ಪುತ್ತೂರು

ಜೂ.15 ರಿಂದ ಪ್ರೇರಣಾದಲ್ಲಿ ಸ್ಪೋಕನ್ ಇಂಗ್ಲೀಷ್ ಹೊಸ ಬ್ಯಾಚ್ ಆರಂಭ

ಪುತ್ತೂರು: ಸುಲಭವಾಗಿ ಇಂಗ್ಲೀಷ್ ಭಾಷೆಯನ್ನು ಮಾತನಾಡಬಲ್ಲವರಾಗಿದ್ದರೆ ಮಾತ್ರ ಪೈಪೋಟಿಯ ಪ್ರಪಂಚದಲ್ಲಿ ಮೇಲುಗೈ ಸಾಧಿಸಲು ಸಾಧ್ಯ. ಇದಕ್ಕಾಗಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಪ್ರೇರಣಾದಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಯ ಹೊಸ ಬ್ಯಾಚ್ ಜೂ.15 ರಿಂದ ಆರಂಭಗೊಳ್ಳಲಿದೆ. ಇಂಗ್ಲೀಷ್ ಭಾಷೆಯನ್ನು ಸುಲಭವಾಗಿ ಹೇಗೆ ಮಾತನಾಡಬಹುದು ಎನ್ನುವುದನ್ನು ಪ್ರೇರಣಾದಲ್ಲಿ ನುರಿತ ಶಿಕ್ಷಕರು ಹೇಳಿಕೊಡಲಿದ್ದಾರೆ.ಮಹಾನಗರಗಳ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲೂ ಕಡಿಮೆಯಿಲ್ಲ ಎಂದು ಸಾಧಿಸಬೇಕು ಎನ್ನುವ ಸದುದ್ದೇಶದಿಂದ ಪ್ರೇರಣಾ ಸಂಸ್ಥೆಯಲ್ಲಿ ಜೂ.15 ರಿಂದ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಸೀಮಿತ ವಿದ್ಯಾರ್ಥಿಗಳಿಗೆ […]

ಜೂ.15 ರಿಂದ ಪ್ರೇರಣಾದಲ್ಲಿ ಸ್ಪೋಕನ್ ಇಂಗ್ಲೀಷ್ ಹೊಸ ಬ್ಯಾಚ್ ಆರಂಭ Read More »

ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಶ್ರಮದಾನದ ಮೂಲಕ ಶೌಚಾಲಯ ಗುಂಡಿ ನಿರ್ಮಾಣ

ಪುತ್ತೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ವಿಟ್ಲ. ಪೆರ್ನೆ ವಲಯದ ರೇವತಿ ಪೂಜಾರಿ  ಉರಿಮಾಡ  ಅವರ ಮನೆ ಬೀಳುವ ಹಂತದ ಜತೆಗೆ ಶೌಚಾಲಯ ಇರುವುದಿಲ್ಲ.ಈ ಹಿನ್ನಲೆಯಲ್ಲಿ, ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕ  ಸದಸ್ಯರು ಸೇರಿ ರೇವತಿ ಯವರ  ಹೊಸ  ಶೌಚಾಲಯ ರಚಗೆ ಗುಂಡಿಯನ್ನು ಶ್ರಮದಾನದ ಮೂಲಕ ನಿರ್ಮಿಸಿದರು. ರೇವತಿ ಅವರ ಪತಿ ಮರಣ ಹೊಂದಿದ್ದು ಪುತ್ರ ಮಾತ್ರ ಇದ್ದಾರೆ.. ಅವರು ಮೊದಲು ಇದ್ದ ಮನೆ ಬೀಳುವ ಹಂತಕ್ಕೆ ಬಂದ್ದಿದ್ದು. ಪಂಚಾಯತ್ ನಿಂದ

ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಶ್ರಮದಾನದ ಮೂಲಕ ಶೌಚಾಲಯ ಗುಂಡಿ ನಿರ್ಮಾಣ Read More »

