ಪುತ್ತೂರು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 15ನೇ ಹಣಕಾಸು ಯೋಜನೆಯಡಿ ಬನ್ನೂರಿನಲ್ಲಿ ನಮ್ಮ ಕ್ಲಿನಿಕ್‍ ಉದ್ಘಾಟನೆ

ಪುತ್ತೂರು : ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 15 ನೇ ಹಣಕಾಸು ಯೋಜನೆಯಡಿ ಬನ್ನೂರಿನಲ್ಲಿ ನಮ್ಮ ಕ್ಲಿನಿಕ್ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು. ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟನೆ ನೆರವೇರಿಸಿ ಮಾತನಾಡಿ, ಕೋವಿಡ್ ನಂತರ ಎಲ್ಲಾ ಕ್ಷೆತ್ರದಲ್ಲಿಬದಲಾವಣೆ ಆಗುತ್ತಿದೆ. ಮನೆ ಬಾಗಿಲಿಗೆ ಡಾಕ್ಟರ್, ಮನೆ ಬಾಗಿಲಿಗೆ ಆಸ್ಪತ್ರೆ ಎಂಬ ಧ್ಯೇಯ ವಾಕ್ಯದೊಂದಿಗೆ ಕೆಲಸ ಕಾರ್ಯಗಳನ್ನು ಸರಕಾರ ಮಾಡುತ್ತಿದೆ. ನಮ್ಮ ಕ್ಲಿನಿಕ್ ಮೂಲಕ ದಿನದ 8 ಗಂಟೆ ನಿಮ್ಮ ಅರೋಗ್ಯ ತಪಾಸಣೆ ಮಾಡುವ ಕೆಲಸ ನಡೆಯಲಿದೆ. […]

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 15ನೇ ಹಣಕಾಸು ಯೋಜನೆಯಡಿ ಬನ್ನೂರಿನಲ್ಲಿ ನಮ್ಮ ಕ್ಲಿನಿಕ್‍ ಉದ್ಘಾಟನೆ Read More »

ಎಡ್ವಿನ್ ಸಂತಾನ್ ಡಿ’ಸೋಜರವರಿಗೆ ಮಂಗಳೂರು ವಿವಿಯಿಂದ ಡಾಕ್ಟರೇಟ್ ಪದವಿ

ಪುತ್ತೂರು : ಸಂತಫಿಲೋಮಿನಾ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಡ್ವಿನ್ ಸಂತಾನ್ ಡಿ’ಸೋಜ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್‍ ಪದವಿ ನೀಡಿ ಗೌರವಿಸಿದೆ. ಅವರು ಮಂಡಿಸಿದ “ಎ ಸಿಸ್ಟಮ್ಯಾಟಿಕ್ ಆಂಡ್ ಮೆಕ್ಯಾನಿಸ್ಟಿಕ್ ಸ್ಟಡಿ ಅಫ್ ಸಮ್ ಆಫ್ ದ ಬಯೋ ಆಕ್ಟಿವ್ ಮೊಲಿಕ್ಯೂಲ್ಸ್ ಬೈಇಲೆಕ್ಟ್ರೊ ಕೆಮಿಕಲ್ ಸೆನ್ಸರ್ಸ್ : ಎ ವೋಲ್ಟಾ ಮೆಟ್ರಿಕ್ ಸ್ಟಡಿ” ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ. ಅವರಿಗೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಮ್. ಕಾರ್ಯಪ್ಪ ಕಾಲೇಜಿನ ಡಾ.

ಎಡ್ವಿನ್ ಸಂತಾನ್ ಡಿ’ಸೋಜರವರಿಗೆ ಮಂಗಳೂರು ವಿವಿಯಿಂದ ಡಾಕ್ಟರೇಟ್ ಪದವಿ Read More »

ನಾಳೆ (ಫೆ.19) : ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ

ಪುತ್ತೂರು : ಆರ್ಯಾಪು ಗ್ರಾಮದ ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ-ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ  ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ (ಕೆಂಡಸೇವೆ) ಫೆ.19 ಭಾನುವಾರ ನಡೆಯಲಿದೆ. ಬೆಳಿಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳ ನಡೆದ ಬಳಿಕ ಸಂಜೆ 7 ಗಂಟೆಗೆ ಶ್ರೀ ದೈವದ ಒತ್ತೆಕೋಲ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ತಿಳಿಸಿದ್ದಾರೆ.

