ರಾಜ್ಯ

ಬಿಜೆಪಿಯಲ್ಲಿ ತೀವ್ರಗೊಂಡ ಯತ್ನಾಳ್‌ ಪರ-ವಿರೋಧ ಕಚ್ಚಾಟ

ಪಕ್ಷದಿಂದ ಉಚ್ಚಾಟಿಸಲು ವಿಜಯೇಂದ್ರ ಬಣದ ಬಿಗಿಪಟ್ಟು ಬೆಂಗಳೂರು: ಬಿಜೆಪಿಯಲ್ಲಿದ್ದುಕೊಂಡೂ ವಕ್ಫ್‌ ವಿರುದ್ಧ ತನ್ನದೇ ಪ್ರತ್ಯೇಕ ಹೋರಾಟ ನಡೆಸುತ್ತಿರುವ ವಿಜಯಪುರದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಲ್‌ ವಿರುದ್ಧ ಯಡಿಯೂರಪ್ಪ ಬಣದ ಕೂಗು ಜೋರಾಗಿದ್ದು, ಅವರನ್ನು ಪಕ್ಷದಿಂದಲೇ ಉಚ್ಚಾಟಿಸಬೇಕೆಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ.ಸದಾ ಯಡಿಯೂರಪ್ಪ ಪರಿವಾರವನ್ನು ಟೀಕಿಸುತ್ತಾ ಬಿಜೆಪಿಗೆ ತಲೆನೋವಾಗಿದ್ದ ಯತ್ನಾಳ್‌ ವಿರುದ್ಧ ಉಪಚುನಾವಣೆ ಸೋಲಿನ ಬಳಿಕ ಯಡಿಯೂರಪ್ಪ ನಿಷ್ಠರು ಸಿಡಿದೆದ್ದಾರೆ. ಸೋಲಿಗೆ ಯತ್ನಾಳ್‌ ಹೇಳಿಕೆಗಳೇ ಕಾರಣ ಎಂದು ಸೋಲನ್ನು ಅವರ ತಲೆಗೆ ಕಟ್ಟಿದ್ದು ಮಾತ್ರವಲ್ಲದೆ […]

ಬಿಜೆಪಿಯಲ್ಲಿ ತೀವ್ರಗೊಂಡ ಯತ್ನಾಳ್‌ ಪರ-ವಿರೋಧ ಕಚ್ಚಾಟ Read More »

ಕೋಟಿಗಟ್ಟಲೆ ರೂಪಾಯಿ ವಂಚನೆ : ತುಳುಚಿತ್ರ ನಿರ್ಮಾಪಕನ ವಿರುದ್ಧ ಕೇಸ್‌

ಬಂಟ್ವಾಳದ ಉದ್ಯಮಿಗೆ ಕೋಟಿಗಳ ವ್ಯವಹಾರದ ಕಥೆ ಹೇಳಿ ವಂಚನೆ ಬೆಂಗಳೂರು: ತುಳು-ಕನ್ನಡ ಚಿತ್ರ ನಿರ್ಮಾಪಕ ಅರುಣ್‌ ರೈ ವಿರುದ್ಧ ಕೋಟಿಗಟ್ಟಲೆ ರೂಪಾಯಿ ವಂಚನೆ ಕೇಸ್‌ ದಾಖಲಾಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ತುಳುಚಿತ್ರ ಜೀಟಿಗೆ ಸಹಿತ ತುಳು ಮತ್ತು ಕನ್ನಡದಲ್ಲಿ ಕೆಲವು ಚಿತ್ರಗಳನ್ನು ನಿರ್ಮಿಸಿರುವ ಅರುಣ್‌ ರೈ ಬಂಟ್ವಾಳದ ಉದ್ಯಮಿಯೊಬ್ಬರನ್ನು ಕೋಟಿ ಕೋಟಿಗಳ ಲೆಕ್ಕದಲ್ಲಿ ವ್ಯವಹಾರದ ಕಥೆ ಹೇಳಿ ವಂಚಿಸಿದ್ದಾರೆ ಎನ್ನಲಾಗಿದೆ.ಅರುಣ್ ರೈ ವಿರುದ್ಧ ಬೆಂಗಳೂರಿನ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕನ್ನಡದ ವೀರಕಂಬಳ ಸಿನಿಮಾವನ್ನು ಸಹ

