ಪುತ್ತೂರು

ಸಂಗಡಿಗರೊಂದಿಗೆ ಈಜು: ವಿದ್ಯಾರ್ಥಿ ಮೃತ್ಯು!

ಬೆಳಪು: ಏಳನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಸಂಗಡಿಗರೊಂದಿಗೆ ಈಜಲು ತೆರಳಿದ್ದ ಸಂದರ್ಭ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳಪು ಕೆಐಎಡಿಬಿ ಯೋಜನಾ ಪ್ರದೇಶದಲ್ಲಿ ನಡೆದಿದೆ. ಬೆಳಪು ವಸತಿ ಬಡಾವಣೆ ಕಸ್ತೂರಿ ಎಂಬವರ ಪುತ್ರ ವಿಶ್ವಾಸ್ ನಾಯಕ್ (11) ಮೃತಪಟ್ಟ ಬಾಲಕ. ಈತ ಇನ್ನಂಜೆ ಎಸ್‍.ಎಸ್. ಆಂಗ್ಲ ಮಾಧ್ಯಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ. ಗುರುವಾರ ಶಾಲೆಯಿಂದ ಬಂದು ಸ್ನೇಹಿತರೊಂದಿಗೆ ಕೆರೆಗೆ ಈಜಲು ತೆರಳಿದ್ದ. ಈಜಾಡುತ್ತಿದ್ದ ಬಾಲಕ ಮುಳುಗಿ ಅಸ್ವಸ್ಥನಾಗಿದ್ದನ್ನು ಕಂಡ ಮಕ್ಕಳು ಮಹಿಳೆಯೊಬ್ಬರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು […]

ಸಂಗಡಿಗರೊಂದಿಗೆ ಈಜು: ವಿದ್ಯಾರ್ಥಿ ಮೃತ್ಯು! Read More »

ಬಾಯ್ದೆರೆದ ಅಪಾಯಕ್ಕೆ ತಾತ್ಕಾಲಿಕ ತಡೆ! | ಶಾಶ್ವತ ಪರಿಹಾರದ ಭರವಸೆ ನೀಡಿದ ಪಿಡಬ್ಲ್ಯೂಡಿ ಎಇಇ | ನ್ಯೂಸ್ ಪುತ್ತೂರು ವರದಿಗೆ ಕ್ಷಿಪ್ರ ಸ್ಪಂದನೆ | ಹಾರಾಡಿ ರೈಲ್ವೇ ರಸ್ತೆ ಪ್ರವೇಶಿಸುವಲ್ಲಿ ಎದುರಾಗಿದ್ದ ಅಪಾಯ!!

ಪುತ್ತೂರು: ಪುತ್ತೂರು – ಉಪ್ಪಿನಂಗಡಿ ಮುಖ್ಯರಸ್ತೆಯಿಂದ ಹಾರಾಡಿ ರೈಲ್ವೇ ರಸ್ತೆ ಪ್ರವೇಶಿಸುವಲ್ಲಿಯೇ ಚರಂಡಿಯೊಂದು ಬಾಯ್ದೆರೆದು ನಿಂತಿದ್ದು, ಲೋಕೋಪಯೋಗಿ ಇಲಾಖೆ ತಾತ್ಕಾಲಿಕ ತಡೆ ನಿರ್ಮಿಸಿದೆ. ಮುಖ್ಯರಸ್ತೆಯಲ್ಲೇ ಬಾಯ್ದೆರೆದು ನಿಂತಿದ್ದ ಅಪಾಯದ ಬಗ್ಗೆ ‘ನ್ಯೂಸ್ ಪುತ್ತೂರು’ ಅಕ್ಟೋಬರ್ 5ರಂದು ವರದಿ ಮಾಡಿತ್ತು. ವರದಿಗೆ ತಕ್ಷಣ ಸ್ಪಂದಿಸಿದ ಲೋಕೋಪಯೋಗಿ ಇಲಾಖೆ ತನ್ನ ಸಿಬ್ಬಂದಿಗಳ ಮೂಲಕ ತಾತ್ಕಾಲಿಕ ತಡೆ ಬೇಲಿ ನಿರ್ಮಿಸಿದೆ. ಮಾತ್ರವಲ್ಲ, ಮುರಿದು ಹೋಗಿದ್ದ ಚರಂಡಿಯ ಭಾಗಕ್ಕೆ ಮರಳು ತುಂಬಿದ್ದ ಚೀಲಗಳನ್ನಿಡಲಾಗಿದೆ. ಇದರಿಂದ ವಾಹನಗಳು ಸಂಚರಿಸುವಾಗ ರಸ್ತೆ ಬದಿಗೆ ಬಂದರೂ, ಯಾವುದೇ

