ರಾಜ್ಯ

ಆರ್ ಎಸ್‍ ಎಸ್‍ ಸಕ್ರೀಯ ಕಾರ್ಯಕರ್ತ ಚಂದ್ರಶೇಖರ್ ನಿಧನ

ಬೆಂಗಳೂರು:ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯ ಕಾರ್ಯಕರ್ತರೊಬ್ಬರು ರಸ್ತೆ ಅಪಘಾತದಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ. ಪ್ರಸ್ತುತ ಹಿಂದೂ ಜಾಗರಣಾ ವೇದಿಕೆ ವರ್ತೂರು ಭಾಗ ದೊಮ್ಮಸಂದ್ರ ನಗರ ಸಂಚಾಲಕರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದ ಚಂದ್ರಶೇಖರ್ (48) ಮೃತಪಟ್ಟವರು. ಚಂದಾಪುರ ದೊಮ್ಮಸಂದ್ರ ರಸ್ತೆಯ ಕಗ್ಗಲೀಪುರ ಗೇಟ್ ಬಳಿ ನಡೆದ ರಸ್ತೆ ಅಪಘಾತ ದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿರುತ್ತಾರೆ, ಮೃತರು ತಾಯಿ ಪತ್ನಿ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.

ಆರ್ ಎಸ್‍ ಎಸ್‍ ಸಕ್ರೀಯ ಕಾರ್ಯಕರ್ತ ಚಂದ್ರಶೇಖರ್ ನಿಧನ Read More »

ಸಿಇಟಿ ಫಲಿತಾಂಶದ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು | ಜೂನ್ ಎರಡನೇ ವಾರದಲ್ಲಿ ಪ್ರಕಟವಾಗುವ ನಿರೀಕ್ಷೆ

ಬೆಂಗಳೂರು :  ವಿದ್ಯಾರ್ಥಿಗಳು ಸಿಇಟಿ ಫಲಿತಾಂಶದ ನಿರೀಕ್ಷೆಯಲ್ಲಿದ್ದು,  ಮೇ 20 ಮತ್ತು 21 ರಂದು ನಡೆದ ಪರೀಕ್ಷೆಯ ಫಲಿತಾಂಶ ಜೂನ್ ಎರಡನೇ ವಾರದ ವೇಳೆಗೆ ಪ್ರಕಟವಾಗುವ ನಿರೀಕ್ಷೆಯಿದೆ. KCET ಫಲಿತಾಂಶವನ್ನು ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್‌ cetonline.karnataka.gov.in ಮೂಲಕ ತಿಳಿದುಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ತಮ್ಮ ಲಾಗಿನ್ ವಿವರಗಳನ್ನು ಬಳಸಿಕೊಂಡು ತಮ್ಮ ಫಲಿತಾಂಶಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು. ಕೆಸಿಇಟಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಪ್ರತಿ ವರ್ಷ ನಡೆಸುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯಾಗಿದ್ದು, ಈ ಬಾರಿ KEA

ಸಿಇಟಿ ಫಲಿತಾಂಶದ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು | ಜೂನ್ ಎರಡನೇ ವಾರದಲ್ಲಿ ಪ್ರಕಟವಾಗುವ ನಿರೀಕ್ಷೆ Read More »

ಬದಲಾಗಲಿದ್ದಾರೆಯೇ ಬಿಜೆಪಿ ರಾಜ್ಯಾಧ್ಯಕ್ಷ ? ಇಂದು ಬೆಂಗಳೂರಿನಲ್ಲಿ ಬಿಜೆಪಿ ಅವಲೋಕನ ಸಭೆ?

ಬೆಂಗಳೂರು: ಚುನಾವಣೆಯ ಬಳಿಕ ಮೊದಲ ಬಾರಿಗೆ ಬಿಜೆಪಿ ಗುರುವಾರ ಸಂಜೆ ನೂತನ ಶಾಸಕರು ಮತ್ತು ಪರಾಜಿತ ಅಭ್ಯರ್ಥಿಗಳ ಅವಲೋಕನ ಸಭೆಯನ್ನು ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಕರೆದಿದೆ.ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಬಿಜೆಪಿ ಶಾಸಕಾಂಗ ಪಕ್ಷದ ನಾಯಕ, ವಿರೋಧ ಪಕ್ಷದ ನಾಯಕ ಹಾಗೂ ಹೊಸ ರಾಜ್ಯಾಧ್ಯಕ್ಷ ಆಯ್ಕೆ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 9 ವರ್ಷಗಳನ್ನು ಪೂರೈಸಿರುವ

