ಪುತ್ತೂರು

ಅಂತಾರಾಜ್ಯ ಅಥ್ಲೆಟಿಕ್ಸ್: ಕಡಬದ ಚರಿಷ್ಮ ರಾಷ್ಟ್ರಮಟ್ಟಕ್ಕೆ

ಪುತ್ತೂರು: ತೆಲಂಗಾಣದಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಅಂತಾರಾಜ್ಯ ಜ್ಯೂನಿಯರ್ ವಿಭಾಗದ ಅಥ್ಲೆಟಿಕ್ಸ್ ನಲ್ಲಿ ಕಡಬದ ಚರಿಷ್ಮ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕಡಬ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿರುವ ಚರಿಷ್ಮ ಅವರು ಅಥ್ಲೆಟಿಕ್ಸ್ ನ ಯು16 ಬಾಲಕಿಯರ 2000 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಕಡಬ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು, ಆಡಳಿತ ಮಂಡಳಿ, ಸಿಬ್ಬಂದಿಗಳು ಚರಿಷ್ಮಾ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಅಂತಾರಾಜ್ಯ ಅಥ್ಲೆಟಿಕ್ಸ್: ಕಡಬದ ಚರಿಷ್ಮ ರಾಷ್ಟ್ರಮಟ್ಟಕ್ಕೆ Read More »

ಶ್ರೀ ಸತ್ಯನಾರಾಯಣ ಪೂಜೆ, ಯಕ್ಷಗಾನ ತಾಳಮದ್ದಲೆ

ಪುತ್ತೂರು: ಕಳುವಾಜೆ ಶ್ರೀ ವೆಂಕಟರಮಣ ಗೌಡರ ಮನೆಯಲ್ಲಿ ಶ್ರೀ  ಸತ್ಯನಾರಾಯಣ ದೇವರ ಪೂಜೆಯ ಪ್ರಯುಕ್ತ ಶ್ರೀ ಸತ್ಯನಾರಾಯಣ ವ್ರತಾಚರಣೆ ಯಕ್ಷಗಾನ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಭವ್ಯಶ್ರೀ ಕುಲ್ಕುಂದ, ಚೆಂಡೆಯಲ್ಲಿ ಮುರಳೀಧರ ಕಲ್ಲೂರಾಯ ಕುಂಜೂರುಪಂಜ, ಮದ್ದಳೆಯಲ್ಲಿ ಮುರಳಿ ಹಳೆನೇರೆಂಕಿ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ವಿಷ್ಣು ಮತ್ತು ತುಂಗಧ್ವಜನಾಗಿ ರಾಧಾಕೃಷ್ಣ ಕಲ್ಚಾರ್, ಸಾಧುವೈಶ್ಯ ಮತ್ತು ಗೋವಳನಾಗಿ ಗುಡ್ಡಪ್ಪ ಬಲ್ಯ, ನಾರದ ಮತ್ತು ಚಂದ್ರಕೇತುವಾಗಿ ತಾರಾನಾಥ ಸವಣೂರು, ಜ್ವಾಲಮುಖ ಮತ್ತು ಲೀಲಾವತಿಯಾಗಿ ಪ್ರಸಾದ್ ಸವಣೂರು, ರಾಜಭಟ ಮತ್ತು ಕಲಾವತಿಯಾಗಿ ಶ್ರುತಿ

ಶ್ರೀ ಸತ್ಯನಾರಾಯಣ ಪೂಜೆ, ಯಕ್ಷಗಾನ ತಾಳಮದ್ದಲೆ Read More »

ಸರಕಾರಿ ಆಸ್ಪತ್ರೆಗೆ ಡಯಾಲಿಸಿಸ್ ಮೆಷಿನ್ ಹಸ್ತಾಂತರ

ಪುತ್ತೂರು: ಸರಕಾರ ಕೆಲಸ ದೇವರ ಕೆಲಸ. ಈ ನಿಟ್ಟಿನಲ್ಲಿ ಸರಕಾರಿ ಕಚೇರಿ ಯಾವುದೇ ಇರಲಿ ಸಿಬ್ಬಂದಿಗಳ ಕೊರತೆ ಇದೆ ಎಂಬ ನೆಪ ಬಿಟ್ಟು ಇರುವ ಸಿಬ್ಬಂದಿಗಳನ್ನು ಹೆಚ್ಚು ಬಳಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಪುತ್ತೂರು ಭಾರತೀಯ ರೆಡ್ ಕ್ರಾಸ್ ಸಂಸ್ಥೆ 9 ಲಕ್ಷ ರೂ. ವೆಚ್ಚದಲ್ಲಿ ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಹಾಗೂ ಮಕ್ಕಳ ಚಿಕಿತ್ಸಾ ವಿಭಾಗಗಕ್ಕೆ ಮಲ್ಪಿ ಪ್ಯಾರಾ ಮಾನಿಟರ್, ಹೊರಪ್ರಾಂಗಣದ ನಿರೀಕ್ಷಣಾ ಕೊಠಡಿಗೆ ಟೆಲಿವಿಷನ್ ಕೊಡುಗೆಯಾಗಿ

