ರಾಜ್ಯ

ಗಣೇಶ ಚತುರ್ಥಿಗೆ ಸೆ. 19ರಂದೇ ರಜೆ ಫಿಕ್ಸ್: ಸರ್ಕಾರದಿಂದ ಹೊರಬಿತ್ತು ಆದೇಶ

ಬೆಂಗಳೂರು: ಗಣೇಶ ಚತುರ್ಥಿಯ ಪ್ರಯುಕ್ತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸೋಮವಾರದ ಬದಲಾಗಿ ಮಂಗಳವಾರ ರಜೆ ನೀಡಲು ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಗಣೇಶ ಹಬ್ಬದ ಆಚರಣೆಯ ದಿನದ ಬಗ್ಗೆ ಗೊಂದಲಗಳಿವೆ. ಹಲವೆಡೆ ಸೋಮವಾರ (ಸೆ.18) ದಂದು ಹಬ್ಬ ಆಚರಿಸುತ್ತಿದ್ದರೆ, ಮತ್ತೆ ಕೆಲವೆಡೆ ಮಂಗಳವಾರ (ಸೆ.19) ದಂದು ಆಚರಿಸಲಾಗುತ್ತಿದೆ. ಸರ್ಕಾರ ನಿಗದಿ ಪಡಿಸಿದ ರಜೆಯು ಸೋಮವಾರ ಎಂದಿದೆ. ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರ ಹಬ್ಬ ಆಚರಿಸುವ ಕಾರಣ ಅದೇ ದಿನ ಸರ್ಕಾರಿ ರಜೆ ನೀಡಬೇಕು ಎಂದು ಕೂಗು […]

ಗಣೇಶ ಚತುರ್ಥಿಗೆ ಸೆ. 19ರಂದೇ ರಜೆ ಫಿಕ್ಸ್: ಸರ್ಕಾರದಿಂದ ಹೊರಬಿತ್ತು ಆದೇಶ Read More »

ಹಾಲಶ್ರೀ ಕಾರು ಚಾಲಕ CCB ವಶ!

ಬೆಂಗಳೂರು: ಅಭಿನಯ ಹಾಲಶ್ರೀ ಸ್ವಾಮೀಜಿಯ ಕಾರು ಚಾಲಕನನ್ನು ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಅಭಿನಯ ಶ್ರೀ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಬಿಜೆಪಿ ಬೈಂದೂರು ಎಂ.ಎಲ್‌ಎ ಟಿಕೆಟ್ ಪಡೆಯಬೇಕಾದ್ರೇ ಅಭಿನಯ ಹಾಲಶ್ರೀ ಶಿಫಾರಸ್ಸು ಮುಖ್ಯ ಎಂಬುದಾಗಿ ಉದ್ಯಮಿ ಗೋವಿಂದಬಾಬುಗೆ ಚೈತ್ರಾ ಕುಂದಾಪುರ ಹಾಗೂ ಅವರ ತಂಡ ಹೇಳಿತ್ತು. ಅದರಂತೆ ಉದ್ಯಮಿ ಅಭಿನಯ ಹಾಲಶ್ರೀಗಳನ್ನು ಬೆಂಗಳೂರಿನ ವಿಜಯನಗರದಲ್ಲಿ ಭೇಟಿಯಾಗಿದ್ದರು. ಈ ಸಂದರ್ಭ ತನಗೆ ಬೈಂದೂರು ಉಸ್ತುವಾರಿಯನ್ನು ನೀಡಿದ್ದಾರೆ. ಅಲ್ಲದೇ ಕೇಂದ್ರದ ಬಿಜೆಪಿ ನಾಯಕರು ಪರಿಚಯ ಎಂದೂ

ಹಾಲಶ್ರೀ ಕಾರು ಚಾಲಕ CCB ವಶ! Read More »

ಘೋಷ್ ಅಧ್ಯಯನಕ್ಕಾಗಿ ಡಾಕ್ಟರೇಟ್ ಪಡೆದಿದ್ದ ಕಟ್ಟಿಗೆ ಹಳ್ಳಿ ಮಠದ ಡಾ. ಮಹಾಂತೇಶ್ವರ ಮಹಾಸ್ವಾಮೀಜಿ ಲಿಂಗೈಕ್ಯ

