ಪುತ್ತೂರು

ಭಾರತೀಯ ಸಂಸ್ಕೃತಿಗೆ ಪೂರಕವಾದ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಗಾಗಿ ಸ್ಮಾರ್ಟ್ ಕ್ಲಾಸ್‍ | ಶಾಂತಿಗೋಡು ಹಿ.ಪ್ರಾ. ಶಾಲೆಯಲ್ಲಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಶಾಂತಿಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಯಲು ರಂಗಮಂದಿರ, ನೂತನ ಕೊಠಡಿ, ಹಾಗೂ ಕುಡಿಯುವ ನೀರಿನ ಘಟಕ, ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಜ. 26ರಂದು ನಡೆಯಿತು. ಶಾಸಕ ಸಂಜೀವ ಮಠಂದೂರು ಮಾತನಾಡಿ, ನಮ್ಮ ಸಂಸ್ಕೃತಿಯ ಪ್ರತಿಬಿಂಬ ನಮ್ಮ ಊರಿನ ಶಾಲೆ. ಇಂತಹ ಸರಕಾರಿ ಶಾಲೆಗಳ ಉಳಿವಿಗಾಗಿ ನಮ್ಮ ಕಾರ್ಯ ತುಂಬಾ ಇದೆ. ಕೇಂದ್ರ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಚಯಿಸುವ ಮೂಲಕ ಮೆಕಾಲೆಯ ಶಿಕ್ಷಣ ಪದ್ಧತಿಯಿಂದ ಹೊರತಂದು, ಭಾರತೀಯ ಸಂಸ್ಕೃತಿಗೆ ಪೂರಕವಾದ ಶಿಕ್ಷಣ ನೀಡುವ ಕೆಲಸ […]

ಭಾರತೀಯ ಸಂಸ್ಕೃತಿಗೆ ಪೂರಕವಾದ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಗಾಗಿ ಸ್ಮಾರ್ಟ್ ಕ್ಲಾಸ್‍ | ಶಾಂತಿಗೋಡು ಹಿ.ಪ್ರಾ. ಶಾಲೆಯಲ್ಲಿ ಶಾಸಕ ಸಂಜೀವ ಮಠಂದೂರು Read More »

ಪುತ್ತೂರು:  ಪ್ರತಿಷ್ಠಿತ ಬ್ಯಾಂಕ್ ನಲ್ಲಿ ಉದ್ಯೋಗವಕಾಶವಿದೆ

ಪುತ್ತೂರು:  ಪ್ರತಿಷ್ಠಿತ ಬ್ಯಾಂಕ್ ನಲ್ಲಿ ಉದ್ಯೋಗವಕಾಶವಿದೆ, ಹುದ್ದೆ :-ಕ್ಲಸ್ಟರ್ ಮ್ಯಾನೇಜರ್ ವಿದ್ಯಾಭ್ಯಾಸ :- ಯಾವುದೇ ಡಿಗ್ರಿ ಮತ್ತು 3 -4 year of experience Home loan or loan against property in an NBFC/Bank/HFC  . ಸ್ಥಳ :-ಬೆಂಗಳೂರು,ತುಮಕೂರು, ಹುಬ್ಬಳ್ಳಿ, ಬೆಳಗಾವಿ ಈ ಕೆಳಗಿನ ವಿಳಾಸಕ್ಕೆ ನಿಮ್ಮ Biodata ಕಳುಹಿಸಿ : Email ID :Info@myprerana.in Whatsapp and Call:8904877721, 7204977721

ಪುತ್ತೂರು:  ಪ್ರತಿಷ್ಠಿತ ಬ್ಯಾಂಕ್ ನಲ್ಲಿ ಉದ್ಯೋಗವಕಾಶವಿದೆ Read More »

ಜ. 30: ಉಚಿತ ಕಣ್ಣಿನ ತಪಾಸಣಾ ಶಿಬಿರ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ದ.ಕ. ಜಿಲ್ಲಾ ಮರಾಠಿ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ಪುತ್ತೂರು ನಗರಸಭೆ, ಸರಕಾರಿ ಆಸ್ಪತ್ರೆ ಹಾಗೂ ಸ್ಟಾರ್ ಒಪ್ಟಿಕಲ್ಸ್ ಸಹಕಾರದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಜ. 30 ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.00ರವರೆಗೆ ನಗರಸಭೆ ಕಟ್ಟಡದ 2ನೇ ಮಹಡಿಯಲ್ಲಿ ನಡೆಯಲಿದೆ. ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ., ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಬಾಲಚಂದ್ರ,, ಪೌರಾಯುಕ್ತ ಮಧು ಎಸ್. ಮನೋಹರ್,

