ಪುತ್ತೂರು

ಬೆಳಿಯೂರುಕಟ್ಟೆ ಸರಕಾರಿ  ಪ ಪೂ ಕಾಲೇಜು ವಾರ್ಷಿಕೋತ್ಸವ

ಪುತ್ತೂರು: ಮಕ್ಕಳನ್ನು ತಿದ್ದುವ ಮತ್ತು ಉತ್ತಮ ದಾರಿ ತೋರಿಸುವ ಕೆಲಸ ಕೇವಲ ಶಿಕ್ಷಕರಿಂದ ‌ಮಾತ್ರವಲ್ಲ ಪೋಷಕರಿಂದಲೂ ಆಗಬೇಕು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಬೆಳಿಯೂರು ಕಟ್ಟೆ ಸರಕಾರಿ ಪ ಪೂ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರಕಾರಿ ಶಾಲೆಯಲ್ಲಿ ಶಿಸ್ತು ಕಡಿಮೆ ಎಂದು ಕೆಲವರು ಆಪಾದನೆ ಮಾಡುತ್ತಾರೆ. ಸರಕಾರಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಶಿಸ್ತು ಪಾಲನೆ ಮಾಡಬೇಕಾದರೆ ಪೋಷಕರ ಸಹಕಾರ ಅತೀ ಅಗತ್ಯವಾಗಿದೆ ಎಂದ ಅವರು, […]

ಬೆಳಿಯೂರುಕಟ್ಟೆ ಸರಕಾರಿ  ಪ ಪೂ ಕಾಲೇಜು ವಾರ್ಷಿಕೋತ್ಸವ Read More »

ಡಿ.24-25 : ಶ್ರೀನಿವಾಸ ಕಲ್ಯಾಣೋತ್ಸವ | ಸವಣೂರು ಸಮಿತಿ ರಚನೆ

ಪುತ್ತೂರು: ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಹಾಗೂ ಪುತ್ತಿಲ ಪರಿವಾರದ ಆಶ್ರಯದಲ್ಲಿ ಡಿ.24 ಹಾಗೂ 25 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದ ಸವಣೂರು ಸಮಿತಿಯನ್ನು ರಚಿಸಲಾಯಿತು. ಸಮಿತಿ ಗೌರವಾಧ್ಯಕ್ಷರಾಗಿ ವೆಂಕಟೇಶ್‍ ಭಟ್‍ ಕೊಯಿಕುಡೆ, ಸಂಚಾಲಕರಾಗಿ ಪುಷ್ಪರಾಜ ಆರೇಲ್ತಡಿ ಅಧ್ಯಕ್ಷರಾಗಿ ದೇವಿಪ್ರಸಾದ್ ಪಂಚೋಡಿ ಆಯ್ಕೆಯಾಗಿದ್ದಾರೆ. ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕೌಶಿಕ್‍ ಶಾಂತಿನಗರ, ಕಾರ್ಯದರ್ಶಿಗಳಾಗಿ ಶ್ರೀಧರ ಸುಣ್ಣಾಜೆ, ಮೋಕ್ಷಿತ್ ಇಡ್ಯಾಡಿ, ದಿಲೀಪ್‍ ಹೆಗ್ಡೆ, ಪ್ರಖ್ಯಾತ್ ಪಂಚೋಡಿ, ಚೇತನ್‍ ಇಡ್ಯಾಡಿ, ಪ್ರಶಾಂತ್‍ ನೂಜಾಜೆ, ಮಿಥುನ್‍

ಡಿ.24-25 : ಶ್ರೀನಿವಾಸ ಕಲ್ಯಾಣೋತ್ಸವ | ಸವಣೂರು ಸಮಿತಿ ರಚನೆ Read More »

ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ-ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಪಂಚಮಿ ಉತ್ಸವ

ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ವೈಭವದ ಪಂಚಮಿ ಉತ್ಸವ ನಡೆಯಿತು. ಉತ್ಸವದ ಅಂಗವಾಗಿ ಬೆಳಿಗ್ಗೆ ಶ್ರೀ ಕ್ಷೇತ್ರದ ನಾಗಬನದಲ್ಲಿ ಸಾಮೂಹಿಕ ಆಶ್ಲೇಷಾ ಬಲಿ, ನಾಗತಂಬಿಲ ಸೇವೆಗಳು ಜರಗಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ಅನ್ನಸಂತರ್ಪಣೆ ಜರಗಿತು. ರಾತ್ರಿ 7 ಗಂಟೆಯಿಂದ ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಪಂಚಮಿ ಉತ್ಸವ, ಪಲ್ಲಕ್ಕಿ ಉತ್ಸವ, ಕಟ್ಟೆಪೂಜೆ, 5 ರಿಂದ ಶಿರಾಡಿ ದೈವದ ಕಿರುವಾಳು ಆಗಮಿಸಿತು. ಬಳಿಕ ಮಂಗಳೂರು ಶ್ರೀ ಮುನೀಶ್ವರ

ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ-ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಪಂಚಮಿ ಉತ್ಸವ Read More »

ಬಸ್ಸಿಗೆ ಡಿಕ್ಕಿ ಹೊಡೆದ ಕಾರು | ನಾಲ್ವರಿಗೆ ಗಾಯ

ನೆಲ್ಯಾಡಿ: ಕಾರೊಂದು ಕೆಎಸ್‍ ಆರ್ ಟಿಸಿ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿಯಲ್ಲಿ ನಡೆದಿದೆ. ಕಾರಿನಲ್ಲಿದ್ದ ಮಹೇಶ್‍ (28), ಅಭಿಷೇಕ್‍ (30), ಮುತ್ತುರಾಜ್ (30), ಹಾಗೂ ನವೀನ್ (29) ಗಾಯಗೊಂಡವರು. ಮುಂಜಾನೆ 5.30ರ ಸುಮಾರಿಗೆ ಈ ಅಪಘಾತ ನಡೆದಿದ್ದು, ಗಾಯಗೊಂಡವರು ಬೆಂಗಳೂರಿನ ಬನಶಂಕರಿ ಲೇ ಔಟ್ ನಿವಾಸಿಗಳೆಂದು ತಿಳಿದು ಬಂದಿದೆ. ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್ಸಿಗೆ ಡಿಕ್ಕಿ ಹೊಡೆದ ಕಾರು | ನಾಲ್ವರಿಗೆ ಗಾಯ Read More »

ಚಾರ್ವಾಕ ಕೃಷಿ ಪತ್ತಿನ ಸಹಕಾರ ಸಂಘ ಸಹಕಾರ ಭಾರತಿ ತೆಕ್ಕೆಗೆ

ಕಾಣಿಯೂರು: ಚಾರ್ವಾಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರಿ ಭಾರತಿ ಎಲ್ಲಾ 12 ಸ್ಥಾನಗಳಲ್ಲಿ ಜಯಭೇರಿ ಗಳಿಸಿದ್ದು, ಈ ಮೂಲಕ ಆಡಳಿತ ಸಹಕಾರಿ ಭಾರತಿ ತೆಕ್ಕೆಗೆ ಬಿದ್ದಿದೆ. ಭಾನುವಾರ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿಯ ಅನಂತ ಕುಮಾರ್, ಗಣೇಶ್ ಉದನಡ್ಕ, ಪರಮೇಶ್ವರ ಅನಿಲ, ಬಾಲಕೃಷ್ಣ ಇಡ್ಯಡ್ಕ, ಸುಂದರ, ವಿಶ್ವನಾಥ ದೇವಿನಗರ, ಲೋಕೇಶ್ ಆತಾಜೆ, ರತ್ನಾವತಿ, ರಮೇಶ್ ಉಪ್ಪಡ್ಕ, ವೀಣಾ ಅಂಬುಲ, ಶೀಲಾವತಿ ಮುಗರಂಜ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ದಿವಾಕರ

ಚಾರ್ವಾಕ ಕೃಷಿ ಪತ್ತಿನ ಸಹಕಾರ ಸಂಘ ಸಹಕಾರ ಭಾರತಿ ತೆಕ್ಕೆಗೆ Read More »

ಡಿ.26: ಶಿಲಾನ್ಯಾಸ ಕಾರ್ಯಕ್ರಮ | ಯಶಸ್ಸಿಗೆ ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ಪ್ರಾರ್ಥನೆ