ನಾಳೆ (ಫೆ.19) : ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ Read More »

ನಾಳೆ  (ಫೆ.19) : ಪುತ್ತೂರು ತಾಲೂಕು ಸರಕಾರಿ ನೌಕರರ ಸಂಘದ ವಾರ್ಷಿಕ ಕ್ರೀಡಾಕೂಟ

ಪುತ್ತೂರು : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಇದರ ಪುತ್ತೂರು ಶಾಖೆಯ ವಾರ್ಷಿಕ ಕ್ರೀಡಾಕೂಟ ಫೆ.19 ಭಾನುವಾರ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ. ಶಾಸಕ ಸಂಜೀವ ಮಠಂದೂರು ಕ್ರೀಡಾಕೂಟ ಉದ್ಘಾಟಿಸಲಿದ್ದು, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ, ಪುತ್ತೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಪಿ.ಕಾರ್ಯಪ್ಪ, ತಾಲೂಕು ಪಂಚಾಯಿತಿ

ನಾಳೆ  (ಫೆ.19) : ಪುತ್ತೂರು ತಾಲೂಕು ಸರಕಾರಿ ನೌಕರರ ಸಂಘದ ವಾರ್ಷಿಕ ಕ್ರೀಡಾಕೂಟ Read More »

ಬ್ಯಾಂಕ್‌ಗೆ ವಂಚನೆ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಪುತ್ತೂರು : ಕಬಕ ಬ್ಯಾಂಕ್ ಒಂದಕ್ಕೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಿಟ್ಲ ಮೂಲದ ಆರೋಪಿಯೊಬ್ಬನ್ನು ಪುತ್ತೂರು ನಗರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ವಿಟ್ಲ ಬೋಳಂತಿಮೊಗರು ನಿವಾಸಿ ಅಬ್ದುಲ್ ಗಫೂರ್ ಎಂಬರ ಪುತ್ರ ಮೊಹಮ್ಮದ್ ಅನ್ವರ್ ಬಂಧಿತ ಆರೋಪಿ. 2017 ರಲ್ಲಿ ಮೊಹಮ್ಮದ್ ಅನ್ವರ್ ಕಬಕದ ಬ್ಯಾಂಕ್ ಒಂದರಲ್ಲಿ ಸಾಲಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿತ್ತು. ಆರೋಪಿ ನ್ಯಾಯಾಲಯದಲ್ಲಿ ವಿಚಾರಣೆಗೊಳಗಾಗದೆ ತಲೆಮರೆಸಿಕೊಂಡಿದ್ದ. ನ್ಯಾಯಾಲಯ ಅರೋಪಿ ವಿರುದ್ಧ ವಾರಂಟ್ ಮಾಡಿತ್ತು. ಇದೀಗ ಪೊಲೀಸರು ಶುಕ್ರವಾರ ಆರೋಪಿಯನ್ನು ವಿಟ್ಲದಲ್ಲಿ

ಬ್ಯಾಂಕ್‌ಗೆ ವಂಚನೆ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ Read More »

ಯಕ್ಷರಂಗದ ಬೀಷ್ಮ ಬಲಿಪ ನಾರಾಯಣ ಭಾಗವತರ ನಿಧನಕ್ಕೆ ಪ್ರಧಾನಿ ಮೋದಿಯಿಂದ ಸಂತಾಪ

ಪುತ್ತೂರು: ತೆಂಕು ತಿಟ್ಟು ಯಕ್ಷರಂಗದ ಬೀಷ್ಮ ಎಂದೆ ಖ್ಯಾತರಾಗಿದ್ದ ಬಲಿಪ ನಾರಾಯಣ ಭಾಗವತ(85) ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ನಾರಾಯಣ ಅವರ ನಿಧನ ಸಂಬಂಧ ಟ್ವೀಟ್‌ ಮಾಡಿರುವ ಮೋದಿ, ಶ್ರೀ ಬಲಿಪ ನಾರಾಯಣ ಭಾಗವತರು ಸಾಂಸ್ಕೃತಿಕ ಲೋಕದಲ್ಲಿ ಛಾಪು ಮೂಡಿಸಿದ್ದಾರೆ. ಅವರು ಯಕ್ಷಗಾನ ಭಾಗವತಿಕೆಗಾಗಿ ತಮ್ಮ ಜೀವನವನ್ನು ಜೀವನವನ್ನು ಮುಡಿಪಾಗಿಟ್ಟರು ಮತ್ತು ಅವರ ಅನುಕರಣೀಯ ಶೈಲಿಯಿಂದ ಮೆಚ್ಚುಗೆ ಪಡೆದರು. ಅವರ ಕೃತಿಗಳನ್ನು ಮುಂದಿನ ಪೀಳಿಗೆಯವರು ಮೆಚ್ಚುತ್ತಾರೆ. ಅವರ ನಿಧನದಿಂದ ನೋವಾಗಿದೆ ಅವರ ಕುಟುಂಬಕ್ಕೆ