ಕೋಟಿಗಟ್ಟಲೆ ರೂಪಾಯಿ ವಂಚನೆ : ತುಳುಚಿತ್ರ ನಿರ್ಮಾಪಕನ ವಿರುದ್ಧ ಕೇಸ್‌ Read More »

ಬೆಳಗಾವಿಯಲ್ಲಿ ಹಾಡುಹಗಲೇ ಯುವಕನಿಗೆ ಚಾಕು ಇರಿದು ಹತ್ಯೆ !

ಬೆಳಗಾವಿ: ಯುವಕನೊಬ್ಬನಿಗೆ ಚಾಕು ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಹಾಡುಹಗಲೇ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ಸೋಹಿಲ್ ಅಹ್ಮದ್ ಕಿತ್ತೂರು (17) ಚಾಕು ಇರಿತದಿಂದ ಹತ್ಯೆಯಾದವ. ಸೋಹಿಲ್ ಗ್ರಾಮದಲ್ಲಿ ಎಗ್‌ ರೈಸ್ ಅಂಗಡಿ ಇಟ್ಟುಕೊಂಡಿದ್ದು, ಆತನನ್ನು ಐದು ಮಂದಿಯ ತಂಡ ಹತ್ಯೆಗೈದಿದ್ದಾರೆ ಎಂದು ಶಂಕಿಸಲಾಗಿದೆ. ಈ ಹಿಂದೆ ಕೆಲವು ಯುವಕರಿಂದ ಮೃತನಿಗೆ ಕೊಲೆ ಬೆದರಿಕೆ ಬಂದಿತ್ತು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಮುರಗೋಡು ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ

ಬೆಳಗಾವಿಯಲ್ಲಿ ಹಾಡುಹಗಲೇ ಯುವಕನಿಗೆ ಚಾಕು ಇರಿದು ಹತ್ಯೆ ! Read More »

ಕೆರೆಕಟ್ಟೆ, ಶೃಂಗೇರಿ ಪರಿಸರದಲ್ಲಿ ನಕ್ಸಲರು?

ನಡುರಾತ್ರಿ ದಟ್ಟ ಕಾಡಿನ ನಡುವೆ ಕಾಣಿಸಿದ ಟಾರ್ಚ್‌ ಬೆಳಕಿನ ಹಿನ್ನೆಲೆಯಲ್ಲಿ ಅನುಮಾನ ಕಾರ್ಕಳ : ನಕ್ಸಲರು ಇನ್ನೂ ಕೊಪ್ಪ, ಶೃಂಗೇರಿ ಭಾಗದಲ್ಲೇ ಇರುವ ಅನುಮಾನವಿದ್ದು, ಈ ಹಿನ್ನೆಲೆಯಲ್ಲಿ ಕೂಂಬಿಂಗ್‌ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಶುಕ್ರವಾರ ನಡುರಾತ್ರಿ ವೇಳೆ ಕುದುರೆಮುಖ ರಾಷ್ಟ್ರೀಯ ಅರಣ್ಯ ವ್ಯಾಪ್ತಿಯ ಕೆರೆಕಟ್ಟೆ ಪರಿಸರದಲ್ಲಿ ದಟ್ಟ ಕಾಡಿನ ನಡುವೆ ಟಾರ್ಚ್‌ ಬೆಳಕು ಕಂಡುಬಂದಿದೆ. ಇದು ನಕ್ಸಲರ ಓಡಾಟ ಇರಬಹುದು ಎಂಬ ಅನುಮಾನದಲ್ಲಿ ನಕ್ಸಲ್‌ ನಿಗ್ರಹ ಪಡೆ ಕೂಂಬಿಂಗ್‌ ತೀವ್ರಗೊಳಿಸಿದೆ.ಹೆಬ್ರಿಯ ನಾಡ್ಪಾಲು ಸಮೀಪ ಪೀತಬೈಲಿನಲ್ಲಿ ನಕ್ಸಲ್‌ ಮುಖಂಡ ವಿಕ್ರಂ

