ಪುತ್ತೂರು

ಅಕ್ಷಯ ಕಾಲೇಜಿನ ಪದವಿ ಫಲಿತಾಂಶ | ಫ್ಯಾಶನ್ ಡಿಸೈನ್ ವಿಭಾಗ 100%, ಇಂಟೀರಿಯರ್ ಡಿಸೈನ್ ವಿಭಾಗ 100%, ವಾಣಿಜ್ಯ ವಿಭಾಗ 92%

ಪುತ್ತೂರು: ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜು ಜೂನ್-ಜುಲೈ 2025ರಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಅಂತಿಮ ಪದವಿ ಪರೀಕ್ಷೆಯಲ್ಲಿ ಬಿ.ಎಸ್ಸಿ. ಫ್ಯಾಶನ್ ಡಿಸೈನ್ ವಿಭಾಗವು ಶೇ.100% ಫಲಿತಾಂಶ ದಾಖಲಾಗಿದೆ. 22 ವಿದ್ಯಾರ್ಥಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ 10 ವಿದ್ಯಾರ್ಥಿಗಳು ಶೇ.80ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿದ್ದು, ಮಧುರ (92%) ಪ್ರಥಮ, ಭಾರ್ಗವಿ (91%) ದ್ವಿತೀಯ ಸ್ಥಾನ ಪಡೆದಿದ್ದಾರೆ. ಹಾಗೆಯೇ ಬಿ.ಎಸ್ಸಿ. ಇಂಟೀರಿಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳು ಕೂಡಾ ಶೇ.100 ಫಲಿತಾಂಶ ಗಳಿಸಿದ್ದು, 10 ವಿದ್ಯಾರ್ಥಿಗಳು ಉನ್ನತ ಶ್ರೇಣಿ […]

ಅಕ್ಷಯ ಕಾಲೇಜಿನ ಪದವಿ ಫಲಿತಾಂಶ | ಫ್ಯಾಶನ್ ಡಿಸೈನ್ ವಿಭಾಗ 100%, ಇಂಟೀರಿಯರ್ ಡಿಸೈನ್ ವಿಭಾಗ 100%, ವಾಣಿಜ್ಯ ವಿಭಾಗ 92% Read More »

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಾ ಬಂಧನ

ಪುತ್ತೂರು: ತಿಥಿಗಳಿಗೆ ಅನುಸಾರವಾಗಿ ಹಬ್ಬಗಳನ್ನು ಆಚರಿಸುವುದು ನಮ್ಮ ದೇಶದ ಸಂಸ್ಕೃತಿ. ಶ್ರಾವಣ ಹುಣ್ಣಿಮೆಯ ಪುಣ್ಯ ದಿನದಂದು ನಾವು ರಕ್ಷಾ ಬಂಧನವನ್ನು ಆಚರಿಸುತ್ತೇವೆ. ವಿವೇಕಾನಂದ ರಂತಹ ಶ್ರೇಷ್ಠ ವ್ಯಕ್ತಿಗಳ ಹೆಸರಲ್ಲಿ ನಡೆಯುತ್ತಿರುವ ಈ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ ನಿಮ್ಮಂತ ವಿದ್ಯಾರ್ಥಿಗಳು ನಿಜಕ್ಕೂ ಪುಣ್ಯವಂತರು. ರಕ್ಷೆಯಲ್ಲಿ ಕೇಸರಿ ಬಣ್ಣವನ್ನು ಯಾಕೆ ಬಳಸುತ್ತೇವೆ ಎಂದರೆ ಕೇಸರಿ ತ್ಯಾಗದ ಸಂಕೇತವಾಗಿದೆ. ತ್ಯಾಗ ಮತ್ತು ಸೇವೆ ನಮ್ಮ ದೇಶದ ಆತ್ಮವಿದ್ದಂತೆ ಅದನ್ನು ಉಳಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದು ಮಂಗಳೂರು ವಿಭಾಗ ಸಹ ಕಾರ್ಯವಾಹರಾದ ಸುಭಾಶ್ಚಂದ್ರ ಕಳಂಜ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಾ ಬಂಧನ Read More »

