ಪುತ್ತೂರು

ಅಮೆರಿಕದ ಅವಳಿ ಕಟ್ಟಡ ದುರಂತಕ್ಕೆ 22 ವರ್ಷ | ಪುತ್ತೂರಿನಲ್ಲಿ ಹೇಮಂತ್ ಕುಮಾರ್ ಸಂಸ್ಮರಣೆ

ಪುತ್ತೂರು: 2001 ಸೆ. 11ರಂದು ನಡೆದ ನ್ಯೂಯಾರ್ಕ್ ಜಾಗತಿಕ ಕಟ್ಟಡ ದುರಂತದಲ್ಲಿ ಹುತಾತ್ಮರಾದ ಹೇಮಂತ ಕುಮಾರ್ ಸಂಸ್ಮರಣಾ ಕಾರ್ಯಕ್ರಮ ಬಿಲ್ಲವ ಸಂಘದ ಹೇಮಂತ ಕುಮಾರ್ ಸಭಾಭವನದಲ್ಲಿ ಜರಗಿತು. ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಫ ಮತ್ತು ದಿ| ಹೇಮಂತ ಕುಮಾರ್ ಸ್ಮಾರಕ ಸಮಿತಿ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದಲ್ಲಿ ಪೂಜೆ ನೇರವೇರಿಸಿ, ದೀಪ ಬೆಳಗಿಸಿ ಹೇಮಂತ ಕುಮಾರ್ ತೈಲಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಈ ಸಂದರ್ಭ ಹೇಮಂತ ಕುಮಾರ್ ಅವರ ತಂದೆ ಪಿ. ಆನಂದ ಟೈಲರ್, […]

ಅಮೆರಿಕದ ಅವಳಿ ಕಟ್ಟಡ ದುರಂತಕ್ಕೆ 22 ವರ್ಷ | ಪುತ್ತೂರಿನಲ್ಲಿ ಹೇಮಂತ್ ಕುಮಾರ್ ಸಂಸ್ಮರಣೆ Read More »

ರಸ್ತೆ ಬದಿ ತ್ಯಾಜ್ಯ ಎಸೆದವರಿಗೆ ದಂಡ ವಿಧಿಸಿದ ಗ್ರಾಪಂ | ವಾಹನದಲ್ಲಿ ಬಂದು ತ್ಯಾಜ್ಯ ಎಸೆದಿದ್ದ ಹನೀಫ್!

ಉಪ್ಪಿನಂಗಡಿ: ರಸ್ತೆ ಬದಿ ತ್ಯಾಜ್ಯ ಎಸೆದು ಹೋಗಿದ್ದ ಸಾರ್ವಜನಿಕರೋರ್ವರಿಗೆ 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ದಂಡ ವಿಧಿಸಿದೆ. ಹನೀಫ್ ಎಂಬವರು ತ್ಯಾಜ್ಯ ಎಸೆದಿರುವುದನ್ನು ದಾಖಲೆಗಳಿಂದ ಖಚಿತ ಪಡಿಸಿಕೊಂಡ ಗ್ರಾಮ ಪಂಚಾಯತ್ ಪಿಡಿಓ ಸತೀಶ್ ಬಂಗೇರ ಅವರು 5 ಸಾವಿರ ರೂ. ದಂಡ ವಿಧಿಸಿದ್ದಾರೆ. ಕರ್ವೇಲು – ಶಾಂತಿನಗರ ರಸ್ತೆ ನಡುವೆ ವಾಹನದಲ್ಲಿ ಬಂದು ತ್ಯಾಜ್ಯ ಎಸೆಯಲಾಗಿತ್ತು.