ಕೆರೆಕಟ್ಟೆ, ಶೃಂಗೇರಿ ಪರಿಸರದಲ್ಲಿ ನಕ್ಸಲರು? Read More »

ಮುಳಿಯ ಜ್ಯುವೆಲ್ಸ್ ಬೆಂಗಳೂರಿನಲ್ಲಿ ಕನ್ನಡ ಕಾರ್ಯಕ್ರಮ

ಬೆಂಗಳೂರು : ಮಕ್ಕಳಿಗೆ ಕರ್ನಾಟಕದ ವಿವಿಧ ನೃತ್ಯ  ಸ್ಪರ್ಧೆಯ ಮೂಲಕ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದ ಹೋಟೆಲ್ ಮಾಲಕರ ಸಂಘದ ರಾಜ್ಯಾಧ್ಯಕ್ಷ ಜಿ.ಕೆ.ಶೆಟ್ಟಿ ಮಾತನಾಡಿ ” ಮಕ್ಕಳನ್ನು ಹುರಿದುಂಬಿಸುವ ಈ ಬಗೆಯ ಕಾರ್ಯಕ್ರಮ ತುಂಬಾ ಒಳ್ಳೆಯದು. ಹಾಗೆಯೆ ಹೋಟೆಲ್ ಕಾರ್ಮಿಕರಲ್ಲಿ ಕನ್ನಡದ ಅಭಿಮಾನ ಹೆಚ್ಚಾಗಿ ಕಾಣಬಹುದು” ಎಂದರು. ಇನ್ನೋರ್ವ ಅಥಿತಿ, ಮಿಸೆಸ್ ಯುನಿವರ್ಸ ಶ್ರೀಮತಿ ಸತ್ಯವತಿ ಬಸವರಾಜು ಶುಭ ಹಾರೈಸಿದರು.  ಅಧ್ಯಕ್ಷ ಸ್ಥಾನದಲ್ಲಿ ಮಾತನಾಡಿದ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ವೇಣುಶರ್ಮ “ಮುಳಿಯದ ವಿಶೇಷ ಡಿಸೈನ್ಗಳ ಮಾರಾಟದ

ಮುಳಿಯ ಜ್ಯುವೆಲ್ಸ್ ಬೆಂಗಳೂರಿನಲ್ಲಿ ಕನ್ನಡ ಕಾರ್ಯಕ್ರಮ Read More »

ಗ್ಯಾರಂಟಿಗಳಿಗೆ ಹಣ ಹೊಂದಿಸಲು ದಿವ್ಯಾಂಗರ ಅನುದಾನ ಶೇ.80 ಕಡಿತ

ಈ ವರ್ಷ ದಿವ್ಯಾಂಗರಿಗೆ ಬರೀ 10 ಕೋ. ರೂ. ಅನುದಾನ ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಭರದಲ್ಲಿ ರಾಜ್ಯ ಸರ್ಕಾರ ದಿವ್ಯಾಂಗರಿಗೆ ಅನುದಾನ ಕಡಿತ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಕಳೆದ ವರ್ಷಕ್ಕಿಂತ ವಿಕಲಚೇತರ ಅನುದಾನದಲ್ಲಿ ಶೇ.80ರಷ್ಟು ಹಣ ಕಡಿತ ಮಾಡಲಾಗಿದೆ ಎಂದು ಬಿಜೆಪಿ ಆಪಾದಿಸಿದೆ. ಇದನ್ನೂ ಓದಿ: ಸಭೆಗಳನ್ನು ರದ್ದು ಮಾಡಿ ದಿಢೀರ್‌ ಸ್ವಗ್ರಾಮಕ್ಕೆ ತೆರಳಿದ ಏಕನಾಥ್‌ ಶಿಂಧೆ ಕರ್ನಾಟಕ ಸರ್ಕಾರವು ದಿವ್ಯಾಂಗರಿಗಾಗಿ ಮೀಸಲಾಗಿದ್ದ ನಿಧಿಯಲ್ಲಿ ಶೇ.80 ಕಡಿತ ಮಾಡಿರುವುದು ನಿಜಕ್ಕೂ ದುರದೃಷ್ಟಕರ ಮತ್ತು

ಗ್ಯಾರಂಟಿಗಳಿಗೆ ಹಣ ಹೊಂದಿಸಲು ದಿವ್ಯಾಂಗರ ಅನುದಾನ ಶೇ.80 ಕಡಿತ Read More »

ಎಲ್ಲಿ ಹೋದರು ಅಳಿದುಳಿದ ನಕ್ಸಲರು?

