ಧಾರ್ಮಿಕ

ಇಂದು ಅಯೋಧ್ಯೆ ರಾಮ ಮಂದಿರಲ್ಲಿ ಪ್ರಧಾನಿಯಿಂದ ಧ್ವಜಾರೋಹಣ

ರಾಮ ಮಂದಿರ ಪೂರ್ಣಗೊಂಡ ಸಂಕೇತವಾಗಿ 22 ಅಡಿ ಎತ್ತರದ ಭಗವಾ ಧ್ವಜ ಹಾರಿಸಲಿರುವ ಮೋದಿ ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಇಂದು ಅಯೋಧ್ಯೆಯ ರಾಮಮಂದಿರದ ಮೇಲೆ ಕೇಸರಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಐದು ವರ್ಷದ ಬಳಿಕ ಅಯೋಧ್ಯೆ ರಾಮಮಂದಿರ ನಿರ್ಮಾಣ ಪೂರ್ಣಗೊಂಡಿದೆ. ಇದರ ಸಂಕೇತವಾಗಿ ಇಂದು ಅಯೋಧ್ಯೆಗೆ ಪ್ರಧಾನಿ ಮೋದಿ ಭೇಟಿ ನೀಡಿ, ರಾಮಮಂದಿರ ಗೋಪುರ ಮೇಲೆ 22 ಅಡಿ ಎತ್ತರದ ಭಗವಾ ಧ್ವಜಾರೋಹಣ ನೆರವೇರಿಸಲಿದ್ದಾರೆ. ಪ್ರಧಾನಿ ಮೋದಿ ಅವರು 22 ಅಡಿ ಎತ್ತರದ ಧಾರ್ಮಿಕ ಧ್ವಜಾರೋಹಣ ಮಾಡಿ, […]

ಇಂದು ಅಯೋಧ್ಯೆ ರಾಮ ಮಂದಿರಲ್ಲಿ ಪ್ರಧಾನಿಯಿಂದ ಧ್ವಜಾರೋಹಣ Read More »

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲ: ಲಕ್ಷ ದೀಪೋತ್ಸವ ಸಂಪನ್ನ

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಶ್ರೀ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ನ. 19 ರಂದು ರಾತ್ರಿ ಲಕ್ಷ ದೀಪೋತ್ಸವ ನಡೆಯಿತು. ದೇಗುಲದ ಗೋಪುರದಿಂದ ಕಾಶಿಕಟ್ಟೆಯವರೆಗೆ ಹಣತೆಗಳನ್ನು ಬೆಳಗಲಾಯಿತು. ರಥಬೀದಿಯು ದೀಪಗಳ ಬೆಳಕಿನಲ್ಲಿ ದಿವ್ಯವಾಗಿ ಕಂಗೊಳಿಸಿತು. ದೇವಸ್ಥಾನ, ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ರಥಬೀದಿ, ಅಭಯ ಆಂಜನೇಯ ಗುಡಿ, ಸವಾರಿ ಮಂಟಪ, ಆದಿಸುಬ್ರಹ್ಮಣ್ಯ, ಬೈಪಾಸ್ ರಸ್ತೆ ಹಾಗೂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಕ್ಷಾಂತರ ಹಣತೆಗಳನ್ನು ಬೆಳಗಿಸಲಾಯಿತು. ಮಹಾಪೂಜೆಯ ಬಳಿಕ ಹೊರಾಂಗಣ ಉತ್ಸವ ನಡೆಯಿತು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲ: ಲಕ್ಷ ದೀಪೋತ್ಸವ ಸಂಪನ್ನ Read More »