ಜ. 30: ಉಚಿತ ಕಣ್ಣಿನ ತಪಾಸಣಾ ಶಿಬಿರ Read More »

ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಫೆ.3 ಹಾಗೂ 4 ರಂದು ನಡೆಯುವ ವರ್ಷಾವಧಿ ಜಾತ್ರೋತ್ಸವಕ್ಕೆ ಗೊನೆ‌ ಮುಹೂರ್ತ ಶುಕ್ರವಾರ ಬೆಳಿಗ್ಗೆ ನಡೆಯಿತು. ಬೆಳಿಗ್ಗೆ ದೇವಸ್ಥಾನದಲ್ಲಿ‌ ಪ್ರಾರ್ಥನೆ ಸಲ್ಲಿಸಿದ ಬಳಿಕ ಅರ್ಚಕ ಸದಾಶಿವ ಹೊಳ್ಳ ಗೊನೆ‌ ಮುಹೂರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಪತಿ ಬೈಪಡಿತ್ತಾಯ, ಶ್ರೀಧರ ಬೈಪಡಿತ್ತಾಯ, ಸದಸ್ಯರು, ಊರ ಭಕ್ತಾಧಿಗಳು‌ ಉಪಸ್ಥಿತರಿದ್ದರು.

ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ Read More »

ಫೆ‌. 1: ಮಡಿವಾಳ ಮಾಚಿದೇವ ಜಯಂತಿ‌ ದಿನಾಚರಣೆ‌

ಪುತ್ತೂರು : ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ‌ ವತಿಯಿಂದ ಶ್ರೀ ಮಡಿವಾಳ ಮಾಚಿದೇವ ಜಯಂತಿ‌ ದಿನಾಚರಣೆ‌ ಫೆ.1 ಬುಧವಾರ ಬೆಳಿಗ್ಗೆ‌ 10.30 ಕ್ಕೆ ತಾಲೂಕು ಆಡಳಿತ ಸೌಧದ ತಾಲೂಕು ಕಛೆರಿ ಸಭಾಂಗಣದಲ್ಲಿ ನಡೆಯಲಿದೆ. ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಎಂ. ಸಂಸ್ಕರಣಾ ಜ್ಯೋತಿ ಪ್ರಜ್ವಲನೆ ಮಾಡಲಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ  ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಪೂಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣ್ವ, ಪೊಲೀಸ್ ಉಪಾಧೀಕ್ಷಕ ವೀರಯ್ಯ

ಫೆ‌. 1: ಮಡಿವಾಳ ಮಾಚಿದೇವ ಜಯಂತಿ‌ ದಿನಾಚರಣೆ‌ Read More »

ಕುಂಜೂರುಪಂಜದಲ್ಲಿ ಕುಡಿಯುವ ನೀರು ಸರಾಗ ಪೂರೈಕೆ

ಪುತ್ತೂರು: ಕುಂಜೂರುಪಂಜ ನಿವಾಸಿಗಳಿಗೆ ಕುಡಿಯುವ ನೀರು ಪೂರೈಕೆ ಆಗುತ್ತಿದ್ದು, ಬುಧವಾರ ರಾತ್ರಿಯೇ ಹೊಸ ಬೋರ್ ವೆಲ್ ಗೆ ಪಂಪ್ ಅಳವಡಿಸಲಾಗಿದೆ. ಏಕಾಏಕೀ ಬೋರ್ ವೆಲ್ ಕೈಕೊಟ್ಟ ಕಾರಣ, ತರಾತುರಿಯಲ್ಲಿ ಹೊಸ ಬೋರ್ ವೆಲ್ ಕೊರೆಸುವಲ್ಲಿ ಆರ್ಯಾಪು ಗ್ರಾ.ಪಂ. ಯಶಸ್ವಿಯಾಗಿದೆ. ಇದೀಗ ನೀರು ಸರಾಗವಾಗಿ ಪೂರೈಕೆ ಆಗುತ್ತಿದೆ.

