ಪುತ್ತೂರು

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ‘ಡಿಕ್ಷನ್’ ಲೋಕಾರ್ಪಣೆ

ಪುತ್ತೂರು: ಶಾಲಾ ಮಕ್ಕಳ ಪ್ರತಿಭಾ ದರ್ಪಣವಾದ ಭಿತ್ತಿಪತ್ರ ‘ಡಿಕ್ಷನ್’ಇದನ್ನು ಪುತ್ತೂರಿನ ಹಿರಿಯ ಪತ್ರಕರ್ತ ಲೋಕೇಶ್ ಬನ್ನೂರು ಅವರು ಲೋಕಾರ್ಪಣೆಗೊಳಿಸಿದರು. ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ನಡೆದ ಸುಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಕ್ಕಳು ಗೋಡೆಯಲ್ಲಿ ಗೀಚಿದ್ದಕ್ಕೆ ಅವರಿಗೆ ಗದರಿಸಬಾರದು, ಬದಲಾಗಿ ಗೀಚುವಿಕೆಯನ್ನು ಪುಸ್ತಕಕ್ಕೆ ವರ್ಗಾಯಿಸಬೇಕು ಎಂದರು. ಇದು ಪೋಷಕರ ಜವಾಬ್ದಾರಿಯಾಗಬೇಕು ಎಂದು ಕಿವಿಮಾತು ಹೇಳಿದರು. ‘ಡಿಕ್ಷನ್’ ಎಂಬ ಹೆಸರು ಸೂಚಿಸಿದ ಶಾಲಾಡಳಿತ ಮಂಡಳಿಯ ನಿರ್ದೇಶಕ ಸೀತಾರಾಮ ಕೇವಳ ಅವರು ಮಾತನಾಡಿ ಸರಳ ಬರವಣಿಗೆಯ ಕುರಿತು ಮಕ್ಕಳಿಗೆ ಸಲಹೆ […]

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ‘ಡಿಕ್ಷನ್’ ಲೋಕಾರ್ಪಣೆ Read More »

ಪುತ್ತೂರು : ಕುಖ್ಯಾತ ಆರೋಪಿಯ ಬಂಧನ

ಪುತ್ತೂರು : ಕೇರಳ ಹಾಗೂ ಕರ್ನಾಟಕಕ್ಕೆ ಬೇಕಾಗಿದ್ದ ಅಂತರ್‌ರಾಜ್ಯ ಆರೋಪಿ ಇಲಿಯಾಸ್ ಪಿ.ಎ. ಎಂಬಾತನನ್ನು ಪೊಲೀಸರು ಬಂಧಿಸಿ ಶುಕ್ರವಾರ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಕೇರಳ ರಾಜ್ಯದ ತೃಶ್ಶೂರ್ ಜಿಲ್ಲೆಯ ವಿಯ್ಯೂರು ಎಂಬಲ್ಲಿನ ನಿವಾಸಿಯಾದ ಇಲಿಯಾಸ್ ವಿರುದ್ಧ ಪುತ್ತೂರು ನಗರ ಠಾಣೆ, ಉಪ್ಪಿನಂಗಡಿ ಹಾಗೂ ಧರ್ಮಸ್ಥಳ ಠಾಣೆಗಳಲ್ಲಿ ಹಲವು ಪ್ರಕರಣಗಳಿದ್ದು, ತೃಶ್ಶೂರ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪುತ್ತೂರು ಉಪವಿಭಾಗದ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ಪೊಲೀಸ್ ಉಪನಿರೀಕ್ಷಕ ಕೌಶಿಕ್

ಪುತ್ತೂರು : ಕುಖ್ಯಾತ ಆರೋಪಿಯ ಬಂಧನ Read More »

ಆ.10 : ಮಂಡ್ಯದಲ್ಲಿ ಕೆ.ಆರ್ದ.ಎಸ್ ಪಾರ್ಟಿಯ ಸಂಸ್ಥಾಪನ ದಿನ, ಮಹಾ ಅಧಿವೇಶನ

ಪುತ್ತೂರು: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ 6ನೇ ಸಂಸ್ಥಾಪನಾ ದಿನ ಮತ್ತು ಮಹಾ ಅಧಿವೇಶನ ಆ.10ರಂದು ಮಂಡ್ಯದ ಜ್ಯೂಬಿಲಿ ಪಾರ್ಕ್‌ನಲ್ಲಿ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಿಂದ 300 ಮಂದಿ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಕೆಆರ್‌ಎಸ್ ಪಾರ್ಟಿಯ ದ.ಕ.ಜಿಲ್ಲಾ ಅಧ್ಯಕ್ಷ ವೇಣುಗೋಪಾಲ್ ಹೇಳಿದ್ದಾರೆ. ಶುಕ್ರವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2019ರ ಆ.10ರಂದು ಬೆಂಗಳೂರಿನಲ್ಲಿ ಪಕ್ಷವು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಮತ್ತು ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ ಅವರಿಂದ ಉದ್ಘಾಟನೆಗೊಂಡು ಕಳೆದ ಆರು ವರ್ಷಗಳಿಂದ

