ಪುತ್ತೂರು

ಪುತ್ತೂರು ಪತ್ರಿಕಾಭವನದಲ್ಲಿ ಕ್ಷಯಮುಕ್ತ ಭಾರತ ಮಾಹಿತಿ ಶಿಬಿರ

ಪುತ್ತೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪುತ್ತೂರು ಕ್ಷಯರೋಗ ಚಿಕಿತ್ಸಾ ಘಟಕ ., ರಾಷ್ಟ್ರೀಯ ಕ್ಷಯ ನಿರ್ಮೂಲನಾ ಸಮಿತಿ ಹಾಗೂ ತಾಲೂಕು ಕಾರ್ಯನಿರತ ಪತ್ರಕರ್ತ ರ ಸಂಘದ ವತಿಯಿಂದ ಕ್ಷಯಮುಕ್ತ ಭಾರತ-ಮಾಹಿತಿ ಶಿಬಿರ ಮಂಗಳವಾರ ಪುತ್ತೂರು ಪತ್ರಿಕಾ ಭವನದಲ್ಲಿ ನಡೆಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಶಿಬಿರ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಒತ್ತಡದ ಧಾವಂತದಿಂದ ಪತ್ರಕರ್ತರು ತಮ್ಮ ಜೀವನ ಗೊನೆಗೊಳಿಸುವ ತನಕದ ಪರಿಸ್ಥಿತಿ ಉಂಟಾಗಿದೆ. ಕಳೆದ ಕೋವಿಡ್ ಸಂದರ್ಭದಲ್ಲಿ ಹಲವಾರು […]

ಪುತ್ತೂರು ಪತ್ರಿಕಾಭವನದಲ್ಲಿ ಕ್ಷಯಮುಕ್ತ ಭಾರತ ಮಾಹಿತಿ ಶಿಬಿರ Read More »

ಪೊಲೀಸ್ ದೌರ್ಜನ್ಯಕ್ಕೊಳಗಾದವರಿಗೆ ಪುತ್ತಿಲ ಪರಿವಾರದಿಂದ ಒಂದು ಲಕ್ಷ ರೂ. ಸಹಾಯಧನ

ಪುತ್ತೂರು: ಚುನಾವಣೆ ಕಳೆದ ನಂತರ ಬ್ಯಾನರ್ ವಿಷಯಕ್ಕೆ ಸಂಬಂಧಿಸಿದಂತೆ  ಅಮಾನುಷವಾಗಿ ಪೊಲೀಸ್ ದೌರ್ಜನ್ಯಕ್ಕೊಳಕ್ಕಾದ ಕಾರ್ಯಕರ್ತರನ್ನು ಪುತ್ತಿಲ ಪರಿವಾರದ ವತಿಯಿಂದ ಅವರ ಮನೆಗೆ ಭೇಟಿಯಾಗಿ ಆರೋಗ್ಯ ವಿಚಾರಿಸಲಾಯಿತು. ಈಗಾಗಲೇ ಆಸ್ಪತ್ರೆಯ ಹಾಗೂ ಇತರ ಖರ್ಚು  ವೆಚ್ಚ  ನೀಡಲಾಗಿದ್ದು, ದೌರ್ಜನ್ಯಕ್ಕೊಳಕ್ಕಾದವರು ಕೆಲ ತಿಂಗಳು ಕೆಲಸಕ್ಕೆ ಹೋಗಲು ಧ್ಯವಾಗದಿರುವುದರಿಂದ  ಅವರ ದೈನಂದಿನ ಖರ್ಚು ವೆಚ್ಚಗಳಿಗಾಗಿ ಈ ಸಂದರ್ಭ ಪುತ್ತಿಲ ಪರಿವಾರದ ವತಿಯಿಂದ ಸಂಗ್ರಹಿಸಿದ ಒಂದು ಲಕ್ಷ ರೂಪಾಯಿ ನೀಡಲಾಯಿತು.  ಈ ಸಂದರ್ಭ ಅರುಣ್ ಕುಮಾರ್ ಪುತ್ತಿಲ,  ಪುತ್ತಿಲ ಪರಿವಾರದ ಅಧ್ಯಕ್ಷರಾದ ಪ್ರಸನ್ನ

