ಪುತ್ತೂರು

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿ ವ್ಹೀಲ್ ಚೇರ್, ವಾಟರ್ ಬೆಡ್ ವಿತರಣೆ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿ ನಡೆಯಲು ಅಸಾಧ್ಯವಾಗಿರುವ ವಾಸು ಸಫಲ್ಯ, ಪೂವಕ್ಕ, ಇಬ್ರಾಹಿಂ ಅವರಿಗೆ ವೀಲ್ ಚೇರ್ ಹಾಗೂ ಮೋನಪ್ಪ ಗೌಡರಿಗೆ ವಾಟರ್ ಬೆಡ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ವಲಯಾಧ್ಯಕ್ಷ ಮಾಧವ‌ ರೈ ಕುಂಬ್ರ, ವಲಯ ಮೇಲ್ವಿಚಾರಕಿ ಮೋಹಿನಿ ಎಸ್ ಗೌಡ, ಒಕ್ಕೂಟ ಅಧ್ಯಕ್ಷ ಸಂದೀಪ್ ಅರ್ಯಾಪು, ಸೇವಾಪ್ರತಿನಿಧಿ ನಳಿನಾಕ್ಷಿ, ಒಕ್ಕೂಟದ ಪದಾಧಿಕಾರಿಗಳಾದ  ರವಿಕಲ, ಚಂದ್ರ  ಯಸ್. ಮೋಹನ್. ಶೀನಪ್ಪ ಭಾಗವಹಿಸಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿ ವ್ಹೀಲ್ ಚೇರ್, ವಾಟರ್ ಬೆಡ್ ವಿತರಣೆ Read More »

ಕಬಕ ಗ್ರಾಮ ಪಂಚಾಯಿತಿಗೆ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಪ್ರಶಸ್ತಿ

ಪುತ್ತೂರು : ಪುತ್ತೂರು ತಾಲೂಕಿನ ಕಬಕ ಗ್ರಾಪಂಗೆ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2023 ಪ್ರಶಸ್ತಿ ಲಭಿಸಿದೆ. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ರಾಜ್ಯ ನಿರ್ದೇಶಕರಿಂದ ಕಬಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲ, ನಿಕಟಪೂರ್ವ ಅಧ್ಯಕ್ಷ ವಿನಯಕುಮಾರ್ ಮತ್ತು ಪಿಡಿಒ ಸೋಮವಾರ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್‍. ಉಪಸ್ಥಿತರಿದ್ದರು.

ಕಬಕ ಗ್ರಾಮ ಪಂಚಾಯಿತಿಗೆ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಪ್ರಶಸ್ತಿ Read More »

ಜನಸಾಮಾನ್ಯರಿಗೆ ನೀಡುವ ಸೇವೆಗಳ ಜ್ಞಾನ ಪಡೆದುಕೊಳ್ಳಿ | ಪುತ್ತೂರಿನಲ್ಲಿ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಸಂಸದ ನಳಿನ್ ಕುಮಾರ್ ಕಟೀಲ್ | ಅಭಿವೃದ್ಧಿ, ಸಂಘಟನೆ ಜೊತೆಗೆ ವ್ಯಕ್ತಿತ್ವ ಬೆಳೆಸಿಕೊಳ್ಳಿ: ಸಂಜೀವ ಮಠಂದೂರು

ಪುತ್ತೂರು: ಗ್ರಾ.ಪಂ. ಅಧ್ಯಕ್ಷರು ಅಥವಾ ಸದಸ್ಯರಿಗೆ ತಮ್ಮ ಜವಾಬ್ದಾರಿಯ ಅರಿವಿರಬೇಕು. ಪಂಚಾಯತ್ ಕಾಯಿದೆಯ ತಿಳುವಳಿಕೆ, ಯೋಜನೆಗಳ ಮಾಹಿತಿಗಳನ್ನು ತಿಳಿದುಕೊಂಡು ಜನಸಾಮಾನ್ಯರಿಗೆ ನೀಡಬಹುದಾದ ಸೇವೆಗಳ ಜ್ಞಾನ ಹೊಂದಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಬಿಜೆಪಿ ಗ್ರಾಮಾಂತರ ಮಂಡಲದ ವತಿಯಿಂದ ಸೋಮವಾರ ನಗರದ ತೆಂಕಿಲ ಚುಂಚಶ್ರೀ ಸಭಾಭವನದಲ್ಲಿ ಗ್ರಾಮ ಪಂಚಾಯತ್ಗಳ ಮಾಜಿ ಮತ್ತು ಹಾಲಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಆಯೋಜಿಸಲಾದ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಷ್ಠೆ, ದೈಹಿಕ ಶಕ್ತಿ, ಆರ್ಥಿಕ