ಸರಕಾರಿ ಆಸ್ಪತ್ರೆಗೆ ಡಯಾಲಿಸಿಸ್ ಮೆಷಿನ್ ಹಸ್ತಾಂತರ Read More »

ಬರೆಪ್ಪಾಡಿ ದೇಗುಲದ ನಿಧಿ ಸಂಚಯನ ಹಿನ್ನೆಲೆ: ಪ್ರತಿನಿಧಿಗಳ ಸಭೆ

ಕಾಣಿಯೂರು: ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಕೇಪುಳೇಶ್ವರ ದೇವಸ್ಥಾನದಲ್ಲಿ ನಿಧಿ ಸಂಚಯನದ ಕುರಿತು ಭಾನುವಾರ ಪ್ರತಿನಿಧಿಗಳ ಸಭೆ ನಡೆಯಿತು. ದೇವಸ್ಥಾನದ ಜೀರ್ಣೋದ್ದಾರ ಪ್ರಯುಕ್ತ ಜ. 7ರಂದು ನಿಧಿ ಸಂಚಯನ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ತಾಲೂಕು, ವಲಯ ಹಾಗೂ ಗ್ರಾಮವಾರು ಪ್ರತಿನಿಧಿಗಳ ಸಭೆಯನ್ನು ನಡೆಸಿ, ಕಾರ್ಯಕ್ರಮದ ರೂಪುರೇಷೆ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ತಾಲೂಕು, ವಲಯ, ಗ್ರಾಮಾವಾರು ಪ್ರತಿನಿಧಿಗಳು ಉಪಸ್ಥಿತರಿದ್ದರು.

ಬರೆಪ್ಪಾಡಿ ದೇಗುಲದ ನಿಧಿ ಸಂಚಯನ ಹಿನ್ನೆಲೆ: ಪ್ರತಿನಿಧಿಗಳ ಸಭೆ Read More »

ಗಾರ್ಡನ್ ಮಾಡುವುದಾಗಿ ಹೇಳಿ ಸ್ಮಶಾನ ಮಾಡಿದ್ದಾರೆ: ಶಾಸಕರಿಗೆ ದೂರು

ಪುತ್ತೂರು: ಮುಂಡೂರು ಗ್ರಾಮದ ಮುಂಡೂರು ಪೇಟೆಯ ಬಳಿ ಜನವಸತಿ ಪ್ರದೇಶದಲ್ಲಿ ಸ್ಮಶಾನವನ್ನು ನಿರ್ಮಾಣ ಮಾಡಿದ್ದು ಅದನ್ನು ತೆರವು ಮಾಡುವಂತೆ ಮುಂಡೂರು ಗ್ರಾಮಸ್ಥರು ಶಾಸಕರನ್ನು ಆಗ್ರಹಿಸಿದ್ದಾರೆ. ಇಲ್ಲಿ ತುಂಬಾ ಮನೆಗಳಿವೆ, ಮನೆಗಳ ಮಧ್ಯೆ ಸ್ಮಶಾನ ನಿರ್ಮಾಣ ಮಾಡಿದ್ದಾರೆ. ನಾವು ಇಲ್ಲಿ ಗಾರ್ಡನ್ ನಿರ್ಮಾಣ ಮಾಡುತ್ತಿದ್ದೇವೆ ಎಂದು ಗ್ರಾಪಂ ನವರು ತಿಳಿಸಿದ್ದರು. ನಾವು ಅದನ್ನು ಸತ್ಯ ಎಂದು ನಂಬಿದ್ದೆವು. ಆದರೆ ಕೊನೆ ಗಳಿಗೆಯಲ್ಲಿ ಅದು ಸ್ಮಶಾನ ಎಂದು ಗೊತ್ತಾದಾಗ ನಾವು ಪ್ರತಿಭಟಿಸಿದ್ದೆವು. ಆದರೆ ಏನೂ ಪ್ರಯೋಜನವಾಗಲಿಲ್ಲ, ಜನವಸತಿ ಪ್ರದೇಶದಿಂದ ಸ್ಮಶಾನವನ್ನು

ಗಾರ್ಡನ್ ಮಾಡುವುದಾಗಿ ಹೇಳಿ ಸ್ಮಶಾನ ಮಾಡಿದ್ದಾರೆ: ಶಾಸಕರಿಗೆ ದೂರು Read More »

ಗೆಳೆಯರೊಂದಿಗೆ ಈಜಲು ತೆರಳಿದ್ದ ತಸ್ಲೀಮ್ ಶವ ಪತ್ತೆ!