ಧರ್ಮಸ್ಥಳ: ಲಕ್ಷ ದೀಪೋತ್ಸವ ಸಂಪನ್ನ

ಬೆಳ್ತಂಗಡಿ: ಐದು ದಿನಗಳ ಕಾಲ ನಡೆದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಲಕ್ಷ ದೀಪೋತ್ಸವವು ಬುಧವಾರ ರಾತ್ರಿ ಗೌರಿಮಾರು ಕಟ್ಟೆ ಉತ್ಸವದ ಜೊತೆಗೆ ಸಂಪನ್ನಗೊಂಡಿತು. ಧರ್ಮಸ್ಥಳದ ಲಕ್ಷಾಂತರ ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ಶ್ರೀ ದೇವರ ದರ್ಶನ ಪಡೆದು ಕೃತಾರ್ಥರಾದರು. ಹಾಗೆಯೇ ಗುರುವಾರ ಸಂಜೆ ವೇಳೆ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಗೆ ಸಮವಸರಣ ಪೂಜೆ ನೆರವೇರಿತು.

ಧರ್ಮಸ್ಥಳ: ಲಕ್ಷ ದೀಪೋತ್ಸವ ಸಂಪನ್ನ Read More »

ಪುತ್ತೂರಿನೊಡೆಯನಿಗೆ ವೈಭವದ ಲಕ್ಷದೀಪೋತ್ಸವ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರಿನ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನ. 19 ರಂದು ವೈಭವದ ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯಿತು. ಸಾವಿರಾರು ಭಕ್ತರು ದೇವಾಲಯದ ರಥ ಬೀದಿಯ ಉದ್ದಕ್ಕೂ ಸಾಲು ಸಾಲು ಹಣತೆಗಳನ್ನು ಹಚ್ಚಿ ಶ್ರೀ ಮಹಾಲಿಂಗೇಶ್ವರ ದೇವರ ಲಕ್ಷದೀಪ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದುಕೊಟ್ಟರು. ದೇವಸ್ಥಾನದ ತಂತ್ರಿಗಳಾದ ಕುಂಟಾರು ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು. ಬ್ರ. ವೇ. ಮೂ. ಗುರು ತಂತ್ರಿ ಅವರು ಲಕ್ಷ ದೀಪೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ಪುತ್ತೂರಿನೊಡೆಯನಿಗೆ ವೈಭವದ ಲಕ್ಷದೀಪೋತ್ಸವ Read More »

ಶಬರಿಮಲೆಯಲ್ಲಿ ಭಕ್ತರ ಹೆಚ್ಚಳ: ಮಹತ್ವದ ಸೂಚನೆ ನೀಡಿದ ಕೇರಳ ಹೈಕೋರ್ಟ್

ತಿರುವನಂತಪುರಂ: ಶಬರಿಮಲೆಯ ಅಯ್ಯಪ್ಪ ಸನ್ನಿಧಾನದಲ್ಲಿ ಮಕರವಿಳಕ್ಕು ಯಾತ್ರೆ ಆರಂಭವಾಗಿದ್ದು, ಭಕ್ತರ ದಂಡೇ ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಯಾತ್ರಿಕರ ಒಳಹರಿವು ನಿಯಂತ್ರಿಸುವ ನಿಟ್ಟಿನಲ್ಲಿ ಕೇರಳ ಹೈಕೋರ್ಟ್ ಸೂಚನೆಯೊಂದನ್ನು ನೀಡಿದೆ. ದಿನದ ದರ್ಶನದ ಮಿತಿಯನ್ನು 75 ಸಾವಿರಕ್ಕೆ ಇಳಿಕೆ ಮಾಡಲಾಗಿದ್ದು, ಸ್ಪಾಟ್ ಬುಕ್ಕಿಂಗ್ ಅನ್ನು 5 ಸಾವಿರಕ್ಕೆ ‌ಸೀಮಿತಗೊಳಿಸಿದೆ. ನ್ಯಾಯಾಲಯಕ್ಕೆ ನೀಡಲಾದ ಮಾಹಿತಿಯ ಪ್ರಕಾರ ದೇಗುಲಕ್ಕೆ ಆಗಮಿಸುವ ಭಕ್ತರ ಸಂಖ್ಯೆ 1 ಲಕ್ಷ ದಾಟಿದ್ದು, ಹಲವರು ಸಮಯಕ್ಕೂ ಮುನ್ನವೇ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಭಕ್ತರ ದಂಡು ಕಡಿಮೆ ಮಾಡುವ

