ಪುತ್ತೂರು

ಮಹಿಳೆಯ ಬ್ಯಾಗಿನಿಂದ ಚಿನ್ನಾಭರಣ ಕಳವು | ಆರೋಪಿ ನಸೀಮಾ ಬಂಧನ

ಉಪ್ಪಿನಂಗಡಿ: ಮಹಿಳೆಯೋರ್ವರ ಬ್ಯಾಗಿನಿಂದ 114 ಗ್ರಾಂ ತೂಕದ ಚಿನ್ನಾಭರಣದ ಬಾಕ್ಸ್ ಎಗರಿಸಿದ್ದ ಪ್ರಕರಣ ಬಸ್‍ ನಿಲ್ದಾಣದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರು ಬಂಟ್ವಾಳ ತಾಲೂಕು ಕೊಮಿನಡ್ಕ ಮನೆ ನಿವಾಸಿ ನಸೀಮಾ (31) ಎಂಬಾಕೆಯನ್ನು ಬಂಧಿಸಿ, ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಕಡಬ ತಾಲೂಕು ಬಂಟಿ ಗ್ರಾಮದ ನೆಕ್ಕಿತದ ನಿವಾಸಿ ಮುಸ್ತಫಾ ಅವರ ಪತ್ನಿ ಅಬೀಬಾ ಅವರು ಭಾವನ ಪತ್ನಿ ಹಸೀರಾಬಾನು ಮದುವೆ ಕಾರ್ಯಕ್ರಮಕ್ಕೆ ಹೊರಡುವ ಮೊದಲು ಮನೆಯಲ್ಲಿದ್ದ ಅವರ ಸುಮಾರು 8 ಗ್ರಾಂ ತೂಕದ ಚಿನ್ನದ ನೆಕ್ಸಸ್ -1 […]

ಮಹಿಳೆಯ ಬ್ಯಾಗಿನಿಂದ ಚಿನ್ನಾಭರಣ ಕಳವು | ಆರೋಪಿ ನಸೀಮಾ ಬಂಧನ Read More »

ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ. ನರಿಮೊಗರು ಮುಗೇರಡ್ಕ ಮನೆ ನಿವಾಸಿ ವಿದ್ಯಾರ್ಥಿನಿ ದೀಕ್ಷಿತ ಜೋಗಿ (17) ಆತ್ಮಹತ್ಯೆ ಮಾಡಿಕೊಂಡ ಯುವತಿ. ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಪಿಯುಸಿ ಓದುತ್ತಿರುವ ದೀಕ್ಷಿತ ಜೋಗಿ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ Read More »

ಒಕ್ಕಲಿಗ ಸ್ವಸಹಾಯ ಟ್ರಸ್ಟ್ ದಶಮಾನೋತ್ಸವ ಸಂಭ್ರಮ | ಅದೃಷ್ಟ ಕೂಪನ್ ವಿಜೇತರಿಗೆ ಬಹುಮಾನ ವಿತರಣೆ

ಪುತ್ತೂರು: ಒಕ್ಕಲಿಗ ಸ್ಮ ಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಂಭ್ರಮದ ಪ್ರಯುಕ್ತ ನಡೆದ ಅದೃಷ್ಟ ಕೂಪನ್ ವಿಜೇತರಿಗೆ ಬಹುಮಾನವನ್ನು ಬುಧವಾರ  ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ಒಕ್ಕಲಿಗ ಸೌಧದಲ್ಲಿ ವಿತರಿಸಲಾಯಿತು. ಪ್ರಥಮ ಬಯಮಾನ ಚಿನ್ನದ ಸರ ವಿಜೇತರರಾದ ಅರ್ಪಣಾ, ಚಿನ್ನದ ನಾಣ್ಯ ವಿಜೇತರಾದ ಗಿರಿಜಾ, ಮೊಬೈಲ್ ಪೋನ್ ವಿಜೇತರಾದ ಆಕಾಶ್, ಟ್ಯಾಬ್ ಬಹುಮಾನ ವಿಜೇತರಾದ ಜಿತಿನ್ ಹಾಗೂ ಹತ್ತು ಆಕರ್ಷಕ ಬಹುಮಾನಗಳಿಗೆ ವಿಜೇತರಾದ ಮೀನಾಕ್ಷಿ ಪುಷ್ಪಲತಾ ಕುಂಟ್ಯಾನ, ಜಾನಕಿ ನಾಯ್ಕಟ್ಟು, ಪರ್ಣವಿ ಕೆ ಆರ್., ಕುಸುಮ, ಭುವಿ

