ರಾಜ್ಯ

ಸಿಎಂ ಆಯ್ಕೆ ವಿಚಾರ ಖರ್ಗೆ ಹೆಗಲಿಗೆ! ಶಾಸಕಾಂಗ ಪಕ್ಷದ ಸಭೆ ನಿರ್ಣಯ

ಬೆಂಗಳೂರು: ಸಿಎಂ ಆಯ್ಕೆ ಹಿನ್ನೆಲೆಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಕ್ತಾಯಗೊಂಡಿದೆ. ಬೆಂಗಳೂರಿನ ಶಾಂಗ್ರಿಲಾ ಹೋಟೆಲಿನಲ್ಲಿ ನಡೆದ ಸಭೆಯಲ್ಲಿ ಒಂದು ಸಾಲಿನ ನಿರ್ಣಯವನ್ನಷ್ಟೇ ತೆಗೆದುಕೊಳ್ಳಲು ಸಭೆ ಸಫಲವಾಯಿತು. ಎಐಸಿಸಿ ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧ ಎಂದು ಶಾಸಕರು ಏಕ ಸ್ವರದಲ್ಲಿ ಹೇಳುವ ಮೂಲಕ ಸಭೆ ಮುಕ್ತಾಯ ಕಂಡಿತು. ಈ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಗಲಿಗೆ ಸಿಎಂ ಆಯ್ಕೆ ವಿಚಾರ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಖರ್ಗೆ ಅವರು ನಾಳೆ ಬೆಳಿಗ್ಗೆ ಸಿಸೋಡಿಯಾ ಅವರನ್ನು ಭೇಟಿಯಾಗಲಿದ್ದಾರೆ. […]

ಸಿಎಂ ಆಯ್ಕೆ ವಿಚಾರ ಖರ್ಗೆ ಹೆಗಲಿಗೆ! ಶಾಸಕಾಂಗ ಪಕ್ಷದ ಸಭೆ ನಿರ್ಣಯ Read More »

ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ರಾಜ್ಯಾಧ್ಯಕ್ಷ!?

ಬೆಂಗಳೂರು: ಪ್ರಖರ ಮಾತಿನಿಂದಲೇ ಖ್ಯಾತರಾದ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನಳಿನ್ ಕುಮಾರ್ ಕಟೀಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ತಕ್ಷಣದಲ್ಲೇ ಯತ್ನಾಳ್ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇದರ ಬಗ್ಗೆ ಇನ್ನೂ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲವಾದರೂ, ಬಿಜೆಪಿ ಮೂಲಗಳು ಯತ್ನಾಳ್ ಅವರನ್ನು ರಾಜ್ಯಾಧ್ಯಕ್ಷರಾಗಿ ನೋಡಲು ಉತ್ಸುಕರಾಗಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ರಾಜ್ಯಾಧ್ಯಕ್ಷ!? Read More »

ಸಿಎಂ ಪಟ್ಟಕ್ಕಾಗಿ ಡಿಕೆ, ಸಿದ್ದರಾಮಯ್ಯ ಪೈಪೋಟಿ | ಡಿಕೆ ಪರವಾಗಿ ಒಕ್ಕಲಿಗ ಸ್ವಾಮೀಜಿಗಳ ಸಭೆ

ಬೆಂಗಳೂರು: ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿರುವ ಕಾಂಗ್ರೆಸ್, ಇದೀಗ ಸಿಎಂ ಪಟ್ಟಕ್ಕಾಗಿ ಪೈಪೋಟಿ ಶುರುವಾಗಿದೆ. ಬೆಳಿಗ್ಗೆಯಿಂದಲೇ ಟೆಂಪಲ್ ರನ್ ಶುರುವಿಟ್ಟುಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವಕುಮಾರ್ ಅವರ ಪರವಾಗಿ ಒಕ್ಕಲಿಗ ಸ್ವಾಮೀಜಿಗಳು ಬ್ಯಾಟಿಂಗ್ ಮಾಡುತ್ತಿದ್ದಾರೆ. ಒಕ್ಕಲಿಗ ಸಮುದಾಯ ಸ್ವಾಮೀಜಿಗಳು ಸಭೆ ಕರೆದು, ಡಿಕೆ ಅವರನ್ನೇ ಸಿಎಂ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಇನ್ನೊಂದೆಡೆ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ. ಇದರ ನಡುವೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಸಿದ್ಧತೆ ನಡೆಯುತ್ತಿದೆ. ಕಾಂಗ್ರೆಸ್ ವೀಕ್ಷಕರು ಸಭೆಯಲ್ಲಿ