ಶಬರಿಮಲೆಯಲ್ಲಿ ಭಕ್ತರ ಹೆಚ್ಚಳ: ಮಹತ್ವದ ಸೂಚನೆ ನೀಡಿದ ಕೇರಳ ಹೈಕೋರ್ಟ್ Read More »

ಶಬರಿಮಲೆಯಲ್ಲಿ ಭಕ್ತರ ಭಾರಿ ದಟ್ಟಣೆ : ಸ್ಪಾಟ್‌ ಬಿಕ್ಕಿಂಗ್‌ಗೆ ಮಿತಿ ಹಾಕಲು ತೀರ್ಮಾನ

ಯಾತ್ರೆ ಆರಂಭದ ದಿನದಿಂದಲೇ ಸಾಲುಗಟ್ಟಿ ಬರುತ್ತಿರುವ ಅಯ್ಯಪ್ಪ ವ್ರತಧಾರಿಗಳು ಶಬರಿಮಲೆ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ವಾರ್ಷಿಕ ಮಂಡಲ-ಮಕರ ವಿಳಕ್ಕು ಯಾತ್ರೆ ಸೋಮವಾರದಿಂದ ವಿಧ್ಯುಕ್ತವಾಗಿ ಆರಂಭವಾಗಿದ್ದು, ಆರಂಭದಿಂದಲೇ ಸಿಕ್ಕಾಪಟ್ಟೆ ದಟ್ಟಣೆಯಿದೆ. ಮೊದಲ ದಿನವೇ 1.36 ಲಕ್ಷ ಭಕ್ತರು ಅಯ್ಯಪ್ಪನ ದರ್ಶನ ಪಡೆದರು. ಭಕ್ತರ ದಟ್ಟಣೆಯನ್ನು ನಿಯಂತ್ರಿಸಲು ಸ್ಥಳೀಯ ಪೊಲೀಸರು ಹೆಣಗಾಡುತ್ತಿದ್ದಾರೆ. ಆನ್‌ಲೈನ್‌ ಮತ್ತು ಸ್ಪಾಟ್‌ ಬುಕ್ಕಿಂಗ್‌ ಎಂಬೆರಡು ಸೌಲಭ್ಯಗಳ ಮೂಲಕ ಮಾತ್ರ ದರ್ಶನಕ್ಕೆ ಅವಕಾಶ ಇದ್ದರೂ ಭಕ್ತರು ಅನಿಯಮಿತವಾಗಿ ಬರುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಹೀಗಾಗಿ

ಶಬರಿಮಲೆಯಲ್ಲಿ ಭಕ್ತರ ಭಾರಿ ದಟ್ಟಣೆ : ಸ್ಪಾಟ್‌ ಬಿಕ್ಕಿಂಗ್‌ಗೆ ಮಿತಿ ಹಾಕಲು ತೀರ್ಮಾನ Read More »