ಒಕ್ಕಲಿಗ ಸ್ವಸಹಾಯ ಟ್ರಸ್ಟ್ ದಶಮಾನೋತ್ಸವ ಸಂಭ್ರಮ | ಅದೃಷ್ಟ ಕೂಪನ್ ವಿಜೇತರಿಗೆ ಬಹುಮಾನ ವಿತರಣೆ Read More »

ಬೈಕ್ ಅಪಘಾತದಲ್ಲಿ ಗಾಯಗೊಂಡ ನಿಶಾಂತ್, ಕಾರ್ತಿಕ್ ಅವರಿಗೆ ವಜ್ರತೇಜಸ್ ತಂಡದಿಂದ ಧನಸಹಾಯ ಹಸ್ತಾಂತರ

ಪುತ್ತೂರು : ದಾರಂದಕುಕ್ಕು ಸಮೀಪ ನಿನ್ನೆ ನಡೆದ ಬೈಕ್ ಮತ್ತು ಬಸ್ ಅಪಘಾತದಲ್ಲಿ ಗಂಭೀರ ಗಾಯಗೊಂಡ ವಿದ್ಯಾರ್ಥಿಗಳಾದ ಬೆಳ್ಳಿಪ್ಪಾಡಿಯ ನಿಶಾಂತ್ ಮತ್ತು ಕಾರ್ತಿಕ್ ಅವರಿಗೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಇದರ ಸೇವಾ ಪ್ರಕಲ್ಪವಾದ ವಜ್ರತೇಜಸ್ ತಂಡದಿಂದ ಧನಸಹಾಯ ನೀಡಲಾಯಿತು. ಗುರುವಾರ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ವಜ್ರತೇಜಸ್ ವಾಟ್ಸ್ ಆಪ್ ಗ್ರೂಪ್ ನಲ್ಲಿ ಸಂಗ್ರಹವಾದ ಮೊದಲ ಕಂತಿನ ಮೊತ್ತವನ್ನು ಅವರ ಮನೆಯವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ವಜ್ರತೇಜಸ್ ಅಧ್ಯಕ್ಷ ಮುರಳೀಕೃಷ್ಣ ಹಸಂತಡ್ಕ, ವಿಶ್ವ

ಬೈಕ್ ಅಪಘಾತದಲ್ಲಿ ಗಾಯಗೊಂಡ ನಿಶಾಂತ್, ಕಾರ್ತಿಕ್ ಅವರಿಗೆ ವಜ್ರತೇಜಸ್ ತಂಡದಿಂದ ಧನಸಹಾಯ ಹಸ್ತಾಂತರ Read More »

ಕಡಬ :  ಶ್ರೀ ಉಮಾಮಹೇಶ್ವರ ದೇವಸ್ಥಾನದ ಪ್ರತಿಷ್ಟಾ ವಾರ್ಷಿಕೋತ್ಸವ ಸಂಭ್ರಮ

ಕಡಬ : ಕಡಬ ತಾಲ್ಲೂಕಿನ ನೂಜಿಬಾಳ್ತಿಲ ಗ್ರಾಮದ ಒರುoಬಾಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಟಾ ವಾರ್ಷಿಕೋತ್ಸವ ಜ.10ರಂದು ನಡೆಯಲಿದೆ. ಕೆಮ್ಮಿoಜೆ ನಾಗೇಶ್ ತಂತ್ರಿ ಅವರ ನೇತೃತ್ವದಲ್ಲಿ ಒರುಬಾoಲು ಶ್ರೀ ಉಮಾಮಹೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಬೆಳ್ಳಿಗೆ 7.30ರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ಗಣಪತಿ ಹೋಮ, ಪಂಚವಿoಶತಿ  ನಡೆಯಲಿದೆ. ನಂತರ ಸಾಮೂಹಿಕ ಸತ್ಯನಾರಾಯಣ ಪೂಜೆ ಜರುಗಲಿದೆ. ಬಳಿಕ ಬೆಳಿಗ್ಗೆ 11.00 ಗಂಟೆಗೆ ಶ್ರೀ ದೇವರಿಗೆ ಕಳಶಾಭಿಷೇಕ, ನಾಗ ದೇವರಿಗೆ ತಂಬಿಲ ಸೇವೆ, ಪರಿವಾರ ದೈವಗಳಿಗೆ ತಂಬಿಲ ಸೇವೆ

ಕಡಬ :  ಶ್ರೀ ಉಮಾಮಹೇಶ್ವರ ದೇವಸ್ಥಾನದ ಪ್ರತಿಷ್ಟಾ ವಾರ್ಷಿಕೋತ್ಸವ ಸಂಭ್ರಮ Read More »

