ರಾಜ್ಯ

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಆರೋಪಿ ರನ್ಯಾಳ 34.12 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು

ಬೆಎಂಗಳೂರಿನ ಮನೆ, ನಿವೇಶನ ಇನ್ನಿತರ ಆಸ್ತಿ ಜಪ್ತಿ ಬೆಂಗಳೂರು : ಚಿನ್ನ ಕಳ್ಳ ಸಾಗಾಟ ಪ್ರಕರಣದಲ್ಲಿ ಬಂಧಿತಳಾಗಿರುವ ನಟಿ ರನ್ಯಾ ರಾವ್​​ಗೆ ಸೇರಿದ 34.12 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಬೆಂಗಳೂರಿನ ಅರ್ಕಾವತಿ ಬಡವಾಣೆಯಲ್ಲಿನ ನಿವೇಶನ, ವಿಕ್ಟೋರಿಯಾ ಲೇಔಟ್​ನಲ್ಲಿನ ಮನೆ, ಅನೇಕಲ್​ನಲ್ಲಿನ ಕೃಷಿ ಜಮೀನು ಮತ್ತು ತುಮಕೂರಿನಲ್ಲಿನ ಜಮೀನನ್ನು ಇಡಿ ಜಪ್ತಿ ಮಾಡಿದೆ. ಸಿಬಿಐ ಮತ್ತು ರೆವಿನ್ಯೂ ಗುಪ್ತಚರ ನಿರ್ದೇಶನಾಲಯ (ಡಿಆರ್​ಐ) ಒಪ್ಪಿಗೆ ಮೇರೆಗೆ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿದೆ. […]

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಆರೋಪಿ ರನ್ಯಾಳ 34.12 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು Read More »

ಪಿಲಿಕುಳ ಜೈವಿಕ ಉದ್ಯಾನದಲ್ಲಿ ಪ್ರಾಣಿಗಳ ನಿಗೂಢ ಸಾವು

ಒಂಬತ್ತು ಅಪರೂಪದ ಪ್ರಾಣಿಗಳು ಮೃತಪಟ್ಟಿರುವುದು ಬಹಿರಂಗ ಮಂಗಳೂರು: ಮಂಗಳೂರಿನ ವಾಮಂಜೂರು ಸಮೀಪ ಇರುವ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಕೆಲವು ಪ್ರಾಣಿಗಳು ನಿಗೂಢವಾಗಿ ಮೃತಪಟ್ಟಿವೆ. ಕೇವಲ ಒಂದು ವಾರದಲ್ಲೇ 2 ಕೃಷ್ಣಮೃಗ, 5 ಪುನುಗು ಬೆಕ್ಕು, 1 ಬಿಳಿಗೂಬೆ ಹಾಗೂ 1 ಬರಿಂಕ ಸೇರಿದಂತೆ ಒಟ್ಟು 9 ಪ್ರಾಣಿಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಪಿಲಿಕುಳ ಜೈವಿಕ ಉದ್ಯಾನವನದೊಳಗೆ ನೀರು ನುಗ್ಗಿ, ಕಂಪೌಂಡ್ ಕುಸಿದು ಪ್ರಾಣಿಗಳಿಗೆ ತೊಂದರೆಯಾಗಿತ್ತು. ಈ ಬಗ್ಗೆ ವನ್ಯಜೀವಿ ಸಂರಕ್ಷಕ ಭುವನ್ ದೇವಾಡಿಗ ಅವರು ಸೆಂಟ್ರಲ್

ಪಿಲಿಕುಳ ಜೈವಿಕ ಉದ್ಯಾನದಲ್ಲಿ ಪ್ರಾಣಿಗಳ ನಿಗೂಢ ಸಾವು Read More »

RSS ರಾಷ್ಟ್ರಪ್ರೇಮಕ್ಕೆ ಸರ್ಟಿಫಿಕೇಟ್ ನೀಡುವ ಯೋಗ್ಯತೆ ಕಾಂಗ್ರೆಸ್ ನಾಯಕರಿಗೆ ಇಲ್ಲ: ಸಿ.ಟಿ. ರವಿ