ಮಾಡಾವು: ಗೆಳೆಯರೊಂದಿಗೆ ಈಜಲು ತೆರಳಿದ್ದ ಯುವಕನ ಮೃತದೇಹ ಸೋಮವಾರ ಬೆಳಿಗ್ಗೆ ಹೊಳೆಯಲ್ಲಿ ಪತ್ತೆಯಾಗಿದೆ. ಮಾಡಾವು ಕಟ್ಟತ್ತಾರು ನಿವಾಸಿ ಹಂಝ ಎಂಬವರ ಪುತ್ರ ತಸ್ಲೀಮ್ (17 ವ.) ಮೃತಪಟ್ಟವರು. ತಸ್ಲೀಮ್ ಅ. 15ರಂದು ಸಂಜೆ ಗೆಳೆಯರ ಜೊತೆಗೂಡಿ ಅರಿಕ್ಕಿಲ ಸಮೀಪದ ಎರಕ್ಕಲ ಎಂಬಲ್ಲಿ ಹೊಳೆಗೆ ಈಜಲು ತೆರಳಿದ್ದ ವೇಳೆ ಘಟನೆ ಸಂಭವಿಸಿತ್ತು. ಯುವಕ ನಾಪತ್ತೆಯಾಗುತ್ತಿದ್ದಂತೆ ಸ್ನೇಹಿತರು ಮನೆಯವರಿಗೆ, ಸ್ಥಳೀಯರಿಗೆ ವಿಷಯ ತಲುಪಿಸಿದ್ದರು. ತಕ್ಷಣ ಸ್ಥಳೀಯರು ಹೊಳೆಯಲ್ಲಿ ಹುಡುಕಾಟ ನಡೆಸಿದರಾದರೂ ಮೃತದೇಹ ಪತ್ತೆಯಾಗಿರಲಿಲ್ಲ. ಬಳಿಕ ಮುಳುಗು ತಜ್ಞರು ಕಾರ್ಯಾಚರಣೆ ಮುಂದುವರಿಸಿದ್ದರು.

ಗೆಳೆಯರೊಂದಿಗೆ ಈಜಲು ತೆರಳಿದ್ದ ತಸ್ಲೀಮ್ ಶವ ಪತ್ತೆ! Read More »

ಹೊಳೆಗೆ ಈಜಲು ತೆರಳಿದ ಬಾಲಕ ನಾಪತ್ತೆ : ಹುಡುಕಾಟ

ಮಾಡಾವು : ಹೊಳೆಗೆ ಈಜಲು ತೆರಳಿದ ಬಾಲಕನೋರ್ವ ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದ್ದು, ಹುಡುಕಾಟ ನಡೆಸಲಾಗುತ್ತಿದೆ. ಮಾಡಾವು ಕಟ್ಟತ್ತಾರು ನಿವಾಸಿ ಹಂಝ ಎಂಬವರ ಪುತ್ರ ತಸ್ಲಿಮ್ (17 ವ) ಗೆಳೆಯರ ಜೊತೆಗೂಡಿ ಅ. 15ರಂದು ಸಂಜೆ ಅರಿಕ್ಕಿಲ ಸಮೀಪದ ಎರಕ್ಕಲ ಎಂಬಲ್ಲಿನ ಹೊಳೆಗೆ ತೆರಳಿದ್ದು ಈಜುವ ವೇಳೆ ಬಾಲಕ ನೀರಿನಲ್ಲಿ ಮುಳುಗಿದ್ದಾನೆ ಎನ್ನಲಾಗಿದೆ. ಸ್ಥಳದಲ್ಲಿ ನೂರಾರು ಮಂದಿ ಸೇರಿದ್ದು ಹುಡುಕಾಟ ನಡೆಸುತ್ತಿದ್ದಾರೆ.