ಪೊಲೀಸ್ ದೌರ್ಜನ್ಯಕ್ಕೊಳಗಾದವರಿಗೆ ಪುತ್ತಿಲ ಪರಿವಾರದಿಂದ ಒಂದು ಲಕ್ಷ ರೂ. ಸಹಾಯಧನ Read More »

ನಾಳೆ (ಜೂ.14) : ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅನುಜ್ಞಾ ಕಲಶ

ಪುತ್ತೂರು: ಕೊಳ್ತಿಗೆ ಗ್ರಾಮದ ಪಾಲ್ತಾಡಿ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಅನುಜ್ಞಾ ಕಲಶ ಜೂ.14 ಬುಧವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ 8.30 ರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹ ವಾಚನ, ಮಹಾಗಣಪತಿ ಹೋಮ, ಅನುಜ್ಞಾ ಕಲಶ ಪೂಜೆ, ಮಧ್ಯಾಹ್ನ 11.10 ರ ಸಿಂಹಲಗ್ನ ಶುಭ ಮುಹೂರ್ತದಲ್ಲಿ ಶ್ರೀ ದೇವರಿಗೆ ಅನುಜ್ಞಾ ಪ್ರಾರ್ಥನೆ, ಅನುಜ್ಞಾ ಕಲಶಾಭಿಷೇಕ ನಡೆಯಲಿದೆ. 12.30 ರಿಂದ ಮಹಾಪೂಜೆ,

ನಾಳೆ (ಜೂ.14) : ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅನುಜ್ಞಾ ಕಲಶ Read More »

ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಹಾಯಧನ ವಿತರಣೆ

ಸುಳ್ಯ: ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ಕಳೆದ 6 ವರ್ಷಗಳಿಂದ ದಾನಿಗಳ ಸಹಕಾರದಲ್ಲಿ ಹಲವಾರು ಬಡ ಜನರ ಕಷ್ಟಕ್ಕೆ ನೇರವಾಗುತ್ತಿದ್ದು, ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಸನ್ನಿದಾನದಲ್ಲಿ  ಅಂಗವೈಕಲ್ಯದಿಂದ ಬಲಳುತ್ತಿರುವ ಹರೀಶ್. ಕೆ ಎಂಬ ಚಿತ್ರಕಲಾವಿದನಿಗೆ ಸಹಾಯ ಧನವಾಗಿ 10200 ರೂ ಚೆಕ್ಕನ್ನು ಹಸ್ತಾಂತರಿಸಿದರು. ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಹಾಗೂ ಪಂಜ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರಾ ಸಂದರ್ಭದಲ್ಲಿ ಜಲ ಶ್ರೀ ಪ್ರತಿಷ್ಠಾನ ಕಡ್ಲಾರು ಅವರ ಸಹಕಾರದಲ್ಲಿ ಅಶಕ್ತ ಕಲಾವಿದರಿಗೆ ನೆರವಾಗಲು ನಡೆಸಿದ

ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಹಾಯಧನ ವಿತರಣೆ Read More »

