ರಾಜ್ಯ

ಸಹಕಾರ ಕ್ಷೇತ್ರದಲ್ಲಿ ವಿಶ್ವಕರ್ಮ ಸಮುದಾಯಕ್ಕೆ ಮೀಸಲಾತಿ : ಮನವಿ ಸಲ್ಲಿಕೆ

ಆಡಳಿತ ಮಂಡಳಿ, ನೌಕರಿಯಲ್ಲಿ ಮೀಸಲಾತಿ ಕೋರಿಕೆ ಮಂಗಳೂರು : ಸಹಕಾರ ಕ್ಷೇತ್ರದಲ್ಲಿ ವಿಶ್ವಕರ್ಮ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂಬ ಬೇಡಿಕೆಯಿರುವ ಮನವಿ ಪತ್ರವನ್ನು ಸಮುದಾಯದ ಪರವಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮುಖಾಂತರ ಮುಖ್ಯ ಮಂತ್ರಿಗೆ ಹಾಗೂ ಸಹಕಾರಿ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಕೋ-ಆಪರೇಟಿವ್ ಸೊಸೈಟಿಗಳ ಆಡಳಿತ ಮಂಡಳಿಯಲ್ಲಿ ವಿಶ್ವಕರ್ಮ ಸಮುದಾಯದವರಿಗೆ ಒಂದು ಸ್ಥಾನ ಮೀಸಲು (ಚುನಾಯಿತ ಅಥವಾ ನಾಮನಿರ್ದೇಶಿತ ಸ್ಥಾನ) ಮತ್ತು ಸಹಕಾರ […]

ಸಹಕಾರ ಕ್ಷೇತ್ರದಲ್ಲಿ ವಿಶ್ವಕರ್ಮ ಸಮುದಾಯಕ್ಕೆ ಮೀಸಲಾತಿ : ಮನವಿ ಸಲ್ಲಿಕೆ Read More »

ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್‌ ಆಸ್ಪತ್ರೆಯಿಂದ ಬಿಡುಗಡೆ

ಬೆಳಗಾವಿ: ಕಾರು ಅಪಘಾತದಲ್ಲಿ ಗಾಯಗೊಂಡು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಡಿಸ್ಚಾರ್ಜ್ ಆಗಿದ್ದಾರೆ. ಜನವರಿ 14ರಂದು ಬೆಂಗಳೂರಿನಿಂದ ಬೆಳಗಾವಿಗೆ ತೆರಳುವಾಗ ಅಂಬಡಗಟ್ಟಿ ಬಳಿ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಹೆಬ್ಬಾಳ್ಕರ್ ಬೆನ್ನು ಮೂಳೆ ಮುರಿತವಾಗಿ, ಕತ್ತಿಗೆ ಗಾಯವಾಗಿತ್ತು. 13 ದಿನಗಳ ಕಾಲ ಚಿಕಿತ್ಸ ಪಡೆದ ಬಳಿಕ ಲಕ್ಷ್ಮೀ ಹೆಬ್ಬಾಳ್ಕರ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ನನಗೆ ಆಗಬಾರದ ದುರ್ಘಟನೆ ಆಯಿತು. ಕೊನೇ ಹಂತ ನೋಡಿ ಹೋರಾಟ ಮಾಡಿ

ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್‌ ಆಸ್ಪತ್ರೆಯಿಂದ ಬಿಡುಗಡೆ Read More »

