ಪುತ್ತೂರು

ವಿದ್ಯಾಮಾತಾ ಅಕಾಡೆಮಿಯಲ್ಲಿ ನವೋದಯ ಪರೀಕ್ಷೆ: ಒಂದು ವಾರದ ವಿಶೇಷ ತರಬೇತಿ

ಪುತ್ತೂರು: ಇಲ್ಲಿಯ ಎಪಿಎಂಸಿ ರಸ್ತೆಯಲ್ಲಿರುವ ಹಿಂದೂಸ್ತಾನ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ನವೋದಯ ಮತ್ತು ಸೈನಿಕ ಶಾಲಾ ಪ್ರವೇಶಕ್ಕೆ ಒಂದು ವಾರದ ವಿಶೇಷ ತರಬೇತಿ ತರಗತಿಯನ್ನು ಅ.16 ರಿಂದ 21ರ ವರೆಗೆ ಆಯೋಜಿಸಲಾಗಿದೆ. ಈ ತರಗತಿಗಳ ಸದುಪಯೋಗಪಡಿಸಿ ಕೊಳ್ಳಲು ಬಯಸುವ ವಿದ್ಯಾರ್ಥಿಗಳು ಬೆಳಿಗ್ಗೆ 9.30ಕ್ಕೆ ಪುತ್ತೂರಿನ ವಿದ್ಯಾಮಾತಾ ಅಕಾಡೆಮಿಯಲ್ಲಿ ಹಾಜರಿರಬೇಕು. ಹೆಚ್ಚಿನ ಮಾಹಿತಿಗಾಗಿ 9148935808 / 96204 68869 ಸಂಪರ್ಕಿಸಬಹುದು.

ವಿದ್ಯಾಮಾತಾ ಅಕಾಡೆಮಿಯಲ್ಲಿ ನವೋದಯ ಪರೀಕ್ಷೆ: ಒಂದು ವಾರದ ವಿಶೇಷ ತರಬೇತಿ Read More »

ಹಿಂದಾರು-ಮರ್ತಡ್ಕ ನೂತನ ರಸ್ತೆ ಉದ್ಘಾಟನೆ

ಪುತ್ತೂರು: ಮುಂಡೂರು ಗ್ರಾಮದ ಹಿಂದಾರು- ಮರ್ತಡ್ಕ ನೂತನ ರಸ್ತೆಯನ್ನು ಶಾಸಕ ಅಶೋಕ್ ರೈ ಭಾನುವಾರ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಡಿ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ,ಕಾಂಗ್ರೆಸ್ ಮುಖಂಡರಾದ ಉಮಾನಾಥ ಶೆಟ್ಟಿ, ಪಂಜಿಗುಡ್ಡೆ ಈಶ್ವರ ಭಟ್, ಅಮಲ ರಾಮಚಂದ್ರ, ಕೃಷ್ಣಪ್ತಸಾದ್ ಆಳ್ವ, ಅನ್ವರ್ ಖಾಸಿಂ, ವಲಯಾಧ್ಯಕ್ಷ ಸುಪ್ರಿತ್ ಕಣ್ಣಾರಾಯ, ಬೂತ್ ಅಧ್ಯಕ್ಷ ಇಬ್ರಾಹಿಂ ಮುಲಾರ್, ಮುಂಡೂರು ಗ್ರಾಪಂ ಸದಸ್ಯ ಕಮಲೇಶ್ ಮತ್ತಿತರರು ಉಪಸ್ಥಿತರಿದ್ದರು. ಯಾಕೂಬ್ ಮುಲಾರ್ ಸ್ವಾಗತಿಸಿದರು.