ತಲೆ ಸ್ವಲ್ಪ ವ್ಯತ್ಯಾಸವಾಗಿ ಇಂತಹ ಹೇಳಿಕೆ ನೀಡಿದ್ದಾರೆ ಎಂದಿದ್ದು ಯಾರಿಗೆ? ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷಕ್ಕೆ RSS ನ ದೇಶಭಕ್ತಿಗೆ ಸರ್ಟಿಫಿಕೇಟ್ ನೀಡುವ ಯೋಗ್ಯತೆ ಇಲ್ಲ ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದರೆ RSS ಬ್ಯಾನ್ ಮಾಡುವುದಾಗಿ ನೀಡಿದ ಹೇಳಿಕೆಗೆ ಅವರು ಪ್ರತಿಕ್ರಿಯೆ ನೀಡಿದ್ದು, ಶಬ್ಧ ಪ್ರಯೋಗಿಸಬೇಕೋ, ಬೇಡವೋ.. ಆದರೆ ಕೆಲವರಿಗೆ ತಲೆ ಸ್ವಲ್ಪ ವ್ಯತ್ಯಾಸವಾಗಿ ಏನೇನೋ ಮಾತನಾಡುತ್ತಾರೆ.

RSS ರಾಷ್ಟ್ರಪ್ರೇಮಕ್ಕೆ ಸರ್ಟಿಫಿಕೇಟ್ ನೀಡುವ ಯೋಗ್ಯತೆ ಕಾಂಗ್ರೆಸ್ ನಾಯಕರಿಗೆ ಇಲ್ಲ: ಸಿ.ಟಿ. ರವಿ Read More »

ಮತ್ತೆ ವಿವಾದವನ್ನು ಮೈಮೇಲೆ ಎಳೆದುಕೊಂಡ ಎಂಎಲ್‌ಸಿ ರವಿಕುಮಾರ್‌

ಶಾಲಿನಿ ರಜನೀಶ್‌ವಿರುದ್ಧ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ಎಫ್‌ಐಆರ್‌ ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಜೂನ್ 30ರಂದು ನಡೆದ ಬಿಜೆಪಿ ಪ್ರತಿಭಟನೆ ವೇಳೆ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಬಗ್ಗೆ ರವಿಕುಮಾರ್ ಅವಹೇಳನಕಾರಿಯಾಗಿ ಮಾತಾಡಿದ್ದಾರೆನ್ನಲಾದ ವಿಡಿಯೋ ವೈರಲ್ ಆಗಿದೆ. ರವಿಕುಮಾರ್ ಅವರದ್ದೆನ್ನಲಾದ ಈ ಹೇಳಿಕೆ ಬಿಜೆಪಿಗೆ ಭಾರಿ ಮುಜುಗರ ತಂದಿದೆ. ನಿನ್ನೆ ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಅವರ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ ನಡೆಸಿದೆ. ಈಗ ಶಾಲಿನಿ ರಜನೀಶ್‌ ವಿರುದ್ಧ ಆಡಿದ್ದಾರೆನ್ನಲಾದ

ಮತ್ತೆ ವಿವಾದವನ್ನು ಮೈಮೇಲೆ ಎಳೆದುಕೊಂಡ ಎಂಎಲ್‌ಸಿ ರವಿಕುಮಾರ್‌ Read More »

ಭ್ರಷ್ಟಾಚಾರ: ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ, ಮಗ, ಸೊಸೆ ವಿರುದ್ಧ ಕೇಸ್‌

ಅಧಿಕಾರದಲ್ಲಿದ್ದಾಗ ಆದಾಯ ಮೀರಿ ಆಸ್ತಿ ಗಳಿಸಿದ ಪ್ರಕರಣ ಶಿವಮೊಗ್ಗ: ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಅವರ ಪುತ್ರ ಹಾಗೂ ಸೊಸೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಶ್ವರಪ್ಪ ಪುತ್ರ ಕಾಂತೇಶ್ ಹಾಗೂ ಸೊಸೆ ಶಾಲಿನಿ ವಿರುದ್ಧವೂ ಭ್ರಷ್ಟಚಾರ ಕಾಯ್ದೆಯಡಿ ಕೇಸ್ ಆಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಈಶ್ವರಪ್ಪ ಹಾಗೂ ಕುಟುಂಬದ ವಿರುದ್ಧ ನ್ಯಾಯಾಲಯದಲ್ಲಿ ವಿನೋದ್ ಎಂಬವರು ಖಾಸಗಿ ದೂರು