ರೇಶನ್‌ ಕಾರ್ಡ್‌ ಇ-ಕೆವೈಸಿಗೆ ಕೊನೆಯ ಅವಕಾಶ

ಇ-ಕೆವೈಸಿ ಮಾಡಿಸದಿದ್ದರೆ ಪಡಿತರ ಬಂದ್‌ ಮಂಗಳೂರು: ಸರ್ಕಾರದ ಸೂಚನೆಯಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯುವ ಕುಟುಂಬದ ಸದಸ್ಯರ ಇ-ಕೆವೈಸಿಗೆ ಕೊನೆಯ ಅವಕಾಶ ನೀಡಲಾಗಿದೆ. ಒಂದು ವೇಳೆ ಸದಸ್ಯರು ಹಾಜರಾಗಿ ಕೆವೈಸಿ ಮಾಡಿಸದಿದ್ದರೆ ಅವರ ಪಾಲಿನ ಪಡಿತರ ಬಂದ್‌ ಮಾಡಲಾಗುವುದು ಎಂದು ಆಹಾರ ಇಲಾಖೆ ತಿಳಿಸಿದೆ. ಪಡಿತರ ಚೀಟಿ ಫಲಾನುಭವಿಗಳ ಪೈಕಿ ಕೆಲವು ಸದಸ್ಯರು ಒಟಿಪಿ ಮೂಲಕ ತಿದ್ದುಪಡಿ ಮಾಡಿದ್ದು, ಸದಸ್ಯರು ಜೀವಂತ ಇರುವ ಬಗ್ಗೆ ಜೀವ ಮಾಪನ ನೀಡಿ ಇ-ಕೆವೈಸಿ ಮಾಡುವುದು ಕಡ್ಡಾಯ ಎಂದು ಆಹಾರ ಇಲಾಖೆ

ರೇಶನ್‌ ಕಾರ್ಡ್‌ ಇ-ಕೆವೈಸಿಗೆ ಕೊನೆಯ ಅವಕಾಶ Read More »

ಇಡೀ ಗ್ರಾಮವನ್ನೇ ಖರೀದಿ ಮಾಡಿದ ಕಾಂಗ್ರೆಸ್‌ ಶಾಸಕ

ಗ್ರಾಮಸ್ಥರಿಂದ ಲೋಕಾಯುಕ್ತಕ್ಕೆ ದೂರು ರಾಮನಗರ: ವಕ್ಫ್ ಮಂಡಳಿ ರೈತರ ಜಮೀನು ಕಬಳಿಸುತ್ತಿರುವ ವಿವಾದ ಇನ್ನೂ ಜೀವಂತವಾಗಿರುವಾಗಲೇ ರಾಮನಗರದ ಕಾಂಗ್ರೆಸ್ ಶಾಸಕ ಇಕ್ಬಾಲ್‌ ಹುಸೇನ್‌ ಇಡೀ ಗ್ರಾಮವನ್ನೇ ಖರೀದಿ ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ. ಉಳುವವನೇ ಭೂಮಿಯ ಒಡೆಯ ಎಂಬ ಭೂ ಸುಧಾರಣಾ ಕಾಯ್ದೆಯನ್ನು ಉಲ್ಲಂಘನೆ ಮಾಡಿ ಇಡೀ ಊರನ್ನೇ ಶಾಸಕರು ಖರೀದಿ ಮಾಡಿದ್ದಾರೆಂದು ಗ್ರಾಮಸ್ಥರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಉಳುವವನೇ ಭೂಮಿಯ ಒಡೆಯ ಎಂಬ ಕಾಯ್ದೆ ಜಾರಿಗೆ ಬಂದು ದಶಕಗಳೇ ಕಳೆದಿವೆ. ಈ ಕಾಯ್ದೆಯನ್ನು ಜಾರಿ

ಇಡೀ ಗ್ರಾಮವನ್ನೇ ಖರೀದಿ ಮಾಡಿದ ಕಾಂಗ್ರೆಸ್‌ ಶಾಸಕ Read More »

ಹಿರಿಯ ಪತ್ರಕರ್ತ , ಹೊಸದಿಗಂತ ಪತ್ರಿಕೆಯ ವಿಶೇಷ  ವರದಿಗಾರ ಗುರುವಪ್ಪ ಬಾಳೆಪುಣಿ  ನಿಧನ

ಹಿರಿಯ ಪತ್ರಕರ್ತ , ಹೊಸದಿಗಂತ ಪತ್ರಿಕೆಯ ವಿಶೇಷ  ವರದಿಗಾರ ಗುರುವಪ್ಪ ಬಾಳೆಪುಣಿ  (62)  ಅಲ್ಪಕಾಲದ ಅಸೌಖ್ಯದಿಂದ ಇಂದು ಬಾಳೆಪುಣಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಬಾಳೆಪುಣಿ ಅವರು 26 ವರ್ಷ ಹೊಸದಿಗಂತ ಪತ್ರಿಕೆಯ ವರದಿಗಾರನಾಗಿ ಕಾರ್ಯ ನಿರ್ವಹಿಸಿದ್ದರು. ಮಂಗಳೂರು ಮಿತ್ರ , ಕರಾವಳಿ ಅಲೆ ಪತ್ರಿಕೆಗಳಲ್ಲಿಯೂ ವರದಿಗಾರನಾಗಿ   ಕಾರ್ಯ ನಿರ್ವಹಿಸಿದ್ದರು. ಹರೇಕಳ ಹಾಜಬ್ಬ ಅವರನ್ನು ಮೊದಲ

