ರಾಜ್ಯ

ಪಾನ್ – ಆಧಾರ್ ಲಿಂಕ್ ಆಗಿದೆಯೇ? ಪರಿಶೀಲಿಸಲು ಇಲ್ಲಿದೆ ನೋಡಿ ಲಿಂಕ್ | ಹೀಗೆ ಮಾಡಿ ಆಧಾರ್ – ಪಾನ್ ಕಾರ್ಡ್ ಲಿಂಕ್… | ಪಾನ್- ಆಧಾರ್ ಲಿಂಕ್ ಗಡು ಜೂನ್ 30ರವರೆಗೆ ವಿಸ್ತರಣೆ

ಪುತ್ತೂರು: ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡುವ ಕೊನೆ ದಿನವನ್ನು ಕೇಂದ್ರ ಸರಕಾರ ವಿಸ್ತರಣೆ ಮಾಡಿದೆ. ಜೂನ್ 30ರವರೆಗೆ ದಿನ ವಿಸ್ತರಿಸಿ ಆದೇಶ ಹೊರಡಿಸಿದ್ದು, ಜುಲೈ 1ರಿಂದ ಕಡ್ಡಾಯ ಎಂದು ತಿಳಿಸಿದೆ. ನಿಮ್ಮ ಪಾನ್ – ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ ಅಥವಾ ಆಗಿಲ್ಲವೇ ಎಂದು ಮೊದಲಾಗಿ ತಿಳಿದುಕೊಳ್ಳಬೇಕು. ಅದಕ್ಕಾಗಿ ಇಲ್ಲಿ ನೀಡಿರುವ ಲಿಂಕ್ ಅನ್ನು ಬಳಸಿಕೊಳ್ಳಿ. https://eportal.incometax.gov.in/iec/foservices/#/pre-login/link-aadhaar-status ಈ ಲಿಂಕನ್ನು ಪ್ರೆಸ್ ಮಾಡಿದರೆ, ಸಿಗುವ ಪೋರ್ಟಲ್ ನಲ್ಲಿ ಆಧಾರ್ ಹಾಗೂ ಪಾನ್ ಕಾರ್ಡಿನ […]

ಪಾನ್ – ಆಧಾರ್ ಲಿಂಕ್ ಆಗಿದೆಯೇ? ಪರಿಶೀಲಿಸಲು ಇಲ್ಲಿದೆ ನೋಡಿ ಲಿಂಕ್ | ಹೀಗೆ ಮಾಡಿ ಆಧಾರ್ – ಪಾನ್ ಕಾರ್ಡ್ ಲಿಂಕ್… | ಪಾನ್- ಆಧಾರ್ ಲಿಂಕ್ ಗಡು ಜೂನ್ 30ರವರೆಗೆ ವಿಸ್ತರಣೆ Read More »

ಲೋಕಾಯುಕ್ತ ದಾಳಿ ಪ್ರಕರಣ : ಮಾಡಾಳ್ ವಿರೂಪಾಕ್ಷಪ್ಪ ಪೊಲೀಸ್ ಕಸ್ಟಡಿಗೆ

ಬೆಂಗಳೂರು : ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಐದು ದಿನಗಳ ಕಾಲ ಲೋಕಾಯುಕ್ತ ಪೊಲೀಸ್ ಕಸ್ಟಡಿಗೆ ನೀಡಲು ಮಾ.28 ರಂದು ಆದೇಶ ಹೊರಡಿಸಿದೆ. ಜಾಮೀನು ರದ್ದಾದ ನಂತರ ನಿನ್ನೆ ಸಂಜೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಬಂಧಿಸಿದ್ದ ಲೋಕಾಯುಕ್ತ ಪೊಲೀಸರು, ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.ಆರೋಪಿ ಶಾಸಕರ ವಿಚಾರಣೆ ನಡೆಸಿದ ಕೋರ್ಟ್, ಹೆಚ್ಚಿನ ವಿಚಾರಣೆಗಾಗಿ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಏಪ್ರಿಲ್ 1ರ ವರೆಗೆ

ಲೋಕಾಯುಕ್ತ ದಾಳಿ ಪ್ರಕರಣ : ಮಾಡಾಳ್ ವಿರೂಪಾಕ್ಷಪ್ಪ ಪೊಲೀಸ್ ಕಸ್ಟಡಿಗೆ Read More »