ಹೊಳೆಗೆ ಈಜಲು ತೆರಳಿದ ಬಾಲಕ ನಾಪತ್ತೆ : ಹುಡುಕಾಟ Read More »

ಉಚಿತ ನೇತ್ರ ತಪಾಸಣೆ, ಚಿಕಿತ್ಸಾ ಶಿಬಿರ

ಪುತ್ತೂರು: ಬೇಲೂರಿನ ನಾಟ್ಯ ಮಯೂರಿ ಲಾಲಿತ್ಯ ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಸುಧಾನ ವಸತಿ ಶಾಲೆಯ ಎಡ್ವರ್ಡ್ ಹಾಲ್ ನಲ್ಲಿ ಭಾನುವಾರ ನಡೆಯಿತು. ಶ್ರೀ ಕೃಷ್ಣ ಯುವಕ ಮಂಡಲ, ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ಹಾಗೂ ಹೊಸ ಬೆಳಕು ಬಡವರ ಆಶಾಕಿರಣ ಸೇವಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಅನೇಕ ಸಂಘ ಸಂಸ್ಥೆಗಳ ಸಹಕಾರದಲ್ಲಿ ಪ್ರಸಾದ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ನುರಿತ ವೈದ್ಯರ ತಂಡ ಶಿಬಿರ ನಡೆಸಿಕೊಟ್ಟರು. ಪುತ್ತೂರಿನ ವೈದ್ಯ

ಉಚಿತ ನೇತ್ರ ತಪಾಸಣೆ, ಚಿಕಿತ್ಸಾ ಶಿಬಿರ Read More »

ಪುತ್ತೂರು ದಸರಾ ಮಹೋತ್ಸವಕ್ಕೆ ಚಾಲನೆ

ಪುತ್ತೂರು: ಪುತ್ತೂರು ದಸರಾ ನವದುರ್ಗಾರಾಧನಾ ಸಮಿತಿ ವತಿಯಿಂದ ಪ್ರತಿವರ್ಷ ನಡೆಯುವ “ಪುತ್ತೂರು ದಸರಾ ಮಹೋತ್ಸವ”ಕ್ಕೆ ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ-ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಭಾನುವಾರ ಚಾಲನೆ ನೀಡಲಾಯಿತು. 21ನೇ ವರ್ಷದ ಮಹೋತ್ಸವ ಇದಾಗಿದ್ದು, ಕ್ಷೇತ್ರದ ತಂತ್ರಿ ಕುಕ್ಕಾಡಿ ಪ್ರೀತಂ ಪುತ್ತೂರಾಯ ಅವರ ನೇತೃತ್ವದಲ್ಲಿ ಬೆಳಗ್ಗೆ ಗಣಪತಿ ಸಹಿತ ನವದುರ್ಗೆಯರ ಪ್ರತಿಷ್ಠೆ ನಡೆಯಿತು. ಬಳಿಕ ಆರ್ಯಾಪು ಗ್ರಾಪಂ ಅಧ್ಯಕ್ಷೆ ಗೀತಾ ದೀಪ ಬೆಳಗಿಸಿ ಮಹೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ನಗರಸಭೆ ಸದಸ್ಯ

ಪುತ್ತೂರು ದಸರಾ ಮಹೋತ್ಸವಕ್ಕೆ ಚಾಲನೆ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನರುತ್ಥಾನ: ಮಹಾಸಭೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಹಿನ್ನಲೆಯಲ್ಲಿ ಈಗಾಗಲೇ 25 ಕೋಟಿ ರೂ. ಅನುದಾನಕ್ಕಾಗಿ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು, ಇದು ಸರಕಾರದ ಮಟ್ಟದಲ್ಲಿದೆ. 4.66 ಕೋಟಿ ರೂ.ವನ್ನು ಭಕ್ತರಿಂದ ಸಂಗ್ರಹಕ್ಕಾಗಿ ಸರಕಾರ ಒಪ್ಪಿಗೆ ನೀಡಿದೆ. ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು. ಅವರು ಭಾನುವಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಪುನರುತ್ಥಾನ ಕಾರ್ಯದ ಅಂಗವಾಗಿ ಅನ್ನಛತ್ರ ನಿರ್ಮಾಣ ಮತ್ತು ಪುಷ್ಕರಣಿ ಪುನರುತ್ಥಾನ ನಿಧಿ ಸಂಚಯನದ ಕುರಿತು ಭಕ್ತರ ಮಹಾಸಭೆಯನ್ನು ಉದ್ಘಾಟಿಸಿ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನರುತ್ಥಾನ: ಮಹಾಸಭೆ Read More »

error: Content is protected !!
Scroll to Top