ಜನಸಾಮಾನ್ಯರಿಗೆ ನೀಡುವ ಸೇವೆಗಳ ಜ್ಞಾನ ಪಡೆದುಕೊಳ್ಳಿ | ಪುತ್ತೂರಿನಲ್ಲಿ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಸಂಸದ ನಳಿನ್ ಕುಮಾರ್ ಕಟೀಲ್ | ಅಭಿವೃದ್ಧಿ, ಸಂಘಟನೆ ಜೊತೆಗೆ ವ್ಯಕ್ತಿತ್ವ ಬೆಳೆಸಿಕೊಳ್ಳಿ: ಸಂಜೀವ ಮಠಂದೂರು Read More »

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ಬಿ.ಸಿ.ಟ್ರಸ್ಟ್ ವತಿಯಿಂದ ಮಧ್ಯವರ್ಜನ ಶಿಬಿರ | ಶ್ರೀ ಮಹಾಬಲೇಶ್ವರ  ಸ್ವಾಮೀಜಿ ಆಶೀರ್ವಚನ

ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವಿಟ್ಲ ವತಿಯಿಂದ ವಿಟ್ಲದ  ಅಕ್ಷಯ ಸಭಾಭವನದಲ್ಲಿ  ನಡೆಯುತ್ತಿರುವ 1722 ನೇ ಮದ್ಯವರ್ಜನ ಶಿಬಿರದ 3 ನೇ ದಿನದ ಕಾರ್ಯಕ್ರಮ ನಡೆಯಿತು. ಶಿಬಿರದಲ್ಲಿ ಕಣಿಯೂರು  ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ  ಸ್ವಾಮೀಜಿ ಆಶೀರ್ವಾಚನ ನೀಡಿದರು. ಕಾರ್ಯಕ್ರಮದ ಜವಾಬ್ದಾರಿಯನ್ನು ಪೆರ್ನೆವಲಯದ ಪ್ರಗತಿ ಬಂದು ಸ್ವಸಹಾಯ  ಸಂಘದವರು ಮತ್ತು  ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ  ಸದಸ್ಯರು ವಹಿಸಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ಬಿ.ಸಿ.ಟ್ರಸ್ಟ್ ವತಿಯಿಂದ ಮಧ್ಯವರ್ಜನ ಶಿಬಿರ | ಶ್ರೀ ಮಹಾಬಲೇಶ್ವರ  ಸ್ವಾಮೀಜಿ ಆಶೀರ್ವಚನ Read More »

ಪುತ್ತೂರು ಶ್ರೀ ಸತ್ಯಸಾಯಿ ಸೇವಾ ಸಮಿತಿ ಹಾಗೂ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಧ್ಯಾತ್ಮಿಕ ಶಿಕ್ಷಣ ಶಿಬಿರ

ಸವಣೂರು : ಪುತ್ತೂರು ಶ್ರೀ ಸತ್ಯಸಾಯಿ ಸೇವಾ ಸಮಿತಿ ಹಾಗೂ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಭಗವಾನ್ ಶ್ರೀಸತ್ಯಸಾಯಿ ಬಾಬಾರವರ ದಿವ್ಯ ಅನುಗ್ರಹದೊಂದಿಗೆ ವಿದ್ಯಾರಶ್ಮಿ ಪದವಿ ಕಾಲೇಜಿನ ವಿದ್ಯಾಸಿಂಚನ ಸಭಾಂಗಣದಲ್ಲಿ ಎರಡು ದಿನಗಳ ಆಧ್ಯಾತ್ಮಿಕ ಶಿಕ್ಷಣ ಶಿಬಿರ ನಡೆಯಿತು. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ  ಅಶ್ವಿನ್ ಎಲ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ವೈಯಕ್ತಿಕ ಬೆಳವಣಿಗೆಗೆ ಆಧ್ಯಾತ್ಮಿಕ ಶಿಕ್ಷಣವು ಪೂರಕವಾದದ್ದು ಇದು ನಮ್ಮನ್ನು ಸನ್ಮಾರ್ಗದ ಕಡೆಗೆ ಕೊಂಡೊಯ್ಯುತ್ತದೆ ಎಂದರು. ಸತ್ಯಸಾಯಿ

