ಧಾರ್ಮಿಕ

ಬೆಳ್ಳಿರಥಕ್ಕೆ ಡಾ. ಕೆ.ವಿ. ಚಿದಾನಂದರ ಕುಟುಂಬದಿಂದ ಸ್ವಾಗತ, ಗೌರವಾರ್ಪಣೆ

ಸುಳ್ಯ: ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಡಾ. ಕೆ.ವಿ. ರೇಣುಕಾಪ್ರಸಾದ್ ಮತ್ತು ಅವರ ಕುಟುಂಬದರು ಹರಕೆಯಾಗಿ ಸಮರ್ಪಿಸಲಿರುವ ಬೆಳ್ಳಿರಥ ಯಾತ್ರೆಯು ನವೆಂಬರ್ 4ರಂದುಕೋಟೇಶ್ವರದಿಂದ ಸುಳ್ಯಕ್ಕೆ ಆಗಮಿಸಿತ್ತು. ಈ ಸಂದರ್ಭದಲ್ಲಿ ಶ್ರೀರಾಮಪೇಟೆಗೆ ಆಗಮಿಸಿದ ರಥಕ್ಕೆ ಡಾ. ಕೆ.ವಿ. ಚಿದಾನಂದರ ಕುಟುಂಬದ ಪರವಾಗಿಅಕಾಡೆಮಿ ಆಫ್‌ ಲಿಬರಲ್ ಎಜ್ಯುಕೇಷನ್‌ನ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ ಮತ್ತು ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಅವರ ನೇತೃತ್ವದಲ್ಲಿ ಅಕಾಡೆಮಿ ವತಿಯಿಂದ ಪುಷ್ಪಾರ್ಚನೆ ಮಾಡಿ ಭವ್ಯ ಸ್ವಾಗತ ನೀಡಲಾಯಿತು. ಡಾ. ರೇಣುಕಾಪ್ರಸಾದ್ ಅವರಿಗೆ ಸುಗಂಧ […]

ಬೆಳ್ಳಿರಥಕ್ಕೆ ಡಾ. ಕೆ.ವಿ. ಚಿದಾನಂದರ ಕುಟುಂಬದಿಂದ ಸ್ವಾಗತ, ಗೌರವಾರ್ಪಣೆ Read More »

ಸುಳ್ಯಕ್ಕೆ ಪುರಪ್ರವೇಶಗೈದ ಬೆಳ್ಳಿರಥ

ಸುಳ್ಯ: ಅಕಾಡೆಮಿ ಆಫ್‌ ಲಿಬರಲ್ ಎಜ್ಯುಕೇಷನ್ ಕಮಿಟಿ ಬಿ ಇದರ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ.ರೇಣುಕಾಪ್ರಸಾದ್ ಕೆ.ವಿ. ಅವರು ಹರಕೆಯ ರೂಪದಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಲಿರುವ ಬೆಳ್ಳಿರಥ ನವೆಂಬರ್ 4ರ ರಾತ್ರಿ 8ರ ಸುಮಾರಿಗೆ ಸುಳ್ಯಕ್ಕೆ ಪುರಪ್ರವೇಶ ಮಾಡಿತು. ನವೆಂಬರ್ 3ರ ರಾತ್ರಿ 8ಕ್ಕೆ ಉಡುಪಿ ಜಿಲ್ಲಾ ಕುಂಭಾಶಿಯ ರಾಜಗೋಪಾಲಾಚಾರ್ಯ ಅವರ ವಿಶ್ವಕರ್ಮ ಕರಕುಶಲ ಮತ್ತು ಶಿಲ್ಪಕಲಾ ಕೇಂದ್ರದಲ್ಲಿ ಕುತ್ತಿ ಪೂಜೆಗೊಂಡು ಡಾಕ್ಟರ್ ರೇಣುಕಾಪ್ರಸಾದ್ ಮತ್ತು ಅವರ ಕುಟುಂಬದವರಿಗೆ ಹಸ್ತಾಂತರಿಸಲ್ಪಟ್ಟ ಬೆಳ್ಳಿರಥ