ಪುತ್ತಿಲ ಪರಿವಾರ ನಿಯೋಗದಿಂದ ವಿಟ್ಲ ಕನ್ಯಾನ ಭಾರತ್ ಸೇವಾ ಆಶ್ರಮಕ್ಕೆ ಭೇಟಿ

ವಿಟ್ಲ: ವಿಟ್ಲ ಕನ್ಯಾನದಲ್ಲಿರುವ ಭಾರತ್ ಸೇವಾ ಆಶ್ರಮಕ್ಕೆ ಪುತ್ತಿಲ ಪರಿವಾರದ ನಿಯೋಗ ಭೇಟಿ  ನೀಡಿ ಪುತ್ತಿಲ ಪರಿವಾರದ ವತಿಯಿಂದ ರೂ. 25000 ದೇಣಿಗೆಯನ್ನು ನೀಡಲಾಯಿತು. ಈ ಆಶ್ರಮದಲ್ಲಿರುವ ಜನಸಂಘ ಕಾಲದಿಂದಲೂ ನಿಶ್ವಾರ್ಥ ಸೇವೆಯನ್ನು ಸಲ್ಲಿಸಿರುವ ಹಿಂದೂ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಗ್ರಂಥಗಳ ಬಗ್ಗೆ ಅಪಾರ ಪಾಂಡಿತ್ಯವನ್ನು ಹೊಂದಿರುವ ಶಶಿಕಾಂತ್ ಬೋರ್ಕರ್ ಇವರನ್ನು ಸನ್ಮಾನಿಸಿ ವೈಯಕ್ತಿಕ ನೆಲೆಯಲ್ಲಿ ರೂ.20000 ನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ,  ಪುತ್ತಿಲ ಪರಿವಾರ ಅಧ್ಯಕ್ಷ ಪ್ರಸನ್ನ ಮಾರ್ತಾ ಹಾಗೂ

ಪುತ್ತಿಲ ಪರಿವಾರ ನಿಯೋಗದಿಂದ ವಿಟ್ಲ ಕನ್ಯಾನ ಭಾರತ್ ಸೇವಾ ಆಶ್ರಮಕ್ಕೆ ಭೇಟಿ Read More »

ರಾಷ್ಟ್ರಮಟ್ಟದ 18ನೇ ರಾಷ್ಟ್ರೀಯ ಜೀವರಕ್ಷಕ ಈಜು ಪಂದ್ಯಾಟದಲ್ಲಿ ಲಿಖಿತ್ ರಾಮಚಂದ್ರರಿಗೆ 4 ಚಿನ್ನ, 1 ಬೆಳ್ಳಿ ಪದಕ

ಪುತ್ತೂರು: ಸಂತ ಫಿಲೋಮಿನಾ ಆಂಗ್ಲಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಲಿಖಿತ್ ರಾಮಚಂದ್ರ ಬೆಂಗಳೂರಿನ ವಿಲ್ಸನ್ ಗಾರ್ಡನ್ ನಲ್ಲಿರುವ ರೇ  ಸೆಂಟರ್ ಈಜುಕೊಳದಲ್ಲಿ ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಭಾರಿಗೆ  “ರೆಸ್ಕ್ಯೂ ಇಂಡಿಯಾ -2023” ಹೆಸರಿನಲ್ಲಿ ನಡೆದ ರಾಷ್ಟ್ರಮಟ್ಟದ 18ನೇ ರಾಷ್ಟ್ರೀಯ ಜೀವರಕ್ಷಕ ಈಜು ಪಂದ್ಯಾಟದಲ್ಲಿ ಭಾಗವಹಿಸಿ 4 ಚಿನ್ನ ಮತ್ತು 1 ಬೆಳ್ಳಿ ಪದಕವನ್ನು ಪಡೆದಿರುತ್ತಾರೆ. ಅವರು ಪುತ್ತೂರಿನ ಶಿವರಾಮ ಕಾರಂತ ಭಾಲಾವನದ ಈಜುಕೊಳದಲ್ಲಿ ಈಜು ತರಬೇತುದಾರ ಪಾರ್ಥ ವಾರಣಾಸಿ ನಿರ್ದೇಶನದಲ್ಲಿ ಜೀವ ರಕ್ಷಕ ಈಜು ತರಬೇತುದಾರ

ರಾಷ್ಟ್ರಮಟ್ಟದ 18ನೇ ರಾಷ್ಟ್ರೀಯ ಜೀವರಕ್ಷಕ ಈಜು ಪಂದ್ಯಾಟದಲ್ಲಿ ಲಿಖಿತ್ ರಾಮಚಂದ್ರರಿಗೆ 4 ಚಿನ್ನ, 1 ಬೆಳ್ಳಿ ಪದಕ Read More »

