ಪುತ್ತೂರು

ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

ಪುತ್ತೂರು: ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾವು ಸಮೀಪದ ಅಮ್ಚಿನಡ್ಕದಲ್ಲಿ ನಡೆದಿದೆ. ಆಯಿಷಾ ಎಂಬವರೇ ಈ ಕೃತ್ಯ ಎಸಗಿದವರು. ವಿವಾಹಿತೆಯಾಗಿದ್ದ ಆಯಿಷಾ ಮುಖಾರಿಮೂಲೆ ಜೈನುದ್ದೀನ್ ಎಂಬವರ ಪುತ್ರಿಯಾಗಿದ್ದಾರೆ. ಮೃತದೇಹ ಮನೆಯ ಬಾವಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ Read More »

ನಾಳೆ: “ಪುಳಿಮುಂಚಿ” ತುಳು ಚಿತ್ರ ಕರಾವಳಿಯಾದ್ಯಂತ ತೆರೆಗೆ

ಪುತ್ತೂರು: ಬಹು ನಿರೀಕ್ಷಿತ ‘ಪುಳಿಮುಂಚಿ’ ತುಳು ಚಿತ್ರ ಅ.27ರಂದು ಪುತ್ತೂರು ಸೇರಿದಂತೆ ಕರಾವಳಿಯಾದ್ಯಂತ ತೆರೆ ಕಾಣಲಿದೆ. ಹೆಚ್.ಪಿ.ಆರ್. ಫೌಂಡೇಶನ್ ಮುಖ್ಯಸ್ಥ ಹರಿಪ್ರಸಾದ್ ರೈ ಮಠಂತಬೆಟ್ಟು ನಿರ್ಮಾಣದ ತ್ರಿಶೂಲ್ ಶೆಟ್ಟಿ ನಿರ್ದೇಶನದ ಪುಳಿಮುಂಚಿ ಚಿತ್ರಕ್ಕೆ ಕಿಶೋರ್ ಕುಮಾರ್ ಶೆಟ್ಟಿ ಸಂಗೀತ ನೀಡಿದ್ದು, ಮಯೂರ್ ಆರ್. ಶೆಟ್ಟಿ ಸಾಹಿತ್ಯ ಮತ್ತು ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದಲ್ಲಿ ಹಾಸ್ಯದಿಗ್ಗಜರ ದಂಡೇ ಇದ್ದು ತುಳು ಚಿತ್ರಪ್ರೇಮಿಗಳಲ್ಲಿ ಪುಳಿಮುಂಚಿ ಹೊಸ ನಿರೀಕ್ಷೆ ಮೂಡಿಸಿದೆ. ವಿನೀತ್ ಕುಮಾರ್ ನಾಯಕ ನಟನಾಗಿ, ಸಮತಾ ಅಮೀನ್ ನಾಯಕಿಯಾಗಿರುವ ಈ ಚಿತ್ರದಲ್ಲಿ

ನಾಳೆ: “ಪುಳಿಮುಂಚಿ” ತುಳು ಚಿತ್ರ ಕರಾವಳಿಯಾದ್ಯಂತ ತೆರೆಗೆ Read More »

ನಿರ್ಮಾಣ ಹಂತದ ಮನೆಯ ಮೇಲ್ಛಾವಣಿಯಿಂದ ಬಿದ್ದು ಕಾರ್ಮಿಕರೊಬ್ಬರು ಮೃತ್ಯು : ಗುತ್ತಿಗೆದಾರ ಗಂಭೀರ ಗಾಯ

