ಪುತ್ತೂರು

ಕರ್ತವ್ಯಕ್ಕೆ ಅಡ್ಡಿ: ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು

ಪುತ್ತೂರು: ಕರ್ತವ್ಯನಿರತ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ವರ್ತನೆಗೆ ಪುತ್ತೂರು ತಾಲೂಕು ರಾಜ್ಯ ಸರಕಾರಿ ನೌಕರರ ಸಂಘ ಖಂಡನೆ ವ್ಯಕ್ತಪಡಿಸಿದ್ದು, ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರಿಗೆ ದೂರು ನೀಡಿದೆ. ಅ. 7ರಿಂದ 9ರವರೆಗೆ ಬೆಳ್ತಂಗಡಿ ತಾಲೂಕು ಕೊಕ್ಕಡ ಹೋಬಳಿಯ ಕಳೆಂಜ ಗ್ರಾಮದ ಸರ್ವೆ ನಂಬ್ರ 309ರಲ್ಲಿರುವ ಅಮ್ಮಿನಡ್ಕದ ನಿಡ್ಲೆ ವಿಸ್ಕೃತ ಬ್ಲಾಕ್-2ರ ಮೀಸಲು ಅರಣ್ಯದಲ್ಲಿ […]

ಕರ್ತವ್ಯಕ್ಕೆ ಅಡ್ಡಿ: ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು Read More »

ಸಿಡಿಲಿಗೆ ಸುಟ್ಟು ಹೋದ ಫೊಟೋ ಸ್ಟುಡಿಯೋ: ಲಕ್ಷಾಂತರ ರೂ. ಹಾನಿ!

ಪುತ್ತೂರು: ಪುತ್ತೂರು  ಮುಖ್ಯ ರಸ್ತೆಯಲ್ಲಿರುವ ಪೋಟೋ ಡೆವಲಪ್ ಸ್ಟುಡಿಯೋ ಆಡ್ ಲ್ಯಾಬ್ ಮಂಗಳವಾರ ಮಧ್ಯಾಹ್ನ ಬಂದ ಸಿಡಿಲಿಗೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಸರಣಿ ಸಿಡಿಲು ಬಂದಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಕಂಪ್ಯೂಟರ್ ಸೇರಿ ಎಲ್ಲಾ ಉಪಕರಣಗಳು ಸುಟ್ಟು ಹೋಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಅಂಗಡಿಯವರು ಬೆಂಕಿ ಶಮನ ಮಾಡುವ ಕಾರ್ಯ ಮಾಡಿದ್ದು, ಅಗ್ನಿಶಾಮಕ ದಳ ಆಗಮಿಸಿ ಸುಟ್ಟವಸ್ತುಗಳನ್ನು ಹಾಗೂ ಬೆಂಕಿಗೆ ತೀವ್ರ ಗೊಳ್ಳಲು ಸಹಕರಿಸುವ ವಸ್ತುಗಳನ್ನು ಹೊರ ಹಾಕುವ ಕಾರ್ಯ ಮಾಡಿದರು. ಅವಘಡದಿಂದ ಲಕ್ಷಾಂತರ ರೂಪಾಯಿ

ಸಿಡಿಲಿಗೆ ಸುಟ್ಟು ಹೋದ ಫೊಟೋ ಸ್ಟುಡಿಯೋ: ಲಕ್ಷಾಂತರ ರೂ. ಹಾನಿ! Read More »

ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ಕಡಬ: ಕಡಬ ತಾಲೂಕಿನ ಕುಂತೂರು ಗ್ರಾಮದ ಸೀಮಾ ದೇವಸ್ಥಾನ ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗುತ್ತಿದೆ. ಮಹೋತ್ಸವದ ಅಂಗವಾಗಿ ಪ್ರತಿನಿತ್ಯ ಮಹಾಪೂಜೆ, ಗಣಪತಿ ಮಹಾಪೂಜೆ, ಅನ್ನಸಂತರ್ಪಣೆ ಜರಗುತ್ತಿದ್ದು, ಅ.24 ರ ತನಕ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭಜನೆ, ಯಕ್ಷಗಾನ, ಭಕ್ತಿ ಭಾವಗಾನ, ನೃತ್ಯ ವೈಭವ, ಯಕ್ಷಗಾನ ತಾಳಮದ್ದಳೆ, ನೃತ್ಯ ನಿನಾದ ಮುಂತಾದ ಕಾರ್ಯಕ್ರಮಗಳು ಅ.24 ರ ವರೆಗೆ ನಡೆಯಲಿದೆ. ವಿಶೇಷವಾಗಿ ಅ.22 ರಂದು

ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ Read More »

ನರಿಮೊಗರು ಸೊಸೈಟಿಯಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ ಸಾಧಕರಿಗೆ ಅಭಿನಂದನೆ

ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಎಸ್ಎಸ್ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಸಂಘದ ರೈತ ಭವನದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಿ.ಬಾಬು ಶೆಟ್ಟಿ ಮಾತನಾಡಿ, ಕಳೆದ ಬಾರಿ ಐದು ವಿದ್ಯಾರ್ಥಿಗಳನ್ನು ಅಭಿನಂದಿಸಲಾಗಿತ್ತು. ಪ್ರಸಕ್ತ ವರ್ಷದಲ್ಲಿ ಹತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಲಾಗಿದೆ. ಮುಂದಿನ ಶೈಕ್ಷಣಿಕ ಸಾಲಿನಲ್ಲಿ 25 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಈ ಬಾರಿ ಎಸ್.ಎಸ್.ಎಲ್.ಸಿಯಲ್ಲಿ 625 ಅಂಕಗಳಿಗೆ 623 ಅಂಕಗಳನ್ನು ಗಳಿಸಿ ರಾಜ್ಯದಲ್ಲಿ

ನರಿಮೊಗರು ಸೊಸೈಟಿಯಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ ಸಾಧಕರಿಗೆ ಅಭಿನಂದನೆ Read More »

ಶಾಸಕರಿಂದ ಗ್ರಾಮಸ್ಥರ ಅಹವಾಲು ಸ್ವೀಕಾರ, ಶಾಸಕರಿಗೆ ಅಭಿನಂದನೆ

ಪುತ್ತೂರು: ಚುನಾವಣೆ ಬಂದರೆ ಸಾಕು ಹಿಂದುತ್ವದ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಜನರನ್ನು ಮೋಸ ಮಾಡಿ ಗೆಲ್ಲುವ ಬಿಜೆಪಿ, ಗೆದ್ದ ಬಳಿಕ ಜನರನ್ನು ಸಂಪೂರ್ಣವಾಗಿ ಮರೆತು ಬಿಡುತ್ತಾರೆ. ಇಷ್ಟು ವರ್ಷ ಆಡಳಿತ ನಡೆಸಿದ ಬಿಜೆಪಿಯವರು ಬಡವರಿಗೆ ಪ್ರಯೋಜನವಾಗುವ ಯಾವುದೇ ಕೆಲಸವನ್ನು ಮಾಡಿಲ್ಲ. ಮಾಡುವುದೂ ಇಲ್ಲ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಬಲ್ನಾಡು ಸ.ಹಿ.ಪ್ರಾ. ಶಾಲೆಯಲ್ಲಿ ನಡೆದ ಗ್ರಾಮಸ್ಥರ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ನಾನು ಕೂಡ ಹಿಂದೆ ಬಿಜೆಪಿಯಲ್ಲೇ ಇದ್ದೆ. ಬಿಜೆಪಿಯರಿಗೆ ಬಡವರ ಕಷ್ಟ

ಶಾಸಕರಿಂದ ಗ್ರಾಮಸ್ಥರ ಅಹವಾಲು ಸ್ವೀಕಾರ, ಶಾಸಕರಿಗೆ ಅಭಿನಂದನೆ Read More »

