ಪುತ್ತೂರು

ಕಾರುಗಳೆರಡು ಮುಖಾಮುಖಿ ಡಿಕ್ಕಿ !

ಪುತ್ತೂರು: ಕಾರುಗಳೆರಡು ಮುಖಾಮುಖಿ ಡಿಕ್ಕಿ ಹೊಡೆದುಕೊಂಡ ಘಟನೆ ಮಾಣಿ-ಮೈಸೂರು ಹೆದ್ದಾರಿ ಪೋಳ್ಯದಲ್ಲಿ ಮಂಗಳವಾರ ನಡೆದಿದೆ. ಅಪಘಾತದಲ್ಲಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳೂರು ಕಡೆಯಿಂದ ಬರುತ್ತಿದ್ದ ಕಿಯಾ ಕಾರು ಹಾಗೂ ಟಾಟಾ ಕಾರುಗಳ ನಡುವೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಕಾರುಗಳೆರಡು ಮುಖಾಮುಖಿ ಡಿಕ್ಕಿ ! Read More »

ನೇಣು ಬಿಗಿದು ಆತ್ಮಹತ್ಯೆ !

ಉಪ್ಪಿನಂಗಡಿ: ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ಪೆರ್ನೆಯಲ್ಲಿ ನಡೆದಿದೆ. ಪೆರ್ನೆ ಗ್ರಾಮದ ಶಿವರಾಮಕೋಡಿ ನಿವಾಸಿ ನಾರಾಯಣ ಮೂಲ್ಯ (63) ಆತ್ಮಹತ್ಯೆ ಮಾಡಿಕೊಂಡವರು. ಕಳೆದ ಎರಡು ವರ್ಷಗಳಿಂದ ನಾರಾಯಣ ಅವರ ದೇಹಾರೋಗ್ಯ ಹದಗೆಟ್ಟಿದ್ದು, ಮಾನಸಿಕವಾಗಿ ನೊಂದು ಮನೆಯಂಗಳದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪತ್ನಿ ಕೆ. ಸುಂದರಿ ನೀಡಿರುವ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನೇಣು ಬಿಗಿದು ಆತ್ಮಹತ್ಯೆ ! Read More »

ನಗರಸಭೆ ಉಪಚುನಾವಣೆ | ಬಿಜೆಪಿ ವತಿಯಿಂದ ಮತ ಯಾಚನೆ ಆರಂಭ | ಬಿಜೆಪಿ ಸೇರಿದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ !

ಪುತ್ತೂರು: ನಗರಸಭೆ ಉಪಚುನಾವಣೆ ಹಿನ್ನಲೆಯಲ್ಲಿ ವಾರ್ಡ್ 1 ನೆಲ್ಲಿಕಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ರೈ ಪರವಾಗಿ ಬಿಜೆಪಿಯಿಂದ ಮನೆ ಮನೆ ಭೇಟಿ ಮತಯಾಚನೆ ಆರಂಭಗೊಂಡಿದೆ. ಪುಡಾ ಮಾಜಿ ಅಧ್ಯಕ್ಷ ಎಸ್.ಅಪ್ಪಯ್ಯ ಮಣಿಯಾಣಿ, ಬೂತ್‌ ಅಧ್ಯಕ್ಷ ಗಣೇಶ್ ಕಾಮತ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಯಂತಿ ನಾಯಕ್, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಜಯಶ್ರೀ ಎಸ್. ಶೆಟ್ಟಿ, ನಗರಸಭೆ ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸದಸ್ಯರಾದ ಮಮತಾ ರಂಜನ್, ಪೂರ್ಣಿಮಾ, ಬಿಜೆಪಿ ನಗರ ಯುವ ಮೋರ್ಚಾ ಅಧ್ಯಕ್ಷ ಸಚಿನ್

ನಗರಸಭೆ ಉಪಚುನಾವಣೆ | ಬಿಜೆಪಿ ವತಿಯಿಂದ ಮತ ಯಾಚನೆ ಆರಂಭ | ಬಿಜೆಪಿ ಸೇರಿದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ! Read More »