ಕುಂಜೂರುಪಂಜದಲ್ಲಿ ಕುಡಿಯುವ ನೀರು ಸರಾಗ ಪೂರೈಕೆ Read More »

ಟ್ಯಾಂಕರ್ ನೀರು ಚುನಾವಣಾ ಗಿಮಿಕ್: ಕಲ್ಲಂದಡ್ಕದಲ್ಲಿ ನೀರಿನ ವ್ಯತ್ಯಯ ಉಂಟಾಗಿಲ್ಲವೆಂದ ಕುಡಿಪ್ಪಾಡಿ ಗ್ರಾ.ಪಂ. ಅಧ್ಯಕ್ಷೆ

ಪುತ್ತೂರು: ಕುಡಿಪ್ಪಾಡಿ ಗ್ರಾ.ಪಂ. ವ್ಯಾಪ್ತಿಯ ಕಲ್ಲಂದಡ್ಕದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿಲ್ಲ. ನಿನ್ನೆ(ಬುಧವಾರ)ಯಷ್ಟೇ ಬೋರ್ ವೆಲ್ ಪಂಪ್ ಹಾಳಾಗಿದ್ದು, ನಾಳೆ(ಶುಕ್ರವಾರ) ಪಂಪ್ ಅಳವಡಿಕೆ ಮಾಡಲಾಗುವುದು. ತಕ್ಷಣವೇ ನೀರು ಸರಬರಾಜು ಆಗಲಿದೆ ಎಂದು ಕುಡಿಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಖಾ ಬಟ್ರುಪ್ಪಾಡಿ ತಿಳಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಗಿಮಿಕ್ ಗಳನ್ನು ಮಾಡಲು ಕೆಲವರು ಮುಂದಾಗುತ್ತಾರೆ. ಅಲ್ಲಿ ನೀರಿನ ಕೊರತೆ ಇಲ್ಲದೇ ಇದ್ದರೂ, ಅನಾವಶ್ಯಕವಾಗಿ ಪ್ರಚಾರ ಗಿಟ್ಟಿಸುವ ಉದ್ದೇಶದಿಂದ ನೀರು ನೀಡಲಾಗುತ್ತಿದೆ. ಬಳಿಕ ಅದನ್ನು ಫೊಟೋ ತೆಗೆದು, ಪ್ರಚಾರ ತೆಗೆದುಕೊಳ್ಳುವ ಪ್ರಯತ್ನವಷ್ಟೇ ಇದು.

ಟ್ಯಾಂಕರ್ ನೀರು ಚುನಾವಣಾ ಗಿಮಿಕ್: ಕಲ್ಲಂದಡ್ಕದಲ್ಲಿ ನೀರಿನ ವ್ಯತ್ಯಯ ಉಂಟಾಗಿಲ್ಲವೆಂದ ಕುಡಿಪ್ಪಾಡಿ ಗ್ರಾ.ಪಂ. ಅಧ್ಯಕ್ಷೆ Read More »

ಜ. 28ರಂದು 30ನೇ ವರ್ಷದ ಹೊನಲು ಬೆಳಕಿನ ಪುತ್ತೂರು “ಕೋಟಿ-ಚೆನ್ನಯ” ಜೋಡುಕರೆ ಕಂಬಳ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಜ. 28 ಹಾಗೂ 29ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿಯ ಗೌರವ ಮಾರ್ಗದರ್ಶಕಿ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ತಿಳಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಮಾಜಿ ಸಚಿವ ವಿಜಯಕುಮಾರ್ ಸೊರಕೆ ಅವರ ಗೌರವಾಧ್ಯಕ್ಷತೆಯಲ್ಲಿ, ಶಕುಂತಳಾ ಟಿ. ಶೆಟ್ಟಿ ಅವರ ಗೌರವ

ಜ. 28ರಂದು 30ನೇ ವರ್ಷದ ಹೊನಲು ಬೆಳಕಿನ ಪುತ್ತೂರು “ಕೋಟಿ-ಚೆನ್ನಯ” ಜೋಡುಕರೆ ಕಂಬಳ Read More »

