ಪುತ್ತೂರು

ಆರ್ಯಾಪು ಗ್ರಾಪಂ ಉಪಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿ ಯತೀಶ್ ಡಿ.ಬಿ. ಜಯ

ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಯತೀಶ್ ಡಿ.ಬಿ. ಅವರು 171 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಯತೀಶ್ ಡಿ.ಬಿ. ಅವರು 498 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರಜ್ವಲ್ ರೈ ತೋಟ್ಲ ಅವರು 327 ಮತಗಳನ್ನು ಪಡೆದುಕೊಂಡಿದ್ದಾರೆ. 11 ಮತಗಳು ತಿರಸ್ಕೃತಗೊಂಡಿವೆ. ಒಟ್ಟು 836 ಮತಗಳು ಚಲಾವಣೆಗೊಂಡಿದ್ದವು. ಆರ್ಯಾಪು ಗ್ರಾಮ ಪಂಚಾಯತ್‍ನ ಸದಸ್ಯರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಫೆ. 25ರಂದು ಚುನಾವಣೆ ನಡೆದಿತ್ತು.

ಆರ್ಯಾಪು ಗ್ರಾಪಂ ಉಪಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿ ಯತೀಶ್ ಡಿ.ಬಿ. ಜಯ Read More »

ನಾಳೆ (ಮಾ.1) : ಅರಿಯಡ್ಕದಲ್ಲಿ ಕಾಂಗ್ರೆಸ್ ಉತ್ಸವ-2023

ಪುತ್ತೂರು : ಅರಿಯಡ್ಕ ವಲಯ ಕಾಂಗ್ರೆಸ್‍ ಆಶ್ರಯುದಲ್ಲಿ ಕಾಂಗ್ರೆಸ್ ಉತ್ಸವ-2023 ಮಾ.1 ಬುಧವಾರ ಕೌಡಿಚ್ಚಾರ್ ನಲ್ಲಿ ನಡೆಯಲಿದೆ. ಕೌಡಿಚ್ಚಾರ್ ಎಸ್ ಬಿಲ್ಡಿಂಗ್ ವಠಾರದಲ್ಲಿ ಬೆಳಿಗ್ಗೆ 9 ರಿಂದ ನಡೆಯುವ ಕಾರ್ಯಕ್ರಮವನ್ನು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಉದ್ಘಾಟಿಸುವರು. ಪುತ್ತೂರು ಬ್ಲಾಕ್ ಕಾಂಗ್ರೆಸ್‍ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಚಿಂತಕ ಎಂ.ಜಿ. ಹೆಗ್ಡೆ ಮುಖ್ಯ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯರುಗಳು, ಮಾಜಿ ವಲಯ ಅಧ್ಯಕ್ಷರುಗಳು, ಹಿರಿಯ ಕಾಂಗ್ರೆಸ್‍ ಕಾರ್ಯಕರ್ತರು, ಸಹಕಾರ, ಶಿಕ್ಷಣ ಕ್ಷೇತ್ರದ

ನಾಳೆ (ಮಾ.1) : ಅರಿಯಡ್ಕದಲ್ಲಿ ಕಾಂಗ್ರೆಸ್ ಉತ್ಸವ-2023 Read More »

ಹೈನುಗಾರಿಕೆಗೆ ಪ್ರೋತ್ಸಾಹಕ್ಕಾಗಿ ಗೋಹತ್ಯೆ ನಿಷೇಧ ಕಾಯಿದೆ, ಗೋಶಾಲೆ ನಿರ್ಮಾಣ, ಪಶುವೈದ್ಯಕೀಯ ಕಾಲೇಜು ಸ್ಥಾಪನೆ | ಪಶುವೈದ್ಯಕೀಯ ಇಲಾಖೆಯಿಂದ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಿಸಿ ಶಾಸಕ ಸಂಜೀವ ಮಠಂದೂರು|ಗೋ ಪೂಜೆ ನೆರವೇರಿಸಿ ಫಲಾನುಭವಿಗಳಿಗೆ ವಿತರಣೆ