ಪುತ್ತೂರು ಶ್ರೀ ಸತ್ಯಸಾಯಿ ಸೇವಾ ಸಮಿತಿ ಹಾಗೂ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಧ್ಯಾತ್ಮಿಕ ಶಿಕ್ಷಣ ಶಿಬಿರ Read More »

ಪುತ್ತೂರು ವಾಣಿಜ್ಯ ಮತ್ತು ವರ್ತಕ ಸಂಘದ ಅಧ್ಯಕ್ಷರಾಗಿ ವಾಮನ್ ಪೈ

ಪುತ್ತೂರು: ಇಲ್ಲಿನ ವಾಣಿಜ್ಯ ಮತ್ತು ವರ್ತಕ ಸಂಘದ ಅಧ್ಯಕ್ಷರಾಗಿ ವಾಮನ್ ಪೈ ಅವರು ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸರ್ವಾನುಮತದಿಂದ ಈ ಆಯ್ಕೆಯನ್ನು ನಡೆಸಲಾಯಿತು. ಪುತ್ತೂರು ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪೆಟ್ರೋಲಿಯಂ ವರ್ತಕರ ಸಂಘದ ಜಿಲ್ಲಾಧ್ಯಕ್ಷನಾಗಿಯೂ ಕೆಲಸ ನಿರ್ವಹಿಸಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾಗಿದ್ದರು. ಬಿರುಮಲೆ ಬೆಟ್ಟ ಅಭಿವೃದ್ಧಿ ಸಮಿತಿಯ ಸದಸ್ಯನಾಗಿಯೂ ಗುರುತಿಸಿಕೊಂಡಿದ್ದಾರೆ. ವಾಮನ್ ಪೈ ಅವರು ಜಿ.ಎಸ್.ಬಿ. ಅಭಿವೃದ್ಧಿ ಸಭಾದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ದರ್ಬೆ

ಪುತ್ತೂರು ವಾಣಿಜ್ಯ ಮತ್ತು ವರ್ತಕ ಸಂಘದ ಅಧ್ಯಕ್ಷರಾಗಿ ವಾಮನ್ ಪೈ Read More »

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ | ಶ್ರೀ ಕೃಷ್ಣನ ವೇಷ  ತೊಟ್ಟು ಸಂಭ್ರಮಿಸಿದ  ಪುಟಾಣಿಗಳು

ಕಾವು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕ್ರೀಡಾಕೂಟ ಹಾಗೂ ಕಾವು ಗೆಳೆಯರ ಬಳಗದ ವತಿಯಿಂದ ಮುದ್ದು ಕೃಷ್ಣ ಸ್ಫರ್ಧೆ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ದೀಪ ಪ್ರಜ್ವಲಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸದಸ್ಯರಾದ ಬಾಲಮುರಳಿ ಸಸ್ಪೆಟ್ಟಿ, ಲಕ್ಷ್ಮಿನಾರಾಯಣ ಭಟ್ ಪೆರ್ನಾಜೆ, ಸುಚೇತಾ ರೈ ಮತ್ತು ಗೀತಾ ಮಾಣಿಯಡ್ಕ ಚೆನ್ನಮಣೆ ಆಡುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ | ಶ್ರೀ ಕೃಷ್ಣನ ವೇಷ  ತೊಟ್ಟು ಸಂಭ್ರಮಿಸಿದ  ಪುಟಾಣಿಗಳು Read More »

ಪುತ್ತೂರಿನಲ್ಲಿ ನ. 15ರಿಂದ 18ರತನಕ ರಾಜ್ಯಮಟ್ಟದ ಕ್ರೀಡಾಕೂಟ | ತಾಲೂಕಿನಾದ್ಯಂತ ತೆರಳುವ ಕ್ರೀಡಾಜ್ಯೋತಿಯಿಂದ ಕ್ರೀಡಾ ಸಂದೇಶದೊಂದಿಗೆ ಸ್ವಾಗತ | ಸಮಾಲೋಚನಾ ಸಭೆಯಲ್ಲಿ ರೂಪುರೇಷೆ ಬಗ್ಗೆ ಮಾಹಿತಿ