ಭ್ರಷ್ಟಾಚಾರ: ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ, ಮಗ, ಸೊಸೆ ವಿರುದ್ಧ ಕೇಸ್‌ Read More »

ಸಿದ್ದರಾಮಯ್ಯನವರಿಂದ ಅವಮಾನಕ್ಕೊಳಗಾಗಿದ್ದ ಪೊಲೀಸ್‌ ಅಧಿಕಾರಿಯ ವಿಆರ್‌ಎಸ್‌ ಅರ್ಜಿ ಸ್ವೀಕಾರಕ್ಕೆ ಸೂಚನೆ

ಡೆಡ್‌ಲೈನ್‌ ಒಳಗೆ ಅರ್ಜಿ ಹಿಂಪಡೆಯದಿದ್ದರೆ ರಾಜೀನಾಮೆ ಅಂಗೀಕಾರ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಸಾರ್ವಜನಿಕ ವೇದಿಕೆಯಲ್ಲಿ ಅವಮಾನಕ್ಕೊಳಗಾಗಿದ್ದ ಹಿನ್ನೆಲೆಯಲ್ಲಿ ಧಾರವಾಡ ಎಎಸ್‌ಪಿ ನಾರಾಯಣ ಬರಮಣ್ಣಿ ಸ್ವಯಂ ನಿವೃತ್ತಿ ಕೋರಿ ಸಲ್ಲಿಸಿದ್ದ ಮನವಿಯನ್ನು ಸ್ವೀಕರಿಸಲು ಸರ್ಕಾರ ಸೂಚನೆ ನೀಡಿದೆ. ಉನ್ನತ ಪೊಲೀಸ್‌ ಅಧಿಕಾರಿಯನ್ನು ಕಾಂಗ್ರೆಸ್‌ ಸಭೆಯ ವೇದಿಕೆಯಲ್ಲಿ ಸಾರ್ವಜನಿಕರ ಎದುರೇ ಹೀನಾಯವಾಗಿ ನಡೆಸಿಕೊಂಡ ಕುರಿತು ಭಾರಿ ಟೀಕೆ ವ್ಯಕ್ತವಾಗಿದ್ದರೂ ಸರ್ಕಾರ ರಾಜೀನಾಮೆ ಅಂಗೀಕರಿಸಲು ಸೂಚನೆ ನೀಡಿರುವುದು ಆಶ್ಚರ್ಯ ಮೂಡಿಸಿದೆ. ಗೃಹ ಇಲಾಖೆ ನಾರಾಯಣ ಬರಮಣ್ಣಿ ಅವರ ಸ್ವಯಂ ನಿವೃತ್ತಿ ಮನವಿಯನ್ನು

ಸಿದ್ದರಾಮಯ್ಯನವರಿಂದ ಅವಮಾನಕ್ಕೊಳಗಾಗಿದ್ದ ಪೊಲೀಸ್‌ ಅಧಿಕಾರಿಯ ವಿಆರ್‌ಎಸ್‌ ಅರ್ಜಿ ಸ್ವೀಕಾರಕ್ಕೆ ಸೂಚನೆ Read More »