ದೇವಾಂಗ ಸಮಾಜದಿಂದ ಆಟಿಕೂಟ

ಪುತ್ತೂರು: ಕೌಟುಂಬಿಕ ಮೌಲ್ಯಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಆಟಿಕೂಟದಂಥ ಕಾರ್ಯಕ್ರಮಗಳು ಸಹಕಾರಿಯಾಗಿದೆ. ಇಲ್ಲಿ ಒಟ್ಟಾಗಿ ಕಳೆಯುವ ಮೂಲಕ ನಾವು ನಮ್ಮೊಳಗಿನ ಐಕ್ಯತೆಯನ್ನು ಹೆಚ್ಚಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲೂ ಇದೇ ಮಾದರಿಯಲ್ಲಿ ಏಕತೆ ಮತ್ತು ಸಂತೋಷಕ್ಕಾಗಿ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಪುತ್ತೂರು ದೇವಾಂಗ ಸೇವಾ ಸಮಾಜದ ಅಧ್ಯಕ್ಷ ಕೆ. ದಿವಾಕರ ಶೆಟ್ಟಿ ಕುಂಬ್ರ ಹೇಳಿದರು. ಸಂಘದ ವತಿಯಿಂದ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಆಟಿ ಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಂಘದ

ದೇವಾಂಗ ಸಮಾಜದಿಂದ ಆಟಿಕೂಟ Read More »

ಪುತ್ತೂರು ಬಿಜೆಪಿ ಮಂಡಲದ ವತಿಯಿಂದ ತಿರಂಗಾ ಯಾತ್ರೆ

ಪುತ್ತೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಿಜೆಪಿ ಪುತ್ತೂರು ಮಂಡಲದ ವತಿಯಿಂದ ನಗರದಲ್ಲಿ ಮಂಗಳವಾರ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಯಿತು. ಪಕ್ಷದ ಕಚೇರಿಯಿಂದ ಹೊರಟು ನಗರದ ಮುಖ್ಯ ರಸ್ತೆಗಳಲ್ಲಿ ಸಾಗಿ ಮರಳಿ ಕಚೇರಿ ಮುಂಭಾಗದಲ್ಲಿ ಯಾತ್ರೆ ಸಮಾಪನಗೊಂಡಿತು. ರಾಷ್ಟಧ್ವಜವನ್ನು ಹಿಡಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ದೇಶಭಕ್ತಿಯ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್ ಸೇರಿದಂತೆ ಪಕ್ಷದ ಹಿರಿಯ ಮುಖಂಡರು,

ಪುತ್ತೂರು ಬಿಜೆಪಿ ಮಂಡಲದ ವತಿಯಿಂದ ತಿರಂಗಾ ಯಾತ್ರೆ Read More »

ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಅಗತ್ಯ – ವಿಧಾನ ಪರಿಷತ್ ಸದಸ್ಯ (ಶಾಸಕ) ಕಿಶೋರ್ ಕುಮಾರ್, ಪುತ್ತೂರು

ವಿಧಾನಪರಿಷತ್ತಿನ ಮುಂಗಾರು ಅಧಿವೇಶನದಲ್ಲಿ ಶಾಸಕ ಶ್ರೀ ಕಿಶೋರ್ ಕುಮಾರ್ ಅವರು ತಮ್ಮ ಚುಕ್ಕೆ ಗುರುತಿನ ಪ್ರಶ್ನೆಯಲ್ಲಿ ಮಾನ್ಯ ಅರಣ್ಯ ಸಚಿವ ಶ್ರೀ ಈಶ್ವರ್ ಖಂಡ್ರೆ ಅವರಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಮಾನವ – ಕಾಡು ಪ್ರಾಣಿ ಸಂಘರ್ಷದ ಕುರಿತು ಸೂಕ್ತವಾದ ಕ್ರಮವನ್ನು ಕೈಗೊಂಡು ಈ ಭಾಗದ ಜನರ ಬಹುಮುಖ್ಯ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಪುತ್ತೂರು, ಸುಳ್ಯ, ಕಡಬ ಹಾಗೂ ಬೆಳ್ತಂಗಡಿ ತಾಲೂಕುಗಳಲ್ಲಿ ಕಾಡಾನೆಗಳು ನಾಡಿಗೆ ನುಗ್ಗಿ ಬೆಳೆ ಹಾನಿ ಮಾಡುವ ಘಟನೆಗಳು

ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಅಗತ್ಯ – ವಿಧಾನ ಪರಿಷತ್ ಸದಸ್ಯ (ಶಾಸಕ) ಕಿಶೋರ್ ಕುಮಾರ್, ಪುತ್ತೂರು Read More »

ಮನೆಯ ಸುತ್ತ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ : ರಕ್ಷಣೆ ಕೋರಿ ಸಂತ್ರಸ್ತ ಯುವತಿಯಿಂದ ಐಜಿಪಿಗೆ ಮನವಿ

