ರಾಜ್ಯ

ಹಿಂದೂಗಳ ಧ್ವನಿ ಅಡಗಿಸಲು ಹೊರಟಿದೆ ಹಿಂದೂ ದ್ವೇಷಿ ಕಾಂಗ್ರೆಸ್ ಸರ್ಕಾರ : ಆರ್‌. ಅಶೋಕ್‌

ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದಕ್ಕೆ ಆಕ್ರೋಶ ಬೆಂಗಳೂರು: ಪ್ರಚೋದನಕಾರಿ ಹೇಳಿಕೆ ನೀಡಿರುವ ಆರೋಪದ ಮೇಲೆ ಆರ್​ಎಸ್​ಎಸ್​ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್ಐಆರ್ ದಾಖಲಿಸಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಹಿಂದೂಗಳ ಧ್ವನಿ ಅಡಗಿಸಲು ಹೊರಟಿದೆ ಹಿಂದೂ ದ್ವೇಷಿ ಕಾಂಗ್ರೆಸ್ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ. ಸರ್ಕಾರಕ್ಕೆ ಸರಣಿ ಪ್ರಶ್ನೆ ಮಾಡಿರುವ ಅವರು, […]

ಹಿಂದೂಗಳ ಧ್ವನಿ ಅಡಗಿಸಲು ಹೊರಟಿದೆ ಹಿಂದೂ ದ್ವೇಷಿ ಕಾಂಗ್ರೆಸ್ ಸರ್ಕಾರ : ಆರ್‌. ಅಶೋಕ್‌ Read More »

ದಕ್ಷಿಣ ಕನ್ನಡದಲ್ಲಿ ಪೊಲೀಸರಿಂದ ಆಪರೇಷನ್‌ ಗಡಿಪಾರು ಅಸ್ತ್ರ ಪ್ರಯೋಗ

36 ಮಂದಿಯ ಗಡಿಪಾರು ಪ್ರಕ್ರಿಯೆ ಶುರು; ಬಿಜೆಪಿಯಿಂದ ಹೋರಾಟದ ಎಚ್ಚರಿಕೆ ಮಂಗಳೂರು : ಸರಣಿ ಹತ್ಯೆಗಳು ಮತ್ತು ಪ್ರಚೋದನಕಾರಿ ಭಾಷಣಗಳಿಂದ ಪ್ರಕ್ಷುಬ್ಧಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಹಜ ಸ್ಥಿತಿಗೆ ತರಲು ಪೊಲೀಸರು ಆಪರೇಷನ್‌ ಗಡಿಪಾರು ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಹಿಂದು ಮುಖಂಡ ಅರುಣ್‌ ಪುತ್ತಿಲ ಅವರಿಗೆ ಗಡಿಪಾರು ನೋಟಿಸ್‌ ಕೊಟ್ಟ ಬೆನ್ನಲ್ಲೇ ಇದೇ ಮಾದರಿಯಲ್ಲಿ ಇನ್ನೂ 36 ಜನರಿಗೆ ನೋಟಿಸ್‌ ನೀಡಲಾಗಿದೆ. ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿ 36 ಜನರ ಗಡಿಪಾರು ಪ್ರಕ್ರಿಯೆ ಪ್ರಾರಂಭಿಸಲಾಗಿದೆ.

ದಕ್ಷಿಣ ಕನ್ನಡದಲ್ಲಿ ಪೊಲೀಸರಿಂದ ಆಪರೇಷನ್‌ ಗಡಿಪಾರು ಅಸ್ತ್ರ ಪ್ರಯೋಗ Read More »

ಕಲ್ಲಡ್ಕ ಪ್ರಭಾಕರ ಭಟ್‌ ಬಂಧಿಸದಂತೆ ಹೈಕೋರ್ಟ್‌ ಆದೇಶ

ದುರುದ್ದೇಶದಿಂದ ಎಫ್​ಐಆರ್​ ದಾಖಲಿಸಲಾಗಿದೆ ಎಂದು ವಾದ ಮಂಗಳೂರು: ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ಬಂಧನ ಸಹಿತ ಯಾವುದೇ ಒತ್ತಡದ ಕ್ರಮ ಕೈಗೊಳ್ಳದಂತೆ ನ್ಯಾ‌.ಕೃಷ್ಣಕುಮಾರ್ ಅವರಿದ್ದ ಹೈಕೋರ್ಟ್​ನ ಏಕಸದಸ್ಯ ಪೀಠ ಆದೇಶ ಹೊರಡಿಸಿ ಜೂನ್ 10ಕ್ಕೆ ವಿಚಾರಣೆ ಮುಂದೂಡಿದೆ. ಕಲ್ಲಡ್ಕ ಪ್ರಭಾಕರ ಭಟ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದರು. ಎಫ್‌ಐಆರ್‌ ದಾಖಲಾದ ಬಳಿಕ ಪ್ರಕರಣ ರದ್ದು ಕೋರಿ ಕಲ್ಲಡ್ಕ ಪ್ರಭಾಕರ ಭಟ್ ನಿನ್ನೆಯೇ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಭಾಷಣ ಮಾಡಿದ ಹಲವು