ಮರಳಿ ಕೇರಳದ ಕಾಡು ಸೇರಿಕೊಂಡಿರುವ ಶಂಕೆ ಕಾರ್ಕಳ : ನಕ್ಸಲ್‌ ಮುಖಂಡ ವಿಕ್ರಂ ಗೌಡ ಎನ್‌ಕೌಂಟರ್‌ಗೆ ಬಲಿಯಾದ ಬಳಿಕ ಅಳಿದುಳಿದ ನಕ್ಸಲರೆಲ್ಲ ಮರಳಿ ಕೇರಳದತ್ತ ಪಲಾಯನ ಮಾಡಿರುವ ಶಂಕೆಯಿದೆ. ವಿಕ್ರಂ ಗೌಡ ಎನ್‌ಕೌಂಟರ್‌ ಆದ ಬಳಿಕ ಕಾರ್ಕಳ, ಚಿಕ್ಕಮಗಳೂರು ಮತ್ತಿತರೆಡೆ ನಕ್ಸಲ್‌ ನಿಗ್ರಹ ಪಡೆಯವರು ಪೊಲೀಸರೊಂದಿಗೆ ತೀವ್ರ ಹುಡುಕಾಟ ನಡೆಸಿದರೂ ನಕ್ಸಲರ ಜಾಡು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಕಾಡಿನಿಂದ ನಾಡಿಗಿಳಿದು ವಾಹನದ ಮೂಲಕ ಪರಾರಿಯಾಗುವ ಸಾಧ್ಯತೆಯಿದ್ದ ಹಿನ್ನೆಲೆಯಲ್ಲಿ ಸಂಪಾಜೆ, ಕೊಪ್ಪ ಸೇರಿದಂತೆ ಆಯಕಟ್ಟಿನ ಜಾಗಗಳಲ್ಲಿ ನಾಕಾಬಂಧಿ ಹಾಕಿ ತಪಾಸಣೆಯನ್ನೂ

ಎಲ್ಲಿ ಹೋದರು ಅಳಿದುಳಿದ ನಕ್ಸಲರು? Read More »

3 ಕೋ. ರೂ. ಮೌಲ್ಯದ ಮೊಬೈಲ್‌ ಫೋನ್‌ ದಾರಿಮಧ್ಯೆ ಕಳ್ಳತನ

ಬೇರೊಂದು ಟ್ರಕ್‌ಗೆ ಲೋಡ್‌ ಮಾಡಿಕೊಂಡು ಹೋಗಿರುವ ಅನುಮಾನ ಬೆಂಗಳೂರು: ದಿಲ್ಲಿಯಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ 3 ಕೋ. ರೂ. ಮೌಲ್ಯದ ಮೊಬೈಲ್‌ ಫೋನ್‌ಗಳನ್ನು ಕಂಟೈನರ್‌ ಚಾಲಕನೇ ಕದ್ದು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಖಾಲಿ ಕಂಟೈನರ್‌ ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲರಹಳ್ಳಿ ಬಳಿ ಪತ್ತೆಯಾಗಿದೆ. ಶಿಯೋಮಿ ಕಂಪನಿಗೆ ಸೇರಿದ 3 ಕೋಟಿ ಮೌಲ್ಯದ ಮೊಬೈಲ್​ ಫೋನ್‌ಗಳನ್ನು ದಿಲ್ಲಿಯಿಂದ ಬೆಂಗಳೂರಿಗೆ ಕಂಟೈನರ್‌ನಲ್ಲಿ ಸಾಗಿಸಲಾಗುತ್ತಿತ್ತು. ಎನ್​ಎಲ್ 01 ಎಎಫ್ 2743 ನೋಂದಣಿಯ ಕಂಟೇನರ್​ನಲ್ಲಿ ದಿಲ್ಲಿಯಿಂದ ಬೆಂಗಳೂರಿಗೆ ಮೊಬೈಲ್ ಸಾಗಣೆ ಮಾಡುವಾಗ ಕಳ್ಳತನವಾಗಿದೆ. ಪೆರೇಸಂದ್ರೆ