ಅರಿಯಡ್ಕ:ನಿರ್ಮಾಣ ಹಂತದ ಮನೆಯ ಸಿಟೌಟ್‌ನ ಮೇಲ್ಬಾವಣಿ ಕುಸಿದ ಪರಿಣಾಮ ಕಾರ್ಮಿಕರೊಬ್ಬರು ಮೃತಪಟ್ಟು, ಗುತ್ತಿಗೆದಾರ ಗಂಭೀರ ಗಾಯಗೊಂಡಿರುವ ಘಟನೆ ಅರಿಯಡ್ಕ ಗ್ರಾಮದ ಪಾದಲಾಡಿ ಎಂಬಲ್ಲಿ ನಡೆದಿದೆ. ಅರಿಯಡ್ಕ ಗ್ರಾಮದ ಕೌಡಿಚ್ಚಾರ್ ನಿವಾಸಿ ಶೇಖರ್ ಕುಲಾಲ್(45) ಮೃತಪಟ್ಟವರು. ಶೇಖರ್ ಕುಲಾಲ್ ಅರಿಯಡ್ಕ ಗ್ರಾಮದ ಪಾದಲಾಡಿ ಎಂಬಲ್ಲಿ ಕಮಲ ಎಂಬವರ ಮನೆಗೆ ಸೆಂಟ್ರಿಂಗ್ ಕೆಲಸಕ್ಕೆ ತೆರಳಿದ್ದರು. ಮನೆಯ ಸಿಟೌಟ್‌ನ ಮೇಲ್ಟಾವಣಿಯ ಸೆಂಟ್ರಿಂಗ್ ಕೆಲಸ ಮಾಡುತ್ತಿರುವ ಸಂದರ್ಭ ಮೇಲ್ಟಾವಣೆ ಕುಸಿದು ಬಿದ್ದು ಶೇಖರ್ ಕುಲಾಲ್ ಹಾಗೂ ಜೊತೆಗೆ ಕೆಲಸ ಮಾಡಿಕೊಂಡಿದ್ದ ಗುತ್ತಿಗೆದಾರ ಸಂಜೀವ

ನಿರ್ಮಾಣ ಹಂತದ ಮನೆಯ ಮೇಲ್ಛಾವಣಿಯಿಂದ ಬಿದ್ದು ಕಾರ್ಮಿಕರೊಬ್ಬರು ಮೃತ್ಯು : ಗುತ್ತಿಗೆದಾರ ಗಂಭೀರ ಗಾಯ Read More »

ವಿಶ್ವ ಬಂಟರ ಸಮ್ಮೇಳನದಲ್ಲಿ ಮಲ್ಲಿಕಾ ಜೆ. ರೈ ಪುತ್ತೂರು ಅವರಿಂದ ಕವನ ವಾಚನ

ಪುತ್ತೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಅ.28 ಹಾಗೂ 29 ರಂದು ಉಡುಪಿ ಬಂಟರ ಸಂಘದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ನಡೆಯಲಿರುವ ವಿಶ್ವ ಬಂಟರ ಸಮ್ಮೇಳನದಲ್ಲಿ ತುಳು, ಕನ್ನಡ ಸಾಹಿತಿ, ಕವಯಿತ್ರಿ ಹಾಗೂ ಅಂಕಣಗಾರರಾಗಿರುವ ಮಲ್ಲಿಕಾ ಜೆ.ರೈ ಪುತ್ತೂರು ತಮ್ಮ ಕವನ ವಾಚನ ಮಾಡಲಿದ್ದಾರೆ. ವಿಶ್ವ ಬಂಟರ ಸಮ್ಮೇಳನದ ಅಂಗವಾಗಿ ಕವಿ ಸಮಯ-ಕಾವ್ಯ ನಮನ – ಚಿತ್ರ ಚಿತ್ತಾರ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದ್ದು ತಮ್ಮ ಕವನ ಪ್ರಸ್ತುತ ಪಡಿಸಲಿದ್ದಾರೆ. ಮಲ್ಲಿಕಾ ಜೆ ರೈಯವರು ಪ್ರಸ್ತುತ ಪುತ್ತೂರು

ವಿಶ್ವ ಬಂಟರ ಸಮ್ಮೇಳನದಲ್ಲಿ ಮಲ್ಲಿಕಾ ಜೆ. ರೈ ಪುತ್ತೂರು ಅವರಿಂದ ಕವನ ವಾಚನ Read More »