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಹಾಗೂ ರಾಮಕೃಷ್ಣ ಪ್ರೌಢಶಾಲೆ ಇವುಗಳ ಜಂಟಿ ಆಶ್ರಯದಲ್ಲಿ ನ. 15ರಿಂದ 18ರತನಕ ನಡೆಯುವ ರಾಜ್ಯ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕ – ಬಾಲಕಿಯರ ಕ್ರೀಡಾಕೂಟದ ಸಮಾಲೋಚನಾ ಸಭೆ ಸೆ. 11 ಸೋಮವಾರ ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ರಾಜ್ಯಮಟ್ಟದ ಕ್ರೀಡಾಕೂಟ ನಡೆಸುವ ಅವಕಾಶ ದೊರೆತಿರುವುದು ಪುತ್ತೂರಿನ ಯೋಗ. ಇದಕ್ಕಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಕ್ರೀಡಾಪಟುಗಳಿಗೆ ಸೂಕ್ತ ವ್ಯವಸ್ಥೆ

ಪುತ್ತೂರಿನಲ್ಲಿ ನ. 15ರಿಂದ 18ರತನಕ ರಾಜ್ಯಮಟ್ಟದ ಕ್ರೀಡಾಕೂಟ | ತಾಲೂಕಿನಾದ್ಯಂತ ತೆರಳುವ ಕ್ರೀಡಾಜ್ಯೋತಿಯಿಂದ ಕ್ರೀಡಾ ಸಂದೇಶದೊಂದಿಗೆ ಸ್ವಾಗತ | ಸಮಾಲೋಚನಾ ಸಭೆಯಲ್ಲಿ ರೂಪುರೇಷೆ ಬಗ್ಗೆ ಮಾಹಿತಿ Read More »

ಹಿರಿಯ ನಾಟಿ ವೈದ್ಯೆ ಲಕ್ಷ್ಮೀ ಪೆರಿಯತ್ತೋಡಿ ನಿಧನ

ಪುತ್ತೂರು: ಹಿರಿಯ ನಾಟಿ ವೈದ್ಯೆ ಲಕ್ಷ್ಮೀ ಪೆರಿಯತ್ತೋಡಿ (95 ವರ್ಷ) ಅವರು ಸೆ. 10ರಂದು ತಮ್ಮ ಸ್ವ ಗೃಹದಲ್ಲಿ ನಿಧನ ಹೊಂದಿದರು. ಹಲವಾರು ಖಾಯಿಲೆಗಳಿಗೆ ನಾಟಿ ಚಿಕಿತ್ಸೆ ನೀಡುತ್ತಿದ್ದರು. ಮೃತರು ನಾಲ್ಕು ಹೆಣ್ಣು ಮಕ್ಕಳು, ನಾಲ್ಕು ಗಂಡು ಮಕ್ಕಳನ್ನು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಹಿರಿಯ ನಾಟಿ ವೈದ್ಯೆ ಲಕ್ಷ್ಮೀ ಪೆರಿಯತ್ತೋಡಿ ನಿಧನ Read More »

ಬಂಟ್ವಾಳ: ಯುವಕನಿಗೆ ತಂಡದಿಂದ ಹಲ್ಲೆ

ಬಂಟ್ವಾಳ: ಯುವಕನ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಬಂಟ್ಟಾಳದ ಮೈಂದಾಳ ಎಂಬಲ್ಲಿ ನಡೆದಿದೆ.. ಮೈಂದಾಳ ನಿವಾಸಿ ನಿಸಾರ್ ಎಂಬವರ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಶನಿವಾರ ರಾತ್ರಿ 9.45ರ ಸುಮಾರಿಗೆ ನಿಸಾರ್ ಅಜ್ಜಿ ಮನೆಯಿಂದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವಾಗ ಗುರಿಮಜಲು ಎಂಬಲ್ಲಿ ಆಟೋ ರಿಕ್ಷಾದ ಬಳಿ ನಿಂತಿದ್ದ 5 ಜನರ ಪೈಕಿ ಇಬ್ಬರು ನಿಸಾರ್ ಅವರನ್ನು ಅಡ್ಡ ಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ಸಂದರ್ಭ ರಿಕ್ಷಾದ ಬಳಿ ತಲವಾರು

ಬಂಟ್ವಾಳ: ಯುವಕನಿಗೆ ತಂಡದಿಂದ ಹಲ್ಲೆ Read More »

error: Content is protected !!
Scroll to Top