ರಾಜ್ಯ

ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ : ಕರ್ನಾಟಕದ ಹಲವೆಡೆ ಇ.ಡಿ. ದಾಳಿ

ಲೇಪನ ಮಾಡುವ ನೆಪದಲ್ಲಿ ದೇವರ ಕೋಟಿಗಟ್ಟಲೆ ಮೌಲ್ಯದ ಚಿನ್ನ ಕಳ್ಳತನ ತಿರುವನಂತಪುರ: ಶಬರಿಮಲೆ ದೇವಳದ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು, ಬಳ್ಳಾರಿ ಸೇರಿದಂತೆ ಹಲವೆಡೆ ಇ.ಡಿ ಅಧಿಕಾರಿಗಳು ದಾಳಿ ಮಾಡಿ ಪರಿಶೋಧನೆ ನಡೆಸಿದ್ದಾರೆ. ಈ ಪ್ರಕರಣ ಸಂಬಂಧ ಕೇರಳದ ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಇದೀಗ ಇ.ಡಿ ಎಂಟ್ರಿಕೊಟ್ಟಿದೆ. ಬೆಂಗಳೂರು, ಬಳ್ಳಾರಿ ಹಾಗೂ ತಿರುವನಂತಪುರಂದ ಹಲವೆಡೆ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದೆ. ಚಿನ್ನ ಕಳ್ಳತನದ ಆರೋಪದಲ್ಲಿ ಜೈಲುಪಾಲಾಗಿರುವ ಗೋವರ್ಧನ್ ಒಡೆತನದ ರೊದ್ದಂ ಜ್ಯುವೆಲರಿ ಶಾಪ್ ಹಾಗೂ […]

ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ : ಕರ್ನಾಟಕದ ಹಲವೆಡೆ ಇ.ಡಿ. ದಾಳಿ Read More »

ರಾಸಲೀಲೆ ಪ್ರಕರಣ : ಡಿಜಿಪಿ ರಾಮಚಂದ್ರ ರಾವ್ ಅಮಾನತು

ತನಿಖೆ ಬಾಕಿಯಿರುವ ಕಾರಣವೊಡ್ಡಿ ರಾತ್ರಿ ಅಮಾನತು ಆದೇಶ ಹೊರಡಿಸಿದ ಸರ್ಕಾರ ಬೆಂಗಳೂರು: ರಾಸಲೀಲೆ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕಠಿಣ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ನಿನ್ನೆ ಮಧ್ಯಾಹ್ನದ ಹೊತ್ತಿಗೆ 10 ದಿನಗಳ ಕಡ್ಡಾಯ ರಜೆ ಮೇಲೆ ತೆರಳಿದ್ದ ರಾಜಚಂದ್ರ ರಾವ್‌ ಅವರನ್ನು ರಾತ್ರಿ ಹೊತ್ತಿಗೆ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ವಿಚಾರಣೆ ಇನ್ನೂ ಬಾಕಿಯಿರುವ ಕಾರಣ ಅಮಾನತುಗೊಳಿಸುರುವುದಾಗಿ ಆದೇಶದಲ್ಲಿ ತಿಳಿಸಿದೆ.

ರಾಸಲೀಲೆ ಪ್ರಕರಣ : ಡಿಜಿಪಿ ರಾಮಚಂದ್ರ ರಾವ್ ಅಮಾನತು Read More »

ಕಚೇರಿಯಲ್ಲಿ ರಾಸಲೀಲೆ : ಡಿಜಿಪಿ ರಾಮಚಂದ್ರ ರಾವ್‌ಗೆ ಕಡ್ಡಾಯ ರಜೆ ಶಿಕ್ಷೆ!