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ಕಟ್ಟಿಗೆ ಹಳ್ಳಿ ಮಠದ ಸ್ವಾಮೀಜಿಗಳಾದ ಡಾ. ಮಹಾಂತೇಶ್ವರ ಮಹಾಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ. ಇವರು ಗ್ರಾಮದಲ್ಲಿ ನಡೆದಾಡುವ ದೇವರೆಂದೇ ಹೆಸರಾಗಿದ್ದರು. ಡಾ. ಮಹಾಂತೇಶ್ವರ ಸ್ವಾಮೀಜಿ ಅವರಿಗೆ 72 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮೀಜಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದ್ದಾರೆ. ಶುಕ್ರವಾರ ರಾತ್ರಿ ನಿಧನರಾಗಿರುವ ಅವರ ಪಾರ್ಥಿವ ಶರೀರವನ್ನು ಶ್ರೀ ಮಠಕ್ಕೆ ತರಲಾಗಿದ್ದು, ಸಾಣೆಹಳ್ಳಿ ಶ್ರೀಗಳು ಸೇರಿದಂತೆ ಹಲವಾರು ಗಣ್ಯರು

ಘೋಷ್ ಅಧ್ಯಯನಕ್ಕಾಗಿ ಡಾಕ್ಟರೇಟ್ ಪಡೆದಿದ್ದ ಕಟ್ಟಿಗೆ ಹಳ್ಳಿ ಮಠದ ಡಾ. ಮಹಾಂತೇಶ್ವರ ಮಹಾಸ್ವಾಮೀಜಿ ಲಿಂಗೈಕ್ಯ Read More »

ಮಡಿಕೇರಿಯಲ್ಲಿ ಅಪ್ರಾಪ್ತೆ ಹಿಂದೂ ಹುಡುಗಿಯರ ಕಿಡ್ನ್ಯಾಪ್! | ನಿಜಾಮಿಲ್, ಸಮದ್, ತಪ್ಸಿರ್ ಹಾಗೂ ಇರ್ಫಾನ್ ಬಂಧನ

ಮಡಿಕೇರಿ: ಕೊಡಗಿನಲ್ಲಿ ಪಿಯುಸಿ ಓದುತ್ತಿದ್ದ ಅಪ್ರಾಪ್ತೆ ಹಿಂದೂ ಹುಡುಗಿಯರನ್ನು ಕಿಡ್ನ್ಯಾಪ್ ಮಾಡುತ್ತಿದ್ದ ನಾಲ್ವರು ಮುಸ್ಲಿಂ ಯುವಕರನ್ನು ಅರೆಸ್ಟ್ ಮಾಡಲಾಗಿದೆ. ಪಿಯುಸಿ ಓದುತ್ತಿದ್ದ ಅಪ್ರಾಪ್ತ ಹುಡುಗಿಯರನ್ನು ಕೊಡಗಿನಿಂದ ಮೈಸೂರಿಗೆ ಯುವಕರು ಅಪಹರಿಸಿ ಕರೆದೊಯ್ಯುತ್ತಿದ್ದರು ಎನ್ನಲಾಗಿದೆ. ಈ ವೇಳೆ ಇದನ್ನು ಗಮನಿಸಿದ್ದ ಸ್ಥಳೀಯರು ಕೂಡಲೇ ಫೋನ್ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ನಾಲ್ವರು ಯುವಕರನ್ನು ಅರೆಸ್ಟ್ ಮಾಡಲಾಗಿದೆ. ನಿಜಾಮಿಲ್, ಸಮದ್, ತಪ್ಸಿರ್ ಹಾಗೂ ಇರ್ಫಾನ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.