ಹಿಂದಾರು-ಮರ್ತಡ್ಕ ನೂತನ ರಸ್ತೆ ಉದ್ಘಾಟನೆ Read More »

ನಿವೃತ್ತ ಬ್ಯಾಂಕ್ ಉದ್ಯೋಗಿ ರಾಮಚಂದ್ರ ಹೆಗ್ಡೆ ನಿಧನ

ಉಪ್ಪಿನಂಗಡಿ: ರಾಮನಗರ ನಿವಾಸಿ ರಾಮಚಂದ್ರ ಹೆಗ್ಡೆ (89) ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು. ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದ ಅವರು ವಯೋ ಸಹಜದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ನಿವೃತ್ತ ಬ್ಯಾಂಕ್ ಉದ್ಯೋಗಿ ರಾಮಚಂದ್ರ ಹೆಗ್ಡೆ ನಿಧನ Read More »

ಮಕ್ಕಳಿಗೆ ಓದುವ ವಾತಾವರಣ ನಿರ್ಮಿಸಿದರೆ ಸಾಧನೆ ಮಾಡಲು ಸಾಧ್ಯ: ಶಾಸಕ ಅಶೋಕ್ ರೈ

ಪುತ್ತೂರು: ಮಕ್ಕಳು ಕಲಿತು ಸಾಧನೆ ಮಾಡಬೇಕಾದರೆ ಕೇವಲ ಶಾಲೆಯಲ್ಲಿ ಕಲಿತರೆ ಮಾತ್ರ ಸಾಲದು. ಮಕ್ಕಳಿಗೆ ಮನೆಯಲ್ಲಿ ಓದುವ ವಾತಾವರಣವನ್ನು ನಿರ್ಮಾಣ ಮಾಡಬೇಕಾಗಿದ್ದು,  ಅದು ಪೋಷಕರ ಕರ್ತವ್ಯವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.  ಶಿಕ್ಷಣ ಇಲಾಖೆ, ಮಣಿಕ್ಕರ ಸ.ಪ್ರೌಢಶಾಲೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಆಶ್ರಯದಲ್ಲಿ 2022-23ನೇ ಸಾಲಿನ ಎಸೆಸೆಲ್ಸಿ ಸಾಧಕ ವಿದ್ಯಾರ್ಥಿಗಳಿಗೆ, ನಿವೃತ್ತ ಶಿಕ್ಷಕರಿಗೆ, ದಾನಿಗಳಿಗೆ ಸಮ್ಮಾನ ಹಾಗೂ ಪಾಲ್ತಾಡು ನ್ಯೂ ಬ್ರದರ್ಸ್ ನವರು ಶಾಲಾ ಮಕ್ಕಳಿಗೆ ಕೊಡುಗೆಯಾಗಿ ನೀಡಿದ ಟೀ ಶರ್ಟ್ ಅನಾವರಣ

ಮಕ್ಕಳಿಗೆ ಓದುವ ವಾತಾವರಣ ನಿರ್ಮಿಸಿದರೆ ಸಾಧನೆ ಮಾಡಲು ಸಾಧ್ಯ: ಶಾಸಕ ಅಶೋಕ್ ರೈ Read More »

ಉಪ್ಪಿನಂಗಡಿ ಯುವಕ ಬೆಂಗಳೂರಿನಲ್ಲಿ ಮೃತ್ಯು

ಉಪ್ಪಿನಂಗಡಿ: ತಾಲೂಕಿನ ಉಪ್ಪಿನಂಗಡಿಯ ಯುವಕನೋರ್ವ ಬೆಂಗಳೂರಿನಲ್ಲಿ ಅನಾರೋಗ್ಯದಿಂದ ಮೃತಪಟ್ಟ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಉಪ್ಪಿನಂಗಡಿ ಮಠ ನಿವಾಸಿ ಹಂಝ ಎಂಬವರ ಪುತ್ರ ಅಜ್ಜದ್ (18) ಮೃತಪಟ್ಟ ಯುವಕ. ಎರಡು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಅಜ್ಜದ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಉಪ್ಪಿನಂಗಡಿ ಯುವಕ ಬೆಂಗಳೂರಿನಲ್ಲಿ ಮೃತ್ಯು Read More »