ಪುತ್ತೂರು: ಹೈನುಗಾರಿಕೆಗೆ ವಿಶೇಷ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಗೋಹತ್ಯೆ ನಿಷೇಧ ಕಾಯಿದೆ, ಗೋಶಾಲೆಗಳ ನಿರ್ಮಾಣ, ಪಶುವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುತ್ತಿದ್ದು ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.ಫೆ.27ರಂದು ಪಶು ಆಸ್ಪತ್ರೆಯ ಆವರಣದಲ್ಲಿ ದ.ಕ. ಜಿಲ್ಲಾ ಪಂಚಾಯತ್, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಪುತ್ತೂರು ಇದರ ವತಿಯಿಂದ 2022-23ನೇ ಸಾಲಿನ ಅಮೃತಸಿರಿ, ಅಮೃತ ಯೋಜನೆ, ಎಸ್ಸಿಪಿ ಹಾಗೂ ಟಿಎಸ್ಪಿ ಯೋಜನೆಯಡಿ ಮಲೆನಾಡುಗಿಡ್ಡ ಮಿಶ್ರತಳಿ, ಹಸು ಘಟಕ, ಆಡು ಘಟಕ ಮೊದಲಾದ ಸವಲತ್ತುಗಳ ವಿತರಿಸಿ ಮಾತನಾಡಿದರು. ಗೋವಿನ

ಹೈನುಗಾರಿಕೆಗೆ ಪ್ರೋತ್ಸಾಹಕ್ಕಾಗಿ ಗೋಹತ್ಯೆ ನಿಷೇಧ ಕಾಯಿದೆ, ಗೋಶಾಲೆ ನಿರ್ಮಾಣ, ಪಶುವೈದ್ಯಕೀಯ ಕಾಲೇಜು ಸ್ಥಾಪನೆ | ಪಶುವೈದ್ಯಕೀಯ ಇಲಾಖೆಯಿಂದ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಿಸಿ ಶಾಸಕ ಸಂಜೀವ ಮಠಂದೂರು|ಗೋ ಪೂಜೆ ನೆರವೇರಿಸಿ ಫಲಾನುಭವಿಗಳಿಗೆ ವಿತರಣೆ Read More »

ಸಣ್ಣ ನೀರಾವರಿ ಇಲಾಖೆಯಡಿ 3 ಕೋಟಿ ರೂ. ವೆಚ್ಚದಲ್ಲಿ ಉಪ್ಪಿನಂಗಡಿ ನೇತ್ರಾವತಿ, ಕುಮಾರಧಾರಾ ನದಿಗೆ ತಡೆಗೋಡೆ ನಿರ್ಮಾಣಕ್ಕೆ ಶಾಸಕ ಸಂಜೀವ ಮಠಂದೂರು ಶಂಕು ಸ್ಥಾಪನೆ

ಉಪ್ಪಿನಂಗಡಿ : ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಬಳಿಯ ಕುಮಾರಧಾರ ನದಿಗೆ ಸಣ್ಣ ನೀರಾವರಿ ಇಲಾಖೆಯಡಿ 2 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ರಚನೆ ಹಾಗೂ ಸಿ.ಎ.ಬ್ಯಾಂಕ್ ಬಳಿ ನೇತ್ರಾವತಿ ನದಿಗೆ 1 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ರಚನೆ ಕಾಮಗಾರಿಗೆ ಶಂಕು ಸ್ಥಾಪನೆ ಸೋಮವಾರ ನಡೆಯಿತು. ಪುತ್ತೂರು ಶಾಸಕ ಸಂಜೀವ ಮಠಂದೂರು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಮಳೆಗಾಲದಲ್ಲಿ ತುಂಬಿ ಹರಿಯುವ ನದಿಯಿಂದಾಗಿ ಸಾರ್ವಜನಿಕ ಸೊತ್ತುಗಳಿಗೆ ಯಾವುದೇ ಹಾನಿಯಾಗಬಾರದು ಎಂಬ ನಿಟ್ಟಿನಲ್ಲಿ ತಡೆಗೋಡೆ ಕಾಮಗಾರಿಗೆ ಸಣ್ಣ