ಬಾಯ್ದೆರೆದ ಅಪಾಯಕ್ಕೆ ತಾತ್ಕಾಲಿಕ ತಡೆ! | ಶಾಶ್ವತ ಪರಿಹಾರದ ಭರವಸೆ ನೀಡಿದ ಪಿಡಬ್ಲ್ಯೂಡಿ ಎಇಇ | ನ್ಯೂಸ್ ಪುತ್ತೂರು ವರದಿಗೆ ಕ್ಷಿಪ್ರ ಸ್ಪಂದನೆ | ಹಾರಾಡಿ ರೈಲ್ವೇ ರಸ್ತೆ ಪ್ರವೇಶಿಸುವಲ್ಲಿ ಎದುರಾಗಿದ್ದ ಅಪಾಯ!! Read More »

ಪುನೀತ್ ಕೆರೆಹಳ್ಳಿ ಭೇಟಿಯಾದ ಅರುಣ್ ಕುಮಾರ್ ಪುತ್ತಿಲ

ಬೆಂಗಳೂರು: ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಗುರುವಾರ ಬೆಂಗಳೂರಿಗೆ ತೆರಳಿ ಪುನೀತ್ ಕೆರೆಹಳ್ಳಿ ಅವರನ್ನು ಭೇಟಿಯಾದರು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಪುನೀತ್ ಕೆರೆಹಳ್ಳಿ ಅವರ ಜೊತೆ ಮಾತುಕತೆ ನಡೆಸಿ, ಬೆಂಬಲ ಸೂಚಿಸಲಾಯಿತು. ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ಅವರು, ಪುನೀತ್ ಕೆರೆಹಳ್ಳಿ ಅವರ ಮೇಲೆ ದಾಖಲೆಗಳಿಲ್ಲದೆ ಹಾಕಿರುವ ಸುಳ್ಳು ಪ್ರಕರಣಗಳಿಗೆ ತಕ್ಷಣ ಕ್ಷಮೆ ಯಾಚಿಸಲೇಬೇಕು ಮತ್ತು ಹಿಂದೂ ಸಮಾಜ ಹೋರಾಟಕ್ಕಿಳಿಯುವ ಮುನ್ನ ಕಾಂಗ್ರೇಸ್ ತನ್ನ

ಪುನೀತ್ ಕೆರೆಹಳ್ಳಿ ಭೇಟಿಯಾದ ಅರುಣ್ ಕುಮಾರ್ ಪುತ್ತಿಲ Read More »

ಮುರ ನಿವಾಸಿ ಮಹಮ್ಮದ್ ಶರೀಫ್ ಕುವೈತ್ ನಲ್ಲಿ ನಿಧನ

ಪುತ್ತೂರು: ಮುರ ನಿವಾಸಿ, ಕುವೈತ್ ನಲ್ಲಿ ಉದ್ಯೋಗದಲ್ಲಿದ್ದ ಮಹಮ್ಮದ್ ಶರೀಫ್ (42) ಹೃದಯಾಘಾತದಿಂದ ಗುರುವಾರ ನಿಧನರಾಗಿದ್ದಾರೆ. ಹಸಿಮೀನು ವ್ಯಾಪಾರ ಮಾಡುತ್ತಿದ್ದ ದಿ.ಖಾದರ್ ಅವರ ಮೂವರು ಪುತ್ರರಲ್ಲಿ ಕಿರಿಯ ಪುತ್ರರಾಗಿರುವ ಮಹಮ್ಮದ್ ಶರೀಫ್ ಕುವೈತ್ ನಲ್ಲಿ ಕಳೆದ ಸುಮಾರು 15 ವರ್ಷಗಳಿಂದ ಕಂಪೆನಿಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೂರು ವರ್ಷಗಳ ಹಿಂದೊಮ್ಮೆ ಊರಿಗೆ ಬಂದಿದ್ದರು. ಇದೀಗ ಅಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ತಾಯಿ, ಮೂವರು ಸಹೋದರರು, ಸಹೋದರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮುರ ನಿವಾಸಿ ಮಹಮ್ಮದ್ ಶರೀಫ್ ಕುವೈತ್ ನಲ್ಲಿ ನಿಧನ Read More »

