ಪುತ್ತೂರು

ಗೌಡ ಸಮುದಾಯಕ್ಕೆ ದ.ಕ. ಜಿಲ್ಲೆಯ 2 ಕ್ಷೇತ್ರಗಳಲ್ಲಿ ಅವಕಾಶ ನೀಡಿ

ಅಸಾಧ್ಯವಾದರೆ ಪುತ್ತೂರು ಕ್ಷೇತ್ರದಲ್ಲಾದರೂ ಅವಕಾಶ ನೀಡಲೇಬೇಕು – ದ.ಕ.ಜಿಲ್ಲಾ ಒಕ್ಕಲಿಗ ಗೌಡರ ಸಂಘ ಅಗ್ರಹ ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಿಂದ ಒಕ್ಕಲಿಗ ಗೌಡ ಸಮುದಾಯಕ್ಕೆ ಮುಂಬರುವ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಅವಕಾಶ ನೀಡಬೇಕು. ಎರಡು ಕ್ಷೇತ್ರಗಳಲ್ಲಿ ಸಾಧ್ಯವಾಗದಿದ್ದರೆ ಕನಿಷ್ಠ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಾದರೂ ಗೌಡ ಜನಾಂಗಕ್ಕೆ ಅವಕಾಶ ನೀಡಬೇಕು ಎಂದು ರಾಜಕೀಯ ಪಕ್ಷಗಳ ನಾಯಕರನ್ನು ಗೌಡ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ. ದ.ಕ.ಜಿಲ್ಲಾ ಒಕ್ಕಲಿಗ ಗೌಡರ ಸೇವಾ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಕೆ. ಮಂಗಳೂರು ಪ್ರೆಸ್ಕ್ಲಬ್ನಲ್ಲಿ […]

ಗೌಡ ಸಮುದಾಯಕ್ಕೆ ದ.ಕ. ಜಿಲ್ಲೆಯ 2 ಕ್ಷೇತ್ರಗಳಲ್ಲಿ ಅವಕಾಶ ನೀಡಿ Read More »

2023-24ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್

ಬೆಂಗಳೂರು : 2023-24ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆಯಾಗಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುವೆಂಪು ಕವನದ ಮೂಲಕ ಬಜೆಟ್‌ ಮಂಡನೆ ಪ್ರಾರಂಭಿಸಿದರು. 25 ವರ್ಷಗಳ ದೂರದೃಷ್ಟಿಯ ಬಜೆಟ್‌ ಎಂದು ಸಿಎಂ ಹೇಳಿಕೆ ನೀಡಿದ್ದು, ಆದ್ಯತಾ ವಲಯಗಳಿಗೆ ಭರಪೂರ ಅನುದಾನ ನೀಡಿದ್ದಾರೆ. ಕರ್ನಾಟಕ ಬಜೆಟ್‌ನ ಹೈಲೈಟ್ಸ್ ಇಂತಿದೆ:

2023-24ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ Read More »

ಫೆ.25 ರಿಂದ ಮಾ.5 ರ ವರೆಗೆ ಪಡುಮಲೆ ಶ್ರೀ ಕೂವೆಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಪಡುಮಲೆ : ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವರು ಹಾಗೂ ಸಪರಿವಾರ ದೇವರುಗಳ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಫೆ.25 ರಿಂದ ಮಾ.6 ರ ತನಕ ವಿವಿಧ ವೈದಿಕ, ಧಾರ್ಮಿಕ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಈ ಕುರಿತು ಜೀಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು ಅವರು ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿ, ಸುಮಾರು 5 ಕೋಟಿಗೂ ಮಿಕ್ಕಿ

ಫೆ.25 ರಿಂದ ಮಾ.5 ರ ವರೆಗೆ ಪಡುಮಲೆ ಶ್ರೀ ಕೂವೆಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ Read More »

ಪುತ್ತೂರು ತಾಲೂಕಿನಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪುತ್ತೂರು : ಪುತ್ತೂರು ಶಿಶು ಅಭಿವೃದ್ಧಿ ಯೋಜನೆಯಡಿ ಖಾಲಿಯಿರುವ ಅಂಗನವಾಡಿ ಕಾರ್ತಕರ್ತೆ, ಸಹಾಯಕಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಕಾರ್ಯಕರ್ತೆ – 6  ಹಾಗೂ ಸಹಾಯಕಿ – 9 ಹುದ್ದೆಗಳು ಖಾಲಿಯಿದ್ದು, ಭರ್ತಿ ಮಾಡಿದ ಅರ್ಜಿಗಳನ್ನು ದರ್ಬೆ ಸ್ತ್ರೀಶಕ್ತಿ ಭವನದ ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರ ಕಚೇರಿಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾ.17 ಆಗಿರುತ್ತದೆ. ಪಡ್ನೂರು ಗ್ರಾಮದ ಪಡ್ನೂರು, ಆರ್ಯಾಪು ಗ್ರಾಮದ ಕುಂಜೂರುಪಂಜ, ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ, ಗಾಳಿಮುಖ, ಪಟ್ಟಣ ಪಂಚಾಯತ್ ಅಡ್ಡಗದ್ದೆ