ಯಕ್ಷರಂಗದ ಬೀಷ್ಮ ಬಲಿಪ ನಾರಾಯಣ ಭಾಗವತರ ನಿಧನಕ್ಕೆ ಪ್ರಧಾನಿ ಮೋದಿಯಿಂದ ಸಂತಾಪ Read More »

ಸದಸ್ಯರ ಗಮನಕ್ಕೆ ಬಾರದೆ ಬ್ಯಾನರ್‍ ತೆಗೆಸಿದ ವಿಚಾರ : ಬೆಟ್ಟಂಪಾಡಿ ಗ್ರಾಪಂ ಸಾಮಾನ್ಯ ಸಭೆ ಕಲಾಪ ಬಿಟ್ಟು ಹೊರ ನಡೆದ ಸದಸ್ಯರು | ರದ್ದುಗೊಂಡ ಗ್ರಾಮಸಭೆ

ಪುತ್ತೂರು : ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಕಿರುವ ಬ್ಯಾನರ್ ಗಳನ್ನು ಪಂಚಾಯಿತಿ ಸದಸ್ಯರ ಗಮನಕ್ಕೆ ಬಾರದೆ ಪಿಡಿಒ ತೆಗೆಸಿದ ವಿಚಾರ ಮುಂದಿಟ್ಟುಕೊಂಡು ಸದಸ್ಯರು ಸಾಮಾನ್ಯ ಸಭೆ ಕಲಾಪ ಬಿಟ್ಟು ಹೊರ ನಡೆದ ಘಟನೆ ಶುಕ್ರವಾರ ನಡೆದ ಬೆಟ್ಟಂಪಾಡಿ ಗ್ರಾಪಂನಲ್ಲಿ ನಡೆದಿದೆ. ಪಂಚಾಯಿತಿ ಅಧ್ಯಕ್ಷೆ ಪವಿತ್ರ ಡಿ. ಅಧ್ಯಕ್ಷತೆ ಸಭೆ ಆರಂಭಗೊಂಡು ಪಿಡಿಒ ಸೌಮ್ಯ ಲೆಕ್ಕಪತ್ರ ವರದಿ ಮಂಡಿಸಲು ಆರಂಭಿಸುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ಸದಸ್ಯೆ ಉಮಾವತಿ, ಬ್ಯಾನರ್‍ ತೆಗೆಯಲು ಪಂಚಾಯಿತಿಗೆ ಸುತ್ತೋಲೆ ಬಂದಿದೆಯೇ ಎಂದು ಪ್ರಶ್ನಿಸಿ ಬಂದಿದ್ದರೆ ಅದನ್ನು ಸಭೆಯ

ಸದಸ್ಯರ ಗಮನಕ್ಕೆ ಬಾರದೆ ಬ್ಯಾನರ್‍ ತೆಗೆಸಿದ ವಿಚಾರ : ಬೆಟ್ಟಂಪಾಡಿ ಗ್ರಾಪಂ ಸಾಮಾನ್ಯ ಸಭೆ ಕಲಾಪ ಬಿಟ್ಟು ಹೊರ ನಡೆದ ಸದಸ್ಯರು | ರದ್ದುಗೊಂಡ ಗ್ರಾಮಸಭೆ Read More »

ಫೆ.23 : ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನ ಸಭಾಭವನ, ಅನ್ನಛತ್ರ ಲೋಕಾರ್ಪಣೆ