ಹಿರಿಯ ಪತ್ರಕರ್ತ , ಹೊಸದಿಗಂತ ಪತ್ರಿಕೆಯ ವಿಶೇಷ  ವರದಿಗಾರ ಗುರುವಪ್ಪ ಬಾಳೆಪುಣಿ  ನಿಧನ Read More »

ಪೆಟ್ರೋಲ್ ಸುರಿದುಕೊಂಡು ಪತಿ ಆತ್ಮಹತ್ಯೆ 

ಬೆಂಗಳೂರು : ಪತ್ನಿ ಮನೆಗೆ ಹೋಗಿ ಪೆಟ್ರೋಲ್ ಸುರಿದುಕೊಂಡು ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಗರಭಾವಿಯ ಎನ್​ಜಿಎಫ್​ ಲೇಔಟ್​ನ ಅಪಾರ್ಟ್‌ಮೆಂಟ್​ನಲ್ಲಿ ನಡೆದಿದೆ. ಮಂಜುನಾಥ್ (39) ಆತ್ಮಹತ್ಯೆ ಮಾಡಿಕೊಂಡ  ಪತಿ ಎನ್ನಲಾಗಿದೆ. ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿದ್ದಾರೆ. ಹೆಂಡತಿಯ ಬಳಿ ಡಿವೋರ್ಸ್ ಬೇಡ ಎಂದಿದ್ದ ಮಂಜುನಾಥ್, ಮತ್ತೆ ಒಂದಾಗಿ ಬಾಳೋಣ ಅಂತಾ ಕೇಳಲು ಎನ್​ಜಿಎಫ್ ಲೇಔಟ್​ನಲ್ಲಿರುವ ಹೆಂಡತಿ ವಾಸವಿದ್ದ ಮನೆಗೆ  8 ಗಂಟೆಗೆ ಮಂಜುನಾಥ್ ಬಂದಿದ್ದ. ಇದಿಕೆ ಪ್ರತಿಕ್ರೀಯಿಸಿದ ಪತ್ನಿ ನಯನ ನೀನೆಷ್ಟು ಹಿಂಸೆ ಕೊಟ್ಟಿದ್ದೀಯಾ, ಹೊಡೆದಿದ್ದೀಯಾ ನಾನು ಬರಲ್ಲವೆಂದು

ಪೆಟ್ರೋಲ್ ಸುರಿದುಕೊಂಡು ಪತಿ ಆತ್ಮಹತ್ಯೆ  Read More »

ವಾಹನಗಳ ಮೇಲೆ ವಿವಾದಾತ್ಮಕ ಸ್ಟಿಕ್ಕರ್‌ ಹಾಕಿದರೆ ದಂಡ | ಭಾವನೆ ಕೆರಳಿಸುವ ಸ್ಟಿಕ್ಕರ್‌, ಪೋಸ್ಟರ್‌ಗಳ ವಿರುದ್ಧ ಕ್ರಮಗೊಂಡ ಸಾರಿಗೆ ಇಲಾಖೆ | ಸಾರಿಗೆ ಇಲಾಖೆಯನ್ನು ಅಭಿನಂದಿಸಿದ ನ್ಯೂಸ್‍ ಪುತ್ತೂರು  ಸಂಸ್ಥೆ