ಶಾಸಕರಿಂದ ವಾರ್ಡ್ 1 ರಲ್ಲಿ ಚುನಾವಣಾ ಪ್ರಚಾರ ಸಭೆ

ಪುತ್ತೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿದೆ. ಕಾಂಗ್ರೆಸ್ ಕೊಟ್ಟ ಮಾತನ್ನು ಎಂದೂ ತಪ್ಪುವುದಿಲ್ಲ, ನಗರಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಎಂದು ಮತದಾರರಲ್ಲಿ ಶಾಸಕ ಅಶೋಕ್ ರೈ ಮನವಿ ಮಾಡಿದರು. ಒಂದನೇ ವಾರ್ಡು ವ್ಯಾಪ್ತಿಯ ನೆಹರೂ ನಗರದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಪುತ್ತೂರು ನಗರಸಭೆಯ ಪ್ರತೀ ವಾರ್ಡುಗಳಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡುತ್ತೇವೆ, ನಗರಸಭಾ ವ್ಯಾಪ್ತಿಯಲ್ಲಿ ದಿನದ 24 ಗಂಟೆಯೂ

ಶಾಸಕರಿಂದ ವಾರ್ಡ್ 1 ರಲ್ಲಿ ಚುನಾವಣಾ ಪ್ರಚಾರ ಸಭೆ Read More »

ಡಿ.8-ಜ.15: ಜಿ.ಎಲ್‍.ಆಚಾರ್ಯ ಜ್ಯುವೆಲ್ಲರ್ಸ್‍ನಲ್ಲಿ ವಜ್ರಾಭರಣಗಳ ಪ್ರದರ್ಶನ “ಗ್ಲೋ ಫೆಸ್ಟ್”

ಪುತ್ತೂರು: ಇಲ್ಲಿಯ ಖ್ಯಾತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್‌ನಲ್ಲಿ ಡಿ.18 ರಿಂದ ಜ. 15ರವರೆಗೆ ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ “ಗ್ಲೋ ಫೆಸ್ಟ್” ಆಯೋಜಿಸಲಾಗಿದೆ. 2,000 ಕ್ಕೂ ಮಿಕ್ಕಿದ ಡಿಸೈನ್‌ಗಳಲ್ಲಿ ಕಣ್ಮನ ಸೆಳೆಯುವ ವಜ್ರಾಭರಣಗಳ ಸಂಗ್ರಹವಿದ್ದು, ಎಲ್ಲಾ ವಯೋಮಿತಿಯ ಗ್ರಾಹಕರಿಗೆ ತಕ್ಕಂತೆ ವಜ್ರಾಭರಣಗಳ ಆಯ್ಕೆ ಲಭ್ಯವಿದೆ. ಮಕ್ಕಳ, ಮಹಿಳೆಯರ ಹಾಗೂ ಪುರುಷರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿರುವ ವಜ್ರಾಭರಣಗಳ ಸಂಗ್ರಹವಿದ್ದು, ಗ್ರಾಹಕರಿಗೆ ಆಹ್ಲಾದಕರ ಖರೀದಿಯ ಗ್ಲೋ ಫೆಸ್ಟ್‌ನಲ್ಲಿ ವಜ್ರಾಭರಣ ಖರೀದಿ ಮೇಲೆ ಪ್ರತಿ ಕ್ಯಾರೆಟ್ ಗೆ 6,000/-

ಡಿ.8-ಜ.15: ಜಿ.ಎಲ್‍.ಆಚಾರ್ಯ ಜ್ಯುವೆಲ್ಲರ್ಸ್‍ನಲ್ಲಿ ವಜ್ರಾಭರಣಗಳ ಪ್ರದರ್ಶನ “ಗ್ಲೋ ಫೆಸ್ಟ್” Read More »

ಡಿ.26: ಕಡಬ ಒಕ್ಕಲಿಗ ಗೌಡ ಸಮುದಾಯ ಭವನದ ಶಿಲಾನ್ಯಾಸ | ಚಪ್ಪರ ಮುಹೂರ್ತ ನೆರವೇರಿಸಿದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ

ಕಡಬ: ಒಕ್ಕಲಿಗ ಗೌಡ ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಚಪ್ಪರ ಮುಹೂರ್ತ ಡಿ.18 ಸೋಮವಾರ ಸಂಜೆ ಕಡಬ ಹೊಸಮಠದಲ್ಲಿ ನಡೆಯಿತು. ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಯವರು ಚಪ್ಪರ ಮುಹೂರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘ ಅಧ್ಯಕ್ಷ ಸುರೇಶ್ ಬೈಲು, ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು, ಒಕ್ಕಲಿಗ ಸ್ಪಂದನಾ ಸಮುದಾಯ  ಸಹಕಾರ ಸಂಘದ ಅಧ್ಯಕ್ಷ ಕೇಶವ ಗೌಡ

ಡಿ.26: ಕಡಬ ಒಕ್ಕಲಿಗ ಗೌಡ ಸಮುದಾಯ ಭವನದ ಶಿಲಾನ್ಯಾಸ | ಚಪ್ಪರ ಮುಹೂರ್ತ ನೆರವೇರಿಸಿದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ Read More »

ಮಾದಕ ವಸ್ತು ಸಹಿತ ಆರೋಪಿಯೋರ್ವ ಪೊಲೀಸ್‍ ವಶಕ್ಕೆ !

ಉಪ್ಪಿನಂಗಡಿ: ಮಾದಕ ವಸ್ತು ಸಹಿತ ಆರೋಪಿಯೋರ್ವನನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳ್ತಂಗಡಿ ಇಳಂತಿಲ ನಿವಾಸಿ ಯಾಸಿರ್ (29) ಬಂಧಿ ಆರೋಪಿಯಾಗಿದ್ದು, ಉಪ್ಪಿನಂಗಡಿ ಗ್ರಾಮದ ಕೂಟೇಲು ದರ್ಗಾ ಶರೀಫ್‍ ಬಳಿ ಈತನನ್ನು ಪಡೆದಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣಾ ಪೊಲೀಸ್‌ ಉಪ ನಿರೀಕ್ಷಕ ರಾಜೇಶ್ ಕೆ.ವಿ ಮತ್ತು ಸಿಬ್ಬಂದಿಗಳು ವಾಹನ ತಪಾಸಣೆ ಸಂದರ್ಭ ಕಾರನ್ನು ನಿಲ್ಲಿಸಲು ಸೂಚಿಸಿದಾಗ ಚಾಲಕ ವಾಹನವನ್ನು ನಿಲ್ಲಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆತನನ್ನು ತಡೆದು ವಿಚಾರಣೆ  ಕಾರನ್ನು ಪರಿಶೀಲಿಸಿದಾಗ ಅದರಲ್ಲಿ 13,000 ರೂ. ಮೌಲ್ಯದ 6.4

ಮಾದಕ ವಸ್ತು ಸಹಿತ ಆರೋಪಿಯೋರ್ವ ಪೊಲೀಸ್‍ ವಶಕ್ಕೆ ! Read More »

ಕಾರುಗಳೆರಡು ಡಿಕ್ಕಿ !

ಪುತ್ತೂರು: ಎರಡು ಕಾರುಗಳು ಡಿಕ್ಕಿ ಹೊಡೆದುಕೊಂಡ ಘಟನೆ ಬೈಪಾಸ್ ರಸ್ತೆಯ ದರ್ಬೆ ಬಳಿ ಸೋಮವಾರ ನಡೆದಿದೆ. ಅಪಘಾತದ ಪರಿಣಾ ಕಾರುಗಳೆರಡು ಜಖಂಗೊಂಡಿದೆ. ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಕಾರುಗಳೆರಡು ಡಿಕ್ಕಿ ! Read More »