ನಾಳೆ (ಜೂ.13) : ವಿದ್ಯುತ್ ನಿಲುಗಡೆ

ಪುತ್ತೂರು: 33 ಕೆವಿ ಮಾಡಾವು-ಬೆಳ್ಳಾರೆ-ಗುತ್ತಿಗಾರು-ಸುಬ್ರಹ್ಮಣ್ಯ ಮತ್ತು 33 ಕೆವಿ ಮಾಡಾವು ಬೆಳ್ಳಾರೆ ವಿದ್ಯುತ್ ಮಾರ್ಗದ ಪಾಲಾನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಜೂ.13 ಮಂಗಳವಾರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. 33 ಕೆವಿ ಮಾಡಾವು-ಬೆಳ್ಳಾರೆ-ಗುತ್ತಿಗಾರು-ಸುಬ್ರಹ್ಮಣ್ಯ ಮತ್ತು 33 ಕೆವಿ ಮಾಡಾವು ಬೆಳ್ಳಾರೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 33/11 ಕೆವಿ ಬೆಳ್ಳಾರೆ ಮತ್ತು ಗುತ್ತಿಗಾರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಗಮನಿಸಬೇಕೆಂದು ಮೆಸ್ಕಾಂ

ನಾಳೆ (ಜೂ.13) : ವಿದ್ಯುತ್ ನಿಲುಗಡೆ Read More »

ಜೂ.17 : ಡಾ.ಎಂ.ಮೋಹನ ಆಳ್ವರಿಗೆ ಸ್ವರ್ಣ ಸಾಧನಾ ಪ್ರಶಸ್ತಿ ಪ್ರದಾನ | ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರದ ಅನನ್ಯ ಸಾಧನೆಗೆ ಪ್ರಶಸ್ತಿ

ಪುತ್ತೂರು: ಪುತ್ತೂರು : ಕರ್ನಾಟಕ ರಾಜ್ಯ‌ ನಿವೃತ್ತ ನೌಕರರ ಸಂಘ ಪುತ್ತೂರು ಘಟಕದ ವತಿಯಿಂದ ಕೊಡಮಾಡುವ “ಸ್ವರ್ಣ ಸಾಧನಾ ಪ್ರಶಸ್ತಿಗೆ” ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರನ್ನು ಆಯ್ಕೆ ಮಾಡಲಾಗಿದ್ದು ಪ್ರಶಸ್ತಿ ಪ್ರದಾದ ಸಮಾರಂಭ  ಜೂ.17 ಶನಿವಾರ ಬೆಳಿಗ್ಗೆ 9.30 ಕ್ಕೆ ಬಪ್ಪಳಿಗೆ ಜೈನ ಭವನ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ‌ ಬಿ.ಐತಪ್ಪ ನಾಯ್ಕ್ ತಿಳಿಸಿದ್ದಾರೆ. ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರದ ಅನನ್ಯ ಸಾಧನೆ ಮಾಡಿದ ಡಾ.ಆಳ್ವರನ್ನು ಈ ಪ್ರಶಸ್ತಿಗೆ ಆಯ್ಕೆ

ಜೂ.17 : ಡಾ.ಎಂ.ಮೋಹನ ಆಳ್ವರಿಗೆ ಸ್ವರ್ಣ ಸಾಧನಾ ಪ್ರಶಸ್ತಿ ಪ್ರದಾನ | ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರದ ಅನನ್ಯ ಸಾಧನೆಗೆ ಪ್ರಶಸ್ತಿ Read More »

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಪಾದುಕಾನ್ಯಾಸ ಕಾರ್ಯಕ್ರಮ

ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ಜೀರ್ಣೋದ್ಧಾರ ಪ್ರಯುಕ್ತ ಜೂ.12 ರಂದು ಸೋಮವಾರ ಪಾದುಕನ್ಯಾಸ ಕಾರ್ಯಕ್ರಮ ನೆರವೇರಿತು.    ಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ಕಾರ್ತಿಕ್ ತಂತ್ರಿಗಳು ಪೂಜಾವಿಧಾನ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ,  ಕಾರ್ಯಾಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ, ವ್ಯವಸ್ಥಾಪನಾ ಸಮಿತಿಯ ದೇವಯ್ಯ ಗೌಡ ದೇವಸ್ಯ, ದಾಮೋದರ ರೈ ತೊಟ್ಲ, ವಿಠಲ ರೈ ಮೇರ್ಲ, ಕಿಶೋರ

ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಪಾದುಕಾನ್ಯಾಸ ಕಾರ್ಯಕ್ರಮ Read More »

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಕಚೇರಿ ಕಾರ್ಯಾರಂಭ

ಸುಳ್ಯ :ಸುಳ್ಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕಿ ಭಾಗೀರಥಿ ಮುರುಳ್ಯ ಅವರ ಕಚೇರಿ ಕಾರ್ಯಾರಂಭದ ಸುಳ್ಯ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಜೂ.12 ಬೆಳಗ್ಗೆ 6.00 ಗಂಟೆಗೆ ಗಣಹೋಮ ಪೂಜೆಯೊಂದಿಗೆ ಪಿ ಕೆ ಉಮೇಶ್ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಹರೀಶ್ ಕಂಜಿಪಿಲಿ, ಎ ವಿ ತೀರ್ಥರಾಮ, ಎಸ್ ಎನ್ ಮನ್ಮಥ, ಎನ್ ಎ ರಾಮಚಂದ್ರ, ರಾಕೇಶ್ ರೈ ಕೆಡೆಂಜಿ, ವೆಂಕಟ್ ವಳಳಂಬೆ, ಸುಬೋದ್ ಶೆಟ್ಟಿ, ವಿನಯ್ ಕುಮಾರ್ ಕಂದಡ್ಕ,

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಕಚೇರಿ ಕಾರ್ಯಾರಂಭ Read More »

ಸವಣೂರುನಲ್ಲಿ ತಂಬಾಕು ವಿರೋಧಿ ದಿನಾಚರಣೆ

ತಂಬಾಕು ಸೇವನೆ ರೋಗವನ್ನು ಕ್ರಯಕ್ಕೆ ಪಡೆದಂತೆ – ತಾರಾನಾಥ ಸವಣೂರು ಸವಣೂರು :  ತಂಬಾಕು ಸೇವನೆಯೊಂದು ಚಟ. ಈ ಚಟದಿಂದ ರೋಗಗಳನ್ನು ಕ್ರಯಕ್ಕೆ ಪಡೆದಂತೆ ಎಂದು ವೀರಮಂಗಲ ಶಾಲಾ ಮುಖ್ಯಗುರು ತಾರಾನಾಥ ಸವಣೂರು ನುಡಿದರು. ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್  ಸವಣೂರು , ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸವಣೂರು ವಲಯ ಇವುಗಳ ಆಶ್ರಯದಲ್ಲಿ ಸವಣೂರಿನ ಶ್ರೀ ವಿನಾಯಕ ಸಭಾ ಭವನದಲ್ಲಿ ನಡೆದ

ಸವಣೂರುನಲ್ಲಿ ತಂಬಾಕು ವಿರೋಧಿ ದಿನಾಚರಣೆ Read More »

ಕಟ್ಟತ್ತಾರು-ಗುಂಡಿಗದ್ದೆಯಲ್ಲಿ ಸೇತುವೆ ನಿರ್ಮಾಣ

ಕಾಣಿಯೂರು : ಕಾಣಿಯೂರು ಗ್ರಾಮದ, ಕಟ್ಟತ್ತಾರು-ಗುಂಡಿಗದ್ದೆ ಎಂಬಲ್ಲಿ  ನೂತನವಾಗಿ ನಿರ್ಮಾಣಗೊಂಡಿರುವ ಸೇತುವೆಯ ಉದ್ಘಾಟನೆ ಭಾನುವಾರ ನಡೆಯಿತು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸೇತುವೆಯನ್ನು ಉದ್ಗಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮಪಂಚಾಯತ್ ನ ಅಧ್ಯಕ್ಷರು, ಉಪಾಧ್ಯಕ್ಷರು, ಪಕ್ಷದ ಹಿರಿಯರು, ಊರವರು ಉಪಸ್ಥಿತರಿದ್ದರು.