ವಿಡಿಯೋ ಬಹಿರಂಗವಾದ ಬಳಿಕ ತೀವ್ರ ಮುಜುಗರ ಅನುಭವಿಸುತ್ತಿರುವ ಗೃಹ ಇಲಾಖೆ ಬೆಂಗಳೂರು: ಕಚೇರಿಯ ಒಳಗೆ ಸಮವಸ್ತ್ರದಲ್ಲಿರುವಾಗಲೇ ಹಲವು ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿದ ವಿಡಿಯೋ ಬಹಿರಂಗವಾದ ಬೆನ್ನಿಗೆ ಡಿಜಿಪಿ ರಾಮಚಂದ್ರ ರಾವ್‌ ಅವರನ್ನು ಸರ್ಕಾರ ಕಡ್ಡಾಯ ರಜೆ ಮೇಲೆ ಕಳುಹಿಸಿದೆ. ನಟಿ ರನ್ಯಾರಾವ್ ಒಳಗೊಂಡ ವಿದೇಶದಿಂದ ಚಿನ್ನ ಕಳ್ಳ ಸಾಗಾಟ ಪ್ರಕರಣದಲ್ಲೂ ಡಿಜಿಪಿ ರಾಮಚಂದ್ರ ರಾವ್‌ ಹೆಸರು ಬಲವಾಗಿ ಕೇಳಿಬಂದಿತ್ತು. ಆಗಲೂ ಸರ್ಕಾರ ಅವರನ್ನು ಕೆಲದಿನಗಳ ಮಟ್ಟಿಗೆ ರಜೆ ಮೇಲೆ ಕಳುಹಿಸಿ ಕೈತೊಳೆದುಕೊಂಡಿತ್ತು. ನಾಗರಿಕ ಹಕ್ಕು ಜಾರಿ

ಕಚೇರಿಯಲ್ಲಿ ರಾಸಲೀಲೆ : ಡಿಜಿಪಿ ರಾಮಚಂದ್ರ ರಾವ್‌ಗೆ ಕಡ್ಡಾಯ ರಜೆ ಶಿಕ್ಷೆ! Read More »

ಧಾರ್ಮಿಕ ಭಾವನೆಗೆ ಧಕ್ಕೆ: ಹಿಂದೂ ನಾಯಕಿಯ ವಿರುದ್ಧ ದೂರು ದಾಖಲು

ಬೆಳಗಾವಿ: ಹಿಂದೂ ಸಮ್ಮೇಳನದ ಶೋಭಾಯಾತ್ರೆಯ ವೇಳೆ ಹಿಂದೂ ನಾಯಕಿ ಹರ್ಷಿತಾ ಠಾಕೂರ್ ಎಂಬವರು ದರ್ಗಾ‌ವೊಂದರ ಕಡೆಗೆ ಬಾಣ ಬಿಟ್ಚಂತೆ ಕೈ ಸನ್ನೆ ಮಾಡಿದ್ದು ಅವರ ವಿರುದ್ಧ ದೂರು ದಾಖಲಾಗಿದೆ. ಧಾರ್ಮಿಕ ಭಾವನೆಗೆ ‌ಧಕ್ಕೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಮಚ್ಚೆ ಗ್ರಾಮದಲ್ಲಿ ನಡೆದ ಶೋಭಾಯಾತ್ರೆಯ ಸಂದರ್ಭದಲ್ಲಿ ತೆರೆದ ವಾಹನದಲ್ಲಿ ನಿಂತಿದ್ದ ಹರ್ಷಿತಾ ದರ್ಗಾದತ್ತ ಬಾಣ ಬಿಡುವಂತೆ ಕೈ ಚಾಚಿದ್ದರು. ಆಗ ನೆರೆದಿದ್ದವರು ಜೈ ಶ್ರೀ ರಾಮ್ ಘೋಷಣೆ ಕೂಗಿದ್ದಾರೆ. ಹಾಗೆಯೇ ಸಮಾವೇಶದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂಬುದಾಗಿಯೂ ದೂರಿನಲ್ಲಿ

ಧಾರ್ಮಿಕ ಭಾವನೆಗೆ ಧಕ್ಕೆ: ಹಿಂದೂ ನಾಯಕಿಯ ವಿರುದ್ಧ ದೂರು ದಾಖಲು Read More »

ಸಾರ್ವಜನಿಕರ ಟೀಕೆಗೆ ಗುರಿಯಾದ ಡಿಜಿಪಿ ರಾಮಚಂದ್ರ ರಾವ್: ಕಾರಣ ಏನು ಗೊತ್ತಾ?