ಶಬರಿಮಲೆ ವಾರ್ಷಿಕ ಮಂಡಲ-ಮಕರವಿಳಕ್ಕು ಯಾತ್ರೆ ಆರಂಭ

ಮುಂಜಾನೆ 3 ಗಂಟೆಗೆ ತೆರೆದ ದೇಗುಲದ ಬಾಗಿಲು, ಸಾವಿರಾರು ಭಕ್ತರಿಂದ ಅಯ್ಯಪ್ಪ ದರ್ಶನ ಶಬರಿಮಲೆ : ಈ ವರ್ಷದ ಮಂಡಲ ಮತ್ತು ಮಕರ ವಿಳಕ್ಕು ಯಾತ್ರಾ ಋತುವಿಗಾಗಿ ಶಬರಿಮಲೆ ದೇಗುಲದ ಬಾಗಿಲು ಇಂದು ತೆರೆದಿದೆ. ಅಯ್ಯಪ್ಪ ದೇಗುಲದ ವಾರ್ಷಿಕ ಮಂಡಲ-ಮಕರವಿಳಕ್ಕು ಯಾತ್ರೆ ಇಂದಿನಿಂದ ಆರಂಭವಾಗಿದ್ದು, ಇಂದು ನಸುಕಿನ 3 ಗಂಟೆಗೆ ದೇಗುಲದ ಬಾಗಿಲು ತೆರೆಯಲಾಗಿದೆ. ಸಾವಿರಾರು ಭಕ್ತರು ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಮೇಲ್‌ಶಾಂತಿ ಅರುಣ್‌ಕುಮಾರ್‌ ನಂಬೂದಿರಿಯವರು ಇಂದು ನಸುಕಿನ 3 ಗಂಟೆಗೆ ತಂತ್ರಿ ಮಹೇಶ್‌ ಮೋಹನಾರು ಮತ್ತು

ಶಬರಿಮಲೆ ವಾರ್ಷಿಕ ಮಂಡಲ-ಮಕರವಿಳಕ್ಕು ಯಾತ್ರೆ ಆರಂಭ Read More »

ಶ್ರೀ ಪುಣ್ಯ ಕುಮಾರ ದೈವಸ್ಥಾನ ಮಾಡತ್ತಾರು ಕಲ್ಲೇಗ: ವಾರ್ಷಿಕ ನೇಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಕಲ್ಲೇಗ ಮಾಡತ್ತಾರುವಿನ ಶ್ರೀ ಪುಣ್ಯ ಕುಮಾರ ಹಾಗೂ ಧರ್ಮದೈವಗಳ ವರ್ಷಾವಧಿ ನೇಮದ ಜನವರಿ 2 ಮತ್ತು 3 ರಂದು ನಡೆಯಲಿದ್ದು, ಪುಣ್ಯಕುಮಾರ ದೈವಸ್ಥಾನ ಚಾವಡಿಯಲ್ಲಿ ಅಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಅರ್ಚಕ ಕೃಷ್ಣ ಶೇವಿರೆ, ಅಧ್ಯಕ್ಷ ಶ್ರೀಧರ್ ಹೆಗ್ಡೆ ಉಳಿಯ, ಕಾರ್ಯದರ್ಶಿ ಉಮೇಶ್ ಆಚಾರ್ಯ, ಗೌರವಾಧ್ಯಕ್ಷ ಜೀವಂಧರ್ ಜೈನ್, ಮಾಜಿ ಕಾರ್ಯದರ್ಶಿ ನಾರಾಯಣ ಗೌಡ ಕಲ್ಲೇಗ, ಉಪಾಧ್ಯಕ್ಷ ಜೀನಪ್ಪ ಪೂಜಾರಿ ಮುರ, ಖಜಾಂಚಿ ಗಣೇಶ್ ನ್ಯಾಕ್ ಪದ್ಮಡ್ಕ, ಜೊತೆ ಕಾರ್ಯದರ್ಶಿ ಚಂದಪ್ಪ ಕುಲಾಲ್, ಸಮಿತಿಯ

ಶ್ರೀ ಪುಣ್ಯ ಕುಮಾರ ದೈವಸ್ಥಾನ ಮಾಡತ್ತಾರು ಕಲ್ಲೇಗ: ವಾರ್ಷಿಕ ನೇಮದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಕಂಬಳಕ್ಕೆ ರಾಜ್ಯ ಸರ್ಕಾರದಿಂದ ಬೆಂಬಲ: ಹತ್ತು ಕಂಬಳ ಕೂಟಗಳಿಗೆ ತಲಾ 5 ಲಕ್ಷ ರೂ. ಅನುದಾನ