ಆ.10 : ಮಂಡ್ಯದಲ್ಲಿ ಕೆ.ಆರ್ದ.ಎಸ್ ಪಾರ್ಟಿಯ ಸಂಸ್ಥಾಪನ ದಿನ, ಮಹಾ ಅಧಿವೇಶನ Read More »

ಆ.10 : ಚೆನ್ನಾವರದಲ್ಲಿ 4ನೇ ವರ್ಷದ ಆಟಿದ ಕೂಟ ಕೆಸರ್‌ಡ್ ಒಂಜಿ ದಿನ |ವಾಲಿಬಾಲ್ ,ತ್ರೋಬಾಲ್, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಸ್ಫರ್ಧೆಗಳು

ಸವಣೂರು : ಅಭ್ಯುದಯ ಯುವಕ ಮಂಡಲ (ರಿ.) ಚೆನ್ನಾವರ ಪಾಲ್ತಾಡಿ ಇದರ ವತಿಯಿಂದ ಉಳ್ಳಾಕುಲು ಸೇವಾ ಸಮಿತಿ ಚೆನ್ನಾವರ ಇದರ ಸಹಯೋಗದಲ್ಲಿ 4ನೇ ವರ್ಷದ ಆಟಿದ ಕೂಟ-ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮ ಆ.10ರಂದು ಚೆನ್ನಾವರ ಗುತ್ತಿನ ಗದ್ದೆಯಲ್ಲಿ ನಡೆಯಲಿದೆ. ಚೆನ್ನಾವರ ಉಳ್ಳಾಕುಲು ಸೇವಾ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಚೆನ್ನಾವರಗುತ್ತು ಕಾರ್ಯಕ್ರಮ ಉದ್ಘಾಟಿಸುವರು. ಕ್ರೀಡಾಂಗಣ ಉದ್ಘಾಟನೆಯನ್ನು ಅಬುದಾಭಿ ಇಂಡಿಯನ್ ಸ್ಕೂಲ್, ಅಬುದಾಭಿಯ ದೈಹಿಕ ಶಿಕ್ಷಣ ನಿರ್ದೇಶಕ ದಿನೇಶ್ ಎನ್.ಸುವರ್ಣ ನೆರವೇರಿಸುವರು. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್

ಆ.10 : ಚೆನ್ನಾವರದಲ್ಲಿ 4ನೇ ವರ್ಷದ ಆಟಿದ ಕೂಟ ಕೆಸರ್‌ಡ್ ಒಂಜಿ ದಿನ |ವಾಲಿಬಾಲ್ ,ತ್ರೋಬಾಲ್, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಸ್ಫರ್ಧೆಗಳು Read More »

ಕಲ್ಲಾರೆ ಮಠದಲ್ಲಿ 51ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

ಪುತ್ತೂರು: ಕಲ್ಲಾರೆ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಹಾಗೂ ವಿಶ್ವಹಿಂದೂ ಪರಿಷದ್ ಮಾತೃ ಮಂಡಳಿ ಜಂಟಿ ಆಶ್ರಯದಲ್ಲಿ 51ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಶುಕ್ರವಾರ ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮೀ ಮಠದ ಸಭಾಭವನದಲ್ಲಿ ಜರಗಿತು. ಪೂಜೆಯ ಅಂಗವಾಗಿ ಶ್ರೀ ರಾಘವೇಂದ್ರ ಮಠದ ಪ್ರಧಾನ ಅರ್ಚಕ ರಾಘವೇಂದ್ರ ಉಡುಪ ಅವರ ನೇತೃತ್ವದಲ್ಲಿ ಬೆಳಿಗ್ಗೆ 10.30 ಕ್ಕೆ ಕಲಶ ಪ್ರತಿಷ್ಠೆ ನಡೆದು ಭಕ್ತಾದಿಗಳಿಂದ ಸಂಕಲ್ಪ ನಡೆಯಿತು. 11 ಕ್ಕೆ ಲಲಿತ ಸಹಸ್ರನಾಮ ನಡೆದ ಬಳಿಕ ಬೊಳುವಾರು ತಿರುಪತಿ