ಬೆಂಗಳೂರು: ದುಬೈ‌ನಿಂದ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿ ಶಿಕ್ಷೆಗೆ ಒಳಗಾದ ನಟಿ ರಾನ್ಯಾ ರಾವ್ ಮಲ ತಂದೆ ಡಿಜಿಪಿ ರಾಮಚಂದ್ರ ರಾವ್ ಅವರು ಕಚೇರಿಯಲ್ಲೇ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋಗಳು ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ರಾನ್ಯಾ ಚಿನ್ನ ಕಳ್ಳ ಸಾಗಾಟ ಮಾಡಿರುವ ಪ್ರಕರಣದಲ್ಲಿ ಪಾರದರ್ಶಕತೆ ಕಾಪಾಡಲು ರಾಮಚಂದ್ರ ರಾವ್ ಅವರನ್ನು ಕಡ್ಡಾಯ ರಜೆಯಲ್ಲಿ ಸರ್ಕಾರ ಕಳುಹಿಸಿದೆ. ಇದೇ ಸಮಯದಲ್ಲಿ ಅವರು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವ ವಿಡಿಯೋಗಳು ವೈರಲ್ ಆಗಿರುವುದಾಗಿದೆ. ಡಿಜಿಪಿ ಕಚೇರಿಯೊಳಗೆಯೇ ಈ

ಸಾರ್ವಜನಿಕರ ಟೀಕೆಗೆ ಗುರಿಯಾದ ಡಿಜಿಪಿ ರಾಮಚಂದ್ರ ರಾವ್: ಕಾರಣ ಏನು ಗೊತ್ತಾ? Read More »

ಲಕ್ಕುಂಡಿ ಉತ್ಖನನದಲ್ಲಿ ಪತ್ತೆಯಾಯಿತು ಶಿವಲಿಂಗ, ಕೊಡಲಿ, ನಾಗರಹಾವು…

ಐತಿಹಾಸಿಕ ಗ್ರಾಮವನ್ನು ಅಗೆದಷ್ಟು ಸಿಗುತ್ತಿದೆ ಅಚ್ಚರಿಯ ವಸ್ತುಗಳು ಬೆಂಗಳೂರು : ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯ ಮುಂದುವರಿದಂತೆ ಒಂದೊಂದೇ ರಹಸ್ಯ ಬಹಿರಂಗವಾಗುತ್ತಿದೆ. ಗ್ರಾಮದ ಮನೆಯೊಂದರ ಅಡಿಪಾಯ ತೆಗೆಯುವಾಗ ನಿಧಿ ಸಿಕ್ಕ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಉತ್ಖನನ ಕಾರ್ಯ ಭರದಿಂದ ಸಾಗುತ್ತಿದ್ದು, ದೇವಸ್ಥಾನಗಳ ಅವಶೇಷಗಳು ಸೇರಿದಂತೆ ಶಿಲ್ಪಕಲೆಗಳ ರಾಶಿ ರಾಶಿ ಕುರುಹುಗಳು ಪತ್ತೆಯಾಗುತ್ತಿವೆ. ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಉತ್ಖನನ ನಡೆಯುತ್ತಿರುವ ವೇಳೆ ಪಕ್ಕದಲ್ಲಿದ್ದ ಖಾಸಗಿ ಸಂಸ್ಥೆಯ ಶಾಲೆಯನ್ನು ಜೆಸಿಬಿ ಮೂಲಕ

ಲಕ್ಕುಂಡಿ ಉತ್ಖನನದಲ್ಲಿ ಪತ್ತೆಯಾಯಿತು ಶಿವಲಿಂಗ, ಕೊಡಲಿ, ನಾಗರಹಾವು… Read More »