ಚೆಲ್ಯಡ್ಕ ಮುಳುಗು ಸೇತುವೆ ಅಪ್ರೋಚ್ ಸ್ಲ್ಯಾಬ್ ಕುಸಿತ : ವಾಹನ ಸವಾರರಿಗೆ ಬದಲಿ ವ್ಯವಸ್ಥೆ

ಪುತ್ತೂರು: ತಾಲೂಕಿನ ಮುಳುಗು ಸೇತುವೆಗಳಲ್ಲಿ ಒಂದಾದ ಚೆಲ್ಯಡ್ಕ ಮುಳುಗು ಸೇತುವೆಯ ಅಪ್ರೋಚ್ ಸ್ಲ್ಯಾಬ್ ಕುಸಿದು ಬಿದ್ದಿದ್ದು, ಈ ಹಿನ್ನಲೆಯಲ್ಲಿ ಕಾಮಗಾರಿ ಆರಂಭಿಸಬೇಕಾಗಿರುವುದರಿಂದ ಅ.27 ರಿಂದ ನ.6ರ ವರೆಗೆ ವಾಹನಗಳು ಬದಲಿ ರಸ್ತೆಯಲ್ಲಿ ಸಂಚರಿಸುವಂತೆ ಲೋಕೋಪಯೋಗಿ ಇಲಾಖೆ ಸೂಚಿಸಿದೆ. ಆರ್ಯಾಪು ಗ್ರಾಮದ ಒಳತ್ತಡ್ಕ-ದೇವಸ್ಯದಿಂದ ಬೆಟ್ಟಂಪಾಡಿ-ಪಾಣಾಜೆ ಕಡೆಗೆ ಹೋಗುವ ವಾಹನಗಳು ಈ ಮಾರ್ಗವಾಗಿ ಚಲಿಸುವುದನ್ನು ಸ್ಥಗಿತಗೊಳಿಸಬೇಕಾಗಿದೆ. ಬದಲಿ ರಸ್ತೆಯಾಗಿ ದೇವಸ್ಯ-ಬೈರೋಡಿ-ಕಾಪಿಕಾಡು-ಕೈಕಾರ ಮಾರ್ಗವಾಗಿ ವಾಹನಗಳು ಚಲಿಸುವಂತೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚೆಲ್ಯಡ್ಕ ಮುಳುಗು ಸೇತುವೆ ಅಪ್ರೋಚ್ ಸ್ಲ್ಯಾಬ್ ಕುಸಿತ : ವಾಹನ ಸವಾರರಿಗೆ ಬದಲಿ ವ್ಯವಸ್ಥೆ Read More »

ತಮಿಳುನಾಡು ಮೂಲದ ಸೈಟ್ ಇಂಜಿನಿಯರ್ ಸಂಶಯಾಸ್ಪದ ರೀತಿಯಲ್ಲಿ ಮೃತ್ಯು

ಉಪ್ಪಿನಂಗಡಿ: ಕೆಎನ್‍ಆರ್ ಸಂಸ್ಥೆಯಲ್ಲಿ ಸೈಟ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ತಮಿಳುನಾಡು ಮೂಲದ ವ್ಯಕ್ತಿಯೊಬ್ಬರು ಸಂಶಯಾಸ್ಪದವಾಗಿ ಮೃತಪಟ್ಟ ಘಟನೆ ಪರ್ನೆಯಲ್ಲಿ ನಡೆದಿದೆ. ತಮಿಳುನಾಡು ಮೂಲದ ಅನೂಫ್ (47) ಮೃತಪಟ್ಟವರು. ಅನೂಫ್ ಅವರು ರಾಷ್ಟ್ರೀಯ ಹೆದ್ದಾರಿ ವಿಸ್ತರಣಾ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಕೆಎನ್‍ಆರ್ ಸಂಸ್ಥೆಯಲ್ಲಿ ಸೈಟ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಅ.21 ರಂದು ಉಪ್ಪಿನಂಗಡಿ ಪ್ರದೇಶದಲ್ಲಿ ಕೆಲಸ ನಿರ್ವಹಿಸಲು ವರ್ಗಾವಣೆಯಾಗಿ ಬಂದಿದ್ದರು. ಪೆರ್ನೆಯ ಮುಸ್ತಾಫ ಎಂಬವರ ಮಾಲಕತ್ವದ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಅ.22 ರಂದು ಸಹೋದ್ಯೋಗಿಯೊಬ್ಬರು ಮನೆಗೆ