ಕೆಮ್ಮಲೆ: ಡಿ.26 ರಂದು ನಡೆಯುವ ಕಡಬ ತಾಲೂಕು ಒಕ್ಕಲಿಗ ಗೌಡ ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನದ ಗರ್ಭಗುಡಿಯಲ್ಲಿ ಇಟ್ಟು ಪ್ರಾರ್ಥಿಸಲಾಯಿತು. ಪಂಚಮಿ ದಿನವಾದ ಭಾನುವಾರ ಶ್ರೀ ಕ್ಷೇತ್ರ ಕೆಮ್ಮಲೆಯಲ್ಲಿ ವಿಶೇಷ ದಿನವಾದ್ದರಿಂದ ಶಿಲಾನ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಅರ್ಚಕರು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಕಡಬ ತಾಲೂಕು ಒಕ್ಕಲಿಗ ಗೌಡ ಸಂಘದ ಪದಾಧಿಕಾರಿಗಳಾದ ಗೋಪಾಲಕೃಷ್ಣ ಐಪಳ, ನಾರಾಯಣ ಕೊರ್ಜೆ, ಕುಸುಮಾವತಿ ಕೊರ್ಜೆ, ಬಾಲಕೃಷ್ಣ ಹೇಮಳ, ವಸಂತ ಹೇಮಳ, ಅಶೋಕ

ಡಿ.26: ಶಿಲಾನ್ಯಾಸ ಕಾರ್ಯಕ್ರಮ | ಯಶಸ್ಸಿಗೆ ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ಪ್ರಾರ್ಥನೆ Read More »

ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದಲ್ಲಿ ದತ್ತಜಯಂತಿ| ವಜ್ರದೇಹಿ ಸ್ವಾಮೀಜಿಯವರಿಗೆ ಆಮಂತ್ರಣ

ಚಿಕ್ಕಮಗಳೂರು : ದತ್ತ ಜಯಂತಿ ಅಂಗವಾಗಿ ಚಿಕ್ಕಮಂಗಳೂರು ಚಂದ್ರದ್ರೋಣ ಪರ್ವತದಲ್ಲಿ ನಡೆಯುವ ದತ್ತಜಯಂತಿ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಗುರುಪುರ ವಜ್ರದೇಹಿ ಮಠದ  ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರಿಗೆ ನೀಡಲಾಯಿತು. ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ್ ಸುನೀಲ್ ಕೆ.ಆರ್,ಬಜರಂಗದಳ ಪ್ರಾಂತ ಸಹ ಸಂಯೋಜಕ್ ಮುರಳಿ ಕೃಷ್ಣ ಹಸಂತಡ್ಕ, ಬಜರಂಗದಳ ಮಂಗಳೂರು ವಿಭಾಗ ಸಹ ಸಂಯೋಜಕ್ ಪುನೀತ್ ಅತ್ತಾವರ ಆಮಂತ್ರಣ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬಜರಂಗದಳ ಪುತ್ತೂರು ನಗರ ಪ್ರಖಂಡ ಸಂಯೋಜಕ್ ಜಯಂತ್ ಕುಂಜೂರುಪಂಜ,ವಿಶ್ವ ಹಿಂದೂ ಪರಿಷದ್ ಪುತ್ತೂರು

ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದಲ್ಲಿ ದತ್ತಜಯಂತಿ| ವಜ್ರದೇಹಿ ಸ್ವಾಮೀಜಿಯವರಿಗೆ ಆಮಂತ್ರಣ Read More »

ನಾಳೆ (ಡಿ.18)  : ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಪದಗ್ರಹಣ, ಸಮುದಾಯ ಭವನಕ್ಕೆ ಶಿಲಾನ್ಯಾಸ

ಕಡಬ: ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪದಗ್ರಹಣ ಹಾಗೂ ಒಕ್ಕಲಿಗ ಗೌಡ ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮ ಡಿ.18 ಸೋಮವಾರ ಸಂಜೆ 5.30 ಕ್ಕೆ ನಡೆಯಲಿದೆ. ಈ ಸಂದರ್ಭದಲ್ಲಿ ಕಡಬ ಒಕ್ಕಲಿಗ ಸ್ಪಂದನಾ ಸಮುದಾಯ ಸಹಕಾರ ಸಂಘ ನಿ. ದ ಉದ್ಘಾಟನಾ ಸಮಾರಂಭ, ಚಪ್ಪರಮುಹೂರ್ತ ನಡೆಯಲಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆ ತಿಳಿಸಿದೆ.