ಸಿಎಂ ಪಟ್ಟಕ್ಕಾಗಿ ಡಿಕೆ, ಸಿದ್ದರಾಮಯ್ಯ ಪೈಪೋಟಿ | ಡಿಕೆ ಪರವಾಗಿ ಒಕ್ಕಲಿಗ ಸ್ವಾಮೀಜಿಗಳ ಸಭೆ Read More »

ಪ್ರವೀಣ್ ಸೂದ್ ಸಿಬಿಐ ನಿರ್ದೇಶಕರಾಗಿ ನೇಮಕ

ಹೊಸದಿಲ್ಲಿ: ಕರ್ನಾಟಕ ಕೇಡರ್‌ ನ 1986ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಅವರನ್ನು ಉನ್ನತ ಮಟ್ಟದ ಆಯ್ಕೆ ಸಮಿತಿಯು ಕೇಂದ್ರೀಯ ತನಿಖಾ ದಳದ (ಸಿಬಿಐ) ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಪ್ರಸ್ತುತ ಕರ್ನಾಟಕದಲ್ಲಿ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿಪಿ) ಸೇವೆ ಸಲ್ಲಿಸುತ್ತಿರುವ ಸೂದ್ ಅವರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನೊಳಗೊಂಡ ಆಯ್ಕೆ ಸಮಿತಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರು ಪ್ರವೀಣ್ ಸೂದ್

ಪ್ರವೀಣ್ ಸೂದ್ ಸಿಬಿಐ ನಿರ್ದೇಶಕರಾಗಿ ನೇಮಕ Read More »

ಶಾಸಕಾಂಗ ಪಕ್ಷದ ಸಭೆ : ಇಂದೇ ನಿರ್ಧಾರವಾಗುತ್ತೇ ಮುಂದಿನ ಸಿಎಂ !

ಬೆಂಗಳೂರು: 224 ಕ್ಷೇತ್ರಗಳಲ್ಲಿ 135 ಕ್ಷೇತ್ರಗಳನ್ನು ಗೆದ್ದುಕೊಂಡು ಕ್ಲೀನ್ ಸ್ವೀಪ್ ಮಾಡಿರುವ ಕಾಂಗ್ರೆಸ್, ಮುಂದಿನ ಸಿಎಂ ಆಯ್ಕೆಗೆ ಮುಹೂರ್ತ ಫಿಕ್ಸ್ ಮಾಡಿದೆ ಎಂದು ಹೇಳಲಾಗಿದೆ. ಭಾನುವಾರ ಸಂಜೆ 5.30ಕ್ಕೆ ನಡೆಯುವ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಹೈಕಮಾಂಡ್ ಮುಂದಿನ ಸಿಎಂ ಆಯ್ಕೆ ಆಗಲಿದೆ ಎಂಬ ಸುಳಿವು ಸಿಕ್ಕಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿ. ಅವರ ಹೆಸರು ಸಿಎಂ ರೇಸಿನಲ್ಲಿ ಮುಂಚೂಣಿಯಲ್ಲಿದೆ. ಶನಿವಾರ ಮತ ಎಣಿಕೆ ನಡೆಯುತ್ತಿದ್ದಂತೆ ಕಾಂಗ್ರೆಸಿಗೆ ಗೆಲುವಿನ ಸುಳಿವು ಸಿಕ್ಕಿತು. ತಕ್ಷಣದಲ್ಲೇ ಶಾಸಕಾಂಗ ಸಭೆ ಕರೆದಿತ್ತು. ಮತ

ಶಾಸಕಾಂಗ ಪಕ್ಷದ ಸಭೆ : ಇಂದೇ ನಿರ್ಧಾರವಾಗುತ್ತೇ ಮುಂದಿನ ಸಿಎಂ ! Read More »