ಅಕ್ಷಯ ಕಾಲೇಜಿನಲ್ಲಿ ’ಅಕ್ಷಯ ವೈಭವ- 2023 ವಾರ್ಷಿಕೋತ್ಸವ  ಸಮಾರಂಭ

ಪುತ್ತೂರು: ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಂಪ್ಯ ಅಕ್ಷಯ ಕಾಲೇಜಿನಲ್ಲಿ  ’ಅಕ್ಷಯ ವೈಭವ’ ವಾರ್ಷಿಕೋತ್ಸವ  ಸಮಾರಂಭ ನಡೆಯಿತು. ಮಂಗಳೂರು ವಿ.ವಿ ಉಪಕುಲಪತಿ ಡಾ. ಜಯರಾಜ್ ಅಮೀನ್ ದೀಪ ಬೆಳಗಿಸಿ ಉದ್ಘಾಟಿಸಿ, ಅತೀ ಕಡಿಮೆ ಸಮಯದಲ್ಲಿ ವೃತ್ತಿಪರ ಕೋರ್ಸ್‌ನೊಂದಿಗೆ ಕಾಲೇಜು ಪ್ರಾರಂಭಿಸಿ, ವಿ.ವಿ, ರಾಷ್ಟ್ರ-ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಮಾಡಿರುವ ಸಾಧನೆ ಕಾಲೇಜಿನ ಗರಿಮೆಯನ್ನು ಹೆಚ್ಚಿಸಿದೆ. ಪ್ರಸ್ತುತ ಸಮಾಜದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯೊಂದಿಗೆ ಜೀವನಕ್ಕೆ ಬೇಕಾದ ಕೌಶಲ್ಯ ನೀಡುವಲ್ಲಿ ಅಕ್ಷಯದಂತಹ ಸಂಸ್ಥೆಯ ಅವಶ್ಯಕತೆಯಿದೆ.

ಅಕ್ಷಯ ಕಾಲೇಜಿನಲ್ಲಿ ’ಅಕ್ಷಯ ವೈಭವ- 2023 ವಾರ್ಷಿಕೋತ್ಸವ  ಸಮಾರಂಭ Read More »

ವಿವೇಕಾನಂದ ಮಹಾವಿದ್ಯಾಲಯದಲ್ಲಿ ’ಸಪ್ತಪರ್ಣೋತ್ಸವ’ ವಿದ್ಯಾರ್ಥಿ ಸಂಘ ದಿನಾಚರಣೆ

ಪುತ್ತೂರು: ದೇಶದ ಬಗೆಗೆ ಪ್ರತಿಯೊಬ್ಬರಲ್ಲೂ ಸದ್ಭಾವನೆ ಮೂಡಬೇಕು. ನಮ್ಮ ದೇಶದ ವಿಚಾರ ಬಂದಾಗ ಎಲ್ಲರೂ ಒಟ್ಟಾಗಿ ಹೋರಾಡಬೇಕು.ಪರಸ್ಪರ ಪ್ರೀತಿ ಪ್ರೇಮ ವನ್ನು ಹಂಚಿಕೊಂಡು ಬಾಳಬೇಕು ಹಾಗೂ ಭವ್ಯ ಭಾರತವನ್ನು ಕಟ್ಟುವಲ್ಲಿ ಸಫಲರಾಗಿ ಸದೃಢ ಪ್ರಜೆಗಳಾಗಿ ಪ್ರಜ್ವಲಿಸಬೇಕು ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಸ್ವಾಯತ್ತ ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆದ ’ಸಪ್ತಪರ್ಣೋತ್ಸವ’ ವಿದ್ಯಾರ್ಥಿ ಸಂಘದ ದಿನಾಚರಣೆಯಲ್ಲಿ

ವಿವೇಕಾನಂದ ಮಹಾವಿದ್ಯಾಲಯದಲ್ಲಿ ’ಸಪ್ತಪರ್ಣೋತ್ಸವ’ ವಿದ್ಯಾರ್ಥಿ ಸಂಘ ದಿನಾಚರಣೆ Read More »