ಕಟ್ಟತ್ತಾರು-ಗುಂಡಿಗದ್ದೆಯಲ್ಲಿ ಸೇತುವೆ ನಿರ್ಮಾಣ Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಕುಂಜೂರು ಪಂಜ ಒಕ್ಕೂಟದ ವತಿಯಿಂದ ಪರಿಸರ ಮಾಹಿತಿ ಕಾರ್ಯಕ್ರಮ

ಪುತ್ತೂರು: ಶ್ರೀ  ಕ್ಷೇತ್ರ ಧರ್ಮಸ್ಥಳ  ಗ್ರಾಮಭಿವೃದ್ಧಿ ಯೋಜನೆ  ಬಿ, ಸಿ, ಟ್ರಸ್ಟ್( ರಿ ) ಪುತ್ತೂರು ಪ್ರಗತಿ  ಬಂದು  ಸ್ವ ಸಹಾಯ  ಸಂಘಗಳ  ಒಕ್ಕೂಟ ಕುಂಜೂರು ಪಂಜ ಒಕ್ಕೂಟ ಸಭೆ  ಮತ್ತು ಪರಿಸರ  ಮಾಹಿತಿ ಕಾರ್ಯಕ್ರಮ ದೇವಸ್ಯ  ಶ್ರೀ  ಮಂಜುನಾಥ  ಸಭಾಭವನದಲ್ಲಿ  ಭಾನುವಾರ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಸರಸ್ವತಿ, ಜನಜಾಗೃತಿ  ಅಧ್ಯಕ್ಷ ಮಹಾಬಲ ರೈ  ದೀಪ  ಬೆಳಗಿಸಿ  ಉದ್ಘಾಟನೆ ಮಾಡಿದರು. ಒಕ್ಕೂಟದ  ಅಧ್ಯಕ್ಷ  ಮಹಾಲಿಂಗ ನಾಯ್ಕ ಅದ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪುತ್ತೂರು ತಾಲೂಕು ಕೃಷಿ ಅಧಿಕಾರಿ

ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಕುಂಜೂರು ಪಂಜ ಒಕ್ಕೂಟದ ವತಿಯಿಂದ ಪರಿಸರ ಮಾಹಿತಿ ಕಾರ್ಯಕ್ರಮ Read More »

ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ

ಪುತ್ತೂರು: ಕೊಕ್ಕಡದ ವಿದ್ಯಾರ್ಥಿನಿಯೋರ್ವಳು ಪುತ್ತೂರಿನ ಪಡೀಲ್‌ನಲ್ಲಿರುವ ಹಾಸ್ಟೇಲ್ ಒಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಕ್ಕಡ ಗ್ರಾಮದ ನೇತ್ರಾಳ ನಿವಾಸಿ ಶ್ರೀಧರ ಆಚಾರ್ಯ ಹಾಗೂ ದಿ. ಪುಷ್ಪ ದಂಪತಿ ಪುತ್ರಿ ರೇಖಾ (೧೫) ಆತ್ಮಹತ್ಯೆ ಮಾಡಿಕೊಂಡವರು. ಅವಳ ತಾಯಿ ಪುಷ್ಪ  ಅವರು  ಕಳೆದ ವರ್ಷ ನಿಧನರಾಗಿದ್ದರು. ತಂದೆ ಕೂಲಿ ಕೆಲಸ ಮಾಡುತ್ತಿದ್ದು, ತಾಯಿಯ ನಿಧನದ ಬಳಿಕ ಮಾನಸಿಕವಾಗಿ ಕುಗ್ಗಿದ್ದಳು.ಅಲ್ಲದೆ ಆಕೆ ತಮ್ಮ ಸಂಬಂಧಿಕರ ಮನೆಯಿಂದ ಶಾಲೆ ಹೋಗುತ್ತಿದ್ದಳು. ಕೊಕ್ಕಡ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆಕೆಯನ್ನು ಅತ್ತೆ ಒತ್ತಾಯದ

ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ Read More »

error: Content is protected !!
Scroll to Top