6 ಬಾರಿ ಮತ ಎಣಿಕೆ : ಕೊನೆಗೂ ಜಯ ದಾಖಲಿಸಿದ ಬಿಜೆಪಿ

ಪುತ್ತೂರು: ಜಯನಗರ ಕ್ಷೇತ್ರದಲ್ಲಿಕೊನೆಗೂ ಬಿಜೆಪಿ ಅಭ್ಯರ್ಥಿ ಕೆ.ಸಿ. ರಾಮಮೂರ್ತಿ ಜಯ ಗಳಿಸಿದ್ದಾರೆ. ತಡರಾತ್ರಿವರೆಗೂ ಮರುಮತ ಎಣಿಕೆ ಕಾರ್ಯ ನಡೆಯಿತು. ಮೊದಲಿಗೆ 10 ಮತಗಳಿಂದ ಕಾಂಗ್ರೆಸಿನ ಸೌಮ್ಯ ರೆಡ್ಡಿ ಅವರು ಮುನ್ನಡೆ ಸಾಧಿಸಿದ್ದು, ಇದನ್ನು ಕೆ.ಸಿ. ರಾಮಮೂರ್ತಿ ಪ್ರಶ್ನಿಸಿ ಮರು ಮತ ಎಣಿಕೆಗೆ ಮನವಿ ಮಾಡಿದರು. ಸ್ಥಳಕ್ಕೆ ಆಗಮಿಸಿದ ಚುನಾವಣಾಧಿಕಾರಿ, ಇಬ್ಬರು ಅಭ್ಯರ್ಥಿಗಳನ್ನು ಕರೆಸಿ ಅವರ ಸಮ್ಮುಖದಲ್ಲೇ ಮರು ಮತ ಎಣಿಕೆ ನಡೆಸಿದರು. 5 ಬಾರಿಯ ಮತ ಎಣಿಕೆಯಲ್ಲೂ ಸೂಕ್ತ ಫಲಿತಾಂಶ ಪಡೆಯಲು ಸಾಧ‍್ಯವಾಗಲಿಲ್ಲ. 6ನೇ ಬಾರಿಯ ಮತ

6 ಬಾರಿ ಮತ ಎಣಿಕೆ : ಕೊನೆಗೂ ಜಯ ದಾಖಲಿಸಿದ ಬಿಜೆಪಿ Read More »

ಸಿಎಂ ಬಸವರಾಜ್ ಬೊಮ್ಮಾಯಿ ರಾಜೀನಾಮೆ

ಬೆಂಗಳೂರು: ತೀವ್ರ ಆಘಾತಕಾರಿ ಸೋಲಿನ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶನಿವಾರ ರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು. ಸೋಲಿನ ಹೊಣೆ ಹೊತ್ತ ಅವರು, ಅಧಿಕಾರ ಇಲ್ಲದೇ ಇದ್ದರೂ ಜನಸೇವೆ ಮಾಡುವುದಾಗಿ ತಿಳಿಸಿದರು. ಜನಸೇವೆಗೆ ತಲೆಬಾಗುವುದಾಗಿ ತಿಳಿಸಿದರು.

ಸಿಎಂ ಬಸವರಾಜ್ ಬೊಮ್ಮಾಯಿ ರಾಜೀನಾಮೆ Read More »

ಕಾಂಗ್ರೆಸ್​​ಗೆ ಭರ್ಜರಿ ಗೆಲುವು; ಭಾವುಕರಾದ ಡಿಕೆ ಶಿವಕುಮಾರ್ | ಕಾಂಗ್ರೆಸ್ 136, ಬಿಜೆಪಿಗೆ 64, ಜೆಡಿಎಸ್ 20 ಕ್ಷೇತ್ರ

ಬೆಂಗಳೂರು: ಅಖಂಡ ಕರ್ನಾಟಕದ ಮಹಾ ಜನತೆಯ ಪಾದಗಳಿಗೆ ಸಾಷ್ಟಾಂಗ ನಮನಗಳು. ನಮ್ಮ ಮೇಲೆ ವಿಶ್ವಾಸವಿಟ್ಟು ನಿಚ್ಚಳ ಬಹುಮತ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾವುಕರಾದರು. ರಾಜ್ಯದಲ್ಲಿ ಕಾಂಗ್ರೆಸ್ 136 ಸ್ಥಾನಗಳಲ್ಲಿ ಜಯ ಸಾಧಿಸಿದ್ದು, ಬಿಜೆಪಿ 64 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಜೆಡಿಎಸ್ 20 ಸ್ಥಾನಗಳಿಗೆ ಸೀಮಿತಗೊಂಡಿದೆ. ಉಳಿದಂತೆ 4 ಕ್ಷೇತ್ರಗಳಲ್ಲಿ ಪಕ್ಷೇತರರು ಜಯ ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವುದು ಖಚಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸಿಗೆ ರಾಜ್ಯದಲ್ಲಿ 136 ಕ್ಷೇತ್ರಗಳಲ್ಲಿ