ಸುಳ್ಯಕ್ಕೆ ಪುರಪ್ರವೇಶಗೈದ ಬೆಳ್ಳಿರಥ Read More »

ಉಚ್ಚಿಲದಲ್ಲಿ ಬೆಳ್ಳಿರಥಕ್ಕೆ ಭವ್ಯ ಸ್ವಾಗತ

ಶ್ರೀ ಕ್ಷೇತ್ರ ಸುಬ್ರಹ್ಮಣ್ಯಕ್ಕೆ ಡಾ. ಕೆ ವಿ ರೇಣುಕಾಪ್ರಸಾದ್ ಮತ್ತು ಮನೆಯವರು ಹರಕೆಯ ರೂಪದಲ್ಲಿ ಸಮರ್ಪಿಸಲಿರುವ ಬೆಳ್ಳಿರಥ ಉಚ್ಚಿಲದ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಆಗಮಿಸಿದಾಗ ಕಾಪು ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ವಿಧಾನ ಪರಿಷತ್ ಶಾಸಕರಾದ ಯಶ್’ಪಾಲ್ ಸುವರ್ಣ ಮತ್ತು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾದ ಗಿರಿಧರ್ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುಕುಮಾರ್ ವೈ. ಮತ್ತು ನೂರಾರು ಭಕ್ತರು ಹಾಜರಿದ್ದರು. ಇದಕ್ಕೂ ಮೊದಲು ಕೋಟೇಶ್ವರದಿಂದ ಹೊರಟ ರಥಯಾತ್ರೆಯು ಸಾಸ್ತಾನ, ಬ್ರಹ್ಮಾವರ, ಸಂತೆಕಟ್ಟೆ, ಕರಾವಳಿ

ಉಚ್ಚಿಲದಲ್ಲಿ ಬೆಳ್ಳಿರಥಕ್ಕೆ ಭವ್ಯ ಸ್ವಾಗತ Read More »

ಕೋಟೇಶ್ವರದ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಳದ ಮುಂಭಾಗದಲ್ಲಿ ಬೆಳ್ಳಿರಥದ ಊರ್ಧ್ವಭಾಗದ ಜೋಡಣೆ

ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಸುಳ್ಯದ ರೇಣುಕಾಪ್ರಸಾದ್ ಕುರುಂಜಿ ಮತ್ತು ಕುಟುಂಬದವರು ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ದೇವರಿಗೆ ಸಮರ್ಪಿಸಲಿರುವ ಬೆಳ್ಳಿರಥದ ಯಾತ್ರೆಯ ಚಾಲನೆ ಬೆಳಿಗ್ಗೆ ಗಂಟೆ 8ಕ್ಕೆ ಪೂಜಾ ವಿಧಿ ವಿಧಾನಗಳೊಂದಿಗೆ ನೆರವೇರಿತು. ಬೆಳ್ಳಿರಥ ಯಾತ್ರೆಗೆ ಚಾಲನೆಗೊಂಡ ರಥವು ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಳಕ್ಕೆ ತೆರಳಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ, ಬಳಿಕ ಕೋಟೇಶ್ವರದ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಳದ ಮುಂಭಾಗದಲ್ಲಿ ಬೆಳ್ಳಿರಥದ ಊರ್ಧ್ವಭಾಗದ ಜೋಡಣೆ ಮಾಡಲಾಯಿತು. ನೂರಕ್ಕೂ ಅಧಿಕ ಭಕ್ತಾದಿಗಳು ಹಾಜರಿದ್ದರು.