ನಾಳೆ (ಡಿ.18)  : ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಪದಗ್ರಹಣ, ಸಮುದಾಯ ಭವನಕ್ಕೆ ಶಿಲಾನ್ಯಾಸ Read More »

ನಗರಸಭೆ ಚುನಾವಣೆ | ನಾಮಪತ್ರ ಹಿಂತೆಗೆದುಕೊಳ್ಳಲು ನಾಳೆ ಅಂತಿಮ ದಿನ

ಪುತ್ತೂರು: ನಗರ ಸಭೆಯ ಎರಡು ವಾರ್ಡ್ ಗಳಲ್ಲಿ ತೆರವಾಗಿದ್ದ ಸ್ಥಾನಗಳಿಗೆ ಚುನಾವಣೆಗೆ ಸಂಬಂಧಿಸಿ ಡಿ.27 ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು, ನಾಮಪತ್ರ ಹಿಂತೆಗೆದುಕೊಳ್ಳಲು ಡಿ.18 ಕೊನೆಯ ದಿನವಾಗಿದೆ. ಎರಡು ವಾರ್ಡ್ ಗಳಲ್ಲಿ ನಡೆಯುವ ಚುನಾವಣೆಗೆ ಒಟ್ಟು 6 ನಾಮಪತ್ರಗಳು ಸಲ್ಲಿಕೆಯಾಗಿವೆ. ಶನಿವಾರ ನಾಮಪತ್ರ ಪರಿಶೀಲನೆ ನಡೆಸಲಾಗಿದ್ದು, ಎಲ್ಲಾ ನಾಮಪತ್ರಗಳು ಸಿಂಧುವಾಗಿವೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ. ವಾರ್ಡ್ 1 ರ ಅಭ್ಯರ್ಥಿಯಾಗಿ ಬಿಜೆಪಿಯಿಂದ ಸುನಿತಾ, ಕಾಂಗ್ರೆಸ್‌ನಿಂದ ದಿನೇಶ್ ಶೇವಿರೆ, ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಯಾಗಿ ಅನ್ನಪೂರ್ಣ ಎಸ್.ಕೆ. ರಾವ್

ನಗರಸಭೆ ಚುನಾವಣೆ | ನಾಮಪತ್ರ ಹಿಂತೆಗೆದುಕೊಳ್ಳಲು ನಾಳೆ ಅಂತಿಮ ದಿನ Read More »

ಬಿಳಿಯೂರು ಕಿಂಡಿ ಅಣೆಕಟ್ಟು ರೈತರ ಪಾಲಿಗೆ ಸಂತಸ ತಂದಿದೆ | ಗಂಗಾಪೂಜೆಯಲ್ಲಿ ಬಾಗೀನ ಅರ್ಪಿಸಿ ಸಂಜೀವ ಮಠಂದೂರು

ಬಂಟ್ವಾಳ:  ತಾಲೂಕಿನ ಪೆರ್ನೆ. ಬಿಳಿಯೂರು ಗ್ರಾಮದ ಕಡಪು ಎಂಬಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಅವರ ಅವಧಿಯಲ್ಲಿ ನಿರ್ಮಾಣವಾದ 51 ಕೋಟಿ ವೆಚ್ಚದ ಸಂಪರ್ಕ ರಸ್ತೆ ಮತ್ತು ಕಿಂಡಿ ಅಣೆಕಟ್ಟಿನಲ್ಲಿ ನದಿಗೆ ಬಾಗಿನ ಅರ್ಪಿಸುವ ಗಂಗಾ ಪೂಜೆ ಡಿ.17 ಭಾನುವಾರ ಬೆಳಿಗ್ಗೆ ನಡೆಯಿತು. ಗೋಪಾಲಕೃಷ್ಣ ಭಟ್ ಅವರು ಪೂಜೆ ನೆರವೇರಿಸಿದರು. ಬಾಗಿನ ಅರ್ಪಿಸಿ ಮಾತನಾಡಿದ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ಬಂಟ್ವಾಳ ತಾಲೂಕಿನ ಪೆರ್ನೆಯ ಬಿಳಿಯೂರು ಎಂಬಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ರೂ. 51 ಕೋಟಿ

ಬಿಳಿಯೂರು ಕಿಂಡಿ ಅಣೆಕಟ್ಟು ರೈತರ ಪಾಲಿಗೆ ಸಂತಸ ತಂದಿದೆ | ಗಂಗಾಪೂಜೆಯಲ್ಲಿ ಬಾಗೀನ ಅರ್ಪಿಸಿ ಸಂಜೀವ ಮಠಂದೂರು Read More »

error: Content is protected !!
Scroll to Top