ಅ. 16: ಪುತ್ತೂರು ರೆಡ್ ಕ್ರಾಸ್ ಘಟಕದಿಂದ ಡಯಾಲಿಸಿಸ್ ಯಂತ್ರ ಹಸ್ತಾಂತರ

ಪುತ್ತೂರು : ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಪುತ್ತೂರು ರೆಡ್ ಕ್ರಾಸ್ ವತಿಯಿಂದ ಪುತ್ತೂರು ಸರಕಾರಿ ಆತ್ರೆಯಲ್ಲಿ ಕಾರ್ಯಾಚರಿಸುತ್ತಿರುವ ಡಯಾಲಿಸಿಸ್ ಘಟಕಕ್ಕೆ 7.5 ಲಕ್ಷ ರೂ. ವೆಚ್ಚದಲ್ಲಿ ಡಯಾಲಿಸಿಸ್ ಯಂತ್ರವೊಂದನ್ನು ನೀಡಲಾಗಿದ್ದು, ಹಸ್ತಾಂತರ ಕಾರ್ಯಕ್ರಮ ಅ. 16ರಂದು ನಡೆಯಲಿದೆ ಎಂದು ಪುತ್ತೂರು ರೆಡ್ ಕ್ರಾಸ್ ಸಭಾಪತಿ ಎಸ್. ಸಂತೋಷ್ ಶೆಟ್ಟಿ ತಿಳಿಸಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು ಸರಕಾರಿ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗಕ್ಕೆ 1 ಲಕ್ಷ ರೂ. ವೆಚ್ಚದ ಮಲ್ಟಿ ಪ್ಯಾರಾ ಮಾನಿಟರ್ ಕೊಡುಗೆ

ಅ. 16: ಪುತ್ತೂರು ರೆಡ್ ಕ್ರಾಸ್ ಘಟಕದಿಂದ ಡಯಾಲಿಸಿಸ್ ಯಂತ್ರ ಹಸ್ತಾಂತರ Read More »

ನಂದಿನಿ ಹಾಲು ವಿತರಕ ಉದಯ ನಿಧನ

ಪುತ್ತೂರು: ನಂದಿನಿ ಹಾಲು ವಿತರಕ, ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ವ್ಯಾಪಾರ ಮಳಿಗೆಯ ಸಿಬ್ಬಂದಿ ಉದಯ (51 ವ.) ಎಂಬವರು ಅ. 13ರಂದು ರಾತ್ರಿ ನಿಧನರಾದರು. ಕೊಡಿಪ್ಪಾಡಿಯಲ್ಲಿ ವಾಸ್ತವ್ಯ ಹೊಂದಿರುವ ಉದಯ ಅವರು ಮೂಲತಃ ಅಡೂರಿನವರು. ಪುತ್ತೂರು ಜೇನು ವ್ಯವಸಾಯ ಸಹಕಾರ ಸಂಘದ ಕಟ್ಟಡದ ಪಕ್ಕದಲ್ಲಿ ನಂದಿನಿ ಹಾಲು ವಿತರಣೆ ಅಂಗಡಿ ಹೊಂದಿದ್ದರು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್’ಗೆ ಬಂದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಹೋಗುತ್ತಿದ್ದ ವೇಳೆ ನಿಧನರಾದರು.