ಕೆಯ್ಯೂರು : ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ. 26 ರ ರಾತ್ರಿ ಕೆಯ್ಯೂರು ಗ್ರಾಮದಲ್ಲಿ ಸಂಭವಿಸಿದೆ. ಶೇಷಪ್ಪ ಪೂಜಾರಿ (75) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಶೇಷಪ್ಪ ಪೂಜಾರಿಯವರ ಅಳಿಯ ಗೋಪಾಲ ಪೂಜಾರಿ ತನ್ನ ಅತ್ತೆ, ಹೆಂಡತಿ, ಮಕ್ಕಳೊಂದಿಗೆ ಕೆಯ್ಯೂರು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆಗೆ ಹೋಗಿದ್ದು, ಈ ಸಂದರ್ಭ ಮನೆಯಲ್ಲಿ ಒಬ್ಬರೇ ಇದ್ದ ಶೇಷಪ್ಪ ಪೂಜಾರಿಯವರು ಮನೆಯ ಗೋಡೆಗೆ ಅಡ್ಡವಾಗಿ ಹಾಕಿದ ತೆಂಗಿನ ಮರದ ಅಡ್ಡಕ್ಕೆ ನೈಲಾನ್ ಹಗ್ಗವನ್ನು ಕಟ್ಟಿ ನೇಣು ಬಿಗಿದು

ಕೆಯ್ಯೂರು : ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ Read More »

ಆಧಾರ್‌ ಪಾನ್‌ ಗಡುವು ಜೂನ್‌ 30 ರವರೆಗೆ ವಿಸ್ತರಣೆ

ಮಂಗಳೂರು : ಪಾನ್ ಮತ್ತು ಆಧಾರ್ ಕಾರ್ಡ್‌ಗಳನ್ನು ಜೋಡಿಸಲು ಇರುವ ಕೊನೆಯ ದಿನಾಂಕವನ್ನು ಕೇಂದ್ರ ಸರ್ಕಾರ 2023ರ ಜೂನ್ 30ರವರೆಗೂ ವಿಸ್ತರಿಸಿದೆ. ಈ ಮೊದಲು 1 ಸಾವಿರ ರೂ ದಂಡ ಸಹಿತವಾಗಿ ಆಧಾರ್ ಹಾಗೂ ಪಾನ್ ಕಾರ್ಡ್ ಜೋಡಣೆಗೆ 2023ರ ಮಾರ್ಚ್ 31ರವರೆಗೆ ಸಮಯ ನೀಡಲಾಗಿತ್ತು. ಕೊನೆಯ ದಿನ ಸಮೀಪಿಸುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧದ ಜನರ ಆಕ್ರೋಶ ತೀವ್ರಗೊಂಡಿತ್ತು. ಜತೆಗೆ ಜೋಡಣೆಗೆ ವೇದಿಕೆಯಾಗಿರುವ ಆದಾಯ ತೆರಿಗೆ ಪೋರ್ಟಲ್‌ನಲ್ಲಿನ ಈ ವಿಭಾಗ ತೆರೆದುಕೊಳ್ಳುತ್ತಲೇ ಇರಲಿಲ್ಲ. ಈ ತಾಂತ್ರಿಕ ದೋಷದ

ಆಧಾರ್‌ ಪಾನ್‌ ಗಡುವು ಜೂನ್‌ 30 ರವರೆಗೆ ವಿಸ್ತರಣೆ Read More »

ಅಡ್ಯಾರ್ : ಐಸ್ ಕ್ರೀಮ್ ದಾಸ್ತಾನು ಕೇಂದ್ರದಲ್ಲಿ ಬೆಂಕಿ ಅವಘಡ

ಮಂಗಳೂರು : ಮಂಗಳೂರು ಹೊರವಲಯದ ಅಡ್ಯಾರ್ ನಲ್ಲಿರುವ ಐಸ್ ಕ್ರೀಮ್ ದಾಸ್ತಾನು ಕೇಂದ್ರವೊಂದರಲ್ಲಿ ಸೋಮವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಅಪಾರ ನಾಶನಷ್ಟ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗಲಿದೆ ಎನ್ನಲಾಗಿದೆ. ಈ ಕಟ್ಟಡದಲ್ಲಿ ನಂದಿನಿ ಐಸ್‌ ಕ್ರೀಂ ಉತ್ಪನ್ನಗಳನ್ನು ಇಡಲಾಗಿದೆ. ಇದರ ಜೊತೆ ಐಸ್‌ ಕ್ರೀಂ ತಯಾರಿಕಾ ಘಟಕಕ್ಕೂ ಬೆಂಕಿ ಹಬ್ಬಿದೆ. ಮೂರು ಅಗ್ನಿಶಾಮಕ ವಾಹನಗಳು ಸುಮಾರು ನಾಲ್ಕು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಅಗ್ನಿ ದುರಂತದಲ್ಲಿ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ.

