ಪುತ್ತೂರು

ಶತಾಯುಷಿ ಗುಡ್ಡಪ್ಪ ಗೌಡ ಬನ್ನೂರು ನಿಧನ

ಪುತ್ತೂರು: ಪ್ರಗತಿಪರ ಕೃಷಿಕ, ಬನ್ನೂರು ಗುತ್ತಿನ ದೈವದ ಪರಿಚಾರಕರಾಗಿದ್ದ ಶತಾಯುಷಿ, ಬನ್ನೂರು ನಿವಾಸಿ ಗುಡ್ಡಪ್ಪ ಗೌಡ (101) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಫೆ. 27ರಂದು ಬೆಳಿಗ್ಗೆ ನಿಧನರಾದರು. ಊರ ಗೌಡತ್ತಿಗೆ ಮಾಡುತ್ತಿದ್ದ ಗುಡ್ಡಪ್ಪ ಗೌಡ ಅವರು ಪ್ರಗತಿಪರ ಕೃಷಿಕರಾಗಿಯೂ ಗುರುತಿಸಿಕೊಂಡಿದ್ದರು. ಹಿಂದೆ ಗುತ್ತಿಗೆದಾರರಾಗಿಯೂ ಕೆಲಸ ನಿರ್ವಹಿಸುತ್ತಿದ್ದರು. 72 ವರ್ಷ ಕಾಲ ಸುಖೀ ದಾಂಪತ್ಯ ಜೀವನ ನಡೆಸಿದ ಹಿನ್ನೆಲೆಯಲ್ಲಿ ಅಲುಂಬುಡ ಸೇವಾ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಗಿತ್ತು. ಹಿಂದಿನ ವರ್ಷ ಗುಡ್ಡಪ್ಪ ಗೌಡ ಅವರ ಪತ್ನಿ ಲಕ್ಷ್ಮೀ ಅವರು ನಿಧನರಾಗಿದ್ದರು. […]

ಶತಾಯುಷಿ ಗುಡ್ಡಪ್ಪ ಗೌಡ ಬನ್ನೂರು ನಿಧನ Read More »

ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ಬೆಳ್ಳಿಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ

ಪುತ್ತೂರು: ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಬೆಳ್ಳಿಹಬ್ಬದ ಪ್ರಯುಕ್ತ ಫೆ. 26ರಂದು ಶಾಂತಿಗೋಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ ಶಿಬಿರ ನಡೆಯಿತು. ಕ್ಯಾಂಪ್ಕೋ ರೋಟರಿ ಬ್ಲಡ್ ಸೆಂಟರಿನ ವೈದ್ಯಾಧಿಕಾರಿ ರಾಮಚಂದ್ರ ಭಟ್ ಕೆ. ಉದ್ಘಾಟಿಸಿದರು. ಸಮಿತಿಯ ಪ್ರಮುಖರಾದ ರಾಘವ ಬೊಳ್ಳಕ್ಕು, ಮಂಜುನಾಥ, ಆನಂದ ಆರ್. ರೆಂಜಾಳ, ಸತೀಶ್ ಕೆಡೆಂಜಿ, ನಾಗೇಶ್ ಸಾರಕೆರೆ, ಮಹೇಶ್‍ಚಂದ್ರ ಸಾಲ್ಯಾನ್, ಉಮೇಶ್ ಬಾಯರ್, ಚಂದ್ರಾಕ್ಷ ಪೇರಡ್ಕ ಉಪಸ್ಥಿತರಿದ್ದರು. ಗೌರಿ ಹೊನ್ನಪ್ಪ ಪೂಜಾರಿ ಕೈಂದಾಡಿ ಪ್ರಾರ್ಥಿಸಿ, ಹೊನ್ನಪ್ಪ ಪೂಜಾರಿ ಕೈಂದಾಡಿ ಸ್ವಾಗತಿಸಿದರು. ಚಂದ್ರಾಕ್ಷ ಪೇರಡ್ಕ

ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ಬೆಳ್ಳಿಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ Read More »

ಶಾಸಕರ ನಿಧಿಯಿಂದ ದಿವ್ಯಾಂಗಚೇತನರಿಗೆ ಸವಲತ್ತು | ಜಿಲ್ಲಾ ಮಟ್ಟದ ದಿವ್ಯಾಂಗ ಚೇತನರ ಉದ್ಯೋಗ ಮೇಳ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು

ಪುತ್ತೂರು: ಈಗಾಗಲೇ ಶಾಸಕರ ನಿಧಿಯನ್ನು ಬಳಸಿಕೊಂಡು ದಿವ್ಯಾಂಗಚೇತನರಿಗೆ ಕೃತಕ ಕಾಲು ಸೇರಿದಂತೆ ಅನೇಕ ಪರಿಕರಗಳನ್ನು ನೀಡುವ ಕೆಲಸ ಆಗಿದೆ. ತಾಲೂಕು ಪಂಚಾಯತ್ ನಿಧಿಯಿಂದ ಸ್ಕೂಟರ್ ಅನ್ನು ನೀಡಲಾಗಿದೆ. ದಿವ್ಯಾಂಗಚೇತನರಿಗೆ ಸರಕಾರದ ಮೀಸಲಾತಿ ಕಡಿಮೆ ಇದ್ದರೂ, ಇರುವ ವ್ಯವಸ್ಥೆಯಲ್ಲಿ ಸಾಕಷ್ಟು ಸೌಲಭ್ಯಗಳನ್ನು ನೀಡಲು ನಾವು ಶ್ರಮಿಸಿದ್ದೇವೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ರೋಟರ್ಯಾಕ್ಟ್ ಕ್ಲಬ್ ಪುತ್ತೂರು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮಂಗಳೂರು ಇದರ ನೇತೃತ್ವದಲ್ಲಿ ರೋಟರ್ಯಾಕ್ಟ್ ಜಿಲ್ಲೆ 3181, ಪುತ್ತೂರು ದಿವ್ಯಾಂಗಜನ್ಸ್ ಫೌಂಡೇಶನ್, ಮಂಗಳೂರು ಸರ್ವಮಂಗಳ

ಶಾಸಕರ ನಿಧಿಯಿಂದ ದಿವ್ಯಾಂಗಚೇತನರಿಗೆ ಸವಲತ್ತು | ಜಿಲ್ಲಾ ಮಟ್ಟದ ದಿವ್ಯಾಂಗ ಚೇತನರ ಉದ್ಯೋಗ ಮೇಳ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು Read More »

ಪಡುಮಲೆ ಶ್ರೀ ಕೂವೆಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿವಿಧ ವೈದಿಕ ಕಾರ್ಯಕ್ರಮ | ಹರಿದು ಬಂದ ಜನಸಾಗರ

ಪುತ್ತೂರು : ಐತಿಹಾಸಿಕ ಕ್ಷೇತ್ರ ಪಡುಮಲೆ ಶ್ರೀ ಕೂವೆಶಾಸ್ತಾರ ವಿಷ್ಣುಮೂರ್ತಿ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ರವಿವಾರ ವಿವಿಧ ವೈದಿಕ ಕಾರ್ಯಕ್ರಮಗಳು ನಡೆದವು. ಪೂರ್ವಾಹ್ನ 6 ರಿಂದ ಗಣಪತಿ ಹೋಮ, ಪ್ರಾಯಶ್ಚಿತ ಹೋಮಗಳು, ಚತು:ಶುದ್ದಿಧಾರ, ಅವಾಗಹ, ಪಂಚಕ, ಅಂಕುರ ಪೂಜೆ, ಅಪರಾಹ್ನ ಅಂಕುರ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಹೋಮ ಕಲಶಾಭಿಷೇಕ, ಅಂಕುರ ಪೂಜೆ, ಮಹಾಪೂಜೆ ನಡೆಯಿತು. ಈ ಸಂದರ್ಭದಲ್ಲಿ ಆಲಂತಡ್ಕ ಶ್ರೀ ವನಶಾಸ್ತಾರ ಮಕ್ಕಳ ಕುಣಿತ ಭಜನ ತಂಡ ಹಾಗೂ ನಿಡ್ಪಳ್ಳಿ ಶಾಂತದುರ್ಗಾ ಭಜನ ಮಂಡಳಿಯಿಂದ ಭಜನೆ

ಪಡುಮಲೆ ಶ್ರೀ ಕೂವೆಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿವಿಧ ವೈದಿಕ ಕಾರ್ಯಕ್ರಮ | ಹರಿದು ಬಂದ ಜನಸಾಗರ Read More »

ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳಿಗೆ ದುರಾಸೆಯೇ ಮುಖ್ಯ ಕಾರಣ : ಜಸ್ಟೀಸ್ ಎನ್.ಸಂತೋಷ್ ಹೆಗ್ಡೆ | ಕರ್ನಾಟಕದ ಇಂದಿನ ಅಗತ್ಯಗಳು “ಜನ ಸಂವಾದ” ಕಾರ್ಯಕ್ರಮ  

ಪುತ್ತೂರು : ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳಿಗೆ ದುರಾಸೆ ಮೂಲ ಕಾರಣವಾಗಿದ್ದು, ಎಲ್ಲಾ ಖಾಯಿಗಳಿಗೆಗೆ ಔಷಧಿಯಿದ್ದರೆ ದುರಾಸೆಗೆ ಔಷಧಿಯಿಲ್ಲ. ಇದನ್ನು ಹೋಗಲಾಡಿಸಲು ಮಹಾತ್ಮ ಗಾಂಧೀನಿಯವರು ಹೇಳಿದ ಒಂದು ದಾರಿ ತೃಪ್ತಿ. ತೃಪ್ತಿಯಿಂದ ದುರಾಷೆಯನ್ನು ಮಟ್ಟ ಹಾಕಬಹುದು ಎಂದು ನಿವೃತ್ತ ಲೋಕಾಯುಕ್ತ ಜಸ್ಟೀಸ್ ಎನ್.ಸಂತೋಷ್ ಹೆಗ್ಡೆ ಹೇಳಿದರು. ಅವರು ಭಾನುವಾರ ನಗರದ ಜೈನ ಭವನದಲ್ಲಿ ಪುತ್ತೂರು ಗಾಂಧಿ ವಿಚಾರ ವೇದಿಕೆ ಹಾಗೂ ಮಂಗಳೂರು ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ನಡೆದ ಕರ್ನಾಟಕದ ಇಂದಿನ ಅಗತ್ಯತೆಗಳು ಕುರಿತ “ಜನ

ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳಿಗೆ ದುರಾಸೆಯೇ ಮುಖ್ಯ ಕಾರಣ : ಜಸ್ಟೀಸ್ ಎನ್.ಸಂತೋಷ್ ಹೆಗ್ಡೆ | ಕರ್ನಾಟಕದ ಇಂದಿನ ಅಗತ್ಯಗಳು “ಜನ ಸಂವಾದ” ಕಾರ್ಯಕ್ರಮ   Read More »

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಸಂಪೂರ್ಣ ಸುರಕ್ಷಾ ನೋಂದಾವಣೆಗೆ ಚಾಲನೆ

ಪುತ್ತೂರು : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮೆತ್ತಡ್ಕ ಒಕ್ಕೂಟದ ಸಂಪೂರ್ಣ ಸುರಕ್ಷಾ ನೋಂದಾವಣೆಯ ಉದ್ಘಾಟನೆ ಭಾನುವಾರ ಸಾಮೆತ್ತಡ್ಕ ಶಾಲೆಯಲ್ಲಿ ನಡೆಯಿತು. ಒಕ್ಕೂಟದ ಅಧ್ಯಕ್ಷೆ ಅಹಲ್ಯ ಹಾಗೂ ಸಂಘಗಳ ಸದಸ್ಯರು ದೀಪ ಬೆಳಗಿಸಿ ಸುರಕ್ಷಾ ನೋಂದಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆಂತರಿಕ ಲೆಕ್ಕ ಪರಿಶೋಧಕಿ ಲತಾ ಸಂಪೂರ್ಣ ಸುರಕ್ಷಾ ಕುರಿತು ಮಾಹಿತಿ ನೀಡಿದರು. ಸಾಮೆತ್ತಡ್ಕ ಶಾಲಾ ಟ್ರಸ್ಟ್ ಸದಸ್ಯ ದಿನೇಶ್ ಕಾಮತ್ ಆರೋಗ್ಯ ವಿಮೆ ಕುರಿತು ಮಾಹಿತಿ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಮರಿಯಾ ಟೀಚರ್, ಕಸಬ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಸಂಪೂರ್ಣ ಸುರಕ್ಷಾ ನೋಂದಾವಣೆಗೆ ಚಾಲನೆ Read More »