ಕಲ್ಲಾರೆ ಮಠದಲ್ಲಿ 51ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ Read More »

ಆ.16 : ವಿಶ್ವಹಿಂದೂ ಪರಿಷದ್ ನ ಸ್ಥಾಪನಾ ದಿನಾಚರಣೆ | 15ನೇ ವರ್ಷದ ವೈಭವದ ಮೊಸರು ಕುಡಿಕೆ ಉತ್ಸವ

ಪುತ್ತೂರು: ವಿಶ್ವಹಿಂದೂ ಪರಿಷದ್ ಸ್ಥಾಪನಾ ದಿನಾಚರಣೆಯ ಅಂಗವಾಗಿ ವಿಶ್ವಹಿಂದೂ ಪರಿಷದ್ ಪುತ್ತೂರು ಜಿಲ್ಲೆ, ನಗರ ಪ್ರಖಂಡ, ಗ್ರಾಮಾಂತರ ಪ್ರಖಂಡ ಮತ್ತು ಪುತ್ತೂರು ಮೊಸರುಕುಡಿಕೆ ಉತ್ಸವ ಸಮಿತಿಯಿಂದ ಆ.16ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ 15ನೇ ವರ್ಷದ ಪುತ್ತೂರು ಮೊಸರುಕುಡಿಕೆ ಉತ್ಸವ ಮತ್ತು ಪುತ್ತೂರು ನಗರದಲ್ಲಿ ಭವ್ಯ ಶೋಭಾಯಾತ್ರೆ ನಡೆಯಲಿದೆ. ಇದರ ಜೊತೆಗೆ ಆ.9ರಂದು ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ, ಆ.10ಕ್ಕೆ ಕೃಷ್ಣವೇಷ, ಶಂಖನಾದ ಸ್ಪರ್ಧೆ, ಆ.16ಕ್ಕೆ ಬೆಳಗ್ಗಿನಿಂದಲೇ ವಿವಿಧ ಸ್ಪರ್ಧೆಗಳು ಜರುಗಲಿದೆ ಎಂದು ವಿಶ್ವಹಿಂದು

ಆ.16 : ವಿಶ್ವಹಿಂದೂ ಪರಿಷದ್ ನ ಸ್ಥಾಪನಾ ದಿನಾಚರಣೆ | 15ನೇ ವರ್ಷದ ವೈಭವದ ಮೊಸರು ಕುಡಿಕೆ ಉತ್ಸವ Read More »

ಪುತ್ತೂರು : ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು

ಪುತ್ತೂರು: ಪರ್ಲಡ್ಕ ಜಂಕ್ಷನ್‌ನಲ್ಲಿ ಶುಕ್ರವಾರ ರಾತ್ರಿ ಎರಡು ದ್ವಿಚಕ್ರ ವಾಹನಗಳು ಪರಸ್ಪರ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ.ಪುತ್ತೂರು ನಗರಸಭಾ ವ್ಯಾಪ್ತಿಯ ಪರ್ಲಡ್ಕ ನಿವಾಸಿ ಸಯ್ಯದ್ ಆಲಂ ಎಂಬವರ ಪತ್ನಿ ಅಫ್ಸಾ (54) ಮೃತಪಟ್ಟ ಮಹಿಳೆ. ಶುಕ್ರವಾರ ರಾತ್ರಿ ಅಸ್ಲಾಂ ದಂಪತಿ ಪೇಟೆಯ ಕಡೆಗೆ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಅವರ ಸ್ಕೂಟರ್ ಮತ್ತು ಮುಂಭಾಗದಿಂದ ಆಗಮಿಸುತ್ತಿದ್ದ ಇನ್ನೊಂದು ಸ್ಕೂಟರ್ ಪರ್ಲಡ್ಕ ಜಂಕ್ಷನ್‌ನಲ್ಲಿ ಪರಸ್ಪರ ಢಿಕ್ಕಿಯಾಗಿತ್ತು. ಢಿಕ್ಕಿಯ

ಪುತ್ತೂರು : ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು Read More »