ಮಡಿಕೇರಿಯಲ್ಲಿ ಅಪ್ರಾಪ್ತೆ ಹಿಂದೂ ಹುಡುಗಿಯರ ಕಿಡ್ನ್ಯಾಪ್! | ನಿಜಾಮಿಲ್, ಸಮದ್, ತಪ್ಸಿರ್ ಹಾಗೂ ಇರ್ಫಾನ್ ಬಂಧನ Read More »

ಪಿಒಪಿ ಗಣೇಶ ಮೂರ್ತಿ ಉತ್ಪಾದನೆ, ಮಾರಾಟ ನಿಷೇಧಿಸಿದ ಸರ್ಕಾರ! | ನಿಯಮ ಉಲ್ಲಂಘಿಸಿದರೆ ಭಾರಿ ದಂಡದೊಂದಿಗೆ ಜೈಲು ಶಿಕ್ಷೆ

ಬೆಂಗಳೂರು: ರಾಜ್ಯಾದ್ಯಂತ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಹಾಗೂ ರಾಸಾಯನಿಕ ಗುಣಗಳುಳ್ಳ ವಸ್ತುಗಳನ್ನು ಬಳಸಿ ತಯಾರಿಸಲಾದ ಗಣೇಶ ಮೂರ್ತಿಗಳ ಉತ್ಪಾದನೆ, ಮಾರಾಟ ಹಾಗೂ ವಿಸರ್ಜನೆ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದೇಶವನ್ನು ಅನುಷ್ಠಾನಗೊಳಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ರಾಜ್ಯದ ಎಲ್ಲಾ ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು, ಪೊಲೀಸ್ ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಬಿ.ಎನ್‌.ಪ್ರವೀಣ್‌ ಸೂಚಿಸಿದ್ದಾರೆ. ರಾಷ್ಟ್ರೀಯ ಹಸಿರು ನ್ಯಾಯ

ಪಿಒಪಿ ಗಣೇಶ ಮೂರ್ತಿ ಉತ್ಪಾದನೆ, ಮಾರಾಟ ನಿಷೇಧಿಸಿದ ಸರ್ಕಾರ! | ನಿಯಮ ಉಲ್ಲಂಘಿಸಿದರೆ ಭಾರಿ ದಂಡದೊಂದಿಗೆ ಜೈಲು ಶಿಕ್ಷೆ Read More »

ಬೆಂಗಳೂರಿನ ಬಾರ್ಟನ್ ಸೆಂಟರ್ ಕಚೇರಿಗೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ, ಸನ್ಮಾನ

ಬೆಂಗಳೂರು: ಬೆಂಗಳೂರಿನ ಎಂ.ಜಿ. ರಸ್ತೆಯ ಬಾರ್ಟನ್ ಸೆಂಟರ್ ಕಚೇರಿಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿದರು. ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಸ್ವಾಗತಿಸಿದ್ದು, ಈ ಸಂದರ್ಭ ಸುದೀರ್ಘ ಕಾಲ ಚರ್ಚೆ ನಡೆಸಿದರು. ತಮ್ಮ ಕಚೇರಿಗೆ ಆಗಮಿಸಿದ ಶಾಸಕರನ್ನು ಬಿ. ಗುಣರಂಜನ್ ಶೆಟ್ಟಿಯವರು ಶಾಲು ಹೊದಿಸಿ ಹಾರಾರ್ಪಣೆ ಮಾಡಿ ಗೌರವಿಸಿದರು. ಈ ಸಂದರ್ಭದಲ್ಲಿ ತುಳುಕೂಟ ಬೆಂಗಳೂರು ಅಧ್ಯಕ್ಷರಾದ ಸುಂದರ್ ರಾಜ್, ಅಕ್ಷಯ್ ರೈ ದಂಬೆಕಾನ, ಮುರಳೀಧರ ರೈ ಮಠಂತಬೆಟ್ಟು, ನವೀನ್

ಬೆಂಗಳೂರಿನ ಬಾರ್ಟನ್ ಸೆಂಟರ್ ಕಚೇರಿಗೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ, ಸನ್ಮಾನ Read More »