ಬೋಳೋಡಿ ಎಂಆರ್‌ಎಫ್ ಘಟಕಕ್ಕೆ ಶಾಸಕರ ಭೇಟಿ | ಕಾಮಗಾರಿ ವೀಕ್ಷಣೆ

ಪುತ್ತೂರು: ಕೆದಂಬಾಡಿ ಗ್ರಾಮದ ಬೋಳೋಡಿಯಲ್ಲಿರುವ ಎಂಆರ್‌ಎಫ್ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಪುತ್ತೂರು ಶಾಸಕರಾದ ಅಶೋಕ್ ರೈ ಭೇಟಿ ನೀಡಿ ಕಾಮಗಾರಿ ಪ್ರಗತಿಪರಿಶೀಲನೆ ಮಾಡಿದರು. ಕಾಮಗಾರಿ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದ್ದು ಇದರ ಉದ್ಘಾಟನಾ ಕಾರ್ಯವೂ ನಡೆಯಲಿದೆ. ಅಕ್ಕಪಕ್ಕದ  ಮೂರು ತಾಲೂಕುಗಳ ತ್ಯಾಜ್ಯಗಳನ್ನು ಇಲ್ಲಿ ವಿಲೇವಾರಿ ಮಾಡಿ ಅದನ್ನು ಮರುಬಳಕೆ ಮಾಡುವ ತ್ಯಾಜ್ಯ ನಿರ್ವಹಣಾ ಘಟಕ ಇದಾಗಿದ್ದು ಗ್ರಾಪಂ ಗಳ ಅನುದಾನದಿಂದ ಇಲ್ಲಿ ಘಟಕವನ್ನು ನಿರ್ಮಿಸಲಾಗಿದೆ. ಶಾಸಕರ ಜೊತೆ ಕೆದಂಬಾಡಿ ಗ್ರಾಮದ ಕಾಂಗ್ರೆಸ್ ಪ್ರಮುಖರಾದ ಬೋಳೋಡಿ ಚಂಧ್ರಹಾಸ ರೈ, ಪುರಂದರ್

ಬೋಳೋಡಿ ಎಂಆರ್‌ಎಫ್ ಘಟಕಕ್ಕೆ ಶಾಸಕರ ಭೇಟಿ | ಕಾಮಗಾರಿ ವೀಕ್ಷಣೆ Read More »

ಕೆಯ್ಯೂರು ವಲಯ ಕಾಂಗ್ರೆಸ್ ಕಾರ್ಯಕರ್ತರಸಭೆ

ಪುತ್ತೂರು: ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ ನಮಗೊಂದು ಮೂರು ಸೆಂಟ್ಸ್ ಜಾಗ ಕೊಡಿ ಎಂದು ಅನೇಕ ಅರ್ಜಿಗಳು ಗ್ರಾಮೀಣ ಭಾಗದಿಂದ ಬಂದಿದ್ದು ಪ್ರತೀ ಗ್ರಾಮದಲ್ಲಿ ಎರಡರಿಂದ ಮೂರು ಎಕ್ರೆ ಜಾಗ ಗುರುತಿಸಿ ಅದನ್ನು ಮನೆ ಇಲ್ಲದ ಬಡವರಿಗೆ ಹಂಚಿಕೆ ಮಾಡುವಲ್ಲಿ ಕ್ರಮಕೈಗೊಳ್ಳಲಿದ್ದೇನೆ ಈ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಿದ್ದು ಈಗಾಗಲೇ ಜಾಗ ಹುಡಕುವಂತೆ ಕಂದಾಯ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಕೆಯ್ಯೂರಿನಲ್ಲಿ ಸೋಮವಾರ ನಡೆದ ಕೆಯ್ಯೂರು ವಲಯ ಕಾಂಗ್ರೆಸ್

ಕೆಯ್ಯೂರು ವಲಯ ಕಾಂಗ್ರೆಸ್ ಕಾರ್ಯಕರ್ತರಸಭೆ Read More »

error: Content is protected !!
Scroll to Top