ತಾಯಿಯೇ ಐದು ವರ್ಷದ ಮಗುವಿಗೆ ಬಿಸಿ ಪಾತ್ರೆಯಿಂದ ಸುಟ್ಟ ಪ್ರಕರಣ| 10 ಸಾವಿರ ರೂ. ದಂಡ ವಿಧಿಸಿದ ನ್ಯಾಯಲಾಯ

ಸುಳ್ಯ: ತಾಯಿಯೊಬ್ಬಳು ತನ್ನ  ಐದು ವರ್ಷದ ಮಗುವಿಗೆ ಬಿಸಿ ಪಾತ್ರೆಯಿಂದ ಸುಟ್ಟು ಗಾಯಗೊಳಿಸಿದ ಘಟನೆ ನಾವೂರಿನಲ್ಲಿ ನಡೆದಿದೆ. ಪ್ರಕರಣಕ್ಕೆ ಹಿನ್ನಲೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಆರೋಪ ಸಾಬೀತಾಗಿದ್ದು, ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ. ಆರೋಪಿ ತಾಯಿ ಕಾವ್ಯಶ್ರೀ ಎಂದು ಗುರುತಿಸಲಾಗಿದೆ. ಸುಳ್ಯ ಗಾಂಧಿನಗರ ನಾವೂರು ಎಂಬಲ್ಲಿ ತಾಯಿಯೋರ್ವಳು ಬಿಸಿ ಹಾಲಿನ ಪಾತ್ರೆಯಿಂದ ತನ್ನ ಐದು ವರ್ಷ ಪ್ರಾಯದ ಪುತ್ರಿಯ ದೇಹದ ವಿವಿಧ ಕಡೆ ಸುಟ್ಟಿರುವಂತದ್ದು ಆ.16  2022ರಂದು ನಡೆದಿದೆ.  ಈ ಕುರಿತು ತಾಯಿ ಕಾವ್ಯಶ್ರೀ ವಿರುದ್ಧ ಮಹಿಳಾ ಮತ್ತು

ತಾಯಿಯೇ ಐದು ವರ್ಷದ ಮಗುವಿಗೆ ಬಿಸಿ ಪಾತ್ರೆಯಿಂದ ಸುಟ್ಟ ಪ್ರಕರಣ| 10 ಸಾವಿರ ರೂ. ದಂಡ ವಿಧಿಸಿದ ನ್ಯಾಯಲಾಯ Read More »

ಮಣಿಕ್ಕರ ಸರಕಾರಿ ಹಿ ಪ್ರಾ ಶಾಲಾ ನೂತನ ಕೊಠಡಿ ಉದ್ಘಾಟನೆ, ವಾರ್ಷಿಕೋತ್ಸವ

ಪುತ್ತೂರು: ಶಾಲೆ ಹಾಗೂ ದೇವಸ್ಥಾನಗಳಲ್ಲಿ ರಾಜಕೀಯ ಮಾಡಬಾರದು, ಈ ಎರಡು ಕ್ಷೇತ್ರದಲ್ಲಿ ರಾಜಕೀಯ ಮಾಡಿದ್ರೆ ಅದು ಎಂದೂ ಉದ್ದಾರ ಆಗಲು ಸಾಧ್ಯವಿಲ್ಲ. ಇದನ್ನು ಶಾಸಕನಾಗಿ ನಾನು ಸಹಿಸುವುದೇ ಇಲ್ಲ, ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕರು ರಾಜಕೀಯ ಮಾಡಿ ಮಕ್ಕಳ ಭವಿಷ್ಯವನ್ನು ಹಾಳುಮಾಡಬೇಡಿ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಅವರು ಕೊಳ್ತಿಗೆ ಗ್ರಾಮದ ಮಣಿಕ್ಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಲ್ಲಿ ನೂತನ ಕೊಠಡಿ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಣಿಕ್ಕರ ಶಾಲೆ ಒಂದು

ಮಣಿಕ್ಕರ ಸರಕಾರಿ ಹಿ ಪ್ರಾ ಶಾಲಾ ನೂತನ ಕೊಠಡಿ ಉದ್ಘಾಟನೆ, ವಾರ್ಷಿಕೋತ್ಸವ Read More »

