ಹಿರಿಯರನ್ನು, ಅವರ ಪರಿಶ್ರಮವನ್ನು ಮರೆಯದಿರೋಣ | ಪುತ್ತೂರು ತಾಲೂಕು ಮಟ್ಟದ ಗಣರಾಜ್ಯೋತ್ಸವದಲ್ಲಿ ಗಿರೀಶ್ ನಂದನ್
ಪುತ್ತೂರು: ಭಾಷೆ, ಪಂಗಡ ಮೀರಿ ನಮ್ಮ ದೇಶವನ್ನು ಹಿರಿಯರು ಒಂದಾಗಿಸಿದರು. ಅವರ ಪರಿಶ್ರಮವನ್ನು ಹಾಗೂ ಅವರನ್ನು ಮರೆಯದಿರೋಣ ಎಂದು ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಹೇಳಿದರು. ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ, ವಂದನೆ ಸ್ವೀಕರಿಸಿ ಮಾತನಾಡಿದರು. ಭಾರತ ಒಂದೊಮ್ಮೆ ಹರಿದು ಹಂಚಿ ಹೋಗಿತ್ತು. ಇದನ್ನು ಒಂದು ಮಾಡಲು ಸಾಕಷ್ಟು ಶ್ರಮ ವಹಿಸಬೇಕಾಯಿತು. ಆಗ ಎದುರಾದ ಹಲವು ಸಮಸ್ಯೆಗಳನ್ನು ಮೀರಿ, […]