ಕಲ್ಲಡ್ಕ ಪ್ರಭಾಕರ ಭಟ್‌ ಬಂಧಿಸದಂತೆ ಹೈಕೋರ್ಟ್‌ ಆದೇಶ Read More »

ಕೆನರಾ ಬ್ಯಾಂಕ್‌ನಿಂದ 59 ಕೆಜಿ ಚಿನ್ನ ಕಳ್ಳತನ

ಪೊಲೀಸರಿಗೆ ಸವಾಲಾಗಿ ಪರಿಣಮಿಸಿರುವ ಭಾರಿ ದೊಡ್ಡ ಕಳ್ಳತನ ಕೃತ್ಯ ಬೆಂಗಳೂರು: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಕೆನರಾ ಬ್ಯಾಂಕ್ ಶಾಖೆಯಿಂದ ಕಳ್ಳರು ಕಳೆದ ಮೇ 25ರಂದು ಬರೋಬ್ಬರಿ 58.975 ಕಿಲೋ ಚಿನ್ನ ಮತ್ತು 5.20 ಲ.ರೂ. ನಗದು ಕಳ್ಳತನ ಮಾಡಿದ್ದು, ಈ ಕಳ್ಳತನ ಪ್ರಕರಣ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಸಿನಿಮೀಯ ರೀತಿಯಲ್ಲಿ, ಮಾಸ್ಟರ್ ಪ್ಲ್ಯಾನ್ ಮಾಡಿ ಕಳ್ಳರು ಕೋಟಿ ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದಿದ್ದಾರೆ. ಖದೀಮರ ಪತ್ತೆಗೆ ಪೊಲೀಸ್​ ಇಲಾಖೆ ಎಂಟು ವಿಶೇಷ ತಂಡಗಳನ್ನು ರಚಿಸಿದೆ. ಬ್ಯಾಂಕ್​ನಲ್ಲಿದ್ದ 58

ಕೆನರಾ ಬ್ಯಾಂಕ್‌ನಿಂದ 59 ಕೆಜಿ ಚಿನ್ನ ಕಳ್ಳತನ Read More »

ವಿರಾಟ್‌ ಕೊಹ್ಲಿ ಪಬ್‌ ಮೇಲೆ ಇನ್ನೊಂದು ಕೇಸ್‌

ಕಾನೂನು ಉಲ್ಲಂಘಿಸಿ ಕಾರ್ಯಾಚರಿಸುತ್ತಿರುವ ಪಬ್‌ ಬೆಂಗಳೂರು: ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಮಾಲೀಕತ್ವದ ಬೆಂಗಳೂರಿನಲ್ಲಿರುವ ಪಬ್ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.ಪ್ರತ್ಯೇಕ ಸ್ಥಳ ಮೀಸಲಿಡದೆ ಧೂಮಪಾನಕ್ಕೆ ಅವಕಾಶ ನೀಡಿದ್ದಕ್ಕಾಗಿ ಬೆಂಗಳೂರಿನ ಕಸ್ತೂರ್‌ಬಾ ರಸ್ತೆಯಲ್ಲಿರುವ ಒನ್ 8 ಕಮ್ಯೂನ್ ಬಾರ್ & ರೆಸ್ಟೋರೆಂಟ್‌ನ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಮೇ 29ರಂದು ಕಬ್ಬನ್ ಪಾರ್ಕ್ ಪೊಲೀಸರು ಬಾರ್ ಮೇಲೆ ದಾಳಿ ಮಾಡಿ, ಸ್ವಯಂಪ್ರೇರಿತವಾಗಿ ಎನ್‌ಸಿಆರ್ ದಾಖಲಿಸಿಕೊಂಡಿದ್ದರು. ಇದೀಗ ನ್ಯಾಯಾಲಯದ ಅನುಮತಿ ಪಡೆದು, ಕೊಟ್ಪಾ ಕಾಯ್ದೆಯಡಿ