ನಗರಸಭೆ 15ನೇ ಹಣಕಾಸು ಯೋಜನೆಯ ಇಂಟರ್ ಲಾಕ್ ರಸ್ತೆ, ಚರಂಡಿ ಕಾಮಗಾರಿ ಉದ್ಘಾಟನೆ

ಪುತ್ತೂರು : ನಗರಸಭೆ ವ್ಯಾಪ್ತಿಯ ಉರಮಾಲ್ ಸಿದ್ಧಾಳ ಮತ್ತು ಶಾಂತಿನಗರ ತಾರಿಗುಡ್ಡೆ ರಸ್ತೆಯಲ್ಲಿ  ನಗರಸಭೆಯ15ನೇ ಹಣಕಾಸು ಯೋಜನೆಯಡಿ 6 ಲಕ್ಷ ರೂ. ವೆಚ್ಚದಲ್ಲಿ ಇಂಟರ್ಲಾಕ್ ರಸ್ತೆ ಮತ್ತು ಚರಂಡಿ ಕಾಮಗಾರಿಯನ್ನು ಮಂಗಳವಾರ ಸಂಜೆ ಲೋಕಾರ್ಪಣೆ ಮಾಡಲಾಯಿತು. ಮಾಜಿ ಶಾಸಕ ಸಂಜೀವ ಮಠಂದೂರು ರಸ್ತೆ ಉದ್ಘಾಟಿಸಿ ಮಾತನಾಡಿ, ಪುತ್ತೂರು ನಗಸಭೆಯಲ್ಲಿ ಒಂದು ಪರಿವರ್ತನೆ ಅಭಿವೃದ್ಧಿ ಕಾಣುತ್ತಿದ್ದು, ಕಳೆದ 5 ವರ್ಷ ಆಡಳಿತ ಮಾಡಿದ ಬಿಜೆಪಿ ನಗರವಾಸಿಗಳು ಮತ್ತು ಗ್ರಾಮವಾಸಿಗಳಿಗೆ ಯಾವುದೇ ಬೇಧವಿಲ್ಲದೆ ಸರ್ವಾಂಗೀಣ ಅಭಿವೃದ್ಧಿ ಮಾಡುವ ಕೆಲಸ ಮಾಡಿದೆ.

ನಗರಸಭೆ 15ನೇ ಹಣಕಾಸು ಯೋಜನೆಯ ಇಂಟರ್ ಲಾಕ್ ರಸ್ತೆ, ಚರಂಡಿ ಕಾಮಗಾರಿ ಉದ್ಘಾಟನೆ Read More »

ರೈಲಿ ನಡಿಗೆ ಸಿಲುಕಿ ವ್ಯಕ್ತಿ ಮೃತ್ಯು..!

ಪುತ್ತೂರು : ರೈಲಿನಡಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಪುತ್ತೂರಿನ ಕಬಕದಲ್ಲಿ ನಡೆದಿದೆ ಮೃತರನ್ನು ಕಲ್ಲಾಜೆ ಕೆದಿಲ ಗ್ರಾಮದ ಭರತ್ ಪೂಜಾರಿ (67) ಎನ್ನಲಾಗಿದೆ. ಸ್ಥಳಕ್ಕೆ ಪುತ್ತೂರು ನಗರ ಪೊಲೀಸರು ರೈಲ್ವೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ರೈಲಿ ನಡಿಗೆ ಸಿಲುಕಿ ವ್ಯಕ್ತಿ ಮೃತ್ಯು..! Read More »

ಕೇಂದ್ರ ಹಾಗೂ ರಾಜ್ಯ ಸರಕಾರದ ಪುರಷ್ಕೃತ ಯೋಜನೆಯಡಿ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮ

ಪುತ್ತೂರು : ಪುತ್ತೂರು ನಗರಸಭೆ ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರದ ಪುರಷ್ಕೃತ ಯೋಜನೆಯಡಿ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮ ಬನ್ನೂರು ನೆಕ್ಕಿಲ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮಂಗಳವಾರ ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಬೆಳೆಯುತ್ತಿರುವ ಪುತ್ತೂರು ನಗರದಲ್ಲಿ ದಿನದಿಂದ ದಿನಕ್ಕೆ ವಾಣಿಜ್ಯ ಕಟ್ಟಡಗಳು ಸಹಿತ ಇನ್ನಿತರ ಕಟ್ಟಡಗಳು ನಿರ್ಮಾಣವಾಗುತ್ತಿದ್ದು, ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಒಳಚರಂಡಿ ವ್ಯವಸ್ಥೆ ಅತೀ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಒಟ್ಟು ಹೆಜ್ಜೆ ಮುಂದೆ ಹೋಗಿ ಸ್ವಚ್ಛತೆಗೆ ಆದ್ಯತೆ

ಕೇಂದ್ರ ಹಾಗೂ ರಾಜ್ಯ ಸರಕಾರದ ಪುರಷ್ಕೃತ ಯೋಜನೆಯಡಿ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮ Read More »

error: Content is protected !!
Scroll to Top