ಯಾರೋ ಗೇಟ್‌ ಬಡಿದಂತೆ, ಟೆರೇಸ್‌ ಮೇಲೆ ಹತ್ತಿ ಹೋದಂತಾಗುತ್ತದೆ ಎಂದು ದೂರು ಪುತ್ತೂರು : ಪುತ್ತೂರಿನ ಬಿಜೆಪಿ ನಾಯಕ ಪಿ.ಜಿ.ಜಗನ್ನಿವಾಸ ರಾವ್ ಅವರ ಪುತ್ರ ಶ್ರೀಕೃಷ್ಣ ಜೆ. ರಾವ್ ಅವರಿಂದ ಅತ್ಯಾಚಾರ ಮತ್ತು ವಂಚನೆಗೊಳಗಾಗಿ ತಾಯಿಯಾಗಿರುವ ವಿದ್ಯಾರ್ಥಿನಿ ತನಗೆ ಮತ್ತು ನವಜಾತ ಶಿಶುವಿಗೆ ಬೆದರಿಕೆ ಇದೆ ಎಂದು ಪೊಲೀಸ್ ರಕ್ಷಣೆ ಕೋರಿ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅವರನ್ನು ಭೇಟಿ ಮಾಡಿ ಮಾನವಿ ನೀಡಿದ್ದಾರೆ. ಸೋಮವಾರ ಸಂತ್ರಸ್ತೆ ಮಂಗಳೂರಿನಲ್ಲಿರುವ ಪಶ್ಚಿಮ ವಲಯ ಐಜಿಪಿ ಕಚೇರಿಗೆ ಭೇಟಿ

ಮನೆಯ ಸುತ್ತ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ : ರಕ್ಷಣೆ ಕೋರಿ ಸಂತ್ರಸ್ತ ಯುವತಿಯಿಂದ ಐಜಿಪಿಗೆ ಮನವಿ Read More »

ಪುತ್ತೂರು : 10 ಕೆಜಿ ಭಾರದ ಘಂಟೆ ಕದ್ದವ ಸೆರೆ

ಪುತ್ತೂರು : ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ತಾಮ್ರದ ಗಂಟೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ತೂರು, ಕಬಕ ನಿವಾಸಿ ಸಂಶುದ್ದೀನ್ ಯಾನೆ ಸಂಶು (50) ಬಂಧಿತ ಆರೋಪಿ. 10 ಕೆಜಿ ತೂಕದ ಸುಮಾರು 8,000 ರೂ. ಬೆಲೆ ಬಾಳುವ ತಾಮ್ರದ ಗಂಟೆ ಕಳವು ಘಟನೆಗೆ ಸಂಬಂಧಿಸಿದಂತೆ ಜುಲೈ 26ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪುತ್ತೂರು ನಗರ ಠಾಣಾ ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.

ಪುತ್ತೂರು : 10 ಕೆಜಿ ಭಾರದ ಘಂಟೆ ಕದ್ದವ ಸೆರೆ Read More »

ವಿಶ್ವ ಹಿಂದೂ ಪರಿಷದ್ ಸಂಸ್ಥಾಪನಾ ದಿನಾಚರಣೆ | 15ನೇ ವರ್ಷದ ಮೊಸರು ಕುಡಿಕೆ ಉತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳು

ಪುತ್ತೂರು: ವಿಶ್ವ ಹಿಂದೂ ಪರಿಷದ್‍ ಸ್ಥಾಪನಾ ದಿನಾಚರಣೆ ಅಂಗವಾಗಿ ಪುತ್ತೂರು ಜಿಲ್ಲಾ ವಿಶ್ವ ಹಿಂದೂ ಪರಿಷತ್‍, ಬಜರಂಗದಳ ಹಾಗೂ ಮೊಸರುಕುಡಿಕೆ ಆಚರಣಾ ಸಮಿತಿ ವತಿಯಿಂದ 15ನೇ ವರ್ಷದ ಮೊಸರುಕುಡಿಕೆ ಉತ್ಸವದ ಪ್ರಯಕ್ತ ವಿವಿಧ ಸ್ಪರ್ಧೆಗಳು ಭಾನುವಾರ ಜರಗಿತು. ಶ್ರೀಕೃಷ್ಣನ ವೇಷ, ಭಗವದ್ಗೀತಾ ಪಠಣ, ದೇಶಭಕ್ತಿ ಗೀತೆ, ಭಾರತಮಾತೆ ಚಿತ್ರ ಬಿಡಿಸುವುದು, ರಂಗವಲ್ಲಿ ಹಾಗೂ ಸ್ಮರಣ ಶಕ್ತಿ ಸ್ಪರ್ಧೆಗಳು ಭಾನುವಾರ ಶ್ರೀ ಮಹಾಲಿಂಗೇಶ್ವರ ವಠಾರದಲ್ಲಿರುವ ಮೂರು ವೇದಿಕೆಗಳಲ್ಲಿ ಏಕಕಾಲದಲ್ಲಿ ನಡೆಯಿತು. ಮುದ್ದು, ಕಂದ, ಕಿಶೋರ, ರಾಧಾಕೃಷ್ಣ ಹಾಗೂ ಬಾಲಕೃಷ್ಣ