ಕೋಟೇಶ್ವರದ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಳದ ಮುಂಭಾಗದಲ್ಲಿ ಬೆಳ್ಳಿರಥದ ಊರ್ಧ್ವಭಾಗದ ಜೋಡಣೆ Read More »

ಡಾ. ರೇಣುಕಾಪ್ರಸಾದ್ ಕೊಡುಗೆಯ ಬೆಳ್ಳಿರಥ ಯಾತ್ರೆಗೆ ಚಾಲನೆ

ಕೋಟೇಶ್ವರ: ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಸುಳ್ಯದ ರೇಣುಕಾಪ್ರಸಾದ್ ಕುರುಂಜಿ ಮತ್ತು ಕುಟುಂಬದವರು ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ದೇವರಿಗೆ ಸರ್ಪಿಸಲಿರುವ ಬೆಳ್ಳಿರಥದ ಯಾತ್ರೆಯ ಚಾಲನೆ ಸಮಯಕ್ಕೆ ಸರಿಯಾಗಿ ಕುಂಭಾಶಿಯ ವಿಶ್ವಕರ್ಮ ಕರಕುಶಲ ಮತ್ತು ಶಿಲ್ಪಕಲಾ ಕೇಂದ್ರದಲ್ಲಿ ನಡೆಯಿತು. ಬೆಳಿಗ್ಗೆ ಗಂಟೆ 8ಕ್ಕೆ ಪೂಜಾ ವಿಧಿ ವಿಧಾನಗಳೊಂದಿಗೆ ಚಾಲನೆಗೊಂಡ ರಥ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಳಕ್ಕೆ ತೆರಳಿತು. ಅಲ್ಲಿ ಪೂಜೆಗೊಳ್ಳುವ ಸಂದರ್ಭದಲ್ಲಿ ಪೂರ್ವ ಸಂಸದ ವಿನಯ್ ಕುಮಾರ್ ಸೊರಕೆ ಹಾಜರಿದ್ದರು. 8.50ಕ್ಕೆ ಸರಿಯಾಗಿ ಕೋಟೇಶ್ವರದಿಂದ ರಥದ ಪ್ರಯಾಣ ಮುಂದುವರಿಯಿತು.

ಡಾ. ರೇಣುಕಾಪ್ರಸಾದ್ ಕೊಡುಗೆಯ ಬೆಳ್ಳಿರಥ ಯಾತ್ರೆಗೆ ಚಾಲನೆ Read More »

Dr. RP ಕುರುಂಜಿಯವರಿಂದ ಬೆಳ್ಳಿ ರಥ ಸ್ವೀಕಾರ

ಕುಂಭಾಶಿ: ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಸುಳ್ಯದ ರೇಣುಕಾಪ್ರಸಾದ್ ಕುರುಂಜಿ ಮತ್ತು ಕುಟುಂಬದವರು ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ದೇವರಿಗೆ ಸರ್ಪಿಸಲಿರುವ 18 ಆಡಿ ಎತ್ತರ ಮತ್ತು ಸುಮಾರು ಎರಡು ಸಾವಿರ ಕೆ.ಜಿ. ಭಾರದ ಬೆಳ್ಳಿರಥವನ್ನು ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ರಾಜಗೋಪಾಲಾಚಾರ್ಯ ಅವರಿಂದ ಸ್ವೀಕಾರ ಮಾಡಿದರು. ಉಡುಪಿ ಜಿಲ್ಲಾ ಕುಂಭಾಶಿಯ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ನಿನ್ನೆ ದಿನಾಂಕ ನವೆಂಬರ್ 3ರಂದು ರಾತ್ರಿ ಗಂಟೆ 8ಕ್ಕೆ ಶಾಸ್ತ್ರೋಕ್ತ ಪೂಜಾ ವಿಧಿ ವಿಧಾನಗಳ ಬಳಿಕ ರಥಕ್ಕೆ ಕುತ್ತಿಪೂಜೆ ನಡೆದ

Dr. RP ಕುರುಂಜಿಯವರಿಂದ ಬೆಳ್ಳಿ ರಥ ಸ್ವೀಕಾರ Read More »

ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಬೆಳ್ಳಿ ರಥ ಸಮರ್ಪಣಾ ಆಮಂತ್ರಣ ಪತ್ರಿಕೆ ಬಿಡುಗಡೆ

ಸುಬ್ರಹ್ಮಣ್ಯ: ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ ಬಿ ಅಧ್ಯಕ್ಷ ಡಾ. ರೇಣುಕಾ ಪ್ರಾಸಾದ್ ಕೆ. ವಿ. ಮತ್ತು ಮನೆಯವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಸೇವಾ ರೂಪದಲ್ಲಿ ನೀಡುವ ಬೆಳ್ಳಿ ರಥ ಸಮರ್ಪಣಾ ಆಮಂತ್ರಣ ಪತ್ರಿಕೆ ಬಿಡುಗಡೆ ಕೆ.ವಿ.ಜಿ. ಸಮುದಾಯ ಭವನ ಅಮರಶ್ರೀಭಾಗ್‌ನಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ರೇಣುಕಾ ಪ್ರಸಾದ್, ಕಾರ್ಯಕ್ರಮದ ರೂಪುರೇಶೆಯ ಬಗ್ಗೆ ತಿಳಿಸಿದರು. ಹಾಗೆಯೇ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರೀತಿಪೂರ್ವಕವಾಗಿ ಆಮಂತ್ರಿಸಿದರು. ಕಾರ್ಯಕ್ರಮದಲ್ಲಿ ಅಕಾಡೆಮಿ ಆಫ್‌ ಲಿಬರಲ್ ಎಜ್ಯುಕೇಶನ್‌ನ

ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಬೆಳ್ಳಿ ರಥ ಸಮರ್ಪಣಾ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ನ. 10: ರೇಣುಕಾ ಪ್ರಸಾದ್ ಕೆ.ವಿ. ಕುಟುಂಬದಿಂದ ಕುಕ್ಕೆ ಕ್ಷೇತ್ರಕ್ಕೆ ಬೆಳ್ಳಿ ರಥ ಸಮರ್ಪಣೆ

ಸುಬ್ರಹ್ಮಣ್ಯ: ನವೆಂಬರ್ 10 ರಂದು ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ನಮ್ಮ ಕುಟುಂಬದ ವತಿಯಿಂದ ಬೆಳ್ಳಿ ರಥ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ ಎಂದು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ ಕಮಿಟಿ ಬಿ ಇದರ ಅಧ್ಯಕ್ಷ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ‌. ರೇಣುಕಾ ಪ್ರಸಾದ್ ಕೆ. ವಿ. ತಿಳಿಸಿದ್ದಾರೆ. ಕೆ.ವಿ.ಜಿ. ಡೆಂಟಲ್ ಕಾಲೇಜು ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳ್ಳಿ ರಥ ನಿರ್ಮಾಣ ಕಾರ್ಯ ಕೊನೆಯ ಹಂತದಲ್ಲಿದೆ. ನವೆಂಬರ್ 3 ರಂದು ಕೋಟೇಶ್ವರದಿಂದ ಹೊರಟು ನ. 4

ನ. 10: ರೇಣುಕಾ ಪ್ರಸಾದ್ ಕೆ.ವಿ. ಕುಟುಂಬದಿಂದ ಕುಕ್ಕೆ ಕ್ಷೇತ್ರಕ್ಕೆ ಬೆಳ್ಳಿ ರಥ ಸಮರ್ಪಣೆ Read More »