ಅಡ್ಯಾರ್ : ಐಸ್ ಕ್ರೀಮ್ ದಾಸ್ತಾನು ಕೇಂದ್ರದಲ್ಲಿ ಬೆಂಕಿ ಅವಘಡ Read More »

ಏ.5ಕ್ಕೆ ರಾಹುಲ್‌ ಗಾಂಧಿ ಕೋಲಾರಕ್ಕೆ ಭೇಟಿ

ಕೋಲಾರದಿಂದಲೇ ಅನರ್ಹತೆಗೆ ಪ್ರತ್ಯುತ್ತರ ನೀಡಲು ಕಾಂಗ್ರೆಸ್‌ ಪ್ಲಾನಿಂಗ್‌ ಕೋಲಾರ : ಕೋಲಾರದಲ್ಲಿ 2019ರ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಮೋದಿ ಸಮುದಾಯದ ವಿರುದ್ಧ ಅವಹೇಳಕಾರಿಯಾಗಿ ಮಾತನಾಡಿದ್ದಾರೆಂಬ ಆರೋಪದ ಮೇಲೆ ನ್ಯಾಯಾಲಯದಿಂದ ಶಿಕ್ಷೆ ಮತ್ತು ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ರಾಹುಲ್​ ಗಾಂಧಿ ಕೋಲಾರದಿಂದಲೇ ಪ್ರತ್ಯುತ್ತರ ನೀಡಲು ನಿರ್ಧರಿಸಿದ್ದಾರೆ. ಏಪ್ರಿಲ್​ 5 ರಂದು ರಾಹುಲ್​ ಗಾಂಧಿ ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಕೋಲಾರಕ್ಕೆ ಆಗಮಿಸಲಿದ್ದಾರೆ. ರಾಹುಲ್​ ಗಾಂಧಿ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹವಾಗಿದ್ದು ಕೋಲಾರದಲ್ಲಿ ಮಾಡಿದ ಬಾಷಣದಿಂದ. ಹೀಗಾಗಿ ಕೋಲಾರದಿಂದಲೇ ಪ್ರಚಾರ

ಏ.5ಕ್ಕೆ ರಾಹುಲ್‌ ಗಾಂಧಿ ಕೋಲಾರಕ್ಕೆ ಭೇಟಿ Read More »

ಗಂಗಮ್ಮ ತಾಯಿಗೆ ಪಂಜುರ್ಲಿ ದೈವದಂತೆ ಅಲಂಕಾರ : ಕರಾವಳಿಯಲ್ಲಿ ವಿರೋಧ

ಕಾಂತಾರ ಸಿನಿಮಾದ ಪ್ರಭಾವದಿಂದಲೇ ಇಷ್ಟೆಲ್ಲ ಅಪಸವ್ಯ ಅಗುತ್ತಿರುವುದು ಎಂದು ಆಕ್ರೋಶ ಮಂಗಳೂರು : ಕರಾವಳಿ ಹೊರತುಪಡಿಸಿ ಬೇರೆ ಎಲ್ಲೂ ದೈವಾರಾಧನೆಯ ಸಂಪ್ರದಾಯವಿಲ್ಲ. ಆದರೆ ಕಾಂತಾರ ಸಿನೆಮಾದ ಪ್ರಭಾವದಿಂದಾಗಿ ವಿವಿಧೆಡೆಯಲ್ಲಿ ದೈವರಾಧನೆ ಅಥವಾ ಅದನ್ನು ಹೋಲುವಂಥ ಆರಾಧನೆ ಮಾಡಿ ಜನರಿಗೆ ಮಂಕುಬುದ್ದಿ ಎರಚಲು ಯತ್ನಿಸುತ್ತಿರುವ ಘಟನೆಗಳು ಸಂಭವಿಸುತ್ತಿದ್ದು, ಇದನ್ನು ತುಳುನಾಡಿನವರು ಬಲವಾಗಿ ವಿರೋಧಿಸುತ್ತಿದ್ದಾರೆ.‘ಕಾಂತಾರ’ ಸಿನಿಮಾ ಬಿಡುಗಡೆ ಆದ ನಂತರ ಬಹಳಷ್ಟು ಜನರಿಗೆ ಕರಾವಳಿ ಸಂಸ್ಕೃತಿ, ಪಂಜುರ್ಲಿ ದೈವದ ಪರಿಚಯ ಆಯ್ತು. ಆದರೆ ಕೆಲವೆಡೆ ಇದಕ್ಕೆ ತದ್ವಿರುದ್ಧವಾಗಿ ಪಂಜುರ್ಲಿ ದೈವದ

ಗಂಗಮ್ಮ ತಾಯಿಗೆ ಪಂಜುರ್ಲಿ ದೈವದಂತೆ ಅಲಂಕಾರ : ಕರಾವಳಿಯಲ್ಲಿ ವಿರೋಧ Read More »