ತಮಿಳುನಾಡು ಮೂಲದ ಸೈಟ್ ಇಂಜಿನಿಯರ್ ಸಂಶಯಾಸ್ಪದ ರೀತಿಯಲ್ಲಿ ಮೃತ್ಯು Read More »

ವೈಭವದ ಶೋಭಾಯಾತ್ರೆಯೊಂದಿಗೆ ಪುತ್ತೂರು ಶಾರದೋತ್ಸವ ಸಮಾಪನ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಒಂಭತ್ತು ದಿನಗಳ ಕಾಲ ನಡೆದ ಪುತ್ತೂರು ಶಾರದೋತ್ಸವ ವೈಭವದ ಶೋಭಾಯಾತ್ರೆಯೊಂದಿಗೆ ಸಮಾಪನಗೊಂಡಿತು. ಸಂಜೆ ಶ್ರೀ ದೇವಸ್ಥಾನದಲ್ಲಿ ಶ್ರೀ ಶಾರದಾ ಮಾತೆಗೆ ಮಹಾಪೂಜೆ ಬಳಿಕ ಶೋಭಾಯಾತ್ರೆ ಹೊರಟು ಬೊಳುವಾರಿಗೆ ತೆರಳಿತು. ಅಲ್ಲಿ ಮೆರವಣಿಗೆಗೆ ಚಾಲನೆ ನೀಡಿ ಭಜನಾ ತಂಡಗಳ ಸಹಸ್ರಾರು ಭಜಕರು ಕುಣಿತ ಭಜನೆಯೊಂದಿಗೆ, ಆಕರ್ಷಕ ಸ್ತಬ್ಧಚಿತ್ರ, ಡೊಳ್ಳು ಕುಣಿತ, ಮುಂತಾದ ಹತ್ತು ಹಲವಾರು ಆಕರ್ಷಣೆಯೊಂದಿಗೆ ಬೊಳುವಾರಿನಿಂದ ಮುಖ್ಯರಸ್ತೆಯಲ್ಲಿ ಆಗಮಿಸಿ, ಬಸ್ ನಿಲ್ದಾಣ, ಕಲ್ಲಾರೆ,

ವೈಭವದ ಶೋಭಾಯಾತ್ರೆಯೊಂದಿಗೆ ಪುತ್ತೂರು ಶಾರದೋತ್ಸವ ಸಮಾಪನ Read More »

ದ.ಕ.ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆಯಿಂದ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಆಹ್ವಾನ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆಯಿಂದ ಸೋಶಿಯಲ್ ಮೀಡಿಯಾ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಒಟ್ಟು 250 ಹುದ್ದೆಗಳು ಖಾಲಿಯಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನ್ನಡ, ಇಂಗ್ಲೀಷ್ ಅಥವಾ ಹಿಂದಿ ಈ ಮೂರು ಭಾಷೆಗಳಲ್ಲಿ ಯಾವುದಾದರು ಒಂದರಲ್ಲಿ ಭಾಷಾ ಪರಿಣತಿ ಹೊಂದಿರಬೇಕು. 15 ರಿಂದ 20 ಸಾವಿರ ವೇತನ ನೀಡಲಾಗುವುದು. ವರ್ಕ್ ಫ್ರಮ್ ಹೋಮ್. ಅಭ್ಯರ್ಥಿಗಳು ಪದವೀಧರರಾಗಿರಬೇಕು ಮತ್ತು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರಬೇಕು. ಈ ಕೆಳಗಿನ