ವಿಶ್ವ ಹಿಂದೂ ಪರಿಷದ್ ಸಂಸ್ಥಾಪನಾ ದಿನಾಚರಣೆ | 15ನೇ ವರ್ಷದ ಮೊಸರು ಕುಡಿಕೆ ಉತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳು Read More »

ಕಲ್ಲಾರೆ ಮಠದಲ್ಲಿ ಶ್ರೀ ರಾಘವೇಂದ್ರ ಗುರುಗಳ 354ನೇ ಆರಾಧನಾ ಮಹೋತ್ಸವಕ್ಕೆ ಚಾಲನೆ

ಪುತ್ತೂರು: ಮೂರು ದಿನಗಳ ಕಾಲ ನಡೆಯಲಿರುವ ಶ್ರೀ ರಾಘವೇಂದ್ರ ಗುರುಗಳ ಆರಾಧನಾ ಮಹೋತ್ಸವದ ಅಂಗವಾಗಿ ನಗರದ ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠದಲ್ಲಿ 354ನೇ ಆರಾಧನಾ ಮಹೋತ್ಸವಕ್ಕೆ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಭಾನುವಾರ ಚಾಲನೆ ನೀಡಲಾಯಿತು. ಆರಾಧನಾ ಮಹೋತ್ಸವದ ಅಂಗವಾಗಿ ಭಾನುವಾರ ಬೆಳಗ್ಗೆ 6 ಗಂಟೆಗೆ ನಿರ್ಮಾಲ್ಯ ವಿಸರ್ಜನಾ ಪೂಜೆ, 10ಕ್ಕೆ  ಪಂಚಾಮೃತ ಅಭಿಷೇಕ, 12 ಕ್ಕೆ ಅಲಂಕಾರ ಪೂಜೆ, 1 ಕ್ಕೆ ಮಹಾಪೂಜೆ ನಡೆದು ಬಳಿಕ ಅನ್ನಸಂತರ್ಪಣೆ ಜರಗಿತು. ಈ ಸಂದರ್ಭದಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

ಕಲ್ಲಾರೆ ಮಠದಲ್ಲಿ ಶ್ರೀ ರಾಘವೇಂದ್ರ ಗುರುಗಳ 354ನೇ ಆರಾಧನಾ ಮಹೋತ್ಸವಕ್ಕೆ ಚಾಲನೆ Read More »

ಕೆದಿಲದ ಮಹಿಳೆಯ ನಿಗೂಢ ಸಾವಿನ ಪ್ರಕರಣ : ಇಂದು ಬೆಳಗ್ಗೆ ಮನೆಗೆ ಬಂದ ಬಾವ

ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಬಾವ ಇಂದು ದಿಢೀರ್‌ ಪ್ರತ್ಯಕ್ಷ ಪುತ್ತೂರು : ಕೆದಿಲ ಗ್ರಾಮದ ಕಾಂತಕೋಡಿ ಎಂಬಲ್ಲಿ ಕಳೆದ ಆ.6ರಂದು ಮಹಿಳೆಯ ಮೃತದೇಹ ಪತ್ತೆಯಾದ ದಿನವೇ ಮನೆಯಿಂದ ನಾಪತ್ತೆಯಾಗಿದ್ದ ಮಹಿಳೆಯ ಗಂಡನ ಅಣ್ಣ (ಮೃತರ ಬಾವ) ಭಾನುವಾರ ಬೆಳಗ್ಗೆ ವಾಪಸು ಬಂದಿದ್ದಾರೆ. ಕೆದಿಲ ಒಳಕುಮೇರಿಯ ಗಣಪತಿ ಯಾನೆ ರಾಮಣ್ಣ ಗೌಡ ಎಂಬವರ ಪತ್ನಿ ಮಮತಾ ಎಂಬವರ ಮೃತದೇಹ ಆ.6ರಂದು ಬೆಳಗ್ಗೆ ಕೆದಿಲ ಗ್ರಾಮದ ತೋಡಿನಲ್ಲಿ ಪತ್ತೆಯಾಗಿತ್ತು. ಅದೇ ದಿನ ರಾಮಣ್ಣ ಗೌಡರ ಅಣ್ಣ ಸುಂದರ ಯಾನೆ ಲೋಕಯ್ಯ

ಕೆದಿಲದ ಮಹಿಳೆಯ ನಿಗೂಢ ಸಾವಿನ ಪ್ರಕರಣ : ಇಂದು ಬೆಳಗ್ಗೆ ಮನೆಗೆ ಬಂದ ಬಾವ Read More »

error: Content is protected !!
Scroll to Top