ಪುತ್ತೂರು : ವಾಹನಗಳಲ್ಲಿ ವಿಚಿತ್ರ  ರೀತಿಯ  ಸ್ಟಿಕ್ಕರ್,  ಪೋಸ್ಟರ್’ ಗಳನ್ನು  ಅಂಟಿಸಿ  ಪ್ರದರ್ಶಿಸುವುದರ  ವಿರುದ್ಧ ಕ್ರಮ  ಕೈಗೊಳ್ಳಲು  ಮುಂದಾದ  ಸಾರಿಗೆ  ಇಲಾಖೆ  ಅಧಿಕಾರಿಗಳೇ  ನಿಮಗಿದೋ  ನ್ಯೂಸ್  ಪುತ್ತೂರು ವತಿಯಿಂದ  ಹೃದ್ಯ  ಅಭಿನಂದನೆಗಳು. ‘Better late than never’  ಎಂಬಂತೆ  ತಡವಾಗಿಯಾದರೂ  ದಿಟ್ಟ  ನಿರ್ಧಾರ  ಕೈಗೊಂಡ  ನೀವು ಶ್ಲಾಘನಾರ್ಹರು.  ನಿಮ್ಮ  ಈ  ನಡೆಗೆ  ನ್ಯೂಸ್  ಪುತ್ತೂರು  ಸರ್ವತ್ರ  ಬೆಂಬಲ  ನೀಡುತ್ತದೆ. ಹಾಗೆಯೇ  ನಮ್ಮದೊಂದು  ಮನವಿ.   ಈ  ಕೆಳಗಿನ  ಅಂಶಗಳನ್ನೂ  ದಯವಿಟ್ಟು  ಪರಿಗಣಿಸುವಿರಾ? 1) ಇಲಾಖೆಯ  ನಿಯಮಾನುಸಾರ  ವಾಹನ  ಉತ್ಪಾದಕ

ವಾಹನಗಳ ಮೇಲೆ ವಿವಾದಾತ್ಮಕ ಸ್ಟಿಕ್ಕರ್‌ ಹಾಕಿದರೆ ದಂಡ | ಭಾವನೆ ಕೆರಳಿಸುವ ಸ್ಟಿಕ್ಕರ್‌, ಪೋಸ್ಟರ್‌ಗಳ ವಿರುದ್ಧ ಕ್ರಮಗೊಂಡ ಸಾರಿಗೆ ಇಲಾಖೆ | ಸಾರಿಗೆ ಇಲಾಖೆಯನ್ನು ಅಭಿನಂದಿಸಿದ ನ್ಯೂಸ್‍ ಪುತ್ತೂರು  ಸಂಸ್ಥೆ Read More »

ಕೋಟೆಕಾರು ದರೋಡೆ ಕೃತ್ಯಕ್ಕೆ ಸಹಕರಿಸಿದವರಿಗೆ ರಾಜಕೀಯ ರಕ್ಷಣೆ : ಭರತ್‌ ಶೆಟ್ಟಿ

ಸಂಚಿನಲ್ಲಿ ಭಾಗಿಯಾದವರ ಹೆಸರು ಹೊರಗೆ ಬಾರದಂತೆ ತಡೆದಿದ್ದಾರೆ ಎಂದು ಆರೋಪ ಮಂಗಳೂರು: ಕೋಟೆಕಾರು ಸಹಕಾರಿ ಬ್ಯಾಂಕ್‌ನ ಕೆ.ಸಿ ರೋಡ್‌ ಶಾಖೆಯಲ್ಲಿ ಕಳೆದ ಶುಕ್ರವಾರ ಹಾಡಹಗಲೇ ನಡೆದಿರುವ ದರೋಡೆಯಲ್ಲಿ ಸ್ಥಳೀಯರ ಕೈವಾಡವಿದ್ದರೂ ರಾಜಕೀಯ ಕಾರಣಗಳಿಗಾಗಿ ಅವರ ಹೆಸರು ಹೊರಬಾರದಂತೆ ಮಾಡಲಾಗಿದೆ ಎಂದು ಶಾಸಕ ಭರತ್‌ ಶೆಟ್ಟಿ ಬಾಂಬ್‌ ಸಿಡಿಸಿದ್ದಾರೆ. ಸ್ಥಳೀಯರ ಕೈವಾಡವನ್ನು ಮುಚ್ಚಿ ಹಾಕಲು ವ್ಯವಸ್ಥಿತ ಪ್ರಯತ್ನ ಮಾಡಲಾಗುತ್ತಿದೆ. ಪೊಲೀಸರು ದರೋಡೆ ಮಾಡಿದವರನ್ನು ಬಂಧಿಸಿ ಮೂರು ದಿನ ಆದರೂ ದರೋಡೆಗೆ ಪ್ಲಾನ್‌ ಮಾಡಿದವರ ಕುರಿತು ಇನ್ನೂ ಯಾವುದೇ ಮಾಹಿತಿ