ನಂದಿನಿ ಹಾಲು ವಿತರಕ ಉದಯ ನಿಧನ Read More »

ಅಡಕೆ ಸಾಗಾಟದ ಪಿಕಪ್ ಪಲ್ಟಿ

ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ಅಡಕೆ ಸಾಗಾಟದ ಪಿಕಪ್ ಪಲ್ಟಿಯಾದ ಘಟನೆ ಕೋಡಿಂಬಾಡಿಯಲ್ಲಿ ನಡೆದಿದೆ. ಅಡಿಕೆ ಅನ್ಲೋಡ್ ಮಾಡಿ ಸಾಗರದಿಂದ ವಾಪಾಸ್ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಅಡಕೆ ಸಾಗಾಟದ ಪಿಕಪ್ ಪಲ್ಟಿ Read More »

ಸಂಟ್ಯಾರು ಅಂಗನವಾಡಿ ಪರಿಸರದಲ್ಲಿ ಸ್ವಚ್ಛತೆ

ಪುತ್ತೂರು: ಆರ್ಯಾಪು ಗ್ರಾಮದ ಸಂಟ್ಯಾರು ಅಂಗನವಾಡಿ ಪರಿಸರದಲ್ಲಿ ಶುಕ್ರವಾರ ಸ್ವಚ್ಚತೆ ನಡೆಸಲಾಯಿತು. ಸ್ವಚ್ಛತಾ ಹೀ ಸೇವಾ ಹಾಗೂ ತ್ಯಾಜ್ಯಮುಕ್ತ ಆಂದೋಲನದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಆರ್ಯಾಪು ಗ್ರಾಮ ಪಂಚಾಯಿತಿ 4 ವಾರ್ಡಿನ ಸದಸ್ಯರಾದ ಹರೀಶ್ ನಾಯಕ್ ಬಳಕ್ಕ, ಯತೀಶ್ ದೇವ ಸಂಟ್ಯಾರು, ಕಾರ್ಯದರ್ಶಿ ಮೋನಪ್ಪ, ಹೊನ್ನಪ್ಪ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಅಂಗನವಾಡಿ ಮಕ್ಕಳ ಪೋಷಕರು ಹಾಗೂ ಸ್ತ್ರೀಶಕ್ತಿ ಸಂಘಟನೆ, ಬಾಲವಿಕಾಸ ಸಮಿತಿ , ಸಾರ್ವಜನಿಕರು ಉಪಸ್ಥಿತರಿದ್ದರು.

ಸಂಟ್ಯಾರು ಅಂಗನವಾಡಿ ಪರಿಸರದಲ್ಲಿ ಸ್ವಚ್ಛತೆ Read More »

ಜಮಾಅತೆ ಇಸ್ಲಾಮೀ ಹಿಂದ್’ನಿಂದ ವಿಚಾರ ವಿನಿಮಯ

ಪುತ್ತೂರು: ಪ್ರತಿ ವರ್ಷ ಪ್ರವಾದಿ ಮಹಮ್ಮದ್ ಪೈಗಂಬರ್ (ಸ.ಅ.) ಅವರ ಜನ್ಮ ಮಾಸದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಸೀರತ್ ಅಭಿಯಾನ ನಡೆಸಲಾಗುತ್ತಿದ್ದು, ನ. 17ರಂದು ಸಮಾರೋಪ ಸಮಾರಂಭ ಪುತ್ತೂರು ಪುರಭವನದಲ್ಲಿ ನಡೆಯಲಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಉಪ ಸಂಚಾಲಕ ಅಮೀನ್ ಹಸನ್ ತಿಳಿಸಿದ್ದಾರೆ. ಅಭಿಯಾನದ ಅಂಗವಾಗಿ ಗುರುವಾರ ಸಂಘಟನೆ ವತಿಯಿಂದ ಪುತ್ತೂರಿನಲ್ಲಿ ಪತ್ರಕರ್ತರ ಜತೆಗಿನ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ಸಮಾನತೆಯ ಸಮಾಜ ಶಿಲ್ಪಿ ಅಭಿಯಾನ’ ಎಂಬ ಹೆಸರಿನಲ್ಲಿ ಅಭಿಯಾನ ನಡೆಯುತ್ತಿದ್ದು,

ಜಮಾಅತೆ ಇಸ್ಲಾಮೀ ಹಿಂದ್’ನಿಂದ ವಿಚಾರ ವಿನಿಮಯ Read More »

error: Content is protected !!
Scroll to Top