ರಸ್ತೆ ಬದಿ ತ್ಯಾಜ್ಯ ಎಸೆದವರಿಗೆ ದಂಡ ವಿಧಿಸಿದ ಗ್ರಾಪಂ | ವಾಹನದಲ್ಲಿ ಬಂದು ತ್ಯಾಜ್ಯ ಎಸೆದಿದ್ದ ಹನೀಫ್! Read More »

ಸೌಜನ್ಯ ಮನೆಗೆ ಭೇಟಿ ನೀಡಿದ ವಿಹಿಂಪ, ಬಜರಂಗದಳ ಪ್ರಮುಖರು | ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಲು 4 ದಿನ ಮಾತ್ರ ಬಾಕಿ

ಬೆಳ್ತಂಗಡಿ: ಸೌಜನ್ಯ ಪ್ರಕರಣದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿ, ಮನೆಯವರೇ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು. ಹೀಗೆ ಮೇಲ್ಮನವಿ ಸಲ್ಲಿಸಲು 4 ದಿನಗಳು ಮಾತ್ರ ಬಾಕಿ ಉಳಿದಿದ್ದು, ದಯಮಾಡಿ ಅರ್ಜಿ ಸಲ್ಲಿಸಿ ಎಂದು ಸೌಜನ್ಯ ಮನೆಗೆ ಭೇಟಿ ನೀಡಿದ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಪ್ರಮುಖರು ವಿನಂತಿಸಿದರು. ಸೌಜನ್ಯ ಪ್ರಕರಣದ ವಿಚಾರಣೆ ಆಗ್ರಹಿಸಿ, ಗಿರೀಶ ಭಾರದ್ವಾಜ್ , ನವೀನ್ ಕುಮಾರ್ ನೆರಿಯ ಬೆಳ್ತಂಗಡಿ , ವಿನಾಯಕ ಫ್ರೆಂಡ್ಸ್ ಟ್ರಸ್ಟ್ ಬಲ್ನಾಡು ಪುತ್ತೂರು ಒಟ್ಟಾಗಿ ಸಾರ್ವಜನಿಕ ಹಿತಾಸಕ್ತಿ

ಸೌಜನ್ಯ ಮನೆಗೆ ಭೇಟಿ ನೀಡಿದ ವಿಹಿಂಪ, ಬಜರಂಗದಳ ಪ್ರಮುಖರು | ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಲು 4 ದಿನ ಮಾತ್ರ ಬಾಕಿ Read More »

ಶಾಸಕರ ಕಚೇರಿ ನವೀಕರಣಕ್ಕೆ ತೆರಿಗೆ ಹಣ ದುರುಪಯೋಗ! | ಪ್ರತಿಭಟನೆ ಹಿನ್ನೆಲೆಯಲ್ಲಿ ಸಭೆ ಕರೆದ ಬಿಜೆಪಿ

ಪುತ್ತೂರು: ಶಾಸಕರ ನೂತನ ಕಚೇರಿ ನವೀಕರಣಕ್ಕೆ ತೆರಿಗೆ ಹಣವನ್ನು ಬಳಸಿಕೊಂಡು, ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನೀವಾಸ್ ರಾವ್ ಅಧ್ಯಕ್ಷತೆಯಲ್ಲಿ ನಗರಸಭೆ ಸದಸ್ಯರ ಸಭೆ ಬಿಜೆಪಿ ಕಚೇರಿಯಲ್ಲಿ ನಡೆಯಿತು. ನೂತನ ಕಚೇರಿಗಾಗಿ ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಶಾಸಕರ ಕ್ರಮ ಸರಿಯಲ್ಲ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಇದರೊಂದಿಗೆ, ಅಮೃತ ನಗರೋತ್ಥಾನ ಯೋಜನೆ ಕಾಮಗಾರಿ ಅನುಷ್ಠಾನ ವಿಳಂಬ, ನಗರಸಭಾ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ವಿಳಂಬ ಮೊದಲಾದ

ಶಾಸಕರ ಕಚೇರಿ ನವೀಕರಣಕ್ಕೆ ತೆರಿಗೆ ಹಣ ದುರುಪಯೋಗ! | ಪ್ರತಿಭಟನೆ ಹಿನ್ನೆಲೆಯಲ್ಲಿ ಸಭೆ ಕರೆದ ಬಿಜೆಪಿ Read More »