ಚೈತ್ರಾ ಕುಂದಾಪುರ ಆರೋಗ್ಯದ ಬಗ್ಗೆ ಹೇಳಿಕೆ ನೀಡಿದ ಡಾ. ಅಸೀಮಾ ಬಾನು

ಬೆಂಗಳೂರು: ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಚೈತ್ರಾ ಕುಂದಾಪುರ ಅವರು ಸಿಸಿಬಿ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾಗಲೇ ಬಾಯಲ್ಲಿ ನೊರೆ ಬಂದು ಕುಸಿದು ಬಿದ್ದಿದ್ದರು. ಹೀಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚೈತ್ರಾ ಅವರಿಗೆ ಫಿಡ್ಸ್ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಚೈತ್ರಾ ಕುಂದಾಪುರ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಆಸ್ಪತ್ರೆ ವೈದ್ಯೆ ಡಾ. ಅಸೀಮಾ ಬಾನು ಅವರು, ಚೈತ್ರಾ ಕುಂದಾಪುರ ಆರೋಗ್ಯ ಸ್ಥಿರವಾಗಿದೆ. ಚೈತ್ರಾ ಕುಂದಾಪುರ ಸಿಟಿ ಸ್ಕ್ಯಾನ್, ಇಸಿಜಿ ರಿಪೋರ್ಟ್ ನಾರ್ಮಲ್ ಇದೆ. ಚೈತ್ರಾ ಕುಂದಾಪುರಗೆ

ಚೈತ್ರಾ ಕುಂದಾಪುರ ಆರೋಗ್ಯದ ಬಗ್ಗೆ ಹೇಳಿಕೆ ನೀಡಿದ ಡಾ. ಅಸೀಮಾ ಬಾನು Read More »

ರೈತರ ಅನುಕೂಲಕ್ಕಾಗಿ ಬೆಳೆ ಸಮೀಕ್ಷೆ ಅವಧಿ ವಿಸ್ತರಿಸಿ | ಮುಖ್ಯಮಂತ್ರಿಗಳಿಗೆ ಮನವಿ ನೀಡಿದ ಮಾಜಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ರೈತರ ಅನುಕೂಲಕ್ಕಾಗಿ ಬೆಳೆ ಸಮೀಕ್ಷೆ ಅವಧಿ ವಿಸ್ತರಿಸುವಂತೆ ಮಾಜಿ ಶಾಸಕ ಸಂಜೀವ ಮಠಂದೂರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಕಳೆದ ಐದು ವರ್ಷಗಳ ಹಿಂದೆ ಆರಂಭ ಮಾಡಿದ ಮುಂಗಾರು ಹಾಗೂ ಹಿಂಗಾರು ಬೆಳೆ ಸಮೀಕ್ಷೆಗೆ ಸರಕಾರ ನ. 15 ಕೊನೆಯ ದಿನಾಂಕ ನಿಗದಿ ಮಾಡಿದೆ. ಈ ಬಾರಿ ಮುಂಗಾರು ತಡವಾಗಿದ್ದು ಹಾಗೂ ಮಳೆ ಕೊರತೆಯಾಗಿದ್ದು ರೈತರು ಕೃಷಿ ಕಾರ್ಯವನ್ನು ತಡವಾಗಿ ಆರಂಭ ಮಾಡುವಂತೆ ಆಗಿದೆ. ರೈತರಿಗೆ ಹವಾಮಾನ ವೈಪರೀತ್ಯದಿಂದ ಅನಾನುಕೂಲ ಆಗಿದೆ. ಕಳೆದ ಮೂರು

ರೈತರ ಅನುಕೂಲಕ್ಕಾಗಿ ಬೆಳೆ ಸಮೀಕ್ಷೆ ಅವಧಿ ವಿಸ್ತರಿಸಿ | ಮುಖ್ಯಮಂತ್ರಿಗಳಿಗೆ ಮನವಿ ನೀಡಿದ ಮಾಜಿ ಶಾಸಕ ಸಂಜೀವ ಮಠಂದೂರು Read More »

ಅಜ್ಞಾತ ಸ್ಥಳದಿಂದಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ ಹಾಲಶ್ರೀ | ಚೈತ್ರಾ ಕುಂದಾಪುರ ಬಂಧನದ ಬಳಿಕ ನಾಪತ್ತೆಯಾಗಿರುವ ಶ್ರೀ | ಅರ್ಜಿ ತಿರಸ್ಕೃತಗೊಂಡರೆ ಸ್ವಾಮೀಜಿಯ ಮುಂದಿನ ಹಾದಿಯೇನು? ಸಿಸಿಬಿ ಕಾರ್ಯವೈಖರಿ ಹೇಗಿರಲಿದೆ?

