರಿಯ ನಟಿ ಶೀಘ್ರ ಗುಣಮುಖರಾಗಿ ಮೊದಲಿನಂತಾಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಇತ್ತೀಚೆಗೆ

ಹೆಸರಾಂತ ನಟಿ ಹೇಮಾ ಚೌಧುರಿ ಅಸ್ವಸ್ಥ | ಆಸ್ಪತ್ರೆಗೆ ದಾಖಲು Read More »

ವಿವಾಹಿತ ಮಹಿಳೆಯೊಂದಿಗೆ ಯುವಕನ ಸಲುಗೆಯ ಫೋಟೋ ವೈರಲ್ | ಇಬ್ಬರೂ ಆತ್ಮಹತ್ಯೆಗೆ ಶರಣು

ಮೈಸೂರು:  ವಿವಾಹಿತ ಮಹಿಳೆಯೊಂದಿಗೆ ಯುವಕ ಸಲುಗೆ ಬೆಳೆಸಿದ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಿಂದ ಭಯಗೊಂಡ ಮಹಿಳೆ ಹಾಗೂ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ಇಂದು ನಡೆದಿದೆ. ಹುಣಸೂರು ಪಟ್ಟಣದ ಕಲ್ಕುಣಿಗೆ ನಿವಾಸಿಗಳಾದ ಶೃತಿ (28) ಹಾಗೂ ಮುರಳಿ (20) ಆತ್ಮಹತ್ಯೆ ಮಾಡಿಕೊಂಡವರು. ವಿವಾಹಿತ ಮಹಿಳೆ ಜೊತೆ ಯುವಕ ಸಲುಗೆಯಿಂದ ಇದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​​ ಆಗಿದೆ. ಫೋಟೋ ಕಣ್ಣಿಗೆ ಬೀಳುತ್ತಿದ್ದಂತೆ ಮನನೊಂದ ಗೃಹಿಣಿ ಶೃತಿ

ವಿವಾಹಿತ ಮಹಿಳೆಯೊಂದಿಗೆ ಯುವಕನ ಸಲುಗೆಯ ಫೋಟೋ ವೈರಲ್ | ಇಬ್ಬರೂ ಆತ್ಮಹತ್ಯೆಗೆ ಶರಣು Read More »

ಮೀನುಗಾರಿಕೆ ದೋಣಿ ಮುಳುಗಿ ಇಬ್ಬರು ಮೃತ್ಯು !

ಮೀನುಗಾರಿಕೆ ದೋಣಿ ಮುಳುಗಿ ಇಬ್ಬರು ಮೀನುಗಾರರು ಮೃತಪಟ್ಟ ಘಟನೆ ಶಿರೂರು ಕಳುವಿಷ್ಣುವಿನಲ್ಲಿ ನಡೆದಿದೆ. ಹಡವಿನಕೋಣೆ ಶಿರೂರಿನ ಅಬ್ದುಲ್ ಸತ್ತರ್ (45 ) ಹಾಗೂ ಕುದ್ವಾಯಿ ರೋಡ್, ಭಟ್ಕಳ ನಿವಾಸಿ ಮಿಸ್ಟಾಯೂಸುಫ್ (48) ಮೃತಪಟ್ಟವರು ಎಂದು ಗುರತಿಸಲಾಗಿದೆ. ಶಿರೂರು ಕಳುಹಿತ್ತುವಿನಿಂದ ಮೀನುಗಾರಿಕೆ ತೆರಳಿದ್ದ ಮೂರು ಜನ ಮೀನುಗಾರರು ಮೀನುಗಾರಿಕೆ ಮುಗಿಸಿ ವಾಪಾಸ್ಸು ಬರುವಾಗ ಮುಂಜಾನೆ ವೇಳೆಗೆ ಶಿರೂರು ಕಳುಹಿತ್ತು ಅಳಿವೆ ಸಮೀಪ ಅರಬ್ಬಿ ಸಮುದ್ರದಲ್ಲಿ ದೋಣಿ ಮಗುಚಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತೋರ್ವ ಬುಡ್ಡು ಮುಖಾರ್