ಅಗಲಿದ ಸುಧಾಕರ ಶೆಟ್ಟಿಯವರಿಗೆ ಅಂಬಿಕಾದಲ್ಲಿ ನುಡಿನಮನ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ, ಸಾಮಾಜಿಕ ಹಾಗೂ ಧಾರ್ಮಿಕ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಎನ್. ಸುಧಾಕರ ಶೆಟ್ಟಿಯವರ ನಿಧನದಿಂದ ಅಪಾರ ನೋವುಂಟಾಗಿದೆ. ಅಂಬಿಕಾ ವಿದ್ಯಾಲಯ ಪ್ರಾರಂಭವಾಗುವಂದಿನಿಂದ ಅವರ ಸಹಕಾರ ಅವಿಸ್ಮರಣೀಯ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿ ಸಿಗಲಿ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ತಿಳಿಸಿದ್ದಾರೆ. ಅವರು ಅಗಲಿದ ಎನ್. ಸುಧಾಕರ ಶೆಟ್ಟಿಯವರಿಗೆ ಅಂಬಿಕಾ ವಿದ್ಯಾಲಯ ನೆಲ್ಲಿಕಟ್ಟೆಯಲ್ಲಿ ನುಡಿನಮನ ಸಲ್ಲಿಸಿ

ಅಗಲಿದ ಸುಧಾಕರ ಶೆಟ್ಟಿಯವರಿಗೆ ಅಂಬಿಕಾದಲ್ಲಿ ನುಡಿನಮನ Read More »

ಎನ್.‌ಸುಧಾಕರ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಿಪಿಐ(ಎಂ)

ಪುತ್ತೂರು : ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅದ್ಯಕ್ಷ, ಹಿರಿಯ ಜಾತ್ಯಾತೀತ ಪ್ರಗತಿಪರ ಚಿಂತಕರೂ ಆಗಿದ್ದ ಎನ್. ಸುಧಾಕರ ಶೆಟ್ಟಿ ಅವರ ನಿಧನಕ್ಕೆ ಸಿಪಿಐ(ಎಂ) ಪುತ್ತೂರು ತಾಲೂಕು ಸಮಿತಿ ಸಂತಾಪ ಸೂಚಿಸಿ ಶ್ರದ್ದಾಂಜಲಿ ಅರ್ಪಿಸಿದೆ. ಸಿಪಿಐ(ಎಂ) ಪುತ್ತೂರು ತಾಲೂಕು ಕಾರ್ಯದರ್ಶಿ ಪಿ.ಕೆ. ಸತೀಶನ್ ಮಾತನಾಡಿ, ಸುಧಾಕರ ಶೆಟ್ಟಿ ಅವರು ಕಾಂಗ್ರೆಸ್ ಪಕ್ಷದ ಮುಖಂಡ ಎನ್ನುವುದಕ್ಕಿಂತ ಹೆಚ್ಚು, ಪ್ರಗತಿಪರ ಪ್ರಜಾಪ್ರಭುತ್ವ, ಜಾತ್ಯಾತೀತ ನಾಯಕರಾಗಿದ್ದರು. ಅವರ ಅಗಲಿಕೆ ಜಾತ್ಯಾತೀತ ಶಕ್ತಿಗೆ ಅಪಾರ ನಷ್ಟ ಉಂಟು ಮಾಡಿದೆ ಎಂದು ಹೇಳಿದರು.

ಎನ್.‌ಸುಧಾಕರ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಿಪಿಐ(ಎಂ) Read More »

ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಉತ್ಸವ | ಶ್ರೀ ಶಾರದಾ ಭಜನಾ ಮಂದಿರದಲ್ಲಿ ಪೂರ್ವಭಾವಿ ಸಭೆ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವದ ಪೂರ್ವಾಭಾವಿ ಸಭೆಯು ಭಜನಾ ಮಂದಿರದ ಅಧ್ಯಕ್ಷ ಸಾಯಿರಾಮ ರಾವ್ ಅಧ್ಯಕ್ಷತೆಯಲ್ಲಿ ನಡೆಯಿತು. ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ ಮಾತನಾಡಿ, ಕಳೆದ 88 ವರ್ಷದಿಂದ ಮಂದಿರದಲ್ಲಿ ನವರಾತ್ರಿ ಉತ್ಸವ, ಶಾರದೆ ವಿಗ್ರಹ ಪ್ರತಿಷ್ಠೆ, ಶೋಭಾಯಾತ್ರೆ ನಡೆಯುತ್ತಿದೆ. ಈ ವರ್ಷದಿಂದ ಉತ್ಸವಕ್ಕೆ ಹೊಸ ಸಮಿತಿ ರಚನೆ ಮಾಡುವ ಜತೆಗೆ 10 ದಿನದ ನವರಾತ್ರಿ ಉತ್ಸವದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ, ಶೋಭಾಯಾತ್ರೆಯನ್ನು ವಿಜೃಂಭಣೆಯಿಂದ ನಡೆಸಿ

ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಉತ್ಸವ | ಶ್ರೀ ಶಾರದಾ ಭಜನಾ ಮಂದಿರದಲ್ಲಿ ಪೂರ್ವಭಾವಿ ಸಭೆ Read More »

ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವ | ಅಧ್ಯಕ್ಷರಾಗಿ ರಾಜೇಶ್ ಬನ್ನೂರು ಆಯ್ಕೆ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಡೆಯುವ ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಉತ್ಸವ ಸಮಿತಿ ಅಧ್ಯಕ್ಷರಾಗಿ ರಾಜೇಶ್ ಬನ್ನೂರು ಅವರನ್ನು ಆಯ್ಕೆ ಮಾಡಲಾಯಿತು. ಭಜನಾ ಮಂದಿರದ ಅಧ್ಯಕ್ಷ ಸಾಯಿರಾಮ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ ದಯಾನಂದ ಆದರ್ಶ, ನಯನಾ ರೈ ನೆಲ್ಲಿಕಟ್ಟೆ, ಕಾರ್ಯದರ್ಶಿಯಾಗಿ ಅಜಿತ್ ರೈ ಹೊಸಮನೆ, ಜತೆ ಕಾರ್ಯದರ್ಶಿಯಾಗಿ ಎಂ. ಗೋಪಾಲಕೃಷ್ಣ ಈಶ, ಹರಿಪ್ರಸಾದ್ ಶೆಟ್ಟಿ

ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವ | ಅಧ್ಯಕ್ಷರಾಗಿ ರಾಜೇಶ್ ಬನ್ನೂರು ಆಯ್ಕೆ Read More »

ವಿದ್ಯಾರ್ಥಿಗಳ ಮೂಲಕ ಯಕ್ಷಗಾನ ಕಲೆ ಬೆಳೆಸುವುದು ಇಂದಿನ ಅಗತ್ಯ | ಮಾಣಿಲದಲ್ಲಿ ಯಕ್ಷ ಶಿಕ್ಷಣ, ನಾಟ್ಯ ತರಬೇತಿ ಶಿಕ್ಷಣ ಉದ್ಘಾಟಿಸಿ ರಮೇಶ್ ಮಂಜೇಶ್ವರ

ಮಾಣಿಲ: ಯಕ್ಷಗಾನ ಕಲೆಯ ಅಭಿಮಾನವನ್ನು ವಿದ್ಯಾರ್ಥಿಗಳಲ್ಲಿ  ಬೆಳೆಸುವುದು ಇಂದಿನ ಅಗತ್ಯ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಮಹಾ ಪೋಷಕ, ಯಕ್ಷಾಭಿಮಾನಿ ರಮೇಶ್ ಮಂಜೇಶ್ವರ ಹೇಳಿದರು. ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರಾಯೋಜಿತ ಉಚಿತ ಯಕ್ಷಧ್ರುವ – ಯಕ್ಷ ಶಿಕ್ಷಣ, ನಾಟ್ಯ ತರಬೇತಿ ಶಿಕ್ಷಣ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಯಕ್ಷನಾಟ್ಯ ತರಗತಿಯನ್ನು ಫೌಂಡೇಶನ್ ವಿಟ್ಲ ಘಟಕದ ಗೌರವಾಧ್ಯಕ್ಷ, ವಿಟ್ಲ ಅರಮನೆಯ ಕೃಷ್ಣಯ್ಯ ತರಗತಿ ಉದ್ಘಾಟಿಸಿ ಶುಭ ಹಾರೈಸಿದರು.