ಅ. 7ರಂದು ನಡೆಯುವ ಶೌರ್ಯ ಜಾಗರಣ ರಥಯಾತ್ರೆ, ಹಿಂದೂ ಶೌರ್ಯ ಸಂಗಮದ ಆಮಂತ್ರಣ ವಿತರಣೆ

ಪುತ್ತೂರು: ವಿಶ್ವ ಹಿಂದೂ ಪರಿಷತ್, ಬಜರಂಗದಳ 60ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಹಿನ್ನಲೆಯಲ್ಲಿ ಅ. 7ರಂದು ಪುತ್ತೂರಿನಲ್ಲಿ ನಡೆಯಲಿರುವ ಶೌರ್ಯ ಜಾಗರಣ ರಥಯಾತ್ರೆ, ಬೃಹತ್ ಹಿಂದೂ ಶೌರ್ಯ ಸಂಗಮದ ಆಮಂತ್ರಣ ಪತ್ರಿಕೆಯನ್ನು ಗುರುವಾರ ಸಂಜೆ ಪುತ್ತೂರು ನಗರದಾದ್ಯಂತ ವಿತರಿಸಲಾಯಿತು. ನಗರದ ದರ್ಬೆ ವೃತ್ತದ ಬಳಿ ಆಮಂತ್ರಣ ಪತ್ರಿಕೆ ವಿತರಣೆಗೆ ಚಾಲನೆ ನೀಡಿ, ಅಲ್ಲಿಂದ ಕಾಲ್ನಡಿಗೆಯಲ್ಲಿ ಸಾಗಿ ಅಂಗಡಿ ಮುಂಗಟ್ಟುಗಳಿಗೆ ಆಮಂತ್ರಣ ಪತ್ರಿಕೆ ವಿತರಿಸಲಾಯಿತು. ಬಜರಂಗದಳ ದಕ್ಷಿಣ ಪ್ರಾಂತ ಸಹಸಂಚಾಲಕ ಮುರಳೀಕೃಷ್ಣ ಹಸಂತಡ್ಕ, ಶೌರ್ಯ ಜಾಗರಣ ರಥಯಾತ್ರೆ ಸ್ವಾಗತ

ಅ. 7ರಂದು ನಡೆಯುವ ಶೌರ್ಯ ಜಾಗರಣ ರಥಯಾತ್ರೆ, ಹಿಂದೂ ಶೌರ್ಯ ಸಂಗಮದ ಆಮಂತ್ರಣ ವಿತರಣೆ Read More »

ವಿವೇಕ ವಿಜ್ಞಾನ 2023 ಕಾರ್ಯಾಗಾರ ಸಮಾರೋಪ | ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ ಹೆಚ್ಚು ಪ್ರಯೋಜನಕಾರಿ: ನವೀನ್ ಸ್ಟೀಫನ್ ವೇಗಸ್