ಮೀನುಗಾರಿಕೆ ದೋಣಿ ಮುಳುಗಿ ಇಬ್ಬರು ಮೃತ್ಯು ! Read More »

ರೈತರ ಬೆಳೆಸಾಲ ಬಡ್ಡಿ ಮನ್ನಾ | ಬೆಳಗಾವಿ ಅಧಿವೇಶನದಲ್ಲಿ ಸಿಎಂ ಘೋಷಣೆ

ಬೆಳಗಾವಿ: ಕೃಷಿ ಸಾಲವನ್ನು ಪಡಕೊಂಡು ಅಸಲನ್ನು ಮರುಪಾವತಿ ಮಾಡುವವರಿಗೆ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಬೆಳಗಾವಿಯಲ್ಲಿ ನಡೆದ ಚಳಿಗಾಲದ ವಿಧಾನಸಭೆ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಕಲಾಪದಲ್ಲಿ ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಈ ವಿಚಾರ ತಿಳಿಸಿದರು. ರೈತರ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರಲಿಲ್ಲ. ಆದರೂ ಮಾಡುತ್ತೇವೆ. ಬರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಹಕಾರ ಸಂಘಗಳು ಮತ್ತು ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ

ರೈತರ ಬೆಳೆಸಾಲ ಬಡ್ಡಿ ಮನ್ನಾ | ಬೆಳಗಾವಿ ಅಧಿವೇಶನದಲ್ಲಿ ಸಿಎಂ ಘೋಷಣೆ Read More »

ಸಂಸತ್ ದಾಳಿಕೋರ ಆರು ಮಂದಿಯಲ್ಲಿ ಇನ್ನಿಬ್ಬರಿಗಾಗಿ ಶೋಧ! | ಸಂಸದ ಪ್ರತಾಪ್ ಸಿಂಹ ಕಚೇರಿ ಮುಂಭಾಗ ಪ್ರತಿಭಟನೆ!!

ಬುಧವಾರ ಸಂಸತ್ ಮೇಲೆ ದಾಳಿ ನಡೆಸಿದ ಆರು ಮಂದಿಯಲ್ಲಿ ಇನ್ನಿಬ್ಬರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಮೈಸೂರು ಮೂಲದ ಮನೋರಂಜನ್ ಸಹಿತ ಇತರ ನಾಲ್ವರನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಆರು ಮಂದಿಯ ಬೇರೆ ಬೇರೆ ರಾಜ್ಯದವರಾಗಿರುವುದರಿಂದ ಯಾವುದೋ ಉದ್ದೇಶವಿಟ್ಟುಕೊಂಡೇ ಈ ಕೃತ್ಯ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇವರ ಹಿಂದಿರುವವರ್ಯಾರು ಎಂಬ ಹಿನ್ನೆಲೆಯಲ್ಲೂ ಚರ್ಚೆ ನಡೆಯುತ್ತಿದ್ದು, ತನಿಖೆ ನಡೆಯುತ್ತಿದೆ. ಈ ನಡುವೆ ಸಂಸದ ಪ್ರತಾಪ್ ಸಿಂಹ ಅವರ ಬಂಧನಕ್ಕೆ ಆಗ್ರಹಿಸಿ ಮೈಸೂರಿನ ಅವರ ಕಚೇರಿಗೆ ಮುತ್ತಿಗೆ ಹಾಕಲಾಯಿತು. ಯುವ ಕಾಂಗ್ರೆಸ್

ಸಂಸತ್ ದಾಳಿಕೋರ ಆರು ಮಂದಿಯಲ್ಲಿ ಇನ್ನಿಬ್ಬರಿಗಾಗಿ ಶೋಧ! | ಸಂಸದ ಪ್ರತಾಪ್ ಸಿಂಹ ಕಚೇರಿ ಮುಂಭಾಗ ಪ್ರತಿಭಟನೆ!! Read More »