ಪುತ್ತೂರು: ಕರಾವಳಿ ಜಿಲ್ಲೆಗಳ ಜಾನಪದ ಕ್ರೀಡೆಯಾದ ಕಂಬಳಕ್ಕೆ ರಾಜ್ಯ ಸರ್ಕಾರ ಕೊಡುಗೆ ನೀಡಿದ್ದು, 10 ಕಂಬಳ ಕೂಟಗಳಿಗೆ ‌ತಲಾ 5 ಲಕ್ಷ ರೂ. ಗಳಂತೆ ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಮಾಹಿತಿ ನೀಡಿದ್ದಾರೆ. ಈ ಅನುದಾನವನ್ನು ಪ್ರವಾಸೋದ್ಯಮ ಇಲಾಖೆಯ ಮೂಲಕ ಬಿಡುಗಡೆ ಮಾಡಲಾಗಿದೆ. ಪುತ್ತೂರು, ಉಪ್ಪಿನಂಗಡಿ, ಜಪ್ಪು, ಬಂಟ್ವಾಳ, ಮೂಲ್ಕಿ, ವೇಣೂರು, ನರಿಂಗಾಣ, ಮಂಗಳೂರು, ಮೂಡಬಿದ್ರೆ, ಐಕಳ ಗಳಲ್ಲಿ ನಡೆಯುವ ಕಂಬಳಗಳಿಗೆ ‌ಸಂಬಂಧಿಸಿದ ಹಾಗೆ ಈ ಅನುದಾನ ಬಿಡುಗಡೆ ಮಾಡಲಾಗಿದೆ. ಅಶೋಕ್

ಕಂಬಳಕ್ಕೆ ರಾಜ್ಯ ಸರ್ಕಾರದಿಂದ ಬೆಂಬಲ: ಹತ್ತು ಕಂಬಳ ಕೂಟಗಳಿಗೆ ತಲಾ 5 ಲಕ್ಷ ರೂ. ಅನುದಾನ Read More »

ಸುಬ್ಬಪ್ಪನಿಗೆ ಪ್ರಥಮ ಬೆಳ್ಳಿರಥ ಸೇವೆ

ಸುಬ್ರಹ್ಮಣ್ಯ: ಸುಳ್ಯದ ಕುರುಂಜಿಯ ಕುಡಿ, ಧಾರ್ಮಿಕ ಶ್ರದ್ಧಾಳು ಆಗಿರುವ ಡಾಕ್ಟರ್ ಕೆ.ವಿ. ರೇಣುಕಾಪ್ರಸಾದ್ ಮತ್ತು ಅವರ ಕುಟುಂಬದರು ಸುಬ್ರಹ್ಮಣ್ಯಾಧೀಶ ಸುಬ್ಬಪ್ಪನಿಗೆ ಹರಕೆ ಸೇವೆಯಾಗಿ ಸಲ್ಲಿಸಿರುವ ಬೆಳ್ಳಿರಥಕ್ಕೆ ಅವರಿಂದಲೇ ಪ್ರಥಮ ಬೆಳ್ಳಿರಥ ಸೇವೆ ನಿನ್ನೆ ರಾತ್ರಿ ನಡೆಯಿತು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಉಪಸ್ಥಿತರಿದ್ದು ರಥಸೇವೆಯಲ್ಲಿ ಪಾಲ್ಗೊಂಡರು. ರೇಣುಕಾಪ್ರಸಾದ್ – ಜ್ಯೋತಿ ಆರ್. ಪ್ರಸಾದ್ ಮತ್ತು ಮನೆಯವರು ರಥ ಎಳೆಯಲು ಕೈ ಜೋಡಿಸಿದ್ದು ವಿಶೇಷವಾಗಿತ್ತು.

ಸುಬ್ಬಪ್ಪನಿಗೆ ಪ್ರಥಮ ಬೆಳ್ಳಿರಥ ಸೇವೆ Read More »

error: Content is protected !!
Scroll to Top