ಟಿಪ್ಪರ್ – ಬೈಕ್ ನಡುವೆ ಅಪಘಾತ: ಮೂರು ಸಾವು

ಬೆಂಗಳೂರು: ಟಿಪ್ಪರ್ – ಬೈಕ್ ನಡುವೆ ನಡೆದ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ದೇವನಹಳ್ಳಿ ಬಳಿ ನಡೆದಿದೆ. ಮೃತಪಟ್ಟವರು ಹುಣಸಮಾರೇನಹಳ್ಳಿಯ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಓರ್ವನನ್ನು ತೌಸೀಫ್ ಎಂದು ಗುರುತಿಸಲಾಗಿದೆ. ಇನ್ನಿಬ್ಬರ ಗುರುತು ಪತ್ತೆಯಾಗಿಲ್ಲ. ಮೂವರು ವಿದ್ಯಾರ್ಥಿಗಳು ಬೂದಿಗೆರೆ ಕಡೆಗೆ ಹೊರಟಿದ್ದಾಗಿ ತಿಳಿದು ಬಂದಿದೆ. ಈ ಸಂದರ್ಭ ಬೈಕ್ ಡಿವೈಡರ್‌ಗೆ ಢಿಕ್ಕಿ ಹೊಡೆದು ಬಳಿಕ ಎದುರಿನಿಂದ ಬರುತ್ತಿದ್ದ ಟಿಪ್ಪರ್‌ಗೆ ಢಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಮೂರೂ ದೇಹಗಳು ನಜ್ಜುಗುಜ್ಜಾಗಿದೆ ಎಂದು ತಿಳಿದು ಬಂದಿದೆ. ಘಟನೆಯ

ಟಿಪ್ಪರ್ – ಬೈಕ್ ನಡುವೆ ಅಪಘಾತ: ಮೂರು ಸಾವು Read More »

ಬೈಕ್ – ಟಿಪ್ಪರ್ ‌ನಡುವೆ ಅಪಘಾತ: ಓರ್ವ ಸಾವು, ಮತ್ತೊಬ್ಬ ಗಂಭೀರ

ಪಾವಗಡ: ಬೈಕ್ ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದು, ಮತ್ತೊಬ್ಬನಿಗೆ ಗಂಭೀರ ಪ್ರಮಾಣದ ಗಾಯಗಳಾಗಿರುವ ಘಟನೆ ಪಾವಗಡದಲ್ಲಿ ನಡೆದಿದೆ. ಮೃತನನ್ನು ಬೈಕ್ ಸವಾರ ಅಂಬರೀಶ್ (25) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಭಾಸ್ಕರ್ ಅವರನ್ನು ಚಿಕಿತ್ಸೆಗಾಗಿ ತುಮಕೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಬೈಕ್ ಸವಾರರು ಪಾವಗಡದಿಂದ ಮಧುಗಿರಿಯ ಕಡೆಗೆ ಹೊರಟಿದ್ದರು. ಈ ವೇಳೆ ಇವರ ಬೈಕ್‌ಗೆ ಎದುರಿನಿಂದ ಬಂದ ಟಿಪ್ಪರ್ ಢಿಕ್ಕಿ ಹೊಡೆದಿದೆ. ಪರಿಣಾಮ ಅಂಬರೀಶ್ ಮೃತಪಟ್ಟು, ಭಾಸ್ಕರ್‌ಗೆ ಗಂಭೀರ ಗಾಯಗಳಾಗಿರುವುದಾಗಿದೆ. ಪಾವಗಡ ಪೊಲೀಸ್

ಬೈಕ್ – ಟಿಪ್ಪರ್ ‌ನಡುವೆ ಅಪಘಾತ: ಓರ್ವ ಸಾವು, ಮತ್ತೊಬ್ಬ ಗಂಭೀರ Read More »

ಬೀದಿ ದಾಸಯ್ಯನನ್ನು ‌ಸಿಎಂ ಮಾಡಿದ್ರೂ ಒಪ್ಪಿಕೊಳ್ಳಬೇಕಾಗುತ್ತದೆ: ಜಮೀರ್ ಅಹ್ಮದ್ ಹೀಗೆಂದಿದ್ಯಾಕೆ?