ವಿದ್ಯಾರ್ಥಿಗಳ ಮೂಲಕ ಯಕ್ಷಗಾನ ಕಲೆ ಬೆಳೆಸುವುದು ಇಂದಿನ ಅಗತ್ಯ | ಮಾಣಿಲದಲ್ಲಿ ಯಕ್ಷ ಶಿಕ್ಷಣ, ನಾಟ್ಯ ತರಬೇತಿ ಶಿಕ್ಷಣ ಉದ್ಘಾಟಿಸಿ ರಮೇಶ್ ಮಂಜೇಶ್ವರ Read More »

ಹಿಂದೂಗಳು ಒಗ್ಗಟ್ಟಾಗಿ ಧರ್ಮವನ್ನು ಉಳಿಸುವ ಕೆಲಸ ಮಾಡಬೇಕು | ಬಪ್ಪಳಿಗೆ ಸಿಂಗಾಣಿಯಲ್ಲಿ ಶ್ರೀಕೃಷ್ಣ ವೇಷಧಾರಿ ಮಕ್ಕಳ ಶೋಭಾಯಾತ್ರೆಯಲ್ಲಿ ಕಿಶೋರ್ ಕುಮಾರ್ ಬೊಟ್ಯಾಡಿ

ಪುತ್ತೂರು: ಸಿಂಗಾಣಿ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಹಾಗೂ ಬಪ್ಪಳಿಗೆ ಎಂಸಿಬಿ ಸ್ಪೋರ್ಟ್ಸ್ ಆ್ಯಂಡ್ ಆರ್ಟ್ಸ್ ಕ್ಲಬ್ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ ಮತ್ತು ಕೃಷ್ಣ ವೇಷಧಾರಿಗಳ ಶೋಭಾಯಾತ್ರೆ ಬಪ್ಪಳಿಗೆ ಸಿಂಗಾಣಿಯಲ್ಲಿ ನಡೆಯಿತು. ಕೃಷ್ಣ ವೇಷಧಾರಿ ಮಕ್ಕಳ ಭವ್ಯ ಶೋಭಾಯತ್ರೆಗೆ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಪ್ರಧಾನ ಅರ್ಚಕ ರವಿಚಂದ್ರ ನೆಲ್ಲಿತ್ತಾಯ ಚಾಲನೆ ನೀಡಿದರು. ಬಳಿಕ ರಾಗಿಕುಮೇರಿ ಶಾಲಾ ಬಳಿಯಿಂದ ಸಿಂಗಾಣಿವರೆಗೂ ಚೆಂಡೆ, ವಾದ್ಯ, ಬ್ಯಾಂಡ್ ಸೆಟ್ ಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಬಳಿಕ ಸಿಂಗಾಣಿಯ ಹಿಲ್

ಹಿಂದೂಗಳು ಒಗ್ಗಟ್ಟಾಗಿ ಧರ್ಮವನ್ನು ಉಳಿಸುವ ಕೆಲಸ ಮಾಡಬೇಕು | ಬಪ್ಪಳಿಗೆ ಸಿಂಗಾಣಿಯಲ್ಲಿ ಶ್ರೀಕೃಷ್ಣ ವೇಷಧಾರಿ ಮಕ್ಕಳ ಶೋಭಾಯಾತ್ರೆಯಲ್ಲಿ ಕಿಶೋರ್ ಕುಮಾರ್ ಬೊಟ್ಯಾಡಿ Read More »

error: Content is protected !!
Scroll to Top