ರಾಷ್ಟ್ರಪಿತ ಮಹಾತ್ಮಾ ಗಾಂಧಿ ಪುತ್ತೂರು ಗಾಂಧಿಕಟ್ಟೆಗೆ ಆಗಮಿಸಿ 90 ವರ್ಷ ಪೂರೈಕೆ | ಮುಂದಿನ ಒಂದು ವರ್ಷಗಳ ಕಾರ್ಯಕ್ರಮಕ್ಕೆ ಜಸ್ಟೀಸ್ ಸಂತೋಷ್ ಹೆಗ್ಡೆಯವರಿಂದ ಚಾಲನೆ

ಪುತ್ತೂರು :; ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ದೇಶದ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಪುತ್ತೂರಿಗೆ ಆಗಮಿಸಿ ಪ್ರಸ್ತುತ ವರ್ಷಕ್ಕೆ 90 ವರ್ಷ ಪೂರೈಸಿದ್ದು, ಈ  ಸಂಭ್ರಮದಲ್ಲಿ ಒಂದು ವರ್ಷ ನಿರಂತರವಾಗಿ ಕಾರ್ಯಕ್ರಮಗಳು ಆಯೋಜಿಸಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಒಂದು ವರ್ಷಗಳ ಕಾರ್ಯಕ್ರಮಳಿಗೆ ಭಾನುವಾರ ಪುತ್ತೂರಿನ ಗಾಂಧಿ ಕಟ್ಟೆಯಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ .ಚಾಲನೆ ನೀಡಲಾಯಿತು. ನಿವೃತ್ತ ಲೋಕಾಯುಕ್ತ ಜಸ್ಟೀಸ್ ಎನ್.ಸಂತೋಷ್ ಹೆಗ್ಡೆ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಚಾಲನೆ ನೀಡಿದರು. ಗಾಂಧೀ ವಿಚಾರ ವೇದಿಕೆ ಪುತ್ತೂರು ಹಾಗೂ

ರಾಷ್ಟ್ರಪಿತ ಮಹಾತ್ಮಾ ಗಾಂಧಿ ಪುತ್ತೂರು ಗಾಂಧಿಕಟ್ಟೆಗೆ ಆಗಮಿಸಿ 90 ವರ್ಷ ಪೂರೈಕೆ | ಮುಂದಿನ ಒಂದು ವರ್ಷಗಳ ಕಾರ್ಯಕ್ರಮಕ್ಕೆ ಜಸ್ಟೀಸ್ ಸಂತೋಷ್ ಹೆಗ್ಡೆಯವರಿಂದ ಚಾಲನೆ Read More »

ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಯಶೋಧ ಅವರಿಗೆ ಅಭಿನಂದನಾ ಕಾರ್ಯಕ್ರಮ

ಪುತ್ತೂರು : ಕೋಡಿಂಬಾಡಿ ಕಜೆ ಅಂಗನವಾಡಿ ಕೇಂದ್ರ ಬಾಲವಿಕಾಸ ಸಮಿತಿ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘ, ಹಿರಿಯ ವಿದ್ಯಾರ್ಥಿ ಸಂಘ ಮತ್ತು ಪೋಷಕರ ಆಶ್ರಯದಲ್ಲಿ  ನೀವೃತ್ತಿಗೊಂಡ ಅಂಗನವಾಡಿ ಕಾರ್ಯಕರ್ತೆ ಯಶೋಧ ಬಿ. ಅವರಿಗೆ ಅಭಿನಂದನಾ ಕಾರ್ಯಕ್ರಮ ಶನಿವಾರ ನಡೆಯಿತು. ಪುತ್ತೂರು ಶಾಸಕ ಸಂಜೀವ ಮಠಂದೂರು ಅಭಿನಂದನೆ ನೆರವೇರಿಸಿ ಮಾತನಾಡಿ, ಸರಕಾರಿ ವೃತಿಯಲ್ಲಿ  ನಿವೃತ್ತಿ  ಸಹಜ.ನಿವೃತ್ತಿ ಹೊಂದಿದ ಯಶೋಧ ಟೀಚರ್ ಗೆ ಸಿಕ್ಕಿರುವುದು ನೋಡಿದರೆ ಅವರಲ್ಲಿ ಮಾತ್ರಶಕ್ತಿ, ಗುರುವಿನ ಶಕ್ತಿ ಎದ್ದು ಕಾಣುತ್ತಿದೆ ಎಂದ ಅವರು, ಅಂಗನವಾಡಿ

ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಯಶೋಧ ಅವರಿಗೆ ಅಭಿನಂದನಾ ಕಾರ್ಯಕ್ರಮ Read More »

ನಾಳೆ (ಫೆ.27) : ಶಾಂತಿಗೋಡು ಹಿ.ಪ್ರಾ.ಶಾಲೆಯಲ್ಲಿ “ಉಚಿತ ಕಾನೂನು ಅರಿವು-ನೆರವು  ಕಾರ್ಯಕ್ರಮ”

ಪುತ್ತೂರು : ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ನೇತೃತ್ವದಲ್ಲಿ ಹುಬ್ಬಳ್ಳಿ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಕೋಶ, ನರಿಮೊಗರು ಗ್ರಾಪಂ ಹಾಗೂ ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ “ಉಚಿತ ಕಾನೂನು ಅರಿವು-ನೆರವು ಕಾರ್ಯಕ್ರಮ ಹಾಗೂ ಕಾನೂನು ಮಾಹಿತಿ ಸಮೀಕ್ಷೆ ಫೆ.27 ಸೋಮವಾರ ಬೆಳಿಗ್ಗೆ 9.30 ಕ್ಕೆ ಶಾಂತಿಗೋಡು ಹಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ. ನರಿಮೊಗರು ಗ್ರಾಪಂ ಅಧ್ಯಕ್ಷೆ ವಿದ್ಯಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಅಕ್ಷತಾ ಎ.ಪಿ. ಅಧ್ಯಕ್ಷತೆ ವಹಿಸುವರು. ಮುಖ್ಯ

ನಾಳೆ (ಫೆ.27) : ಶಾಂತಿಗೋಡು ಹಿ.ಪ್ರಾ.ಶಾಲೆಯಲ್ಲಿ “ಉಚಿತ ಕಾನೂನು ಅರಿವು-ನೆರವು  ಕಾರ್ಯಕ್ರಮ” Read More »

ಬೇರಿಕೆ ಶ್ರೀ ನಾಗಬ್ರಹ್ಮ ಆದಿಮುಗೇರ್ಕಳ, ಕೊರಗಜ್ಜ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ, ಧಾರ್ಮಿಕ ಸಭೆ, ಸನ್ಮಾನ

ಕಡಬ: ಕುದ್ಮಾರು ಬೇರಿಕೆ ಶ್ರೀ ನಾಗಬ್ರಹ್ಮ ಆದಿಮುಗೇರ್ಕಳ ಮತ್ತು ಕೊರಗಜ್ಜ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಪ್ರಯುಕ್ತ ಫೆ. 25ರಂದು ಸಂಜೆ ಧಾರ್ಮಿಕ ಸಭೆ ನಡೆಯಿತು. ಬೇರಿಕೆ ಶ್ರೀ ನಾಗಬ್ರಹ್ಮ ಆದಿಮುಗೇರ್ಕಳ ದೈವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ್ ಕೆ.ಎನ್. ಕಾರ್ಲಾಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಕುಂಬ್ಲಾಡಿ ಶ್ರೀ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರದೀಪ್ ಆರ್. ಗೌಡ ಅರುವಗುತ್ತು ಉದ್ಘಾಟಿಸಿದರು. ಇದೇ ಸಂದರ್ಭ ಭಾರತೀಯ ಭೂಸೇನೆಯ ಮಾಜಿ ಸುಬೇದಾರ್ ರವಿಚಂದ್ರ ಮಾರ್ಕಜೆ, ಭಾರತೀಯ ಭೂಸೇನೆಯ

ಬೇರಿಕೆ ಶ್ರೀ ನಾಗಬ್ರಹ್ಮ ಆದಿಮುಗೇರ್ಕಳ, ಕೊರಗಜ್ಜ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ, ಧಾರ್ಮಿಕ ಸಭೆ, ಸನ್ಮಾನ Read More »

error: Content is protected !!
Scroll to Top