ವಿರಾಟ್‌ ಕೊಹ್ಲಿ ಪಬ್‌ ಮೇಲೆ ಇನ್ನೊಂದು ಕೇಸ್‌ Read More »

ದಕ್ಷಿಣ ಕನ್ನಡ ಉಸ್ತುವಾರಿ ಬೇಡ ಎಂದಿಲ್ಲ : ದಿನೇಶ್‌ ಗುಂಡೂರಾವ್‌

ಉಸ್ತುವಾರಿ ಹೊರೆಯಲ್ಲ, ಲಾಬಿ ನಡೆಯುತ್ತಿಲ್ಲ ಎಂದು ಸ್ಪಷ್ಟನೆ ಬೆಂಗಳೂರು: ನನಗೆ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಬೇಡವೆಂದು ಹೇಳಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ದಿನೇಶ್‌ ಗುಂಡೂರಾವ್‌ಗೆ ದಕ್ಷಿಣ ಕನ್ನಡದ ಉಸ್ತುವಾರಿ ಜವಾಬ್ದಾರಿ ಹೊರೆಯಾಗಿದೆ, ಹೀಗಾಗಿ ಅವರು ಉಸ್ತುವಾರಿ ಬದಲಾಯಿಸಲು ಮುಖ್ಯಮಂತ್ರಿಯನ್ನು ಕೋರಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿತ್ತು. ಇದಕ್ಕೆ ಬೆಂಗಳೂರಿನಲ್ಲಿ ಸ್ಪಷ್ಟನೆ ನೀಡಿದ ಅವರು, ನನ್ನ ವಿರುದ್ಧ ಸ್ಥಳೀಯ ಲಾಬಿ ಇಲ್ಲ. ಕೆಲವರು ಏನೋ ಹೇಳಬಹುದು, ಮೃತನ ಮನೆಗೆ ಹೋಗಿದ್ದೆ, ಅವನು

ದಕ್ಷಿಣ ಕನ್ನಡ ಉಸ್ತುವಾರಿ ಬೇಡ ಎಂದಿಲ್ಲ : ದಿನೇಶ್‌ ಗುಂಡೂರಾವ್‌ Read More »

ಕರ್ನಾಟಕ ರಾಜ್ಯಾದ್ಯಂತ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ

ಬೆಂಗಳೂರು: ಕರ್ನಾಟಕದಲ್ಲಿ ಮುಂದಿನ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣಕನ್ನಡಗಳಿಗೆ, ಕೊಡಗು, ಚಿಕ್ಕಮಗಳೂರು ಸೇರಿ 6 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಇತರ ಜಿಲ್ಲೆಗಳಾದ ಬಾಗಲಕೋಟೆ, ಯಾದಗಿರಿ, ಹಾವೇರಿ, ಗದಗ, ಹಾಸನದಲ್ಲಿ ಯಲ್ಲೋ ಅಲರ್ಟ್, ಹಾಗೆಯೇ ಬೆಳಗಾವಿ, ಕಲಬುರಗಿ, ವಿಜಯಪುರ, ಬೀದ‌ರ್ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. –

ಕರ್ನಾಟಕ ರಾಜ್ಯಾದ್ಯಂತ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ Read More »

ಪೊಲೀಸರು ಇನ್ನು ವಾಹನಗಳ ಕೀಲಿಕೈ ಕಿತ್ತುಕೊಳ್ಳುವಂತಿಲ್ಲ

ವಾಹನ ತಪಾಸಣೆಗಾಗಿ ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿದ ಡಿಜಿಪಿ ಬೆಂಗಳೂರು : ಮಂಡ್ಯ ಜಿಲ್ಲೆಯಲ್ಲಿ ಇತ್ತೀಚೆಗೆ ಸಂಚಾರ ನಿಯಮ ಉಲ್ಲಂಘಿಸುವ ವಾಹನ ತಪಾಸಣೆ ವೇಳೆ ಅಪಘಾತಕ್ಕೀಡಾಗಿ ಮಗು ಸಾವಿಗೀಡಾದ ಪ್ರಕರಣ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಪೊಲೀಸರ ವಾಹನ ತಪಾಸಣೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಲವು ಸೂಚನೆಗಳನ್ನು ನೀಡಿದ್ದಾರೆ. ಈ ಸಂಬಂಧ ಶನಿವಾರ ಸುತ್ತೋಲೆ ಹೊರಡಿಸಿರುವ ಡಿಜಿಪಿ-ಐಜಿಪಿ ಡಾ.ಎಂ.ಎ.ಸಲೀಂ, ಕಣ್ಣಿಗೆ ಕಾಣುವಂತೆ ಸಂಚಾರ ನಿಯಮ ಉಲ್ಲಂಘಿಸದ ವಾಹನಗಳನ್ನು ಅಡ್ಡಗಟ್ಟಿ ತಪಾಸಣೆ ಮಾಡಬಾರದು. ವಾಹನ ತಪಾಸಣೆ ವೇಳೆ ಬಾಡಿ ವೋರ್ನ್‌ ಕ್ಯಾಮೆರಾಗಳನ್ನು ಕಡ್ಡಾಯವಾಗಿ