ಸಿ.ಪಿ.ಸಿ.ಆರ್.ಐ. ನಿರ್ದೇಶಕರಾಗಿ ಡಾ. ಕೆ.ಬಿ. ಹೆಬ್ಬಾರ್

ಪುತ್ತೂರು: ಕಾಸರಗೋಡು ಐ.ಸಿ.ಎ.ಆರ್ – ಸಿ.ಪಿ.ಸಿ.ಆರ್.ಐ. ನಿರ್ದೇಶಕರಾಗಿ ಡಾ. ಕೆ.ಬಿ. ಹೆಬ್ಬಾರ್ ಅವರು ಅಧಿಕಾರ ಸ್ವೀಕರಿಸಿದರು. ಅಗ್ರಿಕಲ್ಚರಲ್ ಸೈಂಟಿಸ್ಟ್ ರಿಕ್ರೂಟ್ಮೆಂಟ್ ಬೋರ್ಡ್, ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರೀಸರ್ಚ್ ಶಿಫಾರಸಿನ ಮೇಲೆ ಐ.ಸಿ.ಎ.ಆರ್ – ಸಿ.ಪಿ.ಸಿ.ಆರ್.ಐ. ನಿರ್ದೇಶಕರ ನೇಮಕ ಮಾಡಲಾಗಿದೆ. ವಿಟ್ಲ ಸಿಪಿಸಿಆರ್ಐ ಹಾಗೂ ಕಡಬದ ಕಿದು ಸಿಪಿಸಿಆರ್ಐ ಕಾಸರಗೋಡು ಸಿಪಿಸಿಆರ್ಐ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. 1995ರಲ್ಲಿ ನಾಗಪುರದ ಸೆಂಟ್ರಲ್ ಇನ್ಸ್ಟಿಟ್ಯೂಟ್ ಫಾರ್ ಕಾಟನ್ ರೀಸರ್ಚಿನಲ್ಲಿ ವಿಜ್ಞಾನಿಯಾಗಿ ವೃತ್ತಿ ಜೀವನ ಆರಂಭಿಸಿದ ಡಾ. ಕೆ.ಬಿ. ಹೆಬ್ಬಾರ್ ಅವರು, 2007ರಲ್ಲಿ

ಸಿ.ಪಿ.ಸಿ.ಆರ್.ಐ. ನಿರ್ದೇಶಕರಾಗಿ ಡಾ. ಕೆ.ಬಿ. ಹೆಬ್ಬಾರ್ Read More »

ವೀರಮಂಗಲ ಶಾಲೆಯಲ್ಲಿ ಗಣರಾಜ್ಯೋತ್ಸವ

ಪುತ್ತೂರು: ವೀರಮಂಗಲ ಶಾಲೆಯಲ್ಲಿ 74 ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.,ಎಸ್ ಡಿ ಎಂ ಸಿ ಅಧ್ಯಕ್ಷೆ ಅನುಪಮಾ ಧ್ವಜಾರೋಹಣಗೈದರು. ಬಳಿಕ ಸ್ಕೌಟ್ ಧ್ವಜಾರೋಹಣ ಮಾಡಲಾಯಿತು.ನರಿಮೊಗರು ಗ್ರಾಮ ಪಂಚಾಯಿತಿ ಸದಸ್ಯೆ ಪದ್ಮಾವತಿ ಇವರು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಭಾಷಣ, ದೇಶಭಕ್ತಿ ಗೀತೆಗಳು ಹಾಗೂ ದೇಶಭಕ್ತಿಗೀತೆ ಸಂಬಂಧ ಸೇವಾದಳ ತಂಡದಿಂದ ನೃತ್ಯಕಾರ್ಯಕ್ರಮ ನಡೆಯಿತು. ಶಾಲೆಯ ಶಿಕ್ಷಕರಾದ ಹರಿಣಾಕ್ಷಿ, ಶೋಭಾ, ಶೀಲತಾ, ಕವಿತಾ, ಹೇಮಾವತಿ, ಅಡುಗೆ ಸಿಬ್ಬಂಧಿಗಳಾದ ಪಾರ್ವತಿ,

ವೀರಮಂಗಲ ಶಾಲೆಯಲ್ಲಿ ಗಣರಾಜ್ಯೋತ್ಸವ Read More »

error: Content is protected !!
Scroll to Top