ಹುಬ್ಬಳ್ಳಿ: ಸಿದ್ದರಾಮಯ್ಯ ಇವರು 2028 ರ ವರೆಗೂ ಮುಖ್ಯಮಂತ್ರಿಯಾಗಿ ಇರುತ್ತಾರೆ. ಬೀದಿ ದಾಸಯ್ಯನನ್ನು ಸಿಎಂ ಎಂಬುದಾಗಿ ಹೈಕಮಾಂಡ್ ಘೋಷಣೆ ಮಾಡಿದರೂ ನಾವೆಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ‌ಸ್ಥಾನ ಸದ್ಯಕ್ಕಂತೂ ಖಾಲಿ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆ ಸ್ಥಾನದಲ್ಲಿ ಮುಂದುವರೆಯುತ್ತಾರೆ ಎನ್ನುವ ಅಚಲ ನಂಬಿಕೆ ನನ್ನದು. ಕೆಲವರು ನವೆಂಬರ್ ಕ್ರಾಂತಿಯಾಗುತ್ತದೆ ಎಂದು ಹೇಳಿದ್ದರು. ಆದರೆ ಯಾವ ಕ್ರಾಂತಿಯೂ ಆಗಲಿಲ್ಲ. ಮುಂದೆ ಯುಗಾದಿ ಬರುತ್ತದೆಯೇ

ಬೀದಿ ದಾಸಯ್ಯನನ್ನು ‌ಸಿಎಂ ಮಾಡಿದ್ರೂ ಒಪ್ಪಿಕೊಳ್ಳಬೇಕಾಗುತ್ತದೆ: ಜಮೀರ್ ಅಹ್ಮದ್ ಹೀಗೆಂದಿದ್ಯಾಕೆ? Read More »

ಅವಧಿ ಮೀರಿದ ಬಿಯರ್‌ ಕುಡಿದು ಯುವಕರು ಅಸ್ವಸ್ಥ

ಜನಪ್ರಿಯ ಬ್ರಾಂಡ್‌ನ ಅವಧಿ ಮೀರಿದ ಬಿಯರ್‌ ಪೂರೈಸಿದ ಬಾರ್‌ನವರು ಬೆಂಗಳೂರು : ಅವಧಿ ಮೀರಿದ ಬಿಯರ್ ಕುಡಿದ ಪರಿಣಾಮ ಕೆಲವರು ವಾಂತಿ ಮಾಡಿಕೊಂಡು ಅಸ್ವಸ್ಥರಾಗಿ ಆಸ್ಪತ್ರೆ ಪಾಲಾದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಹುಳದೇನಹಳ್ಳಿಯ ವೆಂಕಟ್ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ನಡೆದಿದೆ. ಗುರುವಾರ ಸಂಜೆ ಯುವಕರ ಗುಂಪೊಂದು ಒಂದು ಕೇಸ್ ಬಡ್‌ವೈಸರ್‌ ಬಿಯರ್ ಖರೀದಿಸಿ ಸೇವಿಸಿದ ನಂತರ ವಾಂತಿ ಆಗಿದ್ದು, ಅವರನ್ನು ತಕ್ಷಣ ಮಾಲೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಬ್ಯುಲೆನ್ಸ್ ಬಳಸಿದರೆ ಮುಜುಗರ ಆಗುತ್ತದೆ ಎಂಬ ಕಾರಣಕ್ಕಾಗಿ

ಅವಧಿ ಮೀರಿದ ಬಿಯರ್‌ ಕುಡಿದು ಯುವಕರು ಅಸ್ವಸ್ಥ Read More »

error: Content is protected !!
Scroll to Top