ಅಕ್ಷಯ ಕಾಲೇಜಿನಲ್ಲಿ 21 ನೇ ಶತಮಾನದ ಕೌಶಲ್ಯದ ಪ್ರಾವೀಣ್ಯತೆ ಕಾರ್ಯಾಗಾರ

ಪುತ್ತೂರು: ಅಕ್ಷಯ ಕಾಲೇಜಿನಲ್ಲಿ ಬಿಸಿಎ ವಿಭಾಗದ “ಬೈಟ್ ಬ್ಲಿಜ್” ಐಟಿ ಕ್ಲಬ್ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ “21 ನೇ ಶತಮಾನದ ಕೌಶಲ್ಯದ ಪ್ರಾವೀಣ್ಯತೆ” ಎಂಬ ವಿಷಯದಲ್ಲಿ ಕಾರ್ಯಾಗಾರ ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ವಾಣಿಜ್ಯ ವಿಭಾಗದ ಉಪನ್ಯಾಸಕ ಕಿಶನ್ ಎನ್ ರಾವ್ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. 21 ನೇ ಶತಮಾನದಲ್ಲಿ ಸ್ಪರ್ಧಾತ್ಮಕವಾಗಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹಲವು ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಉಪಯೋಗಿಸಿ ತಂತ್ರಜ್ಞಾನದಲ್ಲಿ ಕ್ರಾಂತಿ ಯನ್ನು ಸೃಷ್ಟಿಸುತ್ತಿರುವ ಮನುಷ್ಯ ನಿಗೆ ಅಷ್ಟೇ ಸವಾಲುಗಳನ್ನು

ಅಕ್ಷಯ ಕಾಲೇಜಿನಲ್ಲಿ 21 ನೇ ಶತಮಾನದ ಕೌಶಲ್ಯದ ಪ್ರಾವೀಣ್ಯತೆ ಕಾರ್ಯಾಗಾರ Read More »

ಅಕ್ಷಯ ಕಾಲೇಜಿನಲ್ಲಿ FROM CAMPUS TO CAREER ಕಾರ್ಯಾಗಾರ

ಪುತ್ತೂರು: ಅಕ್ಷಯ ಕಾಲೇಜಿನ ವಾಣಿಜ್ಯ ವಿಭಾಗದ ಇನ್ವಿಕ್ತ ಕಾಮರ್ಸ್ ಅಸೋಸಿಯೇಷನ್ ಹಾಗೂ ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಯೋಗದಲ್ಲಿ “FROM CAMPUS TO CAREER” ಕಾರ್ಯಗಾರ ನಡೆಯಿತು. ಕಾಲೇಜಿನ ಉಪಪ್ರಾಂಶುಪಾಲ ರಕ್ಷಣಾ ಟಿ ಆರ್ ಅವರು ಮಾತನಾಡಿ, ಕಾಲೇಜಿನಲ್ಲಿ ನಡೆಯುವ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಲು ಉತ್ತೇಜನ ನೀಡಿದರು.ವಾಣಿಜ್ಯ ವಿಭಾಗದ ಉಪನ್ಯಾಸಕಿ ಕುಮಾರಿ ಮೇಘಶ್ರೀ ಪ್ರಾಸ್ತವಿಕ ಮಾತುಗಳನ್ನಾಡಿ ಇನ್ವಿಕ್ತ ಕಾಮರ್ಸ್ ಅಸೋಸಿಯೇಷನ್‌ನಲ್ಲಿ ನಡೆಯುವ ವಿವಿಧ ರೀತಿಯ ಸ್ಪರ್ಧೆಗಳ ಕುರಿತು ವಿವರಿಸಿದರು. ವಿದ್ಯಾರ್ಥಿಗಳು ತನ್ನನ್ನು ತಾನು

ಅಕ್ಷಯ ಕಾಲೇಜಿನಲ್ಲಿ FROM CAMPUS TO CAREER ಕಾರ್ಯಾಗಾರ Read More »

ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಈ ಬಾರಿ ಸಂಘದ ಸದಸ್ಯರಿಗೆ ಶೇ. 15 ಡಿಬಿಡೆಂಡ್ ಘೋಷಣೆ  ಪುತ್ತೂರು: ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಭಾನುವಾರ ತೆಂಕಿಲ ಒಕ್ಕಲಿಗ ಗೌಡ ಸಮುದಾಯಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿ, ಮೊಳಹಳ್ಳಿ ಶಿವರಾಯರಂತಹ ಹಿರಿಯ ಸಹಕಾರಿ ಧುರೀಣರ ದೂರದೃಷ್ಟಿಯಿಂದ ಪುತ್ತೂರಿನಲ್ಲಿ ಇಂದು ಸಾಕಷ್ಟು ಸಹಕಾರ ಸಂಸ್ಥೆಗಳು ಬೆಳೆದು ನಿಂತಿವೆ. ಈ ಬಾರಿ ಸಂಘದ ಸದಸ್ಯರಿಗೆ ಶೇ. 15 ಡಿಬಿಡೆಂಡ್ ಘೋಷಣೆ ಮಾಡಿದರು. ಡಿ.ವಿ ಸದಾನಂದ ಗೌಡ

ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ Read More »

error: Content is protected !!
Scroll to Top