ಪುತ್ತೂರು: ವಿಜ್ಞಾನದ ಕಲಿಕೆಯಲ್ಲಿ ಅನ್ವಯ ಮತ್ತು ಸಾಂಪ್ರಾದಾಯಿಕ ಪದ್ಧತಿಯ ಕಲಿಕೆಯನ್ನು ಅಳವಡಿಸಿಕೊಂಡರೆ ವಿಜ್ಞಾನದ ವಿಷಯವೂ ಕೂಡಾ ಆಸಕ್ತಿದಾಯಕವಾಗಬಲ್ಲುದು. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ ಹೆಚ್ಚು ಪ್ರಯೋಜನಕಾರಿ ಎಂಬುದಕ್ಕೆ ಅಧ್ಯಾಪಕರ ಕಾರ್ಯಾಗಾರ ‘ವಿವೇಕ-ವಿಜ್ಞಾನ 2023’ ಸಾಕ್ಷಿಯಾಗಿದೆ ಎಂದು ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ನವೀನ್ ಸ್ಟೀಫನ್ ವೇಗಸ್ ಹೇಳಿದರು. ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರೌಢಶಾಲಾ ವಿಜ್ಞಾನ ಹಾಗೂ ಗಣಿತ ಅಧ್ಯಾಪಕರ ಕಾರ್ಯಾಗಾರ ‘ವಿವೇಕ-ವಿಜ್ಞಾನ 2023’ ಕಾರ್ಯಕ್ರಮದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಶಿಕ್ಷಕ ವೃತ್ತಿ

ವಿವೇಕ ವಿಜ್ಞಾನ 2023 ಕಾರ್ಯಾಗಾರ ಸಮಾರೋಪ | ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ ಹೆಚ್ಚು ಪ್ರಯೋಜನಕಾರಿ: ನವೀನ್ ಸ್ಟೀಫನ್ ವೇಗಸ್ Read More »

ನಗರಸಭಾ ವ್ಯಾಪ್ತಿಯಲ್ಲಿ ಬಾಕಿ ಇರುವ ಉದ್ಯಮ ಪರವಾನಿಗೆ, ತೆರಿಗೆ, ನೀರಿನ ಶುಲ್ಕ ವಸೂಲಾತಿಗೆ ತಮಟೆ ಬಡಿದು ಚಾಲನೆ | ಸಿಬ್ಬಂದಿಗಳಿಂದ ಮನೆ ಮನೆ ಭೇಟಿ ನೀಡಿ ನೋಟೀಸ್ ಮೂಲಕ ಎಚ್ಚರಿಕೆ

ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ಕಟ್ಟಡ ತೆರಿಗೆ, ಉದ್ಯಮ ಪರವಾನಿಗೆ, ನೀರಿನ ಶುಲ್ಕ ಇತ್ಯಾದಿ ತೆರಿಗೆಗಳು ಬಾಕಿ ಇರುವ ಹಿನ್ನೆಲೆಯಲ್ಲಿ ನಗರಸಭೆಯಿಂದ 31 ವಾರ್ಡ್‌ಗಳಲ್ಲಿ 15 ದಿನಗಳ ತೆರಿಗೆ ವಸೂಲಾತಿ ಆಂದೋಲನಕ್ಕೆ ಗುರುವಾರ ಚಾಲನೆ ನೀಡಲಾಯಿತು. ನಗರಸಭೆಯ ಪ್ರತಿ ವಾರ್ಡ್‌ಗಳಿಗೂ ನಗರಸಭೆ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಬಾಕಿದಾರರಿಗೆ ನೋಟೀಸ್ ನೀಡಿ ಎಚ್ಚರಿಕೆ ನೀಡಲಿದ್ದಾರೆ. ನಗರಸಭೆ ಕಚೇರಿ ವಠಾರದಲ್ಲಿ ಆಂದೋಲನಕ್ಕೆ ತಮಟೆ ಬಡಿದು ಚಾಲನೆ ನೀಡಿದ ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್ ಮಾತನಾಡಿ, ನಗರಸಭೆ ಪ್ರತಿ ವಾರ್ಡ್‌ಗಳಿಗೆ

ನಗರಸಭಾ ವ್ಯಾಪ್ತಿಯಲ್ಲಿ ಬಾಕಿ ಇರುವ ಉದ್ಯಮ ಪರವಾನಿಗೆ, ತೆರಿಗೆ, ನೀರಿನ ಶುಲ್ಕ ವಸೂಲಾತಿಗೆ ತಮಟೆ ಬಡಿದು ಚಾಲನೆ | ಸಿಬ್ಬಂದಿಗಳಿಂದ ಮನೆ ಮನೆ ಭೇಟಿ ನೀಡಿ ನೋಟೀಸ್ ಮೂಲಕ ಎಚ್ಚರಿಕೆ Read More »

ಪುತ್ತೂರು ದೇವಳ ಮುಂಭಾಗ ಶವ ಪತ್ತೆ!!

ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ವ್ಯಕ್ತಿಯೋರ್ವರ ಶವ ಪತ್ತೆಯಾಗಿದೆ. ಮೃತರನ್ನು ಬಸವರಾಜ ಕಲ್ಲಪ್ಪ ಜಂಲಾಳಿ ಎಂದು ಗುರುತಿಸಿದ್ದು, ಇವರಿಗೆ ಸುಮಾರು 60 ವರ್ಷ ಆಗಿರಬಹುದೆಂದು ಅಂದಾಜಿಸಲಾಗಿದೆ. ಗದಗ ಮೂಲದ ಬಸವರಾಜ ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ರೈಲ್ವೇ ನಿಲ್ದಾಣಗಳಲ್ಲಿ ಭಿಕ್ಷೆ ಬೇಡುತ್ತಿರುವುದನ್ನು ಕಂಡವರಿದ್ದಾರೆ. ಸಾವಿಗೆ ಕಾರಣ ತಿಳಿದುಬಂದಿಲ್ಲ.

ಪುತ್ತೂರು ದೇವಳ ಮುಂಭಾಗ ಶವ ಪತ್ತೆ!! Read More »

ಮಾಯಿಲಪ್ಪ ನಿಧನ

ಪುತ್ತೂರು: ಪುಣಚ ಶ್ರೀ ದೇವಿ ವಿದ್ಯಾಕೇಂದ್ರದ ನಿವೃತ್ತ ಅಟೆಂಡರ್, ಬಂಟ್ವಾಳ ನಿವಾಸಿ ಮಾಯಿಲಪ್ಪ ಅವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ನಿಧನರಾದರು. ಮೂಲತಃ ಸುಳ್ಯದ ಹಾಸನಡ್ಕ ನಿವಾಸಿಯಾಗಿರುವ ಮಾಯಿಲಪ್ಪ ಅವರು, ಬಂಟ್ವಾಳದಲ್ಲಿ ವಾಸ್ತವ್ಯ ಹೊಂದಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಮೃತರು ಪತ್ನಿ ಮತ್ತು ಬಂಧುಬಳಗವನ್ನು ಅಗಲಿದ್ದಾರೆ.

ಮಾಯಿಲಪ್ಪ ನಿಧನ Read More »

ಅ. 15ರಿಂದ 24: ಶ್ರೀ ಮಹಾಮಾಯಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ಪುತ್ತೂರು: ಪುತ್ತೂರು ನಗರದ ಶ್ರೀ ಮಹಾಮಾಯಾ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಅ.15 ರಿಂದ 24ರ ವರೆಗೆ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಮಹೋತ್ಸವದ ಅಂಗವಾಗಿ ಪ್ರತಿದಿನ ಮಧ್ಯಾಹ್ನ 1.30 ಕ್ಕೆ ಮಹಾಪೂಜೆ, ರಾತ್ರಿ 9 ರಿಂದ ದುರ್ಗಾನಮಸ್ಕಾರ ಪೂಜೆ ಹಾಗೂ 9.30 ಕ್ಕೆ ರಾತ್ರಿ ಪೂಜೆ ನಡೆಯಲಿದೆ. ಅ.22 ರಂದು ದುರ್ಗಾಷ್ಟಮಿ, 23 ರಂದು ಮಹಾನವಮಿ ಚಂಡಿಕಾಯಾಗ, ಮಹಾಪೂಜೆ, ಅನ್ನಸಂತರ್ಪಣೆ ಜರಗಲಿದೆ ಎಂದು ದೇವಸ್ಥಾನ ಪ್ರಕಟಣೆಯಲ್ಲಿ ತಿಳಿಸಿದೆ.

ಅ. 15ರಿಂದ 24: ಶ್ರೀ ಮಹಾಮಾಯಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ Read More »

error: Content is protected !!
Scroll to Top