ಶೇ. 80 ಕಮಿಷನ್ ಮೂಲಕ ರಾಜ್ಯ ಸರಕಾರದ ಸೂಟ್ ಕೇಸ್ ಭರಪೂರ ಭರ್ತಿ: ಸಂಜೀವ ಮಠಂದೂರು

ಪುತ್ತೂರು: ಪ್ರಸ್ತುತ ರಾಜ್ಯ ಸರಕಾರ ಸುಲಿಗೆಕೋರ ಸರಕಾರವಾಗಿದ್ದು, ಬಿಜೆಪಿ ನಿರಂತರ ಹೋರಾಟ, ಜನಾಂದೋಲನದ ಮೂಲಕ ಜನರನ್ನು ಎಬ್ಬಿಸಲಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು. ರಾಜ್ಯ ಸರಕಾರದ ಭ್ರಷ್ಟಾಚಾರ ವಿರೋಧಿಸಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿ ಆಡಳಿತ ಸೌಧದ ಬಳಿ ಇರುವ ಅಮರ್ ಜವಾನ್ ಸ್ಮಾರಕದ ಬಳಿ ಮಂಗಳವಾರ ಬಿಜೆಪಿ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಒಂದೆಡೆ ಮಳೆ ಇಲ್ಲದೆ ಬರ ಪರಿಸ್ಥಿತಿ ಉಂಟಾಗಿದೆ. ಇನ್ನೊಂದೆಡೆ ಕರ್ನಾಟಕ ಸರಕಾರದ ಸೂಟ್ ಕೇಸ್ ಭರಪೂರ

ಶೇ. 80 ಕಮಿಷನ್ ಮೂಲಕ ರಾಜ್ಯ ಸರಕಾರದ ಸೂಟ್ ಕೇಸ್ ಭರಪೂರ ಭರ್ತಿ: ಸಂಜೀವ ಮಠಂದೂರು Read More »

ಪ್ರೇತದೊಂದಿಗೆ ಬೆರೆತ ದಿವಾಕರ ದೇವಾಡಿಗ!

ಪುತ್ತೂರು: ವೃತ್ತಿಯಲ್ಲಿ ಆಟೋ ಚಾಲಕ. ಪ್ರವೃತ್ತಿಯಲ್ಲಿ ಪ್ರೇತ ವೇಷಧಾರಿ. ಇದು ದಿವಾಕರ ದೇವಾಡಿಗ ಅವರ ಪ್ರತಿಭೆ. ಪುತ್ತೂರಿನ ಚಿಕ್ಕಮುಡ್ನೂರು ಗ್ರಾಮದ ದಿವಾಕರ ದೇವಾಡಿಗ ಅವರು ಪ್ರತೀ ವರ್ಷ ನವರಾತ್ರಿ ಸಂದರ್ಭದಲ್ಲಿ ಪ್ರೇತದೊಂದಿಗೆ ಬೆರೆತು ಮಾತನಾಡುತ್ತಾರೆ.ಕಳೆದ 12 ವರ್ಷಗಳಿಂದ ನವರಾತ್ರಿ ಸಂದರ್ಭದಲ್ಲಿ ನಿಷ್ಠೆಯಿಂದ ವೇಷ ಧರಿಸುತ್ತಾರೆ. ಶುರುವಿನ ವರ್ಷದಲ್ಲಿ ಕೃಷ್ಣ, ರಾಮ ಹೀಗೆ ನಾನಾ ವಿಧದ ವೇಷ ಧರಿಸುತ್ತಿದ್ದರು. ಇತ್ತೀಚಿನ ಆರು ವರ್ಷಗಳಿಂದ ಪ್ರೇತ ವೇಷ ಧರಿಸಿ ಜನಮಾನಸದಲ್ಲಿ ಅಚ್ಚಾಗಿದ್ದಾರೆ. ನವರಾತ್ರಿ ಬಂತೆಂದರೆ ಸಾಕು. 9 ದಿನ ಉಪವಾಸ

ಪ್ರೇತದೊಂದಿಗೆ ಬೆರೆತ ದಿವಾಕರ ದೇವಾಡಿಗ! Read More »

ದ.ಕ. ಜಿಲ್ಲೆ ಪೂರ್ಣ ಬರಪೀಡಿತ: ಘೋಷಣೆಗೆ ರೈತ ಸಂಘ, ಹಸಿರುಸೇನೆ ಆಗ್ರಹ

ಪುತ್ತೂರು: ಮೂಡಬಿದಿರೆ ಹಾಗೂ ಮಂಗಳೂರು ತಾಲೂಕನ್ನು ಮಾತ್ರ ಬರಪೀಡಿತ ಪ್ರದೇಶವೆಂದು ಘೋಷಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯನ್ನು ಕೈಬಿಟ್ಟಿರುವುದು ಜಿಲ್ಲೆಯ ರೈತರು ಹಾಗೂ ಸಮಸ್ತ ನಾಗರಿಕರಿಗೆ ಮಾಡಿದ ದ್ರೋಹ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಆರೋಪಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಜಿಲ್ಲಾಧ್ಯಕ್ಷ ಬಿ.ಶ್ರೀಧರ ಶೆಟ್ಟಿ, ದಕ್ಷಿಣ ಕನ್ನಡ, ಮಂಗಳೂರಿಗೆ ನೀರುಣಿಸುವ ನೇತ್ರಾವತಿಯನ್ನೇ ತಿರುಗಿಸಿ ಎತ್ತಿನಹೊಳೆ ಯೋಜನೆಯನ್ನು ಮಾಡಿ ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯನ್ನು ಬರಗಾಲ ಪ್ರದೇಶವನ್ನಾಗಿ ಮಾಡಲು ಸಂಚು