ಪೊಲೀಸರು ಇನ್ನು ವಾಹನಗಳ ಕೀಲಿಕೈ ಕಿತ್ತುಕೊಳ್ಳುವಂತಿಲ್ಲ Read More »

15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಇಬ್ಬರು ಆರೋಪಿಗಳು ಸೆರೆ

ಬೆಳಗಾವಿಯಲ್ಲಿ ಒಂದೇ ವಾರದಲ್ಲಿ ಸಂಭವಿಸಿದ ಎರಡನೇ ಪ್ರಕರಣ ಬೆಳಗಾವಿ : ಬೆಳಗಾವಿಯಲ್ಲಿ ಇನ್ನೊಂದು ಗ್ಯಾಂಗ್‌ರೇಪ್‌ ಪ್ರಕರಣ ಸಂಭವಿಸಿದೆ. ಹದಿನೈದು ವರ್ಷದ ಬಾಲಕಿ ಮೇಲೆ 6 ಜನ ಎರಡೆರಡು ಬಾರಿ ಸಾಮೂಹಿಕ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ನಗರದ ಹೊರವಲಯದ ಕಾಕತಿ ಪೊಲೀಸ್‌ ಠಾಣೆ ವ್ಯಾಪ್ತಿಯ ಗುಡ್ಡದಲ್ಲಿ ನಡೆದಿದೆ.ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಎಫ್‌ಐಆರ್​ ದಾಖಲಾದ ಬಳಿಕ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಸಹಿತ ಉಳಿದ ನಾಲ್ವರು ತಪ್ಪಿಸಿಕೊಂಡಿದ್ದಾರೆ. ಆರು ತಿಂಗಳ ಹಿಂದೆ ಸ್ನೇಹಿತ ಬಾಲಕಿಯನ್ನು

15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಇಬ್ಬರು ಆರೋಪಿಗಳು ಸೆರೆ Read More »

ಮಹಿಳೆಗೆ 92 ಲ.ರೂ. ವಂಚನೆ : ಖ್ಯಾತ ನಿರ್ಮಾಪಕನ ವಿರುದ್ಧ ದೂರು ದಾಖಲು

ಶಿವರಾಜ್‌ಕುಮಾರ್‌, ಗಣೇಶ್‌ ಅಭಿನಯದ ಸಿನಿಮಾ ಮಾಡುತ್ತಿದ್ದೇನೆ ಎಂದು ನಂಬಿಸಿ ವಂಚನೆ ಬೆಂಗಳೂರು : ಕನ್ನಡದ ಖ್ಯಾತ ಚಿತ್ರ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಮಹಿಳೆಯೊಬ್ಬರಿಗೆ 92 ಲ.ರೂ. ವಂಚಿಸಿದ ಕುರಿತು ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​ಐ ದಾಖಲಾಗಿದೆ. ಶಿವರಾಜ್​ಕುಮಾರ್, ಗಣೇಶ್ ಜೊತೆ ಸಿನಿಮಾ ಮಾಡುವುದಾಗಿ ನಂಬಿಸಿ ಮಹಿಳೆಯಿಂದ ಸೂರಪ್ಪ ಬಾಬು ಹಣ ಪಡೆದಿದ್ದರು ಎನ್ನಲಾಗಿದೆ. ಆದರೆ ನಂತರ ಸಾಲ ವಾಪಸ್ ಕೇಳಿದಾಗ ಮಹಿಳೆಗೆ ಬೆದರಿಕೆ ಹಾಕಿದರು ಎಂಬ ಆರೋಪಿಸಲಾಗಿದೆ. ಪುನೀತ್ ರಾಜ್​ಕುಮಾರ್​ ನಟನೆಯ ‘ಪೃಥ್ವಿ’, ಕಿಚ್ಚ

ಮಹಿಳೆಗೆ 92 ಲ.ರೂ. ವಂಚನೆ : ಖ್ಯಾತ ನಿರ್ಮಾಪಕನ ವಿರುದ್ಧ ದೂರು ದಾಖಲು Read More »

error: Content is protected !!
Scroll to Top