ದ.ಕ.ಜಿಲ್ಲೆ ತೆಂಗು ರೈತ ಉತ್ಪಾದಕರ ಸಂಸ್ಥೆಯಿಂದ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಆಹ್ವಾನ Read More »

ಸರಸ್ವತಿ ಗೀತ ಗಾಯನ ಸ್ಪರ್ಧೆಯ ಫಲಿತಾಂಶ

ಪುತ್ತೂರು: ನವರಾತ್ರಿ ಹಿನ್ನೆಲೆಯಲ್ಲಿ ನ್ಯೂಸ್ ಪುತ್ತೂರು ಏರ್ಪಡಿಸಿದ್ದ ಸರಸ್ವತಿ ಗೀತ ಗಾಯನ ಸ್ಪರ್ಧೆಯ ಫಲಿತಾಂಶವನ್ನು ಇಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕ ವಿಭಾಗದಲ್ಲಿ ಸುಮಾ ಕೋಟೆ ಪ್ರಥಮ, ಸಾನ್ವಿ ಕಜೆ ದ್ವಿತೀಯ, ಶಿವಪ್ರಿಯಾ ಪಿ. ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಶಾಲಾ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಸುಪ್ರಜಾ ರಾವ್ ಪ್ರಥಮ, ಜನನಿ ದ್ವಿತೀಯ ಸ್ಥಾನ ಹಾಗೂ ಆರಾಧ್ಯ ಸಿ.ಯು. ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ತೀರ್ಪುಗಾರರಾಗಿ ಸಂಗೀತಾ ಶಿಕ್ಷಕಿಯರಾದ ಪವಿತ್ರಾ ರೂಪೇಶ್, ಪೂರ್ಣಿಮಾ ದಿನೇಶ್ ಅಂಬೆಕಲ್ಲು ಸಹಕರಿಸಿದರು.

ಸರಸ್ವತಿ ಗೀತ ಗಾಯನ ಸ್ಪರ್ಧೆಯ ಫಲಿತಾಂಶ Read More »

ರೈ ಚಿಕನ್ ಸೆಂಟರ್‌ ಮಾಲಕ ಗಂಗಾಧರ್ ನಾಯ್ಕ್ ನಿಧನ

ಪುತ್ತೂರು: ಪಂಜಳ ನಿವಾಸಿ, ರೈ ಚಿಕನ್ ಸೆಂಟರ್‌ ಮಾಲಕ ಗಂಗಾಧರ್ ನಾಯ್ಕ್ (64 ವ.) ಅಸೌಖ್ಯದಿಂದ ಪಂಜಳದ ಸ್ವಗೃಹದಲ್ಲಿ ಅ. 22ರಂದು ನಿಧನರಾದರು. ಗಂಗಾಧರ್ ನಾಯ್ಕ್ ಅವರು ಪುತ್ತೂರು ಎಪಿಎಂಸಿ ರಸ್ತೆಯ ಕಾಂಗ್ರೆಸ್ ಕಚೇರಿ ಸಮೀಪ ರೈ ಚಿಕನ್ ಸೆಂಟರ್ ನಡೆಸುತ್ತಿದ್ದರು‌. ಮೃತರು ತಾಯಿ ಗಿರಿಜಾ, ಸಹೋದರ ಮೋಹನ್ ನಾಯ್ಕ್ , ಹಾಗೂ ಸಹೋದರಿಯರನ್ನು ಅಗಲಿದ್ದಾರೆ.

ರೈ ಚಿಕನ್ ಸೆಂಟರ್‌ ಮಾಲಕ ಗಂಗಾಧರ್ ನಾಯ್ಕ್ ನಿಧನ Read More »

error: Content is protected !!
Scroll to Top