ಈಡೇರದ ಬೇಡಿಕೆ : ಮುಷ್ಕರದತ್ತ ಸಾರಿಗೆ ನೌಕರರ ಚಿತ್ತ

1.10 ಲಕ್ಷ ಸಿಬ್ಬಂದಿಗೆ ಶೇ.25 ವೇತನ ಹೆಚ್ಚಿಸಲು ಒತ್ತಾಯ ಬೆಂಗಳೂರು: ಸರ್ಕಾರ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವ ಮಾತಿಗೆ ತಪ್ಪಿರುವುದರಿಂದ ಮುಷ್ಕರ ಹೂಡಲು ಸಾರಿಗೆ ನೌಕರರು ಚಿಂತಿಸುತ್ತಿದ್ದಾರೆ. ಮುಂದಿನ ನಡೆಯ ಬಗ್ಗೆ ಚರ್ಚಿಸಲು ಇಂದು ನಾಲ್ಕು ನಿಗಮದ ನೌಕರ ಸಂಘಟನೆಗಳ ಮಹತ್ವದ ಸಭೆ ನಡೆಯಲಿದ್ದು, ಇದರಲ್ಲಿ ಮುಷ್ಕರ ಹೂಡುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಸಾರಿಗೆ ನೌಕರರು ವೇತನ ಏರಿಕೆಯೂ ಸೇರಿದಂತೆ ಸರ್ಕಾರದ ಮುಂದೆ ಅನೇಕ ಬೇಡಿಕೆಗಳನ್ನು ಇಟ್ಟಿದ್ದಾರೆ. ಕಳೆದ ವರ್ಷ ಕೂಡ ಬಸ್ ನಿಲ್ಲಿಸಿ

ಈಡೇರದ ಬೇಡಿಕೆ : ಮುಷ್ಕರದತ್ತ ಸಾರಿಗೆ ನೌಕರರ ಚಿತ್ತ Read More »

ಸಿದ್ದರಾಮಯ್ಯನವರಿಂದ ಅವಮಾನಕ್ಕೀಡಾಗಿದ್ದ ಪೊಲೀಸ್‌ ಅಧಿಕಾರಿಯಿಂದ ಸ್ವಯಂ ನಿವೃತ್ತಿಗೆ ಅರ್ಜಿ

ಬೆಳಗಾವಿಯ ಸಾಧನಾ ಸಮಾವೇಶದಲ್ಲಿ ಪೊಲೀಸ್‌ ಅಧಿಕಾರಿಗೆ ಅವಮಾನ ಮಾಡಿದ್ದ ಸಿಎಂ ಬೆಂಗಳೂರು: ಕಾಂಗ್ರೆಸ್‌ನ ಸಮಾವೇಶದ ವೇದಿಕೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಅವಮಾನಕ್ಕೊಳಗಾಗಿದ್ದ ಹಿರಿಯ ಪೊಲೀಸ್‌ ಅಧಿಕಾರಿ ಪ್ರಸ್ತುತ ಧಾರವಾಡದ ಎಎಸ್‌ಪಿ ಆಗಿರುವ ನಾರಾಯಣ ಬರಮಣ್ಣಿ ಸ್ವಯಂ ನಿವೃತ್ತಿಗೆ ಮನವಿ ಮಾಡಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಬೆಳಗಾವಿಯಲ್ಲಿ ಕೆಲ ಸಮಯದ ಹಿಂದೆ ನಡೆದ ಕಾಂಗ್ರೆಸ್‌ನ ಸಾಧನಾ ಸಮಾವೇಶದ ವೇದಿಕೆಯಲ್ಲಿ ಆಗ ಬೆಳಗಾವಿಯಲ್ಲಿ ಕರ್ತವ್ಯದಲ್ಲಿದ್ದ ನಾರಾಯಣ ಬರಮಣ್ಣಿ ಅವರಿಗೆ ಹೊಡೆಯಲು ಸಿದ್ದರಾಮಯ್ಯ ಕೈ ಎತ್ತಿದ್ದರು. ಈ ವೀಡಿಯೊ ಭಾರಿ ವೈರಲ್‌ ಆಗಿ

ಸಿದ್ದರಾಮಯ್ಯನವರಿಂದ ಅವಮಾನಕ್ಕೀಡಾಗಿದ್ದ ಪೊಲೀಸ್‌ ಅಧಿಕಾರಿಯಿಂದ ಸ್ವಯಂ ನಿವೃತ್ತಿಗೆ ಅರ್ಜಿ Read More »

ಸಿಎಂ ಬದಲಾವಣೆ ವಿಷಯದಲ್ಲಿ ನನ್ನ ಮಾತಿಗೆ ನಾನು ಬದ್ಧ : ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್