ಸಣ್ಣ ನೀರಾವರಿ ಇಲಾಖೆಯಡಿ 3 ಕೋಟಿ ರೂ. ವೆಚ್ಚದಲ್ಲಿ ಉಪ್ಪಿನಂಗಡಿ ನೇತ್ರಾವತಿ, ಕುಮಾರಧಾರಾ ನದಿಗೆ ತಡೆಗೋಡೆ ನಿರ್ಮಾಣಕ್ಕೆ ಶಾಸಕ ಸಂಜೀವ ಮಠಂದೂರು ಶಂಕು ಸ್ಥಾಪನೆ Read More »

ಪದ್ಮರಾಜ್ ಬಿ.ಸಿ. ಚಾರ್ವಾಕ ಅವರಿಗೆ ಸಂಗೀತ ಕಲಾನಿಧಿ ರಾಜ್ಯ ಪ್ರಶಸ್ತಿ | ಸುಳ್ಯದಲ್ಲಿ ನಡೆದ ಹಾಡೊಂದು ನಾ ಹಾಡುವೆನು-2023 ಕಾರ್ಯಕ್ರಮದಲ್ಲಿ ಪ್ರದಾನ

ಪುತ್ತೂರು : ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ನ ಸಭಾಂಗಣದಲ್ಲಿ ನಡೆಸಿದ ಸರಿಗಮಪ ಸಂಗೀತ ಸ್ಪರ್ಧೆಯ ಹಾಡೊಂದು ನಾ ಹಾಡುವೆನು-2023 ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಪದ್ಮರಾಜ್ ಬಿ.ಸಿ. ಚಾರ್ವಾಕ ಅವರಿಗೆ 2023ನೇ ಸಾಲಿನ “ಸಂಗೀತ ಕಲಾನಿಧಿ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ. ವಾಷ್ಕರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷ, ಸಂಘಟಕ, ಸಾಹಿತಿ ಮತ್ತು ಚಿತ್ರ ನಿರ್ದೇಶಕ ಎಚ್.ಭೀಮರಾವ್ ವಾಷ್ಠರ್ ಪ್ರಶಸ್ತಿ ನೀಡಿ ಗೌರವಿಸಿದರು. ಪದ್ಮರಾಜ್ ಅವರು ಸಂಗೀತ, ಫಿಲಂ

ಪದ್ಮರಾಜ್ ಬಿ.ಸಿ. ಚಾರ್ವಾಕ ಅವರಿಗೆ ಸಂಗೀತ ಕಲಾನಿಧಿ ರಾಜ್ಯ ಪ್ರಶಸ್ತಿ | ಸುಳ್ಯದಲ್ಲಿ ನಡೆದ ಹಾಡೊಂದು ನಾ ಹಾಡುವೆನು-2023 ಕಾರ್ಯಕ್ರಮದಲ್ಲಿ ಪ್ರದಾನ Read More »

ಗಾಯಕ ಪದ್ಮರಾಜ್ ಬಿಸಿ ಚಾರ್ವಾಕ ರವರಿಗೆ “ಸಂಗೀತ ಕಲಾನಿಧಿ” ರಾಜ್ಯಪ್ರಶಸ್ತಿ

ಪುತ್ತೂರು: ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವತಿಯಿಂದ ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆದ ಸುಳ್ಯ ಸರಿಗಮಪ ಸಂಗೀತ ಸ್ಪರ್ಧೆಯ ಹಾಡೊಂದು ನಾ ಹಾಡುವೆನು -2023 ಕಾರ್ಯಕ್ರಮದಲ್ಲಿ ಗಾಯಕ ಪದ್ಮರಾಜ್ ಬಿ ಸಿ ಚಾರ್ವಾಕ ರವರಿಗೆ 2023ನೇ ಸಾಲಿನ “ಸಂಗೀತ ಕಲಾನಿಧಿ ರಾಜ್ಯಪ್ರಶಸ್ತಿ ” ನೀಡಿ ಗೌರವಿಸಲಾಯಿತು. ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷ, ಸಂಘಟಕ, ಸಾಹಿತಿ ಮತ್ತು ಚಿತ್ರನಿರ್ದೇಶಕ ಎಚ್. ಭೀಮರಾವ್ ವಾಷ್ಠರ್ ರವರು ಪ್ರಶಸ್ತಿ ನೀಡಿ ಗೌರವಿಸಿದರು.ಪದ್ಮರಾಜ್ ರವರು ಸಂಗೀತ