ಕೋಟೆಕಾರು ದರೋಡೆ ಕೃತ್ಯಕ್ಕೆ ಸಹಕರಿಸಿದವರಿಗೆ ರಾಜಕೀಯ ರಕ್ಷಣೆ : ಭರತ್‌ ಶೆಟ್ಟಿ Read More »

ದೇವರ ಪ್ರಭಾವಳಿಗೆ ಬಡಿದ ಡ್ರೋನ್‌!

ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ರಥೋತ್ಸವದಲ್ಲಿ ನಡೆದ ಘಟನೆ ಭಾರಿ ವೈರಲ್‌ ಮಂಗಳೂರು: ವಿಟ್ಲದ ಪ್ರಸಿದ್ಧ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ರಥೋತ್ಸವದ ವೇಳೆ ನಿಯಂತ್ರಣ ತಪ್ಪಿದ ಡ್ರೋನ್‌ ರಥದ ಮೇಲಿದ್ದ ದೇವರ ಪ್ರಭವಳಿಗೆ ಬಡಿದಿದ್ದು, ಈ ಘಟನೆ ಇಲ್ಲಿನ ಭಕ್ತರ ಆತಂಕಕ್ಕೆ ಕಾರಣವಾಗಿದೆ. ಜ.21ರಂದು ಕ್ಷೇತ್ರದ ವರ್ಷಾವಧಿ ಉತ್ಸವದ ನಿಮಿತ್ತ ರಥೋತ್ಸವ ನೆರವೇರಿದ್ದು, ಈ ಸಂದರ್ಭದಲ್ಲಿ ಈ ಅಚಾತುರ್ಯ ಸಂಭವಿಸಿದೆ. ಬ್ರಹ್ಮವಾಹಕರು ದೇವರನ್ನು ಹೊತ್ತುಕೊಂಡು ರಥವೇರಿ ಒಳ ಪ್ರವೇಶಿಸುವ ಮೊದಲೊಮ್ಮೆ ಭಕ್ತರತ್ತ ತಿರುಗಿದ ಸಂದರ್ಭದಲ್ಲೇ ಹಾರಿಕೊಂಡು ಬಂದ ಡ್ರೋನ್‌

ದೇವರ ಪ್ರಭಾವಳಿಗೆ ಬಡಿದ ಡ್ರೋನ್‌! Read More »

ಮುಡಾ ಹಗರಣ: ಸಿದ್ದರಾಮಯ್ಯಗೆ ಲೋಕಾಯುಕ್ತ ಕ್ಲೀನ್‌ಚಿಟ್‌

ಇದು ನಿರೀಕ್ಷಿತ ತನಿಖಾ ವರದಿ ಎಂದ ಸ್ನೇಹಮಯಿ ಕೃಷ್ಣ ಬೆಂಗಳೂರು: ಮುಡಾ ಹಗರಣದ ಲೋಕಾಯುಕ್ತ ತನಿಖೆ ಪೂರ್ಣಗೊಂಡಿದ್ದು, ನಿರೀಕ್ಷಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾವರ್ತಿಯವರಿಗೆ ಕ್ಲೀನ್‌ಚಿಟ್‌ ನೀಡಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರ ಎಲ್ಲೂ ಕಂಡು ಬಂದಿಲ್ಲ. ಡಿನೋಟಿಫೈ ಮಾಡುವಾಗ, ಭೂಪರಿವರ್ತನೆ ಮಾಡುವಾಗ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಲೋಕಾಯುಕ್ತ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲವೊಂದು ತಿಳಿಸಿದೆ. ಮುಡಾ ಆಯುಕ್ತರು, ರೆವಿನ್ಯೂ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿರುವುದು ಕಂಡು ಬಂದಿದೆ.

ಮುಡಾ ಹಗರಣ: ಸಿದ್ದರಾಮಯ್ಯಗೆ ಲೋಕಾಯುಕ್ತ ಕ್ಲೀನ್‌ಚಿಟ್‌ Read More »

error: Content is protected !!
Scroll to Top