ಕುಕ್ಕೆ ಕ್ಷೇತ್ರಕ್ಕೆ ಇಸ್ರೋ ನಿರ್ದೇಶಕ ರಾಮಕೃಷ್ಣ ಭೇಟಿ

ಸುಬ್ರಹ್ಮಣ್ಯ: ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಟೆಲಿಮೆಟ್ರಿ ಟ್ರ್ಯಾಕಿಂಗ್ ಆಂಡ್ ಕಮಾಂಡ್ ನೆಟ್‌ವರ್ಕ್ ನಿರ್ದೇಶಕ ಬಿ.ಎನ್. ರಾಮಕೃಷ್ಣ ಅವರು ಬುಧವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರು. ಕ್ಷೇತ್ರಕ್ಕೆ ಭೇಟಿ ನೀಡಿದ ಅವರು ಶ್ರೀ ದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ ವಿ.ಭಟ್, ಶೋಭಾ ಗಿರಿಧರ್, ಕುಮಾರಸ್ವಾಮಿ ವಿದ್ಯಾಸಂಸ್ಥೆಯ ಅಧ್ಯಕ್ಷ ಗಣೇಶ್ ಪ್ರಸಾದ್, ಪ್ರಾಂಶುಪಾಲ ಸಂಕೀರ್ತ್ ಹೆಬ್ಬಾರ್, ದೇವಸ್ಥಾನದ ಶಿಷ್ಟಾಚಾರ ಅಧಿಕಾರಿಗಳಾದ ಜಯರಾಮ ರಾವ್,

ಕುಕ್ಕೆ ಕ್ಷೇತ್ರಕ್ಕೆ ಇಸ್ರೋ ನಿರ್ದೇಶಕ ರಾಮಕೃಷ್ಣ ಭೇಟಿ Read More »

ದೇಹದ ಮುಕ್ಕಾಲು ಭಾಗ ತಿಂದ ನರಭಕ್ಷಕ ಹುಲಿ!!

ಹುಲಿ ದಾಳಿಗೆ ಸಿಲುಕಿದ ವ್ಯಕ್ತಿಯೋರ್ವನ ಮೃತದೇಹ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಆಡಿನ ಕಣಿವೆ ಸಮೀಪದಲ್ಲಿ ಪತ್ತೆಯಾಗಿರುವ ಘಟನೆ ಮಂಗಳವಾರ ನಡೆದಿದೆ. ಆಡಿನಕಣಿವೆಯ ಬಸವಯ್ಯ (54) ಮೃತ ವ್ಯಕ್ತಿ. ಬಸವಯ್ಯ ಬುಡಕಟ್ಟು ಜನಾಂಗಕ್ಕೆ ಸೇರಿದವನು. ಎರಡು ದಿನಗಳ ಹಿಂದೆ ಕುರಿಗಳನ್ನು ಮೇಯಿಸಲು ಕಾಡಿಗೆ ತೆರಳಿದ್ದ. ನಂತರ ಮನೆಗೆ ವಾಪಾಸ್ಸಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಅಭಯಾರಣ್ಯದ ಒಳಗೆ ಮೃತದೇಹ ಪತ್ತೆಯಾಗಿದೆ. ಆತನ ಕಾಲು, ಎದೆಯ ಭಾಗವನ್ನು ಹುಲಿ ತಿಂದು ಹಾಕಿದ್ದು, ಕೇವಲ ಹೊಟ್ಟೆ ಭಾಗವನ್ನು ಮಾತ್ರ ಬಿಟ್ಟಿದೆ. ಮುಕ್ಕಾಲು

ದೇಹದ ಮುಕ್ಕಾಲು ಭಾಗ ತಿಂದ ನರಭಕ್ಷಕ ಹುಲಿ!! Read More »

ಜೆಸಿಬಿ ಏರಿದ ನವ ಜೋಡಿ! | ಕೋಳಿ ಅಂಕಕ್ಕೂ ಸಾಕ್ಷಿಯಾಯಿತು ಮದುವೆ!!