ಗಾಯಕ ಪದ್ಮರಾಜ್ ಬಿಸಿ ಚಾರ್ವಾಕ ರವರಿಗೆ “ಸಂಗೀತ ಕಲಾನಿಧಿ” ರಾಜ್ಯಪ್ರಶಸ್ತಿ Read More »

ದಕ್ಷಿಣ ಭಾರತ ಯೋಗಾಸನ ಸ್ಪರ್ಧೆ | ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಶ್ರೀಮಾ ಕೆ.ಎಚ್. ಅವರಿಗೆ ಪ್ರಶಸ್ತಿ

ಪುತ್ತೂರು : ರಾಷ್ಟ್ರೀಯ ಹಬ್ಬಗಳ ಆಚರಣೆ ಅಂಗವಾಗಿ ಮೈಸೂರಿನಲ್ಲಿ ಭಾನುವಾರ ನಡೆದ ದಕ್ಷಿಣ ಭಾರತ ಯೋಗಾಸನ ಕ್ರೀಡಾ ಸ್ಪರ್ಧೆಯಲ್ಲಿ ಕಾಣಿಯೂರಿನ ವಿದ್ಯಾರ್ಥಿನಿಯೋರ್ವರು ಸಾಧನೆ ಮೆರೆದಿದ್ದಾರೆ. 12-15 ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಶ್ರೀಮಾ ಕೆ.ಎಚ್. 5ನೇ ಸ್ಥಾನ ಹಾಗೂ ಚಾಂಪಿಯನ್‍ ಆಪ್‍ ಚಾಂಪಿಯನ್ ನಲ್ಲಿ 4ನೇ ಸ್ಥಾನ ಪಡೆದು ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ. ಶ್ರೀಮಾ ಅವರು ಮುರುಳ್ಯ ಗ್ರಾಮದ ಹುದೇರಿ ಕುಶಾಲಪ್ಪ ಮತ್ತು ಸುಜಿತಾ ದಂಪತಿ ಪುತ್ರಿ. ಕರ್ನಾಟಕ ಸರಕಾರ, ಜಿಲ್ಲಾಡಳಿ, ಮೈಸೂರು ಜಿಪಂ

ದಕ್ಷಿಣ ಭಾರತ ಯೋಗಾಸನ ಸ್ಪರ್ಧೆ | ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಶ್ರೀಮಾ ಕೆ.ಎಚ್. ಅವರಿಗೆ ಪ್ರಶಸ್ತಿ Read More »

ಪಡುಮಲೆ ಬ್ರಹ್ಮಕಲಶೋತ್ಸವದಲ್ಲಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ಭರತನಾಟ್ಯ ಪ್ರದರ್ಶನ

ಪುತ್ತೂರು: ಪುತ್ತೂರು ತಾಲೂಕಿನ ಪಡುಮಲೆ ಶ್ರೀ ಕೂವೆಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಮೊದಲನೇ ದಿನವಾದ ಫೆ.25ರಂದು ರಾತ್ರಿ ದರ್ಬೆ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯಗುರು ದೀಪಕ್ ಕುಮಾರ್ ಅವರ ಶಿಷ್ಯ ವೃಂದದವರಿಂದ ಭರತನಾಟ್ಯ ಪ್ರದರ್ಶನಗೊಂಡಿತು.

ಪಡುಮಲೆ ಬ್ರಹ್ಮಕಲಶೋತ್ಸವದಲ್ಲಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ಭರತನಾಟ್ಯ ಪ್ರದರ್ಶನ Read More »