ಅಯೋಧ್ಯೆ: ಶ್ರೀ ರಾಮ ದರ್ಶನ, ಆರತಿ ಸಮಯ ಬದಲಾವಣೆ

ಲಕ್ನೋ: ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ರಾಮ ಲಲ್ಲಾನ ದರ್ಶನ ಮತ್ತು ಆರತಿಯ ಸಮಯವನ್ನು ಬದಲಾವಣೆ ಮಾಡಿರುವುದಾಗಿ ದೇವಾಲಯದ ಟ್ರಸ್ಟ್ ತಿಳಿಸಿದೆ. ಶರತ್ಕಾಲದ ಹಿನ್ನೆಲೆಯಲ್ಲಿ ಮಂದಿರದ ಬಾಗಿಲು ತೆರೆಯುವ ಮತ್ತು ಮುಚ್ಚುವ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಟ್ರಸ್ಟ್ ಮಾಹಿತಿ ನೀಡಿದೆ. ಬೆಳಗ್ಗೆ 4.30 ಕ್ಕೆ ಆರತಿ, 6.30 ಕ್ಕೆ ಶೃಂಗಾರ ಆರತಿ ನಡೆಯಲಿದೆ. ಭಕ್ತರಿಗೆ 7 ಗಂಟೆಯಿಂದ ದೇವಾಲಯಕ್ಕೆ ಪ್ರವೇಶ ನೀಡಲು ಟ್ರಸ್ಟ್ ನಿರ್ಧರಿಸಿದೆ. ಉಳಿದಂತೆ ಬಾಗಿಲು ಮುಚ್ಚುವ ಸಮಯ ಹಿಂದಿನಂತೆಯೇ ಮುಂದುವರಿಯಲಿದೆ.

ಅಯೋಧ್ಯೆ: ಶ್ರೀ ರಾಮ ದರ್ಶನ, ಆರತಿ ಸಮಯ ಬದಲಾವಣೆ Read More »

ಗುರುವಾಯೂರು ದೇವಸ್ಥಾನದಲ್ಲೂ ಚಿನ್ನ ಕಳವು : 25 ಕೋಟಿ ಅವ್ಯವಹಾರವಾಗಿರುವ ವರದಿ

ಶಬರಿಮಲೆ ಬಳಿಕ ಇನ್ನೊಂದು ಪ್ರಸಿದ್ಧ ದೇವಸ್ಥಾನದ ಚಿನ್ನಕ್ಕೆ ಕನ್ನ ತಿರುವನಂತಪುರಂ : ಶಬರಿಮಲೆಯ ಬಳಿಕ ಇದೀಗ ಕೇರಳದ ಇನ್ನೊಂದು ಪ್ರಸಿದ್ಧ ದೇವಸ್ಥಾನ ಗುರುವಾಯೂರು ದೇವಸ್ಥಾನದಲ್ಲೂ ಬೆಲೆಬಾಳುವ ಆಭರಣಗಳು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಕೇರಳದಲ್ಲಿ 12 ಪ್ರಸಿದ್ಧ ದೇವಸ್ಥಾನಗಳ ಆಡಳಿತ ನಿಭಾಯಿಸುವ ಸರ್ಕಾರದ ಗುರುವಾಯೂರು ದೇವಸ್ವಂ ಮಂಡಳಿಯ ಆಡಿಟಿಂಗ್ ವೇಳೆ ಸಾಕಷ್ಟು ವ್ಯತ್ಯಯಗಳು ಪತ್ತೆಯಾಗಿವೆ. 2019ರಲ್ಲಿ ಮಾಡಲಾದ ಆಡಿಟಿಂಗ್​ನಲ್ಲಿ ಕೆಲ ಗಮನಾರ್ಹ ಸಂಗತಿಗಳು ಬೆಳಕಿಗೆ ಬಂದಿವೆ. ಚಿನ್ನ, ಬೆಳ್ಳಿ, ದಂತ ಇತ್ಯಾದಿ ಹಲವು ವಸ್ತುಗಳು ಕಾಣೆಯಾಗಿರುವುದು ಗೊತ್ತಾಗಿದೆ. ಗೋಲ್ಡ್

ಗುರುವಾಯೂರು ದೇವಸ್ಥಾನದಲ್ಲೂ ಚಿನ್ನ ಕಳವು : 25 ಕೋಟಿ ಅವ್ಯವಹಾರವಾಗಿರುವ ವರದಿ Read More »

error: Content is protected !!
Scroll to Top