ದ.ಕ. ಜಿಲ್ಲೆ ಪೂರ್ಣ ಬರಪೀಡಿತ: ಘೋಷಣೆಗೆ ರೈತ ಸಂಘ, ಹಸಿರುಸೇನೆ ಆಗ್ರಹ Read More »

ಕುಡಿಯುವ ನೀರಿನ ಸಂಪರ್ಕ: ಗ್ರಾಪಂಗಳಿಗೆ ಶಾಸಕರ ಖಡಕ್ ಸೂಚನೆ | ಫೀಲ್ಡಿಗಿಳಿಯುವ ಎಚ್ಚರಿಕೆ ನೀಡಿದ ಶಾಸಕ ಅಶೋಕ್ ರೈ

ಪುತ್ತೂರು: ಗ್ರಾಮದಲ್ಲಾಗಲಿ, ನಗರದಲ್ಲಾಗಲಿ ವಾಸ್ತವ್ಯ ಇರುವ ಮನೆಗೆ ನೀರಿನ ಸಂಪರ್ಕ ನೀಡಲು ಮನೆಯವರಲ್ಲಿ ಯಾವುದೇ ದಾಖಲೆಗಳನ್ನು ಕೇಳಬೇಡಿ. ಕುಡಿಯುವ ನೀರು ಎಲ್ಲರಿಗೂ ದೊರೆಯುವಂತಾಗಬೇಕು. ದಾಖಲೆ ಇಲ್ಲ ಎಂದು ನೀರಿನ ಸಂಪರ್ಕ ಕೊಡದೆ ಇರಬಾರದು ಎಂದು ಪುತ್ತೂರು ಶಾಸಕ ಅಶೋಕ್ ರೈ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಪುತ್ತೂರು ಶಾಸಕರ ಭವನದಲ್ಲಿ ನಡೆದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಶಾಸಕರು ಈ ಸೂಚನೆ ನೀಡಿದ್ದಾರೆ.ಆರ್ಯಾಪು ಗ್ರಾಮದ ಒಳತ್ತಡ್ಕ ನಿವಾಸಿಯೋರ್ವರಿಗೆ ಗ್ರಾಪಂ ಕುಡಿಯುವ ನೀರಿನ ಸಂಪರ್ಕ

ಕುಡಿಯುವ ನೀರಿನ ಸಂಪರ್ಕ: ಗ್ರಾಪಂಗಳಿಗೆ ಶಾಸಕರ ಖಡಕ್ ಸೂಚನೆ | ಫೀಲ್ಡಿಗಿಳಿಯುವ ಎಚ್ಚರಿಕೆ ನೀಡಿದ ಶಾಸಕ ಅಶೋಕ್ ರೈ Read More »

ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ: ಭುವನ್ ರಾಮ್ ಗೆ ಚಿನ್ನದ ಪದಕ

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿ ಭುವನ್ ರಾಮ್ ಜಗದೀಶ್ ಭಂಡಾರಿ ಅವರು ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದ ಭಾರ ಎತ್ತುವ ಸ್ಪರ್ಧೆಯಲ್ಲ್ಲಿಚಿನ್ನದ ಪದಕ ಗಳಿಸಿದ್ದಾರೆ. ಮೈಸೂರಿನಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಕಾಲೇಜಿನ ಪ್ರಥಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಭುವನ್ರಾಮ್ 73 ಕೆಜಿ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ. ಇವರು ಪುತ್ತೂರಿನ ಜಗದೀಶ್ ಭಂಡಾರಿ ಹಾಗೂ ನಯನಾ ಭಂಡಾರಿ ಪುತ್ರ. ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ

ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ: ಭುವನ್ ರಾಮ್ ಗೆ ಚಿನ್ನದ ಪದಕ Read More »

error: Content is protected !!
Scroll to Top