ಪುತ್ತೂರು ತಾಲೂಕಿನಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ Read More »

ನಾಳೆ (ಫೆ.18) : ಒರುಂಬಾಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ

ಕಡಬ : ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಒರುಂಬಾಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ಫೆ.18 ಶನಿವಾರ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನಡೆಯಲಿದೆ. ಮಹಾಶಿವರಾತ್ರಿ ಪ್ರಯುಕ್ತ ದೇವಸ್ಥಾನದಲ್ಲಿ ವಿವಿಧ ಭಜನಾ ತಂಡಗಳಿಂದ ಸಂಜೆ 6 ಕ್ಕೆ ಕುಣಿತ ಭಜನೆ,  ಮಹಾಪೂಜೆ  ಮತ್ತು ರಾತ್ರಿ 9ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 12 ಕ್ಕೆ ಮಹಾಶಿವರಾತ್ರಿಯ ವಿಶೇಷ ಪೂಜೆ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನ ಪ್ರಕಟಣೆಯಲ್ಲಿ ತಿಳಿಸಿದೆ.

ನಾಳೆ (ಫೆ.18) : ಒರುಂಬಾಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ Read More »

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಕುರಿತು ಬೈಲುವಾರು ಸಭೆ

ಪುತ್ತೂರು : ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಕುರಿತು ಬೈಲುವಾರು ಸಭೆ ಗುರುವಾರ ಸಂಜೆ ಬಂಗಾರಡ್ಕ ಶ್ರೀರಾಮ ಭಜನಾ ಮಂದಿರದ ವಠಾರದಲ್ಲಿ ನಡೆಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರ್‍ ರಾಧಾಕೃಷ್ಣ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜೀರ್ಣೋದ್ಧಾರದ ಕುರಿತು ಚರ್ಚಿಸಿ ಸಾರ್ವಜನಿಕರ ಸಹಕಾರ ಕೋರಲಾಯಿತು. ಸಭೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ರಾವ್‍ ಆರ್ಯಾಪು, ರಾಮಕೃಷ್ಣ ಭಟ್‍ ಬಂಗಾರಡ್ಕ, ವಿರೂಪಾಕ್ಷ ಭಟ್ ಮಚ್ಚಿಮಲೆ, ಪ್ರದೀಪ್ ಕೃಷ್ಣ ಭಟ್ ಬಂಗಾರಡ್ಕ, ಗ್ರಾಮಸ್ಥರು

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಕುರಿತು ಬೈಲುವಾರು ಸಭೆ Read More »

ಫೆ.20 : ಪುತ್ತೂರು ತಹಶೀಲ್ದಾರ್‍ ರಮೇಶ್‍ ಬಾಬು ಅವರಿಂದ ಕೆದಂಬಾಡಿಯಲ್ಲಿ ಗ್ರಾಮವಾಸ್ತವ್ಯ

ಪುತ್ತೂರು : ಪುತ್ತೂರು ತಾಲೂಕು ತಹಶೀಲ್ದಾರ್‍ ರಮೇಶ್‍ ಬಾಬು ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಫೆ.20 ಸೋಮವಾರ ಕೆದಂಬಾಡಿ ಗ್ರಾಪಂ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಸಹಿತ ಇನ್ನಿತರ ಇಲಾಖೆಗಳ ವಿವಿಧ ಸವಲತ್ತುಗಳನ್ನು ವಿತರಿಸಲಾಗುವುದು. ಪುತ್ತೂರು ತಾಲೂಕಿನ ಎಲ್ಲಾ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ತಮ್ಮ ಇಲಾಖೆಯಿಂದ ಸಾರ್ವಜನಿಕರಿಗೆ ಒದಗಿಸುವ ಸವಲತ್ತುಗಳ ಮಾಹಿತಿ ನೀಡಲಾಗುವುದು. ಅಲ್ಲದೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಅರ್ಜಿ, ಮಾಹಿತಿಯನ್ನು ಪಡೆದು ಅರ್ಹ ಪ್ರಕರಣವನ್ನು ಸ್ಥಳದಲ್ಲೇ

ಫೆ.20 : ಪುತ್ತೂರು ತಹಶೀಲ್ದಾರ್‍ ರಮೇಶ್‍ ಬಾಬು ಅವರಿಂದ ಕೆದಂಬಾಡಿಯಲ್ಲಿ ಗ್ರಾಮವಾಸ್ತವ್ಯ Read More »