ಬೆಂಗಳೂರು: ನನಗೆ ಮಾಧ್ಯಮಗಳಿಗೆ ಬಹಿರಂಗ ಹೇಳಿಕೆ ನೀಡದಂತೆ ಪಕ್ಷ ನೊಟೀಸ್ ನೀಡಿದೆ. ನಾನು ಬೇರೆಯವರಿಗೂ ಹೇಳುವಂತೆ ಪಕ್ಷದ ವರಿಷ್ಠರಿಗೆ ತಿಳಿಸಿದ್ದೇನೆ. ನನ್ನ ಮಾತಿಗೆ ನಾನು ಬದ್ಧ ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದ್ದಾರೆ. ನಾನು ಪಕ್ಷದ ವರಿಷ್ಠರ ಜೊತೆಗೆ ನಾವೆಲ್ಲರೂ ಬದಲಾವಣೆ ಬಯಸುತ್ತಿರುವುದಾಗಿ ಹೇಳಿದ್ದೇನೆ. ಅವರಿಂದಲೂ ನಮಗೆ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಅದು ಮನ್ ನಲ್ಲಿನ ಅಶಾ ಭಾವನೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದಿದ್ದಾರೆ. ನಾನು ಸಿದ್ದರಾಮಯ್ಯ ಅವರ ಅಭಿಮಾನಿ ಹೌದು. ಆದರೆ ಅವರು ಈಗಾಗಲೇ ಎರಡೂವರೆ

ಸಿಎಂ ಬದಲಾವಣೆ ವಿಷಯದಲ್ಲಿ ನನ್ನ ಮಾತಿಗೆ ನಾನು ಬದ್ಧ : ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ Read More »

ಅಂಗನವಾಡಿಗೆ ಜಮೀನು ದಾನ ನೀಡಿ ಶಿಕ್ಷಣ ಪ್ರೇಮ ಮೆರೆದ ಸುಶೀಲಮ್ಮ

ದಾವಣಗೆರೆ: ಕೂರುವುದಕ್ಕೆ ಸ್ವಂತ ಸೂರು ಇಲ್ಲದಿದ್ದರೂ ಅಂಗನವಾಡಿಗೆ ಒಂದು ಗುಂಟೆ ಜಮೀನು ಬಿಟ್ಟುಕೊಡುವ ಮೂಲಕ ವೃದ್ಧೆಯೋರ್ವರು ಶಿಕ್ಷಣ ಪ್ರೇಮ ಮೆರೆದು ಇತರರಿಗೆ ಮಾದರಿಯಾಗಿದ್ದಾರೆ. ಚನ್ನಗಿರಿ ತಾಲೂಕಿನ ಮೆದಿಕೆರೆ ಗ್ರಾಮದ ಸುಶೀಲಮ್ಮ ಎಂಬವರೇ‌ ಹೃದಯ ಶ್ರೀಮಂತಿಕೆ ಮೆರೆದ ವೃದ್ಧೆ. ತಮ್ಮ ವಾಸ ಬಾಡಿಗೆ ಮನೆಯಲ್ಲಾದರೂ ತಮಗಿದ್ದ ಒಂದು ಗುಂಟೆ ಜಮೀನನ್ನು ಅಂಗನವಾಡಿಗಾಗಿ ಬಿಟ್ಟುಕೊಟ್ಟಿದ್ದಾರೆ. ಬಾಡಿಗೆ ಕಟ್ಟಡದಲ್ಲಿನ ಅಂಗನವಾಡಿಯಲ್ಲಿ ‌ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದನ್ನು ಕಂಡು ಮರುಗಿದ ಸುಶೀಲಮ್ಮ ಅವರ ಮನಸ್ಸು, ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಜಮೀನು ದಾನ ನೀಡಿರುವುದಾಗಿದೆ. ಸದ್ಯ

ಅಂಗನವಾಡಿಗೆ ಜಮೀನು ದಾನ ನೀಡಿ ಶಿಕ್ಷಣ ಪ್ರೇಮ ಮೆರೆದ ಸುಶೀಲಮ್ಮ Read More »

error: Content is protected !!
Scroll to Top