ಫೆ.17-24: ನಳೀಲು ದೇವಸ್ಥಾನದ ಬ್ರಹ್ಮಕಲಶೋತ್ಸವ | ಆಮಂತ್ರಣ ಪತ್ರಿಕೆ ಬಿಡುಗಡೆ

ನಳಿಲು: ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಫೆ.17 ರಿಂದ 24 ರತನಕ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರ ಬಿಡುಗಡೆ ದೇವಸ್ಥಾನದ ವಠಾರದಲ್ಲಿ ಸೋಮವಾರ ನಡೆಯಿತು. ಹಿರಿಯರಾದ ಚಿಕ್ಕಪ್ಪ ನಾಯ್ಕ್ ಆಮಂತ್ರಣ ಪತ್ರ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಶರತ್ ಕುಮಾರ್ ರೈ ಕಾವು, ಸಂತೋಷ್‌ ಕುಮಾರ್ ರೈ ಇಳಂತಾಜೆ, ಎಸ್ ಬಿ ಜಯರಾಮ ರೈ, ‌ಮೊಕ್ತೇಸರ ನಾರಾಯಣ ರೈ ಮೊದೆಲ್ಕಾಡಿ,

ಫೆ.17-24: ನಳೀಲು ದೇವಸ್ಥಾನದ ಬ್ರಹ್ಮಕಲಶೋತ್ಸವ | ಆಮಂತ್ರಣ ಪತ್ರಿಕೆ ಬಿಡುಗಡೆ Read More »

ನಗರಸಭೆ ಉಪಚುನಾವಣೆ  | ಪುತ್ತಿಲ ಪರಿವಾರದ ಎರಡು ವಾರ್ಡ್ ಅಭ್ಯರ್ಥಿಗಳಿಗೆ ‘ಬ್ಯಾಟ್’ ಚಿಹ್ನೆ

ಪುತ್ತೂರು: ನಗರಸಭೆಯ ಉಪಚುನಾವಣೆಗೆ ಪುತ್ತಿಲ ಪರಿವಾರದಿಂದ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಎರಡೂ ಕಡೆಯೂ ಚುನಾವಣಾ ಆಯೋಗ ಬ್ಯಾಟ್ ಚಿಹ್ನೆಯನ್ನು ನೀಡಿದೆ. ರಕ್ತೇಶ್ವರಿ ಘಟಕ ಕಬಕ ವಾರ್ಡ್ -1 ರಲ್ಲಿ ಅನ್ನಪೂರ್ಣ ರಾವ್  ಮತ್ತು ಚಿಕ್ಕಪುತ್ತೂರು ನೆಲ್ಲಿಕಟ್ಟೆ ವಾರ್ಡ್ ನಂ. 11 ರಲ್ಲಿ  ಚಿಂತನ್.ಪಿ ಪುತ್ತಿಲ ಪರಿವಾರದ ವತಿಯಿಂದ ಪಕ್ಷೇತರ ಸ್ಪರ್ಧಿಸುತ್ತಿದ್ದು ಇಬ್ಬರಿಗೂ ಚುನಾವಣೆ ಆಯೋಗ ಬ್ಯಾಟ್ ಚಿಹ್ನೆ ನೀಡಿದೆ. ಪುತ್ತೂರಿನ ವಿಧಾನಸಭಾ ಚುನಾವಣೆ ಸಂದರ್ಭ ಅರುಣ್ ಕುಮಾರ್ ಪುತ್ತಿಲರಿಗೂ ಇದೇ ಚಿಹ್ನೆ ಲಭಿಸಿತ್ತು. ಪುತ್ತೂರು ನಗರಸಭಾ ಚುನಾವಣೆಗೆ ನಾಮಪತ್ರ

ನಗರಸಭೆ ಉಪಚುನಾವಣೆ  | ಪುತ್ತಿಲ ಪರಿವಾರದ ಎರಡು ವಾರ್ಡ್ ಅಭ್ಯರ್ಥಿಗಳಿಗೆ ‘ಬ್ಯಾಟ್’ ಚಿಹ್ನೆ Read More »

error: Content is protected !!
Scroll to Top