ಮದುವೆ ಮುಗಿದ ಮೇಲೆ ನವ ದಂಪತಿ ವರನ ಮನೆಗೆ ಹೋಗಲು ಕಾರು ಬದಲಾಗಿ ಜೆಸಿಬಿ ಅರೇಂಜ್‌ ಮಾಡಲಾಗಿತ್ತು. ಜೆಸಿಬಿಯ ಮುಂಭಾಗಕ್ಕೆ ವಧು – ವರರು ಕೂರುವಂತಹ ಆಸನವನ್ನು ಅಳವಡಿಸಿ, ಜೆಸಿಬಿಯನ್ನು ಹೂಗಳಿಂದ ಅಲಂಕೃತಗೊಳಿಸಿ ಕರೆದೊಯ್ಯಲಾಯಿತು. ರಸ್ತೆಯುದ್ದಕ್ಕೂ ನವ ದಂಪತಿಯ ಸ್ನೇಹಿತರು ಹುಲಿ ಕುಣಿತಕ್ಕೆ ಹೆಜ್ಜೆ ಹಾಕುತ್ತಾ ಸಾಥ್‌ ನೀಡಿದರು. ಬ್ರಹ್ಮಾವರದಲ್ಲಿ ನಡೆದ ಮಿಥುನ್‌ ಹಾಗೂ ಪೂಜಾ ಜೋಡಿಯ ವಿವಾಹ ಕಾರ್ಯಕ್ರಮವು ಎಲ್ಲರ ಗಮನ ಸೆಳೆಯಿತು. ಮದುವೆ ಮಂಟಪದಲ್ಲಿಯೇ ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ ಕೋಳಿ ಅಂಕವೂ ನಡೆಯಿತು. ವಧು

ಜೆಸಿಬಿ ಏರಿದ ನವ ಜೋಡಿ! | ಕೋಳಿ ಅಂಕಕ್ಕೂ ಸಾಕ್ಷಿಯಾಯಿತು ಮದುವೆ!! Read More »

ಅನೈತಿಕ ಸಂಬಂಧಕ್ಕೆ ಅಡ್ಡಿ: ಪತ್ನಿಯ ಹತ್ಯೆಗೈದನೇ ಪತಿ?

ಮನೆಯಲ್ಲಿದ್ದ ಗೃಹಿಣಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ. ಗೃಹಿಣಿ ಶ್ವೇತಾ (31) ಅನುಮಾನಾಸ್ಪದವಾಗಿ ಮೃತಪಟ್ಟಿರುವ ದುರ್ದೈವಿ. ಮೃತ ಗೃಹಿಣಿ ಪೋಷಕರಿಂದ ಪತಿಯ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಪತ್ನಿ ಶ್ವೇತಾ ಮೃತಪಟ್ಟ ಬಳಿಕ ತರಾತುರಿಯಲ್ಲಿ ಅಂತ್ಯಕ್ರಿಯೆಗೆ ಸಿದ್ದತೆ ನಡೆಸಿದ್ದ ಪತಿ. ಆದರೆ ಮನೆಯವರಿಗೆ ಮಗಳ ಸಾವಿನ ಬಗ್ಗೆ ಅನುಮಾನಗೊಂಡು ಅಂತ್ಯಕ್ರಿಯೆ ತಡೆದು ಶವ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದರು. ಆರೋಗ್ಯವಾಗಿ ಮಗಳು ಸುಖಾಸುಮ್ಮನೆ ಸಾವಿಗೀಡಾಗಲು ಸಾಧ್ಯವಿಲ್ಲ. ನಮ್ಮ ಮಗಳಿಗೆ ಪಾಯಿಸನ್ ಇಂಜೆಕ್ಷನ್ ಚುಚ್ಚಿ

ಅನೈತಿಕ ಸಂಬಂಧಕ್ಕೆ ಅಡ್ಡಿ: ಪತ್ನಿಯ ಹತ್ಯೆಗೈದನೇ ಪತಿ? Read More »

error: Content is protected !!
Scroll to Top