ಸೌಮ್ಯ ಪೆರ್ನಾಜೆಗೆ ಗಡಿನಾಡ ದ್ವನಿ ‘ಮಧು ಭೂಷಣ’ ರಾಜ್ಯ ಪ್ರಶಸ್ತಿ ಪ್ರಧಾನ

ಪುತ್ತೂರು: ಒಡ್ಯ ಸಹಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಫೆ. 25ರಂದು ಗಡಿನಾಡ ಧ್ವನಿ ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟಿನ 6ನೇ ಕರ್ನಾಟಕ ಗಡಿನಾಡ ಸಮ್ಮೇಳನದಲ್ಲಿ ಸೌಮ್ಯ ಪೆರ್ನಾಜೆ ಅವರಿಗೆ ಮಧುಭೂಷಣ ರಾಜ್ಯ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಮಿತ್ರಂಪಾಡಿ ಜಯರಾಮ್ ರೈ ಅಬುದಾಬಿ ಅವರು ಪ್ರಶಸ್ತಿ ಪ್ರಧಾನ ಮಾಡಿದರು. ಸಮ್ಮೇಳನಾಧ್ಯಕ್ಷ ಮಲಾರ್ ಜಯರಾಮ್ ರೈ, ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಪುತ್ತೂರು ಅಧ್ಯಕ್ಷ ಉಮೇಶ್ ನಾಯಕ್, ಗಡಿನಾಡ ದ್ವನಿ ಅಧ್ಯಕ್ಷ ಡಾ. ಹಾಜಿ ಎಸ್. ಅಬ್ಬೂಬಕ್ಕರ್ ಅರ್ಲಪದವು, ಪ್ರ.ಕಾರ್ಯದರ್ಶಿ ಈಶ್ವರ

ಸೌಮ್ಯ ಪೆರ್ನಾಜೆಗೆ ಗಡಿನಾಡ ದ್ವನಿ ‘ಮಧು ಭೂಷಣ’ ರಾಜ್ಯ ಪ್ರಶಸ್ತಿ ಪ್ರಧಾನ Read More »

ಸಕ್ರಿಯವಾದ ಡಿಜಿಟಲ್‌ ಮಾರ್ಕೆಟಿಂಗ್‌ ವಂಚನೆ ಜಾಲ : ಹಣ ದ್ವಿಗುಣ, ಉದ್ಯೋಗ ಆಮಿಷ : ಯುವಜನತೆಯೆ ಗುರಿ

ಮಂಗಳೂರು : ತುರ್ತು ಉದ್ಯೋಗ, ಹೆಚ್ಚು ಹಣ ಗಳಿಸಬೇಕೆಂಬ ಯುವಜನತೆಯ ಆಸೆ ಆದರೆ ಅವರ ಅಗತ್ಯವನ್ನೆ ಅಸ್ತ್ರವನ್ನಾಗಿ ಉಪಯೋಗಿಸುತ್ತಿರುವ ಸೈಬರ್‌ ವಂಚಕರ ಬಲೆಯು ಕರಾವಳಿಗೂ ವಿಸ್ತರಿಸಿದೆ. ಅರೆಕಾಲಿಕ, ಪೂರ್ಣಕಾಲಿಕ ಉದ್ಯೋಗ ಎಂಬ ಜಾಹಿರಾತಿನ ಮೂಲಕ ಡಿಜಿಟಲ್‌ ಜಾಹಿರಾತಿನ ಮೂಲಕ ಸಮಾಜಿಕ ಜಾಲತಾಣದಲ್ಲಿ ಸದಸ್ಯರನ್ನಾಗಿಸಿಕೊಂಡು, ಖಾತೆ ತೆರೆದು ಅದರಲ್ಲಿಯೆ ಹಣದ ವ್ಯವಹಾರ ನಮೂದಿಸುತ್ತಿರುವಂತೆ ತೋರಿಸಿ, ಹೂಡಿಕೆ ಮಾಡುವ ಹಣವನ್ನು ದ್ವಿಗುಣವಾಗುತ್ತದೆ ಎಂದು ನಂಬಿಸುತ್ತಾರೆ. ಕೆಲವೊಂದು ಸಲ ಪ್ರಾರಂಭಿಕ ಹಣವನ್ನು ವಾಪಾಸ್‌ ನೀಡುತ್ತಾರೆ. ಮತ್ತೊಮ್ಮೆ ದ್ವಿಗುಣಗೊಂಡ ಹಣವನ್ನು ಆನ್‌ಲೈನ್‌ನಲ್ಲಿರುವ ಖಾತೆಯಲ್ಲಿಯೂ

ಸಕ್ರಿಯವಾದ ಡಿಜಿಟಲ್‌ ಮಾರ್ಕೆಟಿಂಗ್‌ ವಂಚನೆ ಜಾಲ : ಹಣ ದ್ವಿಗುಣ, ಉದ್ಯೋಗ ಆಮಿಷ : ಯುವಜನತೆಯೆ ಗುರಿ Read More »

error: Content is protected !!
Scroll to Top