ಬದಲಾಗಲಿದ್ದಾರೆಯೇ ಬಿಜೆಪಿ ರಾಜ್ಯಾಧ್ಯಕ್ಷ ? ಇಂದು ಬೆಂಗಳೂರಿನಲ್ಲಿ ಬಿಜೆಪಿ ಅವಲೋಕನ ಸಭೆ? Read More »

ವಿದ್ಯುತ್ ಬಿಲ್ ಫಿಕ್ಸೆಡ್ ಚಾರ್ಜ್| ನಿಗದಿತ ಶುಲ್ಕ ಹೆಚ್ಚಳ | ಗ್ರಾಹಕರಿಗೆ ಶಾಕ್‍

ಪುತ್ತೂರು: ವಿದ್ಯುತ್ ಬಿಲ್ ಫಿಕ್ಸೆಡ್ ಚಾರ್ಜ್ ದಿಢೀರ್ ಹೆಚ್ಚಳವಾಗಿದ್ದು ಮೇ ತಿಂಗಳ ಬಿಲ್ ನಲ್ಲಿ ನಿಗದಿತ ಶುಲ್ಕ ಏರಿಕೆ ಮಾಡಲಾಗಿದೆ. ಈ ಮೂಲಕ ವಿದ್ಯುತ್ ಗ್ರಾಹಕರಿಗೆ ಶಾಕ್ ಎದುರಾಗಿದೆ. ಗೃಹ ಬಳಕೆ ವಿದ್ಯುತ್ ಸಂಪರ್ಕಕ್ಕೆ ಪ್ರತಿ ಕಿ.ವ್ಯಾ.ಗೆ 100 ರೂ. ಇದ್ದ ನಿಗದಿತ ಶುಲ್ಕ ಮೇ ತಿಂಗಳಿನಿಂದ ಅನ್ವಯವಾಗುವಂತೆ 110 ರೂ.ಗೆ ಹೆಚ್ಚಳ ಮಾಡಲಾಗಿದೆ. ಈಗಾಗಲೇ ಪ್ರತಿ ಯೂನಿಟ್ ಬೆಲೆ 70 ಪೈಸೆ ಹೆಚ್ಚಳವಾಗಿದ್ದು ಗಾಯದ ಮೇಲೆ ಬರೆ ಎಳೆದಂತೆ ಫಿಕ್ಸೆಡ್ ಚಾರ್ಜ್ ಕೂಡ ದಿಢೀರ್ ಆಗಿ

ವಿದ್ಯುತ್ ಬಿಲ್ ಫಿಕ್ಸೆಡ್ ಚಾರ್ಜ್| ನಿಗದಿತ ಶುಲ್ಕ ಹೆಚ್ಚಳ | ಗ್ರಾಹಕರಿಗೆ ಶಾಕ್‍ Read More »

ಸುಳ್ಯ ಪದವು ಮರದ ದಿಮ್ಮಿ ಮೈಮೇಲೆ ಬಿದ್ದು ವ್ಯಕ್ತಿ ಮೃತ್ಯು

ಸುಳ್ಯಪದವು: ಮನೆಯ ಸಮೀಪ ಮರದದಿಮ್ಮಿಯನ್ನು ವಾಹನಕ್ಕೆ ಲೋಡ್ ಮಾಡುತ್ತಿರುವಾಗ ಮರದ ದಿಮ್ಮಿ ಮೈ ಮೇಲೆ ಬಿದ್ದು ಪಡುವನ್ನೂರು ಗ್ರಾಮದ ಸುಳ್ಯ ಪದವು ಬಟ್ಟ್ಯಂಗಳ ನಿವಾಸಿ ಗೋಪಾಲಕೃಷ್ಣ ಎಂಬವರು ಮೃತಪಟ್ಟ ಘಟನೆ ಇಂದು ಮುಂಜಾನೆ ನಡೆದಿದೆ. ತನ್ನ ಮನೆಯ ಸಮೀಪ ಇರುವ ಮಾವಿನ ಮರದ ದಿಮ್ಮಿಗಳನ್ನು ಜೆಸಿಬಿ ಮೂಲಕ ಟಿಪ್ಪರ್ ವಾಹನಕ್ಕೆ ಲೋಡ್ ಮಾಡಲಾಗಿತ್ತು. ಟಿಪ್ಪರ್ ವಾಹನದ ಹಿಂದಿನ ಬಾಗಿಲನ್ನು ಸರಿಪಡಿಸುವ ಸಂದರ್ಭದಲ್ಲಿ ಮರದ ದಿಮ್ಮಿ ಹಿಂದಕ್ಕೆ ಬಂದು ಮೈಮೇಲೆ ಬಿದ್ದು ಗಂಭೀರ ಗಾಯಗೊಂಡಿದ ಗೋಪಾಲ ಕೃಷ್ಣ ರವರನ್ನು