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಎನ್​ಐಎ ಯಿಂದ ಸುಳ್ಯ ಪಿಎಫ್ ಐ ಕಚೇರಿ ಜಪ್ತಿ

ಸುಳ್ಯ : ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಮಾ.27 ರಂದು ಸುಳ್ಯ ಪೇಟೆಯಲ್ಲಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಚೇರಿಯನ್ನು ಜಪ್ತಿ ಮಾಡಿದೆ. ಸುಳ್ಯ ತಾಲೂಕು ಗಾಂಧಿನಗರ ಅಲೆಟ್ಟಿ ರಸ್ತೆ, ತಾಹಿರಾ ಕಾಂಪ್ಲೆಕ್ಸ್​ನ ಮೊದಲ ಮಹಡಿಯಲ್ಲಿ ಪಿಎಫ್‌ಐ ಕಚೇರಿ ಇದ್ದು ಇದನ್ನು ವಶಕ್ಕೆ ಪಡೆದಿದೆ.ವಶಪಡಿಸಿಕೊಂಡ ಆಸ್ತಿಯ ಪ್ರತಿಯನ್ನು ಮಾಲೀಕರು, ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಳುಹಿಸಲಾಗಿದೆ. ಆಸ್ತಿಯನ್ನು ಗುತ್ತಿಗೆ ಅಥವಾ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಎನ್​ಐಎ ಯಿಂದ ಸುಳ್ಯ ಪಿಎಫ್ ಐ ಕಚೇರಿ ಜಪ್ತಿ Read More »

ಒಳಮೀಸಲಾತಿ ನಿರ್ಧಾರದ ವಿರುದ್ಧ ಯಡಿಯೂರಪ್ಪನವರ ಮನೆಗೆ ಕಲ್ಲು ತೂರಾಟ

ಶಿವಮೊಗ್ಗ : ರಾಜ್ಯ ಬಿಜೆಪಿ ಸರ್ಕಾರದ ಒಳಮೀಸಲಾತಿ ನಿರ್ಧಾರವನ್ನು ಖಂಡಿಸಿ ರಾಜ್ಯಾದ್ಯಂತ ಹೋರಾಟ, ಪ್ರತಿಭಟನೆ ತೀವ್ರವಾಗಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ನಿವಾಸಕ್ಕೆ ಇಂದು ಅನೇಕ ಮಂದಿ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದಲ್ಲದೆ ಮನೆಗೆ ಕಲ್ಲು ತೂರಾಟ ನಡೆಸಿದ್ದಾರೆ ಒಳ ಮೀಸಲಾತಿ ಪ್ರಮಾಣ ಕಡಿಮೆ ಮಾಡಿರುವುದನ್ನು ಖಂಡಿಸಿ ಇಂದು ಶಿಕಾರಿಪುರದಲ್ಲಿ ಬಂಜಾರ, ಕೊರಚ, ಕೊರಮ, ಭೋವಿ ಸಮುದಾಯದವರು ತೀವ್ರ ಪ್ರತಿಭಟನೆ ನಡೆಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿದರು.

ಒಳಮೀಸಲಾತಿ ನಿರ್ಧಾರದ ವಿರುದ್ಧ ಯಡಿಯೂರಪ್ಪನವರ ಮನೆಗೆ ಕಲ್ಲು ತೂರಾಟ Read More »

ವಾರೆಂಟ್ ಜಾರಿಯಾಗಿದ್ದು, ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ : 6 ತಿಂಗಳು ಜೈಲು

ಮಂಗಳೂರು : ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿದ್ದರೂ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಾ.27 ರಂದು ಪೊಲೀಸರು ಬಂಧಿಸಿದ್ದಾರೆ. ಆತನಿಗೆ ನ್ಯಾಯಾಲಯ 6 ತಿಂಗಳು ಜೈಲು ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿದೆ. ಕಡಬ ಗ್ರಾಮದ ಲಿಗೋರಿ ಡಿಸೋಜ ಪುತ್ರ ವಿಲ್ಫ್ರೇಡ್ ಡಿಸೋಜ (34) ಬಂಧಿತ ಆರೋಪಿ. ಈತ ಪ್ರಸ್ತುತ ಮಂಗಳೂರು ಕುಲಶೇಖರ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಸಿರ್ಲಾ ಪಡ್ಪು ಹೆವೆನ್ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದು, ಈತನ ವಿರುದ್ಧ conviction warrent ಹೊರಡಿಸಿದ ನಂತರ ಆತ ತಲೆಮರೆಸಿಕೊಂಡಿದ್ದ. ಇನ್ನು

ವಾರೆಂಟ್ ಜಾರಿಯಾಗಿದ್ದು, ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ : 6 ತಿಂಗಳು ಜೈಲು Read More »

error: Content is protected !!
Scroll to Top