ಪುತ್ತೂರು : ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ನೂತನ ಸಭಾಭವನ, ಅನ್ನಛತ್ರ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ದೇವಸ್ಥಾನದ ಪ್ರತಿಷ್ಠಾ ದಿನವಾದ ಫೆ.23 ರಂದು ಲೋಕಾರ್ಪಣೆಗೊಳ್ಳಲಿದೆ. ದೇವಸ್ಥಾನದಲ್ಲಿ ಈ ಬಾರಿ 10ನೇ ವರ್ಷದ ಪ್ರತಿಷ್ಠಾ ಮಹೋತ್ಸವ ನಡೆಯಲಿದ್ದು, ಇದರ ಸವಿನೆನಪಿಗಾಗಿ ನೂತನ ಸಭಾಭವನ, ಅನ್ನಛತ್ರ ನಿರ್ಮಾಣ ಲೋಕಾರ್ಪಣೆಗೊಳ್ಳಲಿದೆ. ಈ ಸಂದರ್ಭದಲ್ಲಿ ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ದ್ವಾದಶ ನಾರಿಕೇಳ ಗಣಪತಿ ಹವನ,

ಫೆ.23 : ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನ ಸಭಾಭವನ, ಅನ್ನಛತ್ರ ಲೋಕಾರ್ಪಣೆ Read More »

ಕೀಟ ನಾಶಕ ಸೇವಿಸಿ ಆತ್ಮಹತ್ಯೆ : ಕೃಷಿಕ ಮೃತ್ಯು

ಪುತ್ತೂರು: ಪಡ್ನೂರು ಗ್ರಾಮದ ಸೇಡಿಯಾಪು ಎಂಬಲ್ಲಿ ಕೃಷಿಕರೊಬ್ಬರು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೇಡಿಯಾಪು ದಿ.ಈಶ್ವರ ಗೌಡ ಎಂಬವರ ಪುತ್ರ ಜತ್ತಪ್ಪ ಗೌಡ (68) ಆತ್ಮಹತ್ಯೆ ಮಾಡಿಕೊಂಡವರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಗುರುವಾರ ಸಂಜೆ ಮನೆಯಲ್ಲಿ ಕೃಷಿಗೆ ಬಲಸುವ ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದರು. ವಿಷಯ ತಿಳಿದ ಮನೆ ಮಂದಿ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಪತ್ನಿ, ಇಬ್ಬರು ಪುತ್ರಿಯರು

ಕೀಟ ನಾಶಕ ಸೇವಿಸಿ ಆತ್ಮಹತ್ಯೆ : ಕೃಷಿಕ ಮೃತ್ಯು Read More »

`ಡೂ ಆರ್ ಡೈ’ ಬ್ಯಾಟಲ್ ಘೋಷಣೆ ಮಾಡಿದ ಕಾವು ಹೇಮನಾಥ ಶೆಟ್ಟಿ

ಪುತ್ತೂರು: ಹಲವು ಬಾರಿ ಕಾಂಗ್ರೆಸ್‌ನಿAದ ಟಿಕೇಟ್ ವಂಚಿತರಾದ ಕಾವು ಹೇಮನಾಥ ಶೆಟ್ಟಿ ಅವರು, ಈ ಬಾರಿಯೂ ಶಾಸಕ ಅಭ್ಯರ್ಥಿ ಸ್ಥಾನದ ಆಕಾಂಕ್ಷಿ. ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ ಅನುಭವ ಇವರದ್ದು. ಹಾಗಿದ್ದು, ಆಡಳಿತದ ವಿಚಾರಕ್ಕೆ ಬಂದಾಗ ಮಾತ್ರ ಅವಕಾಶ ಸಿಕ್ಕಿಲ್ಲ ಎನ್ನುವುದು ಯಕ್ಷ ಪ್ರಶ್ನೆ. ಜನಸಾಮಾನ್ಯರ ಒಡನಾಟ, ಹೈಕಮಾಂಡ್ ಲೀಡರ್‌ಗಳ ಸ್ನೇಹ ಎಲ್ಲವೂ ಇದ್ದರೂ ಅವಕಾಶ ಮಾತ್ರ ಇನ್ನೂ ಅರಸಿ ಬಂದಿಲ್ಲ. ಆದ್ದರಿಂದ ಹೇಮನಾಥ ಶೆಟ್ಟಿ ಅವರು ಈ ಬಾರಿ `ಡೂ ಆರ್ ಡೈ’ ಬ್ಯಾಟಲ್

`ಡೂ ಆರ್ ಡೈ’ ಬ್ಯಾಟಲ್ ಘೋಷಣೆ ಮಾಡಿದ ಕಾವು ಹೇಮನಾಥ ಶೆಟ್ಟಿ Read More »

error: Content is protected !!
Scroll to Top