ಸುಳ್ಯ ಪದವು ಮರದ ದಿಮ್ಮಿ ಮೈಮೇಲೆ ಬಿದ್ದು ವ್ಯಕ್ತಿ ಮೃತ್ಯು Read More »

ಇಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ | ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೊಡಗು ಜಿಲ್ಲೆಯ ನಾಪೋಕ್ಲುವಿನಲ್ಲಿ ನಿನ್ನೆ 5 ಸೆಂ.ಮೀ. ಮಳೆಯಾಗಿದ್ದು, ಕೊಳ್ಳೆಗಾಲ, ಕೊಟ್ಟಿಗೆಹಾರ, ಸರಗೂರು, ಅರಕಲಗೂಡು, ಮೂರ್ನಾಡು, ಬೀದರ್, ಟಿ.ನರಸೀಪುರ, ಕಳಸ, ಮೂಡಿಗೆಯ ಸೇರಿದಂತೆ ವಿವಿಧೆಡೆ ಸಾಧಾರಣ ಮಲೆಯಾಗಿದೆ. ಇಂದು ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ರಾಮನಗರ, ಮಂಡ್ಯ, ಚಿಕ್ಕಬಳ್ಳಾಪುರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದೆ.

ಇಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ | ಹವಾಮಾನ ಇಲಾಖೆ ಮುನ್ಸೂಚನೆ Read More »

ವಿದ್ಯುತ್ ದರ ಪ್ರತಿ ಯುನಿಟ್ ಗೆ 70 ಪೈಸೆ ಹೆಚ್ಚಳ | ಸರಕಾರದಿಂದ ಆದೇಶ | ನಷ್ಟ ಭರ್ತಿ ಮಾಡಲು ಗ್ರಾಹಕರ ಮೇಲೆ ಬರೆ

ಬೆಂಗಳೂರು: ಈಗಾಗಲೇ ಕಾಂಗ್ರೆಸ್ ಸರಕಾರ ಗೃಹಜ್ಯೋತಿ ಸ್ಕೀಂನಲ್ಲಿ ಎಲ್ಲರಿಗೂ 200 ಯುನಿಟ್ ತನಕ ುಚಿತ ವಿದ್ಯುತ್ ಘೋಷಣೆ ಮಾಡಿದ ಬೆನ್ನಲ್ಲೇ ಪ್ರತಿ ಯುನಿಟ್ ಗೆ 70 ಪೈಸೆಯಷ್ಟು ಹೆಚ್ಚಳ ಮಾಡಿ ನಷ್ಟ ಭರ್ತಿ ಮಾಡಲು ಗ್ರಾಹಕರಿಗೆ ಬರೆ ಹಾಕಲು ಮುಂದಾಗಿದೆ. ಜೂ.1 ರಿಂದಲೇ ಜ್ಯಾರಿಗೆ ಬರುವಂತೆ ಸರಕಾರ ಇದೀಗ ಆದೇಶ ಹೊರಡಿಸಿದೆ. ಕರ್ನಾಟಕ ಎಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಷನ್ ಪ್ರತಿ ಯುನಿಟ್ ಗೆ 70 ಪೈಸೆ ಹೆಚ್ಚಳ ಮಾಡಿದ್ದು, ವಿದ್ಯುತ್ ಸರಬರಾಜು ಕಂಪೆನಿಗಳಿಗೆ ನಷ್ಟದ ಕಾರಣ ನೀಡಿ ಈ

ವಿದ್ಯುತ್ ದರ ಪ್ರತಿ ಯುನಿಟ್ ಗೆ 70 ಪೈಸೆ ಹೆಚ್ಚಳ | ಸರಕಾರದಿಂದ ಆದೇಶ | ನಷ್ಟ ಭರ್ತಿ ಮಾಡಲು ಗ್ರಾಹಕರ ಮೇಲೆ ಬರೆ Read More »

ಈ ಆರ್ಥಿಕ ವರ್ಷದಲ್ಲಿ 5 ಗ್ಯಾರಂಟಿ ಯೋಜನೆ ಜಾರಿಗೊಳಿಸಲು ನಿರ್ಧಾರ: ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ

ಬೆಂಗಳೂರು: ಜೂನ್ ತಿಂಗಳ 11ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಬಗ್ಗೆ ಸಂಪುಟ ಸಭೆಯ ಬಳಿಕ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಯಾವುದೇ ಜಾತಿ, ಧರ್ಮ, ಭಾಷೆ ನೋಡದೆ ಈ ಯೋಜನೆಗಳನ್ನು ತಲುಪಿಸುತ್ತೇವೆ ಎಂದರು. ‘ AC ಬಸ್ ಮತ್ತು ಸ್ಲೀಪರ್ ಬಸ್ ಗಳನ್ನು ಹೊರತುಪಡಿಸಿ ಶಕ್ತಿ ಗ್ಯಾರೆಂಟಿ ಯೋಜನೆಯಡಿ ಎಲ್ಲ ಮಹಿಳೆಯರಿಗೆ, ವಿದ್ಯಾರ್ಥಿಗಳು ಉಚಿತವಾಗಿ ಸರ್ಕಾರಿ ಬಸ್​​ನಲ್ಲಿ ಸಂಚರಿಸಬಹುದಾಗಿದೆ’ ಎಂದು ತಿಳಿಸಿದರು.

ಈ ಆರ್ಥಿಕ ವರ್ಷದಲ್ಲಿ 5 ಗ್ಯಾರಂಟಿ ಯೋಜನೆ ಜಾರಿಗೊಳಿಸಲು ನಿರ್ಧಾರ: ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ Read More »

ರಾಜ್ಯ ಸರ್ಕಾರದ ನೂತನ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ

ಪುತ್ತೂರು: ನೂತನ ರಾಜ್ಯ ಕಾಂಗ್ರೆಸ್ ಸರಕಾರದ ಜಿಲ್ಲಾ ಉಸ್ತುವಾರಿ ಸಚಿವ ಪಟ್ಟಿ ತಯಾರಿಸಲಾಗಿದ್ದು, ಈ ಕೆಳಗಿನಂತಿದೆ. ಬೆಂಗಳೂರು ನಗರ  ಕೆಜೆ ಜಾರ್ಜ್, ಬೆಂಗಳೂರು ಗ್ರಾಮಾಂತರ ರಾಮಲಿಂಗಾ ರೆಡ್ಡಿ, ಕೋಲಾರ ಕೆ ಎಚ್ ಮುನಿಯಪ್ಪ, ಚಿಕ್ಕಬಳ್ಳಾಪುರ ಡಾ ಎಮ್ ಸಿ ಸುಧಾಕರ, ರಾಮನಗರ ಡಿ ಕೆ ಶಿವಕುಮಾರ, ಮಂಡ್ಯ ಚೆಲುವರಾಯ ಸ್ವಾಮಿ, ಮೈಸೂರು ಎಚ್ ಸಿ ಮಹದೇವಪ್ಪ, ಚಾಮರಾಜನಗರ ದಿನೇಶ್ ಗುಂಡೂರಾವ್, ಕೊಡಗು ವೆಂಕಟೇಶ್, ದಕ್ಷಿಣ ಕನ್ನಡ ಕೃಷ್ಣ ಬೈರೇಗೌಡ, ಉಡುಪಿ ಡಾ ಜಿ ಪರಮೇಶ್ವರ, ಉತ್ತರ ಕನ್ನಡ

ರಾಜ್ಯ ಸರ್ಕಾರದ ನೂತನ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ Read More »

ನೂತನ ಸಹಕಾರ ಸಚಿವ ರಾಜಣ್ಣ ಅವರನ್ನು ಅಭಿನಂದಿಸಿದ ಸವಣೂರು ಸೀತಾರಾಮ ರೈ 

ಸವಣೂರು : ಕರ್ನಾಟಕ ರಾಜ್ಯದ ನೂತನ ಸಹಕಾರಿ ಸಚಿವರಾದ ಕೆ ಎನ್ ರಾಜಣ್ಣ ಅವರನ್ನು ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಕೆ ಸೀತಾರಾಮ ರೈ ಸವಣೂರು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಬೆಂಗಳೂರಿನ ಸಹಕಾರ ಸಂಘಗಳ ನಿಬಂಧಕರ ಕಚೇರಿಯಲ್ಲಿ ಸಚಿವರನ್ನು ಭೇಟಿಯಾಗಿ ಸೀತಾರಾಮ ರೈ ಅವರು ಅಭಿನಂದನೆಯನ್ನು ಸಲ್ಲಿಸಿದರು.  ಈ ಸಂದರ್ಭದಲ್ಲಿ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರಾದ ಎಸ್.ಎಂ.ಬಾಪೂ ಸಾಹೇಬ್ ಮತ್ತು ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾದ ನಾಗೇಶ್ ಬಾಬು

ನೂತನ ಸಹಕಾರ ಸಚಿವ ರಾಜಣ್ಣ ಅವರನ್ನು ಅಭಿನಂದಿಸಿದ ಸವಣೂರು ಸೀತಾರಾಮ ರೈ  Read More »

error: Content is protected !!
Scroll to Top