ಬೆಂಗಳೂರು: ಚೈತ್ರಾ ಕುಂದಾಪುರ ಗ್ಯಾಂಗಿನ ವಂಚನೆ ಪ್ರಕರಣದ ಮೂರನೇ ಆರೋಪಿ ಹಾಲಶ್ರೀ ಸ್ವಾಮೀಜಿ ಸಿಸಿಬಿ ಬಂಧನದಿಂದ ತಪ್ಪಿಸಿಕೊಳ್ಳಲು ಜಾಮೀನಿಗೆ ಅರ್ಜಿ ಹಾಕಿದ್ದಾರೆ. ವಿಜಯ ನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿ ಹಾಲು ಮಠ ಸಂಸ್ಥಾನದ ಹಾಲಿ ಸ್ವಾಮೀಜಿಗಳಾಗಿರುವ ಅಭಿನವ ಹಾಲಶ್ರೀ ಸ್ವಾಮೀಜಿ ಅವರು ನಿರೀಕ್ಷಣಾ ಜಾಮೀನು ಕೋರಿ 57ನೇ ಸಿಟಿ ಸಿವಿಲ್‌​​ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹಾಲ ಶ್ರೀಗಳು ಈ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದ ಬೆನ್ನಲ್ಲೇ ನಾಪತ್ತೆಯಾಗಿದ್ದು, ಅಜ್ಞಾತ ಸ್ಥಳದಲ್ಲಿ ಅಡಗಿ ಕುಳಿತಿದ್ದಾರೆ ಎನ್ನಲಾಗಿದೆ.

ಅಜ್ಞಾತ ಸ್ಥಳದಿಂದಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ ಹಾಲಶ್ರೀ | ಚೈತ್ರಾ ಕುಂದಾಪುರ ಬಂಧನದ ಬಳಿಕ ನಾಪತ್ತೆಯಾಗಿರುವ ಶ್ರೀ | ಅರ್ಜಿ ತಿರಸ್ಕೃತಗೊಂಡರೆ ಸ್ವಾಮೀಜಿಯ ಮುಂದಿನ ಹಾದಿಯೇನು? ಸಿಸಿಬಿ ಕಾರ್ಯವೈಖರಿ ಹೇಗಿರಲಿದೆ? Read More »

ಮೂರ್ಛೆ ಹೋದ ಚೈತ್ರಾ, ಆಸ್ಪತ್ರೆಯ ಐಸಿಯುಗೆ ಶಿಫ್ಟ್!

ಬೆಂಗಳೂರು: ಸಿಸಿಬಿ ಪೊಲೀಸರ ವಶದಲ್ಲಿರುವ ಚೈತ್ರಾ ಕುಂದಾಪುರ ಅಸ್ವಸ್ಥಗೊಂಡಿದ್ದು, ಸದ್ಯ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಉದ್ಯಮಿ ಗೋವಿಂದ ಪೂಜಾರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಎರಡು ದಿನಗಳ ಹಿಂದೆ ಬಂಧನಕ್ಕೊಳಗಾಗಿದ್ದರು. ವಿಚಾರಣೆ ಎದುರಿಸುತ್ತಿರುವ ಚೈತ್ರಾ ಕುಂದಾಪುರ ಅವರನ್ನು ಮಹಿಳಾ ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿ ಬಳಿ ಕರೆ ತರಲಾಗಿತ್ತು. ಆದರೆ ಸಿಸಿಬಿ ಕಚೇರಿ ಬಳಿ ತಲುಪುತ್ತಿದ್ದಂತೆಯೇ ಚೈತ್ರಾ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ವೇಳೆ ಅವರ ಬಾಯಿಂದ ನೊರೆಯೂ ಬಂದಿದ್ದು, ಅವರನ್ನು ಕೂಡಲೇ

ಮೂರ್ಛೆ ಹೋದ ಚೈತ್ರಾ, ಆಸ್ಪತ್ರೆಯ ಐಸಿಯುಗೆ ಶಿಫ್ಟ್! Read More »

error: Content is protected !!
Scroll to Top