ಕಾಂಗ್ರೆಸ್​​ಗೆ ಭರ್ಜರಿ ಗೆಲುವು; ಭಾವುಕರಾದ ಡಿಕೆ ಶಿವಕುಮಾರ್ | ಕಾಂಗ್ರೆಸ್ 136, ಬಿಜೆಪಿಗೆ 64, ಜೆಡಿಎಸ್ 20 ಕ್ಷೇತ್ರ Read More »

ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್ | ಸರಕಾರ ರಚನೆ ಹಿನ್ನೆಲೆಯಲ್ಲಿ ಅಲರ್ಟ್ ಆದ ಕೈ ನಾಯಕರು

ಪುತ್ತೂರು: ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮುನ್ನಡೆ ಸಾಧಿಸುತ್ತಿದ್ದಂತೆ ಶಾಸಕಾಂಗ ಪಕ್ಷದ ಸಭೆ ಕರೆದಿದೆ. ಈಗಾಗಲೇ 112 ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, ಬಿಜೆಪಿ 83 ಸ್ಥಾನಗಳಲ್ಲಿ, ಜೆಡಿಎಸ್ 25 ಸ್ಥಾನಗಳಲ್ಲಿ, ಇತರೆ 4 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಕಾಂಗ್ರೆಸ್ 100ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಮುನ್ನಡೆ ದಾಟುತ್ತಿದ್ದಂತೆ ಕಾಂಗ್ರೆಸ್ ರಾಜ್ಯ ನಾಯಕರು ಅಲರ್ಟ್ ಆಗಿದ್ದಾರೆ. ಆದ್ದರಿಂದ ಭಾನುವಾರವೇ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಇದು ಸರಕಾರ ರಚನೆಗೆ ಸಂಬಂಧಪಟ್ಟಂತೆ ಕೈಗೊಂಡ ಮೊದಲ ಕ್ರಮ ಎಂದೇ ವಿಶ್ಲೇಷಿಸಲಾಗಿದೆ.

ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್ | ಸರಕಾರ ರಚನೆ ಹಿನ್ನೆಲೆಯಲ್ಲಿ ಅಲರ್ಟ್ ಆದ ಕೈ ನಾಯಕರು Read More »

ಬುಡಸಹಿತ ರಿಕ್ಷಾದ ಮೇಲೆ ಬಿದ್ದ ಮರ | ಅಂಗವಿಕಲ ಸಹೋದರನಿಗೆ ತಾಯಿಯಾಗಿದ್ದ ಪುಷ್ಪಾ ಸಹಿತ ಇಬ್ಬರ ದಾರುಣ ಸಾವು

ಕಾಪು: ಬೃಹತ್ ಮರವೊಂದು ಆಟೋ ರಿಕ್ಷಾದ ಮೇಲೆ ಉರುಳಿ ಬಿದ್ದು, ಇಬ್ಬರು ಪ್ರಯಾಣಿಕರು ಮೃತಪಟ್ಟಿರುವ ಬಗ್ಗೆ ಕಾಪು – ಶಿರ್ವ ರಸ್ತೆಯಲ್ಲಿ ನಡೆದಿದೆ. ನಿನ್ನೆ ರಾತ್ರಿ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಮರ ಬುಡಸಹಿತ ಬಿದ್ದಿದ್ದು, ಮಲ್ಲಾರು ಚಂದ್ರನಗರದ ಬಳಿ ಗುರುವಾರ ರಾತ್ರಿ 8 ಗಂಟೆ ಹೊತ್ತಿಗೆ ಈ ದುರ್ಘಟನೆ ಸಂಭವಿಸಿದೆ. ರಿಕ್ಷಾದಲ್ಲಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದರೆ, ಚಾಲಕ ಪವಾಡ ಸದೃಶ ಪಾರಾಗಿದ್ದಾರೆ. ಪಾದೂರು ಕೂರಾಲು ರೈಸ್‌ಮಿಲ್‌ ಬಳಿಯ ನಿವಾಸಿ ಪುಷ್ಪಾ ಕುಲಾಲ್‌ (45) ಮತ್ತು

ಬುಡಸಹಿತ ರಿಕ್ಷಾದ ಮೇಲೆ ಬಿದ್ದ ಮರ | ಅಂಗವಿಕಲ ಸಹೋದರನಿಗೆ ತಾಯಿಯಾಗಿದ್ದ ಪುಷ್ಪಾ ಸಹಿತ ಇಬ್ಬರ ದಾರುಣ ಸಾವು Read More »

error: Content is protected !!
Scroll to Top