3 ಕೋ. ರೂ. ಮೌಲ್ಯದ ಮೊಬೈಲ್‌ ಫೋನ್‌ ದಾರಿಮಧ್ಯೆ ಕಳ್ಳತನ Read More »

ಸಚಿವ ಮಧು ಬಂಗಾರಪ್ಪಗೆ ಏಕವಚನದಲ್ಲಿ ನಿಂದನೆ : ದೂರು ದಾಖಲು

ಶಿವಮೊಗ್ಗ : ಕೆಲದಿನಗಳ ಹಿಂದೆಯಷ್ಟೇ ವಿದ್ಯಾರ್ಥಿಯೊಬ್ಬ ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಎಂದು ಸಚಿವ ಮಧು ಬಂಗಾರಪ್ಪ ಎದುರೇ ಹೇಳಿದ್ದು ಭಾರಿ ವಿವಾದಕ್ಕೊಳಗಾಗಿತ್ತು. ಈಗ ಮಧು ಬಂಗಾರಪ್ಪನವರ ಊರಿನ ವ್ಯಕ್ತಿಯೇ ಅವರನ್ನು ನಿಂದಿಸಿದ ವೀಡಿಯೊ ಸದ್ದು ಮಾಡುತ್ತಿದೆ. ಸೋಷಿಯಲ್‌ ಮೀಡಿಯಾ ಎಕ್ಸ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಮೋಹಿತ್ ನರಸಿಂಹ ಮೂರ್ತಿ ಎಂಬಾತನ ವಿರುದ್ಧ ಶಿವಮೊಗ್ಗದ ವಿನೋಬ ನಗರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಮಧು ಬಂಗಾರಪ್ಪ ವಿದ್ಯಾರ್ಥಿಗಳ

ಸಚಿವ ಮಧು ಬಂಗಾರಪ್ಪಗೆ ಏಕವಚನದಲ್ಲಿ ನಿಂದನೆ : ದೂರು ದಾಖಲು Read More »

ಈ ಸಲ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಸ್ವರೂಪ ಬದಲಾವಣೆಯಿಲ್ಲ

ಕಳೆದ ವರ್ಷದಂತೆಯೇ ಪ್ರಶ್ನೆ ಪತ್ರಿಕೆ ಇರಲಿದೆ ಎಂದು ಸ್ಪಷ್ಟನೆ ಬೆಂಗಳೂರು: 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಪ್ರಶ್ನೆಪತ್ರಿಕೆಯ ಸ್ವರೂಪದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ, ಕಳೆದ ವರ್ಷದ ಮಾದರಿಯಲ್ಲೇ ಪ್ರಶ್ನೆಪತ್ರಿಕೆ ಇರುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸ್ಪಷ್ಟಪಡಿಸಿದೆ.ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಶ್ನೆ ಪತ್ರಿಕೆಯಲ್ಲಿ ಮಹತ್ವದ ಬದಲಾವಣೆ ಮಾಡಿರುವುದಾಗಿ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುರುವ ಸುದ್ದಿ ಸುಳ್ಳು. 2024-25ನೇ ಸಾಲಿನ ಪ್ರಶ್ನೆಪತ್ರಿಕೆಯ ವಿನ್ಯಾಸದಲ್ಲಿ ಮಂಡಳಿ ಯಾವುದೇ ಬದಲಾವಣೆ ಮಾಡಿರುವುದಿಲ್ಲ ಎಂದು ಕರ್ನಾಟಕ

ಈ ಸಲ ಎಸ್‌ಎಸ್‌ಎಲ್‌ಸಿ ಪ್ರಶ್ನೆ ಪತ್ರಿಕೆ ಸ್ವರೂಪ ಬದಲಾವಣೆಯಿಲ್ಲ Read More »

error: Content is protected !!
Scroll to Top