ನಾಳೆ (ಫೆ.18) ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ

ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಮಹೋತ್ಸವ ಪೂರ್ವಶಿಷ್ಟ ಪದ್ಧತಿಯಂತೆ ಫೆ.18 ರಂದು ನಡೆಯಲಿದೆ. ಮಧ್ಯಾಹ್ನ ಹವನ ಅಭಿಷೇಕ ಪೂಜಾದಿಗಳು, ರಾತ್ರಿ ಶ್ರೀ ದೇವರ ಬಲಿ ಹೊರಟು, ತಂತ್ರ ಸುತ್ತು ಜರಗಿ ಬಳಿಕ ಹೊರಾಂಗಣದಲ್ಲಿ ಉಡಕೆ, ಚಂಡೆ, ವಾದ್ಯ, ಸರ್ವವಾದ್ಯ ಸುತ್ತುಗಳು ನಡೆಯಲಿದೆ. ಬಳಿಕ ಕಟ್ಟೆಪೂಜೆ, ಪಲ್ಲಕಿ ಉತ್ಸವ, ಚಂದ್ರಮಂಡಲ ರಥೋತ್ಸವ, ಕೆರೆ ಉತ್ಸವ, ತೆಪ್ಪೋತ್ಸವದೊಂದಿಗೆ ಉತ್ಸವ ಮುಗಿದು, ತಡರಾತ್ರಿ ಏಕಾದಶ ರುದ್ರಾಭಿಷೇಕ, ಮಹಾಪೂಜೆ, ಬಲಿ ಉತ್ಸವ ನೆರವೇರಲಿದೆ. ಜತೆಗೆ

ನಾಳೆ (ಫೆ.18) ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ Read More »

ಬಲಿಪ ಭಾಗವತ ಖ್ಯಾತಿಯ ನಾರಾಯಣ ಭಾಗವತ ಅಸ್ತಂಗತ

ಪುತ್ತೂರು : ಬಲಿ ಭಾಗವತರೆಂದೇ ಖ್ಯಾತರಾದ ತೆಂಕುತಿಟ್ಟಿನ ಯಕ್ಷರಂಗದ ಭೀಷ್ಮ ಬಲಿಪ ನಾರಾಯಣ ಭಾಗವತ (84) ಗುರುವಾರ ಸಂಜೆ 6.30 ಕ್ಕೆ ಸ್ವಗೃಹದಲ್ಲಿ ಅಸ್ತಂಗತರಾದರು. ಮೂಲತಃ ಕಾಸರಗೋಡು ಜಿಲ್ಲೆಯ ಪಡ್ರೆಯವರು. ಪ್ರಸ್ತುತ ಬಲಿಪ ನಾರಾಯಣ ಭಾಗವತರು  ಮೂಡಬಿದ್ರೆಯ ನೂಯಿ ಎಂಬಲ್ಲಿ ವಾಸವಾಗಿದ್ದರು. ಮಾ.13, 1938 ರಲ್ಲಿ ಜನಿಸಿದ್ದ ಬಲಿಪರು ತನ್ನ 13ನೇ ವಯಸ್ಸಿನಲ್ಲೇ ಯಕ್ಷರಂಗಕ್ಕೆ ಕಾಲಿಟ್ಟಿದ್ದರು. ಸುಮಾರು 60 ವರ್ಷಗಳ ಕಲಾ ಸೇವೆ ಮಾಡಿರುವ ಅವರು, ಕಟೀಲು ಮೇಳದ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ಯಕ್ಷಗಾನದ ಹಲವು

ಬಲಿಪ ಭಾಗವತ ಖ್ಯಾತಿಯ ನಾರಾಯಣ ಭಾಗವತ ಅಸ್ತಂಗತ Read More »

ಸಾರ್ವಜನಿಕ ಶಾಂತಿ ಭಂಗ : ಬೀದಿ ಬದಿ ವ್ಯಾಪಾರ ತೆರವು

ಪುತ್ತೂರು: ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಕೋರ್ಟ್ ರಸ್ತೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ಬೀದಿ ಬದಿ ವ್ಯಾಪಾರಿಯೊಬ್ಬನನ್ನು ಪೊಲೀಸರು ತೆರವು ಮಾಡಿಸಿದ್ದಾರೆ. ಗುರುವಾರ ಮಧ್ಯಾಹ್ನದ ವೇಳೆಯಲ್ಲಿ ಸ್ಥಳಕ್ಕಾಗಮಿಸಿದ ಪಿ.ಎಸ್‍.ಐ. ಶ್ರೀಕಾಂತ್ ರಾಥೋಡ್ ಅವರ ನೇತೃತ್ವದ ನಗರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದರು. ಕೋರ್ಟ್ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವ್ಯಾಪಾರ ನಡೆಸುತ್ತಿದ್ದುದು ಮಾತ್ರವಲ್ಲ, ಸ್ಥಳೀಯರಿಗೂ ಸಮಸ್ಯೆ ಉಂಟು ಮಾಡುತ್ತಿದ್ದ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು, ಬೀದಿ ಬದಿ ವ್ಯಾಪಾರಿಯನ್ನು ಆ ಸ್ಥಳದಿಂದ ತೆರಳುವಂತೆ ಸೂಚಿಸಿ,

ಸಾರ್ವಜನಿಕ ಶಾಂತಿ ಭಂಗ : ಬೀದಿ ಬದಿ ವ್ಯಾಪಾರ ತೆರವು Read More »

error: Content is protected !!
Scroll to Top